Connect with us

ದಿನದ ಸುದ್ದಿ

ಮೈಸೂರು ದಸರಾ | ಅಂಬಾರಿ ಹೊತ್ತ ಅಭಿಮನ್ಯು ಜಂಬೂ ಸವಾರಿ

Published

on

ಸುದ್ದಿದಿನಡೆಸ್ಕ್:ಮೈಸೂರು ದಸರಾ ಅಂಗವಾಗಿ ಶನಿವಾರ ವಿಜಯದಶಮಿಯಂದು ಅದ್ಧೂರಿ ಜಂಬೂ ಸವಾರಿ ನಡೆಯಿತು. ಅಕ್ಟೋಬರ್ 3 ರಂದು ದಸರಾ ಉದ್ಘಾಟನೆಯಾದಾಗಿನಿಂದ ಮೈಸೂರು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಮೈಸೂರಿನ ಜಂಬೂಸವಾರಿಯಲ್ಲಿ 750ಕೆಜಿಯ ಚಿನ್ನದ ಅಂಬಾರಿಯನ್ನು ಹೊತ್ತು ಅಭಿಮನ್ಯು ಆನೆ ರಾಜಬೀದಿಗಳಲ್ಲಿ ರಾಜಗಾಂಭಿರ್ಯದಿಂದ ಸಾಗಿದನು. ಈ ಉತ್ಸವವನ್ನು ಸಾವಿರಾರು ಜನರು ಕಣ್ಣು ತುಂಬಿಸಿಕೊಂಡಿದ್ದಾರೆ.

ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಮಧ್ಯಾಹ್ನ 1:55ರ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಈ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು.

ವಿಶ್ವವಿಖ್ಯಾತ ಜಂಬೂಸವಾರಿಯ ಸಲುವಾಗಿ ಅಭಿಮನ್ಯು ಆನೆ 750 ಕೆ.ಜಿ ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಹೊತ್ತು ರಾಜ ಗಾಂಭೀರ್ಯದಿಂದ ರಾಜಬೀದಿಗಳಲ್ಲಿ ಹೆಜ್ಜೆ ಹಾಕಿದನು. ಈ ಐತಿಹಾಸಿಕ ಕ್ಷಣವನ್ನು ದೇಶ- ವಿದೇಶ ಮತ್ತು ನೆರೆಹೊರೆಯ ಜಿಲ್ಲೆಯ ಲಕ್ಷಾಂತರ ಮಂದಿ ಕಣ್ಣುಂಬಿಕೊಳ್ಳಲು ರಾಜ ಬೀದಿಗಳಲ್ಲಿ ಕಿಕ್ಕಿರಿದು ಸೇರಿದ್ದರು.

ಈ ಜಂಬೂಸವಾರಿ ವೀಕ್ಷಣೆಗೆ ಅರಮನೆಯ ಆವರಣದಲ್ಲಿ 40 ಸಾವಿರ ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೂ ಅರಮನೆಯ ಬಳಿಕ ಚಿಕ್ಕ ಗಡಿಯಾರ, ಕೆ.ಆರ್.ಆಸ್ಪತ್ರೆ ಹಾಗೂ ಬನ್ನಿಮಂಟಪದ ರಸ್ತೆಗಳಲ್ಲಿ ಜನ ದಟ್ಟಣೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಜಂಬೂಸವಾರಿ ಸಾಗುವ ಸಮಯದಲ್ಲಿ ಸಾರ್ವಜನಿಕರು ಡಾ.ರಾಜ್‌ಕುಮಾರ್ ಪಾರ್ಕ್‌ನ ಮರಗಳ ಮೇಲೆ ಹಾಗೂ ಕಟ್ಟಡಗಳ ಮೇಲೆ ನಿಂತು ವೀಕ್ಷಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿಯುಸಿ : ಸೈನ್ಸ್ ಅಕಾಡೆಮಿ ಪದವಿಪೂರ್ವ ಕಾಲೇಜಿಗೆ ಶೇ.93.52 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ: 2024-25 ನೇ ಸಾಲಿನ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಸೈನ್ಸ್ ಅಕಾಡೆಮಿ ಪದವಿ ಪೂರ್ವ ಕಾಲೇಜು, ದಾವಣಗೆರೆಯ ವಿದ್ಯಾರ್ಥಿಗಳು ಅತ್ಯತ್ತಮವಾದ ಫಲಿತಾಂಶ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕು.ಸುಷ್ಮಿತಾ ಕೆ.ಎಂ. ಒಟ್ಟಾರೆ 600 ಅಂಕಗಳಿಗೆ 574 ಅಂಕಗಳನ್ನು ಗಳಿಸಿ, 95.7% ಫಲಿತಾಂಶ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಕು. ಆದ್ಯ ಎನ್. ಎಂ (569/600) 94.8%, ಫಲಿತಾಂಶದೊAದಿಗೆ ದ್ವಿತೀಯ ಸ್ಥಾನವನ್ನೂ, ಕು. ಮಧುಮಿತಾ ಎಂ. (568/600) 94.7% ತೃತೀಯ ಸ್ಥಾನವನ್ನೂ ಕು.ಡಿ.ಇ. ಸಂಜನಾ (567/600) 94.5%, ಹಾಗೂ ಕು.ಎಸ್.ಎ ರಾಹುಲ್ (566/600) 94.3% ಫಲಿತಾಂಶ ಪಡೆದು ಕ್ರಮವಾಗಿ ಕಾಲೇಜಿಗೆ ನಾಲ್ಕು ಹಾಗೂ ಐದನೇ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ.

ಒಟ್ಟು ಕನ್ನಡ ಭಾಷಾ ವಿಷಯದಲ್ಲಿ 3 ವಿದ್ಯಾರ್ಥಿಗಳು, ಗಣಿತದಲ್ಲಿ 2 ವಿದ್ಯಾರ್ಥಿಗಳು, ಜೀವಶಾಸ್ತçದಲ್ಲಿ 1 ವಿದ್ಯಾರ್ಥಿ 100/100 ಅಂಕಗಳನ್ನು ಗಳಿಸಿರುತ್ತಾರೆ. ಒಟ್ಟಾರೆ 47 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ವಿದ್ಯಾರ್ಥಿಗಳು 149 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಒಟ್ಟಾರೆ ಕಾಲೇಜಿಗೆ 93.52 % ಫಲಿತಾಂಶ ಬಂದಿದ್ದು, ಈ ಎಲ್ಲಾ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

19 ವರ್ಷಗಳ ನಂತರ ಹಳೇ ಕುಂದುವಾಡದಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ : ಜಗಮಗಿಸುತ್ತಿದೆ ಗ್ರಾಮ

Published

on

ಸುದ್ದಿದಿನ,ದಾವಣಗೆರೆ: ಬೇಸಿಗೆ ಬಂತೆಂದರೆ ಸಾಕು ಜಾತ್ರಾ ಮಹೋತ್ಸವಗಳ ಸಂಭ್ರಮ ಪ್ರಾರಂಭವಾಗುತ್ತದೆ. ಆಯಾ ಗ್ರಾಮದ, ಗ್ರಾಮದೇವತೆಗಳ ಆರಾಧನೆಯನ್ನು ಜಾತ್ರಾ ಮೂಲಕ ವೈಭವದಿಂದ ಆಚರಿಸುವ ಪರಿ ಎಲ್ಲೆಡೆ ನಡೆಯುತ್ತದೆ.

ಅದೇ ರೀತಿ ದಾವಣಗೆರೆಯ ಹಳೇಕುಂದುವಾಡದಲ್ಲಿ ಗ್ರಾಮದೇವತೆ ಆದಿಪರಾಶಕ್ತಿಯಾದ ಶ್ರೀ ಮಾರಿಕಾಂಬಾ ಜಾತ್ರೆಯು ಏಪ್ರಿಲ್ 1 ರಂದು ಘಟಸ್ಥಾಪನೆ ಮಾಡುವುದರೊಂದಿಗೆ ಆರಂಭವಾಗಿದೆ. ಕಳೆದ 2007 ರಲ್ಲಿ ನಡೆದ ದೇವಿಯ ಜಾತ್ರೆ, 19 ವರ್ಷಗಳ ನಂತರ ಈ ಬಾರಿ ನಡೆಸುತ್ತಿರುವುದು ವಿಶೇಷವಾಗಿದೆ. ಪ್ರತಿ ದಿನ ದೇವಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗುತ್ತಿದ್ದು, ಭಕ್ತರು ದೇವಿಯನ್ನು ಭಕ್ತಿಯಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ. ಜಾತ್ರೆಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 12 ರವರೆಗೂ ಜರುಗಲಿದೆ ಎಂದು ಮಾರಿಕಾಂಬ ಜಾತ್ರಾ ಸಮಿತಿ ತಿಳಿಸಿದೆ.

19 ವರ್ಷಗಳ ನಂತರ ನಡೆಯುತ್ತಿರುವ ಮಾರಿಕಾಂಬಾ ಜಾತ್ರೆಗೆ ಹಳೇ ಕುಂದುವಾಡ ಗ್ರಾಮವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ಗ್ರಾಮಸ್ಥರಲ್ಲಿ ಹುರುಪು ದುಪ್ಪಟ್ಟಾಗಿದೆ. ಊರಿನ ರಸ್ತೆಗಳು, ಮನೆ ಮನೆಗಳು ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದು, ಮಾರಿಕಾಂಬಾ ದೇವಸ್ಥಾನದ ದ್ವಾರ ಬಾಗಿಲ ಅಲಂಕಾರಗೊಂಡು, ಎಲ್ಲರನ್ನು ಆಕರ್ಷಿಸುತ್ತಿದೆ. ಐದು ಮಂಟಪಗಳು ವೈಭವಯುತವಾಗಿ ಸಿಂಗಾರಗೊಂಡಿದೆ. ಪ್ರಮುಖ ರಸ್ತೆಗಳು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ಊರಿನ ಮುಖ್ಯ ರಸ್ತೆಗಳು ಜಗಮಗಿಸುತ್ತಿವೆ, ರಸ್ತೆಯ ತುಂಬೆಲ್ಲಾ ಹಬ್ಬಕ್ಕೆ ಶುಭ ಕೋರುವ ಫ್ಲೆಕ್ಸ್, ಬ್ಯಾನರ್ ಗಳು ರಾರಾಜಿಸುತ್ತಿವೆ.

ಜಾತ್ರೆಯ ಹಿನ್ನಲೆ ಕುರಿ ಕಾಳಗ ಆಯೋಜಿಸಲಾಗಿತ್ತು. ಊರ ತುಂಬೆಲ್ಲಾ ನೆಂಟರು-ಇಷ್ಟರು ಬಂದಿಳಿದಿದ್ದು, ಸಸ್ಯಹಾರಿಗಳಿಗೆ ಮೃಷ್ಟಾನ್ನ ಭೋಜನಕ್ಕೆ ತಯಾರಿ ನಡೆದಿದ್ದರೆ, ಬಾಡೂಟಕ್ಕೆ ಸಾವಿರಾರು ಕುರಿಗಳನ್ನು ಖರೀದಿ ಮಾಡಲಾಗಿದೆ. ಊರಿಗೆ ಊರೇ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದೆ.

ಏ.8 ಮಂಗಳವಾರ ರಾತ್ರಿ ಚೌತಮನೆಯಿಂದ ಅಮ್ಮನ ದೇವಸ್ಥಾಕ್ಕೆ “ದೊಡ್ಡ ಎಡೆ” ಒಯ್ಯುವುದು ವಿಶೇಷ. ನಂತರ ಶ್ರೀ ಮಾರಿಕಂಬ “ರಥೋತ್ಸವವು” ಬಹು ವೈಭವದಿಂದ ಸಾಗಿ ಆಮ್ಮನ ಕಟ್ಟೆಯಲ್ಲಿ ಶ್ರೀ ದೇವಿಯ ಪ್ರತಿಷ್ಠಾಪನೆ, ಬೆಳಗಿನಜಾವ ಶ್ರೀ ದೇವಿಯ ಘಟ ಪೂಜೆ, ಮಹಾ ಪೂಜೆ ಹಾಗೂ ಗ್ರಾಮ ಪ್ರದಕ್ಷಿಣೆ, ಕಾರ್ಯಕ್ರಮಗಳು ಮಹಾಮಂಗಳಾರತಿಯೊಂದಿಗೆ ನಡೆಯುವುದು ವಾಡಿಕೆಯಾಗಿದೆ.

ಜಾತ್ರಾ ಪ್ರಯುಕ್ತ ಬುಧವಾರ ಶ್ರೀ ದೇವಿಗೆ ಗ್ರಾಮದ ಭಕ್ತರಿಂದ ಉಡಿ ತುಂಬಿಸುವುದು ಹಾಗೂ ಭಕ್ತರ ವಿವಿಧ ಸೇವಾ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 1 ರಿಂದ 6 ಘಂಟೆಯವರೆಗೆ ಪರಂಪರಾಗತ “ಹಾಸ್ಯಗಾರರಿಂದ” ಮನೋರಂಜನೆ ಕಾರ್ಯಕ್ರಮ ನಡೆಯಲಿದೆ.

ಏ. 10 ಗುರುವಾರ ಶ್ರೀದೇವಿಗೆ ಪೂಜೆ, ಮಹಾಮಂಗಳಾರತಿ, ಭಕ್ತರ ಸೇವಾ ಕಾರ್ಯಗಳು, ಮನೋರಂಜನೆ ಕಾರ್ಯಕ್ರಮ, ನಂತರ ಮಧ್ಯಾಹ್ನ 3 ರಿಂದ 6 ಘಂಟೆಯವರೆಗೆ “ಪೋತರಾಜ” ನಿಂದ ವಿವಿಧ ಕಾರ್ಯಕ್ರಮ ನಡೆಯಲಿದೆ. ನಂತರ “ರಸಮಂಜರಿ” ಕಾರ್ಯಕ್ರಮಗಳು ಜರುಗಲಿದೆ.

ಏ.11 ರಂದು ಶ್ರೀ ದೇವಿಗೆ ಪೂಜೆ, ಮಹಾಮಂಗಳಾರತಿ, ಮನೋರಂಜನೆ ಕಾರ್ಯಕ್ರಮ ನಡೆದು, ಸಾಯಂಕಾಲ `ಹುಲುಸು’ ಹೊಡೆಯಲಾಗುವುದು. ಏ.12 ರಂದು ಶ್ರೀ ದೇವಿಯ ‘ಮೋಚು” ವ ಕಾರ್ಯಕ್ರಮದೊಂದಿಗೆ (ಬಳೆ ತೆಗೆಯುವುದು) ಶ್ರೀ ಮಾರಿಕಾಂಬದೇವಿ ಜಾತ್ರೆಯ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಶ್ರೀ ಮಾರಿಕಾಂಬದೇವಿ ಜಾತ್ರಾ ಉತ್ಸವ ಸಮಿತಿಯ ಸದಸ್ಯರು ಹಾಗೂ ಹಳೇಕುಂದುವಾಡ ಗ್ರಾಮಸ್ಥರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಿ ಯು ಫಲಿತಾಂಶ | ವಿದ್ಯಾರ್ಥಿಗಳಿಗೆ ಹಾರೈಸಿದ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ

Published

on

ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ

ಸುದ್ದಿದಿನ,ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಾಕರಾದ ಎಲ್ಲಾ ವಿದ್ಯಾರ್ಥಿಗಳಿಗೆ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆ ಶೇ (73%) ರಾಜ್ಯಕ್ಕೆ 22ನೇ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಕಾರದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending