ಬಹಿರಂಗ
ದೀಪಿಕಾಳ ‘ಚಪಾಕ್’ ಸಿನೆಮಾ ಮತ್ತು ಬಿಜೆಪಿಯ ಫೇಕ್ ನ್ಯೂಸ್ ಫ್ಯಾಕ್ಟರಿಗಳು..!
- ಅಲ್ಮೇಡಾ ಗ್ಲಾಡ್ಸನ್
ದೀಪಿಕಾ ಪಡುಕೋಣೆ JNUಗೆ ಹೋಗಿದ್ದೇ ತಡ ಆಕೆಯ ಮುಂಬರುವ ಚಪಾಕ್ ಸಿನೆಮಾವನ್ನು ಬಾಯ್ಕಾಟ್ ಮಾಡಬೇಕೆಂದು ಹೇಗೋ ಕರೆಕೊಟ್ಟಾಯ್ತು. Kindia, Swarajya ಮುಂತಾದ ಫೇಕ್ ನ್ಯೂಸ್ ಫ್ಯಾಕ್ಟರಿಗಳು ವಾಂತಿ-ಭೇಧಿಯಿಂದ ನರಳಲಾರಂಭಿಸಿವೆ. ಇದಕ್ಕೆ ಪುರಾವೆ ಎನ್ನುವಂತೆ Swarajya ನಿನ್ನೆ ಒಂದು ಲೇಖನ ಪ್ರಕಟಿಸಿ, ಚಪಾಕ್ ಸಿನೆಮಾದಲ್ಲಿ ಆಸಿಡ್ ದಾಳಿ ಮಾಡಿದವನ ಧಾರ್ಮಿಕ ಐಡೆಂಟಿಟಿಯನ್ನು ಬದಲಾಯಿಸಲಾಗಿದೆ ಎಂದು ಎಂದಿನಂತೆ ವಿಷ ಕಕ್ಕಿತು.
ಚಪಾಕ್ ಲಕ್ಷ್ಮೀ ಅಗರ್‍ವಾಲ್ ಎನ್ನುವ ಯುವತಿಯ ಜೀವನಾಧರಿತ ಕಥೆ. ಆಕೆ ಹದಿಹರೆಯದಲ್ಲಿದ್ದಾಗ ನದೀಮ್ ಖಾನ್ ಎನ್ನುವ ವಿಕೃತನೊಬ್ಬ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದ.
ಆದರೆ Swarajyaದ ಪ್ರಕಾರ ಚಪಾಕ್ ಸಿನೆಮಾದಲ್ಲಿ ನದೀಮ್ ಖಾನ್ ಐಡೆಂಟಿಟಿಯನ್ನು ಮುಚ್ಚಿಡಲು, ಆ ಪಾತ್ರಧಾರಿಯ ಹೆಸರನ್ನು ರಾಜೇಶ್ ಶರ್ಮಾ ಎಂದಿಟ್ಟು ಆತ ಹಿಂದೂ ಧರ್ಮದವನಂತೆ ತೋರಿಸಲಾಗಿದೆ ಎಂದು ಸುಳ್ಳನ್ನು ಹರಿಯಬಿಟ್ಟಿತು.
ಇಂಥ ಫೇಕ್ ಫ್ಯಾಕ್ಟರಿಗಳು ಹೇತಿದ್ದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಭಕ್ತ ಶ್ವಾನಗಳು ರಪಕ್ಕೆಂದು ಇದನ್ನು ನೆಕ್ಕುತ್ತಾ, ಇತರರೂ ನೆಕ್ಕುವಂತೆ ಮಾಡಿದರು. ದೀಪಿಕಾ ಹಿಂದೂ ವಿರೋಧಿ, ಮುಸ್ಲೀಮ್ ಪರ ಎನ್ನುವ ಮಟ್ಟಿಗೆ ವಿಚಾರ ಬಂದು ತಲುಪಿತು.
ಆದರೆ ಸುಳ್ಳು ಎಷ್ಟೊತ್ತು ಜೀವಿಸಲು ಸಾಧ್ಯ? ಅಸಲಿಯತ್ತೆಂದರೆ ಚಪಾಕ್ ಸಿನೆಮಾದಲ್ಲಿ ಅಸಲಿ ಜೀವನದ ಲಕ್ಷ್ಮೀ ಅಗರ್ವಾಲ್ ಪಾತ್ರ ಮಾಡುತ್ತಿರುವ ದೀಪಿಕಾಳ ಹೆಸರು ಮಾಲತಿ ಅಗರ್ವಾಲ್ ಎಂದಿದ್ದರೆ, ಅಪರಾಧಿ ಗುಡ್ಡು ಅಲಿಯಾಸ್ ನದೀಮ್ ಖಾನ್ ಪಾತ್ರಧಾರಿಯ ಹೆಸರು ಬಬ್ಬೂ ಅಲಿಯಾಸ್ ಬಷೀರ್ ಖಾನ್ ಎಂದಿದೆ. ರಾಜೇಶ್ ಶರ್ಮಾ, ಮಾಲತಿ ಅಗರ್ವಾಲರ ಫ್ರೆಂಡ್ ಪಾತ್ರದಲ್ಲಿದ್ದಾರೆ. ಅಲ್ಲಿಗೆ ಚಪಾಕ್, ಚಪಾಕ್ ಎನ್ನುತ್ತಿದ್ದ ಭಕ್ತರ ಮುಖದ ಮೇಲೆ ಮೊದಲ ತುಪುಕ್ ತುಪುಕ್ ಸಿಂಚನವಾಗಿದೆ.
ಈ ಐಟಿ ಸೆಲ್ ಎನ್ನುವುದು ಎಂಥ ಕ್ರೂರ ಹಾಗೂ ಹೇಯ ಮಾಫೀಯವೆನ್ನುವುದು ಇನ್ನೊಮ್ಮೆ ಸಾಬೀತಾಗಿದೆ. ಹಿಂದೆಲ್ಲಾ ಅವರು ಇಂಥ ಸುಳ್ಳುಗಳನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈವಾಗ ಆಲ್ಟ್ ನ್ಯೂಸ್, ಬೂಮ್ ಮುಂತಾದ ಸತ್ಯಶೋಧಕ ವೆಬ್‍ಸೈಟ್‍ಗಳು ಪೋಸ್ಟ್ ಕಾರ್ಡ್, Swarajya ಹಾಗೂ ಇನ್ನಿತರ ಅಸಂಖ್ಯಾತ ಫೇಕ್ ನ್ಯೂಸ್ ಫ್ಯಾಕ್ಟರಿಗಳನ್ನು ಕ್ಷಣಾರ್ಧದಲ್ಲಿ ನಂಗಾ ಮಾಡಿ ಬಿಡುತ್ತಿವೆ.
ಅಂದಹಾಗೆ ಚಪಾಕ್ ಬಗ್ಗೆ ಸುಳ್ಳು ಹರಿಯಬಿಟ್ಟ ಭಕ್ತರ ಗಮನಕ್ಕೆ. ಕೆನಡಿಯನ್ ಪ್ರಜೆ, ಭಾರತದ ಖ್ಯಾತ ಸಂದರ್ಶನಕಾರ, ಅತ್ಯುತ್ತಮ ಪತ್ರಕರ್ತ, ಮ್ಯಾಂಗೋಮ್ಯಾನ್ ಅಕ್ಷಯ್ ಕುಮಾರ್ ಅವರು ಕುವೇಯ್ಟ್-ಇರಾಕ್ ಯುದ್ದದ ಸಮಯದಲ್ಲಿ ಕುವೇಯ್ಟಿನಲ್ಲಿದ್ದ ಒಂದು ಲಕ್ಷದ ಎಪ್ಪತ್ತು ಸಾವಿರದಷ್ಟು ಭಾರತೀಯರನ್ನು airlift ಮಾಡಿದ ವಿಷಯದ ಮೇಲೆ Airlift ಅನ್ನುವ ಸಿನೆಮಾ ಮಾಡಿದ್ದರು.
ಆ ಸಿನೆಮಾ ಕುವೇಯ್ಟಿನಲ್ಲಿ ಉದ್ಯಮಿಯಾಗಿದ್ದ ಮಾದುನಿ ಮ್ಯಾಥ್ಯೂಸ್ ಅಲಿಯಾಸ್ ಟೊಯೋಟಾ ಸನ್ನಿ ಎನ್ನುವ ಭಾರತೀಯ ಮೂಲದ ವ್ಯಕ್ತಿ ಕುವೇಯ್ಟ್-ಇರಾಕ್ ಯುದ್ದದ ಸಮಯದಲ್ಲಿ ಅಲ್ಲಿದ್ದ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಲು, ಭಾರತೀಯ ಸರ್ಕಾರ ಹಾಗೂ ಏರ್ ಇಂಡಿಯಾ ಜೊತೆ ಮಾಡಿದ ಸಾಹಸಗಥೆ.
ಆದರೆ ಸಿನೆಮಾದಲ್ಲಿ ಮ್ಯಾಥ್ಯೂಸ್ ಪಾತ್ರಧಾರಿಯಾದ ಅಕ್ಷಯ್ ಕುಮಾರ್ ಹೆಸರು ರಂಜಿತ್ ಕಟಿಯಾಲ್ ಎಂದಿದೆ. ಭಕ್ತರು ಚಪಾಕ್ ಸಿನೆಮಾದ ಬಗ್ಗೆ ಮಾಡಿರುವ ಸುಳ್ಳು ಆರೋಪಕ್ಕೆ ಪ್ರತಿಯುತ್ತರ ಕೊಡುವುದಾದರೆ ಕೇರಳ (ದಕ್ಷಿಣ ಭಾರತ) ಮೂಲದ ಕ್ರೈಸ್ತ ಮಾದುನಿ ಮ್ಯಾಥ್ಯೂಸ್‍ನನ್ನು Airlift ಸಿನೆಮಾದಲ್ಲಿ ಪಂಜಾಬ್ ಮೂಲದ ಸಿಖ್ ರಂಜಿತ್ ಕಟಿಯಾಲ್ ಎಂದು ತೋರಿಸಿದ್ಯಾಕೆ? ಭಕ್ತರ ಧಾಟಿಯಲ್ಲೇ ಹೇಳುವುದಾದರೇ ಅಕ್ಷಯ್ ಕುಮಾರ್ ಕ್ರೈಸ್ತ ಹಾಗೂ ಮಲಯಾಳಿ (ದಕ್ಷಿಣ ಭಾರತೀಯರ) ವಿರೋಧಿ ಎನ್ನಬಹುದೇ?
ಅಂದು ಕುವೇಯ್ಟಿನಲ್ಲಿದ್ದ ಬಹುತೇಕ ಭಾರತೀಯರು ದಕ್ಷಿಣ ಭಾರತೀಯರೇ ಆಗಿದ್ದರು. ಆದರೂ ಅಕ್ಷಯ್ ಕುಮಾರ್ ಸಿನೆಮಾದಲ್ಲಿ ಮಲಯಾಳಿಗಳನ್ನು ಬಡ ಕಾರ್ಮಿಕರಂತೆ ತೋರಿಸಿ, ಹೀರೋ ಆಗಿದ್ದ ಮ್ಯಾಥ್ಯೂಸ್‍ನನ್ನು ಪಂಜಾಬಿ ರಂಜಿತ್ ಆಗಿ ಮಾಡಿದ್ಯಾಕಂತೆ? ನಿಜವಾಗಿ ನೋಡುವುದಾದರೆ Airlift ಸಿನೆಮಾಕ್ಕೆ ದಕ್ಷಿಣ ಭಾರತದ ಫ್ಲೇವರ್ ಇರಬೇಕಿತ್ತಲ್ಲವೇ? ಆದರೆ ಅದೊಂದು ಉತ್ತರ ಭಾರತೀಯರ ಸಾಹಸಗಥೆಯಂತೆ ಬಿಂಬಿಸಿದ್ದಾರೆ.
ನಮ್ಮವರೇ ಆದ ಪ್ರಕಾಶ್ ಬೆಳವಾಡಿ ಮಾಡಿರುವ ಮಲಯಾಳಿ ಜಾರ್ಜ್ ಕುಟ್ಟಿ ಪಾತ್ರವನ್ನು ನೆಗೆಟೀವ್ ಆಗಿ ತೋರಿಸಿದ್ದಾರೆ. ಇನ್ನು ನಿನಾದ್ ಕಾಮತ್ ಮಾಡಿರುವ ಇನ್ನೊಬ್ಬ ಮಲಯಾಳಿ ಪಾತ್ರ ಕುರಿಯನ್‍ನನ್ನು ಕೇವಲ ರಂಜಿತ್ ಕಟಿಯಾಲನ ಗ್ಲಾಸ್ ಫ್ರೆಂಡ್, ರಂಜಿತನ ಆಣತಿಯಂತೆ ಕೆಲಸ ಮಾಡುವವನಂತೆ ತೋರಿಸಿ ಅಕ್ಷಯ್ ಕುಮಾರ್ ದಕ್ಷಿಣ ಭಾರತೀಯರನ್ನು ಅವಮಾನಿಸಿಲ್ಲವೇ ಭಕ್ತರೇ?
ಇದು ನನ್ನ ವಾದ ಅಲ್ಲ. ನಿಮ್ಮದೇ ಆದ ಫೇಕ್ ವಾದಕ್ಕೆ ನನ್ನದೊಂದು ರಿಯಲ್ ಉತ್ತರ ಅಷ್ಟೇ. ಆದಷ್ಟೂ ಬೇಗ ಸತ್ಯವನ್ನು ಅರಗಿಸಿಕೊಳ್ಳಲು ಕಲಿಯಿರಿ. ಹಿಂದಿನ ಆರು ವರುಷಗಳ ಹನಿಮೂನ್, ಕೇಕ್‍ವಾಕ್ ಮುಗಿಯುತ್ತಾ ಬಂದಿದೆ. ರೀಲ್ ದುನಿಯಾ ಹೋಗಿ ರಿಯಲ್ ದುನಿಯಾ ಮುಂದಿದೆ.
ನಿನ್ನೆ ದೀಪಿಕಾ, ಇವತ್ತು ಅಜಯ್ ದೇವಗನ್, ಸೋನಾಕ್ಷಿ. ಅದಕ್ಕಿಂತ ಮೊದಲು ಸಿದ್ದಾರ್ಥ್ ಮಲ್ಹೋತ್ರಾ, ಆಲಿಯಾ ಭಟ್, ಪರಿಣೀತಿ ಚೋಪ್ರಾ, ಸ್ವರ ಭಾಸ್ಕರ್, ತಾಪಸಿ ಪನ್ನು, ಅನುರಾಗ್ ಕಶ್ಯಪ್ ಹೀಗೆ ಬಲು ಉದ್ದದ ಸಾಲಿದೆ.
ಫ್ಯಾಸಿಸಂ ಇನ್ನೂ ಬಲವಾಗಿ ಹೋದಂತೆ ಇನ್ನೂ ಹೆಚ್ಚಿನ ನಟ-ನಟಿಯರು ನಿಮ್ಮ ಕೈಬಿಡಲಿದ್ದಾರೆ. ಕೊನೆಗೆ ನೀವು ಕೇವಲ ಅಕ್ಷಯ್, ಪರೇಶ್ ರಾವಲ್ ಹಾಗೂ ಅನುಪಮ್ ಖೇರ್ ಸಿನೆಮಾ ಮಾತ್ರ ನೋಡಬೇಕಾದ ದಯನೀಯ ಪರಿಸ್ಥಿತಿ ಬರಬಹುದು. ಸೋ ಗೆಟ್ ವೆಲ್ ಸೂನ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ಪ್ರಕಟ
ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.
‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ
ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ
ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.
ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.
ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್ಷಾ |
|
http://Visit : www.suddidina.com
ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ
ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.
9 ಆನೆಗಳ ತೂಕದ ಆಧಾರದಲ್ಲೇ ಆಹಾರ
ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.
ಅಂಬಾರಿ ಆನೆ ಯಾರು? ಕುತೂಹಲ
ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.
ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.
ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ
ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.
“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”
– ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್
ದಸರಾ ಗಜಪಡೆಯ ತೂಕದ ವಿವರ
- ಶ್ರೀಕಂಠ: 5,790 ಕೆಜಿ
- ಏಕಲವ್ಯ: 5,600 ಕೆಜಿ
- ಧನಂಜಯ: 5,530 ಕೆಜಿ
- ಮಹೇಂದ್ರ: 5,490 ಕೆಜಿ
- ಪ್ರಶಾಂತ: 5,205 ಕೆಜಿ
- ಗೋಪಿ: 5,170 ಕೆಜಿ
- ಶ್ರೀರಾಮ: 4,820 ಕೆಜಿ
- ಲಕ್ಷ್ಮೀ: 3,990 ಕೆಜಿ
- ಕಾವೇರಿ: 3,075 ಕೆಜಿ

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.



