ರಾಜಕೀಯ
ಸ್ಥಳೀಯ ಸಂಸ್ಥೆ ಚುನಾವಣೆ: ಮದ್ದೂರಿನಲ್ಲಿ ಪ್ರಾಬಲ್ಯ ಸಾಧಿಸಿದ ಜೆಡಿಎಸ್
ಸುದ್ದಿದಿನ ವಿಶೇಷ: ಮದ್ದೂರು ಇತಿಹಾಸದಲ್ಲಿ ಪುರಸಭಾ ಚುನಾವಣೆಯಲ್ಲಿ 50ಲಕ್ಷಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಓಟಿಂಗ್ ನಡೆದಿತ್ತು. ಮಾಜಿ ಪುರಸಭಾ ಅಧ್ಯಕ್ಷ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅಮರ್ ಬಾಬು ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕೃಷ್ಣ ರವರು ತೀವ್ರ ಪೈಪೋಟಿ ನೀಡಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಕ್ಷೇತ್ರದ ಮತದಾರರು ಪಕ್ಷೇತರ ಅಭ್ಯರ್ಥಿಯ ಕೈ ಹಿಡಿದಿದ್ದಾರೆ.
ಅದೃಷ್ಟದ ಫಲಿತಾಂಶ
ಮದೂರುಪುರಸಭಾ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 8ನೇ ವಾರ್ಡ್ ನ ಪಕ್ಷೇತರ ಅಭ್ಯರ್ಥಿಯಾಗಿ ರತ್ನಾ ತಿಮ್ಮಯ್ಯ ರವರು ಜಯಶೀಲ ರಾಗಿದ್ದಾರೆ. Éಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಲತಾ ವೆಂಕಟೇಶ್ ರವರು 286ಮತಗಳನ್ನು ಪಡೆದಿದ್ದರು ಮತ್ತು ಪಕ್ಷೇತರ ಅಭ್ಯರ್ಥಿಯು ಸಹ 286ಮತಗಳನ್ನು ಪಡೆದಿದ್ದರು ಆದರೆ ಚುನಾವಣೆ ಅಧಿಕಾರಿಗಳು ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಅಭ್ಯರ್ಥಿಗಳ ಸಮ್ಮುಖದಲ್ಲಿ ಡಬ್ಬದಲ್ಲಿ ಚೀಟಿಯನ್ನು ಹಾಕಿ ಎತ್ತುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ರವರನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.
2018 ನೇ ಮದ್ದೂರು ಪುರಸಭೆ ಚುನಾವಣೆ ವಿಜೇತರ ಪಟ್ಟಿ
1ನೇ ವಾರ್ಡ್ ವಿಜೇತರ ಹೆಸರು :/ಎಸ್ ಮಹೇಶ್ -ಪಡೆದ ಮತಗಳು560 -(ಪಕ್ಷ ಜೆಡಿಎಸ್ )
2 ನೇ ವಾರ್ಡ್ ವಿಜೇತರ ಹೆಸರು : ಶೋಭಾ ಮರಿ ಪಡೆದ ಮತಗಳು442 ಅಂತರ -(ಪಕ್ಷ ಪಕ್ಷೇತರ )
3 ನೇ ವಾರ್ಡ್ ವಿಜೇತರ ಹೆಸರು : ಬಸವರಾಜ -ಪಡೆದ ಮತಗಳು402 ಅಂತರ – (ಪಕ್ಷ ಜೆಡಿಎಸ್ )
4 ನೇ ವಾರ್ಡ್ ವಿಜೇತರ ಹೆಸರು : .ಪ್ರಿಯಾಂಕಾ ಅಪ್ಪುಗೌಡ -ಪಡೆದ ಮತಗಳು368 – (ಪಕ್ಷ ಪಕ್ಷೇತರ )
5 ನೇ ವಾರ್ಡ್ ವಿಜೇತರ ಹೆಸರು : ಕೋಕಿಲಾ ಅರುಣ್ -ಪಡೆದ ಮತಗಳು 613- ( ಪಕ್ಷ ಕಾಂಗ್ರೆಸ್ )
6 ನೇ ವಾರ್ಡ್ ವಿಜೇತರ ಹೆಸರು : ಕೆ. ಪ್ರಮಿಳಾ -ಪಡೆದ ಮತಗಳು356 – (ಪಕ್ಷ ಜೆಡಿಎಸ್ )
7 ನೇ ವಾರ್ಡ್ ವಿಜೇತರ ಹೆಸರು : ಸಚಿನ್ ಪಡೆದ ಮತಗಳು 210 -( ಪಕ್ಷ ಪಕ್ಷೇತರ )
8 ನೇ ವಾರ್ಡ್ ರಲ್ಲಿ ಸಮಬಲ ಸಾಧಿಸಿದ್ದು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿಗಳು ಇಬ್ಬರ ಹೆಸರನ್ನು ಬರೆದು ಒಂದು ಪಟ್ಟಿಯಲ್ಲಿ ಹಾಕಿ ಕಣ್ಣಿಗೆ ಬಟ್ಟೆ ಕಟ್ಟಿ ಯತಿ ಸುವ ಮೂಲಕ ಪಕ್ಷೇತರ ಅಭ್ಯರ್ಥಿ ರತ್ನ ತಿಮ್ಮಯ್ಯ ಲಾಟರಿಯಲ್ಲಿ ಆಯ್ಕೆಯಾದರು.
9 ನೇ ವಾರ್ಡ್ ವಿಜೇತರ ಹೆಸರು : ಶೋಭಾರಾಣಿ ಚಂದ್ರು -ಪಡೆದ ಮತಗಳು 304 (ಪಕ್ಷ ಜೆಡಿಎಸ್ )
10ನೇ ವಾರ್ಡ್ ವಿಜೇತರ ಹೆಸರು : ಕೇಬಲ್ ಸುರೇಶ್ ಪಡೆದ ಮತಗಳು863 – ( ಪಕ್ಷ ಜೆಡಿಎಸ್ )
11 ನೇ ವಾರ್ಡ್ ವಿಜೇತರ ಹೆಸರು : ಕಮಲ್ನಾಥ್ -ಪಡೆದ ಮತಗಳು 284- ( ಪಕ್ಷ ಕಾಂಗ್ರೆಸ್ )
12 ನೇ ವಾರ್ಡ್ ವಿಜೇತರ ಹೆಸರು : ಎಚ್ ವಿ ಸುಮಿತ್ರಾ ಪಡೆದ ಮತ 269 -ಅಂತರ-( ಪಕ್ಷ ಜೆಡಿಎಸ್ )
13 ನೇ ವಾರ್ಡ್ ವಿಜೇತರ ಹೆಸರು : ಪಿ ಸಿದ್ದರಾಜು ಪಡೆದ ಮತ 250ಅಂತರ- ( ಪಕ್ಷ )
14 ನೇ ವಾರ್ಡ್ ವಿಜೇತರ ಹೆಸರು : ಆಯುಷಾ ಪಡೆದ ಮತಗಳ 639 -( ಪಕ್ಷ ಜೆಡಿಎಸ್ )
15 ನೇ ವಾರ್ಡ್ ವಿಜೇತರ ಹೆಸರು : ಸಬ್ರಿನ್ ತಾಜ್ ಪಡೆದ ಮತಗಳು 303–( ಪಕ್ಷ ಕಾಂಗ್ರೆಸ್ )
16ನೇ ವಾರ್ಡ್ ವಿಜೇತರ ಹೆಸರು : ಕ್ಕೆ ವನಿತಾ ಪಡೆದ ಮತಗಳು 314– -( ಪಕ್ಷ ಜೆಡಿಎಸ್ )
17ನೇ ವಾರ್ಡ್ ವಿಜೇತರ ಹೆಸರು : ಎಂಐ ಪ್ರವೀಣ್ ಪಡೆದ ಮತಗಳು 353 –( ಪಕ್ಷ ಜೆಡಿಎಸ್ )
18ನೇ ವಾರ್ಡ್ ವಿಜೇತರ ಹೆಸರು : ಎಂಕೆ ಮನೋಜ್ ಕುಮಾರ್ ಪಡೆದ ಮತ 303- –( ಪಕ್ಷ ಪಕ್ಷೇತರ )
19ನೇ ವಾರ್ಡ್ ವಿಜೇತರ ಹೆಸರು : ಆದಿಲ್ ಆಲಿಖಾನ್ ಪಡೆದ ಮತ 396 ಅಂತರ —(ಪಕ್ಷ ಜೆಡಿಎಸ್ )
20ನೇ ವಾರ್ಡ್ ವಿಜೇತರ ಹೆಸರು : ಟಿಆರ್ ಪ್ರಸನ್ನ ಕುಮಾರ್ ಅವಿರೋಧ ಆಯ್ಕೆ
21ನೇ ವಾರ್ಡ್ ವಿಜೇತರ ಹೆಸರು : ಸರ್ವಮಂಗಳ ಪಡೆದ ಮತಗಳು 673 ( ಪಕ್ಷ ಜೆಡಿಎಸ್ )
22ನೇ ವಾರ್ಡ್ ವಿಜೇತರ ಹೆಸರು : ಸಿ ನಂದೀಶ್ ಪಡೆದ ಮತಗಳು ಅಂತರ—-( ಪಕ್ಷ ಕಾಂಗ್ರೆಸ್ )
23ನೇ ವಾರ್ಡ್ ವಿಜೇತರ ಹೆಸರು ಲತಾ ಕೆ ಪಡೆದ ಮತಗಳು 560 ಅಂತರ—( ಪಕ್ಷ ಬಿಜೆಪಿ )
ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಿಜೇತ ಪಕ್ಷಗಳ ವಿವರ
ಜೆಡಿಎಸ್ -12
ಕಾಂಗ್ರೆಸ್ -4
ಬಿಜೆಪಿ -1
ಪಕ್ಷೇತರ -6
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ
ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.
ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243