ದಿನದ ಸುದ್ದಿ
ದಾವಣಗೆರೆ | ಸರ್ಕಾರದ ವೆಬ್ಪೋರ್ಟಲ್ನಲ್ಲಿ ಐಎಲ್ಐ, ಎಸ್ಎಆರ್ಐ ಪ್ರಕರಣ ಅಪ್ಡೇಟ್ ಮಾಡದಿರುವ ಆಸ್ಪತ್ರೆ-ನರ್ಸಿಂಗ್ಹೋಂಗಳ ತಾತ್ಕಾಲಿಕ ಸೀಜ್

ಸುದ್ದಿದಿನ,ದಾವಣಗೆರೆ : ಸರ್ಕಾರದ ಆದೇಶದಂತೆ ಆಸ್ಪತ್ರೆಗಳಿಗೆ ಬರುವವರಲ್ಲಿ ಶೀತ, ಜ್ವರದಂತಹ (ಐಎಲ್ಐ) ಮತ್ತು ತೀವ್ರ ಉಸಿರಾಟದ ತೊಂದರೆ(ಎಸ್ಎಆರ್ಐ) ಪ್ರಕರಣಗಳನ್ನು ಪ್ರತಿದಿನ ಆರೋಗ್ಯ ಇಲಾಖೆಯ ವೆಬ್ಪೋರ್ಟಲ್ಗೆ ಅಪ್ಡೇಟ್ ಮಾಡದೇ ಇರುವ ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಇಂದು ಡಿಹೆಚ್ಓ ತಂಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂತಹ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡಲಾಯಿತು.
ಮೊದಲಿಗೆ ಪಿಜೆ ಬಡಾವಣೆಯಿಂದ ಆರಂಭಿಸಿ ಕೆ.ಬಿ.ಬಡಾವಣೆ, ಬೇತೂರು ರಸ್ತೆ ಗಳಲ್ಲಿನ ಒಟ್ಟು 11 ಆಸ್ಪತ್ರೆಗಳಿಗೆ ಡಿಹೆಚ್ಓ ಡಾ.ರಾಘವೇಂದ್ರಸ್ವಾಮಿ ಮತ್ತು ತಂಡ ಭೇಟಿ ನೀಡಿ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳಲ್ಲಿ ಪ್ರತಿದಿನ ಏಕೆ ವೆಬ್ಪೋರ್ಟಲ್ನಲ್ಲಿ ಹಾಕುತ್ತಿಲ್ಲವೆಂದು ವಿಚಾರಿಸಿ, ಹೀಗೆ ಅಪ್ಡೇಟ್ ಮಾಡದೇ ಇರುವ ಈ ಆಸ್ಪತ್ರೆಗಳನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಸೀಜ್ ಮಾಡಿದರು.
ಈ ವೇಳೆ ಡಿಹೆಚ್ಓ ಡಾ.ರಾಘವೇಂದ್ರ ಸ್ವಾಮಿ ಮಾತನಾಡಿ, ಸರ್ಕಾರದ ಆದೇಶದ ಮೇರೆಗೆ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿಂದ ಆರೋಗ್ಯ ನಿರ್ದೇಶನಾಲಯದ ಆಯುಕ್ತರು, ಕಾರ್ಯದರ್ಶಿಗಳು ಆದೇಶ ಹೊರಡಿಸಿ, ಕೆಪಿಎಂಇ ಕಾಯ್ದೆ ಅಡಿ ನೋಂದಣಿಯಾದ ಪ್ರತಿ ಖಾಸಗಿ ಆಸ್ಪತ್ರೆಗಳಿಗೆ ಯೂಸರ್ ಐಡಿ, ಪಾಸ್ವರ್ಡ್ ನೀಡಿ ಆನ್ಲೈನ್ ಮೂಲಕ ತಮ್ಮ ಆಸ್ಪತ್ರೆಗಳಿಗೆ ಬರುವ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳನ್ನು ಅಪ್ಡೇಟ್ ಮಾಡಬೇಕೆಂದು ತಿಳಿಸಲಾಗಿತ್ತು. ಹೀಗೆ ಅಪ್ಡೇಟ್ ಮಾಡಿದ ವರದಿಯು ಸ್ಟೇಟ್ ಪೋರ್ಟಲ್ನಿಂದ ತಳಮಟ್ಟದವರೆಗೆ ಅಂದರೆ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ತಲುಪಿಸಿ ಅವರ ವ್ಯಾಪ್ತಿಯಲ್ಲಿ ಬರುವವರಿಗೆ ಗಂಟಲು ದ್ರವ ಪರೀಕ್ಷೆಗೆ ಸಹಕಾರಿಯಾಗುವುದು ಈ ಯೋಜನೆಯ ಉದ್ದೇಶವಾಗಿದೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಐಎಂಎ, ಖಾಸಗಿ ಆಸ್ಪತ್ರೆಯವರೊಂದಿಗೆ ಸಭೆ ನಡೆಸಿ ಪ್ರತಿದಿನ ಮಾಹಿತಿ ಅಪ್ಡೇಟ್ ಮಾಡುವಂತೆ ತಿಳಿಸಿದ್ದರು. ಜೊತೆಗೆ ಅಪ್ಡೇಟ್ ಮಾಡಿದವರಿಗೆ ನೋಟಿಸನ್ನೂ ಸಹ ನೀಡಲಾಗಿದ್ದರೂ ಕೆಲವರು ಅಪ್ಡೇಟ್ ಮಾಡುತ್ತಿಲ್ಲ. ಆದ ಕಾರಣ ಜಿಲ್ಲಾಧಿಕಾರಿಗಳು ಹೀಗೆ ನಿರ್ಲಕ್ಷ್ಯ ವಹಿಸಿದವರ ಆಸ್ಪತ್ರೆ/ನರ್ಸಿಂಗ್ ಹೋಂಗಳನ್ನು ತಾತ್ಕಾಲಿಕವಾಗಿ ಸೀಜ್ ಮಾಡುವಂತೆ ಜೂ.30 ರಂದು ಆದೇಶಿಸಿದ ಹಿನ್ನೆಲೆಯಲ್ಲಿ ಇಂದು ದಾಳಿ ನಡೆಸಲಾಗಿದೆ.
ಜಿಲ್ಲೆಯಲ್ಲಿ ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣ ಅಪ್ಡೇಟ್ ಮಾಡದ 170 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೆಪಿಎಂಇ ಅಡಿಯಲ್ಲಿ ನವೀಕರಿಸದ ಮತ್ತು ಐಎಲ್ಐ ಎಸ್ಎಆರ್ಐ ಪ್ರಕರಣ ವೆಬ್ಪೋರ್ಟಲ್ಲ್ಲಿ ದಾಖಲಿಸದೇ ಇರುವ ಒಟ್ಟು 280 ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಆಸ್ಪತ್ರೆ/ನರ್ಸಿಂಗ್ ಹೋಂಗಳಿಗೆ ನವೀಕರಿಸುವಲ್ಲಿ ಕೆಲವು ಸಮಸ್ಯೆಗಳಿವೆ.
ಇವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಜು.3 ರಂದು ಡಿಹೆಚ್ಓ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆಯವರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲರೂ ಹಾಜರಾಗಿ ಇದರ ಸದುಪಯೋಗ ಪಡೆಯಬೇಕು. ಹಾಗೂ ಇನ್ನು 15 ದಿನಗಳ ಒಳಗೆ ನೋಂದಣಿ ನವೀಕರಿಸಿಕೊಂಡು ಸರ್ಕಾರದ ಆದೇಶದಂತೆ ನಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ತಂಡದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಬಿಇಹೆಚ್ಓ ಡಾ.ಸುರೇಶ್, ಇತರೆ ಸಿಬ್ಬಂದಿಗಳು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಡಿಎಸ್ಟಿ/ಪಿಹೆಚ್ಡಿ ಶಿಷ್ಯವೇತನಕ್ಕಾಗಿ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಈ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ /ಸಂಸ್ಥೆ /ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್ಡಿ ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ) 2018-19ನೇ ಸಾಲಿನಿಂದ ಕರ್ನಾಟಕ ಡಿ.ಎಸ್.ಟಿ-ಪಿಹೆಚ್ಡಿ ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುಷ್ಠಾನಗೊಳಿಸಿದ್ದು, ಅರ್ಜಿಯನ್ನು ಆನ್ಲೈನ್ http://ksteps.karnataka.gov.in ಮುಖಾಂತರ ಫೆಬ್ರವರಿ 10, 2021 ರೊಳಗಾಗಿ ಸಲ್ಲಿಸಬೆಕೆಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ಪ.ಜಾತಿ/ಪ.ಪಂಗಡಕ್ಕೆ ಸಹಾಯಧನ ಮತ್ತು ಕ್ರೀಡಾಗಂಟಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : 2020-21ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಜನ ಸಂಘ ಸಂಸ್ಥೆಗಳಿಗೆ ನೋಂದಾವಣೆ ಮಾಡಲು ಸಹಾಯಧನ ಮತ್ತು ಕ್ರೀಡಾಗಂಟನ್ನು ನೀಡುವ ಹೊಸ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ತಾಲ್ಲೂಕಿನಲ್ಲಿ 02 ಪರಿಶಿಷ್ಟ ಜಾತಿ ಮತ್ತು 01 ಪರಿಶಿಷ್ಟ ಪಂಗಡದ ಯುವಜನ ಸಂಘವನ್ನು ನೋಂದಾಯಿಸಲು ಸಹಾಯಧನ ಹಾಗೂ ಕ್ರೀಡಾಗಂಟನ್ನು ನೀಡಲಾಗುವುದು. ಜಿಲ್ಲೆಯ 15 ರಿಂದ 35 ವರ್ಷ ವಯೋಮಾನದೊಳಗಿನ ಪ.ಜಾತಿ/ಪ.ಪಂಗಡಕ್ಕೆ ಸೇರಿರುವ ಯುವಕ/ಯುವತಿಯರು ಯುವಜನ ಸಂಘವನ್ನು ರಚಿಸಿಕೊಳ್ಳಲು ಸದವಕಾಶವಿರುವದರಿಂದ ಕರ್ನಾಟಕ ರಾಜ್ಯ ಸಂಘ ಸಂಸ್ಥೆಗಳ ನೋಂದಾವಣೆ ಕಾಯಿದೆ 1960 ರ ಅಡಿಯಲ್ಲಿ ಯುವಜನ ಸಂಘಗಳ ನೋಂದಣಿ ಮಾಡಿಸಿ, ಜ.28 ರೊಳಗಾಗಿ ಮಾನ್ಯತೆಗಾಗಿ ಈ ಕಚೇರಿಗೆ ಸಲ್ಲಿಸಲು ಕೋರಿದೆ. ನಂತರ ಬಂದ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಕಚೇರಿ ವೇಳೆಯಲ್ಲಿ ಮೊ.ಸಂ: 9620796970 ನ್ನು ಸಂಪರ್ಕಿಸಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಬಿ.ಶ್ರೀನಿವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರೈತರು- ಕೇಂದ್ರ ಸರ್ಕಾರದ ನಡುವಿನ 10ನೇ ಸುತ್ತಿನ ಮಾತುಕತೆ ನಾಳೆಗೆ ಮುಂದೂಡಿಕೆ

ಸುದ್ದಿದಿನ,ನವದೆಹಲಿ : ಇಂದು ನಡೆಯಬೇಕಾಗಿದ್ದ ರೈತ ಮುಖಂಡರು ಮತ್ತು ಕೇಂದ್ರದ ಮಂತ್ರಿಗಳ ನಡುವಿನ 10ನೇ ಸುತ್ತಿನ ಮಾತುಕತೆ ಜ. 20ರ ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ.
ಕೃಷಿ ಸಚಿವ ನರೇಂದ್ರ ಸಿಂಗ್ ತಡರಾತ್ರಿ ರೈತ ಮುಖಂಡರಿಗೆ ಬರೆದಿರುವ ಪತ್ರದಲ್ಲಿ, ತಳ್ಳಿ ಹಾಕಲಾದ ಕಾರಣಗಳಿಂದಾಗಿ ಇಂದು ಸಭೆ ನಡೆಸಲಾಗುತ್ತಿಲ್ಲ ಎಂದು,’ ಜ. 20ರಂದು ಮಧ್ಯಾಹ್ನ 2 ಗಂಟೆಗೆ ವಿಜ್ಞಾನ್ ಭವನದಲ್ಲಿ ಸಭೆ ನಡೆಸಲಾಗುವುದು” ಎಂದು ತಿಳಿಸಲಾಗಿದೆ.
ಮಧ್ಯಪ್ರದೇಶದ ತಮ್ಮ ಕ್ಷೇತ್ರದ ವೀಕ್ಷಣೆಗೆ ತೆರಳಿದ್ದ ಕೃಷಿ ಸಚಿವ ನರೇಂದ್ರ ಸಿಮಗ್ ತೋಮರ್ ಸೋಮವಾರ ತಡರಾತ್ರಿ ದೆಹಲಿಗೆ ಮರಳಿದರು. ಗ್ವಾಲಿಯರ್ನಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ರೈತ ಸಂಘಟನೆಗಳು ಕಾಯ್ದೆಗಳಲ್ಲಿರುವ ನಿರ್ದಿಷ್ಟ ರಿಯಾಯಿತಿಗಳ ಕುರಿತು ಚರ್ಚಿಸುವುದಕ್ಕೆ ಮನಸ್ಸು ಮಾಡುತ್ತಿಲ್ಲ. ಪಟ್ಟು ಸಡಿಸಲು ಸಿದ್ಧರೇ ಇಲ್ಲ. ನಾಳೆ ಸಭೆ ಇದೆ. ಅಲ್ಲಿ ರೈತ ಸಂಘಟನೆಗಳು ಪರ್ಯಾಯ ಸಾಧ್ಯತೆಗಳ ಕುರಿತು ಚರ್ಚಿಸುವ ನಂಬಿಕೆ ಇದೆ. ಹಾಗಾದರೆ ನಾವು ಪರಿಹಾರ ಕಂಡುಕೊಳ್ಳಲು ಸಾಧ್ಯ” ಎಂದಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು, ಸಂಜೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ್ರು ನಾಗೇಶ್..!
-
ದಿನದ ಸುದ್ದಿ6 days ago
ಕೋವಿದ್ ಪ್ರಭಾವಳಿಯಲ್ಲಿ ಪ್ರಭುತ್ವದ ಕ್ರೌರ್ಯ
-
ಲೈಫ್ ಸ್ಟೈಲ್6 days ago
ಪಕ್ಷಿ ಪರಿಚಯ | ಬೆಳ್ಗಣ್ಣ
-
ದಿನದ ಸುದ್ದಿ7 days ago
“ನೀನು ಅಪ್ಪನಿಗೆ ಹುಟ್ಟಿದಿಯಾ ಅನ್ನೋದಕ್ಕೆ ಸಾಕ್ಷಿ ಏನು..?” : ಸಚಿವ ಈಶ್ವರಪ್ಪ
-
ದಿನದ ಸುದ್ದಿ7 days ago
ಸಚಿವ ಸಂಪುಟ ವಿಸ್ತರಣೆ : ಏಳು ಹೊಸ ಸಚಿವರ ಹೆಸರು ಫೈನಲ್ ಗೊಳಿಸಿದ ಯಡಿಯೂರಪ್ಪ
-
ಲೈಫ್ ಸ್ಟೈಲ್6 days ago
ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ ; ಮಿಸ್ ಮಾಡ್ದೆ ಓದಿ..!
-
ದಿನದ ಸುದ್ದಿ6 days ago
ದಲಿತರಿಗೆ ಪರ್ಯಾಯ ಸಂಸ್ಕೃತಿ ಇಲ್ಲವೆ..?
-
ದಿನದ ಸುದ್ದಿ7 days ago
ರೈತರ ಹೋರಾಟದಲ್ಲಿ ರೈತರೊಂದಿಗೆ ನಿಂತ ವಾಷಿಂಗ್ ಮಷಿನ್ಗಳು..!