20-03-1986 ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ‘ಬೆತ್ತಲೆ ಸೇವೆ ವಿರೋಧಿಸಿದ ಡಿಎಸ್ ಎಸ್ ಕಾರ್ಯಕರ್ತರ ಮೇಲೆ ಭಕ್ತರು ಹಲ್ಲೆ ನಡೆಸಿದರು. ರಕ್ಷಣೆಗೆ ಬಂದಿದ್ದ ಮಹಿಳಾ ಪೋಲೀಸರನ್ನೂ ಬೆತ್ತೆಲೆಗೊಳಿಸಿದ್ದರು. ಭಕ್ತರನ್ನು ಹುರಿದುಂಬಿಸಿ ಕಾರ್ಯಕರ್ತರ ಮೇಲೆ...
ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ಪಾಲಿಗಿದೊಂದು ಹೇಳಲು ಅತ್ಯಂತ ಸಂತೋಷ ಪಡಬೇಕಾದ ಹೆಮ್ಮೆಯ ಸಂಗತಿ . ತಮ್ಮ ವಿದ್ಯಾರ್ಥಿಗಳು ತಮಗಿಂತಲೂ ಎತ್ತರವಾಗಿ ಬೆಳೆದು ನಿಂತು – ” ಇಗೋ ಹೀಗಿದೆ ನೋಡಿ ನಾವು ಸಾಗುತ್ತಿರುವ ಹಾದಿ, ಇದೋ...
ನ್ಯಾ.ಸದಾಶಿವ ವರದಿಯು ಪರಿಶಿಷ್ಟ ಜಾತಿಗಳ ಒಳಗೆ ಮೀಸಲಾತಿ ವರ್ಗೀಕರಣ ಮಾಡಬೇಕು ಎನ್ನುತ್ತದೆ. ಪರಿಶಿಷ್ಟರಲ್ಲೇ ಇರುವ ಸ್ಪೃಶ್ಯ ಮತ್ತು ಅಸ್ಪೃಶ್ಯ ಸಮುದಾಯಗಳ ನಡುವೆ ಹಾಗೂ ಎಡಗೈ ಬಲಗೈ ಪಂಗಡಗಳ ನಡುವೆ ಈ ವರ್ಗೀಕರಣ ನಡೆಯಬೇಕು ಎನ್ನುತ್ತದೆ. ಇದನ್ನು...
ಮಹಿಷ ಎಮ್ಮೆಗಳ ರಾಜ. ಮೈಸೂರು ಭಾಗದ ಪ್ರಮುಖ ಯಾದವ ದೊರೆ. ಯಾದವರಿಗೆ ಎಮ್ಮೆಗಳನ್ನು ಮೇಯಿಸಲು ಬೇಕಿದ್ದದು ಅಪಾರವಾದ ಅರಣ್ಯ. ಅದು ಮೈಸೂರು ಭಾಗದಲ್ಲಿ ಅಪಾರ ಪ್ರಮಾಣದಲ್ಲಿತ್ತು. ಆದರೆ, ಉತ್ತರ ಭಾರತದ ಕಡೆಯಿಂದ ಬಂದ ಆರ್ಯರು ಕೃಷಿಕರನ್ನು...
ನಿಮ್ಮ ಆ ಸ್ಮೈಲ್ನಿಂದ ನನ್ ಏನ್ ಮೋಡಿ ಮಾಡ್ತಿರ್ರಿ…! ನೀವ್ ಒಮ್ಮೆ ನಕ್ಕಿದ್ರೆ ಸಾಕು ಅದೆಲ್ಲೊ ಇರೋ ಮೊನಾಲಿಸಾಳ ಕಣ್ಣುಗಳಿಗೂ ಮತ್ಸರ ಬಂದು ಅವಳ ತುಟಿ ಬಿಗಿದು ಬಿಡುತ್ತೆ ! ಇದು ಜೋಕ್ ಅಂತ ತಿಳ್ಕಂಡ್ರ?...
ಅದು ಆಗಸ್ಟ್ 15. ಸ್ವಾತಂತ್ರ್ಯ ದೊರೆತ ದಿನ.ಕೀಲರಾಘವೇಂದ್ರ ಅವರೊಡನೆ 7 ದಶಕಗಳಲ್ಲಿ ನಾವುಗಳುಸಾಗಿಬಂದ ಹಾದಿಯನ್ನು ಮೆಲುಕುಹಾಕುತ್ತಿದ್ದೆ.ನಮ್ಮಮಾತುಕತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತಿಬಂತು. ಮಾತಿನ ಮಧ್ಯೆದಲ್ಲಿ ಗೋವಿನ ಹೆಸರಲ್ಲಿ ನರಮೇಧನಡೆಯುತ್ತಿದೆ. ಜನ ಅಭದ್ರತೆ, ಭಯ, ಆತಂಕದಿಂದ ಬದುಕುದೂಡುವ ಸ್ಥಿತಿ ನಿರ್ಮಾಣವಾಯಿತಲ್ಲ ಎಂಬ ವಿಚಾರವೂಬಂದಿತು. ನಾನಾಗ ಗೋವು ಕಾಮಧೇನು.ಅದರ ಹಾಲು,ಗಂಜಲ,ಸೆಗಣಿ ಎಲ್ಲವೂ ಬಳಕೆಗೆ ಯೋಗ್ಯ. ಸಾಲದಕ್ಕೆಹಿಂದುಳಿದ ಗೊಲ್ಲ ಸಮುದಾಯದ ಜೀವನಾಧಾರ ಕೂಡಆಗಿದೆ. ಆದರೆ, ಗೋವಿಗಿಂತ ಕತ್ತೆ ಬಹುಪಯೋಗಿ. ಇದನ್ನೇಕೆಜನ ಪೂಜಿಸುವುದಿಲ್ಲ, ಗೌರವಿಸುವುದಿಲ್ಲ? ಇದರ ರಕ್ಷಣೆಗಾಗಿಬಡಿದಾಡುವುದಿಲ್ಲ. ಸಂರಕ್ಷಣೆಗಾಗಿ ಸಮಿತಿಯನ್ನು ಮಾಡಿಲ್ಲ. ಸರ್ಕಾರ ಕೂಡ ಒಂದು ಬಿಡಿಗಾಸನ್ನೂ ಕತ್ತೆ ಸಂರಕ್ಷಣೆಗೆನೀಡಿಲ್ಲ ಎಂದುಒಂದೇ ಸಮನೆ ಉಸುರಿದೆ.ಎದುರು ಕುಳಿತಿದ್ದವಕೀಲ ರಾಘವೇಂದ್ರ ಹೌದಲ್ವ! ಗೋವಿಗೆ ನೀಡಿದಷ್ಟು ಮಹತ್ವಕತ್ತೆಗೇಕೆ ನೀಡಿಲ್ಲ? ನಾವೇಕೆ ಕತ್ತೆ ಸಂರಕ್ಷಣೆಗಾಗಿ ಹೋರಾಟ ಮಾಡಬಾರದೆಂದು ಪ್ರಶ್ನಿಸಿದರು. ಇದೇ ಹೊತ್ತಿನಲ್ಲಿ ನಾಲ್ಕು ಘಟನೆಗಳು ನನ್ನನ್ನು ಬಹುವಾಗಿಕಾಡಿದವು. ಒಂದು ಉತ್ತರಖಂಡ್ ವಿಧಾನಸಭೆಯಲ್ಲಿ ಅಲ್ಲಿನಪಶುಸಂಗೋಪನಾ ಇಲಾಖೆ ಸಚಿವೆ ರೇಖಾ ಆರ್ಯ ಗೋವಿಗೆ’ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕೆಂಬ ನಿರ್ಣಯಮಂಡಿಸಿದ್ದರು. ಎರಡು, ದೂರದ ಕೊಲಂಬಿಯಾದಲ್ಲಿಕತ್ತೆಗಳಿಗೆ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕಳೆದ15 ವರ್ಷಗಳಿಂದ ಮೋನಿಕ್ಯುಯಿರಾ ಪಟ್ಟಣದಲ್ಲಿ ಕತ್ತೆಉತ್ಸವ ಆಯೋಜಿಸಲಾಗುತ್ತಿದೆ. ಮೂರು, ಈಜಿಪ್ಟ್ನ ಮೃಗಾಲಯದಲ್ಲಿ ಕತ್ತೆಗೆ ಕಪ್ಪು-ಬಿಳಿ ಬಣ್ಣ ಬಳಿದು ’ಜೀಬ್ರಾ’ ಎಂದು ಜನರನ್ನು ನಂಬಿಸುತ್ತಿದ್ದರಂತೆ. ಇದನ್ಹೇಗೋಅರಿತವನೊಬ್ಬ ನಕಲಿ ಜೀಬ್ರಾದ ಫೋಟೋ ಸೆರೆ ಹಿಡಿದುಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ನಾಲ್ಕು, ಗಾಜಾದಲ್ಲಿರುವ ಎರಡು ಕತ್ತೆಗಳಿಗೆ ಬಣ್ಣ ಬಳಿದು ಜೀಬ್ರಾಎಂದು ನಂಬಿಸಲಾಗಿದೆ. ಇದೇ ರೀತಿ ಚೀನಾಮೃಗಾಲಯವೊಂದರಲ್ಲಿ ಟಿಬೇಟಿಯನ್ನ ಮುಸ್ಟೀಫ್ಜಾತಿಯ ನಾಯಿಯೊಂದನ್ನು ಸಿಂಹ ಎಂದುನಂಬಿಸಲಾಗಿತ್ತು. ಜನ ಬೋನಿನ ಬಳಿ ಹೋದಾಗ ಸಿಂಹಸ್ವರೂಪದ ನಾಯಿ ಬೊಗಳಿ ತನ್ನ ನಿಜ ಬಣ್ಣ ತಿಳಿಸಿದೆ! ಇದನ್ನೆಲ್ಲಾ ಕೇಳಿದಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದನ್ನುಕಾಣಬಹುದು. ಅತ್ಯಂತ ಸಾಧು ಪ್ರಾಣಿ ಎಂದೇಕರೆಸಿಕೊಂಡಿರುವ ಹಸು ಕೂಡ ಕೋಪ ಬಂದಾಗಒದೆಯುವುದು, ಹಾಯುವುದು ಮಾಡುತ್ತದೆ. ಸ್ವಾಮಿನಿಷ್ಟೆಗೆಹೆಸರಾದ ನಾಯಿ ಕೂಡ ತನ್ನ ಯಜಮಾನನನ್ನು ಕಚ್ಚಿರುವಉದಾಹರಣೆಗಳಿವೆ. ಆದರೆ, ಕತ್ತೆಯ ಮೇಲೆ ಎಷ್ಟೇ ಮಣಭಾರಹಾಕಿ, ಮೇವು, ನೀರು ನೀಡದಿದ್ದರೂ ಅದುವ್ಯಗ್ರಗೊಳ್ಳುವುದಿಲ್ಲ. ಹೊಟ್ಟೆ ತುಂಬಾ ಹಾಕಿದರೂ ಅದು ಸಂತಸಗೊಳ್ಳುವುದಿಲ್ಲ. ಸದಾ ಸಮಚಿತ್ತದಿಂದ ಕೂಡಿರುತ್ತದೆ. ಸುಖದುಃಖ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ತಾನು ಜನ್ಮತಳೆದಿರುವುದೇ ಸೇವೆಗಾಗಿ, ಇನ್ನೊಬ್ಬರ ಹಿತಕ್ಕಾಗಿ ಎಂದುಕಿವುಡನಂತೆ, ಮೂಕನಂತೆ ಬದುಕು ಸವೆಸುತ್ತದೆ.ಗಡಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂತಹುದ್ದೇಕುರುಕಲು ಸ್ಥಳ ಇದ್ದರೂ, ಸೈನಿಕರಿಗೆಊಟ – ನೀರು, ಮದ್ದುಗುಂಡುಸಾಗಿಸುವ ಏಕೈಕ ಜೀವಿ ಕತ್ತೆ. ಮನುಷ್ಯನಿಂದತಲುಪಲು, ಹೊರಲು ಆಗದ ಭಾರವನ್ನು ಹೊತ್ತು ನಿಸ್ವಾರ್ಥಸೇವೆ ನೀಡುವ ಜೀವಿ ಕತ್ತೆ. ತನ್ನ ಹೆಗಲ ಮೇಲೆ ಮೈಲಿಗೆ ಬಟ್ಟೆ, ಮಡಿಬಟ್ಟೆ; ಸ್ಪೃಷ್ಯರ ಬಟ್ಟೆ, ಅಸ್ಪೃಷ್ಯರ ಬಟ್ಟೆ; ಬಡವನ ಬಟ್ಟೆ – ಶ್ರೀಮಂತನ ಬಟ್ಟೆ ಎಂದೆಲ್ಲಾ ಎಣಿಸದೇ ಹೊತ್ತು ಸಾಗುವ ಕತ್ತೆನಿಜಾರ್ಥದಲ್ಲಿ ’ಜಾತ್ಯಾತೀತ’ವಾದಿ. ಗೋವಿನ ಹಾಲನ್ನುಜೀವನಪೂರ್ತಿಸೇವಿಸಬೇಕು.ಕತ್ತೆ ಹಾಲನ್ನು ಜೀವನದಲ್ಲೊಮ್ಮೆಸೇವಿಸಿದರೆ ಸಾಕು ಅದು One time booster. ಐದು ಹನಿಕತ್ತೆ ಹಾಲು 100 ವರ್ಷ ರೋಗ ನಿರೋಧಕ ಶಕ್ತಿಯಾಗಿಕಾರ್ಯನಿರ್ವಹಿಸುತ್ತೆ. ನನಗೆ ಈಗಲೂ ನೆನಪಿದೆ. ಸಣ್ಣವನಿದ್ದಾಗ ನನಗೂ ಕತ್ತೆ ಹಾಲು ಕುಡಿಸಲಾಗಿತ್ತು. ಮಾತ್ರವಲ್ಲ, ನಾನು ನನ್ನ ಮೂರು ಮಕ್ಕಳಿಗೂ ಕತ್ತೆ ಹಾಲಿನ booster ಹಾಕಿಸಿರುವೆ. ಕತ್ತೆಗಳನ್ನಿಂದು ಅಭಿವೃದ್ಧಿ ಕಾಣದ ರಾಷ್ಟ್ರಗಳಲ್ಲಿಯೇ ಹೆಚ್ಚಾಗಿಬಳಸಲಾಗುತ್ತಿದೆ. ಇವನ್ನು ಸರಕು ಸಾಗಾಣಿಕೆಗೆ ಮಾತ್ರವಲ್ಲದೇ, ಕೃಷಿ ಬಳಕೆಗೆ, ಬರ ಪರಿಹಾರದಕಾರ್ಯಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಕೃಷಿಯಲ್ಲಿಅತ್ಯಂತ ಅಗ್ಗದ ಬೆಲೆಗೆ ಬಳಕೆಯಾಗುವ ಶ್ರಮಜೀವಿಗಳಲ್ಲಿಮನುಷ್ಯ ಮೊದಲಿಗನಾದರೆ, ಕತ್ತೆ ಎರಡನೇ ಸ್ಥಾನವನ್ನುಅಲಂಕರಿಸಿದೆ. ಕತ್ತೆಯನ್ನು ಕುರಿ ಕಾಯಲೂ ಬಳಸಲಾಗುತ್ತದೆ. ಕತ್ತೆ ಸವಾರಿ ಮಕ್ಕಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಅಚ್ಚುಮೆಚ್ಚು.ಕತ್ತೆ ಹಾಲು ಮತ್ತು ಮಾಂಸಕ್ಕೆ ಇಟಲಿಯಲ್ಲಿ ಹೆಚ್ಚು ಬೇಡಿಕೆಇದೆ. ಯೂರೋಪ್ನ ಹಲವು ಕಡೆ ಮಾಂಸದ ಖಾದ್ಯಗಳುಹೆಚ್ಚು ಜನಪ್ರಿಯಗೊಂಡಿವೆ. ಇದರ ಹಾಲಿನಿಂದ ಸೋಪು, ಕ್ರೀಂಗಳನ್ನು ಉತ್ಪಾದಿಸಲಾಗುತ್ತದೆ. ಕತ್ತೆಯ ಹಾಲು, ಕ್ರೀಂನಿಂದ ಚರ್ಮವ್ಯಾದಿಗಳು ಗುಣವಾಗುತ್ತವೆ. ಅಲ್ಲದೆಕತ್ತೆಯ ಚರ್ಮವನ್ನು ಕಾಗದ ತಯಾರಿಸಲು ಬಳಸಲಾಗುತ್ತದೆ. ಕತ್ತೆಯ ಮಾಂಸದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗಿರುವುದರಿಂದ ಚೀನಿಯರಂತು ಮುಗಿಬಿದ್ದುತಿನ್ನುತ್ತಾರೆ.ಇವನ್ನೆಲ್ಲಾ ಕಂಡಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಕತ್ತೆಯನ್ನು ಬಲಿಪಶು ಮಾಡಲಾಗಿದೆ ಎಂದುಮೇಲ್ನೋಟಕ್ಕೆ ಅನಿಸಬಹುದು. ಆದರೆ, ವಾಸ್ತವದಲ್ಲಿ ಬಲಿಪಶುಕತ್ತೆಯಲ್ಲ, ಬದಲಾಗಿ ಮನುಷ್ಯನೇ ಆಗಿದ್ದಾನೆ.ಕತ್ತೆಯನ್ನು ಜೀಬ್ರಾ ಎಂದು ಬಣ್ಣಿಸಲು, ತೋರಿಸಲು, ವೈಭವೀಕರಿಸಬೇಕಾಗುತ್ತದೆ. ಚತುರತೆ ಮತ್ತು ಬುದ್ಧಿವಂತಿಕೆಎರಡನ್ನೂ ಬೆರಸಿ ಜನರನ್ನು ನಂಬಿಸಬೇಕಾಗುತ್ತದೆ. ಪಾಪದಕತ್ತೆ ಹೊಸವೇಷ ಹೊತ್ತು, ತಾನು ಜೀಬ್ರಾ ಎಂದುತೋರಿಸಿಕೊಳ್ಳುವ ದುಸ್ಥಿತಿಯಲ್ಲಿದೆ. ’ಒಂದು ಭ್ರಷ್ಟ ಕತ್ತೆ ಹೆಚ್ಚಿನಮಟ್ಟದ ಪುರಸ್ಕಾರಕ್ಕೆ ಪಾತ್ರವಾಗುತ್ತದೆ’. ’ಹಗರಣದ ಕತ್ತೆಕಾನೂನಿನ ಅಡಿಯಲ್ಲಿ ಆಶ್ರಯ ಪಡೆಯುತ್ತದೆ’. ’ಎದುರಾಡದಕತ್ತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’. ’ವಂಚಕ ಕತ್ತೆಹುಲುಸಾಗಿ ಬೆಳೆಯುತ್ತದೆ’. ಕತ್ತೆಯ ಈ ಎಲ್ಲಾ ರೂಪಕಗಳುಜೀವಂತವಾಗಿ ಮನುಜರಲ್ಲಿಯೂ ಇವೆ. ಕೆಲವು ಕಡೆಕತ್ತೆಗಳನ್ನು ಮಳೆ ಬಾರದಿದ್ದಾಗ ಪೂಜೆ ಮಾಡಲು, ಮದುವೆಮಾಡಿಸಲು ಬಳಸಲಾಗುತ್ತದೆ. ವಿಚಿತ್ರವೆಂದರೆ, ಹೊಲಸುತಿನ್ನುವ ಹಂದಿಗಳನ್ನು ಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ!’ದಿನ ಬೆಳಗೆದ್ದು ನನ್ನನ್ನು ನೋಡಿ, ನಿಮಗೆ ಶುಭವಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರಾಟವಾಗುವ ಕತ್ತೆ, ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ನಿರ್ಲಕ್ಷಕ್ಕೆಈಡಾಗುವ ಕತ್ತೆ ಎರಡನೇ ದರ್ಜೆಯ ಪ್ರಾಣಿ. ಶೋಷಿತ ಪ್ರಾಣಿಆಗಿದೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಕತ್ತೆಯನ್ನುಜೀಬ್ರಾವನ್ನಾಗಿ, ಸಿಂಹವನ್ನಾಗಿ ಹೇಗೆ ಬೇಕಾದರೂಬದಲಾಯಿಸಿಬಿಡುತ್ತಾನೆ. ಹೀಗೆ ಬಣ್ಣ ಬಳಿಸಿಕೊಂಡ ಕತ್ತೆಗಳುಹಾಗೆಯೇ ಇರುವುದಿಲ್ಲ. ಮಳೆ ಬಿದ್ದರೆ ಅವು ಕತ್ತೆಯಾಗುತ್ತವೆ. ಅದು ಪ್ರಧಾನಿ ಬಟ್ಟೆ ಹೊತ್ತು ನಡೆದರೂ ಸರಿ, ಪರಿಚಾರಕನಬಟ್ಟೆ ಹೊತ್ತು ನಡೆದರೂ ಸರಿ, ಅದರ ಬೆನ್ನು ತೂಕಹೊರಲೇಬೇಕು. ನನಗನಿಸಿದಂತೆ ಇವು ಟನ್ಗಟ್ಟಲೆ ತೂಕಮಾತ್ರ ಹೊರುವುದಿಲ್ಲ, ಅವಮಾನವನ್ನು ಹೊರುತ್ತವೆ. ಯಾವುದೇ ಬಣ್ಣ ಬಳಿದುಕೊಂಡರೂ ಕತ್ತೆಯಾಗಿಯೇಉಳಿಯುತ್ತವೆ. ಯಾರನ್ನಾದರೂ ಕೂಗಿದಾಗ ಸ್ಪಂದಿಸದಿದ್ದರೆ, ಏಯ್ ಕತ್ತೆಎಂದು ಕೂಗಿ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಎಲ್ಲರೂಕತ್ತೆಯನ್ನು ಕಿವುಡ, ಮೂಕ ಪ್ರಾಣಿ ಎಂದುಕೊಂಡುಬಿಟ್ಟಿದ್ದಾರೆ. ಇದು ಮೂಕವೂ ಅಲ್ಲ, ಬದಲಿಗೆ ಅತೀವ ತಾಳ್ಮೆಯನ್ನುಹೊಂದಿದೆ. ಹೀಗಾಗಿಯೆ ಕತ್ತೆಗೆ ಇಂತಹದ್ದೊಂದು ವಿಶೇಷಣಬಂದಿರಬಹುದು.ಕತ್ತೆಯ ಮುಂದೆ ನೀರು ಮತ್ತು ಆಹಾರ ಎರಡನ್ನೂ ಇಟ್ಟರೆ, ಯಾವುದನ್ನೂ ಸೇವಿಸದೆ ಪ್ರಾಣ ಬಿಡುತ್ತದೆ. ಕಾರಣ ಕತ್ತೆಗೆಹಸಿವು ಮತ್ತು ದಾಹ ಎರಡರಲ್ಲಿ ಯಾವುದನ್ನು ಮೊದಲಿಗೆಆಯ್ಕೆ ಮಾಡಿಕೊಳ್ಳಬೇಕೆಂಬ ಜ್ಞಾನ ಹೊಂದಿರುವುದಿಲ್ಲ. ಕತ್ತೆಯ ಮೇಲೆ ಹಣ ಹೂಡಿರಿ. ಅದು ನಿಮಗೆ ಸದಾವಿಧೇಯತೆಯಿಂದ ನಡೆದುಕೊಳ್ಳುತ್ತದೆ. ನಿಮ್ಮನ್ನು ಸ್ವಾಮಿಎಂಬಂತೆ ಭಾವಿಸುತ್ತದೆ. ಅದರಲ್ಲೂ ಕತ್ತೆಗಳು ಹೆಂಗಸರಂತೆಆಡು-ಕುರಿಗಳಂತೆ ತಲೆ ತಗ್ಗಿಸಿಕೊಂಡು ಹೇಳಿದ್ದನ್ನು ಪಾಲಿಸುತ್ತದೆ. ಕೆಲೆವೆಡೆ ಕುದುರೆಗಿಂತ ಕತ್ತೆ ವಾಸಿ ಎಂಬಮಾತಿದೆ. ಕತ್ತೆಯ ಮೇಲೆ ಕೂತರೆ ಹೊರುತ್ತದೆ. ಹೊರಿಸಿದರೆಸಾಗುತ್ತದೆ. ಆದರೆ ಕುದುರೆ ಮೇಲೆ ಕೂತರೆ, ಹೊರಿಸಿದರೆ ಎತ್ತಿಬೀಸಾಡುತ್ತದೆ. ಹೀಗಾಗಿ ಕತ್ತೆ ಪವಿತ್ರ ಸ್ಥಳ ಮೆಕ್ಕಾಗಿ ಹೋಗಿಬಂದರೂ,ಅದು ಕತ್ತೆಯಾಗಿಯೇ ಬದುಕು ದೂಡುತ್ತದೆ.Democratic Party of UnitedStates ನ ಚಿಹ್ನೆ ಕೂಡಕತ್ತೆಯೇ ಆಗಿದೆ.ಕುದುರೆಗಿಂತ ಕತ್ತೆ ಬಲಶಾಲಿ.ಗಾಬರಿಗೆಒಳಗಾಗುವುದಿಲ್ಲ.ನೆನಪಿನ ಶಕ್ತಿಯೂ ಹೆಚ್ಚಾಗಿದೆ. ಒಮ್ಮೆಒಂದು ದಾರಿಯಲ್ಲಿ ಸಾಗಿದರೆ 20 ವರ್ಷವಾದರೂ ಆದಾರಿಯನ್ನು ಗುರುತಿಟ್ಟುಕೊಂಡು ಸಾಗುವ ಪ್ರಾಣಿ. ಜೊತೆಗೆಇದು ಒಂಟಿಯಾಗಿ ಇರಲು ಬಯಸುವುದಿಲ್ಲ. ಜೋಡಿಇರಲೇಬೇಕು. ಇಲ್ಲ ಆಡು,ಕುರಿಯ ಸಂಗಡವಾದರೂಇರಬೇಕು. ಮಾನವನಿಗೆ ಕತ್ತೆಯು ಶತಮಾನಕ್ಕೂ ಹಿಂದಿನಿಂದಸಹಕಾರಿಯಾಗಿದೆ.ಗಂಡುಕತ್ತೆ, ಹೆಣ್ಣು ಕುದುರೆಯೊಂದಿಗೆ ಕೂಡಿದಾಗಜನಿಸುವುದೇ ಹೆಸರಗತ್ತೆ. ಗಂಡು ಕುದುರೆ, ಹೆಣ್ಣುಕತ್ತೆಯೊಂದಿಗೆ ಕೂಡಿದಾಗ ಜನಿಸುವುದು ಹಿನ್ನಿ. ಜೀಬ್ರಾ ಮತ್ತುಕತ್ತೆ ಕೂಡಿದಾಗ ಹುಟ್ಟುವುದು ಜೊಂಕಿ, ಜೀಬ್ರಾಯ್ಡ್ಎನ್ನುತ್ತಾರೆ. ಹೆಸರಗತ್ತೆಯನ್ನು ಸರಕು ಸಾಗಾಣಿಕೆಗೆ ಬಳಸುವುದರಿಂದ, ಅವುಗಳನ್ನು ನಿರ್ವೀರ್ಯರನ್ನಾಗಿಸಲಾಗಿರುತ್ತದೆ. ಅಸಿನೋಡಿಮಾರ್ಟಿನಾ, ಫ್ರಾಂಕಾ, ಮೊಮತ್ತ್ ಜಾಕ್ ತಳಿಯಕತ್ತೆಗಳನ್ನು ಗೂಳಿಯಂತೆ ಬಳಸಲಾಗುತ್ತದೆ. ಇಷ್ಟಕ್ಕೂ ಕತ್ತೆಯ ಮೂಲ ಸೊಮಾಲಿಯಾ. ಆಡುಕುರಿ, ಗೋವನ್ನು ಸಾಕುತ್ತಿದ್ದ ಕಾಲದಿಂದಲೂ ಕತ್ತೆ ಇದೆ. ಗಂಡುದನವನ್ನು ಕೃಷಿ ಮತ್ತು ಸಾಗಾಣಿಕೆಗೆ ಬಳಸುತ್ತಿದ್ದರೂ, ದುರ್ಗಮಹಾದಿ ಕ್ರಮಿಸಲು ಕತ್ತೆಯೇ ಬೇಕಿತ್ತು. ಇದಲ್ಲದೇ, ಕತ್ತೆ ತಿಂದಮೇವನ್ನು ಮೆಲುಕು ಹಾಕುತ್ತಾ, ನೀರಿನ ಅವಶ್ಯಕತೆಇಲ್ಲದೆಯೂ ಬದುಕುತ್ತದೆ. ಸಾಲದಕ್ಕೆ ಇದರ ಹಾಲನ್ನುಗೋವಿನ ಹಾಲಿನಂತೆ ಬಳಸಲಾಗಿದೆ. ಮಾಂಸವನ್ನುಸವಿಯಲಾಗಿದೆ.ಸಿರಿಯಾದಲ್ಲಿ ಕತ್ತೆಯನ್ನು ಅಲ್ಲಿನ ಡಿಯೋನಿಸಿಸ್ ದೇವತೆಗೆಹೋಲಿಸಲಾಗಿದೆ. ಈಜಿಪ್ಟ್ನಲ್ಲಿ ಮನುಷ್ಯರನ್ನು ಅಂತ್ಯಸಂಸ್ಕಾರ ಮಾಡಿದಂತೆ ಕತ್ತೆಗೂ ಅಂತಿಮ ಗೌರವಕೊಡಲಾಗಿದೆ. ೧೬೭೯ರಲ್ಲೇ ಆರಿಜೋನ ಎಂಬಲ್ಲಿ ಕತ್ತೆಯಬಳಕೆ ಕುರಿತಂತೆ ದಾಖಲೆಗಳಿವೆ. The Domestic Animal...
ಪ್ರಜಾವಾಣಿ ಪತ್ರಿಕೆಯನ್ನು ಪ್ರಾರಂಭಿಸುವಾಗ ಕೆ.ಎನ್.ಗುರುಸ್ವಾಮಿಯವರಿಗೆ ೪೭ ವರ್ಷ. ಆಗ ಅವರದ್ದು ಕೈ ತುಂಬಾ ಆದಾಯ ಇರುವ ಅಬಕಾರಿ ವ್ಯಾಪಾರದಲ್ಲಿ ಏಕಸ್ವಾಮ್ಯದ ದಿನಗಳು . ಆದರೆ ಗುರುಸ್ವಾಮಿ ಆ ಕಾಲದಲ್ಲಿಯೂ ಲಾಭದಾಯಕವಲ್ಲದ, ಸಂಪೂರ್ಣವಾಗಿ ಬ್ರಾಹ್ಮಣಮಯವಾಗಿದ್ದ ಮಾಧ್ಯಮ ಕ್ಷೇತ್ರ...
ಮೊನ್ನೆ ಮೊನ್ನೆಯಷ್ಟೇ ಪರಿಚಿತನಾದರೂ ಹಲವು ವರ್ಷಗಳ ಗೆಳೆಯನೆಂಬಂತೆ ಆತ ಎದುರಿಗೆ ನಿಂತು ಆತ್ಮೀಯತೆಯಿಂದ “ಇದು ಇದೇ ಸೆಪ್ಟೆಂಬರ್ 30 ರಂದು ಭಾನುವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿರುವ ನನ್ನ ಕೃತಿ. ಹೇಗಿದೆ ಒಮ್ಮೆ ನೋಡಿ”...
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡ ನಾಡು. ಇಲ್ಲಿ ಬಹುತ್ವದ ನೆಲೆಗಳು ಸಾಂಸ್ಕøತಿಕ ನೆಲೆಯಲ್ಲಿ ಕಂಡುಬರುತ್ತವೆ. ಆದರೆ ಇಂತಹ ಬಹುತ್ವದ ಸಾಂಸ್ಕøತಿಕ ಶ್ರೀಮಂತಿಕೆಯ ನಾಡಿನಲ್ಲಿ ವಲಸೆ ಬಂದಂತಹ ಆರ್ಯ ಸಂಸ್ಕøತಿಯೊಂದು ಇಲ್ಲಿನ ಮೂಲನಿವಾಸಿ ಸಂಸ್ಕøತಿಗಳನ್ನು ಹತ್ತಿಕ್ಕುವ ಮೂಲಕ...
ನಾಡೋಜ ಎಚ್.ಎಲ್.ನಾಗೇಗೌಡ ಜನ್ಮ ಶತಮಾನೋತ್ಸವದ ಪ್ರಯುಕ್ತ ರಾಮನಗರದ ಜಾನಪದ ಲೋಕವು, 2015ನೆ ಸಾಲಿನ ಜಾನಪದಲೋಕ ಪ್ರಶಸ್ತಿಗೆ ತುಮಕೂರು ಜಿಲ್ಲೆ ವಡ್ಡಗೆರೆ ಗ್ರಾಮದ ಜಾನಪದ ಹಾಡುಗಾರ್ತಿ ವಡ್ಡಗೆರೆ ಕದರಮ್ಮ ಅವರನ್ನು ಆಯ್ಕೆ ಮಾಡಿದೆ. ದಿನಾಂಕ 08.02.2015ರ ರವಿವಾರ...