ಲೈಫ್ ಸ್ಟೈಲ್
ನಿಯಮಿತ ಬಾಳೆಹಣ್ಣು ಸೇವಿಸಿದರೆ ನಿಮ್ಮ ಬಾಳು ಬಂಗಾರ !

ದೇವರ ನೈವೇದ್ಯಕ್ಕೆ ಅರ್ಪಿಸುವ ಹಣ್ಣುಗಳಲ್ಲಿ ಬಾಳೆಹಣ್ಣಿಗೆ (ಬಾಳೆಹಣ್ಣು) ಮೊದಲ ಸ್ಥಾನ. ಬಾಳೆ ಹಣ್ಣು ಎಲ್ಲಾ ಕಾಲಕ್ಕೂ ಎಲ್ಲಾ ಕಡೆ, ಎಲ್ಲಾ ವರ್ಗದವರಿಗೆ ಸುಲಭವಾಗಿ ಸಿಗುವ ಫಲ. ಅದರಂತೆ ನಿಮ್ಮ ಜೀವನ ಕ್ರಮದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ (banana benefits in kannada) ನಿಮ್ಮ ಬಾಳು ಬಂಗಾರ ಆಗುತ್ತದೆ !
ನಾಟಿಬಾಳೆ, ಏಲಕ್ಕಿ ಬಾಳೆ, ರಸಬಾಳೆ, ಪಚ್ಚಬಾಳೆ ಸೇರಿದಂತೆ ಹಲವು ಪ್ರಬೇಧ ಹೊಂದಿರುವ ಬಾಳೆ ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿವೆ. ಬಾಳೆ ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ.
ನಿಯಮಿತ ಬಾಳೆಹಣ್ಣು ಸೇವಿಸಿದರೆ ಆರೋಗ್ಯ ವೃದ್ಧಿ ( benefits of banana in kannada )
ಒಂದು ಬಾಳೆಹಣ್ಣು ತಿಂದು ಒಂದು ಕಪ್ಪು ಚಹಾದ ಕಷಾಯ ಸೇವಿಸಿದರೆ ಅತಿಸಾರ ಮತ್ತು ಆಮಶಂಕೆ ವಾಸಿ ಆಗುತ್ತದೆ.(benefits of banana in kannada) ಬಾಳೆಹಣ್ಣಿನ ತಿರುಳನ್ನು ಮಜ್ಜಿಗೆಯಲ್ಲಿ ಚೆನ್ನಾಗಿ ಬೆರೆಸಿ ಸೇವಿಸುವುದರಿಂದ ಕೂಡ ಆಮಶಂಕೆ ಗುಣವಾಗುತ್ತದೆ. ಜತೆಗೆ ಬಾಳೆಹಣ್ಣಿನ ಸಿಪ್ಪೆ ಕಷಾಯ ತಯಾರಿಸಿ ಕುಡಿದರೆ ಆಮಶಂಕೆ ದೂರವಾಗುತ್ತದೆ.
ಪ್ರತಿದಿನ ರಾತ್ರಿ ಮಲುಗುವುದಕ್ಕೂ ಮುಂಚೆ ಸಿಪ್ಪೆ ಸಹಿತ ಒಂದು ಏಲಕ್ಕಿಯನ್ನು ಬಾಳೆಹಣ್ಣಿ ನೊಂದಿಗೆ ತಿನ್ನುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ. ಬಾಳೆಹಣ್ಣಿನ ತಿರುಳನ್ನು ಹುಳಿ ಮಜ್ಜಿಗೆಯಲ್ಲಿ ಕಿವುಚಿ ದೀರ್ಘಕಾಲ ಸೇವಿಸಿದರೆ ಮೂಲವ್ಯಾಧಿ ಶಮನ ವಾಗುತ್ತದೆ. ಜತೆಗೆ ಒಂದು ಬಟ್ಟಲು ಹಾಲಿನೊಂದಿಗೆ ಬಾಳೆಹಣ್ಣನ್ನು ಕಲಸಿ ದಿನನಿತ್ಯ ಸೇವಿಸಿದರೆ ಕರುಳಿನ ಹುಣ್ಣು ವಾಸಿಯಾಗುತ್ತದೆ.
ದೇಹದ ತೂಕ ಹೆಚ್ಚಿಸಿ ಕೊಳ್ಳಲು ಪ್ರತಿದಿನ ಒಂದು ಬಾಳೆಹಣ್ಣು ಹಾಗೂ ಒಂದು ಮೊಟ್ಟೆ ಸೇವಿಸುವುದು ಉತ್ತಮ ಮಾರ್ಗ. ಮಾಗಿದ ರಸಬಾಳೆ ಹಣ್ಣಿನೊಂದಿಗೆ ಅರ್ಧ ಟಿ ಚಮಚ ಕಾಳೆಮೆಣಸಿನ ಪುಡಿ ಮಿಶ್ರಣ ಮಾಡಿ ಮೂರು ಸಮಭಾಗವಾಗಿ ಮಾಡಿಕೊಂಡು ದಿನಕ್ಕೆ ಮೂರುಬಾರಿ ಸೇವಿಸಿದರೆ ನೆಗಡಿ ಮತ್ತು ಕೆಮ್ಮು ಮಾಯವಾಗುತ್ತದೆ.
ಕುರು ಕಾಣಿಸಿಕೊಂಡರೆ ಬಾಳೆಹಣ್ಣಿನ ತಿರುಳನ್ನು ಚೆನ್ನಾಗಿ ಕಿವುಚಿ ಕುರುವಿನ ಮೇಲೆ ಸೇಪಿಸಿದರೆ ಕುರು ಶೀಘ್ರವಾಗಿ ಒಡೆದುಕೊಂಡು ರಕ್ತ, ಕೀವು ಹೊರಬರುತ್ತದೆ. ಇದರಿಂದ ನೋವು ಬೇಗ ಉಪಶಮನ ಆಗುತ್ತದೆ. ಬಾಳೆಹಣ್ಣಿನ ತಿರುಳನ್ನು ಒಂದು ಬಟ್ಟಲು ಮಜ್ಜಿಗೆಯೊಂದಿಗೆ ಬೆರೆಸಿ ಒಂದು ವಾರಗಳ ಕಾಲ ಸೇವಿಸಿದರೆ ಅಂಗಾಲು, ಅಂಗೈ, ಆಸನಾಗ್ರಹದಲ್ಲಿ ಉಂಟಾದ ಉರಿ ಕಡಿಮೆ ಮಾಡುತ್ತದೆ. ಬಾಳೆಹಣ್ಣು ಸೇವಿಸುವುದರಿಂದ ರಕ್ತ, ಪಿತ್ತ ಹಾಗೂ ವಾಯುವಿಕಾರಗಳು ಕಡಿಮೆ ಆಗುತ್ತವೆ. ಜತೆಗೆ ಪಚನ ಕಾರ್ಯ ಉತ್ತಮವಾಗಲು ಬಾಳೆಹಣ್ಣು ಉತ್ತಮ ಔಷಧಿ.
ಗರ್ಭಿಣಿಯರು ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸಿದರೆ ರಕ್ತಪುಷ್ಟಿಯಾಗಿ ಹೆರಿಗೆ ಸುಳಭವಾಗಲು ಅನುಕೂಲ ಮಾಡುತ್ತದೆ. ಜತೆಗೆ ಹಾಲು ಮತ್ತು ಸಕ್ಕೆರೆ ಯೊಂದಿಗೆ ಬಾಳೆಹಣ್ಣು ತಿಂದರೆ ಮಲಬದ್ಧತೆ ನಿವಾರಣೆ ಆಗುತ್ತದೆ. ಪುರುಷರ ವೀರ್ಯ ವೃದ್ಧಿಗೆ ಬಾಳೆಹಣ್ಣಿನ ನಿಯಮಿತ ಸೇವನೆ ಉತ್ತಮ ಮಾರ್ಗ.
ಜೇನುತುಪ್ಪದೊಂದಿಗೆ ಬಾಳೆಹಣ್ಣು ಸೇವಿಸಿದರೆ ಕೆಮ್ಮು ಮತ್ತು ಎದೆನೋವು ಕಡಿಮೆ ಆಗುತ್ತದೆ. ರಾತ್ರಿ ಊಟ ಆದ ನಂತರ ಹಾಲು ಮತ್ತು ಬಾಳೆಹಣ್ಣು ಸೇವಿಸಿದರೆ ಸಂಭೋಗ ಶಕ್ತಿ ವೃದ್ಧಿ ಆಗುತ್ತದೆ.
Read also: ಬೇಸಿಗೆಯಲ್ಲಿ ಉಂಟಾಗುವ ಆರೋಗ್ಯ ಪರಿಣಾಮಗಳು
ಬಹು ಉಪಯೋಗಿ ಬಾಳೆಹಣ್ಣು (benefits of banana in kannada)
- 1. ಬಾಳೆಹಣ್ಣಿನಿಂದ ರಸಾಯನ ತಯಾರು ಮಾಡುವುದು ವಿಶೇಷ.
- 2. ಬಾಳೆಹಣ್ಣಿನಿಂದ ಜಾಮ್ ತಯಾರಿಸಲಾಗುತ್ತದೆ. ಇದು ದೊಡ್ಡವರಿಂದ ಚಿಕ್ಕ ಮಕ್ಕಳಿಗೂ ಇಷ್ಟವಾಗುತ್ತದೆ.
- 3. ದೇವರ ಪೂಜೆಗೆ, ಪಂಚಾಮೃತ ತಯಾರಿಕೆಗೆ ಸಕ್ಕರೆ, ಹಾಲು, ಜೇನು ತುಪ್ಪದೊಂದಿಗೆ ಬಾಳೆ ಹಣ್ಣು ಬೆರೆಸಲಾಗುತ್ತದೆ.
- 4. ಬಯಲು ಸೀಮೆ ಸೇರಿದಂತೆ ನಾಡಿನ ಹಲವು ಭಾಗಗಳಲ್ಲಿ ಬಾಳೆಹಣ್ಣಿನ ಸೀಕರಣೆ ತಯಾರಿಸಿ ಹೋಳಿಗೆಯೊಂದಿಗೆ ಊಟ ಮಾಡುವುದು ವಾಡಿಕೆ.
- 5. ಬಾಳೆ ಕಾಯಿ ಹಾಗೂ ಅದರ ದಿಂಡಿನಿಂದ ಕಾಯಿಪಲ್ಯ ತಯಾರಿಸುವುದು ವಿಶೇಷ.
ಬಾಳೆಹಣ್ಣಿನಲ್ಲಿ ಅಡಗಿರುವ ಪೌಷ್ಟಿಕಾಂಶಗಳು (ಪ್ರತಿ ನೂರು ಗ್ರಾಂ) (benefits of banana kannada)
- ಬಲ (ಶಕ್ತಿ) 1.16 ಗ್ರಾಂ
- ಪ್ರೋಟೀನ್ 1.2 ಗ್ರಾಂ
- ಕೊಬ್ಬು 0.2 ಗ್ರಾಂ
- ಕಾರ್ಬೋಹೈಡ್ರೇಟ್ಸ್ 27 ಗ್ರಾಂ
- ಕ್ಯಾಲ್ಸಿಯಂ 17 ಮಿಲಿಗ್ರಾಂ
- ಕಬ್ಬಿಣ 9 ಮಿಲಿಗ್ರಾಂ
- ಕೆರೋಟೀನ್ 78 ಮಿಲಿ ಗ್ರಾಂ
- ಥಿಯಾಮಿನ್ 0.05 ಮಿಲಿ ಗ್ರಾಂ
- ರಿಬೋಪ್ಲೇಮಿನ್ 0.08 ಮಿಲಿ ಗ್ರಾಂ
- ಸೋಡಿಯಂ 5 ಮಿಲಿ ಗ್ರಾಂ
- ನಿಯಾಸಿನ್ 0.5 ಮಿಲಿ ಗ್ರಾಂ
- ವಿಟಮಿನ್ “ಸಿ” 0.5 ಮಿಲಿ ಗ್ರಾಂ
- ಖನಿಜಾಂಶ 6.0 ಗ್ರಾಂ
ಈ ಐದು ಸಮಸ್ಯೆ ನಿವಾರಣೆ ಬಾಳೆಹಣ್ಣು ರಾಮಬಾಣ
- 1. ಭೇದಿ ನಿಯಂತ್ರಣ
- 2. ಮಲಬದ್ಧತೆ ನಿವಾರಣೆಗೆ ಬಾಳೆಹಣ್ಣು ಉಪಯುಕ್ತ
- 3. ಅಲ್ಸರ್ ನಿವಾರಣೆ
- 4. ಮೂತ್ರ ಕೋಶದ ಕಾಯಿಲೆ ನಿವಾರಣೆಗೆ
- 5. ಹೃದಯದ ಬೇನೆಗೆ ಬಾಳೆಹಣ್ಣು ಉಪಯುಕ್ತ
Read also: ಬೇಲಿಯಲ್ಲಿ ಬೆಳೋ ತೊಂಡೆಕಾಯಿ ಮಹಿಮೆ ನಿಮಗೆ ಗೊತ್ತಾ?
ಬಾಳೇಹಣ್ಣನ್ನು ನಿಸರ್ಗದ ಕಾಮಧೇನು ಎಂದು ಕರೆಯಲಾಗುತ್ತದೆ. ಈ ಹಣ್ಣಿನಲ್ಲಿ ಖನಿಜಾಂಶ, ಪೋಷಕಾಂಶ ಹೆಚ್ಚು ಇರುವುದರಿಂದ ಇದು ಹಲವು ರೋಗಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಅದರಂತೆ ನಿಮ್ಮ ಜೀವನ ಕ್ರಮದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವಿಸಿದರೆ ನಿಮ್ಮ ಆರೋಗ್ಯ ವೃದ್ಧಿಸುವುದರಲ್ಲಿ ಅನುಮಾನ ಇಲ್ಲ.
English Summery
benefits of banana in kannada

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ
-
ದಿನದ ಸುದ್ದಿ4 days ago
2 ಸಾವಿರ ಹೊಸ ಬಸ್ ಖರೀದಿಗೆ ಅನುದಾನ ಬಿಡುಗಡೆ
-
ದಿನದ ಸುದ್ದಿ5 days ago
ದಾವಣಗೆರೆ | ಏಪ್ರಿಲ್ 22ರಿಂದ ಉಪಲೋಕಾಯುಕ್ತರ ಪ್ರವಾಸ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ5 days ago
ಜನಪದ ಕಲೆ ಸಾಹಿತ್ಯದ ಬೇರು : ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ
-
ದಿನದ ಸುದ್ದಿ5 days ago
ಏಪ್ರಿಲ್ 2 ರಂದು ದಾವಣಗೆರೆ ವಿವಿ 12ನೇ ಘಟಿಕೋತ್ಸವ
-
ದಿನದ ಸುದ್ದಿ5 days ago
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಜಗಳೂರು | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ : ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಭವಿಷ್ಯಕ್ಕಾಗಿ ಹೂಡಿಕೆಯ ಜ್ಞಾನ ಅವಶ್ಯಕ