ದಿನದ ಸುದ್ದಿ
ಡಾ.ಕೆ.ಸಧಾಕರ್ ಫೇಸ್ ಬುಕ್, ಟಿಟ್ಟರ್ ನಲ್ಲಿ ಮಾತ್ರ ಸಚಿವರು, ನಮ್ಮ ಕಷ್ಟ ಅರ್ಥವಾಗಲ್ಲ: ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಆಕ್ರೋಶ

ಸುದ್ದಿದಿನ, ದಾವಣಗೆರೆ: ವೈದ್ಯಕೀಯ ಸಚಿವ ಕೆ.ಸುಧಾಕರ್ ಅವರು ಕೇವಲ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಮಾತ್ರ ಸಚಿವರು, ವಿದ್ಯಾರ್ಥಿಗಳ ಕಷ್ಟ ಅವರಿಗೆ ಅರ್ಥವಾಗಲ್ಲ.ಇದು ದಾವಣಗೆರೆಯ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ರಾಹುಲ್ ಅವರ ಆಕ್ರೋಶದ ನುಡಿ.
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಬುಧವಾರ ಸಚಿವ ಡಾ.ಕೆ ಸುಧಾಕರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗಳು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಸುಧಾಕರ್ ಅವರು ಕೇವಲ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಮ್ಮ ಕಷ್ಟ ಅವರಿಗೆ ಅರ್ಥವಾಗುವುದಿಲ್ಲ ಎಂದು ವಿದ್ಯಾರ್ಥಿ ರಾಹುಲ್ ದೂರಿದರು.
ಮಳೆ, ಬಿಸಿಲು ಎನ್ನೆದೆ ಕಳೆದ 11 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ನಮ್ಮ ಜೊತೆ ವಿದ್ಯಾರ್ಥಿನಿಯರು ಇದ್ದು ಹಲವು ಕಷ್ಟ ಅನುಭವಿಸುತ್ತಿದ್ದಾರೆ. ಕೇವಲ ಶಿಷ್ಯ ವೇತನ ಬಿಡುಗಡೆಗೆ ಇಷ್ಟು ಸತಾಯಿಸುತ್ತಿರುವ ಈ ಸರ್ಕಾರಕ್ಕೆ ಕಿವಿ ಇಲ್ಲ. ನಾವು ಅಕ್ಷರಶಃ ಗುಲಾನರಂತೆ ಬದುಕಿದ್ದೇವೆ. ಕೊನೆಗೆ ಸರ್ಕಾರ ನಮ್ಮ ಮೇಲೆ ಯಾವುದೇ ಕ್ರಮ ಕೈಗೊಂಡರು ಪರವಾಗಿಲ್ಲ. ನಾವು ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಿತ್ತೇವೆ ಎಂದು ಎಚ್ಚರಿಸಿದರು.
16 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಳೆದ 11 ದಿನಗಳಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದಿಂದ ಮಾತ್ರ ಸೂಕ್ತ ಉತ್ತರ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ತಟ್ಟೆ ಬಾರಿಸಿ ವಿನೂತನ ರೀತಿ ಪ್ರತಿಭಟನೆ ನಡೆಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಹರಿಹರ – ಹೊನ್ನಾಳಿ ತಾಲೂಕಿನ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ ಪಟ್ಟಿ

ಸುದ್ದಿದಿನ,ದಾವಣಗೆರೆ: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಬುಧವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಇವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯ್ತಿಯ ಮೊದಲನೇ 30 ತಿಂಗಳ ಅವಧಿಗೆ ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಕೆಳಕಂಡ ಪಟ್ಟಿಯನ್ವಯ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಯಿತು.
ಹರಿಹರ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ24(12) 4(2) 3(2) 4(2) 1(1) 12(5)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ |ಉಪಾಧ್ಯಕ್ಷ
- ಸಾರಥಿ : ಸಾಮಾನ್ಯ(ಮಹಿಳೆ), ಅನುಸೂಚಿತ ಪಂಗಡ
- ಕೊಂಡಜ್ಜಿ : ಸಾಮಾನ್ಯ ಸಾಮಾನ್ಯ(ಮಹಿಳೆ)
- ಗುತ್ತೂರು : ಅನುಸೂಚಿತ ಜಾತಿ(ಮಹಿಳೆ) ಸಾಮಾನ್ಯ
- ಹನಗವಾಡಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ರಾಜನಹಳ್ಳಿ : ಅನುಸೂಚಿತ ಪಂಗಡ, ಸಾಮಾನ್ಯ(ಮಹಿಳೆ)
- ನಂದಿಗಾವಿ : ಹಿಂದುಳಿದ ‘ಅ’ ವರ್ಗ, ಅನುಸೂಚಿತ ಪಂಗಡ(ಮಹಿಳೆ)
- ಬೆಳ್ಳೂಡಿ: ಸಾಮಾನ್ಯ(ಮಹಿಳೆ), ಸಾಮಾನ್ಯ
- ಬನ್ನಿಕೋಡು: ಅನುಸೂಚಿತ ಪಂಗಡ(ಮಹಿಳೆ), ಹಿಂದುಳಿದ ಅ ವರ್ಗ
- ಸಾಲಕಟ್ಟೆ: ಸಾಮಾನ್ಯ , ಸಾಮಾನ್ಯ
- ದೇವರಬೆಳೆಕೆರೆ : ಅನುಸೂಚಿತ ಜಾತಿ , ಸಾಮಾನ್ಯ(ಮಹಿಳೆ)
- ಕುಣಿಬೆಳಕೆರೆ : ಹಿಂದುಳಿದ ಅ ವರ್ಗ(ಮಹಿಳೆ), ಅನುಸೂಚಿತ ಜಾತಿ(ಮಹಿಳೆ)
- ಭಾನುವಳ್ಳಿ: ಹಿಂದುಳಿದ ಬ ವರ್ಗ(ಮಹಿಳೆ), ಸಾಮಾನ್ಯ
- ಸಿರಿಗೆರೆ : ಅನುಸೂಚಿತ ಪಂಗಡ(ಮಹಿಳೆ) , ಹಿಂದುಳಿದ ಬ ವರ್ಗ(ಮಹಿಳೆ)
- ಕಡರನಾಯ್ಕನಹಳ್ಳಿ : ಸಾಮಾನ್ಯ , ಹಿದುಳಿದ ಅ ವರ್ಗ(ಮಹಿಳೆ)
- ಉಕ್ಕಡಗಾತ್ರಿ : ಅನುಸೂಚಿತ ಜಾತಿ, ಹಿಂದುಳಿದ ಅ ವರ್ಗ(ಮಹಿಳೆ)
- ಯಲವಟ್ಟಿ : ಸಾಮಾನ್ಯ, ಅನುಸೂಚಿತ ಜಾತಿ
- ಕುಂಬಳೂರು : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಜಿಗಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಕೊಕ್ಕನೂರು : ಸಾಮಾನ್ಯ , ಅನುಸೂಚಿತ ಜಾತಿ(ಮಹಿಳೆ)
- ವಾಸನ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ಹರಳಹಳ್ಳಿ : ಹಿಂದುಳಿದ ಅ ವರ್ಗ(ಮಹಿಳೆ), ಸಾಮಾನ್ಯ(ಮಹಿಳೆ)
- ಹಾಲಿವಾಣ : ಹಿಂದುಳಿದ ‘ಅ ವರ್ಗ, ಅನುಸೂಚಿತ ಪಂಗಡ(ಮಹಿಳೆ)
- ಎಳೆಹೊಳೆ : ಸಾಮಾನ್ಯ ,ಸಾಮಾನ್ಯ(ಮಹಿಳೆ)
- ಕೆ.ಬೇವಿನಹಳ್ಳಿ : ಸಾಮಾನ್ಯ, ಹಿಂದುಳಿದ ಅ ವರ್ಗ
ಹೊನ್ನಾಳಿ ತಾಲ್ಲೂಕು
ಒಟ್ಟು ಸ್ಥಾನಗಳು ಅನುಸೂಚಿತ ಜಾತಿ ಅನುಸೂಚಿತ ಪಂಗಡ ಹಿಂದುಳಿದ ವರ್ಗ ‘ಅ’ ಹಿಂದುಳಿದ ವರ್ಗ ‘ಬ’ ಸಾಮಾನ್ಯ ವರ್ಗ29(15) 5(3) 2(1) 6(3) 1(1) 15(7)
ಸಂಖ್ಯೆ | ಗ್ರಾಮ ಪಂಚಾಯಿತಿ ಹೆಸರು | ಅಧ್ಯಕ್ಷ | ಉಪಾಧ್ಯಕ್ಷ
- ಕತ್ತಿಗೆ : ಸಾಮಾನ್ಯ, ಅನುಸೂಚಿ ಪಂಗಡ(ಮಹಿಳೆ)
- ಹತ್ತೂರು : ಸಾಮಾನ್ಯ, ಅನುಸೂಚಿ ಪಂಗಡ
- ಹೆಚ್ ಗೋಪಗೊಂಡನಹಳ್ಳಿ: ಹಿಂದುಳಿದ ‘ಅ’ ವರ್ಗ, ಸಾಮಾನ್ಯ
- ಹನುಮಸಾಗರ: ಅನುಸೂಚಿ ಪಂಗಡ, ಸಾಮಾನ್ಯ(ಮಹಿಳೆ)
- ಸೊರಟೂರು : ಹಿಂದುಳಿದ ‘ಅ’ ವರ್ಗ (ಮಹಿಳೆ), ಹಿಂದುಳಿದ ‘ಬ’ ವರ್ಗ(ಮಹಿಳೆ)
- ಹೆಚ್ ಕಡದಕಟ್ಟೆ : ಅನುಸೂಚಿತ ಜಾತಿ , ಸಾಮಾನ್ಯ(ಮಹಿಳೆ)
- ಅರಬಗಟ್ಟ ಸಾಮಾನ್ಯ(ಮಹಿಳೆ) ಹಿಂದುಳಿದ ‘ಅ’ ವರ್ಗ (ಮಹಿಳೆ)
- ಹರಳಹಳ್ಳಿ : ಸಾಮಾನ್ಯ(ಮಹಿಳೆ), ಅನುಸೂಚಿತ ಜಾತಿ
- ಹಿರೇಗೋಣಿಗೆರೆ : ಸಾಮಾನ್ಯ(ಮಹಿಳೆ) , ಸಾಮಾನ್ಯ
- ಬೇಲಿಮಲ್ಲೂರು : ಹಿಂದುಳಿದ ‘ಅ’ ವರ್ಗ (ಮಹಿಳೆ) ಅನುಸೂಚಿತ ಜಾತಿ
- ಅರಕೆರೆ : ಸಾಮಾನ್ಯ ಹಿಂದುಳಿದ, ‘ಅ’ ವರ್ಗ (ಮಹಿಳೆ)
- ಮಾಸಡಿ : ಸಾಮಾನ್ಯ ಹಿಂದುಳಿದ, ‘ಅ’ ವರ್ಗ (ಮಹಿಳೆ)
- ಕಮ್ಮಾರಗಟ್ಟೆ : ಸಾಮಾನ್ಯ, ಸಾಮಾನ್ಯ(ಮಹಿಳೆ)
- ತಿಮ್ಲಾಪುರ : ಸಾಮಾನ್ಯ(ಮಹಿಳೆ) , ಅನುಸೂಚಿ ಜಾತಿ(ಮಹಿಳೆ)
- ಕುಂಬಳೂರು : ಸಾಮಾನ್ಯ, ಅನುಸೂಚಿತ ಜಾತಿ(ಮಹಿಳೆ)
- ಕುಂದೂರು ಹಿಂದುಳಿದ ‘ಅ’ ವರ್ಗ ಸಾಮಾನ್ಯ(ಮಹಿಳೆ)
- ಯಕ್ಕನಹಳ್ಳಿ , ಸಾಮಾನ್ಯ, ಸಾಮಾನ್ಯ(ಮಹಿಳೆ)
- ಕೂಲಂಬಿ : ಅನುಸೂಚಿತ ಜಾತಿ(ಮಹಿಳೆ), ಸಾಮಾನ್ಯ
- ಮುಕ್ತೇನಹಳ್ಳಿ : ಹಿಂದುಳಿದ ‘ಅ’ ವರ್ಗ (ಮಹಿಳೆ), ಸಾಮಾನ್ಯ
- ಬನ್ನಿಕೋಡು : ಸಾಮಾನ್ಯ(ಮಹಿಳೆ), ಹಿಂದುಳಿದ ‘ಅ’ ವರ್ಗ
- ಬೆನಕನಹಳ್ಳಿ : ಅನುಸೂಚಿತ ಪಂಗಡ(ಮಹಿಳೆ) , ಸಾಮಾನ್ಯ
- ಬೀರಗೊಂಡನಹಳ್ಳಿ : ಸಾಮಾನ್ಯ(ಮಹಿಳೆ), ಸಾಮಾನ್ಯ
- ರಾಂಪುರ : ಸಾಮಾನ್ಯ(ಮಹಿಳೆ), ಸಾಮಾನ್ಯ
- ಸಾಸ್ವೇಹಳ್ಳಿ : ಹಿಂದುಳಿದ ‘ಬ’ ವರ್ಗ (ಮಹಿಳೆ), ಅನುಸೂಚಿತ ಜಾತಿ(ಮಹಿಳೆ)
- ಕುಳಗಟ್ಟೆ: ಹಿಂದುಳಿದ ‘ಅ’ ವರ್ಗ , ಸಾಮಾನ್ಯ(ಮಹಿಳೆ)
- ಕ್ಯಾಸನಕೆರೆ : ಸಾಮಾನ್ಯ, ಸಾಮಾನ್ಯ((ಮಹಿಳೆ)
- ಹೊಸಹಳ್ಳಿ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ ‘ಅ’ ವರ್ಗ
- ಲಿಂಗಾಪುರ : ಅನುಸೂಚಿತ ಜಾತಿ, ಸಾಮಾನ್ಯ
- ಹುಣಸಘಟ್ಟೆ : ಅನುಸೂಚಿತ ಜಾತಿ(ಮಹಿಳೆ), ಹಿಂದುಳಿದ ‘ಅ’ ವರ್ಗ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಗರಗಳಲ್ಲಿ ಬೃಹತ್ ಕೈಗಾರಿಕೆ ಆರಂಭಿಸುವವರಿಗೆ ಹೆಚ್ಚಿನ ಪ್ರೋತ್ಸಾಹಧನ : ಸಚಿವ ಜಗದೀಶ ಶೆಟ್ಟರ್

ಸುದ್ದಿದಿನ,ದಾವಣಗೆರೆ : ಹೊಸ ಕೈಗಾರಿಕಾ ನೀತಿಯನ್ವಯ ಬೆಂಗಳೂರು ಹೊರತುಪಡಿಸಿ ದಾವಣಗೆರೆಯಂತಹ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಆರಂಭಿಸಲು ಮುಂದೆ ಬರುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ ಮತ್ತು ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವರಾದ ಜಗದೀಶ ಶೆಟ್ಟರ ತಿಳಿಸಿದರು.
ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲೆಯ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೈಗಾರಿಕೋದ್ಯಮ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತವಾಗುವುದನ್ನು ತಪ್ಪಿಸಲು ಟೈರ್ 2 ಮತ್ತು ಟೈರ್ 3 ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವ ಸಲುವಾಗಿ ನಗರಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಕೈಗೊಳ್ಳಲು ಮುಂದಾಗುವ ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹಧನ, ಇತರೆ ಸೌಲಭ್ಯ ನೀಡಲಾಗುವುದು. ಹಿಂದೆ ದಾವಣಗೆರೆ ಜವಳಿಗೆ ಹೆಸರಾಗಿದ್ದು ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಎಂದು ಹೆಸರು ಮಾಡಿತ್ತು. ಇದೀಗ ಜವಳಿ ಉದ್ಯಮ ಇಳಿಮುಖವಾಗಿದೆ. ಜವಳಿ ಸೇರಿದಂತೆ ಯಾವುದೇ ಕೈಗಾರಿಕೆಗಳಿಗೆ ಉದ್ಯಮಿಗಳು ಮುಂದೆ ಬಂದಲ್ಲಿ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದರು.
ಸಭೆಯಲ್ಲಿ ಹರಿಹರೇಶ್ವರ ಸಣ್ಣ ಕೈಗಾರಿಕಾ ಮಾಲೀಕರ ಸಂಘದ ಅಧ್ಯಕ್ಷ ಸಿದ್ದನಗೌಡ ಮಾತನಾಡಿ, ಕೆಎಸ್ಎಸ್ಐಡಿಸಿಯ ಹರಿಹರ ಕೈಗಾರಿಕಾ ವಸಾಹತುವಿನ ನಿವೇಶನಗಳಿಗೆ ಕ್ರಯಪತ್ರ ನೀಡಿಲ್ಲ. ಹಲವಾರು ಬಾರಿ ಈ ಬಗ್ಗೆ ಮನವಿ ಸಲ್ಲಿಸುತ್ತಾ ಬಂದಿದ್ದು, ಸಚಿವರೇ ಖುದ್ದಾಗಿ ಸೇಲ್ಡೀಡ್ನ್ನು ನಮಗೆ ವಿತರಿಸಬೇಕು ಹಾಗೂ ಕೈಗಾರಿಕಾ ಪ್ರದೇಶದಲ್ಲಿ ಪಕ್ಕಾ ರಸ್ತೆ ಆಗಬೇಕು, ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಈ ಬಗ್ಗೆಯೂ ಹಲವಾರು ಬಾರಿ ನಗರಸಭೆಗೆ ಮನವಿ ಮಾಡಿದ್ದೇವೆ. ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ, ಕ್ರಯಪತ್ರ ವಿಚಾರದ ಕುರಿತು ನನಗೆ ಅರಿವಿದ್ದು ಇದನ್ನು ನಾನು ಅನುಸರಣೆ ಮಾಡುತ್ತಾ ಬಂದಿದ್ದೇನೆ. ಈಗ ಈ ನಿವೇಶನಗಳಿಗೆ ಖಾತೆ ಆಗಿದ್ದು ಇನ್ನೊಂದು ವಾರದಲ್ಲಿ ಪೋಡಿ ಮಾಡುವಂತೆ ಹರಿಹರ ತಹಶೀಲ್ದಾರರಿಗೆ ಸೂಚನೆ ನೀಡಿದ್ದೇನೆ. ಇನ್ನೊಂದು ವಾರದಲ್ಲಿ ಸೇಲ್ಡೀಡ್ ಪ್ರಕ್ರಿಯೆ ಆಗಿ, 15 ದಿನಗಳ ಒಳಗೆ ತಮಗೆ ಸ್ಥಳೀಯ ಸಚಿವರು, ಶಾಸಕರನ್ನೊಳಗೊಂಡಂತೆ ನಾನೇ ಕ್ರಯಪತ್ರಗಳನ್ನು ವಿತರಿಸುತ್ತೇನೆ ಎಂದರು.
ಇಲ್ಲಿನ ಉದ್ಯಮಿಗಳು ಸುಮಾರು 10 ವರ್ಷಗಳಿಂದ ನಗರಸಭೆಗೆ ತೆರಿಗೆ ಪಾವತಿಸಿಲ್ಲ. ಅದಕ್ಕೆ ದಂಡ ಹಾಕಿದ್ದಾರೆ ಹೌದು. ಆದರೆ ಪ್ರಸಕ್ತ ಸಾಲಿನ ತೆರಿಗೆ ಪಾವತಿಸಿಕೊಳ್ಳುವಂತೆ ನಗರಸಭೆ ಆಯುಕ್ತರಿಗೆ ಸಚಿವರು ಸೂಚನೆ ನೀಡಿದರು ಹಾಗೂ ನಾವು ಅನುದಾನ ನೀಡುತ್ತೇವೆ ರಸ್ತೆ ನಿರ್ಮಿಸಿಕೊಡುವಂತೆ ತಿಳಿಸಿದರು. ಉದ್ಯಮಿಗಳು ಒಂದು ವಾರದಲ್ಲೇ ಪ್ರಸಕ್ತ ಸಾಲಿನ ತೆರಿಗೆ ತುಂಬುವುದಾಗಿ ಭರವಸೆ ನೀಡಿದರು.
ಸಚಿವರು ಮಾತನಾಡಿ, ಜವಳಿ ಪಾರ್ಕಿನಲ್ಲಿ ಜವಳಿ ಹೊರತಾಗಿ ಇತರೆ ಕೈಗಾರಿಕೆಗಳಿಗೆ ಅವಕಾಶ ಮಾಡಿಕೊಡಬೇಕೆಂದು ನನಗೆ ಮನವಿಗಳು ಬಂದಿವೆ ಈ ಬಗ್ಗೆ ಜವಳಿ ಇಲಾಖೆ ಅಧಿಕಾರಿಗಳು ಮತ್ತು ಜವಳಿ ಉದ್ದಿಮೆದಾರರ ಅಭಿಪ್ರಾಯ ಕೇಳಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸುರೇಶ್ ಎನ್.ತಡಕನಹಳ್ಳಿ ಮಾತನಾಡಿ, 2002 ನೇ ಸಾಲಿನಲ್ಲಿ ಟೆಕ್ಸ್ಟೈಲ್ ಪಾರ್ಕ್ ಉದ್ದೇಶಕ್ಕಾಗಿ ಕೆಐಎಡಿಬಿಯಿಂದ 64 ಎಕರೆ ಕೈಗಾರಿಕಾ ಪ್ರದೇಶಾಭಿವೃದ್ದಿ ಮಾಡಲಾಗಿದ್ದು 71 ಜವಳಿ ಘಟಕಗಳನ್ನು ಪ್ರಾರಂಭಿಸಲಾಗಿತ್ತು. ಅದರಲ್ಲಿ 51 ಘಟಕಗಳು ಕಾರ್ಯನಿರ್ವಹಿಸುತ್ತಿದ್ದವು. ಈ ಪೈಕಿ ಕೊರೊನಾ ಹಿನ್ನೆಲೆಯಲ್ಲಿ 23 ಘಟಕಗಳು ಸ್ಥಗಿತಗೊಂಡಿವೆ. 2012 ರಿಂದ 19ನೇ ಸಾಲಿನವರೆಗೆ 39 ಘಟಕಗಳಿಗೆ ಒಟ್ಟು ರೂ.9.15 ಕೋಟಿ ಸಬ್ಸಿಡಿ ನೀಡಲಾಗಿದೆ. ಈ ಪ್ರದೇಶವನ್ನು ಜವಳಿ ಉದ್ಯಮಗಳಿಗೆ ಮೀಸಲಿಟ್ಟರೆ ಒಳಿತು ಎಂದು ಹೇಳಿದರು.
ಜವಳಿ ಪಾರ್ಕಿನ ಉದ್ಯಮಿಯೋರ್ವರು ಮಾತನಾಡಿ 2006 ರಲ್ಲಿ ಕರೂರು ಕೈಗಾರಿಕಾ ಪ್ರದೇಶದಲ್ಲಿ ಜವಳಿ ಪಾರ್ಕ್ಗೆಂದು 64 ಎಕರೆ ಜಾಗ ನೀಡಲಾಗಿದ್ದು, ಇಲ್ಲಿ ಪ್ರಸ್ತುತ 30 ಜವಳಿಗೆ ಸಂಬಂಧಿಸಿದ ಘಟಕಗಳು ಸಕ್ರಿಯವಾಗಿವೆ. ಇತರೆ ಘಟಕಗಳಿಗೆ ಅವಕಾಶ ನೀಡಿದರೆ ಪರಿಸರ ಮಾಲಿನ್ಯ ಇತರೆ ಸಮಸ್ಯೆಗಳಿಗೆ ಕಾರಣವಾಗಿ ಜವಳಿ ಉದ್ಯಮಕ್ಕೆ ಅನಾನುಕೂಲವಾಗಲಿದೆ. ಆದ ಕಾರಣ ಜವಳಿಗೆ ಪೂರಕವಾದ ಕೈಗಾರಿಕೆಗಳಿಗೇ ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಹಾಗೂ ಡೈಯಿಂದ ಯುನಿಟ್ ಇಲ್ಲದ ಕಾರಣ ಹೊರ ರಾಜ್ಯಗಳಿಗೆ ಹೋಗ್ತಾ ಇದ್ದೇವೆ. ಡೈಯಿಂಗ್ ಯುನಿಟ್ ಆದರೆ ಒಳಿತು ಎಂದರು.
ಉದ್ಯಮಿ ಮಂಜುನಾಥ್ ಮಾತನಾಡಿ, ಇಲ್ಲಿ ಸಹ ಕ್ರಯಪತ್ರ(ಸೇಲ್ಡೀಡ್) ಮಾಡಿಕೊಡದೇ ಇರುವುದರಿಂದ ಬ್ಯಾಂಕ್ನವರು ಸಾಲ ಕೊಡುತ್ತಿಲ್ಲ ಎಂದರು.
ಸಚಿವರು ಪ್ರತಿಕ್ರಿಯಿಸಿ ಭೂಮಿಯ ಪರಿಹಾರದ ಕುರಿತು ಯಾವುದೂ ಸಮಸ್ಯೆಯಿಲ್ಲ. ಈ ಜಾಗಕ್ಕೆ ಸಂಬಂಧಿಸಿದಂತೆ ಕ್ರಯಪತ್ರ ನೀಡಲು ನನಗೆ ಪ್ರಸ್ತಾವನೆ ಕಳುಹಿಸಿಕೊಡಿ, ಶೀಘ್ರದಲ್ಲೇ ಮಾಡಿಕೊಡಲಾಗುವುದು ಎಂದರು.
ಹರಿಹರದ ವೆಲ್ಕಾಸ್ಟ್ ಫೌಂಡ್ರಿಯ ಉದ್ಯಮಿ ಸತ್ಯನಾರಾಯಣ ಮಾತನಾಡಿ, ತಾವೊಬ್ಬ ರಫ್ತುದಾರರಾಗಿದ್ದು, ಪ್ರತಿ ವರ್ಷ ವಿದ್ಯುತ್ ದರ ಹೆಚ್ಚುಸುತ್ತಿರುವ ಕಾರಣ ರಫ್ತಿಗೆ ತೊಂದರೆಯಾಗುತ್ತಿದೆ. ಆದ ಕಾರಣ ಕೈಗಾರಿಕೆಗಳಿಗೆ ಕನಿಷ್ಟ ಮೂರು ವರ್ಷಗಳಿಗೊಮ್ಮೆ ದರ ಹೆಚ್ಚಿಸಬೇಕೆಂದು ಹಾಗೂ ಕುಡಿಯುವ ನೀರು ವ್ಯವಸ್ಥೆ ಮಾಡಿಕೊಡಬೇಕೆಂದು ಸಚಿವರಿಗೆ ಮನವಿ ಮಾಡಿದರು.
ಸಚಿವರು ಪ್ರತಿಕ್ರಿಯಿಸಿ ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ದರ ಹೆಚ್ಚಳದಿಂದ ಆಗುತ್ತಿರುವ ತೊಂದರೆ ನನ್ನ ಗಮನಕ್ಕೆ ಬಂದಿದ್ದು, ಕೈಗಾರಿಕೆಗಳಿಗೆ ವಿದ್ಯುತ್ ದರ ಕ್ಕೆ ಸಂಬಂಧಿಸಿದಮತೆ ಪ್ರತ್ಯೇಕ ನಿಯಮ ರೂಪಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುತ್ತಿದೆ ಎಂದರು.
ಹರಿಹರದ ಸಮರ್ಥ ಇಂಡಸ್ಟ್ರಿಯ ಮಾಲೀಕರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೈಗಾರಿಕೆ ನಡೆಸುವುದೇ ಕಷ್ಟವಾಗುತ್ತಿದೆ. ಅದರಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳು ನೌಕರರಿಗೆ ನೀಡುತ್ತಿರುವ ಸಂಬಳ, ಪಿಎಫ್, ಇಎಸ್ಐ ಸಲುವಾಗಿ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ ಹಾಗೂ ತಮ್ಮ ವಿರುದ್ದ ಪ್ರಕರಣ ದಾಖಲಿದ್ದಾರೆಂದು ದೂರಿದರು.
ಸಚಿವರು ಕಾರ್ಮಿಕ ಅಧಿಕಾರಿಗೆ ಕೈಗಾರಿಕೆಗಳು ನಡೆಯುವುದೇ ಕಷ್ಟವಾಗಿದ್ದು ಈ ರೀತಿ ತೊಂದರೆ ಕೊಡಬಾರದು. ಕಾರ್ಮಿಕ ಸಚಿವರು ಕೂಡ ತಮಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ತಾವು ಕೈಗಾರಿಕೋದ್ಯಮಿಗಳಿಗೆ ಸಹಕಾರ ನೀಡಬೇಕು ಎಂದರು.
ಗ್ರೀನ್ ಆಗ್ರೋಪ್ಯಾಕ್ ಪ್ರೈ.ಲಿ ನ ದೇವಯ್ಯ ಮಾತನಾಡಿ, ತಾವು ತರಕಾರಿಗಳನ್ನು ಯೂರೋಪ್ಗೆ ರಫ್ತು ಮಾಡುತ್ತಿದ್ದು, ತಮ್ಮ 15 ಬ್ರಾಂಚ್ಗಳಿವೆ, ಸುಮಾರು 10 ಸಾವಿರ ರೈತರಿಗೆ ಈ ಉದ್ದಿಮೆಯಿಂದ ಅನುಕೂಲವಾಗುತ್ತಿದೆ. ಕೊಗ್ಗನೂರಿನಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪಿಸಲಾಗುತ್ತಿದ್ದು, ಗ್ರಾಮೀಣ ಫೀಡರ್ನಿಂದ ವಿದ್ಯುತ್ಗೆ ತೊಂದರೆಯಾಗುತ್ತಿದೆ. ಹಾಗೂ ರಫ್ತು ಮಾಡಲು ಕಂಟೈನರ್ ಕೊರತೆ ಜೊತೆಗೆ ಕಂಟೈನರ್ ದರ ಮೂರು ಪಟ್ಟು ಹೆಚ್ಚಿದೆ ಈ ಬಗ್ಗೆ ಸೂಕ್ತ ಕೈಗೊಳ್ಳುವಂತೆ ಕೋರಿದರು.
ಮೆಕ್ಕೆಜೋಳ ಉದ್ಯಮಿ ಹಾಗೂ ರೈತರಾದ ಬಸವರಾಜಪ್ಪ ಮಾತನಾಡಿ, ತಾವು ರೈತರಾಗಿದ್ದು ಮೆಕ್ಕೆಜೋಳ ಸಂಸ್ಕರಿಸಿ ಇತರೆ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ತಾವು ಸೇರಿದಂತೆ ಮೆಕ್ಕೆಜೋಳ ಸಂಸ್ಕರಣಾ ಘಟಕಕ್ಕೆ ತಮಗೆ ರೂ.2.5 ಕೋಟಿ ಮಂಜೂರಾಗಿದ್ದು ಬ್ಯಾಂಕಿನಿಂದ ರೂ.1 ಕೋಟಿ ಮಾತ್ರ ಬಿಡುಗಡೆ ಆಗಿದೆ. ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಆಗಿಲ್ಲ. ಅದರ ಹೊರತು ಕೆಲಸ ಮಾಡುವುದು ಕಷ್ಟವಾಗಿದೆ ಎಂದರು.
ಲೀಡ್ಬ್ಯಾಂಕ್ ಮ್ಯಾನೇಜರ್ ಸುಶೃತ ಡಿ ಶಾಸ್ತ್ರಿ ಪ್ರತಿಕ್ರಿಯಿಸಿ, 8 ಮೆಕ್ಕೆಜೋಳ ಘಟಕಗಳಿಗೆ ಸಾಲ ಮಂಜೂರಾಗಿದ್ದು, ಯೋಜನಾ ವರದಿ ಪ್ರಕಾರ 2 ವರ್ಷದೊಳಗೆ ಮಷಿನರಿ ಅಳವಡಿಕೆ ಆಗಿಬೇಕು. ಆಗ ವರ್ಕಿಂಗ್ ಕ್ಯಾಪಿಟಲ್ ಬಿಡುಗಡೆ ಮಾಡಲಾಗುವುದು. ಆದರೆ ಈ ಘಟಕಗಳಲ್ಲಿ ಮಷಿನರಿ ಸೆಟ್ಅಪ್ ಆಗಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲದ ಕಾರಣ ವರ್ಕಿಂಗ್ ಕ್ಯಾಪಿಟಲ್ ನೀಡಿಲ್ಲವೆಂದರು.
ಸಚಿವರು ಹಾಗೂ ಎಂಡಿ ಯವರು, ರೈತರು ಉದ್ಯಮ ಮಾಡುತ್ತಿರುವುದು ಸಂತಸದ ವಿಚಾರವಾಗಿದ್ದು, ಅಧಿಕಾರಿಗಳು, ಸಾಲ ನೀಡುವಲ್ಲಿ ಆಗುತ್ತಿರುವ ಗೊಂದಲಗಳನ್ನು ನಿವಾರಿಸಿ ಪರಿಹಾರ ಹುಡುಕಿ ವರ್ಕಿಂಗ್ ಕ್ಯಾಪಿಟಲ್ ನೀಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇಲ್ಲಿ ಇಂದು ಅನೇಕರು ಬ್ಯಾಂಕ್ ಸಾಲ ನೀಡುತ್ತಿಲ್ಲವೆಂದು ದೂರುತ್ತಿದ್ದೀರಿ. ಇದು ಎಲ್ಲೆಡೆ ಇರುವ ಸಮಸ್ಯೆ. ಹಂತ ಹಂತವಾಗಿ ಬಗೆಹರಿಯಲಿದೆ ಎಂದರು.
ನೇಕಾರರೋರ್ವರು ತಾವು ಕರೂರು ಟೆಕ್ಸ್ಟೈಲ್ಸ್ ಪಾರ್ಕ್ನಲ್ಲಿ ವೀವಿಂಗ್ ಮಷಿನ್ ಮತ್ತು ಇತರೆ ಮಷೀನ್ ಅಳವಡಿಸಿದ್ದು, ನಷ್ಟ ಹೊಂದಿ ಬ್ಯಾಂಕ್ ಸಾಲ ತೀರಿಸಲು ತಮ್ಮ ಮಳಿಗೆ ಮತ್ತು ಹೊರ ಮಾರಿದ್ದು ತಮಗೆ ಅಲ್ಲಿ ಇತರೆ ಕೈಗಾರಿಕೆ ಮಾಡುವಂತೆ ಅನುಮತಿ ಕೋರಿದರು. ಕಾರ್ಗಿಲ್ ಸಂಸ್ಥೆಯವರು ತಮ್ಮ ಸಂಸ್ಥೆ ಬಳಿ ರೈತರಿಂದ ರಸ್ತೆ ಸಮಸ್ಯೆ ಇದ್ದು ಬಗೆಹರಿಸಿಕೊಡಬೇಕೆಂದು ಕೋರಿದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಉದ್ಯಮಿ ಶಂಭುಲಿಂಗಪ್ಪ ಮಾತನಾಡಿ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಎಲ್ಟಿ ಸಂಪರ್ಕಕ್ಕೆ 65 ಹೆಚ್ಪಿ ನೀಡಲಾಗುತ್ತಿದ್ದು ಮುಂದಿನ ಬಜೆಟ್ನಲ್ಲಿ 100 ಕ್ಕೆ ಹೆಚ್ಚಿಸುವಂತೆ ಹಾಗೂ ಕರೂರಿನಲ್ಲಿ ಯುಜಿಡಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಕೆಎಸ್ಎಸ್ಐಡಿ ಎಂಡಿ ವಿ.ರಾಮಪ್ರಸಾತ್ ಮನೋಹರ್ ಪ್ರತಿಕ್ರಿಯಿಸಿ, ಪಾಲಿಕೆಯ ಅಮೃತ್ ಯೋಜನೆಯಡಿ ಯುಜಿಡಿ ಗೆ ಕ್ರಮ ವಹಿಸಬಹುದು. ಜೊತೆಗೆ ಯುಜಿಡಿ ನಿರ್ಮಾಣ ಕುರಿತು ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಸ್.ಎನ್ ಬಾಲಾಜಿ ಮಾತನಾಡಿ, ಸಾರಥಿ ಕುರುಬರಹಳ್ಳಿಯಲ್ಲಿ ಎಸ್ಸಿ/ಎಸ್ಟಿ ಗೆ 5 ಎಕರೆ ಎಂದು ನಿಗದಿಪಡಿಸಿದ್ದು ಇದನ್ನು ಸಬ್ ಲೇಔಟ್ ಮಾಡಬೇಕೆಂದರು ಕೋರಿದರು.
ಸಚಿವರು ಪ್ರತಿಕ್ರಿಯಿಸಿ ಕೈಗಾರಿಕಾ ಪ್ರದೇಶಗಳಲ್ಲಿ ಭೂಮಿಗೆ ತಾತ್ಕಾಲಿಕ ದರ ನಿಗದಿಪಡಿಸುವಾಗ ಮುಂದೆ ಮಾರುಕಟ್ಟೆಯಲ್ಲಿ ಆಗಬಹುದಾದ ದರವನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಬೇಕು ಎಂದರು.
ಪರಿಹಾರದ ಭೂಮಿ ಕೊಡುವಂತೆ ರೈತರ ಮನವಿ
ಕರೂರು ಕೈಗಾರಿಕಾ ಪ್ರದೇಶಕ್ಕೆ ಸುಮಾರು 15 ವರ್ಷಗಳ ಹಿಂದೆ ರೈತರು 143 ಎಕರೆ ಭೂಮಿಯನ್ನು ಕೆಐಎಡಿಬಿಯವರಿಗೆ ನೀಡಿದ್ದು, ಈ ಭೂಮಿಗೆ ಬದಲಾಗಿ ತಮಗೆ ಬೇರೆ ಭೂಮಿ ನೀಡುವಂತೆ ಕೋರಿದ್ದು, ಈವರೆಗೆ ಭೂಮಿ ನೀಡಿಲ್ಲ. 15 ವರ್ಷಗಳಿಂದ ಸತತವಾಗಿ ಹೋರಾಡುತ್ತಾ ಬಂದಿದ್ದೇವೆ. ಇದರಲ್ಲಿ ಕೆವಲರು ಮೃತ ಹೊಂದ್ದಾರೆ. ತಕ್ಷಣ ತಮಗೆ ಭೂಮಿ ನೀಡಬೇಕೆಂದು ರೈತರು ಒತ್ತಾಯಿಸಿದರು.
ಸಚಿವರು ಪ್ರತಿಕ್ರಿಯಿಸಿ ಇದು ಸುಮಾರು 15 ವರ್ಷಗಳ ಸಮಸ್ಯೆಯಾಗಿದ್ದು ಇದಕ್ಕೆ ಪರಿಹಾರ ಒದಗಿಸಲಾಗುತ್ತಿದೆ. ಭೂಮಿಗೆ ಪರಿಹಾರವಾಗಿ ಭೂಮಿ ನೀಡುವ ಬಗ್ಗೆ ಸರ್ಕಾರದ ಹಂತದಲ್ಲಿ ನಿಯಮ ರೂಪಿಸಲಾಗುತ್ತಿದೆ. ಸ್ವಲ್ಪ ಸಮಯ ನೀಡಿ. ಶೀಘ್ರದಲ್ಲೇ ತಮಗೆ ಪರಿಹಾರ ಒದಗಿಸಲಾಗುವುದು ಎಂದು ರೈತರ ಮನವೊಲಿಸಿದರು.
ರೈಸ್ಮಿಲ್ ಮಾಲೀಕರು ಮಾತನಾಡಿ ಹಿಂದೆ ದಾವಣಗೆರೆಯಲ್ಲಿ 100 ರೈಸ್ಮಿಲ್ಗಳಿದ್ದವು ಈಗ 40 ರಿಂದ 50 ಮಾತ್ರ ಇವೆ. ರೈಸ್ಮಿಲ್ಗಳಿಗೆ ಬರುವ ಸಬ್ಸಿಡಿ ನಿಂತಿದ್ದು, ಶೀಘ್ರವೇ ಇದನ್ನು ನೀಡುವಂತೆ ಹಾಗೂ ವಿದ್ಯುತ್ ಸಬ್ಸಿಡಿ ನೀಡುವಂತೆ ಕೋರಿದರು.
ಶಾಸಕರಾದ ಎಸ್.ಎ.ರವೀಂದ್ರನಾಥ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾಮಾಂತರ ಕೈಗಾರಿಕೆ ಇಲಾಖೆ ಉಪ ನಿರ್ದೇಶಕರ ಮನ್ಸೂರ್, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್, ಉಪ ನಿರ್ದೇಶಕರಾದ ಮಂಜುನಾಥ್, ಭೂಸ್ವಾಧೀನ ಅಧಿಕಾರಿ ಸರೋಜಾ, ಕೆಎಸ್ಎಫ್ಸಿ ಪ್ರಧಾನ ವ್ಯವಸ್ಥಾಪಕರಾದ ಬಸವರಾಜು, ಜಿಲ್ಲಾ ಪರಿಸರ ಅಧಿಕಾರಿ ಮಹೇಶ್ವರಪ್ಪ, ಉಪ ಜಿಲ್ಲಾ ಪರಿಸರ ಅಧಿಕಾರಿ ಸಂತೋಷ್, ಹರಿಹರ ನಗರಸಭೆ ಆಯುಕ್ತ ಉದಯ್ ಕುಮಾರ್.ಬಿ.ಟಿ, , ಕಾರ್ಮಿಕ ಅಧಿಕಾರಿ ಇಬ್ರಾಹೀಂ ಸಾಬ್, ಹರಿಹರ ಕೈಗಾರಿಕ ಸಂಘದ ಅಧ್ಯಕ್ಷರು ಇತರೆ ಕೈಗಾರಿಕಾ ಸಂಘದ ಅಧಿಕಾರಿಗಳು, ಉದ್ಯಮಿಗಳು, ರಫ್ತುದಾರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ಗ್ರಾ.ಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ನಿಗದಿ

ಸುದ್ದಿದಿನ,ದಾವಣಗೆರೆ : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ 2020 ರ ಚುನಾವಣೆಯ ನಂತರ ಮೊದಲನೇ 30 ತಿಂಗಳ ಅವಧಿಗೆ ಜಿಲ್ಲೆಯ ಹರಿಹರ ಮತ್ತು ಹೊನ್ನಾಳಿ ತಾಲ್ಲೂಕುಗಳ ಗ್ರಾ.ಪಂಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಹುದ್ದೆಗಳಿಗೆ ತಂತ್ರಾಂಶದ ಮೂಲಕ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆಯು ಬುಧವಾರ ಜಿಲ್ಲಾಡಳಿತ ಭವನದ ತುಂಗ ಭದ್ರ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಚುನಾವಣಾ ತಹಶೀಲ್ದಾರ್ ಪ್ರಸಾದ್ ಇತರೆ ಅಧಿಕಾರಿಗಳು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ5 days ago
ಸಿನಿಮಾ ಪಯಣಕ್ಕೆ ರೀ ಎಂಟ್ರಿ ಕೊಟ್ಟ ಮಂದಹಾಸ ಬೆಡಗಿ : ಬಿಂದುಶ್ರೀ
-
ದಿನದ ಸುದ್ದಿ2 days ago
ದಾವಣಗೆರೆ | ಅತ್ಯಾಚಾರ ಅಪರಾಧಿಗೆ 15 ವರ್ಷ ಸಜೆ, 26 ಸಾವಿರ ದಂಡ
-
ಬಹಿರಂಗ2 days ago
ಸಂವಿಧಾನ ದಿನಾಚರಣೆ ಹೇಗೆ ಗಣರಾಜ್ಯೋತ್ಸವವಾಯಿತು..?
-
ದಿನದ ಸುದ್ದಿ3 days ago
ಬಿಗ್ ಬಾಸ್ ಖ್ಯಾತಿಯ ಜಯಶ್ರೀ ಆತ್ಮಹತ್ಯೆ ; ಕಾರಣ ಏನು ಗೊತ್ತಾ..!?
-
ಬಹಿರಂಗ4 days ago
ನುಡಿದ ಸತ್ಯವನ್ನು ಬಂಧಿಸಲಾಗದು
-
ಅಂತರಂಗ2 days ago
ಭಾರತದ ಸಂವಿಧಾನ : ಪ್ರಜೆಗಳ ಓದು
-
ದಿನದ ಸುದ್ದಿ3 days ago
ದಾವಣಗೆರೆ | ಪ್ರವಾಸಿ ಟ್ಯಾಕ್ಸಿಗೆ ಸಹಾಯಧನ : ಅಂತಿಮ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳ ಆಹ್ವಾನ
-
ದಿನದ ಸುದ್ದಿ2 days ago
ರೈತ ಹೋರಾಟವೆಂಬ ಸಾಗರ ; ಇದು ಬರೀ ಪಂಜಾಬಿನದ್ದಲ್ಲ, ಇಡೀ ದೇಶದ ಹೋರಾಟ