Connect with us

ದಿನದ ಸುದ್ದಿ

ಶ್ರೀ ಉಚ್ಚಂಗೆಮ್ಮದೇವಿ ಸದ್ಭಕ್ತರಿಗೊಂದು ವಿಸ್ಮಯಕಾರಿ ಸುದ್ದಿ : ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್

Published

on

  • ಗಂಗಾಧರ ಬಿ ಎಲ್ ನಿಟ್ಟೂರ್

ಭಾರತ ದೇಶ ಹಲವು ಅಚ್ಚರಿ, ವಿಚಿತ್ರ, ವಿಸ್ಮಯಗಳ ತಾಣ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಹಿಡಿದು, ಸೃಷ್ಟಿಕರ್ತನ ಕೈಚಳಕದ ಕುಲುಮೆಯಲ್ಲಿ ಅರಳಿರುವ ಹಲವು ಅದ್ಭುತಗಳು ತರ್ಕಕ್ಕೆ ನಿಲುಕದ ವಿಸ್ಮಯಕಾರಿ ಸಂಗತಿಗಳಾಗಿವೆ. ಅಂತೆಯೇ ದೇವರು, ದೈವ ಮತ್ತು ದೈವ ಲೀಲೆಗಳು ಮನುಷ್ಯರಿಗೆ ಎಂದಿಗೂ ಕೌತುಕದ ವಿಚಾರಗಳೇ ಆಗಿವೆ.

ಇದಕ್ಕೆ ಉದಾಹರಣೆ ಎಂಬಂತೆ ತಿರುಪತಿ ಶ್ರೀ ಕ್ಷೇತ್ರದ ಬೆಟ್ಟದಲ್ಲಿ ಶ್ರೀ ವೆಂಕಟೇಶ್ವರನ ರೂಪ ಕಾಣಸಿಗುವುದು ಅಪರೂಪದಲ್ಲಿ ಅಪರೂಪದ ಸಂಗತಿಗೆ ಸಾಕ್ಷಿಯಾಗಿದೆ. ಇದು ಪ್ರಕೃತಿಯ ವಿಸ್ಮಯವೋ ಅಥವಾ ಆ ಕ್ಷೇತ್ರದ ಪವಾಡವೋ, ದೈವ ಲೀಲೆಯೋ ಅಂತೂ ತರ್ಕಕ್ಕೆ ನಿಲುಕದ ವಾಸ್ತವ ಸತ್ಯ.

ಇಂತಹ ಅಚ್ಚರಿ ವಿಷಯಗಳಿಂದ ಪ್ರೇರೇಪಿತರಾದ ದಾವಣಗೆರೆ ವಾಸಿ, ಹವ್ಯಾಸಿ ಸಂಶೋಧಕರಾದ ಅರ್ಜುನ್ ರವರು ವಿಸ್ಮಯಕಾರಿ ಸ್ಥಳಗಳ ಬಗ್ಗೆ ವಿಶೇಷ ಗಮನಹರಿಸಿ ಹೊಸ ಹೊಳಹುಗಳನ್ನು ಹುಡುಕುತ್ತಾ ಹೋದ ಅವರ ಕ್ಯಾಮೆರದ ಒಳಗಣ್ಣಿಗೆ ಬಿದ್ದದ್ದು ಶ್ರೀ ಕ್ಷೇತ್ರ ಉಚ್ಚಂಗಿದುರ್ಗದ ಬೆಟ್ಟ. ಈ ಬೆಟ್ಟದ ವಿಶೇಷ ವಿಸ್ಮಯಕಾರಿ ಸಂಗತಿಯೊಂದನ್ನು ಅವರೀಗ ಬೆಳಕಿಗೆ ತಂದಿದ್ದಾರೆ.

ಈಗಿನ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿಗೆ ಒಳಪಡುವ ಈ ಕ್ಷೇತ್ರ ಲಕ್ಷಾಂತರ ಜನರ ಭಕ್ತಿಗೆ ಪಾತ್ರವಾಗುವ ಮೂಲಕ ಇಲ್ಲಿ ನೆಲೆಸಿರುವ ಶ್ರೀ ಉಚ್ಚಂಗೆಮ್ಮ ದೇವಿ ಭಕ್ತರ ಕಷ್ಟ ನೀಗುವ ಮನ – ಮನೆ ದೇವತೆಯಾಗಿ ನೆಲೆಸಿದ್ದಾಳೆ. ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತೆಯೇ ಈ ಕ್ಷೇತ್ರದಲ್ಲಿ ಹಲವು ವಿಶೇಷಗಳನ್ನು ನಾವು ಕಾಣಬಹುದು.

ಇತ್ತೀಚಿಗೆ ದಾವಣಗೆರೆ ಅರ್ಜುನ್ ರವರು ಈ ಕ್ಷೇತ್ರದ ಬಗ್ಗೆ ಸಂಶೋಧನೆ ಮಾಡ ಹೊರಟಾಗ ಇವರಿಗೆ ಅಚ್ಚರಿಯ ಸಂಗತಿಯೊಂದು ಹೊಳೆದಿದೆ. ಅದೇನೆಂದರೆ ತಿರುಪತಿ ಬೆಟ್ಟದಲ್ಲಿ ತಿಮ್ಮಪ್ಪನ ರೂಪ ಒಡಮೂಡಿರುವಂತೆ ಉಚ್ಚಂಗಿದುರ್ಗದ ಬೆಟ್ಟದಲ್ಲಿ ತಾಯಿಯ ಚಿತ್ರ ಒಡಮೂಡಿರುವ ಅಚ್ಚರಿಯ ವಿಚಾರ. ಬೆಟ್ಟದಿಂದ ಸ್ವಲ್ಪ ದೂರ ಒಂದು ನಿರ್ದಿಷ್ಟ ಜಾಗದಲ್ಲಿ ನಿಂತು ನೋಡಿದಾಗ ದೇವಿಯೇ ಬೆಟ್ಟದಲ್ಲಿ ಉದ್ಭವವಾಗಿರುವಂತೆ ಕಾಣುವ ವಿಸ್ಮಯವನ್ನು ಪತ್ತೆ ಹಚ್ಚಿರುವ ಅರ್ಜುನ್ ಈ ಅಚ್ಚರಿಯನ್ನು ಬೆಳಕಿಗೆ ತಂದು ಸದ್ಭಕ್ತರು ದೇವಿಯ ರೂಪವನ್ನು ಈ ಬೆಟ್ಟದಲ್ಲಿ ನೋಡಿ ಪುನೀತರಾಗಬೇಕೆಂದು ಬಯಸಿದ್ದಾರೆ.

ಶ್ರೀ ಕ್ಷೇತ್ರ ಉಚ್ಚಂಗಿದುರ್ಗ ಕೂಡ ತಿರುಪತಿಯಂತೆಯೇ ಇನ್ನಷ್ಟು ಕೀರ್ತಿ ಪಡೆಯಲಿ ಎಂಬ ಸದುದ್ದೇಶದಿಂದ ಈ ವಿಷಯವನ್ನು ಹಂಚಿಕೊಂಡಿರುವ ಅರ್ಜುನ್ ಈ ಕ್ಷೇತ್ರದ ಮಹಿಮೆ ಭಾರತದ ಉದ್ದಗಲಕ್ಕೂ ಪಸರಿಸಿರುವ ಉಚ್ಚಂಗೆಮ್ಮ ದೇವಿಯ ಭಕ್ತ ಸಮೂಹಕ್ಕೆ ತಲುಪಿ ಈ ಕ್ಷೇತ್ರದ ಮಹಿಮೆ ಹಾಗೂ ದೇವಿಯ ಮೂರ್ತಿಯನ್ನು ಹೋಲುವ ಇಲ್ಲಿಯ ವಿಸ್ಮಯ ಬೆಟ್ಟದ ವಿಚಾರ ಹೊರ ಜಗತ್ತಿಗೆ ತಿಳಿಯಲಿ ಎಂದು ಆಶಿಸಿದ್ದಾರೆ. ಸತತ ಮೂರ್ನಾಲ್ಕು ತಿಂಗಳ ಪ್ರಯತ್ನದಿಂದ ಹಾಗೂ ದೈವೀ ಕೃಪೆಯಿಂದ ತಮಗೆ ಈ ಅದ್ಭುತ ಗೋಚರಿಸಿದೆ. ಈ ಸಂಗತಿ ದೇವಿಯ ಸಮಸ್ತ ಭಕ್ತರಿಗೂ ತಲುಪಲಿ ಎಂಬ ಹಂಬಲ ನನ್ನದು ಎನ್ನುತ್ತಾರೆ ಅರ್ಜುನ್.

ಈ ವಿಸ್ಮಯಕಾರಿ ಸಂಗತಿಯನ್ನು ಬೆಳಕಿಗೆ ತಂದಿರುವ ಅರ್ಜುನ್ ಅವರಿಗೆ ಸಮಸ್ತ ಭಕ್ತ ವೃಂದದ ಪರವಾಗಿ ಹಾರ್ದಿಕ ಅಭಿನಂದನೆಗಳು. ಅಂತೆಯೇ ಇಂತಹ ಹವ್ಯಾಸಿ ಸಂಶೋಧಕರನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಇಂತಹ ಇನ್ನಷ್ಟು ನಿಗೂಢ ರಹಸ್ಯ ಹಾಗೂ ಪ್ರಕೃತಿಯ ವಿಸ್ಮಯಗಳನ್ನು ಬೆಳಕಿಗೆ ತರಲು ಸ್ಪೂರ್ತಿ ತುಂಬಿದಂತಾಗುತ್ತದೆ ಎಂಬುದು ಈ ಲೇಖನದ ಆಶಯ.

ಬೆಟ್ಟದ ಈ ವಿಸ್ಮಯ ಕುರಿತು ಹಾಗೂ ಯಾವ ಜಾಗದಲ್ಲಿ ನಿಂತು ನೋಡಿದರೆ ದೇವಿಯ ರೂಪವನ್ನು ಸ್ಪಷ್ಟವಾಗಿ ಕಾಣಬಹುದು ಎಂಬಿತ್ಯಾದಿ ಹೆಚ್ಚಿನ ಮಾಹಿತಿಗೆ ಸಂಶೋಧಕರಾದ ಅರ್ಜುನ್ ರವರನ್ನು ಅವರ ಮೊಬೈಲ್ ಸಂಖ್ಯೆ : 9035528728 ಗೆ ಕರೆ ಮಾಡಿ ಸಂಪರ್ಕಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಇಬ್ಬರು ಶಿಕ್ಷಕರ ಬಂಧನ

Published

on

ಸುದ್ದಿದಿನಡೆಸ್ಕ್:ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ ಸಂಜಯ್ ತುಕಾರಾಂ ಜಾಧವ್ ಮತ್ತು ಜಲೀಲ್ ಉಮರ್ ಖಾನ್ ಪಠಾಣ್ ಅವರನ್ನು ಮಹಾರಾಷ್ಟ್ರದ ನಾಂದೇಡ್ ಭಯೋತ್ಪಾದನಾ ನಿಗ್ರಹ ದಳ-ಎಟಿಎಸ್ ಬಂಧಿಸಿದೆ.

ಬಂಧಿತರಿಬ್ಬರೂ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಶಿಕ್ಷಕರಾಗಿದ್ದು, ಲಾತೂರ್‌ನಲ್ಲಿ ಖಾಸಗಿ ಕೋಚಿಂಗ್ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಯುವ ನಿಧಿ ಯೋಜನೆ ; ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

Published

on

ಸುದ್ದಿದಿನಡೆಸ್ಕ್:ಯುವ ನಿಧಿ ಯೋಜನೆ ಅಡಿ, ನಿರುದ್ಯೋಗ ಭತ್ಯೆ ಪಡೆಯುತ್ತಿರುವ, ಉದ್ಯೋಗಾಕಾಂಕ್ಷಿ ಯುವಜನತೆ, ಪ್ರತಿ ತಿಂಗಳು 25 ನೇ ತಾರೀಖಿನೊಳಗೆ, ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಿತ ಪ್ರಮಾಣ ಪತ್ರ ಸಲ್ಲಿಸಲು, ಆಯಾ ಜಿಲ್ಲೆಗಳ ಉದ್ಯೋಗಾಧಿಕಾರಿಗಳು ಸೂಚಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಹಿಳಾ ಏಕದಿನ ಕ್ರಿಕೆಟ್ : ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಗೆಲುವು

Published

on

ಸುದ್ದಿದಿನಡೆಸ್ಕ್:ದಕ್ಷಿಣ ಆಫ್ರಿಕಾ ಮಹಿಳೆಯರ ವಿರುದ್ಧ ನಡೆದ ಮೂರನೇ ಹಾಗೂ ಕೊನೆಯ ಏಕದಿನ ಕ್ರಿಕೆಟ್ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಭಾರತದ ಮಹಿಳೆಯರು ಸರಣಿಯನ್ನು 3-0 ಅಂತರದಿಂದ ತಮ್ಮದಾಗಿಸಿಕೊಂಡಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಮಹಿಳೆಯರು ತಮ್ಮ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸಿದರು. ಸತತ ಮೂರು ಪಂದ್ಯಗಳಲ್ಲಿ ಪಾರಮ್ಯ ಮೆರೆಯುವ ಮೂಲಕ ತಾಯ್ನಾಡಿನಲ್ಲಿ ತಾವು ಎಷ್ಟು ಬಲವಂತರು ಎಂಬುದನ್ನು ಸಾಬೀತು ಮಾಡಿದರು.

ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವನಿತೆಯರಿಗೆ ಇನ್ನಿಲ್ಲದಂತೆ ಕಾಡಿದ್ದು, ಭಾರತ ತಂಡದ ಹಿರಿಯ ಬ್ಯಾಟರ್ ಸ್ಮೃತಿ ಮಂಧಾನ. ಮೊದಲೆರಡು ಪಂದ್ಯಗಳಲ್ಲಿ ಸತತ ಶತಕ ಬಾರಿಸಿದರು. ಮೂರನೇ ಪಂದ್ಯದಲ್ಲಿ ಶತಕದ ಅಂಚಿಗೆ ಬಂದು ಮೂರನೇ ಶತಕದಿಂದ ತಪ್ಪಿಸಿಕೊಂಡರು. ಮೊದಲ ಪಂದ್ಯದಲ್ಲಿ 117, ಎರಡನೇ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಭಾರತ ವನಿತೆಯರು ಪ್ರಯಾಸವಿಲ್ಲದೇ ಗೆಲುವು ಸಾಧಿಸಿದರು.

ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 215 ರನ್ ಗುರಿ ನೀಡಿದರು. ಭಾರತ 40.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗಳಿಗೆ 220 ರನ್ ಗಳಿಸಿತು. ಕೊನೆಯ ಪಂದ್ಯದಲ್ಲಿ ಸ್ಮೃತಿ ಮಂಧಾನ 83 ಎಸೆತಗಳಲ್ಲಿ 11 ಬೌಂಡರಿಗಳ ಸಮೇತ 90 ರನ್ ಗಳಿಸಿದರು. ಶೆಫಾಲಿ ವರ್ಮಾ 25, ಪ್ರಿಯಾ ಪೂನಿಯಾ 28, ನಾಯಕಿ ಹರ್ಮನ್‌ಪ್ರೀತ್ ಕೌರ್ 42 ಗಳಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ 19, ರಿಚಾ ಘೋಷ್ 6 ರನ್ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending