Connect with us

ಬಹಿರಂಗ

ಕಾರ್ಮಿಕರನ್ನುದ್ದೇಶಿಸಿ ಅಂಬೇಡ್ಕರ್..!

Published

on

ಕಾರ್ಮಿಕರು ಹಾಗೆಂದರೆ ಶ್ರಮ ಜೀವಿ ವರ್ಗದವರು ಎಂಧರ್ಥ. ಅದು ಹೋಟಲ್‍ನಲ್ಲಿ, ತಟ್ಟೆ ಲೋಟ ತೊಳೆಯುವ ಸಣ್ಣ ಕಾರ್ಮಿಕರಿರಬಹುದು, ಕಾರ್ಖಾನೆಯಲ್ಲಿ ದೊಡ್ಡ ದೊಡ್ಡ ಯಂತ್ರಗಳನ್ನುಚಲಾಯಿಸುವವರಿರಬಹುದು, ಪ್ರತಿಯೊಬ್ಬರೂ ಕಾರ್ಮಿಕರೆ. ಅದರಲ್ಲೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಅತಿ ದೊಡ್ಡ ಉತ್ಪಾದಕ ಗುಂಪೆಂದರೆ ಕಾರ್ಮಿಕರದ್ದೆ.

ಆದರೆ ಪ್ರಶ್ನೆಯೆನೆಂದರೆ ಈ ದೇಶದಲ್ಲಿ ಅದೆಷ್ಟು ದುಡಿಯುವ ಜೀವಿಗಳಿಗೆ ತಾವು ಕಾರ್ಮಿಕರು, ನಮಗೂ ಹಕ್ಕು ಅಧಿಕಾರ ಇದೆ, ಚಳುವಳಿ ಹೋರಾಟ ಇದೆ ಇತ್ಯಾದಿ ವಿಷಯಗಳ ಅರಿವು ಅದೆಷ್ಟಿದೆ? ಬಹುಶಃ ಈ ಪ್ರಶ್ನೆಗೆ ಉತ್ತರ ಶೂನ್ಯಕ್ಕೆ ಹತ್ತಿರ ಎನ್ನಬಹುದು ಯಾಕೆಂದರೆ ಕಾರ್ಮಿಕರು ಸಂಘಟಿತರಾಗೆ ಇಲ್ಲ. ಅದಕ್ಕೆ ಕಾರಣ ಅವರಲ್ಲಿರುವ ಅಜ್ಞಾನ ಅನಕ್ಷರತೆ ಮುಖ್ಯವಾಗಿ ಜಾತೀಯತೆ!

ಹೌದು, ಜಾತೀಯತೆ ಈ ದೇಶದ ಕಾರ್ಮಿಕರನ್ನು ಸಂಘಟಿತರಾಗದ ಹಾಗೆ ತಡೆದಿಟ್ಟಿದೆ. ಯಾವ ಮಾರ್ಕ್ಸ್, ಲೆನಿನ್ ಅಲ್ಲಲ್ಲಿ ಜೀವಂತವಿದ್ದರೂ ಕೂಡ ಈ ದೇಶದ ಜಾತೀಯ ವ್ಯವಸ್ಥೆಯ ಮುಂದೆ ಅವರು ಸಹ ಏನೂ ಮಾಡಲಾಗದೆ ಕನ್‍ಪ್ಯೂಸ್ ಆಗಿ ಕುಳಿತ್ತಿದ್ದಾರೆ. ಹಾಗಿದ್ದರೆ ಜಾತಿಯತೆಯ ವಿಷಮ ಬಲೆಯಲ್ಲಿ ಬಿದ್ದಿರುವ ಈ ದೇಶದ ಕಾರ್ಮಿಕರ ಹೋರಾಟ ಏನಾಗಿರಬೇಕು? ಯಾವ ದಿಕ್ಕನಲ್ಲಿರಬೇಕು? ಯಾರ ವಿರುದ್ಧ ಇರಬೇಕು? ಅವರ ನಾಯಕ ಯಾರಾಗಬೇಕು. ಉತ್ತರಕ್ಕೆ ತಡಕಾಡಬೇಕಿಲ್ಲ. ಯಾಕೆಂದರೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬಾಬಾಸಾಹೇಬ್ ಅಂಬೇಡ್ಕರ್‍ರವರಲ್ಲದೆ ಬೇರಾರು ಅಲ್ಲ ಅದಕ್ಕೆ.

ಹೌದು, ಅಂಬೇಡ್ಕರ್ ಈ ದೇಶದ ಕಾರ್ಮಿಕರ ನಾಯಕ. ಅಕಸ್ಮಾತ್ ಈ ದೇಶದಲ್ಲಿ ಜಾತೀಯತೆ ಇಲ್ಲದೆ ಇದ್ದರೆ ಅವರ ಮುಖ್ಯ ಹೋರಾಟ ಕಾರ್ಮಿಕರ ಪರವೇ ಇರುತ್ತಿತ್ತು. ಆದರೆ ಭಾರತದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು, ಭೀಕರ ಅಸ್ಪøಶ್ಯತೆಯನ್ನು ಕಂಡು ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಅದರ ಹೊಣೆಹೊತ್ತುಕೊಂಡರೆ ಹೊರತು ಇನ್ನಾವುದೇ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದಲ್ಲ!

ಒಂದರ್ಥದಲ್ಲಿ ಹಿಂದೂ ಧರ್ಮ ಮೈನಸ್ ಜಾತೀಯತೆ ಎಂದಿದ್ದರೆ ಖಂಡಿತ ಅವರು ಅದರ ತಂಟೆಗೆ ಹೋಗುತ್ತಿರಲಿಲ್ಲ ಬದಲಿಗೆ ಭಾರತದ ಕಾರ್ಮಿಕರು ಮತ್ತು ಕಾರ್ಮಿಕರ ಸಮಸ್ಯೆಗಳು ಎಂದು ಸಂಪೂರ್ಣ ಕಾರ್ಮಿಕರ ಪರ ನಿಲ್ಲುತ್ತಿರುತ್ತಿದ್ದರು. “ದಾಸ್ ಕ್ಯಾಪಿಟಲ್” ನಂತಹ ಮತ್ತೊಂದು ಕೃತಿಯನ್ನು ರಚಿಸಿ ಅವರು ಭಾರತದ ಕಾರ್ಲ್‍ಮಾರ್ಕ್ಸ್ ಆಗಿರುತ್ತಿದ್ದರು ತನ್ಮೂಲಕ ಅವರ ಚಿಂತನೆಗಳು ಇಡೀ ವಿಶ್ವವನ್ನೇ ವ್ಯಾಪಿಸಿರುತ್ತಿತ್ತು. ಆದರೆ? ಈ ದೇಶದ ಸಾಮಾಜಿಕ ವ್ಯವಸ್ಥೆ ಅದಕ್ಕೆ ಅವಕಾಶ ಕೊಡಲಿಲ್ಲ ಆ ಮೂಲಕ ನೈಜ ಸಾಮಾಜಿಕ ಕಳಕಳಿಯ ಬಾಬಾಸಾಹೇಬರು ಈ ದೇಶದ ಹಿಂದೂ ಸಾಮಾಜಿಕ ಜಂಜಡಗಳನ್ನು ಬಗೆಹರಿಸುವುದರಷ್ಟಕ್ಕೆ ಸಿಮೀತಗೊಳ್ಳಬೇಕಾಯಿತು.ಹಾಗಿದ್ದರೆ ಭಾರತದ ಕಾರ್ಮಿಕರು ಮತ್ತು ಅವರ ಸಮಸ್ಯೆಗಳನ್ನು ಕುರಿತಂತೆ ಅಂಬೇಡ್ಕರರ ಚಿಂತನೆಗಳು? ಬಹುಶಃ ಅದನ್ನು ಹೇಳತೊಡಗಿದರೆ ಬಾಬಾಸಾಹೇಬರ ವಿಶ್ವರೂಪ ಎಲ್ಲರಿಗೂ ಪರಿಚಯ ವಾಗುವುದಂತೂ ನಿಶ್ಚಿತ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಮೊಟ್ಟಮೊದಲ ದಲಿತ ವರ್ಗಕ್ಕೆ ಸೇರಿದ ಮಂತ್ರಿ ಮತ್ತು ಅವರು ಕಾರ್ಮಿಕ ಇಲಾಖೆ ಸಚಿವರಾಗಿದ್ದರು ಎಂಬ ಸಾಮಾನ್ಯ ಜ್ಞಾನವನ್ನು ಮೊದಲಿಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಷ್ಟೆ. ಏಕೆಂದರೆ 19 42 ರಿಂದ 1946ರ ವರೆಗೆ ತಮ್ಮbusy ಹೋರಾಟದ ನಡುವೆಯೂ ಅವರು ಅಂದಿನ ಕೇಂದ್ರ ಮಂತ್ರಿಮಂಡಲದಂತಿದ್ದ ಗೌರ್ನರ್ ಜನರಲ್‍ರವರ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿದ್ದು ಬಹುತೇಕರಿಗೆ ತಿಳಿದಿಲ್ಲ. ಗೌರ್ನರ್ ಜನರಲ್‍ರವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿ ಮುಖ್ಯವಾಗಿ ಅವರು ನಿರ್ವಹಿಸಿದ್ದು ಕಾರ್ಮಿಕ, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಗಳನ್ನು.

ಇತಿಹಾಸದಲ್ಲಿ ಅಂಬೇಡ್ಕರ್‍ರವರ ಬಗ್ಗೆ ಏನೇನೋ ಹೇಳಲಾಗಿದೆ ಅದರೆ ಅವರ ಜೀವನದ ಇಂತಹ ನೈಜ ಅದ್ಬುತ ಸಾಧನೆಗಳನ್ನು, ಅನುಭವಿಸಿದ ಹುದ್ದೆಗಳನ್ನು ಮುಚ್ಚಿಡಲಾಗಿದೆ! ಯಾಕೋ ಏನೋ ಅಂಬೇಡ್ಕರರು ಬ್ರಿಟೀಷ್ ಸರ್ಕಾರದಲ್ಲಿ ಅಂತಹ ಮಂತ್ರಿಯಾಗಿದ್ದರು ಎಂಬ ವಿಷಯವೇ ಬಹುತೇಕರಿಗೆ ಕಸಿವಿಸಿ ಮೂಡಿಸುವಂತಹದ್ದಿರಬೇಕು! ಅದಕ್ಕೆ ಅದರ ಬಗ್ಗೆ ಪ್ರಸ್ಥಾಪಿಸಲು ಹೋಗಿಲ್ಲ. ಮತ್ತೊಂದು ವಿಷಯ ಅಂಬೇಡ್ಕರರು ಕಾರ್ಮಿಕರ ಹೆಸರಿನಲ್ಲಿ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದನ್ನು ಮುಚ್ಚಿಡಲಾಗಿದೆ. ಹೇಗೆ ಇಂಗ್ಲೇಂಡಿನಲ್ಲಿ “ಲೇಬರ್ ಪಾರ್ಟಿ” ಇದೆಯೋ ಅದೇ ರೀತಿ ಭಾರತದಲ್ಲಿ “ಇಂಡಿಯನ್ ಲೇಬರ್ ಪಾರ್ಟಿ” (ಭಾರತ ಕಾರ್ಮಿಕ ಪಕ್ಷ) ವನ್ನು ಸ್ಥಾಪಿಸಿದರು. ಪ್ರಶ್ನೆಯೆನೆಂದರೆ ಬಾಬಾಸಾಹೇಬ್ ಅಂಬೇಡ್ಕರ್‍ರ ಬಗ್ಗೆ ಇಂತಹ ಸರಳ ಸತ್ಯ ಅದೆಷ್ಟು ಜನರಿಗೆ ಗೊತ್ತು? ಎಂಬುದು.

ಒಂದಂತು ನಿಜ ಕಾರ್ಮಿಕ ಇಲಾಖೆ ಮಂತ್ರಿಯಾಗಿ ಅಪ್ರತಿಮ ಸಾಧನೆಗಳನ್ನು ಮಾಡಿ ಕಾರ್ಮಿಕರ ಹೆಸರಿನಲ್ಲೇ ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಿದ ಈ ದೇಶದ ಎಕೈಕ ರಾಜಕೀಯ ನಾಯಕರೆಂದರೆ ಅದು ಬಾಬಾಸಾಹೇಬ್ ಅಂಬೇಡ್ಕರ್ ಮಾತ್ರ. ಈ ನಿಟ್ಟಿನಲ್ಲಿ ಕಾರ್ಮಿಕರ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರ್‍ರ ಚಿಂತನೆಗಳು ಮತ್ತು ಅಲೋಚನೆಗಳನ್ನು ತಿಳಿದುಕೊಳ್ಳುವುದು ಈಗ ಹಿಂದಿಗಿಂತಲೂ ಹೆಚ್ಚಿನ ಅಗತ್ಯವುಳ್ಳದ್ದಾಗಿದೆ.

ಹಾಗಿದ್ದರೆ ಕಾರ್ಮಿಕರ ಕುರಿತಂತೆ ಬಾಬಾಸಾಹೇಬ್ ಅಂಬೇಡ್ಕರ್‍ರ ಚಿಂತನೆಗಳೇನು? 1938 ಫ್ರೆಬ್ರವರಿ-12 ರಂದು ಮನ್‍ಮಾಂಡ್ ಎಂಬಲ್ಲಿ “ಬೃಹತ್ ಭಾರತ ಪ್ರಸ್ಥಭೂಮಿ ಶೋಷಿತ ರೈಲ್ವೆ ನೌಕರರ ಸಮ್ಮೇಳನ” ವನ್ನು ಉದ್ದೇಶಿಸಿ ಮಾತನಾಡುತ್ತಾ ಅಂಬೇಡ್ಕರರು “ಶೋಷಿತರು ಇದುವರೆಗೆ ತಮ್ಮ ಸಾಮಾಜಿಕ ನೋವುಗಳ ಬಗ್ಗೆ ಹೋರಾಟ ಮಾಡುತ್ತಿದ್ದರು. ತಮ್ಮ ಆರ್ಥಿಕ ಸಂಕಷ್ಟಗಳ ಬಗ್ಗೆ ಇದುವರೆಗೆ ಅವರು ಮಾತಾಡಿರಲೇ ಇಲ್ಲ. ಆದರೆ ಇಂದು ಪ್ರಪ್ರಥಮವಾಗಿ ನೀವು ನಿಮ್ಮ ಆರ್ಥಿಕ ಅಗತ್ಯತೆಗಳ ಬಗ್ಗೆ ಚರ್ಚಿಸಲು ಇಲ್ಲಿ ಸೇರಿದ್ದಿರಿ.

ಇದುವರೆಗೆ ನೀವು ಅಸ್ಪøಶ್ಯರಾಗಿ ಒಟ್ಟಿಗೆ ಸೇರುತ್ತಿದ್ದಿರಿ. ಆದರೆ ಇಂದು ನೀವು ಕಾರ್ಮಿಕರಾಗಿ ಒಟ್ಟಿಗೆ ಸೇರಿದ್ದೀರಿ”. ಎಂದು ತಾನೇಕೆ ಇದುವರೆಗೆ ಕಾರ್ಮಿಕರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದಕ್ಕೆ ಪೀಠಿಕೆ ನೀಡುತ್ತಾರೆ. ಈ ಪ್ರಕಾರ ಅಂಬೇಡ್ಕರರ ಮೊದಲ ಹೋರಾಟ ಸಾಮಾಜಿಕ ಅಗತ್ಯತೆಗೆ ಸಂಬಂಧಿಸಿದ್ದಾಗಿತ್ತು ನಂತರವಷ್ಟೆ ಅವರು ಆರ್ಥಿಕತೆಗೆ ಅರ್ಥಾತ್ ಕಾರ್ಮಿಕರ ಬಗ್ಗೆ ತಲೆಕೆಡಿಸಿಕೊಂಡ್ಡದ್ದು ಎಂದು ತಿಳಿದು ಬರುತ್ತದೆ. ಅಂದಹಾಗೆ ಹಾಗೆ ಕಾರ್ಮಿಕರ ಬಗ್ಗೆ ವಿಶೇಷವಾಗಿ ಭಾರತದ ಕಾರ್ಮಿಕರ ಬಗ್ಗೆ ಮತ್ತವರ ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಅವರು “ನನ್ನ ದೃಷ್ಟಿಯಲ್ಲಿ ಕಾರ್ಮಿಕರು ವಿಶೇಷವಾಗಿ ಈ ದೇಶದ ಕಾರ್ಮಿಕರು ಇಬ್ಬರು ಶತ್ರುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಆ ಇಬ್ಬರು ಶತ್ರುಗಳೆಂದರೆ ಒಂದು ಬ್ರಾಹ್ಮಣವಾದ ಮತ್ತೊಂದು ಬಂಡವಾಳವಾದ”.

“ಬ್ರಾಹ್ಮಣವಾದ ಹಾಗೆಂದರೆ ಬ್ರಾಹ್ಮಣ ಸಮುದಾಯವಲ್ಲ. ಅವರು ಪಡೆದಿರುವ ಹಕ್ಕು ಅಧಿಕಾರಗಳೂ ಅಲ್ಲ. ನನ್ನ ಪ್ರಕಾರ ಬ್ರಾಹ್ಮಣವಾದವೆಂದರೆ ಸಮಾನತೆ, ಸ್ವಾತಂತ್ರ್ಯ, ಸಹೋದರತೆಯ ನಿರಾಕರಣೆ ಎಂಧರ್ಥ. ಈ ಅರ್ಥದಲ್ಲಿ ಬ್ರಾಹ್ಮಣವಾದದ ಮೂಲ ಬ್ರಾಹ್ಮಣರೆ ಇರಬಹುದು. ಆದರೆ ಅದು ಅವರಷ್ಟಕ್ಕೆ ಸಿಮೀತವಾಗಿಲ್ಲ. ಸಮಾಜದ ಎಲ್ಲಾ ವರ್ಗಗಳಲ್ಲೂ ಎಲ್ಲಾ ಜಾತಿಯ ಜನರಲ್ಲೂ ಹಾಸುಹೊಕ್ಕಾಗಿದೆ. ಆ ಮೂಲಕ ಅದು ಎಲ್ಲಾ ಜನರ ಅಲೋಚನೆ ಮತ್ತು ಕ್ರಿಯೆಯನ್ನು ನಿಯಂತ್ರಿಸುತ್ತಿರುತ್ತದೆ. ಒಂದಷ್ಟು ಜನರಿಗೆ ಅದು ಉನ್ನತ ಸ್ಥಾನವನ್ನು ಕಲ್ಪಿಸುತ್ತದೆ.

ಮತ್ತೊಂದಷ್ಟು ಜನರಿಗೆ ಅದು ಸಮಾನ ಅವಕಾಶಗಳನ್ನು ನಿರಾಕರಿಸುತ್ತದೆ. ಹಾಗೆ ಬ್ರಾಹ್ನಣವಾದವೆಂಬ ಆ ವಾದ ಸಾಮಾಜಿಕ ಹಕ್ಕುಗಳನ್ನು ನಿರಾಕರಿಸುವುದಷ್ಟಕ್ಕೆ ಸಿಮೀತವಾಗುವುದಿಲ್ಲ. ಬದಲಿಗೆ ನಾಗರೀಕ ಹಕ್ಕುಗಳನ್ನು ನಿರಾಕರಿಸುವತ್ತಲೂ ತನ್ನ ಕಬಂಧಕ ಬಾಹುಗಳನ್ನು ಚಾಚುತ್ತದೆ. ಬೇಕಿದ್ದರೆ ಶೋಷಿತ ಸಮೂದಾಯಕ್ಕೆ ಸೇರಿದ ಕಾರ್ಮಿಕನನ್ನು ಶೋಷಿತ ಸಮೂದಾಯಕ್ಕೆ ಸೇರಿಲ್ಲದ ಕಾರ್ಮಿಕನ ಜೊತೆ ಹೋಲಿಸಿ. ಅವರಲ್ಲಿ ಯಾರಿಗೆ ಹೆಚ್ಚಿಗೆ ಅವಕಾಶ ದೊರೆಯುತ್ತದೆ? ಅಕಸ್ಮಾತ್ ಹಾಗೆ ಅವಕಾಶ ದೊರೆತ ಶೋಷಿತ ಸಮುದಾಯದ ಕಾರ್ಮಿಕರಿಗೆ ಸೇವಾ ಭದ್ರತೆ ಹಾಗೂ ಬಡ್ತಿಯಲ್ಲಿ ಸಿಗುವ ಆದ್ಯತೆಯಾದರೂ ಏನು? ಕ್ರೂರ ಸತ್ಯವೆಂದರೆ ಹಲವಾರು ಸಂಧರ್ಭದಲ್ಲಿ ಅವರು ಅಸ್ಪøಶ್ಯರೆಂಬ ಕಾರಣಕ್ಕಾಗಿಯೆ ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರುಗಳನ್ನು ಹಲವಾರು ವೃತ್ತಿಗಳಿಂದ ದೂರವಿರಿಸಲಾಗಿದೆ”. ಹೀಗೆ ಸಾಗುವ ಅಂಬೇಡ್ಕರ್‍ರವರ ವಿಚಾರ ಲಹರಿಗಳು ಇದಕ್ಕೆ ಪೂರಕವಾಗಿ ಮುಂಬೈಯ ಹತ್ತಿ ಗಿರಣಿಗಳನ್ನು ಪ್ರಸ್ತಾಪಿಸುತ್ತಾ, ಅವರು ಅಲ್ಲಿ ಅಸ್ಪøಶ್ಯರನ್ನು ಹೆಚ್ಚು ಸಂಬಳ ಬರುವ ನೇಯ್ಗೆ ವಿಭಾಗದಿಂದ ದೂರ ಇಟ್ಟು, ಕಡಿಮೆ ಸಂಬಳ ಬರುವ ನೂಲುಬಿಚ್ಚುವ ವಿಭಾಗದಲ್ಲಷ್ಟೆ ದುಡಿಸುತ್ತಿರುವುದನ್ನು ಉದಾಹರಿಸುತ್ತಾರೆ.

ತನ್ಮೂಲಕ ಬ್ರಾಹ್ಮಣವಾದ ಈ ದೇಶದ ಕಾರ್ಮಿಕರ ವಿಶೇಷವಾಗಿ ಶೋಷಿತ ವರ್ಗಗಳ ಕಾರ್ಮಿಕರ ಮೇಲೆ ಬೀರುತ್ತಿರುವ ಘೋರ ಪರಿಣಾಮವನ್ನು ಅಂಬೇಡ್ಕರರು ಬಿಚ್ಚಿಡುತ್ತಾರೆ. ಹಾಗೆಯೆ ರೈಲ್ವೆ ಇಲಾಖೆಯಲ್ಲಿ ಶೋಷಿತ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಬರೆಯುವ ಅಂಬೇಡ್ಕರ್‍ರವರು ರೈಲ್ವೆಯಲ್ಲಿ ಶೋಷಿತರು ಬಹುತೇಕ ಗ್ಯಾಂಗ್‍ಮನ್‍ಗಳಾಗಿರುವುದನ್ನು ಉದಾಹರಿಸುತ್ತಾರೆ ಮತ್ತು ಅವರಿಗೆ ಯಾವುದೇ ಬಡ್ತಿ, ಮೂಲಭೂತ ಸೌಲಭ್ಯಗಳನ್ನು ನಿರಾಕರಿಸುವುದನ್ನು ಸಾಧ್ಯಂತವಾಗಿ ವಿವರಿಸಿಸುತ್ತಾರೆ. ಹಾಗೆಯೇ ರೈಲ್ವೆ ವರ್ಕ್ ಶಾಪ್‍ನಲ್ಲಿ ಮೆಕ್ಯಾನಿಕ್, ಮೇಸ್ತ್ರಿಗಳಾಗಿ ನೇಮಿಸಲ್ಪಡದ ದಲಿತರು ಕೇವಲ ಕೂಲಿಗಳಾಗಿ ದುಡಿಯುವುದನ್ನು ಅವರು ವಿಷದವಾಗಿ ತಿಳಿಸುತ್ತಾರೆ. ಅವರ ಮಾತುಗಳಲ್ಲೇ ಹೇಳುವುದಾದರೆ “ಅವನು (ದಲಿತ) ಕೇವಲ ಕೂಲಿ ಕಾರ್ಮಿಕ ಮತ್ತು ಕೂಲಿ ಕಾರ್ಮಿಕನಾಗಿಯೇ ದುಡಿಯುತ್ತಾನೆ”!

ಎಷ್ಟೊಂದು ನಿಜ? ಅಂಬೇಡ್ಕರರರು ಆಗ ಹೇಳಿದ್ದು ಏಕೆಂದರೆ ಪ್ರಸ್ತುತ ರೈಲ್ವೆ, ಆರೋಗ್ಯ, ಶಿಕ್ಷಣ, ನಗರಪಾಲಿಕೆ ಇತ್ಯಾದಿ ಇಲಾಖೆಗಳಲ್ಲೆಲ್ಲಾ ದಲಿತರು ಹೇರಳವಾಗಿ ಇದ್ದಾರೆ. ಅದು ಎಲ್ಲಿ? ಆ ಇಲಾಖೆಗಳಲ್ಲಿ ಕಸ ಗೂಡಿಸುವ “ಡಿ” ಗ್ರೂಪ್ ನೌಕರನಾಗಿ, ಕಕ್ಕಸ್ಸು ಉಚ್ಚೆ ಕ್ಲೀನ್ ಮಾಡುವ ಪೌರ ಕಾರ್ಮಿಕನಾಗಿ. ರಾತ್ರಿ ಎಲ್ಲಾ ಬ್ಯಾಟರಿ ಹಿಡಿದು ಸೂಕ್ತ ರಕ್ಷಣೆಯಿಲ್ಲದೆ ತಿರುಗಾಡುವ ಕಾವಲುಗಾರನಾಗಿ, ಅರಣ್ಯ ಇಲಾಖೆಯಲ್ಲಿ ಗಾರ್ಡ್ ಆಗಿ, ಮೇಟಿಯಾಗಿ ದುಡಿಯುತ್ತಿದ್ದಾರೆ. ಮಿಸಲಾತಿ ಎಲ್ಲಿ ಭರ್ತಿಮಾಡುತ್ತಾರೋ ಏನೋ ಗೊತ್ತಿಲ್ಲ. ಆದರೆ ಇಲ್ಲೆಲ್ಲ ಶೇಕಡ 18 ಇರಲಿ ಶೇಕಡ 90 ರಷ್ಟು ಮಿಸಲಾತಿಯನ್ನು ಮೈನ್‍ಟೈನ್ ಮಾಡಿರುತ್ತಾರೆ ತನ್ಮೂಲಕ ದಲಿತ ಕಾರ್ಮಿಕರ ಸ್ಥಾನ ಯಾವುದು ಎಂದು ತೋರಿಸಿಕೊಡುತ್ತಿದ್ದಾರೆ !

ಹಾಗಿದ್ದರೆ ಹೀಗೆ ವಿಗಂಡಿಸುವುದು ಸರಿಯೇ? ಅಂದರೆ ಕಾರ್ಮಿಕರನ್ನು ಮೇಲ್ಜಾತಿಯ ಕಾರ್ಮಿಕರು ಶೋಷಿತ ವರ್ಗದ ಕಾರ್ಮಿಕರು ಎಂದು ಕೆಲವರು ಕೇಳಬಹುದು (ವಿಶೇಷವಾಗಿ ಕಾರ್ಮಿಕ ಮುಖಂಡರು). ಆದರೆ? ಭಾರತದಂತಹ ಜಾತಿ ಕೊಚ್ಚೆಯಲಿ? ಅಂಬೇಡ್ಕರ್‍ರ ಒಟ್ಟಾರೆ ಸಮಸ್ತ ದಲಿತ ಕಾರ್ಮಿಕ ಚಿಂತಕರ ಈ ತೀರ್ಮಾನ ಸರಿ. ಅಂಬೇಡ್ಕರರ ಮಾತುಗಳನ್ನು ಇಲ್ಲಿ ಪ್ರಸ್ತುತ ಪಡಿಸುವುದಾದರೆ “ತಪ್ಪು ಕಲ್ಪನೆಯಿಂದಾಗಿ ನಮ್ಮನ್ನು ಟೀಕಿಸುವ ಕಾರ್ಲ್ ಮಾರ್ಕ್ಸ್ ನ ಸಿದ್ದಾಂತವನ್ನು ಓದಿಕೊಂಡಿರುವ ಕೆಲ ಕಾರ್ಮಿಕ ನಾಯಕರು ಸಮಾಜವನ್ನು ಕೇವಲ ಮಾಲೀಕರ ವರ್ಗ ಮತ್ತು ಕಾರ್ಮಿಕ ವರ್ಗ ಎಂದಷ್ಟೆ ವಿಭಜಿಸುವ ವಾದವನ್ನು ಹೇಳುತ್ತಾರೆ. ಹಾಗೆ ಹೇಳುವ ಅವರು ಭಾರತಕ್ಕೂ ಅದೇ ಸಿದ್ದಾಂತವನ್ನು ಅಂದರೆ ಭಾರತದಲ್ಲೂ ಕೂಡ ಮಾಲೀಕ ವರ್ಗ ಮತ್ತು ಕಾರ್ಮಿಕ ವರ್ಗಗಳಿವೆ ಎಂದು ಹಿಂದೆ ಮುಂದೆ ಯೋಚಿಸದೆ ಅಭಿಪ್ರಾಯ ಮಂಡಿಸುತ್ತಾರೆ.

ಆ ಮೂಲಕ ಬಂಡವಾಳ ವಾದವನ್ನು ಬಗ್ಗುಬಡಿಯಬಹುದೆನ್ನುತ್ತಾರೆ. ನನ್ನ ಪ್ರಕಾರ ನಿಜಕ್ಕೂ ಇದು ತಪ್ಪಿನಿಂದ ಕೂಡಿದ್ದು. ಯಾಕೆಂದರೆ ಮಾರ್ಕ್ಸ್ ಸಮಾಜವನ್ನು ಮಾಲೀಕರ ವರ್ಗ ಕಾರ್ಮಿಕ ವರ್ಗವೆಂದು ವಿಭಜಿಸಬಹುದೆಂದು ಎಲ್ಲಿಯ clear cut ಆಗಿ ಹೇಳಿಲ್ಲ. ಹಾಗೆಯೇ ಅಂತಹ ಹೇಳಿಕೆ ನಿಜಕ್ಕೂ ಅಸತ್ಯವಾದುದು ಮತ್ತು ಅಪಾಯಕಾರಿ ಕೂಡ ಹೌದು ಮತ್ತು ಅದು ಅಂದರೆ ಮಾರ್ಕ್ಸ್ ನ ಸಿದ್ದಾಂತ ಯುರೋಪ್‍ಗಷ್ಟೆ ನಿಜವಾಗಿದ್ದು ಭಾರತಕ್ಕಲ್ಲ ಎಂದು ಹೇಳುವುದು ಕೂಡ ಅಷ್ಟೆ ಅಸತ್ಯವಾದುದು.

ಯಾಕೆಂದರೆ ಯುರೋಪ್ ಖಂಡಕ್ಕೆ ಸೇರಿದ ಜರ್ಮನಿಯಲ್ಲಿ ಬಡವರು ಮತ್ತು ಶೋಷಿತ ವರ್ಗದವರು ಇರಲಿಲ್ಲವೇ? ಹಾಗೆ ಅದೇ ಯುರೋಪ್ ಖಂಡಕ್ಕೆ ಸೇರಿದ ಫ್ರಾನ್ಸ್ ನಲ್ಲಿಯೂ ಎಲ್ಲವನ್ನು ಕಳೆದುಕೊಂಡ ಬಡವರು ಕುಶಲಕರ್ಮಿಗಳು ಇರಲಿಲ್ಲವೆ?. ಹಾಗಿದ್ದರೆ ಜರ್ಮನಿಯ ಬಡವರು ಮತ್ತು ಫ್ರಾನ್ಸ್ ನ ಬಡವರು ಮಾರ್ಕ್ಸ್ ನ ಸಿದ್ದಾಂತದ ಹಾಗೆ ಯಾಕೆ ಒಂದಾಗಲಿಲ್ಲ? ಸಾಲದಕ್ಕೆ ಅವರು ಇತ್ತಿಚಿಗೆ ಮುಗಿದ ಯುದ್ಧದಲ್ಲಿ (ಒಂದನೇ ಮಹಾಯುದ್ಧ) ಪರಸ್ಪರ ಹೊಡೆದಾಡಿದರು, ಬಡಿದಾಡಿದರು, ಶತ್ರುಗಳಂತೆ ಕಾದಾಡಿದರು. ಯಾಕೆ? ಹಾಗಿದ್ದರೆ ಇಲ್ಲಿ ಮಾಕ್ರ್ಸ್ failure ಆದನೆಂದರ್ಥವೆ? ಖಂಡಿತ ಇಲ್ಲ. ಏಕೆಂದರೆ ಮಾಕ್ರ್ಸ್ ಯಾವುದೆ ಸಮಾಜವನ್ನು ಬಡವ ಶ್ರೀಮಂತ ಎಂದ clear cut ಆಗಿ ಎಲ್ಲಿಯೂ ವಿಭಜಿಸಿಯೇ ಇಲ್ಲ. ವಸ್ತುಸ್ಥಿತಿ ಹೀಗಿರುವಾಗ ಅಂತಹ ಸಿದ್ದಾಂತವನ್ನು ಅಂದರೆ ಬಡವ-ಶ್ರೀಮಂತ, ಮಾಲೀಕ-ಕಾರ್ಮಿಕ ಎಂಬ ಸಿದ್ದಾಂತವನ್ನು ಭಾರತದ ಕಾರ್ಮಿಕ ನಾಯಕರು ಭಾರತಕ್ಕೆapply ಮಾಡುವುದು ಅದೆಷ್ಟು ಸರಿ?”.

“ಒಂದಂತು ನಿಜ ಹೇಗೆ ಯುರೋಪ್‍ನಲ್ಲಿ ಬಡವ ಶ್ರೀಮಂತ ಎಂಬ ನೇರ ವಿಭಜನೆ ಸಾಧ್ಯವಿಲ್ಲವೋ ಹಾಗೆ ಭಾರತದಲ್ಲೂ ಕೂಡು ಬಡವ-ಶ್ರೀಮಂತ, ಮಾಲೀಕ-ಕಾರ್ಮಿಕ ಎಂಬ ನೇರ ವಿಭಜನೆ ಸಾದ್ಯವಿಲ್ಲ. ಒಟ್ಟಾರೆ ಎಲ್ಲಾ ಕಾರ್ಮಿಕರು ಒಂದು, ಒಂದು ವರ್ಗವಾಗಿದ್ದಾರೆ ಎಂಬುದು ಒಂದು ಅದರ್ಶವೆ ಹೊರತು ಅದು ಕಾರ್ಯಸಾಧುವಲ್ಲ. ಒಟ್ಟಿನಲ್ಲಿ ಅದು ತಪ್ಪಭಿಪ್ರಾಯ ಕೂಡ ಹೌದು. ಹಾಗಿದ್ದರೆ ನಾವು ಕಾರ್ಮಿಕರನ್ನು ಒಂದೆಡೆ ಸೇರಿಸುವುದು ಹೇಗೆ? ಅವರಲ್ಲಿ ಐಕ್ಯತೆಯನ್ನು ತರುವುದು ಹೇಗೆ? ಒಂದು ವರ್ಗದ ಕಾರ್ಮಿಕರು ಮತ್ತೊಂದು ವರ್ಗದ ಕಾರ್ಮಿಕರನ್ನು ತುಳಿಯುವುದರ ಮೂಲಕ ಅದು ಸಾಧ್ಯವೆ? ಅಥವಾ ಶೋಷಣೆಗೆ ಒಳಗಾದ ಆ ಮತ್ತೊಂದು ವರ್ಗದ ಕಾರ್ಮಿಕರ ಹೋರಾಟವನ್ನು ಹತ್ತಿಕ್ಕುವುದರ ಮೂಲಕ ಅಂತಹ ಐಕ್ಯಮತ್ಯವನ್ನು ಸಾಧಿಸಬಹುದೆ? ಏಕೆಂದರೆ ಈಗ ಆಗುತ್ತಿರುವುದೆ ಹಾಗೆ. ಶೋಷಣೆಗೆ ಒಳಗಾಗುತ್ತಿರುವ ಆ ಮತ್ತೊಂದು ವರ್ಗದ ಕಾರ್ಮಿಕರು ಸಂಘಟಿತರಾಗದಂತೆ ಅವರ ಕಷ್ಟಗಳಿಗೆ ಹೋರಾಡದಂತೆ ಅವರನ್ನು ತಡೆಯಲಾಗುತ್ತಿದೆ. ಹಾಗಿದ್ದರೆ ಕಾರ್ಮಿಕರ ನಡುವಿನ ಐಕ್ಯತೆಯ ಪ್ರಶ್ನೆ?”.

“ನಿಜವಾಗಿ ಹೇಳಬಹುದಾದರೆ ಧರ್ಮ ಮತ್ತು ಜನಾಂಗದ ಆಧಾರದ ಮೇಲೆ ಒಂದು ವರ್ಗದ ಕಾರ್ಮಿಕರು ಮತ್ತೊಂದು ವರ್ಗದ ಕಾರ್ಮಿಕರ ಮೇಲೆ ಏಕೆ ದೌರ್ಜನ್ಯ ನಡೆಸುತ್ತಾರೆ? ಆದರ ಹಿಂದಿರುವ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಬೇಕು. ಮತ್ತು ಆ ಕಾರಣಗಳನ್ನು ತೊಡೆದು ಹಾಕಬೇಕು. ಆಗ ಮಾತ್ರ ಎಲ್ಲಾ ಕಾರ್ಮಿಕರಲ್ಲೂ ಐಕ್ಯಮತ್ಯ ಸಾಧ್ಯ”.

“ಹಾಗೇಯೆ ಶೋಷಿತ ವರ್ಗದ ಯಾವುದೇ ಕಾರ್ಮಿಕರುಗಳಿಗೆ ಹಕ್ಕು ಅಧಿಕಾರಗಳನ್ನು ಕೊಡಲು ನಿರಾಕರಿಸುವ ಉನ್ನತ ವರ್ಗದ ಕಾರ್ಮಿಕರರುಗಳು, ಮಾಲೀಕರು ಸರ್ಕಾರದಿಂದ ತಮ್ಮ ಹಕ್ಕು ಅಧಿಕಾರಗಳನ್ನು ನಿರೀಕ್ಷಿಸುವುದು ಅದೆಷ್ಟು ಸಮಂಜಸ? ನೈತಿಕವಾಗಿ ಅದೆಷ್ಟು ಸರಿ? ಇಂತಹದನ್ನು ಆ ಕಾರ್ಮಿಕರುಗಳಿಗೆ ಅರ್ಥಮಾಡಿಸಬೇಕು. ಹಾಗೆಯೇ ಅಂತಹ ಮೇಲ್ವರ್ಗದ ಕಾರ್ಮಿಕರುಗಳಿಗೆ ತಾತ್ವಿಕವಾಗಿ ಸಂಘಟನೆಯ ದೃಷ್ಟಿಯಿಂದ ಸಾಮಾಜಿಕ ತಾರತಮ್ಯ ಮಾಡುವುದನ್ನು ತಪ್ಪು ಎಂದು ಮನವರಿಕೆ ಮಾಡಿಕೊಡಬೇಕು. ಆಗ ಮಾತ್ರ ವಿವಿಧ ಕಾರ್ಮಿಕವರ್ಗಗಳಲ್ಲಿ ಐಕ್ಯಮತ್ಯ ಸಾದ್ಯ”.

“ವಿಶಾಲಾರ್ಥದಲ್ಲಿ ಹೇಳುವುದಾದರೆ ಕಾರ್ಮಿಕರ ವಿವಿಧ ಗುಂಪುಗಳು ಒಟ್ಟಾಗಬೇಕಾದರೆ ಅವರ ನಡುವೆ ಇರುವ ಅಸಮಾನತೆಯ ಚೇತನವಾದ ಬ್ರಾಹ್ಮಣವಾದವನ್ನು ಕಿತ್ತೊಗೆಯಬೇಕು. ಬಂಡವಾಳವಾದದ ಬಗ್ಗೆ ಗಂಟಲು ಹರಿದುಕೊಂಡು ಮಾತಾನಾಡುವ ಕಾರ್ಮಿಕ ನಾಯಕರುಗಳನ್ನು ನೋಡಿದ್ದೇನೆ. ಆದರೆ ಬ್ರಾಹ್ಮಣವಾದದ ಬಗ್ಗೆ ಮಾತನಾಡುವ ಕಾರ್ಮಿಕ ನಾಯಕರನ್ನು ನಾನು ಎಲ್ಲಿಯೂ ನೋಡಿಲ್ಲ. ಒಂದರ್ಥದಲ್ಲಿ ಬ್ರಾಹ್ಮಣವಾದದ ಬಗೆಗಿನ ಅವರ ಈ ಮೌನ ಅನುಮಾನಾಸ್ಪದವಾದುದು.

ಕಾರ್ಮಿಕರ ಸಂಘಟನೆಗಳಿಗೂ ಬ್ರಾಹ್ಮಣವಾದಕ್ಕೂ ಯಾವುದೇ ಸಂಬಂಧವಿಲ್ಲವೆಂಬುದು ಅವರ ಆ ಮೌನದ ಅರ್ಥವೇ? ಅಥವಾ ಕಾರ್ಮಿಕರ ಅಸಂಘಟನೆಗೆ ಬ್ರಾಹ್ಮಣವಾದ ದೊಡ್ಡ ತೊಡಕಾಗಿದೆ ಆದ್ದರಿಂದ ಅದರ ಬಗ್ಗೆ ಮಾತಾನಾಡದೆ ಇರುವುದೆ ಕ್ಷೇಮವೆಂದು ಮೇಲ್ವರ್ಗದ ಕಾರ್ಮಿಕರು ಸುಮ್ಮನಿದ್ದಾರೆಯೇ? ಅಥವಾ ಕಾರ್ಮಿಕರ ನಾಯಕತ್ವವನ್ನಷ್ಟೆ ವಹಿಸಿಕೊಳ್ಳುವ ಇವರದು ಕೇವಲ ಅವಕಾಶವಾದಿತನವೇ? ಅದೆನೇ ಇರಲಿ ಕಾರ್ಮಿಕರ ಭಾವನೆಗಳಿಗೆ ನೋವಾದರೂ ಸರಿ ನಾನು ಇದನ್ನು ಪ್ರಶ್ನಿಸದೆ ಬಿಡುವುದಿಲ್ಲ”.

“ಕಾರ್ಮಿಕರ ಅಸಂಘಟನೆಗೆ ಬ್ರಾಹ್ಮಣವಾದ ಕಾರಣ ಎನ್ನುವುದಾದರೆ ಅದನ್ನು ಕಿತ್ತೆಸೆಯುವ ಗಂಭೀರ ಪ್ರಯತ್ನ ನಡೆಯಬೇಕು. ಕೇವಲ ಉದಾಸೀನತೆಯಿಂದ ಅಥವಾ ಮೌನವಾಗಿರುವುದರಿಂದ ಸೋಂಕು ನಿವಾರಣೆಯಾಗುವುದಿಲ್ಲ. ಅದನ್ನು ಗುರುತಿಸಬೇಕು ಮತ್ತು ಬೇರು ಸಮೇತ ಕಿತ್ತೊಗೆಯಬೇಕು. ಆಗ ಮತ್ತು ಅವಾಗ ಮಾತ್ರ ಕಾರ್ಮಿಕರ ಐಕ್ಯತೆಗೆ ಹಾದಿ ಸುಗಮವಾಗುತ್ತದೆ ಇಲ್ಲದಿದ್ದರೆ ಇದು ಖಂಡಿತ ಅಸಾಧ್ಯ”. ಕಾರ್ಮಿಕರ ಐಕ್ಯತೆಗೆ ಸಂಬಂಧಿಸಿದಂತೆ ಅಂಬೇಡ್ಕರರ ನೇರ ಮಾತುಗಳಿವು.

ಮುಂದುವರೆದು ಅವರು ಹೇಳುತ್ತಾರೆ “ಬ್ರಾಹ್ಮಣವಾದ ಒಂದು ಶಕ್ತಿಯಾಗಿ ಇರುವ ತನಕ ಜನರು ಅದಕ್ಕೆ ಅಂಟಿಕೊಂಡು ಇರಲು ಯತ್ನಿಸುತ್ತಾರೆ. ಏಕೆಂದರೆ ಅದು ಒಂದು ವರ್ಗಕ್ಕೆ ಅನುಕೂಲದ ರಾಶಿಯನ್ನು ಮತ್ತೊಂದು ವರ್ಗಕ್ಕೆ ಸಂಕೋಲೆಯ ಬೇಡಿಯನ್ನು ತೊಡಿಸುತ್ತದೆ. ಈ ಕಾರಣದಿಂದ ಸಂಕೋಲೆಯ ಬೇಡಿಯನ್ನು ತೊಡಿಸಲ್ಪಟ್ಟಿರುವ ಜನರು ಸಂಘಟಿತರಾಗಿ ಬ್ರಾಹ್ಮಣವಾದವನ್ನು ಬಗ್ಗುಬಡಿಯುವುದು ಅವರ ವಿಮೋಚನೆಯ ದೃಷ್ಟಿಯಿಂದ ಅತ್ಯಂತ ಅಗತ್ಯವಾದುದಾಗಿದೆ. ಇಲ್ಲದಿದ್ದರೆ ಎಲ್ಲಿ ಬ್ರಾಹ್ಮಣವಾದ ಹಾಗೆಯೆ ಮುಂದುವರೆಯುತ್ತದೆಯೋ ಎಂಬ ಭಯ ನನಗೆ!” ಎಂದು ಅಂಬೇಡ್ಕರರು ತಮ್ಮ ಅತಂಕವನ್ನು ವ್ಯಕ್ತಪಡಿಸುತ್ತಾರೆ.

ಒಂದಂತು ಸತ್ಯ ಯಾವ ಬ್ರಾಹ್ಮಣವಾದ ಎಂಬ ಒಂದು ಪ್ರಮುಖ ಸಮಸ್ಯೆಯನ್ನು ಈ ದೇಶದ ಕಾರ್ಮಿಕ ನಾಯಕರುಗಳು ಸಮಸ್ಯೆಯೆಂದು ಪರಿಗಣಿಸಿರಲಿಲ್ಲವೋ ಅಂತಹದನ್ನು ಸಮಸ್ಯೆಯೆಂದು ಗುರುತಿಸಿದ್ದು ಬಾಬಾಸಾಹೇಬ್ ಅಂಬೇಡ್ಕರ್. ಹಾಗಿದ್ದರೆ ಅಂಬೇಡ್ಕರ್‍ರವರು ಬ್ರಾಹ್ಮಣವಾದವನ್ನು ಈ ದೇಶದ ಕಾರ್ಮಿಕರ ಪ್ರಮುಖ ಸಮಸ್ಯೆಯಾಗಿ ಗುರುತಿಸಿದ್ದು ತಪ್ಪೆ? ಖಂಡಿತ ಇಲ್ಲ. ಯಾಕೆಂದರೆ ಯುರೋಪಿನಂತಹ ಅಲ್ಪಸ್ವಲ್ಪ ಸಮಾನತೆ ಇರುವ ಪ್ರದೇಶಕ್ಕೂ ಅನ್ವಯವಾಗದ ಮಾರ್ಕ್ಸ್ ವಾದ ಭಾರತದಂತಹ ಅಸಮ ಸಮಾಜಕ್ಕೆ ಹೇಗೆ ಅನ್ವಯವಾಗುತ್ತದೆ? ಒಬ್ಬ ಹೊಲಗೇರಿಯ ಕಾರ್ಮಿಕ ಒಬ್ಬ ಬ್ರಾಹ್ಮಣಗೇರಿಯ ಕಾರ್ಮಿಕ ಇಬ್ಬರೂ ಒಂದೇ ಹುದ್ದೆಯಲ್ಲಿ ದುಡಿಯುತ್ತಿರಬಹುದು.

ಒಂದೇ ಡ್ರೆಸ್ ಹಾಕುತ್ತಿರಬಹುದು. ಒಂದೇ ವೇತನ ಶ್ರೇಣಿ ಪಡೆಯುತ್ತಿರಬಹುದು. ಹಾಗಿದ್ದರೆ ಅವರಿಬ್ಬರು ಒಂದೇ ಎನ್ನಲು ಸಾಧ್ಯವೇ? ಅಂಬೇಡ್ಕರ್‍ರವರು ಬಿಡಿಸಿ ಬ್ರಾಹ್ಮಣವಾದವೆಂದು ವಿಸ್ತೃತವಾಗಿ ಹೇಳಿದ್ದು ಇದನ್ನೇ! ಹಾಗಿದ್ದರೆ ಇದಕ್ಕೆ ಪರಿಹಾರವಾಗಿ ಅಂಬೇಡ್ಕರ್ ಹೇಳಿದ್ದು? ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರು ಪ್ರತ್ಯೇಕವಾಗಿ ಸಂಘಟಿತರಾಗಬೇಕಾದ್ದನ್ನು. ಅವರ ಪ್ರಕಾರ ಟ್ರೇಡ್ ಯುನಿಯನ್ ಸಂಘಟನೆಗಳು ಭಾರತಕ್ಕೆ ಅತ್ಯಂತ ಅವಶ್ಯವಾದುದಾಗಿದೆ. ಆದರೆ ಅವು ಭಾರತದಲ್ಲಿ ನಿಂತ ನೀರಿನಂತಾಗಿವೆ ಅಥವಾ ಮುಳುಗುತ್ತಿರುವ ಹಡಗಿನಂತಾಗಿವೆ. ಇದಕ್ಕೆ ಕಾರಣ ಅದರ ನಾಯಕರ ಹೇಡಿತನ, ಸ್ವಾರ್ಥ ಮತ್ತು ತಪ್ಪು ಹಾದಿಯೆಂದು ಅಂಬೇಡ್ಕರ್‍ರು ದೂರುತ್ತಾರೆ.

ಮುಂದುವರೆದು ಅವರು “ಟ್ರೇಡ್ ಯೂನಿಯನ್ ನಾಯಕರ ಮುಖ್ಯ ಗುರಿ ಕಾರ್ಮಿಕರಲ್ಲಿ ಅತೃಪ್ತಿಯ ಭಾವನೆಯನ್ನು ಸೃಷ್ಟಿಸುವುದು. ಅಂತಹ ಅತೃಪ್ತಿಯಿಂದ ಕ್ರಾಂತಿಯನ್ನು ಬಯಸುವುದು. ಆ ಮೂಲಕ ಕಾರ್ಮಿಕರ ಆಡಳಿತ ಸ್ಥಾಪಿಸುವುದು” ಎಂದು ವಿಶ್ಲೇಷಿಸುತ್ತಾರೆ ಅಂಬೇಡ್ಕರ್‍ರವರು. ಅದಕ್ಕೆ ಪರಿಹಾರವಾಗಿ “ಕಾರ್ಮಿಕ ನಾಯಕರುಗಳು ಕಾರ್ಮಿಕರ ಸಾಮಾಜಿಕ ಮತ್ತು ರಾಜಕೀಯ ಹಕ್ಕುಗಳನ್ನು ಅರಿತುಕೊಳ್ಳಬೇಕು. ತನ್ಮೂಲಕ ಸರ್ವರಿಗೂ ಸಮಾನ ನ್ಯಾಯ ಒದಗಿಸುವಂತಹ ವಿಶಾಲ ಮನೋಭಾವನೆ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡುತ್ತಾರೆ.

ಮುಂದುವರೆದು ಅಂಬೇಡ್ಕರ್‍ರವರು “ಕಾರ್ಮಿಕ ಸಂಘಟನೆಗಳು ರಾಜಕೀಯ ಪ್ರವೇಶಿಸಲೇ ಬೇಕಾದ ಅಗತ್ಯತೆಯನ್ನು ಒತ್ತಿಹೇಳುತ್ತಾರೆ. ಏಕೆಂದರೆ ರಾಜಕೀಯ ಅಧಿಕಾರವಿಲ್ಲದೆ ಯಾವುದೇ ಕಾರ್ಮಿಕ ಸಂಘಟನೆಗಳು ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಸಾಧ್ಯವಿಲ್ಲ” ಎಂಬ ಸೂಕ್ಷ್ಮತೆಯನ್ನು ಬಿಡಿಸಿ ಹೇಳುತ್ತಾರೆ.

ಹಾಗಿದ್ದರೆ ಕಾರ್ಮಿಕ ಸಂಘಟನೆಗಳು ರಾಜಕೀಯ ಅಧಿಕಾರ ಪಡೆಯಬೇಕು ಎಂದಾಕ್ಷಣ ಅವುಗಳು ರಾಜಕೀಯ ಪಕ್ಷಗಳನ್ನು ಸೇರಲೇ ಬೇಕಲ್ಲವೇ? ಅದಕ್ಕೆ ಅಂಬೇಡ್ಕರ್‍ರು “ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಮತ್ತು ಕಾರ್ಮಿಕ ವರ್ಗದ ಚಿಂತನೆಯನ್ನು ಹೊಂದಿರುವ ರಾಜಕೀಯ ಪಕ್ಷಗಳನ್ನು ಕಾರ್ಮಿಕ ಸಂಘಟನೆಗಳು ಸೇರಬೇಕು”ಎಂದು ಸಲಹೆ ನೀಡುತ್ತಾರೆ ತನ್ಮೂಲಕ ಕಾರ್ಮಿಕರ ಎಲ್ಲಾ ಸಮಸ್ಯೆಗಳಿಗೂ ರಾಜಕೀಯ ಅಧಿಕಾರ ಗಳಿಸಿಕೊಳ್ಳುವುದರಲ್ಲಿ ಪರಿಹಾರವಿದೆ ಎನ್ನುತ್ತಾರೆ.

ಏನೇ ಆಗಲಿ ಪ್ರಸ್ತುತ ದಿನಗಳಲ್ಲಿ ಅಸಂಘಟಿತ ಕೂಲಿ ಕಾರ್ಮಿಕರೇ ಹೆಚ್ಚುತ್ತಿರುವ ಈ ದಿನಗಳಲ್ಲಿ ಕಾರ್ಮಿಕರು ವಿಶೇಷವಾಗಿ ಶೋಷಿತ ವರ್ಗಕ್ಕೆ ಸೇರಿದ ಕಾರ್ಮಿಕರು ಅಂಬೇಡ್ಕರ್‍ರವರ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರು ಹೇಳಿದ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬೇಕಿದೆ. ಹಾಗಿದ್ದರೆ ಕಮ್ಯೂನಿಸ್ಟ್ ಪಕ್ಷಗಳಿವೆಯಲ್ಲವೆ ಎಂದು ಯಾರಾದರೂ ಪ್ರಶ್ನಿಸಬಹುದು. ಆದರೆ ಭಾರತದ ಕಮ್ಯೂನಿಸ್ಟರಿಗೂ ಕೋಮುವಾದಿಗಳಿಗೂ ಅಂತಹ ವ್ಯತ್ಯಾಸವೇನಿಲ್ಲಾ.

ಯಾಕೆಂದರೆ ಯಾವ ಬ್ರಾಹ್ಮಣವಾದ ಭಾರತದ ಕಾರ್ಮಿಕರ ಸಮಸ್ಯೆಯೆಂದು ಅಂಬೇಡ್ಕರ್ ಪರಿಭಾವಿಸಿದರೋ ಅದೇ ಬ್ರಾಹ್ಮಣವಾದವನ್ನು ಭಾರತದ ಕಮ್ಯೂನಿಸ್ಟರು ತಮ್ಮದಾಗಿಸಿಕೊಂಡಿದ್ದಾರೆ! ಭಾರತದ ಮಟ್ಟಿಗೆ “ಕೇಸರಿ” ಸ್ವಲ್ಪ ಗಾಢಬಣ್ಣಕ್ಕೆ ತಿರುಗಿ “ಕೆಂಪಾಗಿದೆ” ಎನ್ನಬಹುದು!

ಈ ನಿಟ್ಟಿನಲ್ಲಿ ಕಾರ್ಮಿಕರು ಇಂದು ಅಂಬೇಡ್ಕರ್ ರವರು ಕಾರ್ಮಿಕರ ಸಮಸ್ಯೆಯೆಂದು ಪರಿಭಾವಿಸಿದ ಬ್ರಾಹ್ಮಣವಾದವನ್ನು ಅರ್ಥಮಾಡಿಕೊಳ್ಳಬೇಕಿದೆ. ಪರಸ್ಪರ ಸಾಮಾಜಿಕ ಹಕ್ಕುಗಳನ್ನು ಗೌರವಿಸುವುದನ್ನು ಕಲಿತು ಆ ಮೂಲಕ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡ ಬಲ್ಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಬೇಕಿದೆ. ತನ್ಮೂಲಕ ಈ ದೇಶದ ನೈಜ ಕಾರ್ಮಿಕ ನಾಯಕ ಬಾಬಾಸಾಹೇಬ್ ಅಂಬೇಡ್ಕರ್‍ರ ಕಾರ್ಮಿಕ ಕನಸುಗಳನ್ನು ನನಸು ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾರ್ಮಿಕರು ಮುಂದಡಿ ಇಡುವರೆ ? ಕಾದು ನೋಡಬೇಕಷ್ಟೆ.

ರಘೋತ್ತಮ ಹೊ ಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಮರ್ಥ್ ಶಾಮನೂರು ಪ್ರಯಾಸದ ಗೆಲುವು ಮತ್ತು ಮುಂದಿನ ಸವಾಲುಗಳು

Published

on

~ಗೋವರ್ಧನ ನವಿಲೇಹಾಳು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಖಾಲಿಯಾದ ಈ ಕ್ಷೇತ್ರವು ಕುಟುಂಬದ ರಾಜಕೀಯ ಉತ್ತರಾಧಿಕಾರ, ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷಾಂತರದ ಆರೋಪಗಳ ನಡುವೆ ತೀವ್ರ ಸ್ಪರ್ಧೆಯನ್ನು ಕಂಡಿತು. ಸುಮಾರು 5,708 ಮತಗಳ ಅಂತರದಿಂದ ಗೆದ್ದ ಸಮರ್ಥ್ ಅವರು ಶಾಮನೂರು ಕುಟುಂಬದ ಮೂರನೇ ಪೀಳಿಗೆಯ ಪ್ರತಿನಿಧಿಯಾಗಿ ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಈ ಗೆಲುವು ಕಾಂಗ್ರೆಸ್‌ಗೆ ಸಂತೋಷದ ಸುದ್ದಿಯಾದರೂ, ಎಸ್‌ಡಿಪಿಐ ಪಡೆದ ಗಣನೀಯ 18,975 ಮತಗಳು ಮತ್ತು ಬಿಜೆಪಿಯ ತೀವ್ರ ಪೈಪೋಟಿ ರಾಜಕೀಯ ಸಮೀಕರಣಗಳಲ್ಲಿ ಹೊಸ ತಿರುವುಗಳನ್ನು ಸೂಚಿಸುತ್ತವೆ.

ಈ ಉಪಚುನಾವಣೆಯು ಕೇವಲ ಕ್ಷೇತ್ರೀಯ ಘಟನೆಯಾಗಿರದೆ, ಕರ್ನಾಟಕ ರಾಜಕೀಯದಲ್ಲಿ ಅಲ್ಪಸಂಖ್ಯಾತರ ಮತಬ್ಯಾಂಕ್, ಕುಟುಂಬ ರಾಜಕೀಯ ಮತ್ತು ಪ್ರತಿಪಕ್ಷದ ತಂತ್ರಗಳ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಯಿತು. ಶಾಮನೂರು ಕುಟುಂಬದ ದೀರ್ಘಕಾಲದ ಸೇವೆಯನ್ನು ಜನರು ಮೆಚ್ಚಿದ್ದರೂ, ಕಾಂಗ್ರೆಸ್‌ನಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನಿರಾಕರಣೆಯಿಂದಾಗಿ ಉಂಟಾದ ಅಸಮಾಧಾನವು ಎಸ್‌ಡಿಪಿಐಗೆ ಅವಕಾಶ ಮಾಡಿಕೊಟ್ಟಿತು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರು ತೀವ್ರ ಪ್ರಚಾರ ನಡೆಸಿದ್ದರೂ, ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳು ಮತ್ತು ಐದು ಗ್ಯಾರಂಟಿಗಳ ಪ್ರಭಾವವು ಗೆಲುವಿಗೆ ನೆರವಾಯಿತು. ಆದರೆ ಈ ಗೆಲುವು ಸುಲಭವಾಗಿರಲಿಲ್ಲ; ಅದು ಎಲ್ಲಾ ಪಕ್ಷಗಳಿಗೂ ಪಾಠವನ್ನು ಕಲಿಸುತ್ತದೆ.

ಸಮರ್ಥ್ ಶಾಮನೂರು ಅವರ ಮುಂದಿನ ನಡೆ

ಕಿರಿಯ ವಯಸ್ಸಿನಲ್ಲಿ (ದೇಶದ ಎರಡನೇ ಅತಿ ಕಿರಿಯ ಶಾಸಕರಾಗಿ) ಗೆದ್ದ ಸಮರ್ಥ್ ಅವರು ತಮ್ಮ ಅಜ್ಜರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿಯಲ್ಲಿದ್ದಾರೆ. ಮುಂದಿನ ನಡೆಯು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರೀಕರಣಗೊಳ್ಳಬೇಕು. ದಾವಣಗೆರೆಯಂತಹ ನಗರ-ಗ್ರಾಮೀಣ ಮಿಶ್ರ ಕ್ಷೇತ್ರದಲ್ಲಿ ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಬಲಪಡಿಸುವುದು ಮುಖ್ಯ. ಶಾಮನೂರು ಕುಟುಂಬದ ಹೆಸರು ಅಭಿವೃದ್ಧಿಗೆ ಸಮಾನವಾಗಿದೆ; ಇದನ್ನು ಮುಂದುವರಿಸಿ, ಎಲ್ಲಾ ಸಮುದಾಯಗಳ ನಡುವೆ ಸೇತುವೆಯಾಗಬೇಕು.

ವಿಶೇಷವಾಗಿ ಅಲ್ಪಸಂಖ್ಯಾತರ ಅಸಮಾಧಾನವನ್ನು ನಿವಾರಿಸುವುದು ಅಗತ್ಯ. ಟಿಕೆಟ್ ವಿವಾದದ ನಂತರ ಉಂಟಾದ ಬಿರುಕುಗಳನ್ನು ತುಂಬುವ ಮೂಲಕ ಏಕತೆಯ ಸಂದೇಶ ನೀಡಬೇಕು. ಯುವಕರಾಗಿರುವುದರಿಂದ ಆಧುನಿಕ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಪಾರದರ್ಶಕ ಆಡಳಿತದ ಮೂಲಕ ಹೊಸ ಚಿಂತನೆ ತರಬಹುದು. ರಾಜಕೀಯದಲ್ಲಿ ವೈಯಕ್ತಿಕ ದಾಳಿ ಬದಲು ನಿರ್ಮಾಣಾತ್ಮಕ ವಿಮರ್ಶೆಯನ್ನು ಪ್ರೋತ್ಸಾಹಿಸುವುದು ಅವರ ಯಶಸ್ಸಿಗೆ ಕಾರಣವಾಗುತ್ತದೆ. ಜನಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡು, ಕ್ಷೇತ್ರದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಪ್ರಸ್ತುತಪಡಿಸುವುದು ಅವರ ಮುಂದಿನ ಗುರಿಯಾಗಬೇಕು. ಗೆಲುವು ಕುಟುಂಬದ ಆಸ್ತಿಯಲ್ಲ, ಜನರ ವಿಶ್ವಾಸದ ಫಲ; ಇದನ್ನು ಕಾಯ್ದುಕೊಳ್ಳುವುದು ದೊಡ್ಡ ಸವಾಲು.

ಬಿಜೆಪಿಯ ಮುಂದಿನ ಸವಾಲುಗಳು

ಬಿಜೆಪಿ ಈ ಚುನಾವಣೆಯಲ್ಲಿ ತೀವ್ರ ಪೈಪೋಟಿ ನೀಡಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌ನ ಒಳಜಗಳಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಪೂರ್ಣವಾಗಿ ಬಳಸಿಕೊಳ್ಳಲು ವಿಫಲವಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಮುಂದೆ ಬಿಜೆಪಿಗೆ ಸವಾಲುಗಳು ಹಲವು: ಮೊದಲನೆಯದು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ನಡುವೆ ವಿಶ್ವಾಸಾರ್ಹತೆಯನ್ನು ಕಟ್ಟುವುದು. ಧ್ರುವೀಕರಣದ ತಂತ್ರಗಳು ಸೀಮಿತ ಯಶಸ್ಸು ನೀಡುತ್ತವೆ ಎಂಬುದು ಈ ಫಲಿತಾಂಶ ಸೂಚಿಸುತ್ತದೆ.

ಕ್ಷೇತ್ರದಲ್ಲಿ ಸ್ಥಳೀಯ ನಾಯಕರನ್ನು ಬಲಪಡಿಸುವುದು, ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಜನಸಂಪರ್ಕ ಹೆಚ್ಚಿಸುವುದು ಅಗತ್ಯ. ರಾಜ್ಯ ಮಟ್ಟದಲ್ಲಿ ಪ್ರತಿಪಕ್ಷದ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾ, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವುದು ಮುಂದಿನ ಚುನಾವಣೆಗಳಲ್ಲಿ ನೆರವಾಗುತ್ತದೆ. ಈ ಗೆಲುವು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಿದ್ದರೆ, ಬಿಜೆಪಿಗೆ ಕ್ರಿಯಾಶೀಲತೆಯ ಅಗತ್ಯವನ್ನು ತೋರಿಸುತ್ತದೆ.

ಎಸ್‌ಡಿಪಿಐ ಮುಂದಿನ ಸವಾಲು

ಎಸ್‌ಡಿಪಿಐ ಈ ಚುನಾವಣೆಯಲ್ಲಿ ಗಮನಾರ್ಹ ಮತಗಳನ್ನು ಪಡೆದು ತನ್ನ ಉಪಸ್ಥಿತಿಯನ್ನು ಸಾಬೀತುಪಡಿಸಿದೆ. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಂ ಸಮುದಾಯದ ಅಸಮಾಧಾನವನ್ನು ಬಳಸಿಕೊಂಡು ತನ್ನ ಮತಬ್ಯಾಂಕ್‌ನ್ನು ವಿಸ್ತರಿಸಿದೆ. ಆದರೆ ಇದು ಸವಾಲುಗಳನ್ನೂ ತಂದಿದೆ. ಮುಂದೆ ಎಸ್‌ಡಿಪಿಐಗೆ ಬ್ರಾಡ್ ಆಪೀಲ್ ಅಗತ್ಯ – ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಆರ್ಥಿಕ-ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ಉದ್ಯೋಗದಂತಹ ವಿಷಯಗಳಲ್ಲಿ ಎಲ್ಲರಿಗೂ ಸ್ಪಂದಿಸುವ ಧೋರಣೆ ಬೆಳೆಸಬೇಕು.

ಚುನಾವಣಾ ಅನಿಯಮಗಳ ಆರೋಪಗಳು ಮತ್ತು ಮುಖ್ಯ ಪಕ್ಷಗಳ ನಡುವಿನ ತಂತ್ರಗಳ ನಡುವೆ ಸಿಲುಕದೆ, ಸ್ವತಂತ್ರ ರಾಜಕೀಯವನ್ನು ಬಲಪಡಿಸುವುದು ಮುಖ್ಯ. ದೀರ್ಘಕಾಲದ ಯಶಸ್ಸಿಗೆ ಸಮುದಾಯಗಳ ನಡುವಿನ ಸೇತುವೆಯಾಗುವುದು ಅಗತ್ಯ; ಇಲ್ಲದಿದ್ದರೆ ಮತ ವಿಭಜನೆಯ ಆರೋಪಗಳು ಮುಂದುವರಿಯುತ್ತವೆ.

ಈ ಫಲಿತಾಂಶವು ಭಾರತೀಯ ಜನತಂತ್ರದ ಜೀವಂತತೆಯನ್ನು ತೋರಿಸುತ್ತದೆ. ಗೆಲುವು ಸಂಭ್ರಮಿಸುವುದರ ಜೊತೆಗೆ, ಸೋಲಿನಿಂದ ಪಾಠ ಕಲಿಯುವುದು ಎಲ್ಲಾ ಪಕ್ಷಗಳ ಕರ್ತವ್ಯ. ಸಮರ್ಥ್ ಶಾಮನೂರು ಅವರು ತಮ್ಮ ಯುವಕರ ಉತ್ಸಾಹ ಮತ್ತು ಕುಟುಂಬ ಪರಂಪರೆಯನ್ನು ಸಂಯೋಜಿಸಿ, ಎಲ್ಲಾ ವರ್ಗಗಳ ಜನರ ಸೇವೆಗೆ ಮುಂದಾಗಬೇಕು. ಕಾಂಗ್ರೆಸ್ ಅಂತರ್ಗತ ಏಕತೆಯನ್ನು ಬಲಪಡಿಸಬೇಕು. ಬಿಜೆಪಿ ಮತ್ತು ಎಸ್‌ಡಿಪಿಐ ತಮ್ಮ ತಂತ್ರಗಳನ್ನು ಪುನರ್ ಪರಿಶೀಲಿಸಿ, ಜನಕೇಂದ್ರಿತ ರಾಜಕೀಯಕ್ಕೆ ಮರಳಬೇಕು.

ದಾವಣಗೆರೆ ದಕ್ಷಿಣದ ಜನರು ಅಭಿವೃದ್ಧಿ ಮತ್ತು ಸಾಮರಸ್ಯವನ್ನು ಬಯಸುತ್ತಾರೆ. ಹೊಸ ಶಾಸಕರು ಈ ನಿರೀಕ್ಷೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ. ರಾಜಕೀಯವು ಸೇವೆಯಾಗಬೇಕೇ ವಿನಾ ಕುಟುಂಬ ಅಥವಾ ಸಮುದಾಯ ದ್ವೇಷದ ಆಟವಾಗಬಾರದು. ಈ ಉಪಚುನಾವಣೆಯ ಪಾಠಗಳು ರಾಜ್ಯದ ಭವಿಷ್ಯದ ಚುನಾವಣೆಗಳಿಗೆ ದಾರಿ ತೋರಿಸುತ್ತವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading
Advertisement

Title

ದಿನದ ಸುದ್ದಿ1 day ago

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು. ಚಲನಚಿತ್ರ ರಂಗ – 2005ರಲ್ಲಿ ‘ಬಾಯ್...

ದಿನದ ಸುದ್ದಿ2 days ago

ಬ್ಯಾಕ್‌ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹರಿಹರ ನಗರದ ಮಾತೃಶ್ರೀ ರುದ್ರಮಾಂಬಾ ಬಸವಾರ್ಯ ಪ್ರೌಢಶಾಲೆಯ ಕನ್ನಡ ಶಿಕ್ಷಕರ ಬ್ಯಾಕ್‌ಲಾಗ್ (ಪರಿಶಿಷ್ಟ ಜಾತಿ) ನೇಮಕಾತಿಯಲ್ಲಿನ ಅಕ್ರಮಗಳನ್ನು ತನಿಖೆಗೆ ಒಳಪಡಿಸಿ ಆಡಳಿತ ಮಂಡಳಿ...

ದಿನದ ಸುದ್ದಿ2 days ago

ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ, ನ್ಯಾಮತಿ ತಾಲ್ಲೂಕು ಇಲ್ಲಿನ ಪ್ರಾಂಶುಪಾಲರಾದ ನಾಗರಾಜ ಜಿ.ಎಂ...

ದಿನದ ಸುದ್ದಿ3 days ago

ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ

ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು...

ದಿನದ ಸುದ್ದಿ3 days ago

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ...

ದಿನದ ಸುದ್ದಿ3 days ago

ಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!

ಸುದ್ದಿದಿನ,ಕುಂಬಳೆ: ಪ್ರೀತಿ ಎನ್ನುವುದು ಸಾವಿನ ನಂತರವೂ ಶಾಶ್ವತ ಎಂಬುದಕ್ಕೆ ಕೇರಳದ ಕಾಸರಗೋಡಿನಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ನಿಶ್ಚಿತಾರ್ಥವಾಗಿದ್ದ ಯುವಕ ಮೃತಪಟ್ಟ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ...

ದಿನದ ಸುದ್ದಿ4 days ago

ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ ಡಿಪ್ಲೋಮಾ ಕೋರ್ಸ್‌; ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: 2026-27ನೇ ಶೈಕ್ಷಣಿಕ ಸಾಲಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿನ ಮೂರು ವರ್ಷಗಳ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಹಾಗೂ ಎರಡನೇ ವರ್ಷದ ನೇರ ಪ್ರವೇಶಕ್ಕೆ (Lateral Entry) ಅರ್ಹ...

ದಿನದ ಸುದ್ದಿ4 days ago

ದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ

ಸುದ್ದಿದಿನ,ದಾವಣಗೆರೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುತ್ತದೆ ಎಂಬುದಾಗಿ ಉಪನ್ಯಾಸಕರೊಬ್ಬರಿಗೆ ಆಮಿಷ ತೋರಿಸಿದ ದುಷ್ಕರ್ಮಿಗಳು 14 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಜಿಲ್ಲೆಯಲ್ಲಿ...

ಅಂಕಣ4 days ago

ಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ಮುನ್ನೋಟ: ಜೀವನಕ್ರಮವಾಗಿ ಪ್ರಜಾಪ್ರಭುತ್ವ ಪ್ರಜಾಪ್ರಭುತ್ವವು ಕೇವಲ ಐದು ವರ್ಷಕ್ಕೊಮ್ಮೆ ನಡೆಯುವ ಚುನಾವಣಾ ಪ್ರಕ್ರಿಯೆಯಲ್ಲ; ಅದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ...

ದಿನದ ಸುದ್ದಿ5 days ago

ಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ

ಸುದ್ದಿದಿನ,ದಾವಣಗೆರೆ:ಎ.ವಿ.ಕೆ. ಕಾಲೇಜು ಹಾಗೂ ಹಳೆ ಬಿಸ್ಲೇರಿ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎನ್.ಎಸ್.ಎಸ್. ವಿಶೇಷ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಅಧಿಕಾರಿಗಳಾದ ಉಪ್ಪಾರ...

Trending