Connect with us

ದಿನದ ಸುದ್ದಿ

ಕವಿತೆ | ಇಳಿಯಲಿ ದೈವಬಲ ದೇವನಗರಿಗೆ

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

ಮ್ಮೂರ ಜನ ಬೆಣ್ಣೆಯಂಥವರು
ಹುಳಿ ಹಿಂಡುವ ಮಂದಿಗೂ
ಕೆನೆ ಮೊಸರು ಕೊಟ್ಟು
ಮಂದನೆಯ ಮಜ್ಜಿಗೆ ನೀಡಿ ತಂಪೆರೆವ
ಹಾಲು ಮನದವರು
ತಪ್ಪುಗಳ ಕ್ಷಮಿಸಿ ಕಡು ಕಷ್ಟಕೆ ಕರಗಿ
ಪರರ ನೋವಿಗೆ ಕರುಣೆ ತೋರಿ
ದೇವರ ಅಭಿಷೇಕದ ತುಪ್ಪವಾದವರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು

ನಮ್ಮೂರಿನ ಜನ ದೇವನಾಂಪ್ರಿಯರು
ದಾನ ಧರ್ಮದ ಗುಣ ಮೆರೆದು
ಪರೋಪಕಾರಕೆ ಮುಂದಾಗಿ
ಹಗೆತನವ ಆಚೆಗಿಟ್ಟು ಪ್ರೇಮದಿ ಸಕಲರ ತಬ್ಬಿ
ಹೃದಯ ವೈಶಾಲ್ಯತೆ ತೋರಿ
ಹಸನಾದ ಬದುಕಿಗೆ ಹರಸುವ ದೈವಿಜನರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು

ನಮ್ಮೂರ ಜನ ದೈವತ್ವಕೆ ಶರಣಾದವರು
ಶ್ರದ್ಧಾ ಭಕ್ತಿ ಸನ್ನಡತೆಗೆ ಮನ್ನಣೆ ನೀಡಿದವರು
ಬಡತನ ಸಿರಿತನದಲೂ ಸ್ಥಿತಪ್ರಜ್ಞೆ ತೋರಿ
ಅಹಮಿಕೆ ಬದಿಗಿಟ್ಟು ಏಕತೆಯಲಿ ನಡೆದು
ಹಾಲಾಹಾಲವನೂ ಸಹಿಸಿ
ಸರ್ವರಿಗೂ ಶ್ರೀರಕ್ಷೆ ಶ್ರೇಯಸ್ಸು ಬಯಸಿ
ದೇವನಗರಿ ಹೆಸರಿಗೆ ಕೀರ್ತಿ ಕಳಸವಾದವರು
ಇಂದು ಕೊರೋನಾ ಭೀತಿಯಲಿ ನಲುಗಿಹರು
ಬಾ ದೇವ ಕಾಪಾಡು ಎಲ್ಲರನೂ ಕೈ ಹಿಡಿದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವಸತಿ ಯೋಜನೆ ; ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪಾಲಿಕೆ ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲವಾಗಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯದಡಿ 177 ಮನೆಗಳು ಲಬ್ಯವಿದ್ದು ಸಹಾಯಧನವಾಗಿ ರೂ.2.70 ಲಕ್ಷ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿದ್ದು ರೂ.3.50 ಲಕ್ಷ ಸಹಾಯಧನ ನೀಡಲಾಗುತ್ತದೆ.

ಆಸಕ್ತರು ಗಂಡ, ಹೆಂಡತಿ ಇಬ್ಬರ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಇ-ಸ್ವತ್ತು, ಇಸಿ ನಕಲು, 2 ಭಾವಚಿತ್ರ ಪ್ರತಿಯೊಂದಿಗೆ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಅ.9 ರಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಿಂದ ಅಹವಾಲು ಸ್ವೀಕಾರ

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ವಿಭಾಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಎಂ.ಎಸ್ ಕೌಲಾಪೂರೆ ಅವರು ಅಕ್ಟೋಬರ್ 9 ರಂದು ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.ಸಾರ್ವಜನಿಕರು ವಿವಿಧ ಇಲಾಖೆಗಳಿಗೆ ಸಲ್ಲಿಸಿದ ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಇಟ್ಟಿರುವ ಕುರಿತ ದೂರುಗಳನ್ನು ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸೇವಾಸಿಂಧು ಪೋರ್ಟಲ್ ಮೂಲಕ ಅಕ್ಟೋಬರ್.30 ರೊಳಗಾಗಿ ಸಲ್ಲಿಸಿ, ಸಲ್ಲಿಸಿದ ಅರ್ಜಿ ಮತ್ತು ದಾಖಲೆಗಳನ್ನು ಜಿಲ್ಲಾ ಸಂಯೋಜಕರು, ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ನಿಗಮ, ದಾವಣಗೆರೆ ಇಲ್ಲಿಗೆ ಸಲ್ಲಿಸಲು ಹಾಗೂ ಮೊ.ಸಂ:9845801361, 8105976617 ನ್ನು ಸಂಪರ್ಕಿಸಲು ತಿಳಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending