Connect with us

ಬಹಿರಂಗ

ಬುದ್ಧ ದಲಿತನಲ್ಲ.‌.!

Published

on

ಈಗಷ್ಟೇ ಸ್ನೇಹಿತರೊಬ್ಬರು “ಸರ್, ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ‘ಬುದ್ಧ ಅಂಡ್ ಹಿಸ್ ಧಮ್ಮ’ ಕನ್ನಡ ಅನುವಾದ ಓದುವಾಗ ಒಂದಷ್ಟು ಕನ್ ಫ್ಯೂಸ್ ಆಗುತ್ತದೆ. ಕೆಲವು ಮೂಢನಂಬಿಕೆಯ ಅಂಶಗಳಿವೆ, ಕತೆಗಳಿವೆ” ಅಂದರು. ನಿಜ, ಸ್ನೇಹಿತರ ಆ ಮಾತು ಸತ್ಯ. ಆದರೆ ಅಂಬೇಡ್ಕರ್ ರವರು ಆ ಕೃತಿ ಬರೆದಿರುವುದು ತ್ರಿಪಿಟಕಗಳನ್ನು ಆಧರಿಸಿ. ತ್ರಿಪಿಟಕಗಳು ಬರೆಯಲ್ಪಟ್ಟಿರುವುದು 2500 ವರ್ಷಗಳ ಹಿಂದೆ ಅಥವಾ ಆಜೂಬಾಜಿನಲ್ಲಿ. ಅಂದಹಾಗೆ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಚಾರ ಬುದ್ಧನ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ, ಅಸ್ಪೃಶ್ಯತೆ ಇರಲಿಲ್ಲ ಎಂಬುದು. ವರ್ಣವ್ಯವಸ್ಥೆ ಇತ್ತು. ಆದರೆ ಅವು ಜಾತಿಗಳಾಗಿ convert ಆಗಿರಲಿಲ್ಲ.

ಹಾಗೆಯೇ ಬುದ್ಧನಗಿಂತ ಮೊದಲು ವೈದಿಕ ಧರ್ಮ ಇತ್ತು, ವೇದಗಳು ಇದ್ದವು. ಹೀಗಿದ್ದರೂ ಬುದ್ಧನ ಕಾಲದಲ್ಲಿ ಶೇಕಡಾ 90 ರಷ್ಟು ಬ್ರಾಹ್ಮಣರು ಬೌದ್ಧ ಧರ್ಮ ಸೇರಿದರು. ಬೌದ್ಧ ಅನುಯಾಯಿಗಳಾದರು. ಬರೀ ಬ್ರಾಹ್ಮಣರಷ್ಟೆ ಅಲ್ಲ ವೈಶ್ಯ, ಕ್ಷತ್ರಿಯ ಎಲ್ಲರೂ ಬೌದ್ಧ ಅನುಯಾಯಿಗಳಾದರು. ಶೂದ್ರ ಸಮುದಾಯ ಇರಲಿಲ್ಲ. ಅಸ್ಪೃಶ್ಯತೆ ಇರಲಿಲ್ಲ. ಆದ್ದರಿಂದ ಈಗಿನ so called ದಲಿತರು ಇರಲೇ ಇಲ್ಲ!

ಅಸ್ಪೃಶ್ಯತೆ ಹುಟ್ಟು ಪಡೆದದ್ದು ಕ್ರಿ.ಶ.400ರ ಸಮಯದಲ್ಲಿ ಗುಪ್ತರ ಆಳ್ವಿಕೆಯಲ್ಲಿ. ಅಂದರೆ ಬುದ್ಧ ಹುಟ್ಟಿದ್ದು ಕ್ರಿ.ಪೂ.600 ಮತ್ತು ಗುಪ್ತರ ಕಾಲ ಕ್ರಿ.ಶ.400 ಈ ಒಂದು ಸಾವಿರ ವರ್ಷಗಳ ನಡುವೆ ಬೌದ್ಧ ಧರ್ಮ ಮತ್ತು ವೈದಿಕ ಧರ್ಮಗಳ ನಡುವೆ ಸಂಘರ್ಷ ನಡೆದಿದೆ. ಇದು ಇತಿಹಾಸದಲ್ಲಿ ದಾಖಲಾಗಿಲ್ಲ. ಈ 1000 ವರ್ಷಗಳ ನಡುವೆ ನಡೆದಿರುವ ಸಂಘರ್ಷದಲ್ಲಿ
ಬೌದ್ಧ ಧರ್ಮಕ್ಕೆ ಅಂಟಿಕೊಂಡೇ ಉಳಿದವರು ಅಸ್ಪೃಶ್ಯರಾದರು ಎಂದು ಅಂಬೇಡ್ಕರರು ಹೇಳುತ್ತಾರೆ.

ಆದ್ದರಿಂದ ಬುದ್ಧನ ಕಾಲದಲ್ಲಿ ದಲಿತರು ಇರಲಿಲ್ಲ, ಅಸ್ಪೃಶ್ಯ ತೆ ಇರಲಿಲ್ಲ. ಅದು ಹುಟ್ಟಿದ್ದು ಬುದ್ಧ ಪರಿನಿರ್ವಾಣ ಅಥವಾ ನಿಧನ ಹೊಂದಿದ 1000 ವರ್ಷಗಳ ನಂತರ. ಹೀಗಿರುವಾಗ ಈಗಿನ ಕಾಲದ ದಲಿತರು ಬುದ್ಧನ ಬಗ್ಗೆ ತಿಳಿದುಕೊಳ್ಳುವಾಗ ಈಗಿನ ಕಾಲದ ತಾರತಮ್ಯ ಮತ್ತು ಸಾಮಾಜಿಕ ವ್ಯವಸ್ಥೆ ಬುದ್ಧನ ಕಾಲದಲ್ಲೂ ಇತ್ತು ಎಂದು ಕಲ್ಪಿಸಿಕೊಂಡು ಓದುವುದು ತಪ್ಪು. ಬದಲಿಗೆ 2000 ಅಥವಾ 2500 ವರ್ಷಗಳ ಹಿಂದೆ ಸಾಮಾಜಿಕ ವ್ಯವಸ್ಥೆ ಮತ್ತು ಜನರ ನಂಬಿಕೆ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡು ಬುದ್ಧನ ಕುರಿತು ಓದಬೇಕು, ಅಂಬೇಡ್ಕರರ ಬುದ್ಧ ಅಂಡ್ ಹಿಸ್ ಧಮ್ಮ ಓದಬೇಕು. ಆಗ ಬುದ್ಧ ಅರ್ಥ ಆಗುತ್ತಾನೆ. ಇಲ್ಲದಿದ್ದರೆ ಬುದ್ಧನನ್ನೇ ಪ್ರಶ್ನಿಸುವ ಆ ಮೂಲಕ ಅಂಬೇಡ್ಕರನ್ನೇ ಪ್ರಶ್ನಿಸುವ ದಾರ್ಷ್ಟ್ಯ ಅಂತಹವರು ಪ್ರದರ್ಶಿಸಿದ ಹಾಗಾಗುತ್ತದೆ.

–ರಘೋತ್ತಮ ಹೊಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ

Published

on

~ರಮ್ಯ ಕೆ.ಜಿ.ಮೂರ್ನಾಡು

ಕುಂಚ ತಾಕುವ ಮೊದಲೇ
ಮೂಡುತ್ತದೊಂದು ಚಿತ್ರ!
ಎದೆನೆತ್ತರು ನಡುಗಿ
ಪ್ರವಾಹದಂತೆ ತೆರೆದುಕೊಂಡ
ಬ್ರಹ್ಮಾಂಡದಲಿ ಗಡಿ ಮರೆತ
ಗೆರೆಗಳು ಕ್ಯಾನ್ವಾಸಿಂದಾಚೆ
ಅಲೆದು ಜೀವದ್ರವ್ಯಗಳಲಿ
ಈಜಿ ಮೂಲೆಗಳ ತುದಿ ಮುಟ್ಟಿ
ಬರೆಯುತ್ತದೆ ಬೆರಳ
ಗುರುತಿನ ಇತಿಹಾಸನು…

ಖಾಲಿತನಗಳಲಿ ಉಸಿರಾಡುವ
ಮೌನ-ಮಾತುಗಳ ವೇಗವನು
ಅಣಕಿಸುವಾಗ ತೂರುವ
ಬೆಳಕು ಸರಿದೂಗಿಸುತ್ತದೆ
ಒಡಕುಗಳ…
ಅಳಿಸಿದ ಮುಖಗಳು ಬಣ್ಣಗಳ
ಎರಕ ಹೊಮ್ಮಿಸಿಕೊಂಡು
ಬದಲಿಸುತ್ತವೆ ಬಣ್ಣಾ!

ಪದರುಗಳಾಗಿ ತೆರೆದುಕೊಳ್ಳುವ ಚಿತ್ರ
ನೆರಳಿನಲಿ ಸರಿದಾಡುವ
ಆತ್ಮದಂತೆ ಕಲೆಗಳ
ಉಳಿಸಿಬಿಡುತ್ತದೆ ಪೂರ್ತಿಯಾಗದ
ಆಕಾರದೊಳಗೆ ಚಿತ್ರಕಾರನೇ
ಲಯವಾಗುತ್ತಿರುವಾಗ
‘ಬಿಡಿಸಿ’ಕೊಳ್ಳುತ್ತದೆ ಚಿತ್ರ
ಗೆರೆಗಳಿಂದ ಬಣ್ಣಗಳಿಂದ
ಹಾಳೆಗಳಿಂದ ಚೌಕಟ್ಟಿನಿಂದ.

 

Continue Reading

ಅಂತರಂಗ

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಸೇಡಂ ನ ಅಮ್ಮ ಪ್ರಶಸ್ತಿ ಪ್ರದಾನ

Published

on

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಅಮ್ಮ ಪ್ರಶಸ್ತಿ ಪ್ರದಾನ

ಸುದ್ದಿದಿನ ಡೆಸ್ಕ್ : ಸೇಡಂನ ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆಗೆ ಅಮ್ಮ ಪ್ರಶಸ್ತಿ ಮಹತ್ವದ ಕೊಡುಗೆ ನೀಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿದಾಗ ಸಾಹಿತ್ಯಿಕರು, ಕವಿಗಳು ಹಾಗೂ ರಾಜಕಾರಣಿಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸೇಡಂ ಎಂದಾಕ್ಷಣ ಬಸವರಾಜ ಪಾಟೀಲ್ ಸೇಡಂ ಹಾಗೂ ಅಮ್ಮ ಪ್ರಶಸ್ತಿ ನೆನಪಾಗುತ್ತದೆ. ಇದು ಸೇಡಂಗೆ ಗೌರವದ ಕಿರೀಟವಾಗಿದೆ ಎಂದು ಸೇಡಂ ನ ಮಾಜಿ ಶಾಸಕರಾದ ರಾಜಕುಮಾರ ತೇಲ್ಕೂರ ಹೇಳಿದರು.

ತಾಯಿಯ ಪ್ರೀತಿ, ತ್ಯಾಗ, ಬಲಿದಾನ, ದೇಶಪ್ರೇಮ ಹಾಗೂ ಬದುಕಿನ ಮೌಲ್ಯಗಳನ್ನು ನೆನಪಿಸುವ ಉದ್ದೇಶದಿಂದ 26 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಸಂಸ್ಥಾಪಕ ಮಹಿಪಾಲರೆಡ್ಡಿ ಮುನ್ನೂರು ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದರು.

ಹಿರಿಯ ಸಾಹಿತಿ ಸಂಗಮೇಶ ಬಾದವಾಡಗಿ ಮಾತನಾಡಿ, ಪ್ರಶಸ್ತಿ ಆಯ್ಕೆಯಲ್ಲಿ ಪಾರದರ್ಶಕತೆ ಹಾಗೂ ಶಿಫಾರಸಿಗೆ ಅವಕಾಶವಿಲ್ಲದಿರುವುದರಿಂದ ಅಮ್ಮ ಪ್ರಶಸ್ತಿ ಕನ್ನಡ ಸಾಹಿತ್ಯ ವಲಯದಲ್ಲಿ ತನ್ನದೇ ಮಹತ್ವ ಗಳಿಸಿದೆ ಎಂದರು.
ಹಿರಿಯ ಪತ್ರಕರ್ತ ಟಿ.ವಿ. ಶಿವಾನಂದನ್ ಮಾತನಾಡಿ, ಎಲ್ಲರ ಅಮ್ಮನ ಅಂತಃಕರಣದಿಂದ ಹುಟ್ಟಿದ ಈ ಪ್ರಶಸ್ತಿ ತನ್ನದೇ ಮೌಲ್ಯ ಹೊಂದಿದೆ ಎಂದರು.

ಈ ಬಾರಿ ಪ್ರಶಸ್ತಿಗೆ ಹತ್ತು ಜನ ಭಾಜನರಾಗಿದ್ದರು. ಅದರಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದ ಕನ್ನಡ ಉಪನ್ಯಾಸಕರಾದ ಸಂತೆಬೆನ್ನೂರು ಫೈಜ್ನಟ್ರಾಜ್ ಕೂಡ ಒಬ್ಬರು.

ಅವರ ದ್ರೌಪದಿಯ ವಾಷಿಂಗ್ ಮಿಷನ್ ಕವನ ಸಂಕಲನಕ್ಕೆ ಅಮ್ಮ ಪ್ರಶಸ್ತಿ ಲಭಿಸಿದೆ ಇವರ ಜೊತೆಯಲ್ಲಿ ಉಳಿದ ಸಾಧಕರಿಗೂ ಅಮ್ಮ ಪ್ರಶಸ್ತಿ ಪ್ರದಾನಿಸಲಾಯಿತು.ಮಾತೋಶ್ರೀ ಪ್ರತಿಷ್ಟಾನದ ವತಿಯಿಂದ ನೀಡುವ ಈ ಪ್ರಶಸ್ತಿ ನೀಡುವ ಸಂಸ್ಥಾಪಕ ಮಹಿಪಾಲರೆಡ್ಡಿ ಅವರ ಕಾರ್ಯ ಶ್ಲಾಘನೀಯ. ಪ್ರಶಸ್ತಿ ಯನ್ನು ಹಣದ ಮೌಲ್ಯದಲ್ಲಿ ಅಳೆಯಲು ಸಾಧ್ಯವಿಲ್ಲ ಎಂದು ಸಂಚಾಲಕಿ ಚಂದ್ರಕಲಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಮ್ಮ ಪ್ರಶಸ್ತಿ ಕೇವಲ ವ್ಯಕ್ತಿಯ ಸಾಧನೆಗೆ ನೀಡುವ ಗೌರವವಲ್ಲ; ತಾಯಿಯ ಪ್ರೀತಿ, ತ್ಯಾಗ ಮತ್ತು ಅಂತಃಕರಣಕ್ಕೆ ಸಲ್ಲಿಸುವ ಗೌರವವಾಗಿದೆ. 26 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ನೀಡುತ್ತಿರುವುದು ಸೇಡಂನ ಸಾಹಿತ್ಯಿಕ ಹಿರಿಮೆಗೆ ಹೆಮ್ಮೆಯ ಸಂಗತಿಯಾಗಿದೆ. ಎಂದು ಪ್ರಸಯೋಜಕರಾದ ಮಹಿಪಾಲ ರೆಡ್ಡಿ ಹೇಳಿದರು.

ಸಂತೆಬೆನ್ನೂರು ಫೈಜ್ನಟ್ರಾಜ್ ಈಗಾಗಲೇ ‌ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಯ ಜೊತೆಗೆ ನಾಡಿನ ಪ್ರತಿಷ್ಠಿತ ಹಲವಾರು ಪ್ರಶಸ್ತಿಗಳನ್ನು ಸಾಹಿತ್ಯ ಸೇವೆಗೆ ಪಡೆದಿದ್ದಾರೆ
ಕಥೆ, ಕವನ, ಪ್ರಬಂಧ, ಆಧುನಿಕ ವಚನ ಮುಂತಾದ ಪ್ರಕಾರ ಗಳಲ್ಲಿ ಹದಿನೈದಕ್ಕೂ ಹೆಚ್ಚು ಕೃತಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ
ಇವರಿಗೆ ಈ ಅಮ್ಮ ಪ್ರಶಸ್ತಿ ಗೆ ಕವಿ ಸನಾವುಲ್ಲಾ ನವಿಲೇಹಾಳು, ಕತೆಗಾರ ಇಂದ್ರಕುಮಾರ್, ಕವಿ ಫಕ್ಕಿತೇಶ ಅದಾಪುರ ಮುಂತಾದವರು ಅಭಿನಂದನೆ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು

Published

on

ದಾವಣಗೆರೆ, ಸುದ್ದಿದಿನ; ದಾವಣಗೆರೆ ಜಿಲ್ಲಾ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಕಾಮಗಾರಿ ಮತ್ತು ಖರೀದಿಯಲ್ಲಿನ ಅವ್ಯವಹಾರವನ್ನು ಸೂಕ್ತ ತನಿಖೆಗೆ ಒಳಪಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿ ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ ಚನ್ನಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಎಂ.ಆರ್ ಹಾಗೂ ಅವ್ಯವಹಾರದಲ್ಲಿ ಭಾಗಿಯಾಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜಿ ಶಿವಕುಮಾರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿ ಕಾರ್ಯಾಲಯ ಇಲ್ಲಿಗೆ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಸಾಕಷ್ಟು ಅವ್ಯವಹಾರ ಹಾಗೂ ಅಕ್ರಮಗಳು ನಡೆದಿರುವ ಅಧಿಕೃತ ಮಾಹಿತಿಯ ಮೇರೆಗೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯಾಲಯ, ಕೊರಟಿಕೆರೆ ಚನ್ನಗಿರಿ ತಾಲ್ಲೂಕು ಇವರಿಗೆ ಮಾಹಿತಿಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೋರಲಾಗಿದ್ದು, ಅರ್ಜಿದಾರರು ಹಣ ಪಾವತಿಸಿದರೂ ನಿಗಧಿತ ಕಾಲಾವಧಿಯಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದ ಕಾರಣ ಇ-ಗ್ರಾಮ ಸ್ವರಾಜ್ ಮೂಲಕ ಮಾಹಿತಿ ಪಡೆದು ದಿನಾಂಕ: 03-10-2026 ರಂದು ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ಚನ್ನಗಿರಿ ಇವರಿಗೆ ದೂರು ನೀಡಿ ಇಲಾಖಾ ತನಿಖೆಗೆ ಒಳಪಡಿಸುವಂತೆ ಕೋರಲಾಗಿತ್ತು. ನಿಗಧಿತ ಕಾಲಾವಧಿ ಮುಕ್ತಾಯವಾದರೂ ಯಾವುದೇ ತನಿಖೆ ನಡೆಸದ ಕಾರಣ ಲೋಕಾಯುಕ್ತಗೆ ದೂರು ನೀಡಿ, ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading
Advertisement

Title

ದಿನದ ಸುದ್ದಿ3 hours ago

ಜಿಲ್ಲಾ ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ, ಭ್ರಷ್ಟಾಚಾರ ಕಂಡುಬಂದರೆ ಕ್ರಮ: ಸಚಿವ ಬಸವಂತಪ್ಪ

ಹೃದಯ ಚಿಕಿತ್ಸೆಗೆ ಹೊಸಪೇಟೆಯಲ್ಲೇ ಸೌಲಭ್ಯ; ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಪ್ರಯತ್ನ – ಉದ್ಯೋಗ ಸೃಷ್ಟಿಗೂ ಆದ್ಯತೆ ಸುದ್ದಿದಿನ,ಹೊಸಪೇಟೆ (ವಿಜಯನಗರ): ಸರ್ಕಾರಿ ಆಸ್ಪತ್ರೆಗಳು ಬಡವರು, ಅಸಹಾಯಕರು ಹಾಗೂ ಸಾಮಾನ್ಯ...

ಅಂತರಂಗ5 hours ago

ಕ್ರೈಸ್ ಇಲಾಖೆಯ ನೇಮಕಾತಿ ಪರೀಕ್ಷೆ: ಶೇ. 49.69ರಷ್ಟು ಅಭ್ಯರ್ಥಿಗಳು ಹಾಜರು

ಸುದ್ದಿದಿನ,​ದಾವಣಗೆರೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ಕ್ರೈಸ್ (ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ) ಸಂಸ್ಥೆಯ ಉಳಿಕೆ ಮೂಲ ವೃಂದ ಮತ್ತು ಕಾರಾಗೃಹ ಇಲಾಖೆಯ...

ಅಂತರಂಗ5 hours ago

ಕವಿತೆ | ಬಿಡಿಸಿಕೊಳ್ಳುತ್ತದೊಂದು ಚಿತ್ರ

~ರಮ್ಯ ಕೆ.ಜಿ.ಮೂರ್ನಾಡು ಕುಂಚ ತಾಕುವ ಮೊದಲೇ ಮೂಡುತ್ತದೊಂದು ಚಿತ್ರ! ಎದೆನೆತ್ತರು ನಡುಗಿ ಪ್ರವಾಹದಂತೆ ತೆರೆದುಕೊಂಡ ಬ್ರಹ್ಮಾಂಡದಲಿ ಗಡಿ ಮರೆತ ಗೆರೆಗಳು ಕ್ಯಾನ್ವಾಸಿಂದಾಚೆ ಅಲೆದು ಜೀವದ್ರವ್ಯಗಳಲಿ ಈಜಿ ಮೂಲೆಗಳ...

ಅಂತರಂಗ7 hours ago

ಸಂತೆಬೆನ್ನೂರು ಫೈಜ್ನಟ್ರಾಜ್ ಕೃತಿಗೆ ಸೇಡಂ ನ ಅಮ್ಮ ಪ್ರಶಸ್ತಿ ಪ್ರದಾನ

ಸುದ್ದಿದಿನ ಡೆಸ್ಕ್ : ಸೇಡಂನ ಸಾಹಿತ್ಯಿಕ, ಸಾಂಸ್ಕೃತಿಕ ಹಿರಿಮೆಗೆ ಅಮ್ಮ ಪ್ರಶಸ್ತಿ ಮಹತ್ವದ ಕೊಡುಗೆ ನೀಡಿದೆ. ರಾಜ್ಯ ಹಾಗೂ ಹೊರರಾಜ್ಯಗಳಿಗೂ ತೆರಳಿದಾಗ ಸಾಹಿತ್ಯಿಕರು, ಕವಿಗಳು ಹಾಗೂ ರಾಜಕಾರಣಿಗಳೊಂದಿಗೆ...

ದಿನದ ಸುದ್ದಿ9 hours ago

ವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ

ದಾವಣಗೆರೆ, ಸುದ್ದಿದಿನ;ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಸ್.ಸುರೇಶ್ ಅವರನ್ನು...

ದಿನದ ಸುದ್ದಿ10 hours ago

ವಂಚನೆ | ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯತ್ವದಿಂದ ಎಸ್.ಸುರೇಶ್ ವಜಾ

ದಾವಣಗೆರೆ, ಸುದ್ದಿದಿನ; ಸುಳ್ಳು ಮಾಹಿತಿ ನೀಡಿ ದಾವಣಗೆರೆ ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾಗಿ ನಾಮ ನಿರ್ದೇಶನಗೊಂಡಿರುವ ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಎಸ್.ಸುರೇಶ್...

ದಿನದ ಸುದ್ದಿ12 hours ago

ದಾವಣಗೆರೆ | ಸ್ಮಾರ್ಟ್ ಟಿ.ವಿ ಖರೀದಿಯಲ್ಲಿ ಅವ್ಯವಹಾರ ; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಡಿ.ಡಿ ರಾಜನಾಯ್ಕ ಸೇರಿ 5 ಜನ ಸಿ.ಡಿ.ಪಿ.ಒ ಗಳ ವಿರುದ್ಧ ಲೋಕಾಗೆ ದೂರು

ದಾವಣಗೆರೆ, ಸುದ್ದಿದಿನ; 2025-26ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳಲ್ಲಿ ನಡೆದಿರುವ ಸ್ಮಾರ್ಟ್ ಟಿವಿ...

ದಿನದ ಸುದ್ದಿ1 day ago

ಕನಕದಾಸರ ಕೀರ್ತನೆ ತತ್ವಗಳು ಸಾರ್ವಕಾಲಿಕ : ಸಚಿವ ಕೆ ಎಸ್ ಬಸಂತಪ್ಪ

ಸುದ್ದಿದಿನ,ದಾವಣಗೆರೆ : ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಮೂಡಿಸುವಲ್ಲಿ ಕನಕದಾಸರ ಕೀರ್ತನೆಗಳು ಹಾಗೂ ತತ್ವಗಳು ಸಾರ್ವಕಾಲಿಕ ಪ್ರಸ್ತುತ ಎಂದು ಮುಜರಾಯಿ ಮೀನುಗಾರಿಕೆ ಬಂದರು ಒಳಸಾರಿಗೆ ಸಚಿವರಾದ...

ದಿನದ ಸುದ್ದಿ2 days ago

ಚನ್ನಗಿರಿ | ಕೊರಟಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ | ಪಿ.ಡಿ.ಓ ಶಿವಕುಮಾರ, ಇ.ಒ ಪ್ರಕಾಶ್ ವಿರುದ್ಧ ಲೋಕಾಗೆ ದೂರು

ದಾವಣಗೆರೆ, ಸುದ್ದಿದಿನ; ದಾವಣಗೆರೆ ಜಿಲ್ಲಾ ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸಿನ ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಅನುದಾನದಲ್ಲಿ ನಡೆದಿರುವ ಕಾಮಗಾರಿ ಮತ್ತು ಖರೀದಿಯಲ್ಲಿನ ಅವ್ಯವಹಾರವನ್ನು...

ದಿನದ ಸುದ್ದಿ3 days ago

ರಕ್ತದಾನದಿಂದ ಜೀವ ಉಳಿಸಿ, ಶ್ರವಣ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ : ಯೋಗೀಶ್ ಸಹ್ಯಾದ್ರಿ

ಚಿತ್ರದುರ್ಗ : ರಕ್ತದಾನವು ಅತ್ಯಂತ ಶ್ರೇಷ್ಠವಾದ ಮಾನವೀಯ ಸೇವೆಯಾಗಿದ್ದು, ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಿದೆ. ಪ್ರತಿಯೊಬ್ಬರೂ ರಕ್ತದಾನದ ಮಹತ್ವವನ್ನು ಅರಿತು...

Trending