ರಾಜಕೀಯ
ಸ್ವಾತಂತ್ರ್ಯದ ಮೇಲೆ ಪ್ರಹಾರಗಳು- ಈ ಆಗಸ್ಟ್ 15 ರಂದುಮೋದಿ-ಷಾ ಜೋಡಿಯ ಕಾಶ್ಮೀರ ಅತ್ಯಾಚಾರದ ಸಂದೇಶ
- ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೋದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ. ಇಂತಹ ಒಂದು ಸನ್ನಿವೇಶದಲ್ಲಿ, ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳ್ಳುವ ದೃಢನಿರ್ಧಾರ ಮಾಡುವ ದಿನವಾಗಿದೆ.
ಈ ವರ್ಷ ಸ್ವಾತಂತ್ರ್ಯ ದಿನಾಚರಣೆ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಚಿಂದಿ ಮಾಡಿರುವ, ಬೃಹತ್ ಪ್ರಮಾಣದಲ್ಲಿ ಕಣಿವೆಯ ಜನಗಳಿಗೆ ಬೀಗ ಜಡಿದಿರುವ ಮಬ್ಬಿನಲ್ಲಿ ನಡೆಯುತ್ತಿದೆ. ಕೆಂಪುಕೋಟೆಯಲ್ಲಿ ಈ ಆಗಸ್ಟ್ 15ರಂದು ನರೇಂದ್ರ ಮೋದಿ ತ್ರಿವರ್ಣ ಧ್ವಜವನ್ನು ಆರೋಹಿಸುವಾಗ, ಅತ್ತ ಲಕ್ಷಾಂತರ ಕಾಶ್ಮೀರಿಗಳು ಸತತವಾಗಿ ಹನ್ನೊಂದನೇ ದಿನ ತಮ್ಮ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸಂಚರಿಸುವ, ತಮಗೆ ಬೇಕಾದವರನ್ನು ಸಂಪರ್ಕಿಸುವ, ಬದುಕು ನಡೆಸಲು ಕೆಲಸ ಮಾಡುವ, ಶಾಲೆಗೆ ಹೋಗುವ, ಆರೋಗ್ಯಪಾಲನೆ ಮತ್ತು ಔಷಧಿಗಳನ್ನು ಪಡೆಯುವ ಅವರ ಹಕ್ಕನ್ನು ಕಳಚಿ ಹಾಕಲಾಗಿದೆ. ಇವೆಲ್ಲವೂ ಸ್ವತಂತ್ರ ಭಾರತದ ನಾಗರಿಕರಾಗಿ ಇರುವ ಮೂಲಭೂತ ಹಕ್ಕುಗಳು.
ನೂರಾರು ಕಾಶ್ಮೀರಿ ರಾಜಕಾರಣಿಗಳು ಮತ್ತು ಕಾರ್ಯಕರ್ತರುಗಳು ಜೈಲುಗಳಲ್ಲಿದ್ದಾರೆ ಅಥವ ಗುಪ್ತಸ್ಥಳಗಳಲ್ಲಿ ಸ್ಥಾನಬದ್ಧತೆಯಲ್ಲಿದ್ದಾರೆ. ಹಲವರನ್ನು ಹೊರಗೊಯ್ದು ಆಗ್ರಾ, ಬರೇಲಿ, ಲಕ್ನೌ ಮುಂತಾದೆಡೆಗಳಲ್ಲಿ ಜೈಲುಗಳಲ್ಲಿ ಇಡಲಾಗಿದೆ. ಅವರೆಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಅವರ ಕುಟುಂಬದವರು, ಸಂಬಂಧಿಕರು ಅವರನ್ನು ಭೇಟಿ ಮಾಡಲು ಸಾಧ್ಯವಿಲ್ಲವಾಗಿದೆ. ಮೋದಿ ಸರಕಾರ ಭಾರತದೊಂದಿಗೆ “ಜಮ್ಮು ಮತ್ತು ಕಾಶ್ಮೀರವನ್ನು ಸಮಗ್ರೀಕರಿಸಿರುವುದು” ತಮ್ಮ ಮಹಾಸಾಧನೆ ಎಂದು ಡಂಗುರ ಹೊಡೆಯುತ್ತಿದ್ದರೆ, ಅತ್ತ ಕಾಶ್ಮೀರದ ಜನತೆ, ಭಾರತದ ಇತರರೊಂದಿಗೆ ಹೋಲಿಸಿದರೆ ಸ್ವಾತಂತ್ರ್ಯದ ಅರ್ಥವಾದರೂ ಏನು ಎಂದು ಆಶ್ಚರ್ಯ ಪಡುವಂತಹ ವೈದೃಶ್ಯ ಕಣ್ಣಿಗೆ ರಾಚುತ್ತಿದೆ.
ಕಾಶ್ಮೀರಿಗಳಿಗೆ ಎಂತಹ ಅವಮಾನ ಮಾಡಲಾಗಿದೆ ಎಂಬುದು ಅವರನ್ನು ರಾಜಕೀಯ ಹಕ್ಕುಗಳನ್ನು ಕಸಿದುಕೊಂಡಿರುವ ರೀತಿಯಲ್ಲಿ ವ್ಯಕ್ತವಾಗುತ್ತದೆ. ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಿದ ನಂತರ, ಹೊಸ ವಿಧಾನಸಭೆ ಪುದುಚೇರಿಯ ಮಾದರಿಯಲ್ಲಿ ಇರುತ್ತದೆ, ಉಪರಾಜ್ಯಪಾಲರೆಂಬವರು ಹೇಳಿದ್ದೇ ಆಳ್ವಿಕೆಯಾಗುತ್ತದೆ. ಈ ಮೊಟಕುಗೊಳಿಸಿದ ವಿಧಾನ ಸಭೆಯ ಸಂಯೋಜನೆ ಕೂಡ ಬದಲಾಗಲಿದೆ. ಜಮ್ಮ ಮತ್ತು ಕಾಶ್ಮೀರ ಮರುಸಂಘಟನೆಯ ಮಸೂದೆ ಮತಕ್ಷೇತ್ರಗಳ ಮರುವಿಂಗಡಣೆಗೆ ಅವಕಾಶ ಕಲ್ಪಿಸಿದೆ. ಇದನ್ನು ಚುನಾವಣಾ ಆಯೋಗ ಮಾಡುತ್ತದೆ.
ಹಿಂದಿನ ವಿಧಾನಸಭೆಯ ಬಲ ಜಮ್ಮು ಮತ್ತು ಕಾಶ್ಮೀರ ವಿಭಾಗಗಳಿಂದ 83ಆಗಿತ್ತು. ಅದನ್ನು90ಕ್ಕೆ ಏರಿಸಲಾಗುತ್ತದೆ. ಈ ಮರುವಿಂಗಡಣೆಯ ಕಸರತ್ತಿನಲ್ಲಿ ಜಮ್ಮು ಭಾಗದ ಸೀಟುಗಳ ಸಂಖ್ಯೆ ಏರಲಿದೆ. ಹಿಂದಿನ ವಿಧಾನಸಭೆಯಲ್ಲಿ ಅದು37 ಇತ್ತು. ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸೀಟುಗಳನ್ನು ಪತ್ರ್ಯೇಕಿಸಿದಾಗ, ಕಾಶ್ಮೀರ ಕಣಿವೆಗೆ ಉಳಿಯುವ ಸೀಟುಗಳ ಸಂಖ್ಯೆಯಲ್ಲಿ (ಇದುವರೆಗೆ 46) ಕಡಿತವಾಗುತ್ತದೆ. ಈ ಮೂಲಕ ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತದ ಆಶ್ವಾಸನೆ ಸಿಗುವಂತಾಗುತ್ತದೆ. ಉಪರಾಜ್ಯಪಾಲರು ಇಬ್ಬರು ಮಹಿಳಾ ಸದಸ್ಯರನ್ನು ನೇಮಿಸಲು ಅವಕಾಶ ಇರುವುದು ಅದನ್ನು ಇನ್ನಷ್ಟು ಖಾತ್ರಿಗೊಳಿಸುತ್ತದೆ.
ಇನ್ನೊಂದು ಕುಟಿಲ ನಡೆಯೆಂದರೆ, ಕಾಶ್ಮೀರ ಕಣಿವೆಯಲ್ಲಿ ಜನಸಂಖ್ಯಾ ಸಂಯೋಜನೆಯಲ್ಲಿ ಒಂದು ಬದಲಾವಣೆ ತರುವುದು. ಆರ್ಥಿಕ ಅಭಿವೃದ್ಧಿ ಮತ್ತು ಹೂಡಿಕೆಯ ಹೆಸರಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಇರುವ ಜನಗಳು ಕಣಿವೆ ಪ್ರದೇಶಕ್ಕೆ ಬಂದು ಭೂಮಿ ಖರೀದಿಸಲು ಮತ್ತು ನೆಲೆಸಲು ಉತ್ತೇಜನೆ ನೀಡಲಾಗುವುದು. ಅದಾಗಲೇ 2016ರಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಯೋಧರನ್ನು ವಸತಿ ಕಾಲೊನಿಗಳಲ್ಲಿ ನೆಲೆಗೊಳಿಸುವ ಒಂದು ಪ್ರಸ್ತಾವ ಇತ್ತು. ಅದಕ್ಕೆ ಭೂಮಿ ನೀಡುವ ಮಾತೂ ಇತ್ತು. ಕಾಶ್ಮೀರದ ಜನಸಂಖ್ಯಾ ಸಂಯೋಜನೆಯನ್ನು ಬದಲಾಯಿಸುವುದು ಅಥವ ಕಾಶ್ಮೀರಿ ಜನಗಳ ಅಸ್ಮಿತೆಯನ್ನು ದುರ್ಬಲಗೊಳಿಸುವುದು ಇದರ ಗುರಿ.
ಬಹಳ ಕಾಲದಿಂದ ಕಾಶ್ಮೀರಿ ಜನಗಳ ನಾಗರಿಕ ಸ್ವಾತಂತ್ರ್ಯಗಳ ದಮನ ಮತ್ತು ಪ್ರಭುತ್ವದ ದಬ್ಬಾಳಿಕೆ ರೂಢಿಯಾಗಿ ಬಿಟ್ಟಿರುವ ದೇಶದ ಇತರ ಭಾಗಗಳ ಜನರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಸನ್ನಿವೇಶ ಹದಗೆಡುತ್ತಿರುವ ಸನ್ನಿವೇಶದ ಮತ್ತೊಂದು ಅಧ್ಯಾಯ ಮಾತ್ರ, ಅದನ್ನು ಕೇಂದ್ರ ಸರಕಾರ ದೃಢವಾಗಿ ನಿಭಾಯಿಸುತ್ತಿದೆ ಎಂದು ಕಾಣಬಹುದು.
ಆದರೆ ಹೀಗೆ ಭಾವಿಸುವುದು ಒಂದು ಪ್ರಮಾದವಾಗುತ್ತದೆ. ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಈ ಕ್ರೂರ ಪ್ರಹಾರವನ್ನು ಉಪೇಕ್ಷಿಸಿದರೆ ಅದರಿಂದ ದೇಶದ ಇತರ ಭಾಗಗಳಿಗೂ ಕೇಡು ಸಂಭವಿಸುತ್ತದೆ. ಸರ್ವಾಧಿಕಾರಶಾಹಿ ಆಳ್ವಿಕೆ ಯಾರನ್ನೂ ಬಿಡುವುದಿಲ್ಲ-ಭಿನ್ನ ಅಭಿಪ್ರಾಯ ಇರುವವರನ್ನು, ಪ್ರತಿಪಕ್ಷಗಳಿಲ್ಲಿ ಇರುವವರನ್ನು, ಮತ್ತು ತಮ್ಮ ಪ್ರಜಾಪ್ರಭುತ್ವ ಹಕ್ಕುಗಳನ್ನು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಯಾರನ್ನೂ. ಸ್ವಾತಂತ್ರ್ಯ ಮತ್ತು ಗಣತಂತ್ರ ಸಂವಿಧಾನದೊಂದಿಗೆ ಬಂದಿರುವ ಸ್ವಾತಂತ್ರ್ಯಗಳು ಅಪಾಯದಲ್ಲಿವೆ. ಇದೀಗ ಮೊದಿ-ಷಾ ದ್ವಯರು ನಡೆಸಿರುವ ಕಾಶ್ಮೀರ ಅತ್ಯಾಚಾರ ನೀಡುತ್ತಿರುವ ಸಂದೇಶ.
ಸ್ವಾತಂತ್ರ್ಯ ದಿನದಂದು, ಕಳೆದ ಐದು ವರ್ಷಗಳ ಸರ್ವಾಧಿಕಾರಶಾಹಿ ಆಳ್ವಿಕೆ ಸಂವಿಧಾನದ ಅಡಿಯಲ್ಲಿರುವ ಎಲ್ಲ ಸಂಸ್ಥೆಗಳನ್ನು ಶಿಥಿಲಗೊಳಿಸುವ ದಾರಿಯಲ್ಲಿ ಸಾಗಿದೆ ಎಂಬುದನ್ನು ವೀಕ್ಷಿಸುವುದು ಕೂಡ ಉಚಿತವಾಗಿದೆ. ಇದರ ಒಂದು ಸಣ್ಣ ಉದಾಹರಣೆಯೆಂದರೆ, ಸುಪ್ರಿಂ ಕೋರ್ಟಿನ ಮೂವರು ನ್ಯಾಯಾಧೀಶರ ಪೀಠ ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರ ಸ್ವಾತಂತ್ರ್ಯಗಳ ಮತ್ತು ಮೂಲಭೂತ ಹಕ್ಕುಗಳ ವ್ಯಾಪಕ ಪ್ರಮಾಣದ ಉಲ್ಲಂಘನೆಗಳನ್ನು ನಿಲ್ಲಿಸಲು ಮಧ್ಯಪ್ರವೇಶಿಸಲು ನಿರಾಕರಿಸಿರುವುದು.
ಇಂತಹ ಒಂದು ಸನ್ನಿವೇಶದಲ್ಲಿ, ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಜೀವನಾಧಾರದ ಹಕ್ಕೂ ಸೇರಿದಂತೆ ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು, ಹೆಚ್ಚೆಚ್ಚು ಜನಗಳನ್ನು ಅಣಿನೆರೆಸುವ ಮೂಲಕ ಮತ್ತು ಐಕ್ಯ ಜನಾಂದೋಲನಗಳ ಮೂಲಕ ಸಾಧಿಸಬೇಕಾಗಿದೆ. ಆಗಸ್ಟ್ 15, ಎಲ್ಲ ಎಡ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಒಗ್ಗೂಡಿಸಿ ಈ ಸಾವು-ಬದುಕಿನ ಸಾಹಸಕಾರ್ಯವನ್ನು ಕೈಗೆತ್ತಿಕೊಳುವ್ಳ ದೃಢನಿರ್ಧಾರ ಮಾಡುವ ದಿನವಾಗಿದೆ.
–ಪ್ರಕಾಶ ಕಾರಟ್
- ಕೃಪೆ : ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ
ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.
ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.
ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.
1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ಕ್ರೀಡೆ
ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಬದಲಾಯಿಸದಂತೆ ಬ್ರಿಕ್ಸ್ ರಾಷ್ಟ್ರಗಳಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯ
ಸುದ್ದಿದಿನಡೆಸ್ಕ್:ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸುವುದಾಗಲಿ ಅಥವಾ ವಹಿವಾಟುಗಳಲ್ಲಿ ಅಮೆರಿಕ ಡಾಲರ್ ಅನ್ನು ಬದಲಿಸಿ ಬೇರೆ ಕರೆನ್ಸಿಗಳನ್ನು ಬೆಂಬಲಿಸುವ ಕೆಲಸ ಮಾಡದಿರಲು ಬದ್ಧವಾಗಿರಬೇಕು, ಇಲ್ಲವಾದಲ್ಲಿ, 100 ಪ್ರತಿಶತ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯಿಸಿದ್ದಾರೆ.
ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ಅವರು, ಈ ದೇಶಗಳು ಯುಎಸ್ ಡಾಲರ್ ಅನ್ನು ಬದಲಿಸುವ ಕೆಲಸ ಮಾಡುವುದಿಲ್ಲ ಎಂಬ ಬದ್ಧತೆಯ ಅಗತ್ಯವಿದೆ. ಅಂತರಾಷ್ಟ್ರೀಯ ವ್ಯಾಪಾರದಲ್ಲಿ ಬ್ರಿಕ್ಸ್ ಅಮೆರಿಕಾ ಡಾಲರ್ ಅನ್ನು ಬದಲಿಸುವ ಯಾವುದೇ ಅವಕಾಶವಿಲ್ಲ, ಮತ್ತು ಇದನ್ನು ಪ್ರಯತ್ನಿಸುವ ಯಾವುದೇ ದೇಶ ಅಮೆರಿಕದೊಂದಿಗಿನ ಸಂಬಂಧಗಳಿಗೆ ವಿದಾಯ ಹೇಳಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243