Connect with us

ದಿನದ ಸುದ್ದಿ

ಒಬ್ಬರು ಈ ದೇಶದ ಮಹಾತ್ಮ ಇನ್ನೊಬ್ಬರು ಈ ದೇಶದ ಪುಣ್ಯಾತ್ಮ..!

Published

on


  • ಕೆ.ಶ್ರೀಧರ್ (ಕೆ.ಸಿರಿ)

ಕ್ಟೋಬರ್ ಎರಡು ಎಂದಾಕ್ಷಣ ನಮಗೆ ನೆನಪಾಗುವುದು ನಮಗೆ ಈ ದೇಶದ ಇಬ್ಬರು ವ್ಯಕ್ತಿಗಳು ನೆನಪಿಗೆ ಬರುತ್ತಾರೆ. ಒಬ್ಬರು ಈ ನಮ್ಮ ಭಾರತ ದೇಶವಷ್ಟೇ ಅಲ್ಲದೇ ಇಡೀ ವಿಶ್ವವನ್ನೇ ತನ್ನ ಅಹಿಂಸಾತ್ಮಕ ಮಾರ್ಗದ ಮೂಲಕ ಎದುರಿದ್ದವರ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದವರು ಮತ್ತು ತಮ್ಮ ಸಿದ್ದಾಂತಗಳ ಮೂಲಕ ತಮ್ಮತ್ತ ಸೆಳೆದವರು.

ಇನ್ನೂ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಡೀ ದೇಶಕ್ಕೆ ತಮ್ಮ ಪ್ರಾಮಾಣಿಕ ಮತ್ತು ಸರಳಾತ್ಮಕ ವ್ಯಕ್ತಿತ್ವದ ಮೂಲಕ ಸೆಳೆದವರು. ನಾಳೆ ಈ ಇಬ್ಬರು ಮಹಾನ್ ವ್ಯಕ್ತಿಗಳ ಜಯಂತಿ ಇಡೀ ಭಾರತವೇ ಈ ಮಹಾನ್ ಚೇತನಗಳ ಜಯಂತಿಯನ್ನು ತುಂಬಾ ಅರ್ಥಪೂರ್ಣವಾಗಿ ಆಚರಿಸುತ್ತದೆ.

ವಿಶೇಷವಾಗಿ ಇಂತಹ ಮಹಾನ್ ಚೇತನಗಳ ಜಯಂತಿಗಳು ಬಂದರೆ ಸಾಕು ನನಗೆ ನೆನಪಾಗುವುದು ನಮ್ಮ ಬಾಲ್ಯ ದಿನದ ಆ ಶಾಲಾ ದಿನಗಳು.ಶಾಲಾ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ಪ್ರಾಥಮಿಕ ಶಾಲಾ ದಿನಗಳು ನೆನಪಾಗುತ್ತವೆ. ನಮ್ಮ ಶಾಲಾ ಶಿಕ್ಷಕರು ಜಯಂತಿಯ ವಿಶೇಷವಾಗಿ ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸುತ್ತಿದ್ದರು ಈ ಮೂಲಕ ಇಂತಹ ಮಹಾನ್ ಚೇತನಗಳ ಅಭೂತಪೂರ್ವ ವ್ಯಕ್ತಿತ್ವದ ಪರಿಚಯ ನಮಗಾಗುತ್ತಿತ್ತು.

ಜಯಂತಿಗಳು ಆರಂಭವಾಗುವ ವಾರಕ್ಕೂ ಮೊದಲೆ ವಿಶೇಷ ಚಟುವಟಿಕೆಗಳ ತಯಾರಿ ಬಲು ಜೋರಿರುತ್ತಿತ್ತು. ನಮಗಂತೂ ಕುತೂಹಲವೋ ಕುತೂಹಲ ದಿನ ಸಂಜೆ ಸ್ಕೂಲಿಂದ ಮನೆಗೆ ಹೋಗಿ ಅಪ್ಪ ಅಮ್ಮಂದಿರ ಬಳಿ ಹೊಸ ಬಟ್ಟೆ ಹಾಗೂ ಚಾಕಲೇಟು,ನಿಂಬೆಹುಳಿ ಪೆಪ್ಪರಮೆಂಟು,ಶುಂಠಿ ಪೆಪ್ಪರರ್ಮೆಂಟು, ಈಗೇ ಇತ್ಯಾದಿಗಳನ್ನು ಕೊಡಿಸಬೇಕೆಂದು ತಾಕೀತು ಮಾಡುತ್ತಿದ್ದೆವು.

ಆ ಅಸಾಹಯಕ ಹಾಗೂ ಬಡತನದ ಪರಿಸ್ಥಿತಿಯಲ್ಲಿ ಇರುತ್ತಿದ್ದ ನಮ್ಮ ತಂದೆ ತಾಯಿಗಳು ಮನದಲ್ಲಿಯೇ ಯೋಚನೆ ಮಾಡುತ್ತಾ ನಿಟ್ಟುಸಿರು ಬಿಟ್ಟು ಹೇಗಾದರೂ ಮಾಡಿ ಹೊಸ ಬಟ್ಟೆ ಹೊಲಿಸಿ ಅಥವಾ ಇದ್ದ ಬಟ್ಟೆಗಳನ್ನೇ ಶುಭ್ರವಾಗಿ ತೊಳೆದು ನಮಗೆ ವ್ಯವಸ್ಥೆ ಮಾಡುತ್ತಿದ್ದರು. ಅಕ್ಟೋಬರ್ ಒಂದರ ಸಂಜೆಯಿಂದಲೇ ನಾಳೆ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಗೆ ಹೋಗುವ ತಯಾರಿ ಬಲು ಜೋರಿರುತ್ತಿತ್ತು.

ಕೆ.ಶ್ರೀಧರ್ (ಕೆ.ಸಿರಿ)

ಬೆಳಗ್ಗೆ ಕುತೂಹಲದಿಂದ ಬೆಳುಗಾ ಮುಂಜಾನೆ ಎದ್ದು ತಣ್ಣೀರೋ ಬಿಸಿ ನೀರೋ ಮೈಗೆರೆದಕೊಂಡು ಆಗಾಗ ನಮ್ಮ ಬೇಡಿಕೆಗಳೂ ಈಡೇರಿಲ್ಲವೆಂದು ಮುನಿಸಿಕೊಂಡು ನಸು ಅಳುತ್ತಲೇ ಹಳೆಯ ಬಿಳಿ ಬಟ್ಟೆಗಳನ್ನು ಕೆಂಡ ತುಂಬಿದ ಚೊಂಬಿನಿಂದಲೋ ಅಥವಾ ಬಿಸಿ ನೀರು ತುಂಬಿದ ಚೊಂಬಿನಿಂದಲೋ ಇಸ್ತ್ರಿ ಮಾಡಿಕೊಂಡು ಭಾರತದ ಬಾವುಟವನ್ನು ಕೈಯಲ್ಲಿ ಹಿಡಿಯುತ್ತಿದ್ದೆವು.

ಮುನಿಸಿಕೊಂಡಾಗ ಅಮ್ಮ ಕೊಟ್ಟ ಪುಡಿಗಾಸು ಕೈಯಲ್ಲಿಡಿದು ಮೂಗಲ್ಲಿ ಶೀತಕ್ಕೆ ಸುರಿದ ಗೊಣ್ಣೆಯ ಅಂಗಿಗೆ ತಿಕ್ಕುತಾ ಮೇಷ್ಟ್ರು ಬರೆದುಕೊಟ್ಟ ಭಾಷಣವ ಶಾಲೆಗೆ ಹೋಗುವಾಗ ದಾರಿಯ ಉದ್ದಗಲಕ್ಕೂ ಜೋರಾಗಿ ಹೊದರುತ್ತಾ ಗೆಳೆಯರೊಂದಿಗೆ ಗುದ್ದಾಡುತ್ತಾ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳನ್ನು ಕೈಯಲ್ಲಿಡಿದು ಪಿ.ಟಿ ಮೇಷ್ಟ್ರು ಮಾರ್ಗದರ್ಶನದಲ್ಲಿ ಡಂಬಲ್ಸ್ ಬಾರಿಸುತ್ತಾ ಊರೆಲ್ಲಾ ಒಂದು ರೌಂಡ್ ಹೊಡೆಯುತ್ತಿದ್ದೆವು.

ಶಾಲೆಯ ಹತ್ತಿರ ಬಂದು ಕೂತುಕೊಂಡು ಪ್ರಾರ್ಥನಾ ಗೀತೆ, ಸ್ವಾಗತ ಭಾಷಣ, ಜ್ಯೋತಿ ಬೆಳಗಿಸುವ ಕಾರ್ಯಕ್ರಮ, ನಮ್ಮ ಭಾಷಣ, ಮುಖ್ಯ ಅತಿಥಿಗಳ ಭಾಷಣವನ್ನು ಕೇಳಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜೀವನ ತಿಳಿದುಕೊಳ್ಳುತ್ತಿದ್ದೆವೂ ಕೊನೆಗೆ ಅಧ್ಯಕ್ಷೀಯ ಭಾಷಣ ಮುಗಿದ ನಂತರ ಕಾರ್ಯಕ್ರಮಕ್ಕೆ ವಂದನಾರ್ಪಣೆ ಹೇಳಿ ಹೆಡ್ ಮೇಸ್ಟ್ರು ಕೊಟ್ಟ ಪೆಪ್ಪರ್ಮೆಂಟ್ಗಳ ಪಡೆದು ಖುಷಿಯಾಗಿ ತಂತಮ್ಮ ಸೂರುಗಳಿನ್ನು ಸೇರುತ್ತಿದ್ದೆವು. ಈ ನಿಟ್ಟಿನಲ್ಲಿ ನೋಡುವುದಾದರೆ ಸರ್ಕಾರಿ ಕನ್ನಡ ಮಾಧ್ಯಮದ ಶಾಲೆಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಂತಿಯ ಕಾರ್ಯಮಗಳ ಮೆರಗು ಹಾಗೂ ಸಾರ್ಥಕತೆಯೇ ಚೆಂದದ ಬಂಧ.

ಮೋಹನ್‌ದಾಸ್ ಕರಮ್‌ ಚಂದ್ ಗಾಂಧಿಯವರು ಭಾರತೀಯ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ನಾಯಕ ಹಾಗೂ ಧೀಮಂತ ನಾಯಕ ಭಾರತೀಯ ಸ್ವಾತಂತ್ರ್ಯ ಆಂದೋಲನದ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಹಾಗೂ ಅಧ್ಯಾತ್ಮಿಕ ನಾಯಕರಾಗಿದ್ದರು. 2 ಅಕ್ಟೋಬರ್ 1869ರಲ್ಲಿ ಭಾರತದ ಇಂದಿನ ಗುಜರಾತ್‌ ರಾಜ್ಯದ ಕರಾವಳಿ ಪಟ್ಟಣ ಪೋರಬಂದರ್‌ನಲ್ಲಿ ಜನಿಸಿದರು.

ಅವರ ತಾಯಿ ಪುತಲೀಬಾಯಿಯವರು ತಂದೆ ಕರಮ್‌ಚಂದ್ ಭಾರತೀಯ ಮಹಾಕೃತಿಗಳಲ್ಲಿನ ಶ್ರವಣ ಮತ್ತು ಹರಿಶ್ಚಂದ್ರ ಮಹಾರಾಜರ ಕಥೆಗಳು ಬಾಲ್ಯಾವಸ್ಥೆಯಲ್ಲಿದ್ದ ಗಾಂಧಿಯವರ ಮೇಲೆ ಭಾರೀ ಪ್ರಭಾವ ಬೀರಿದ್ದವು.ಇಂಗ್ಲೆಂಡ್‌ನಲ್ಲಿರುವ ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌‌ನಲ್ಲಿ ಕಾನೂನು ಅಧ್ಯಯನ ಮಾಡಿ ನ್ಯಾಯವಾದಿಯಾಗಿ ತರಬೇತಿ ಪಡೆಯಲು ಗಾಂಧಿಯವರು ಲಂಡನ್‌ಗೆಪ್ರಯಾಣಿಸಿದರು.

ಅಹಿಂಸೆ ಅಥವಾ ಸಂಪೂರ್ಣ ಅಹಿಂಸೆಯ ಮೇಲೆ ದೃಢವಾಗಿ ರೂಪಿಸಲ್ಪಟ್ಟ ಸಾಮೂಹಿಕ ಅವಿಧೇಯತೆಯ ಮೂಲಕ ದಬ್ಬಾಳಿಕೆಗೆ ಪ್ರತಿರೋಧವನ್ನು ಒಡ್ಡುವ ಸತ್ಯಾಗ್ರಹ ದ ಪರಿಕಲ್ಪನೆಗೆ ಅವರು ಪಥ (ದಾರಿ)ನಿರ್ಮಾಪಕರಾಗಿದ್ದು, ಅದು ಭಾರತವನ್ನು ಸ್ವಾತಂತ್ರ್ಯದತ್ತ ಒಯ್ದಿತು ಹಾಗೂ ವಿಶ್ವಾದ್ಯಂತದ ನಾಗರಿಕ ಹಕ್ಕುಗಳ ಮತ್ತು ಸ್ವಾತಂತ್ರ್ಯ ಆಂದೋಲನ ಗಳಿಗೆ ಸ್ಫೂರ್ತಿ ನೀಡಿತು.

ಬ್ರಿಟಿಷರ ವಿರುದ್ಧ ಹಲವಾರು ಕ್ವಿಟ್ ಇಂಡಿಯಾ ಚಳುವಳಿ, ಅಸಹಕಾರ ಚಳವಳಿ ಅಲ್ಲದೇ ದಕ್ಷಿಣ ಆಫ್ರಿಕಾದಲ್ಲಿಯೂ ಸಹ ಹೋರಾಟ ಮಾಡಿದಂತಹ ಧೀಮಂತ ವ್ಯಕ್ತಿ ಅಹಿಂಸಾವಾದಿಗಳು ದೇಶಕ್ಕಾಗಿ ಹೋರಾಡಿದ ಮಹಾನ್ ಚೇತನವಾದಿಗಳು.ತಮ್ಮ ಜೀವನದುದ್ದಕ್ಕೂ ಶಾಂತಿಯನ್ನು ಪ್ರತಿಪಾದಿಸಿದ್ದ ಗಾಂಧೀಜಿಯವರು, ಸ್ವಾತಂತ್ರ್ಯ ನಂತರ ರಾಮರಾಜ್ಯದ ಬಗ್ಗೆ ಕನಸು ಕಂಡಿದ್ದರು.

ಗಾಂಧೀಜಿಯವರ ಪ್ರಕಾರ ರಾಮರಾಜ್ಯ ಎಂದರೆ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಸಮಾನತೆಯನ್ನು ಸಾರುವ ಸಮಾಜವಾಗಿತ್ತು. ಇಲ್ಲಿ ರಾಜ ಮತ್ತು ಪ್ರಜೆಗಳ ನಡುವೆ ಯಾವುದೇ ವ್ಯತ್ಯಾಸ ಇರುವುದಿಲ್ಲ, ಒಬ್ಬ ಸಾಮಾನ್ಯ ನಾಗರಿಕನು ತನಗೆ ಸಿಗಬೇಕಾದ ನ್ಯಾಯವನ್ನು ತ್ವರಿತವಾಗಿ ದೊರಕಿಸಿಕೊಳ್ಳಬಹುದು.

ಮಹಾತ್ಮ ಗಾಂಧಿಜಿಯವರು ಭಾರದ ಭವಿಷ್ಯ ಹಳ್ಳಿಗಳಲ್ಲಿದೆ ಎಂದು ತಿಳಿಸಿದ್ದರು ಆದರೆ ವಿಪರ್ಯಾಸವೆಂದರೆ ಇತ್ತೀಚಿನ ದಿನಗಳಲ್ಲಿ ಈ ರಾಜಕೀಯ ದೊಂಬರಾಟದಿಂದ ಹಳ್ಳಿಗಳ ಅಭಿವೃದ್ಧಿಗೆ ಯೊರೊಬ್ಬರು ಕೂಡ ಒತ್ತು ನೀಡುತ್ತಿಲ್ಲ ಬರೀ ಗುದ್ದಲಿ ಪೂಜೆ ಪೋಟೋಕ್ಕೊಂದು ಪೋಜು ಆಗಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.

ನಮ್ಮ ದೇಶ ನಿಜವಾಗಿಯೂ ಸ್ವಾತಂತ್ರವಾಗುವುದು ಒಂದು ಹೆಣ್ಣು ಮಧ್ಯ ರಾತ್ರಿ 12 ಗಂಟೆಗೆ ನಿರ್ಭಯವಾಗಿ ಓಡಾಡಲು ಸಾಧ್ಯವಾಗದ ಮಾತ್ರ ಎಂಬುದು ಗಾಂಧಿಜೀಯವರ ಕನಸ್ಸಾಗಿತ್ತು ಇತ್ತೀಚಿನ ದಿನಗಳಲ್ಲಿ ಹಾಡುಹಗಲಲ್ಲೇ ಮಹಿಳೆಯರು ಅತ್ಯಾಚಾರಕ್ಕೆ ತುತ್ತಾಗುತ್ತಿರುವುದು ದುರ್ದೈವ ಸಂಗತಿಯಾಗಿದೆ.

2015 ರಲ್ಲಿ34,651, 2016 ರಲ್ಲಿ 38,947, 2017 ರಲ್ಲಿ 32,559,. 2018 ರಲ್ಲಿ 33,356, 2019 ರಲ್ಲಿ 32,500 ಕ್ಕೂ ಹೆಚ್ಚು ಹಾಗೂ ನಿನ್ನೆ ಉತ್ತರ ಪ್ರದೇಶದ 19 ವರ್ಷದ ಮನೀಷಾ ವಾಲ್ಮೀಕಿ ರವರನ್ನ ಸಾಮೂಹಿಕ ಅತ್ಯಚಾರವೆಸಗಿ ನಾಲಿಗೆ ಕತ್ತರಿಸಿ ಕೈಕಾಲು ಮುರಿದು ಕೊಂದಿರುವ ಘಟನೆ ಮತ್ತು ಅದೇ ಉತ್ತರ ಪ್ರದೇಶದ ಬಲರಾಮಪುರ್ ದ 14 ನೇ ವರ್ಷದ ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾರವೆಸಗಿ ಕೊಲೆಗೈದಿದ್ರಾರೆ.

ನಿಜಕ್ಕೂ ಎತ್ತ ಸಾಗುತ್ತಿದೆ ನಮ್ಮ ಬದುಕು ಈಗಿರುವ ಅತ್ಯಾಚಾರದ ವಿರುದ್ಧದ ಕಾನೂನುಗಳು ಕಾಗದದ ಕುದುರೆಗಳಾಗಿವೆ ಹೀಗಾದರೆ ಹೇಗೆ ಗಾಂಧೀಜಿ ಕಂಡ ರಾಮರಾಜ್ಯದ ಕನಸು ನನಸ್ಸಾಗುವುದು??? ಇನ್ನಾದರೂ ರಾಜಕೀಯ ಪಕ್ಷಗಳು ರಾಜಕೀಯ ದೊಂಬರಾಟ ಬಿಟ್ಟು ಜ್ವಲಂತ ಸಮಸ್ಯೆಗಳತ್ತ ಗಮನಹರಿಸಬೇಕಾಗಿದೆ.

ಲಾಲ್ ಬಹಾದುರ್ ಶಾಸ್ತ್ರಿ
ಭಾರತದ ಎರಡನೆಯ ಪ್ರಧಾನಮಂತ್ರಿ.ಜನನ: ಅಕ್ಟೋಬರ್ 02- 1904, ಮರಣ: ಜನವರಿ 11, 1966,ಜನಿಸಿದ ಸ್ಥಳ:ಮೊಘಲ್‌ಸಾರಾಯ್, ಉತ್ತರ ಪ್ರದೇಶ.1921ರಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು.

9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.ಇವರು ಬಹುಶಃ ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.

ಆ ಕಾಲದಲ್ಲಿಯೇ ಲಾಲ್ ಬಹದ್ದೂರ್ ಶಾಸ್ತ್ರಿಯವರು ಸರ್ಕಾರಕ್ಕೆ ನನಗೆ ನೀಡುವ ವೇತನ ಜಾಸ್ತಿಯಿದೆ ದಯವಿಟ್ಟು ವೇತನವನ್ನು ಕಡಿಮೆ ಮಾಡಿ ಎಂದು ಪತ್ರ ಬರೆದ ಮಹಾನ್ ಚೇತನವಾದಿ.ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲ ಭಾರ ಅಧಿಕವಾಯಿತು.

ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ. ಇದು ‘ಶಾಸ್ತ್ರಿ ಸೋಮವಾರವೆಂದೇ’ ಪ್ರತೀತಿ ಇದೆ.. ಇವರ ಜನಪ್ರಿಯತೆ ಹೊಂದಿದೆ. ಇಂತಹ ಇಬ್ಬರು ಮಹಾನ್ ಚೇತನವಾದಿಗಳು ಒಬ್ಬರು ಮಹಾತ್ಮರಾದರೆ ಇನ್ನೊಬ್ಬರೂ ಭಾರತ ಕಂಡ ಪುಣ್ಯಾತ್ಮರು ಎಂಬುದು ನನ್ನ ಅಭಿಮತ.

ಕೆ.ಶ್ರೀಧರ್ (ಕೆ.ಸಿರಿ)
ಮೊಬೈಲ್: 9741270125

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್

Published

on

ಸುದ್ದಿದಿನ,ದಾವಣಗೆರೆ: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಣಿವೆಬಿಳಚಿ ಗ್ರಾಮದ ವಿದ್ಯಾರ್ಥಿ ಭರತ್ ಜಿ. ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

625ಕ್ಕೆ 625 ಅಂಕಗಳನ್ನು ಪಡೆದ ಭರತ್ ಅವರು ಕಬ್ಬಳ ಗ್ರಾಮದ ವಿದ್ಯಾಲಕ್ಷ್ಮಿ ಇಂಗ್ಲಿಷ್ ಮೀಡಿಯಂ ಪ್ರೌಢಶಾಲೆಯ ವಿದ್ಯಾರ್ಥಿ. ರಾಜ್ಯದ ಇತರ ಐದು ವಿದ್ಯಾರ್ಥಿಗಳೊಂದಿಗೆ ಅಗ್ರಸ್ಥಾನವನ್ನು ಭರತ್ ಅವರು ಹಂಚಿಕೊಂಡಿದ್ದಾರೆ. ಭರತ್ ಅವರ ತಂದೆ ಗಿರೀಶ್ ಕೃಷಿ ಹಾಗೂ ಗುತ್ತಿಗೆ ದಾರರು, ತಾಯಿ ಶಿಲ್ಪ ಗೃಹಿಣಿ.

ಗ್ರಾಮೀಣ ಭಾಗದಿಂದ ಬಂದ ಭರತ್ ರಾಜ್ಯಕ್ಕೆ ಟಾಪರ್ ಆಗಿ ದೊಡ್ಡ ಸಾಧನೆ ಮಾಡಿದ್ದಾರೆ.ನಮ್ಮ ಶಾಲೆಯು ಎರಡು ಬಾರಿ ಜಿಲ್ಲೆಗೆ ಹಾಗೂ ಎರಡು ಬಾರಿ ತಾಲ್ಲೂಕಿಗೆ ಟಾಪ‌ರ್ ಆಗಿತ್ತು. ಇದೀಗ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ನಿರಂತರವಾಗಿ ಸಾಧನೆ ಮಾಡುತ್ತಿದ್ದು ಈ ಬಾರಿಯೂ ಶೇ 100ರಷ್ಟು ಫಲಿತಾಂಶ ನೀಡಿದೆ ಎಂದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಿ ಎ.ಎನ್ ಹರ್ಷ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆ ಎಸ್ ಎಸ್ ಎಲ್ ಸಿ ಫಲಿತಾಂಶ

Published

on

ಸುದ್ದಿದಿನ,ಬೆಂಗಳೂರು : ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಗುರುವಾರ (ಮೇ 23) ಮಧ್ಯಾಹ್ನ 12ಕ್ಕೆ ಪ್ರಕಟಿಸಲಾಗುತ್ತದೆ.

ಫಲಿತಾಂಶವನ್ನು ವೆಬ್‌ಸೈಟ್ (https://karresults.nic.in) ಲಿಂಕ್ ಮೂಲಕ ಹಾಗೂ KarnatakaOne mobile app ಮೂಲಕವೂ ಪಡೆಯಬಹುದಾಗಿದೆ. ಅಲ್ಲದೆ, ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ಗೆ ವಾಟ್ಸ್‌ಆ್ಯಪ್/ ಎಸ್‌ಎಂಎಸ್‌ ಮೂಲಕ ಫಲಿತಾಂಶದ ಮಾಹಿತಿಯನ್ನು ಮಂಡಳಿಯಿಂದ ರವಾನಿಸಲಾಗುತ್ತದೆ.

ಈ ವರ್ಷ ಪ್ರಥಮ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್‌ (https://www.digilocker.gov.in) ಮೂಲಕ ಲಭ್ಯಗೊಳಿಸಲಾಗುತ್ತದೆ. ಈ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ಪಟ್ಟಿಯನ್ನು ಸಂಬಂಧಿತ ಶಾಲೆಗಳಿಗೆ ಮಧ್ಯಾಹ್ನ 12 ಗಂಟೆಗೆ ಲಭ್ಯಗೊಳಿಸಲಾಗುವುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಆದರೆ ತಮ್ಮ ಶ್ರೇಣಿಗಳ ಬಗ್ಗೆ ಅತೃಪ್ತರಾಗಿರುವ ವಿದ್ಯಾರ್ಥಿಗಳು ಮಂಡಳಿಯು ಏರ್ಪಡಿಸಿದ ಕರ್ನಾಟಕ SSLC ಸುಧಾರಣಾ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ. ಇದು ನಿರ್ದಿಷ್ಟ ವಿಷಯಗಳಲ್ಲಿ ಅಂಕಗಳನ್ನು ಸುಧಾರಿಸಲು ಅವಕಾಶವನ್ನು ನೀಡುತ್ತದೆ.

ಒಂದು ಅಥವಾ ಹೆಚ್ಚಿನ ವಿಷಯಗಳಲ್ಲಿ ಒಬ್ಬ ವಿದ್ಯಾರ್ಥಿ ಅನುತ್ತೀರ್ಣನಾದರೆ, ಅವರು ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದೆ ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಳೆ ಸಸಿಗಳ ಮಾರಾಟ : ಸಂಪರ್ಕಿಸಿ

Published

on

ಸುದ್ದಿದಿನ,ದಾವಣಗೆರೆ: ಉತ್ತಮ ಗುಣಮಟ್ಟದ ಜಿ-9 ತಳಿಯ ಅಂಗಾಂಶ ಕೃಷಿ ಬಾಳೆಗಳನ್ನು ಕೃಷಿ ಇಲಾಖೆ ಮಾರಾಟ ಮಾಡಲಾಗುತ್ತಿದೆ.

ಆಸಕ್ತ ರೈತರು ಸಹಾಯಕ ತೋಟಗಾರಿಕಾ ಅಧಿಕಾರಿ, ಅಂಗಾಂಶ ಕೃಷಿ ಬಾಳೆ, ಜೈವಿಕ ಕೇಂದ್ರ, ಎಪಿಎಂಸಿ ಈ ಬ್ಲಾಕ್, ಹಣ್ಣಿನ ಮಾರುಕಟ್ಟೆ ಹತ್ತಿರ ಮೊ.ಸಂ:6360950904, 8192296196 ಸಂಪರ್ಕಿಸಿ ಇಲಾಖೆ ದರದಲ್ಲಿ ಬಾಳೆಸಸಿಗಳನ್ನು ಕೊಂಡುಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending