Connect with us

ದಿನದ ಸುದ್ದಿ

ಲೋಕಸಭಾ ಚುನಾವಣೆ | ದಾವಣಗೆರೆ ಜಿಲ್ಲೆಯಲ್ಲಿ 63 ವಿಶೇಷ ಮತಗಟ್ಟೆಗಳ ಸ್ಥಾಪನೆ, ವಿಭಿನ್ನವಾಗಿ ಸಿದ್ದವಾಗಿರುವ ಮತಗಟ್ಟೆಗಳು

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಚುನಾವಣೆ ನಡೆಯುತ್ತಿದ್ದು ಜಿಲ್ಲೆಯಲ್ಲಿನ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ 35 ಸಖಿ ಮತಗಟ್ಟೆಗಳು, ತಲಾ 1 ರಂತೆ 7 ಯುವ ನಿರ್ವಾಹಣೆ ಮತಗಟ್ಟೆಗಳು, ತಲಾ 1 ರಂತೆ 7 ಸಾಂಪ್ರದಾಯಿಕ ಮತಗಟ್ಟೆಗಳು, ತಲಾ 1 ರಂತೆ 7 ಧೈಯ ಆಧಾರಿತ ಮತಗಟ್ಟೆಗಳು ಹಾಗೂ ತಲಾ 1 ರಂತೆ 7 ವಿಶೇಷ ಚೇತನ ಮತಗಟ್ಟೆಗಳು ಸೇರಿ 63 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಿ ವಿಶೇಷವಾಗಿ ಅಲಂಕರಿಸಿ ಮತದಾರರನ್ನು ಕೈಬೀಸಿ ಕರೆಯುವಂತೆ ಸಿಂಗರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ಸಖಿ ಮತಗಟ್ಟೆ

103- ಜಗಳೂರು ತಾ; ಮತಗಟ್ಟೆ 8 ಸರ್ಕಾರಿ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಕೊಠಡಿ 1 ಅರಸೀಕೆರೆ. ಇಲ್ಲಿ ಪುರುಷ 334, ಮಹಿಳೆ 345 ಸೇರಿ 679, ಸೊಕ್ಕೆ ಮತಗಟ್ಟೆ 20 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 388, ಮಹಿಳೆ 395 ಒಟ್ಟು-783. ಪಲ್ಲಾಗಟ್ಟೆ ಮತಗಟ್ಟೆ 90 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 390, ಮಹಿಳೆ 389 ಸೇರಿ 779, ಜಗಳೂರು ಪಟ್ಟಣ ಮತಗಟ್ಟೆ 190 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸಂತೆ ಪೇಟೆ) ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 635, ಮಹಿಳೆ 688 ಸೇರಿ 1323, ಬಿದರಿಕೆರೆ ಮತಗಟ್ಟೆ 250 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, (ಹಳೆಯ ಕಟ್ಟಡ) (ಪಶ್ಚಿಮ ಭಾಗ) ಪುರುಷ 575, ಮಹಿಳೆ 614 ಸೇರಿ 1189.

ಹರಿಹರ ವಿಧಾನಸಭಾ ಕ್ಷೇತ್ರ

ಹರಿಹರ ಮತಗಟ್ಟೆ 59, ಮೈಸೂರು ಕಿರ್ಲೋಸ್ಕರ್ ಹೈಸ್ಕೂಲ್ ಕೊಠಡಿ ಸಂಖ್ಯೆ-2 ರಲ್ಲಿ ಪುರುಷ 505, ಮಹಿಳೆ 487 ಸೇರಿ 992, ಬೆಳ್ಳೂಡಿ ಮತಗಟ್ಟೆ 111 ಶ್ರೀ ಪಟೇಲ್ ಗುರು ಬಸಪ್ಪ ಪ್ರೌಢಶಾಲೆ ಪುರುಷ 420, ಮಹಿಳೆ 388 ಸೇರಿದಂತೆ 808, ಹರಿಹರ ಮತಗಟ್ಟೆ 46, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 650, ಮಹಿಳೆ 623 ಸೇರಿ 1273, ಮಲೆಬೆನ್ನೂರು ಮತಗಟ್ಟೆ 192 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ 2 ಇಲ್ಲಿ ಪುರುಷ 520, ಮಹಿಳೆ 573 ಸೇರಿ 1093. ಕುಂಬಳೂರು ಮತಗಟ್ಟೆ 167 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ-1 ಇಲ್ಲಿ ಪುರುಷ 513, ಮಹಿಳೆ 526 ಒಟ್ಟು-1039.

ವಿಧಾನಸಭಾ ಕ್ಷೇತ್ರ ದಾವಣಗೆರೆ ಉತ್ತರ

ಕ್ಕಕರಗೊಳ್ಳ ಮತಗಟ್ಟೆ 4 ಸರ್ಕಾರಿ ಸಂಯುಕ್ತ ಪಿಯು ಕಾಲೇಜು ಕೊಠಡಿ ಸಂಖ್ಯೆ 1 ಪುರುಷ 582, ಮಹಿಳೆ 615 ಸೇರಿ 1197, ಬೇತೂರು 23 ಗ್ರಾಮ ಪಂಚಾಯಿತಿ ಕಚೆÉೀರಿ ಇಲ್ಲಿ ಪುರುಷ 564, ಮಹಿಳೆ 593 ಒಟ್ಟು-1157, ದಾವಣಗೆರೆ 208 ಅಥಣಿ ಹೈಸ್ಕೂಲ್ ಎಂಸಿಸಿ ಬಿ.ಬ್ಲಾಕ್ ಪುರುಷ 656, ಮಹಿಳೆ 671 ಒಟ್ಟು-1327. ದಾವಣಗೆರೆ 98 ಈಶ್ವರಮ್ಮ ಹೈಯರ್ ಪ್ರೈಮರಿ ಸ್ಕೂಲ್, ಪಿ.ಜೆ.ಬಡಾವಣೆ ಇಲ್ಲಿ ಪುರುಷ 606, ಮಹಿಳೆ 594 ಒಟ್ಟು-1200, ನಿಟ್ಟುವಳ್ಳಿ 137 ಸರ್ಕಾರಿ ಪ್ರೌಢಶಾಲೆ ಶಾಲಾ ಕೊಠಡಿ ಸಂಖ್ಯೆ 2 ರಲ್ಲಿ ಪುರುಷ 477, ಮಹಿಳೆ 539 ಒಟ್ಟು-1016.

ದಾವಣಗೆರೆ ದಕ್ಷಿಣ ಕ್ಷೇತ್ರ

ದಾವಣಗೆರೆ 142 ಮುದೇಗೌಡ್ರು ಮಲ್ಲಮ್ಮ ಮುರಿಗೆಪ್ಪ ಬಾಲಕಿಯರ ಪ್ರೌಢಶಾಲೆ, ಕೆ.ಆರ್.ರಸ್ತೆ ಇಲ್ಲಿ ಪುರುಷ 731, ಮಹಿಳೆ 737 ಒಟ್ಟು-1468. ಶಿರಮಗೊಂಡನಹಳ್ಳಿ 178 ಸರ್ಕಾರಿ ಪ್ರೌಢಶಾಲೆ ಪುರುಷ 497, ಮಹಿಳೆ 519 ಒಟ್ಟು-1016. ಹದಡಿ 202 ಗ್ರಾಮ ಪಂಚಾಯಿತಿ ಕಚೇರಿ ಪುರುಷ 554, ಮಹಿಳೆ 582 ಒಟ್ಟು-1136. ಜಾಲಿನಗರ 36 ಶ್ರೀ ದುಗಾರ್ಂಬಿಕಾ ಸಂಯುಕ್ತ ಪ್ರೌಢಶಾಲೆ ಪ್ರಯೋಗಾಲಯ ಪುರುಷ 336, ಮಹಿಳೆ 378 ಒಟ್ಟು-714, ದಾವಣಗೆರೆ ದೇವರಾಜ ಅರಸ್ ಬಡಾವಣೆ 41 ಶ್ರೀಮತಿ ಚಿರಡೋಣಿ ಕಮಲಮ್ಮ ವೈ ತಿಮ್ಮಪ್ಪ ಶೆಟ್ಟಿ ಸರ್ಕಾರಿ ಮಾಡರ್ನ್ ಹೈಯರ್ ಪ್ರೈಮರಿ ಸ್ಕೂಲ್ ಪುರುಷ 456, ಮಹಿಳೆ 449 ಒಟ್ಟು-905.

ಮಾಯಕೊಂಡ ಕ್ಷೇತ್ರ

ಆನಗೋಡು 61 ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 630, ಮಹಿಳೆ 640 ಒಟ್ಟು-1231, ತೋಳಹುಣಸೆ ಯಲ್ಲಮ್ಮನಗರ 36 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿ ಸಂಖ್ಯೆ 1 ಪುರುಷ 364, ಮಹಿಳೆ 357 ಒಟ್ಟು-706. ಮಾಯಕೊಂಡ 160 ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 264, ಮಹಿಳೆ 275 ಒಟ್ಟು-539, ಅತ್ತಿಗೆರೆ 112 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 493, ಮಹಿಳೆ 499 ಒಟ್ಟು-990, ತ್ಯಾವಣಿಗಿ 177, ಕರ್ನಾಟಕ ಪಬ್ಲಿಕ್ ಸ್ಕೂಲ್ ಹೈಸ್ಕೂಲ್ ವಿಭಾಗ ಪುರುಷ 492, ಮಹಿಳೆ 507 ಒಟ್ಟು 999 ಮತದಾರರು.

ವಿಧಾನಸಭಾ ಕ್ಷೇತ್ರ ಚನ್ನಗಿರಿ

ನಲ್ಲೂರು 105 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಪುರುಷ 640, ಮಹಿಳೆ 635 ಸೇರಿ 1275, ಮಸಣಿಕೆರೆ 248 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪುರುಷ 329, ಮಹಿಳೆ 299 ಸೇರಿ 628. ಕೆರೆಬಿಳಚಿ 62 ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ (ಪಶ್ಚಿಮ ಭಾಗ) ಪುರುಷ 401, ಮಹಿಳೆ 465 ಒಟ್ಟು-866, ಹಿರೇಕೂಗಲೂರು 17 ಶ್ರೀ ತರಳಬಾಳು ಜಗದ್ಗುರ ಸರ್ಕಾರಿ ಜೂನಿಯರ್ ಕಾಲೇಜು ಹೈಸ್ಕೂಲ್ ವಿಭಾಗ ಪುರುಷ 608, ಮಹಿಳೆ 636 ಒಟ್ಟು-1244, ಚನ್ನಗಿರಿ ಬಿ.ಇ.ಓ ಕಚೇರಿ ಹಿಂಭಾಗ 169 ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಪುರುಷ 608, ಮಹಿಳೆ 636 ಒಟ್ಟು-1244.

ಹೊನ್ನಾಳಿ ಕ್ಷೇತ್ರ

ಸುರಹೊನ್ನೆ 169 ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪುರುಷ 432 ಮಹಿಳೆ 489 ಒಟ್ಟು-921, ಗೋವಿನಕೋವಿ 149 ಸರ್ಕಾರಿ ಪ್ರೌಢಶಾಲೆ ಪುರುಷ 563, ಮಹಿಳೆ 616 ಒಟ್ಟು-1179, ನ್ಯಾಮತಿ 178 ಸರ್ಕಾರಿ ಪಿಯು ಕಾಲೇಜು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುರುಷ 495, ಮಹಿಳೆ 520 ಒಟ್ಟು-1015, ಹಿರೇಬಾಸೂರು 129 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುರುಷ 340, ಮಹಿಳೆ 314 ಒಟ್ಟು-654, ಹೊನ್ನಾಳಿ ತಾಲ್ಲೂಕು ಪಂಚಾಯತ್ ಕಚೇರಿ 84 ಪುರುಷ 294, ಮಹಿಳೆ 303 ಸೇರಿ 597 ಮತದಾರರು.

ಯುವ ಮತದಾರರ ಮತಗಟ್ಟೆಗಳು

ಜಗಳೂರು ತಾ; 183 ಜಗಳೂರು ಪಟ್ಟಣದ ಹೊರಕೆರೆ ಅಂಗನವಾಡಿ ಕೇಂದ್ರ ಇಲ್ಲಿ ಪುರುಷ 353, ಮಹಿಳೆ 377 ಒಟ್ಟು-730, ಹರಿಹರ ತಾ; 61 ಮೈಸೂರು ಕಿರ್ಲೋಸ್ಕರ್ ಪ್ರೌಢಶಾಲೆ ಕೊಠಡಿ ಸಂಖ್ಯೆ-5 ಇಲ್ಲಿ ಪುರುಷ 708, ಮಹಿಳೆ 731 ಸೇರಿ 1439, ದಾವಣಗೆರೆ ಉತ್ತರ; ಕುಂದುವಾಡ ರಸ್ತೆ ಚಿಗಟೇರಿ ಬಡಾವಣೆ 49 ಸಪ್ತಗಿರಿ ವಿದ್ಯಾಲಯ ಇಲ್ಲಿ ಪುರುಷ 415, ಮಹಿಳೆ 403 ಸೇರಿ 818, ದಾವಣಗೆರೆ- ದಕ್ಷಿಣ; 2 ಯರಗುಂಟೆ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 725, ಮಹಿಳೆ 747, ಒಟ್ಟು-1472. ಮಾಯಕೊಂಡ ಕ್ಷೇತ್ರ; 159 ಮಾಯಕೊಂಡ ಕರ್ನಾಟಕ ಪಬ್ಲಿಕ್ ಶಾಲೆ (ಪ್ರಾಥಮಿಕ ವಿಭಾಗ) ಪುರುಷ 453, ಮಹಿಳೆ 488 ಸೇರಿ ಒಟ್ಟು-941. ಚನ್ನಗಿರಿ ಕ್ಷೇತ್ರ; 138 ಮುದಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 499, ಮಹಿಳೆ 508 ಒಟ್ಟು-1007. ಹೊನ್ನಾಳಿ ಕ್ಷೇತ್ರ; 193 ಕುಳಗಟ್ಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 382, ಮಹಿಳೆ 369 ಸೇರಿ 751 ಮತದಾರರಿದ್ದಾರೆ.

ಸಾಂಪ್ರದಾಯಿಕ ಮತಗಟ್ಟೆಗಳು

ಜಗಳೂರು ತಾ; 76 ಅಣಬೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 638, ಮಹಿಳೆ 616 ಒಟ್ಟು-1254. ಹರಿಹರ ಕ್ಷೇತ್ರ; 153 ಯಲವಟ್ಟಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 457, ಮಹಿಳೆ 434 ಒಟ್ಟು-891. ದಾವಣಗೆರೆ ಉತ್ತರ; 200 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಅಭಿಯಂತರ ಕಚೇರಿ ಇಲ್ಲಿ ಪುರುಷ 667, ಮಹಿಳೆ 654 ಒಟ್ಟು-1321, ದಾವಣಗೆರೆ- ದಕ್ಷಿಣ; 169 ಜಾಲಿನಗರ ಜನತಾ ವಿದ್ಯಾಲಯ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಇಲ್ಲಿ ಪುರುಷ 476, ಮಹಿಳೆ 476 ಒಟ್ಟು-952. ಮಾಯಕೊಂಡ ಕ್ಷೇತ್ರ; 5 ಶ್ರೀರಾಮನಗರ ಲಂಬಾಣಿಹಟ್ಟಿ ಮಜರೆ ಗ್ರಾಮ ಆಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೂರ್ವ ಭಾಗ, ಇಲ್ಲಿ ಪುರುಷ 325, ಮಹಿಳೆ 345 ಒಟ್ಟು-670. ಚನ್ನಗಿರಿ ವಿಧಾನಸಭಾ ಕ್ಷೇತ್ರ; 100 ಅಸ್ತಾಪನಹಳ್ಳಿ ಸರ್ಕಾರಿ ಎಸ್‍ಟಿ ಆಶ್ರಮ ಶಾಲೆ ಇಲ್ಲಿ ಪುರುಷ 474, ಮಹಿಳೆ 505, ಒಟ್ಟು-979. ಹೊನ್ನಾಳಿ ಕ್ಷೇತ್ರ; 92 ಆಂಜಿನೇಯಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 296, ಮಹಿಳೆ 276 ಸೇರಿ ಒಟ್ಟು-572.

ಧ್ಯೇಯ ಆಧಾರಿತ ಮತಗಟ್ಟೆಗಳು

ಜಗಳೂರು ಕ್ಷೇತ್ರ; 238 ಮುಸ್ಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 501, ಮಹಿಳೆ 546 ಒಟ್ಟು-1047. ಹರಿಹರ ಕ್ಷೇತ್ರ; 98 ಹನಗವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 325, ಮಹಿಳೆ 330 ಒಟ್ಟು-655, ದಾವಣಗೆರೆ- ಉತ್ತರ; 201 ದಾವಣಗೆರೆ ಭದ್ರಾ ಕಾಲೋನಿಯ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಇಲ್ಲಿ ಪುರುಷ 678, ಮಹಿಳೆ 680 ಒಟ್ಟು-1358, ದಾವಣಗೆರೆ- ದಕ್ಷಿಣ; 139 ಜಯದೇವ ಹಾಸ್ಟೆಲ್, ಹದಡಿ ರಸ್ತೆಯ ಶ್ರೀಮತಿ ಗೌರಮ್ಮ ಡಿ.ಎಂ. ಹನಗೋಡಿ ಮಠದ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಇಲ್ಲಿ ಪುರುಷ 158, ಮಹಿಳೆ 173 ಒಟ್ಟು-331. ಮಾಯಕೊಂಡ ಕ್ಷೇತ್ರ; 41 ಹೊನ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಇಲ್ಲಿ ಪುರುಷ 449, ಮಹಿಳೆ 461, ಒಟ್ಟು-910, ಚನ್ನಗಿರಿ ಕ್ಷೇತ್ರ; 160 ಚನ್ನಗಿರಿ ಪಟ್ಟಣ ಸರ್ಕಾರಿ ಸಂಯುಕ್ತ ಬಾಲಕಿಯರ ಪ್ರೌಢಶಾಲೆ ಇಲ್ಲಿ ಪುರುಷ 573, ಮಹಿಳೆ 607, ಒಟ್ಟು-1180. ಹೊನ್ನಾಳಿ ಕ್ಷೇತ್ರ; 232 ಚೀಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 462, ಮಹಿಳೆ 510, ಒಟ್ಟು-972 ಮತದಾರರು.

ವಿಶೇಷ ಚೇತನರಿಂದ ನಿರ್ವಹಿಸುವ ಮತಗಟ್ಟೆಗಳು

ಜಗಳೂರು ಕ್ಷೇತ್ರ; 181 ಜಗಳೂರು ಪಟ್ಟಣದ ಹೊರಕೆರೆ ಸರ್ಕಾರಿ ಕನ್ನಡ ಮಾದರಿ ಹೈಯರ್ ಪ್ರೈಮರಿ ಸ್ಕೂಲ್, ಇಲ್ಲಿ ಪುರುಷ 257, ಮಹಿಳೆ 244, ಒಟ್ಟು-501. ಹರಿಹರ ಕ್ಷೇತ್ರ; 113 ಬೆಳ್ಳೂಡಿ ಶ್ರೀ ಪಟೇಲ್ ಗುರುಬಸಪ್ಪ ಪ್ರೌಢಶಾಲೆ ಇಲ್ಲಿ ಪುರುಷ 601, ಮಹಿಳೆ 613 ಸೇರಿ 1214. ದಾವಣಗೆರೆ- ಉತ್ತರ; 178 ನಿಟ್ಟುವಳ್ಳಿ ಸರ್ಕಾರಿ ಪ್ರೌಢಶಾಲೆ ಕೊಠಡಿ 4 ರಲ್ಲಿ ಪುರುಷ 620, ಮಹಿಳೆ 664 ಒಟ್ಟು-1284. ದಾವಣಗೆರೆ- ದಕ್ಷಿಣ; 39 ಶಿವಾಲಿ ಟಾಕೀಸ್ ರಸ್ತೆ, ಕೌಶಲಾಭಿವೃದ್ಧಿಗಾಗಿ ಸಂಯೋಜಿತ ಪ್ರಾದೇಶಿಕ ಕೇಂದ್ರ ಇಲ್ಲಿ ಪುರುಷ 614, ಮಹಿಳೆ 620 ಸೇರಿ 1234. ಮಾಯಕೊಂಡ ಕ್ಷೇತ್ರ; 61 ಆನಗೋಡು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಪುರುಷ 598, ಮಹಿಳೆ 634 ಸೇರಿ 1232. ಚನ್ನಗಿರಿ ಕ್ಷೇತ್ರ; 36 ಸಂತೆಬೆನ್ನೂರು ಶ್ರೀಶೈಲ ಜಗದ್ಗುರು ವಾಗೀಶ ಪಾಂಡಿತರಾಧ್ಯ ಸರ್ಕಾರಿ ಜೂನಿಯರ್ ಕಾಲೇಜು, ಇಲ್ಲಿ ಪುರುಷ 420, ಮಹಿಳೆ 423, ಒಟ್ಟು-843. ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರ ಮತಗಟ್ಟೆ 74 ಹೊನ್ನಾಳಿಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇಲ್ಲಿ ಪುರುಷ 270, ಮಹಿಳೆ 314 ಸೇರಿದಂತೆ ಒಟ್ಟು 584 ಮತದಾರರಿದ್ದಾರೆ.

ವಿಶೇಷಚೇತನರಿಗೆ ವಿಶೇಷವಾಗಿ ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಇನ್ನೋವಾ ವಾಹನ ನೀಡಿದ್ದು ಮಸ್ಟರಿಂಗ್, ಡಿ.ಮಸ್ಟರಿಂಗ್‍ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾದಕ ವಸ್ತುಗಳಿಗೆ ಕಡಿವಾಣ ; ಸ್ವಾಸ್ಥ್ಯ ಬದುಕಿಗೆ ಸೋಪಾನ

Published

on

  • ಡಾ.ಗೀತಾ ಬಸವರಾಜು, ಉಪನ್ಯಾಸಕರು, ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.

ಈ ಶಕ್ತಿಯ ಮೂಲಕ ತುಂಬಾ ಶ್ರೇಷ್ಟನಾಗಬೇಕಾದ ಮಾನವ ನಗರೀಕರಣ, ಕೈಗಾರಿಕೀಕರಣ, ಪಾಶ್ಚಾತ್ಯೀಕರಣದ ಪ್ರಭಾವದಿಂದ ಪ್ರೇರಿತನಾಗಿ ಮೂಲ ಸಂಸ್ಕೃತಿಯನ್ನು ಮರೆತು ಮೃಗೀಯ ವರ್ತನೆಗೆ ದಾಸನಾಗಿದ್ದಾನೆ. ಪ್ರಸ್ತುತ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಮುಂದುವರೆದಿದ್ದರೂ, 20ನೇ ಶತಮಾನದಿಂದೀಚೆಗೆ ಜಗತ್ತನ್ನೇ ತಲ್ಲಣಗೊಳಿಸುವ ಸಾಮಾಜಿಕ ಪಿಡುಗುಗಳಾದ ಬಡತನ, ಭಿಕ್ಷಾಟನೆ, ನಿರುದ್ಯೋಗ, ವರದಕ್ಷಿಣೆ, ಅಪರಾಧ ಮಾದಕ ವಸ್ತು ವ್ಯಸನವು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ.

ಈ ಸಮಸ್ಯೆಗಳನ್ನು ಪರಿಹರಿಸಬೇಕಾಧ ಯುವಜನತೆ ಇಂತಹ ದುಶ್ಚಟಗಳ ಸೆಲೆಯಲ್ಲಿ ಸಿಕ್ಕು ತಮ್ಮ ಅಮೂಲ್ಯ ಬದುಕನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕಾರಿ.
ಯುವಶಕ್ತಿಯೇ ದೇಶದ ಶಕ್ತಿಯಾಗಿದ್ದು ಭವ್ಯಭಾರತ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಜನತೆ ಮಾದಕ ವಸ್ತುಗಳ ದುಶ್ಚಟಕ್ಕೆ ಒಳಗಾಗಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು ಅಂಧಕಾರದಲ್ಲಿ ಜೀವನ ನಡೆಸುತ್ತ ಚಿಕ್ಕ ವಯಸ್ಸಿನಲ್ಲಿಯೇ ಮರಣ ಹೊಂದುತ್ತಿರುವುದು ಆಘಾತದ ವಿಷಯ.

ಜೋಸೆಫ್ ಜ್ಯೂಲಿಯನ್ ರವರ ಪ್ರಕಾರ ಮಾದಕ ವಸ್ತುಗಳೆಂದರೆ ಯಾವುದೇ ರಾಸಾಯನಿಕ ವಸ್ತುವಾಗಿದ್ದು ಅದರ ಸೇವನೆಯಿಂದ ದೈಹಿಕ ಕಾರ್ಯ, ಮನಸ್ಥಿತಿ, ಗ್ರಹಣ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಪದೇ ಪದೇ ಬಳಸುವುದರಿಂದ ವ್ಯಕ್ತಿ ಮಾದಕ ವಸ್ತು ವ್ಯಸನಿಯಾಗುತ್ತಾನೆ. ಮಾದಕ ವಸ್ತುವು ಮನಸ್ಸಿಗೆ ಗೊಂದಲವನ್ನು ತರುವ ಪದಾರ್ಥವಾಗಿದ್ದು ಅಮಲು ರೋಗವಾಗಿದೆ. ಭಾರತದ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ಇದರ ಬಳಕೆ ಕಂಡುಬರುತ್ತದೆ. ಶ್ರೀಮಂತರು, ಮಧ್ಯಮ ವರ್ಗದವರು, ವಿದ್ಯಾವಂತರು, ಯುವಕರು, ಮಹಿಳೆಯರು ಎಂಬ ಭೇದವಿಲ್ಲದೆ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯವರು ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ವಿದ್ಯಾರ್ಥಿಗಳಲ್ಲಿ ಶೇ 10 ರಷ್ಟು ಒಂದಿಲ್ಲೊAದು ದುಶ್ಚಟಕ್ಕೆ ಒಳಗಾಗಿದ್ದು ಅದರಲ್ಲಿ 14 ರಿಂದ 22 ರ ವಯೋಮಾನದವರು ಹೆಚ್ಚಿದ್ದಾರೆ. ಸ್ವಾತಂತ್ಯç ಪೂರ್ವದಲ್ಲಿ ಶೇ 2 ರಷ್ಟಿದ್ದ ವ್ಯಸನಿಗಳು ಪ್ರಸ್ತುತ ಶೇ 30 ಕ್ಕಿಂತ ಹೆಚ್ಚಿದ್ದಾರೆ. ಜಗತ್ತಿನ ಸುಮಾರು 20 ಕೋಟಿಯಷ್ಟು ಇರುವ ಮಾದಕ ವ್ಯಸನಿಗಳಲ್ಲಿ ಭಾರತದಲ್ಲಿ ಶೇ 7.5 ಕೋಟಿ ವ್ಯಸನಿಗಳಿದ್ದಾರೆಂದು ಅಂದಾಜಿಸಲಾಗಿದೆ.

ನಶೆಯ ಅಲೆ ಸಾವಿನ ಬಲೆಯಾಗುತ್ತಿದ್ದರೂ ಕೂಡ ಈ ದೇಶದಲ್ಲಿ ಊಟವಿಲ್ಲದೆ ಸಾಯುವವರ ಸಂಖ್ಯೆಗಿAತಲೂ ಚಟವನ್ನು ಬೆಳೆಸಿಕೊಂಡು ಸಾಯುವವರು ಹೆಚ್ಚಾಗಿದ್ದಾರೆ.
ಮಾದಕ ವಸ್ತು ಬಳಸುವ ಆತಂಕದ ರಾಷ್ಟçಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅಮಲು ಪದಾರ್ಥಗಳಿಗೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳನ್ನೂ ಒಳಗೊಂಡAತೆ ಯುವಜನತೆ ಹೆಚ್ಚಾಗಿದ್ದು ಇದು ದೇಶದ ಭವಿಷ್ಯಕ್ಕೆ ಮಾರಕವಾಗಿದೆ.

ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ

ದುಶ್ಚಟಗಳ ಆರಂಭಕ್ಕೆ ಕಾರಣಗಳು

• ಕ್ಷಣಕಾಲ ಸುಖ ಅನಂತಕಾಲ ದು:ಖಕ್ಕೆ ಕಾರಣ ಎನ್ನುವುದು ಗೊತ್ತಿದ್ದೂ ಅಫೀಮು, ಹೆರಾಯಿನ್, ಬೀಡಿ, ಸಿಗರೇಟು, ಮದ್ಯಪಾನ ಮುಂತಾದ ದುಶ್ಚಟಗಳಿಗೆ ವಿದ್ಯಾವಂತ ಯುವಕರೇ ಬಲಿಯಾಗುತ್ತಿದ್ದಾರೆ.
• ಉಲ್ಲಾಸಕ್ಕಾಗಿ, ಫ್ಯಾಷನ್‌ಗಾಗಿ, ದುರ್ಬಲ ಮನಸ್ಸು, ಏಕಾಂಗಿತನ, ಒತ್ತಡ ನಿವಾರಣೆ ಮಾಡಿಕೊಳ್ಳಲು
• ನೋವು, ದು:ಖಕ್ಕೆ ಪರಿಹಾರವೆಂಬ ಭ್ರಮೆಗೆ ಒಳಗಾಗಿ ತನಗೆ ಅರಿವಿಲ್ಲದಂತೆ ದೊಡ್ಡ ಕಂದಕಕ್ಕೆ ಬಿದ್ದು ನರಳಾಡುವಂತ ಸಂದರ್ಭ ತಂದುಕೊಂಡು ಮಾದಕ ವಸ್ತುಗಳ ಮಾಯಾಜಾಲಕ್ಕೆ ಒಳಗಾಗುತ್ತಿದ್ದಾರೆ. ತೆರಣಿಯ ಹುಳು ತಾನು ಸುತ್ತಿದ ಬಲೆಯಲ್ಲಿ ತಾನೇ ಬಿದ್ದು ಹೊರಳಾಡುವಂತೆ ಅವರ ಪರಿಸ್ಥಿತಿಯಾಗಿದೆ.

ದುಶ್ಚಟಗಳಿಂದಾಗುವ ಪರಿಣಾಮಗಳು

• ದೇಹ ಮತ್ತು ಮನಸ್ಸಿನ ಸಮತೋಲನ ಕಳೆದುಕೊಳ್ಳುವುದು.
• ವ್ಯಕ್ತಿ ತನ್ನನ್ನು ದಹಿಸಿಕೊಳ್ಳುವುದರ ಜೊತೆಗೆ ಕುಟುಂಬದ ನೆಮ್ಮದಿಗಿ ಭಂಗ ತರುತ್ತಾನೆ.
• ಕುಟುಂಬ, ಸಮಾಜದಿಂದ ನಿಂದನೆಗೆ ಒಳಗಾಗುವನು.
• ಜ್ಞಾನೇಂದ್ರಿಯಗಳ ಮೇಲೆ ಹತೋಟಿ ಕಳೆದುಕೊಳ್ಳುವನು
• ಸಮಾಜಬಾಹಿರ ಚಟುವಟಿಕೆಗಳಾದ ಕಳ್ಳತನ, ಅತ್ಯಾಚಾರ, ಕೊಲೆ ಇಂತಹ ದುಷ್ಕೃತ್ಯಗಳನ್ನು ಮಾಡುವನು.
• ದಾಂಪತ್ಯದಲ್ಲಿ ವಿರಸವುಂಟಾಗಿ ವಿಚ್ಚೇದನಗಳಾಗುವ ಸಾಧ್ಯತೆ.
• ರಸ್ತೆ ಅಪಘಾತಗಳಲ್ಲಿ ಶೇ 1/3 ರಷ್ಟು ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದಾಗುತ್ತದೆ. ಈ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿಯವರು ಬೆಂಕಿ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದಿದ್ದಾರೆ.

ಪರಿಹಾರ ಕ್ರಮಗಳು

• ಮಾದಕ ವಸ್ತುಗಳ ಹಿಡಿತಕ್ಕೆ ಸಿಲುಕದೆ ಅದರಿಂದ ದೂರವಿರುವುದು.
• ಮಾದಕ ವಸ್ತು ಸೇವಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುವುದು.
• ಸಹೋದ್ಯೋಗಿ, ಸ್ನೇಹಿತರಿಗೆ ತಿಳುವಳಿಕೆ ನೀಡುವುದು.
• 18 ವರ್ಷ ವಯಸ್ಸಿನವರೆಗೂ ಪೋಷಕರು ಮಕ್ಕಳ ಬಗ್ಗೆ ಗಮನ ನೀಡಿ ಮಾರ್ಗದರ್ಶನ ಮಾಡುವುದು.
• ಶಾಲೆ ಕಾಲೇಜುಗಳಲ್ಲಿ ಶಿಕ್ಷಕರು ಮಕ್ಳಳಲ್ಲಿ ಜೀವನ ಕೌಶಲಗಳನ್ನು ಬೆಳೆಸುವ ರಾಯಭಾರಿಗಳಾಗಿ ಕಾರ್ಯನಿರ್ವಹಿಸುವುದು.
• ವಿದ್ಯಾರ್ಥಿಗಳನ್ನು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಆರೋಗ್ಯಕರವಾದ ಹವ್ಯಾಸಗಳನ್ನು ಬೆಳೆಸುವುದು.

ಭಾರತ ಸರ್ಕಾರವು 1951ರಲ್ಲಿ ಅಪಾಯಕಾರಿ ವಸ್ತುಗಳ ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆ ಮಾದಕ ವಸ್ತು ತಯಾರಿಕೆ, ಸಾಗಾಣಿಕೆ, ಮಾರಾಟ ಮತ್ತು ಬಳಕೆಯ ಮೇಲೆ ನಿರ್ಬಂಧ ಹೇರಿದೆ. 1985 ರಲ್ಲಿ ಡ್ರಗ್ಸ್ ಆಕ್ಟ್ ಜಾರಿಗೊಳಿಸಿದೆ. ಈ ಕಾಯ್ದೆ ಮಾದಕ ವಸ್ತುಗಳ ಕಳ್ಳ ವ್ಯಾಪಾರದಲ್ಲಿ ತೊಡಗಿದ ಅಪರಾಧಿಗಳಿಗೆ ಕನಿಷ್ಠ 10 ರಿಂದ 20 ವರ್ಷ ಕಠಿಣ ಶಿಕ್ಷೆ, 1 ರಿಂದ 2 ಲಕ್ಷದವರೆಗೆ ದಂಡ ಘೋಷಿಸಿದೆ.

ಡಿಸೆಂಬರ್-7 1987 ರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವಸ್ತುಗಳ ದುರ್ಬಳಕೆಯನ್ನು ತಡೆಗಟ್ಟುವ ನಿಯಮಾವಳಿಗಳ ಅಂಗೀಕಾರವನ್ನು ಹಲವಾರು ರಾಷ್ಟçಗಳು ಒಪ್ಪಿಕೊಂಡು ವಿಶ್ವದಾದ್ಯಂತ ಮಾದಕ ವಸ್ತುಗಳ ದುರ್ಬಳಕೆ ನಿಯಂತ್ರಿಸುವ ತೀರ್ಮಾನವನ್ನು ಮಾಡಿದವು.

ಜೂನ್-26 ವಿಶ್ವಸಂಸ್ಥೆಯು ಮಾದಕ ವಸ್ತು ದುರ್ಬಳಕೆ ಮತ್ತು ಕಳ್ಳಸಾಗಣೆ ವಿರುದ್ಧದ ಅಂತರರಾಷ್ಟ್ರೀಯ ದಿನವನ್ನು ಆಚರಿಸಿ ಈ ಸಮಸ್ಯೆಯ ನಿಯಂತ್ರಣ ಮತ್ತು ಪರಿಹಾರದ ಕುರಿತು ನಿವಾರಣೆಯಲ್ಲಿ ಸಮುದಾಯ, ಸಮವಯಸ್ಕರು, ಕುಟುಂಬ, ಸಂಘ ಸಂಸ್ಥೆಗಳವರು ಪ್ರಮುಖ ಪಾತ್ರ ವಹಿಸಬೇಕಾಗಿದೆಎಂದು ಮನವರಿಕೆ ಮಾಡಿತು. ಮಾದಕ ವಸ್ತು ದುರ್ಬಳಕೆ ಒಂದು ಮಾನಸಿಕ, ಸಾಮಾಜಿಕ ಸಮಸ್ಯೆಯಾಗಿದ್ದು ಇಡೀ ಸಮುದಾಯವೇ ಇದರ ನಿವಾರಣೋಪಾಯದಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿತು.

ವ್ಯಕ್ತಿ ಒಮ್ಮೆ ಈ ಚಕ್ರವ್ಯೂಹದಲ್ಲಿ ಸಿಲುಕಿಕೊಂಡರೆ ಹೊರಬರುವುದು ಕಷ್ಟಸಾಧ್ಯ. ಆರೋಗ್ಯ ಜೀವನ ನಡೆಸಲು ಮಾದಕ ವಸ್ತುಗಳನ್ನು ತ್ಯಜಿಸಿ ಸುಂದರ ಜೀವನ ನಡೆಸಿ ಎಂಬ ಸಂದೇಶ ಸಾರುತ್ತ ನಾವೆಲ್ಲರೂ ಸಂಘಟಿತರಾಗಿ ಸಮಾಜದಲ್ಲಿ ಜಾಗೃತಿ ಮೂಡಿಸಿದಾಗ ದುಶ್ಚಟಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. (ಜೂನ್-26 ರಂದು ಅಂತರರಾಷ್ಟೀಯ ಮಾದಕ ವಸ್ತುಗಳ ದುರ್ಬಳಕೆ ವಿರೋಧಿ ದಿನ ತನ್ನಿಮಿತ್ತ ಈ ಲೇಖನ – ಡಾ. ಗೀತಾ ಬಸವರಾಜು,ಉಪನ್ಯಾಸಕರು,ಎ.ವಿ.ಕೆ ಮಹಿಳಾ ಕಾಲೇಜು,ದಾವಣಗೆರೆ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ

Published

on

ಸುದ್ದಿದಿನ,ಶಿವಮೊಗ್ಗ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂ. 29 ರ ಬೆಳಗ್ಗೆ 10 ಗಂಟೆಗೆ ಉದ್ಯೋಗ ಮೇಳವನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೊಮೋ ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಬಯೋಡೆಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದು. ಉಚಿತ ಪ್ರವೇಶ ಇರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ :08182-255293/ 9108235132/8151093747/ 9482023412 ಗಳ ಮೂಲಕ ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಟಿಇಟಿ ಪರೀಕ್ಷೆಗೆ ಸಕಲ ಸಿದ್ಧತೆ

Published

on

ಸುದ್ದಿದಿನ,ದಾವಣಗೆರೆ:ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಟಿಇಟಿ ಜೂನ್ 30 ರಂದು ರಾಜ್ಯಾದ್ಯಂತ ನಡೆಯಲಿದ್ದು ದಾವಣಗೆರೆ ನಗರದ 19 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಟಿಇಟಿ ಪರೀಕ್ಷಾ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಟಿಇಟಿ ಪರೀಕ್ಷೆಯನ್ನು ಯಾವುದೇ ಲೋಪ ದೋಷಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕವಾಗಿ ನಡೆಸಬೇಕು. ಪರೀಕ್ಷಾ ಪಾವಿತ್ರ್ಯತೆ ಗೆ ಯಾವುದೇ ಧಕ್ಕೆಯಾಗದಂತೆ ನಡೆಸಲು ಕೇಂದ್ರದ ಅಧೀಕ್ಷಕರು ಗಳಿಗೆ ಸೂಚನೆ ನೀಡಿ ಕೇಂದ್ರದಲ್ಲಿ ಎಲ್ಲಾ ಮೂಲಭೂತ ಸೌಕರ್ಯ ಕಲ್ಪಿಸಲು ತಿಳಿಸಿದರು.

ಜೂನ್ 30 ಭಾನುವಾರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ 11 ಕೇಂದ್ರಗಳಲ್ಲಿ 3805 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4.30 ವರೆಗೆ 19 ಕೇಂದ್ರಗಳಲ್ಲಿ 6150 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು.

144 ಸೆಕ್ಷನ್ ಜಾರಿ. ಪರೀಕ್ಷಾ ಅವ್ಯವಹಾರ ಹಾಗೂ ಸುಗಮ ಪರೀಕ್ಷೆಗಾಗಿ ಕೇಂದ್ರದ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಇರುತ್ತದೆ. ಕೇಂದ್ರದ ಸುತ್ತಮುತ್ತ ಜೆರಾಕ್ಸ್ ಅಂಗಡಿ, ಇಂಟರ್ ನೆಟ್ ಸೆಂಟರ್ ಮುಚ್ಚಲು ಆದೇಶಿಸಲಾಗುತ್ತದೆ. ಮತ್ತು ಪರೀಕ್ಷಾ ಕೇಂದ್ರದೊಳಗೆ ಯಾವುದೇ ಮೊಬೈಲ್, ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತರುವಂತಿಲ್ಲ. ಕೇಂದ್ರದ ಪ್ರವೇಶಕ್ಕೂ ಮೊದಲು ತಪಾಸಣೆ ಮಾಡಿ ಪ್ರವೇಶ ನೀಡಬೇಕೆಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ. ಉಪಕಾರ್ಯದರ್ಶಿ ಕೃಷ್ಣನಾಯ್ಕ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending