Connect with us

ದಿನದ ಸುದ್ದಿ

ಕಲಬುರಗಿ | ಕಾಳಜಿ ಕೇಂದ್ರದಲ್ಲಿ ಊಟದೊಂದಿಗೆ ಹಣ್ಣು-ಹಾಲು ಪೂರೈಕೆ

Published

on

ಸುದ್ದಿದಿನ,ಕಲಬುರಗಿ : ಭೀಮಾ ನದಿ ಪ್ರವಾಹದಿಂದ ತ್ತತರಿಸುವ ಸಂತ್ರಸ್ತರಿಗೆ ಆಶ್ರಯ ನೀಡಲು ತೆರೆದಿರುವ ಕಾಳಜಿ ಕೇಂದ್ರದಲ್ಲಿ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಹಣ್ಣು, ಹಾಲು ನೀಡುವ ಮೂಲಕ ಜಿಲ್ಲಾಡಳಿತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ.

ರವಿವಾರ ಪತ್ರಕರ್ತರ ತಂಡ ಭೀಮಾ ನದಿಗೆ ಹೆಚ್ಚಿನ ನೀರು ಹರಿಸಿದ ಪರಿಣಾಮ ಪ್ರವಾಹ ಪೀಡಿತ ಪ್ರದೇಶವಾಗಿ ಮಾರ್ಪಟ್ಟಿರುವ ಅಫಜಲಪೂರ ತಾಲೂಕಿನ ಸೊನ್ನ, ಶಿರವಾಳ ಗ್ರಾಮಕ್ಕೆ ಭೇಟಿ ನೀಡಿದಾಗ ಈ ದೃಶ್ಯ ಕಂಡುಬಂತು.

ಭೀಮಾ ನದಿಯ ಹಿನ್ನೀರಿನಿಂದ ಅಫಜಲಪೂರ ತಾಲೂಕಿನ ಶಿರವಾಳ-ಭಂಕಲಗಾ ಮಧ್ಯೆ ರಸ್ತೆ ಮೇಲೆ ಮೂರಡಿ ನೀರು ಬಂದ ಪರಿಣಾಮ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಸ್ಥಳೀಯರು ಗ್ರಾಮಗಳ ನಡುವಿನ ಪ್ರಯಾಣಕ್ಕೆ ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ.

ಶಿರವಾಳ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಮನೆಗಳು ಹಿನ್ನೀರಿನಿಂದ ಬಾಧಿತವಾಗಿದ್ದು, ಸುಮಾರು 70 ಜನರನ್ನು ಗ್ರಾಮದ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರದಲ್ಲಿ ಊಟೋಪಚಾರ ಮಾಡಲಾಗುತ್ತಿದೆ. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ಮೂರು ಹೊತ್ತು ಬಾಳೆ ಹಣ್ಣು, ಮಕ್ಕಳಿಗೆ ಬಿಸ್ಕಿಟ್ ನೀಡಲಾಗುತ್ತಿದೆ ಎಂದು ಗೌರ(ಬಿ) ಗ್ರಾಮ ಪಂಚಾಯತಿಯ ಪಿ.ಡಿ.ಓ ಶಂಕರ ಧಾಮಣ್ಣ ತಿಳಿಸಿದರು.

ಅಫಜಲಪೂರ್ ಕಾಳಜಿ ಕೇಂದ್ರದಲ್ಲಿ ನೂರಾರು ಸಂಖ್ಯೆಯಲ್ಲಿ ನಿರಾಶ್ರಿತರು: ಸೊನ್ನ, ಅಳ್ಳಗಿ(ಬಿ), ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳಿಂದ ರಕ್ಷಣೆ ಮಾಡಿ ಕರೆತರಲಾಗಿರುವ ಸಂತ್ರಸ್ತರಿಗೆ ಅಫಜಲಪೂರ ಪಟ್ಟಣದ ಹೊರವಲಯದ ಪದವಿ ಕಾಲೇಜಿನಲ್ಲಿ ಇರಿಸಲಾಗಿದ್ದು, ಅಳ್ಳಗಿ (ಬಿ) ಮತ್ತು ಸೊನ್ನ ಗ್ರಾಮದ  261 ಜನರಿದ್ದರೆ, ಇಂಚಗೇರಾ, ಕೆಲ್ಲೂರ, ಬನ್ನಟ್ಟಿ ಹಾಗೂ ಶಿರೂರ ಗ್ರಾಮಗಳ 500ಕ್ಕೂ ಹೆಚ್ಚು ಸಚಿತ್ರಸ್ತರಿಗೆ ಇಲ್ಲಿ ಆಶ್ರಯ ನೀಡಲಾಗಿದೆ.

ಅಫಜಲಪೂರ ಕಾಳಜಿ ಕೇಂದ್ರಕ್ಕೆ ರವಿವಾರ ಭೇಟಿ ನೀಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಕಾರಿ ಅಬ್ದುಲ್ ನಬಿ ಮಾತನಾಡಿ ಭೀಮಾ ಪ್ರವಾಹದಿಂದ ನಿರಾಶ್ರಿತಗೊಂಡ 8603 ಜನರಿಗೆ ರಕ್ಷಣೆ ಮಾಡಿದ್ದು, ತಾಲೂಕಿನ ವಿವಿಧೆಡೆ ಸ್ಥಾಪಿಸಲಾದ 11 ಕಾಳಜಿ ಕೇಂದ್ರಗಳಲ್ಲಿ ಇವರಿಗೆ ಆಶ್ರಯ ನೀಡಿ ಬೆಳಿಗ್ಗೆ ಉಪಹಾರ, ಹಣ್ಣು, ಚಹಾ ಮಧ್ಯಾಹ್ನ ಮತ್ತು ರಾತ್ರಿ ಚಪಾಟಿ, ಪಲ್ಯಾ, ಅನ್ನ, ಸಾರು ಊಟದ ಜೊತೆಗೆ ಹಣ್ಣು, ಹಾಲು  ನೀಡಲಾಗುತ್ತಿದೆ. ಇದಲ್ಲದೆ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಹ ಪೂರೈಸಲಾಗುತ್ತಿದೆ ಎಂದರು.

ಅಫಜಲಪೂರ್-ಸಿಂದಗಿ ರಸ್ತೆ ಕಟ್: ಸೊನ್ನ ಬ್ಯಾರೇಜಿನಿಂದ 8 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್ ನೀರು ಬಿಟ್ಟಿದ್ದರಿಂದ ಕೆಳ ಹಚಿತದಲ್ಲಿ ಬರುವ ದೇವಣಗಾಂವ ಬ್ರಿಡ್ಜ್ ತುಂಬಿ ಹರಿಯುತ್ತಿದ್ದು, ಮುಂಜಾಗ್ರತವಾಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ರವಿವಾರ 600 ಜನರ ರಕ್ಷಣೆ: ಭೀಮಾ ನದಿ ಪ್ರವಾಹದ ಹಿನ್ನೀರಿನಿಂದ ಸುತ್ತುವರಿದಿರುವ ಅಫಜಲಪೂರ ತಾಲೂಕಿನ ಉಡಚಣದಲ್ಲಿ ಗ್ರಾಮಸ್ಥರ ರಕ್ಷಣೆಗೆ ರವಿವಾರ ಧುಮುಕಿರುವ ಸೇನಾ ಪಡೆ 44 ಸದಸ್ಯರ ಎಸ್.ಡಿ.ಆರ್.ಎಫ್. ತಂಡ ಹಾಗೂ ಅಗ್ನಿಶಾಮಲ ದಳದ ತಂಡದೊಂದಿಗೆ ಕಾರ್ಯಾಚರಣೆಗೆ ಇಳಿದು ಸುಮಾರು 600 ಜನರನ್ನು ರಕ್ಷಿಸಿ ಕಾಳಜಿ ಕಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.

ಗ್ರಾಮದಲ್ಲಿ 9 ರಿಂದ 10 ಸಾವಿರ ಜನಸಂಖ್ಯೆ ಇದ್ದು, ರವಿವಾರದ ವರೆಗೆ 6 ರಿಂದ 7 ಸಾವಿರ ಜನರನ್ನು ರಕ್ಷಿಸಲಾಗಿದೆ. ಸಾಯಂಕಾಲದ ಹೊತ್ತಿಗೆ ನೀರು ಇಳಿಕೆ ಕಂಡಿದ್ದರಿಂದ ಗ್ರಾಮದ ಎತ್ತರ ಪ್ರದೇಶದಲ್ಲಿದ್ದ ಜನರು ಅಲ್ಲಿಯೆ ಉಳಿದುಕೊಂಡಿದ್ದಾರೆ. ಅವರನ್ನು ಮನವೊಲಿಸಿ ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಗ್ರಾಮದಲ್ಲಿ ಮೊಕ್ಕಾಂ ಹೂಡಿರುವ ಸಹಾಯಕ ಆಯುಕ್ತ ರಾಮಚಂದ್ರ ಗಡಾದೆ ತಿಳಿಸಿದ್ದಾರೆ.

ಪೇಟ್ ಫಿರೋಜಾಬಾದಿನಲ್ಲಿ ಸೇನಾ ಪಡೆ: ಸೇನಾ ತುಕಡಿಯ ಒಂದು ತಂಡ ರವಿವಾರ ಸಾಯಂಕಾಲ ಕಲಬುರಗಿ ತಾಲೂಕಿನ ಪೇಟ್ ಫಿರೋಜಾಬಾದ ಗ್ರಾಮದಲ್ಲಿ ಸಂತ್ರಸ್ತರ ಕಾರ್ಯಾಚರಣೆಗೆ ಇಳಿದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಸಮಾಜ ಸೇವಕ : ಇದು ಕೊರೊನಾ ಗೆದ್ದು ಬಂದವನ ಸೇವೆ

Published

on

  • ವರದಿ: ಗಿರಿಧರ್ ಕೊಂಪುಳೀರಾ

ಸುದ್ದಿದಿನ, ಕೊಡಗು : ಅಂದು ಸಣ್ಣದೊಂದು ಶೀತ ಜ್ವರ,ತನ್ನ ಮಗನಿಗೂ ಅದೇ ರೀತಿಯಾಗಿತ್ತು, ದೇವದೆಲ್ಲಡೆ ಅದೇನೋ ವಿಷಮ ಗಾಳಿಯಿಂದ ಖಾಯಿಲೆ ಹರಡುತಿದೆ,ಪರೀಕ್ಷಿಕೊಳ್ಳಿ ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿದ್ದವು,ಯಾವುದಕ್ಕೂ ಪರೀಕ್ಷೆಗೆ ಹೋದರೆ ಸಾಲುಸಾಲು ಜನ ಮೂಗಿನಿಂದ,ಬಾಯಿಂದ ಸ್ಯಾಂಪಲ್ ಪಡೆಯುವುದು,ಇಷ್ಟು ಮಾಡುವುದಕ್ಕೆ ಒಂದು ದಿನವೇ ಸವೆದುಹೋಯಿತು, ಊಟವಿಲ್ಲ ನೀರಿಲ್ಲ,ತಾನೇಗೋ ಇರುತ್ತೇನೆ ಪುಟ್ಟ ಮಗನ ಕಥೆಯೇನು..?

ಹೌದು ಸಮಾಜ ಸೇವಕ ,ವೃತ್ತಿಯಲ್ಲಿ ವಕೀಲ,ಕೊಡಗಿನ ಹಿತ ಕಾಪಾಡಲು ಸದಾ ಮುಂದೆಯಿರುವ ಇವರ ಹೆಸರು
ಪವನ್ ಪೆಮ್ಮಯ್ಯ,ಯುವಕರಿಗೆ ಸ್ಪೂರ್ತಿಯ ಸೆಲೆಯಾಗಿರುವ ಇವರು ಅದೆಲ್ಲಿಂದ ಕೊರೊನಾ ಒಕ್ಕರಿಸಿತೋ ಗೊತ್ತಿಲ್ಲ ದಿನನಿತ್ಯ ಸಾವಿರಾರು ಜನರು ಬರುವ ಜಿಲ್ಲಾ ನ್ಯಾಯಾಲಯ,ಜನರ ಮಧ್ಯೆಯೇ ಸೇವೆಗಳಲ್ಲಿ ಇರುವುದರಿಂದಲೋ ಕೊರೊನಾ ಪಾಸಿಟಿವ್ ಅಂತಾ ಧೃ಼ಡಪಟ್ಟು, ಆಸ್ಪತ್ರೆಯಲ್ಲಿ ಸಿಕ್ಕಿದ ಪುಡ್ಡು,ಬೆಡ್ಡು ಚಿಕಿತ್ಸೆಗೆ ಮಾತ್ರೆ ನುಂಗಿ ಕೊರೊನಾ ತನ್ನಿಂದ ಓಡಿಹೋಗುವಷ್ಟರ ಮಟ್ಟಿಗೆ ನಾಜೂಕಾಗಿ ಚಿಕಿತ್ಸೆ ತೆಗೆದುಕೊಂಡರು.

ಆಸ್ಪತ್ರೆಯಿಂದ ಯುದ್ದ ಗೆದ್ದ ಸಂಭ್ರಮವೇನೋ ಇತ್ತು ಆದರೆ ತಾನು ಕ್ವಾರಂಟೈನ್ ನಲ್ಲಿದ್ದ ಸಂದರ್ಭ ಆದ ಅನುಭವದಿಂದ ನಲುಗಿ ಇದೀಗ ಮತ್ತೆ ಜನರ ಮಧ್ಯೆ ಬಂದಿದ್ದಾರೆ.ಹೌದು ಕೊರೊನಾ ಪಾಸಿಟಿವ್ ಆಗಿ ನರಳುವ ರೋಗಿಗಳ ಕಷ್ಟ ಒಂದಡೆಯಾದರೆ,ಇನ್ನೊಂದೆಡೆ ಕೊರೊನಾ ಪೀಡಿತ ವ್ಯಕ್ತಿಯ ಮನೆಯವರ ಪಾಡು.

ಇದನ್ನೂ ಓದಿ |ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

ಇದೀಗ ಲಾಕ್ ಡೌನ್,ಮಡಿಕೇರಿಯಲ್ಲಿ ಮಳೆ ಸಹ ಶುರುವಾಗಿದೆ.ಶುದ್ದ ಕುಡಿಯುವ ನೀರು ಆಸ್ಪತ್ರೆಯಲ್ಲಿದ್ದರೂ ಕುಡಿಯುವ ಹಾಗಿಲ್ಲ,ಮಕ್ಕಳು,ವೃದ್ದರೆನ್ನದೆ ಆಸ್ಪತ್ರೆಯತ್ತ ಮುಖ ಮಾಡುವ ಮಂದಿ ಹೊಟೇಲುಗಳಿಲ್ಲದೆ, ಆಹಾರಕ್ಕೂ ಪರದಾಡುವಂತಹವರಿಗೆ ಪವನ್ ಅನಧಾತರಾಗಿದ್ದಾರೆ.

ದಿನನಿತ್ಯ ಮಡಿಕೇರಿ ಜಿಲ್ಲಾಸಪ್ಪತ್ರೆ ಎದುರು ಒಂದೆರೆಡು ಯವಕರನ್ನು ಸೇರಿಸಿಕೊಂಡು ದಿನನಿತ್ಯ 300 ಮಂದಿಗೆ ತಾವೇ ಮನೆಯಲ್ಲಿ ತಯಾರಿಸಿ ಹೊಟ್ಟೆ ತುಂಬುವಷ್ಟು ನೀರು,ದೋಹ ತಣಿವಷ್ಟು ನೀರಿನ ವ್ಯವಸ್ಥೆಯನ್ನು ಆಸ್ಪತ್ರೆಯ ಬಳಿಯಲ್ಲೇ ಕೊರೊನಾದ ಸಕಲ ನಿಮ ಪಾಲಿಸಿಕೊಂಡು,ಅವರ ಬಳಿಗೆ ಬರುವವರಿಗೂ ಮಾರ್ಗದರ್ಶನ ನೀಡುತ್ತಿದ್ದಾರೆ.

ಆರಂಭದಲ್ಲಿ ಸ್ವಂತ ಖರ್ಚಿನಿಂದ ಸಣ್ಣ ಪ್ರಮಾಣದಲ್ಲಿ ಆರಂ‌ಭಿಸಿದ ಈ ಕಾರ್ಯಕ್ಕೆ,ಸ್ನೇಹಿತರು ಹಿತೈಶಿಗಳ ಪ್ರೋತ್ಸಾಹವಿದೆ. ಏನೇ ಆಗಲಿ ಸಮಾಜದಲ್ಲಿ ಕೊರೊನಾ ಜೊತೆಗೂ ಇತರರೊಂದಿಗೆ ಬೆರೆಯಬಹುದು,ಅವರ ಕಷ್ಟ ಸುಖದಲ್ಲಿ ಸುರಕ್ಷಿತವಾಗಿ ಭಾಗಿಯಾಗುತ್ತಿರುವುದಕ್ಕೆ ಇದಕ್ಕಿಂದ ಉದಾಹರಣೆ ಬೇಕಿಲ್ಲ.

ಕೃಪೆ : Mangalore information

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚಿತ್ರದುರ್ಗ | ಜಿಲ್ಲೆಯಲ್ಲಿ 390 ಜನರಿಗೆ ಕೋವಿಡ್ ಸೋಂಕು ದೃಢ: 80 ಮಂದಿ ಬಿಡುಗಡೆ

Published

on

ಸುದ್ದಿದಿನ,ಚಿತ್ರದುರ್ಗ: ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಶುಕ್ರವಾರದ ವರದಿಯಲ್ಲಿ 390 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಚಿತ್ರದುರ್ಗ ತಾಲ್ಲೂಕಿನಲ್ಲಿ 182, ಚಳ್ಳಕೆರೆ 57, ಹಿರಿಯೂರು 28, ಹೊಳಲ್ಕೆರೆ 30, ಹೊಸದುರ್ಗ 77, ಮೊಳಕಾಲ್ಮುರು ತಾಲ್ಲೂಕಿನಲ್ಲಿ 16 ಪ್ರಕರಣ ಸೇರಿದಂತೆ ಒಟ್ಟು 390 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲೆಯ ಹಲವೆಡೆ ಕೋವಿಡ್‍ಗೆ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಶುಕ್ರವಾರ 80 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಶುಕ್ರವಾರ ಒಟ್ಟು 2139 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 390 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 19,707 ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ | ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ 

ಕೋವಿಡ್‍ನಿಂದ ಇಂದು ಇಬ್ಬರು ಮೃತರಾಗಿದ್ದು ಇದುವರೆಗೆ ಒಟ್ಟು 101 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 17,356 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 2,250 ಸಕ್ರಿಯ ಪ್ರಕರಣಗಳು ಇವೆ.
ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 1,59,469 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.

ಈವರೆಗೆ 4,45,728 ಜನರ ಮಾದರಿ ಸಂಗ್ರಹಿಸಲಾಗಿದ್ದು, 4,23,932 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 1352 ಜನರ ವರದಿ ಬರುವುದು ಬಾಕಿ ಇದೆ. 737 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಂಗನಾಥ್ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಾಕ್ ಡೌನ್ ನಡುವೆ ಸಪ್ತಪದಿ ತುಳಿದ ನಟ ಚಂದನ್-ಕವಿತ

Published

on

ಸುದ್ದಿದಿನ ಡೆಸ್ಕ್ : ಲಾಕ್ ಡೌನ್ ನಡುವೆ ನಟ ಚಂದನ್ ಗೌಡ ಮತ್ತು ಕವಿತಾ ಗೌಡ ಶುಕ್ರವಾರ ವಿವಾಹವಾದರು.

ಕೆಲವೇ ಆಪ್ತರ‌ ಸಮ್ಮುಖದಲ್ಲಿ ಇವರ ಕಲ್ಯಾಣವುನೆರವೇರಿತು. ಚಂದನ್ ಮಾಸ್ಕ್ ಧರಿಸಿಕೊಂಡೇ ಮಾಂಗಲ್ಯಧಾರಣೆ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಮದುವೆ ಸಂಭ್ರಮ ಹಂಚಿಕೊಂಡ ಜೋಡಿಯು ಮದುವೆ ಫೋಟೋ ಪೋಸ್ಟ್ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending