Connect with us

ದಿನದ ಸುದ್ದಿ

ಪತ್ರಕರ್ತ ಮೊಹಮ್ಮದ್ ಜುಬೈರ್‌ಗೆ ಜಾಮೀನು ನಿರಾಕರಣೆ: 14 ದಿನ ನ್ಯಾಯಾಂಗ ಬಂಧನ

Published

on

ಸುದ್ದಿದಿನ,ನವದೆಹಲಿ; ಹಿಂದೂ ದೇವರನ್ನು ಅವಮಾನಿಸಿ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದ ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಜುಬೈರ್‌ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸುವಂತೆ ಪೊಲೀಸರ ಮನವಿಗೆ ಕೋರ್ಟ್ ಸಮ್ಮತಿ ನೀಡಿದೆ.

ಜುಬೈರ್ ಟ್ವೀಟ್ ಒಂದು ಸಮುದಾಯಕ್ಕೆ ಧಕ್ಕೆ ತಂದಿದೆ ಎಂದು ಹನುಮಾನ್ ಭಕ್ತ ಎಂಬ ಟ್ವಿಟರ್ ಹ್ಯಾಂಡಲ್‌ ಆರೋಪಿಸಿತ್ತು. ಇದನ್ನು ಆಧರಿಸಿ ಜುಬೈರ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ

Published

on

ಸುದ್ದಿದಿನಡೆಸ್ಕ್:ದೇಶಾದ್ಯಂತ ಇಂದು ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಇಂದು 24ನೇ ಹಾಗೂ ಕೊನೆಯ ಜೈನ ತೀರ್ಥಂಕರ ಮಹಾವೀರ ಅವರ ಜನ್ಮದಿನ. ಜೈನ ಸಮುದಾಯಕ್ಕೆ ಇದು ಅತ್ಯಂತ ಪವಿತ್ರ ದಿನವಾಗಿದೆ.

ಭಗವಾನ್ ಮಹಾವೀರನ ಅನುಯಾಯಿಗಳು ಇಂದು ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಮಾಡುವುದಲ್ಲದೇ ಪ್ರಸಾದವನ್ನು ವಿತರಿಸುವುದು ಹಾಗೂ ಮೆರವಣಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭ ಕೋರಿದ್ದಾರೆ. ರಾಷ್ಟ್ರಪತಿ ಅವರು, ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರ್ ಅವರು, ಅಹಿಂಸೆ ಮತ್ತು ಅನುಕಂಪದ ಸಂಕೇತವಾಗಿದ್ದಾರೆ.

ಅವರು, ಅಹಿಂಸಾ ಪರಮೊ ಧರ್ಮ ಎಂಬ ಸಂದೇಶದ ಮೂಲಕ ಮನುಕುಲಕ್ಕೆ ಹೊಸ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೇ ಮಹಾವೀರ ಅವರ ಸರಳತೆ, ದಯೆ, ತತ್ವಗಳನ್ನು ಪ್ರತಿಪಾದಿಸಿದ್ದರು ಎಂದು ಹೇಳಿದ್ದಾರೆ.

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ತಮ್ಮ ಸಂದೇಶದಲ್ಲಿ ಭಗವಾನ್ ಮಹಾವೀರರ ಬೋದನೆಗಳು ಹೆಚ್ಚಿನ ಸಹಾನುಬೂತಿ ಮತ್ತು ಸಾಮರಸ್ಯದ ಜಗತ್ತಿನತ್ತ ನಮ್ಮ ಹಾದಿಯನ್ನು ಬೆಳಗಿಸುತ್ತಿವೆ. ಎಲ್ಲ ಜೀವಿಗಳಿಗೆ ಸಮಾನತೆ ಮತ್ತು ವಿಭಿನ್ನ ದೃಷ್ಟಿಕೋನದಲ್ಲಿ ನೋಡುವ ಸಂದೇಶವನ್ನು ಸಾರಿದ್ದಾರೆ ಎಂದು ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಮಹಾವೀರ ಜಯಂತಿ ಅಂಗವಾಗಿ ಜೈನ ಸಮುದಾಯಕ್ಕೆ ಶುಭಾಶಯ ಕೋರಿದ್ದಾರೆ. ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಭಗವಾನ್ ಮಹಾವೀರರ ಆದರ್ಶಗಳು ಜಗತ್ತಿನೆಲ್ಲೆಡೆ ಅಸಖ್ಯಾಂತ ಜನರಿಗೆ ಶಕ್ತಿಯನ್ನು ನೀಡಿದೆ. ಅವರ ಬೋಧನೆಗಳನ್ನು ಜೈನ ಸಮುದಾಯ ಸುಂದರವಾಗಿ ಸಂರಕ್ಷಿಸಿ ಅವುಗಳನ್ನು ಪ್ರಚುರಪಡಿಸುತ್ತಿದೆ. ಭಗವಾನ್ ಮಹಾವೀರರ ಕನಸುಗಳನ್ನು ಸಾಕಾರಗೊಳಿಸಲು ಸರ್ಕಾರ ಬದ್ಧವಿದೆ. ಸರ್ಕಾರ ಪ್ರಾಕೃತ್ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಮೂಲಕ ಮಹಾವೀರರ ಬೋಧನೆಗಳನ್ನು ಮತ್ತಷ್ಟು ಜನಪ್ರಿಯಗೊಳಿಸಲಾಗುತ್ತಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

15 ಸಾಧಕರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ

Published

on

ಸುದ್ದಿದಿನಡೆಸ್ಕ್:ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ ಡಾ.ಬಿ.ಆ‌ರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

2023ನೇ ಸಾಲಿನ ಪ್ರಶಸ್ತಿಯನ್ನು ಮೈಸೂರಿನ ಹರಿಹರಾನಂದ ಸ್ವಾಮಿ ಅವರ ಸಮಾಜ ಸೇವೆಗೆ, ಪತ್ರಿಕೋದ್ಯಮದಲ್ಲಿನ ಸೇವೆಗೆ ಬೆಂಗಳೂರಿನ ಇಂದೂಧರ ಹೊನ್ನಾಪುರ, ಸರ್ಕಾರಿ ಸೇವೆಯಲ್ಲಿ ಉತ್ತಮ ಆಡಳಿತ ನಿರ್ಹಿಸಿದ ದಾವಣಗೆರೆಯ ರುದ್ರಪ್ಪ ಹನಗವಾಡಿ ,ಸೀತವ್ವ ಜೋಡಟ್ಟಿ ಬೆಳಗಾವಿ ದೇವದಾಸಿ ವಿಮೋಚನೆ, ಕೆ. ಪುಂಡಲೀಕರಾವ್ ಶೆಟ್ಟಿ ಬಾ ಬೀದರ್ ಸಮಾಜ ಸೇವೆ/ರಾಜಕೀಯ.

2024 ನೇ ಸಾಲಿನ ಪ್ರಶಸ್ತಿಯನ್ನು ಶ್ರೀಧರ ಕಲಿವೀರ ಬೆಂಗಳೂರು ಹೋರಾಟ, ಮಲ್ಲಾಜಮ್ಮ ಮಂಡ್ಯ ಸಮಾಜ ಸೇವೆ/ರಾಜಕೀಯ, ರಾಮದೇವ ರಾಕೆ ಬೆಂಗಳೂರು ಪತ್ರಿಕೋದ್ಯಮ, ವೈ.ಬಿ. ಹಿಮ್ಮಡಿ ಬೆಳಗಾವಿ ಸಾಹಿತ್ಯ/ಸಮಾಜ ಸೇವೆ,ಲಕ್ಷ್ಮೀಪತಿ ಕೋಲಾರ ಕೋಲಾರ ಸಾಹಿತ್ಯ/ಸಂಘಟನೆ.

2025ನೇ ಸಾಲಿನ ಪ್ರಶಸ್ತಿಯನ್ನು ದತ್ತಾತ್ರೇಯ ಇಕ್ಕಳಗಿ ಕಲಬುರಗಿ ಪ್ರಕಾಶನ, ಮಾವಳ್ಳಿ ಶಂಕರ್ ಬೆಂಗಳೂರು ಹೋರಾಟ, ಎಫ್.ಹೆಚ್. ಜಕ್ಕಪ್ಪನವ‌ರ್ ಧಾರವಾಡ ಹೋರಾಟ, ಹೊನ್ನೂರು ಗೌರಮ್ಮ ಚಾಮರಾಜನಗರ ಜನಪದ ಕಲೆ, ಈರಪ್ಪ ಹಾಸನ ದಲಿತ ಹೋರಾಟಕ್ಕೆ ನೀಡಿ ಗೌರವಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆ‌ರ್. ಅಂಬೇಡ್ಕರ್ ಪ್ರಶಸ್ತಿ

Published

on

ಸುದ್ದಿದಿನಡೆಸ್ಕ್:ನಗರದ ರುದ್ರಪ್ಪ ಹನಗವಾಡಿ ಅವರಿಗೆ 2023ನೇ ಸಾಲಿನ ಡಾ.ಬಿ.ಆ‌ರ್. ಅಂಬೇಡ್ಕರ್ ಪ್ರಶಸ್ತಿ ಲಭಿಸಿದೆ.

ಡಾ.ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾಗುವ 2023, 2024 ಮತ್ತು 2025 ನೇ ಸಾಲಿನ
ಡಾ.ಬಿ.ಆ‌ರ್. ಅಂಬೇಡ್ಕರ್ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 15 ಸಾಧಕರಿಗೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕಿರು ಪರಿಚಯ

ಕೆ.ಎ.ಎಸ್ ಅಧಿಕಾರಿ ನಿವೃತ್ತಿ ಹೊಂದಿರುವ ರುದ್ರಪ್ಪ ಹನಗವಾಡಿ ಅವರು ದಾವಣಗೆರೆ ಜಿಲ್ಲೆಯ, ಹರಿಹರ ತಾಲೂಕಿನ ಹನಗವಾಡಿ ಗ್ರಾಮ 1951ರಲ್ಲಿ ಜನಿಸಿದರು.1974 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಅರ್ಥಶಾಸ್ತ್ರ), ಸ್ನಾತಕೋತ್ತರ ಪದವಿ ಪಡೆದರು. ನಂತರ 1974 – 1983ರ ವರೆಗೆ ಬಿ.ಆರ್.ಪಿ. ಕೇಂದ್ರದ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕರ್ನಾಟಕ ಆಡಳಿತ ಸೇವೆ 1983 – 2011, ತಹಸೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಿದರು.ಮೈಸೂರು, ಟಿ.ನರಸೀಪುರ, ನಂಜನಗೂಡು, ಚಾಮರಾಜನಗರ, ಸೊರಬ, ರಾಮನಗರ, ತರೀಕೆರೆ, ಬೆಂಗಳೂರು ಇತ್ಯಾದಿ ಜಿಲ್ಲೆಗಳಲ್ಲಿ ಸೇವೆಸಲ್ಲಿಸಿದರು. 2011 ರಲ್ಲಿ ಕರ್ನಾಟಕ ಆಡಳಿತ ಸೇವೆಯಿಂದ ನಿವೃತ್ತಿಹೊಂದಿದರು.ನಂತರ ಹನಗವಾಡಿ ಗ್ರಾಮದಲ್ಲಿನ ಜಮೀನಿನಲ್ಲಿ ರೈತನಾಗಿ ಕಾಯಕದಲ್ಲಿ ತೊಡಗಿದ್ದಾರೆ.

ತಮ್ಮನ್ನು ಸಾಹಿತ್ಯ, ಕಲೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆ, ಓದುವುದು, ಬರೆಯುವುದು, ಕವನ, ಲೇಖನ, ಜೀವನ ಚಿತ್ರಣ, ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ, ಹಾಡುಗಾರಿಕೆ, ಜಾನಪದ, ಭಾವಗೀತೆ, ಕವನ ವಾಚನ ಪವೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಸೇವಾ ಕ್ಷೇತ್ರ

ಟ್ರಸ್ಟಿ, ಐಎಸಿಐಡಿ ಟ್ರಸ್ಟ್ (ರಿ), ಬೆಂಗಳೂರು,‌ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್‌ನ ಟ್ರಸ್ಟಿ, ಮಾನವ ಮಂಟಪ ಟ್ರಸ್ಟ್‌ ಟ್ರಸ್ಟಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ರಾಜ್ಯ ಸಮಿತಿ ಸದಸ್ಯ, ಆಜೀವ ಸದಸ್ಯ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ, ಸದಸ್ಯ, ಹಿಮೋಪೋಲಿಯಾ ಸೊಸೈಟಿ ಆಫ್ ಇಂಡಿಯಾ, ಯು. ಭೂಪತಿ ಸ್ಮಾರಕ ಟ್ರಸ್ಟ್‌ನ ಸಲಹಾ ಸಮಿತಿ ಸದಸ್ಯ, ರಾಜ್ಯ ಸಂಚಾಲಕರು, ಕರ್ನಾಟಕ ದಲಿತ ಕಲಾಮಂಡಳಿ, ಬೆಂಗಳೂರು

ಹೋರಾಟಗಳು

ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಯೋಜಿಸುವ ಹೋರಾಟ, ಸಭೆ, ಸಮಾರಂಭಗಳಲ್ಲಿ ಭಾಗಿ, ಚಂದ್ರಗುತ್ತಿ ಬೆತ್ತಲೆ ಸೇವೆ ಮತ್ತು ಮೂಢನಂಬಿಕೆಗಳ ವಿರುದ್ಧದ ಹಾಗೂ ಜನಪರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.

ಸಾಹಿತ್ಯ – ರಚಿಸಿದ ಕೃತಿಗಳು

ಸೆಳೆತ : ಕವನ ಸಂಕಲನ – 2010,ಊರು ಬಳಗ – ಕವನಸಂಕಲನ 2013,ಎಲೆ ಮುಗುಳ ಬೆಳಕು : 2021, ಋಣದ ಗಣಿ : ಆತ್ಮ ಚರಿತ್ರೆ 2021, ಕರ್ನಾಟಕ ವಿವಿಧ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.

ಸುದ್ದಿದಿನ ಕನ್ನಡ ವೆಬ್ ಪೋರ್ಟಲ್ ನಲ್ಲಿ ಇವರ ಆತ್ಮಕತೆಯಾದ ‘ಋಣದ ಗಣಿ’ ಆಯ್ದ ಭಾಗಗಳು ಪ್ರಕಟಗೊಂಡಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending