Connect with us

ದಿನದ ಸುದ್ದಿ

ಹರಿಹರ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರ

Published

on

ಸುದ್ದಿದಿನ,ದಾವಣಗೆರೆ: ಮೇ 31 ರಂದು ನಡೆದ ಮತ ಎಣಿಕೆ ನಂತರ ಹರಿಹರ ನಗರಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿದೆ.

ಮ್ಯಾಜಿಕ್ ನಂಬರ್ 16 ಪಡೆಯುವಲ್ಲಿ ಯಾವ ಪಕ್ಷವೂ ಸಫಲವಾಗಿಲ್ಲ. 14 ಸ್ಥಾನಗಳನ್ನು ಗೆಲ್ಲುವ ಮೂಲಕ ಜೆ.ಡಿ.ಎಸ್. ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, 10 ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಭಾರತೀಯ ಜನತಾ ಪಕ್ಷ 5 ಸ್ಥಾನ ಪಡೆದರೆ ಈ ಮಧ್ಯೆ ಪಕ್ಷೇತರರಿಬ್ಬರು ಜಯಭೇರಿ ಬಾರಿಸಿದ್ದಾರೆ.

31 ವಾರ್ಡ್‌ಗಳಿಗೆ ಮೇ 29 ರಂದು ಮತದಾನ ನಡೆದಿದ್ದು, ಮೇ 31 ರಂದು ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಿ, 11 ಗಂಟೆ ಸುಮಾರಿಗೆ ಪೂರ್ಣ ಚಿತ್ರಣ ಹೊರಬಂದಿತ್ತು. ಹರಿಹರ ನಗರಸಭೆಯ 1ನೇ ವಾರ್ಡ್ ಹರ್ಲಾಪುರದಿಂದ ಜನತದಾದಳ (ಜಾತ್ಯತೀತ) ಪಕ್ಷದ ಜಂಬಣ್ಣ 807 ಮತಗಳಿಂದ ಜಯ ಸಾಧಿಸಿದ್ದಾರೆ.

ಇವರ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ಎಂ.ಮಂಜುನಾಥ, 2ನೇ ವಾರ್ಡ್ ಎ.ಕೆ ಕಾಲೋನಿಯಿಂದ ಜನತಾದಳ(ಜಾ) ಪಕ್ಷದ ಪಿ.ಎನ್ ವಿರುಪಾಕ್ಷ 533 ಮತಗಳನ್ನು ಪಡೆದು ಜಯಶಾಲಿಯಾಗಿದ್ದು, ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎಸ್.ಎಸ್. ಆನಂದಕುಮಾರ್, 3ನೇ ವಾರ್ಡ್ ಆಶ್ರಯ ಕಾಲೋನಿಯಿಂದ ಬಿಜೆಪಿ ಪಕ್ಷದ ಆಟೋ ಹನುಮಂತಪ್ಪ 364 ಮತಗಳಿಂದ ಜಯಶಾಲಿಯಾಗಿದ್ದು, ಇವರ ಸಮೀಪ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಹನುಮಂತಪ್ಪ.

4ನೇ ವಾರ್ಡ್ ವಿಜಯನಗರ ಬಡಾವಣೆಯಿಂದ ಬಿಜೆಪಿ ಪಕ್ಷದ ಎನ್.ರಂಜಿನಿಕಾಂತ್ 616 ಮತ ಪಡೆಯುವುದರ ಮೂಲಕ ವಿಜಯಿಯಾಗಿದ್ದು, ಜನತಾದಳ(ಜಾ) ಪಕ್ಷದ ಸಮೀಪದ ಪ್ರತಿಸ್ಪರ್ಧಿ ಸದಾಶಿವ, 5ನೇ ವಾರ್ಡ್ ಕೆ.ಆರ್.ನಗರದಿಂದ 554 ಮತಗಳಿಂದ ಕಾಂಗ್ರೆಸ್ ಪಕ್ಷದಿಂದ ನಾಗರತ್ನಪ್ಪ ದೀಪ ಜಯಶೀಲರಾಗಿದ್ದು ಅವರ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಡಿ.ವೈ ಇಂದಿರಾ ಮಂಜುನಾಥ 6ನೇ ವಾರ್ಡ್ ಮಹಾಲಿಂಗಪ್ಪ ಬಡಾವಣೆಯಿಂದ 426 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಸೈಯದ್ ಅಬ್ದುಲ್ ಅಲೀಂ ಜಯಶಾಲಿಯಾಗಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಯ ಕೀರ್ತಿ ಕುಮಾರ್ ಹೆಚ್.ಸಿ ಆಗಿದ್ದರು.

7ನೇ ವಾರ್ಡ್ ಗಾಂಧಿನಗರದಿಂದ ಪೆಕ್ಷೇತರ ಅಭ್ಯರ್ಥಿ ಇಬ್ರಾಹಿಂ 869 ಮತಗಳನ್ನು ಪಡೆಯುವ ಮೂಲಕ ಜಯ ಪಡೆದಿದ್ದಾರೆ. ಇವರ ಸಮೀಪದ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಬಿ.ಕೆ.ಸೈಯದ್ ಬಾಷಾ. 8ನೇ ವಾರ್ಡ್ ತೆಗ್ಗಿನಕೇರಿಯಿಂದ ಬಿಜೆಪಿ ಯ ಕೆ.ಜಿ.ಸಿದ್ದೇಶ್ 1221 ಮತಗಳನ್ನು ಪಡೆಯುವ ಮೂಲಕ ಜಯ ಸಾಧಿಸಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಜನತಾದಳ(ಜಾ) ಪಕ್ಷದ ಶೇಖರ ಗೌಡ ಆಗಿದ್ದರು.

9ನೇ ವಾರ್ಡ್ ಭರಂಪುರದಿಂದ ಜನತಾದಳ(ಜಾ) ಪಕ್ಷದ ಮಹಿಳಾ ಅಭ್ಯರ್ಥಿ ನಿಂಬಕ್ಕ ಚಂಬಾಪುರ 1148 ಮತಗಳನ್ನು ಪಡೆದು ಜಯ ಸಾಧಿಸಿದ್ದು, ಇವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಶ್ವಿನಿ ಗುತ್ಯಪ್ಪ ಆಗಿದ್ದರು. 10ನೇ ವಾರ್ಡ್ ಭಾರತ್ ಮಿಲ್ ಕಾಂಪೌಂಡ್‌ನಿಂದ ಜನತಾದಳ(ಜಾ) ಪಕ್ಷದಿಂದ ಎಂ.ಆರ್.ಮುಜಾಮಿಲ್ 626 ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾಗಿದ್ದು ಇವರ ಸಮೀಪದ ಪ್ರತಿಸ್ಫರ್ಧಿ ಬಿಜೆಪಿ ಮಾರುತಿ ಬಿ ಆಗಿದ್ದರು.

11 ನೇ ವಾರ್ಡ್ ಟಿಪ್ಪುನಗರದಿಂದ ಕಾಂಗ್ರೆಸ್ ಪಕ್ಷದ ಮಹಿಳಾ ಅಭ್ಯರ್ಥಿ ಸುಮಿತ್ರ ಕೆ.ಮರಿದೇವಪ್ಪ 943 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದು ಇವರ ಸಮೀಪದ ಪ್ರತಿಸ್ಪರ್ಧಿ ಜನತಾ ದಳ ಪಕ್ಷದ ಹೆಚ್.ಮಂಜುಳ. 12 ನೇ ವಾರ್ಡ್ ಅಮರಾವತಿಯಿಂದ ಬಿಜೆಪಿ ಪಕ್ಷದಿಂದ ಬಿ.ಎಂ ವಿಜಯಕುಮಾರ್ 669 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದು ಇವರ ಸಮೀಪದ ಪ್ರತಿಸ್ಪರ್ಧಿ ಜನತಾದಳ(ಜಾ) ಪಕ್ಷದ ಕೆ.ಹೆಚ್.ಯೋಗೇಶಪ್ಪ ಆಗಿದ್ದರು.

13ನೇ ವಾರ್ಡ್ ಜೈಭೀಮನಗರ ಜನತಾದಳ(ಜಾ) ಪಕ್ಷದ ಆರ್.ದಿನೇಶ್ ಬಾಬು 673 ಮತಗಳಿಂದ ಜಯಶಾಲಿಯಾಗಿದ್ದು ಕಾಂಗ್ರೆಸ್ ಪಕ್ಷದ ರಾಘವೇಂದ್ರ ಅಶೋಕ್ ಓಲೇಕಾರ್ ಇವರು ಸಮೀಪದ ಪ್ರತಿಸ್ಪಧಿಯಾಗಿದ್ದರು. 14 ನೇ ವಾರ್ಡ್ ಕಾಳಿದಾಸನಗರ ಕಾಂಗ್ರೆಸ್ ಪಕ್ಷದಿಂದ ಮೆಹಬೂಬ್ ಬಾಷಾ ಆರ್ 533 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸೈಯದ್ ಏಜಾಜ್ ವಿರುದ್ದ ಜಯ ಸಾಧಿಸಿದ್ದಾರೆ.

15 ನೇ ವಾರ್ಡ್ ಬಹಾರ್ ಮಖಾನ್‌ನಿಂದ ಜನತಾದಳ(ಜಾ) ಪಕ್ಷದ ಮಹಿಳಾ ಅಭ್ಯರ್ಥಿ ರೇಷ್ಮಾ ಬಾನು 610 ಮತಗಳನ್ನು ಪಡೆಯವ ಮೂಲಕ ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಲತಾಶ್ರೀ ವೀರಾಚಾರ ವಿರುದ್ದ ಜಯ ಗಳಿಸಿದ್ದಾರೆ. 16 ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಮಹಿಳಾ ಅಭ್ಯರ್ಥಿ ಫಕೀರಮ್ಮ 829 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಜನತಾ ದಳದ ಬಿ.ಐ ಮಮತಾ ಮುಂದೆ ಜಯ ಸಾಧಿಸಿದ್ದಾರೆ.

17ನೇ ವಾರ್ಡ್ ಹೊಸಪೇಟೆ ಬೀದಿಯಿಂದ ಜನತಾದಳ(ಜಾ)ದ ಲಕ್ಷ್ಮೀ ಮೋಹನ್ ದುರುಗೋಜಿ ಇವರು 741 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿ ಸ್ಪರ್ಧಿ ಕಾಂಗ್ರೆಸ್‌ನ ಸುನಂದ ಪಕ್ಕೀರಸಾ ಭೂತೆ ರ ವಿರುದ್ದ ಜಯಗಳಿಸಿದ್ದಾರೆ. 18 ನೇ ವಾರ್ಡ್ ಇಮಾಂ ಮೊಹಲ್ಲಾದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಂಕರ್ ಖಟಾವ್‌ಕರ್ 825 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾದಳ(ಜಾ)ದ ಹೆಚ್.ಅಬ್ದುಲ್ ರೆಹಮಾನ್ ಖಾನ್ ರ ವಿರುದ್ದ ಜಯ ಸಾಧಿಸಿದ್ದಾರೆ.

19ನೇ ವಾರ್ಡ್ ಹಳ್ಳದಕೇರಿಯಿಂದ ಜನತಾದಳ(ಜಾ) ಪಕ್ಷದ ನೂರ್‌ಸಭಾ 834 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಪಕ್ಷದ ಆಶಾ ರವೀಂದ್ರ ವಿರುದ್ದ ಗೆಲುವು ಪಡೆದಿದ್ದಾರೆ. 20 ನೇ ವಾರ್ಡ್ ಕುಂಬಾರ ಓಣಿಯಿಂದ ಜನತಾದಳ(ಜಾ)(ಜಾ) ರತ್ನ ಡಿ.ಯು 779 ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಿ ಸುಜಾತ ಇವರ ವಿರುದ್ದ ಜಯಶಾಲಿಯಾಗಿದ್ದಾರೆ.

21ನೇ ವಾರ್ಡ್ ಜೆಸಿಆರ್ ಬಡಾವಣೆ-1 ರಿಂದ ಬಿಜೆಪಿಯ ನೀತಾ ಇವರು 663 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಶಹಜಾದ್ ಎಸ್.ಕೆ ಇವರ ವಿರುದ್ದ ಗೆಲುವು ಸಾಧಿಸಿದ್ದಾರೆ. 22ನೇ ವಾರ್ಡ್ ಜೆಸಿಆರ್ ಬಡಾವಣೆ-2 ರಿಂದ ಜನತಾದಳ(ಜಾ)(ಜಾ)ದ ಜಮಾಲುದ್ದೀನ್ 660 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹುಲಿಗೆಪ್ಪ ಸಿ ಎನ್ ಇವರ ವಿರುದ್ದ ಗೆಲುವು ಸಾಧಿಸಿದ್ದಾರೆ.

23ನೇ ವಾರ್ಡ್ ರಾಜಾರಾಂ ಕಾಲೋನಿಯಿಂದ ಕಾಂಗ್ರೆಸ್ ಪಕ್ಷದ ಎಂ.ಬಾಬುಲಾಲ್ 962 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾದಳ(ಜಾ)(ಜಾ)ದ ಹಾಜೀ ಅಲಿ ಖಾನ್ ವಿರುದ್ದ ಜಯ ಗಳಿಸಿದ್ದಾರೆ. 24 ವಾರ್ಡ್ ಬೆಂಕಿನಗರದಿಂದ ಕಾಂಗ್ರೆಸ್ ಪಕ್ಷದ ಶಾಹಿನಾ ಬಾನು 554 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಸೈಯದಾ ಅನಿಸಾ ಇವರು ವಿರುದ್ದ ಗೆಲುವು ಸಾಧಿಸಿದ್ದಾರೆ.
25 ನೇ ವಾರ್ಡ್ ಪ್ರಶಾಂತ್ ನಗರದಿಂದ ಜನತಾದಳ(ಜಾ)(ಜಾ)ದ ದಾದಾ ಖಲಂದರ್ ಇವರು 776 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸಂತೋಷ್‌ಕುಮಾರ್ ಎಂ ವಿರುದ್ದ ಗೆಲುವು ಸಾಧಿಸಿದ್ದಾರೆ. 26 ನೇ ವಾರ್ಡ್ ಜೆಸಿಆರ್ ಬಡಾವಣೆ -3 ರಿಂದ ಜನತಾದಳ(ಜಾ)(ಜಾ)ದ ವಾಮನಮೂರ್ತಿ ಎ ಇವರು 506 ಮತಗಳನ್ನು ಪಡೆಯುವ ಮೂಲಕ ವಿಜಯಶಾಲಿಯಾಗಿದ್ದು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಅಜೀಜ್ ಮೇಸ್ತ್ರಿಯವರನ್ನು ಸೋಲಿಸಿದ್ದಾರೆ.

27ನೇ ವಾರ್ಡ್ ಜೆಸಿಆರ್ ಬಡಾವಣೆ-4 ರಿಂದ ಜನತಾದಳ(ಜಾ)(ಜಾ)ದ ಉಷಾ ಮಂಜುನಾಥ್ 544 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ರೋಹಿಣಿ ರಾಜು ಐರಣಿ ವಿರುದ್ದ ಜಯ ಗಳಿಸಿದ್ದಾರೆ. 28 ವಾರ್ಡ್ ಸುಣಗಾರ ಬೀದಿಯಿಂದ ಪಕ್ಷೇತರ ಅಭ್ಯರ್ಥಿ ಪಾರ್ವತಮ್ಮ ಐರಣಿ 582 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ನಾಗರತ್ನಮ್ಮರ ವಿರುದ್ದ ಗೆಲುವು ಸಾಧಿಸಿದ್ದಾರೆ.

29ನೇ ವಾರ್ಡ್ ಗಂಗಾನಗರದಿಂದ ಕಾಂಗ್ರೆಸ್ ಪಕ್ಷದ ಎಸ್.ಎಂ.ವಸಂತ್ 754 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಮೋಹನ್ ಹೆಚ್. ವಿರುದ್ದ ಜಯ ಗಳಿಸಿದ್ದಾರೆ. 30 ವಾರ್ಡ್ ವಿದ್ಯಾನಗರದಿಂದ ಬಿಜೆಪಿ ಪಕ್ಷದ ಮಹಿಳಾ ಅಭ್ಯರ್ಥಿ ಅಶ್ವಿನಿ ಕೃಷ್ಣ ಇವರು 530 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಗೀತಾ ವಿಶ್ವನಾಥ ಭೂತೆ ವಿರುದ್ದ ಗೆಲುವು ಸಾಧಿಸಿದ್ದಾರೆ. ಹಾಗೂ 31 ನೇ ವಾರ್ಡ್ ಇಂದಿರಾನಗರದಿಂದ ಜನತಾದಳ(ಜಾ)ಕವಿತಾ ಮಾರುತಿ ಬೇಡರ್ 807 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಾಧವಿ ಉಮೇಶ್ ತುಂಬಿದಮನೆ ಇವರ ವಿರುದ್ದ ಗೆಲುವು ಸಾಧಿಸಿದ್ದಾರೆ.

ಅಂಚೆಮತಗಳು : 03 ಅಂಚೆ ಮತಗಳನ್ನು ಸ್ವೀಕರಿಸಲಾಗಿದ್ದು ಇವುಗಳಲ್ಲಿ 02 ಮಾತ್ರ ಕ್ರಮಬದ್ದವಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ರಾಮೀಣ ಅಂಚೆ ಪಾಲಕ-ಸೇವಕರ ನೇಮಕಾತಿ ; ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‍ಸೈಟ್ www.indiapostgdsonline.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಆಗಸ್ಟ್ 5 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಈ ಎಲ್ಲ ಹುದ್ದೆಗಳಿಗೆ 10 ನೇ ತರಗತಿ ತೇರ್ಗಡೆ ಕಡ್ಡಾಯ. ಗಣಿತ ಮತ್ತು ಇಂಗ್ಲಿಷ್‍ನಲ್ಲಿ ಕನಿಷ್ಟ ತೇರ್ಗಡೆ ಅಂಕ ಹೊಂದಿರಬೇಕು. ಕನ್ನಡವನ್ನು ಹತ್ತನೇ ತರಗತಿಯಲ್ಲಿ ಒಂದು ಭಾಷೆಯಾಗಿ ಅಧ್ಯಯನ ಮಾಡಿರಬೇಕು.

ಅಭ್ಯರ್ಥಿಯ ವಯೋಮಿತಿ 18 ರಿಂದ 40 ವರ್ಷ. ಅಂಕಗಳ ಆಧಾರದಲ್ಲಿ ಆಯ್ಕೆ ನಡೆಯುವುದು. ಶಿವಮೊಗ್ಗ ಅಂಚೆ ವಿಭಾಗದಲ್ಲಿ 89 ಹುದ್ದೆಗಳು ಖಾಲಿ ಇವೆ. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ ಅಂಚೆ ವಿಭಾಗದ ಸಂಪರ್ಕ ಸಂಖ್ಯೆ : 08182-222516 ಹಾಗೂ ಆಯಾ ವಿಭಾಗದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನೀಟ್ ಯುಜಿ 2024 | ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

Published

on

ಸುದ್ದಿದಿನಡೆಸ್ಕ್:ನೀಟ್ ಯುಜಿ 2024ರ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೇ 20ರ ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ತಮ್ಮ ಜಾಲತಾಣದಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ-ಎನ್‌ಟಿಎ ಗೆ ನಿರ್ದೇಶನ ನೀಡಿದೆ.

ನೀಟ್ ಯುಜಿ ಪರೀಕ್ಷೆ ವಿಚಾರವಾಗಿ ಪ್ರಶ್ನೆಪತ್ರಿಕೆ ಸೋರಿಕೆ, ದುರ್ಬಳಕೆ, ವಿವಾದಾತ್ಮಕ ಕೃಪಾಂಕ ನೀಡಿಕೆ ಸೇರಿದಂತೆ ಹಲವು ರೀತಿಯ ಪರೀಕ್ಷಾ ಅಕ್ರಮಗಳ ಆರೋಪಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು, ಅಭ್ಯರ್ಥಿಗಳ ಗುರುತನ್ನು ಮರೆಮಾಚಬೇಕು ಹಾಗೂ ನಗರವಾರು ಮತ್ತು ಕೇಂದ್ರವಾರು ಫಲಿತಾಂಶವನ್ನು ಪ್ರಕಟಿಸುವಂತೆ ಎನ್‌ಟಿಎ ಗೆ ಸೂಚಿಸಿದೆ.

ಇದಕ್ಕೂ ಮುನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿಯವರೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಿಬಿಐ ತನ್ನ ಎರಡನೆಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠವು, ಪರೀಕ್ಷೆಯ ಪಾವಿತ್ರ‍್ಯತೆಗೆ ಧಕ್ಕೆಯಾಗಿದೆ ಎಂಬ ಅಂಶವನ್ನು ಒತ್ತಿಹೇಳಿತು. ಆದಾಗ್ಯೂ, ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ನಿರ್ಧಾರವು 23 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಜೀವನದ ಮೇಲೆ ಪರಿಣಾಮ ಬೀರುವುದರಿಂದ ಇದು ಕೊನೆಯ ಉಪಾಯವಾಗಿದೆ ಎಂದು ಹೇಳಿದೆ.

ಇನ್ನೊಂದೆಡೆ, ನೀಟ್ ಪ್ರವೇಶ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಇಂದು ಪಾಟ್ನಾದ ಏಮ್ಸ್ ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದೆ. ಬಂಧನಕ್ಕೊಳಗಾಗಿರುವ ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸ್ನ ಎರಡನೇ ಮತ್ತು ಮೂರನೇ ವರ್ಷದಲ್ಲಿದ್ದಾರೆ ಎಂದು ಏಮ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ.ಕೆ.ಪಾಲ್ ತಿಳಿಸಿದ್ದಾರೆ.

ಬಂಧಿತ ವಿದ್ಯಾರ್ಥಿಗಳ ಲ್ಯಾಪ್‌ಟಾಪ್‌ಗಳನ್ನು ಸಂಸ್ಥೆ ವಶಪಡಿಸಿಕೊಂಡಿದೆ ಮತ್ತು ಅವರ ಕೊಠಡಿಗಳನ್ನು ಸೀಲ್ ಮಾಡಿದೆ. ಸಿಬಿಐ ಈ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಾಳೆಯಿಂದ ವೀಸಾ ಮುಕ್ತ ನೀತಿ

Published

on

ಸುದ್ದಿದಿನಡೆಸ್ಕ್:35 ಯುರೋಪಿಯನ್ ರಾಷ್ಟ್ರಗಳಿಗೆ ವೀಸಾ ಮುಕ್ತ ನೀತಿ ಪರಿಚಯಿಸುವುದಾಗಿ ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ನೀತಿಯು ನಾಳೆಯಿಂದ ಜಾರಿಗೆ ಬರಲಿದ್ದು, ಈ ವರ್ಷದ ಡಿಸೆಂಬರ್ 31 ರವರೆಗೆ ಇರುತ್ತದೆ.

ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಕಿಂಗ್‌ಡಮ್‌ನ ಸದಸ್ಯರು ಸೇರಿದಂತೆ 35 ದೇಶಗಳ ನಾಗರಿಕರು ವೀಸಾ ಇಲ್ಲದೆ ಒಮ್ಮೆಗೆ 30 ದಿನಗಳವರೆಗೆ ಬೆಲಾರಸ್‌ನಲ್ಲಿ ಉಳಿಯಬಹುದು. ಶಾಂತಿ ಮತ್ತು ಉತ್ತಮ ಬಾಂಧವ್ಯದ ಬೆಲಾರಸ್‌ನ ಬದ್ಧತೆಯನ್ನು ಮತ್ತಷ್ಟು ಉತ್ತೇಜಿಸಲು ಮತ್ತು ಸಿಬ್ಬಂದಿ ವಿನಿಮಯವನ್ನು ಸರಳಗೊಳಿಸುವ ಸಲುವಾಗಿ, ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಈ ಯೋಜನೆಯನ್ನು ರೂಪಿಸಿರುವುದಾಗಿ ಹೇಳಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ2 hours ago

ಗ್ರಾಮೀಣ ಅಂಚೆ ಪಾಲಕ-ಸೇವಕರ ನೇಮಕಾತಿ ; ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಶಾಖಾ ಅಂಚೆಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವೆಬ್‍ಸೈಟ್ www.indiapostgdsonline.gov.in...

ದಿನದ ಸುದ್ದಿ5 hours ago

ನೀಟ್ ಯುಜಿ 2024 | ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಸುದ್ದಿದಿನಡೆಸ್ಕ್:ನೀಟ್ ಯುಜಿ 2024ರ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಇದೇ 20ರ ಶನಿವಾರ ಮಧ್ಯಾಹ್ನ 12 ಗಂಟೆ ವೇಳೆಗೆ ತಮ್ಮ ಜಾಲತಾಣದಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಇಂದು ರಾಷ್ಟ್ರೀಯ...

ದಿನದ ಸುದ್ದಿ10 hours ago

ನಾಳೆಯಿಂದ ವೀಸಾ ಮುಕ್ತ ನೀತಿ

ಸುದ್ದಿದಿನಡೆಸ್ಕ್:35 ಯುರೋಪಿಯನ್ ರಾಷ್ಟ್ರಗಳಿಗೆ ವೀಸಾ ಮುಕ್ತ ನೀತಿ ಪರಿಚಯಿಸುವುದಾಗಿ ಬೆಲಾರಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ನೀತಿಯು ನಾಳೆಯಿಂದ ಜಾರಿಗೆ ಬರಲಿದ್ದು, ಈ ವರ್ಷದ ಡಿಸೆಂಬರ್...

ದಿನದ ಸುದ್ದಿ11 hours ago

ಕರ್ನಾಟಕ ಕಾಲೇಜಿನ ಕೌನ್ಸಲಿಂಗ್ ಬಹಿಷ್ಕರಿಸಿ ಎಚ್ಚೆತ್ತುಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆ : ಮುತ್ತಪ್ಪ ಎಸ್ ಆಕ್ರೋಶ

ಸುದ್ದಿದಿನ,ಧಾರವಾಡ: ಕರ್ನಾಟಕ ಕಾಲೇಜಿನ ಪ್ರವೇಶ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ಮುತ್ತಪ್ಪ ಎಸ್ ಆಕ್ರೋಶ...

ದಿನದ ಸುದ್ದಿ11 hours ago

ಶಿರೂರಿನಲ್ಲಿ ಗುಡ್ಡ ಕುಸಿತ ಪ್ರಕರಣ ; ನದಿಯಲ್ಲಿ ಮತ್ತೆ ಎರಡು ಶವ ಪತ್ತೆ

ಸುದ್ದಿದಿನಡೆಸ್ಕ್:ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದ ಪರಿಣಾಮ ಇಂದು ಬೆಳಗಿನ ಜಾವ ಗಂಗಾವಳಿ ನದಿಯಲ್ಲಿ ಮತ್ತೆ ಎರಡು ಶವ ಪತ್ತೆಯಾಗಿದೆ. ಘಟನೆಯಲ್ಲಿ ಸಾವನ್ನಪ್ಪಿದವರ...

ದಿನದ ಸುದ್ದಿ11 hours ago

ರೈತನಿಗೆ ಅವಮಾನ ; ಜಿ.ಟಿ ಮಾಲ್ ಬಂದ್..!

ಸುದ್ದಿದಿನಡೆಸ್ಕ್:ಪಂಚೆ ತೊಟ್ಟು ಬಂದ ರೈತನಿಗೆ ಜಿ.ಟಿ ಮಾಲ್​ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಘಟನೆ ಇಂದು ಸದನದಲ್ಲಿ ಪ್ರತಿಧ್ವನಿಸಿದೆ. ಸದನಕ್ಕೆ ಪಂಚೆಯುಟ್ಟು ಬಂದ ಶಾಸಕ ಶರಣಗೌಡ ಕಂದಕೂರ ಜಿಟಿ...

ದಿನದ ಸುದ್ದಿ12 hours ago

ತುಂಗಭದ್ರ ಜಲಾಶಯದ ಒಳ ಹರಿವು ಹೆಚ್ಚಳ

ಸುದ್ದಿದಿನಡೆಸ್ಕ್:ತುಂಗಭದ್ರ ಜಲಾಶಯದ ಒಳ ಹರಿವು ಮತ್ತೆ ಹೆಚ್ಚಿದೆ. ಇಂದು 1 ಲಕ್ಷದ 4 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಟ ಮಟ್ಟ 1 ಸಾವಿರದ...

ದಿನದ ಸುದ್ದಿ15 hours ago

ಶತಾವರಿ ಗಿಡಮೂಲಿಕೆಗಳ ರಾಣಿ

ಬೇರು ಶತಾವರಿಯು ಆಯುರ್ವೇದದ ಒಂದು ಬಹುಮುಖ್ಯ ಗಿಡಮೂಲಿಕೆಯಾಗಿದೆ. ಆಯುರ್ವೇದದಲ್ಲಿ ಶತಾವರಿಯ ಔಷಧಿ ಗುಣಗಳ ಬಗ್ಗೆ ವಿವರಿಸಲಾಗಿದೆ. ಇದನ್ನು ಆಯುರ್ವೇದದಲ್ಲಿ ವಿವಿಧ ಔಷಧಿ ಮತ್ತು ಸೌಂದರ್ಯವರ್ಧಕಗಳ ಉತ್ಪನ್ನಗಳ ತಯಾರಿಕೆಯಲ್ಲಿ...

ದಿನದ ಸುದ್ದಿ17 hours ago

ದಾವಣಗೆರೆ | ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಹರಿಹರ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಇದು ತಾತ್ಕಾಲಿಕ ಹುದ್ದೆಯಾಗಿದ್ದು ಅರ್ಹ ಆಸಕ್ತರು ಅರ್ಜಿಯನ್ನು ಜಿಲ್ಲಾಧಿಕಾರಿ ಕಚೇರಿ ಕೊಠಡಿ...

ದಿನದ ಸುದ್ದಿ2 days ago

ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ನೇಮಕಾತಿ ಮಾಡಲು ಕಾನೂನು ಪದವಿ ಪಡೆದ 10 ವರ್ಷಗಳ ಕಾಲ ವಕೀಲ ವೃತ್ತಿ ಸೇವಾನುಭವ ಹೊಂದಿರುವವರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು...

Trending