Connect with us

ರಾಜಕೀಯ

ಮೋದಿ ಅಮೆರಿಕದ ಮುಂದೆ ತೆಪ್ಪಗೆ ತಲೆಬಾಗುತ್ತಿದ್ದಾರೆ

Published

on

  • ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳ ಎದುರು ಮಂಡಿಯೂರುತ್ತಿದ್ದಾರೆ.ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು. ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ.ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್‌ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.

ಮೋದಿ ಸರಕಾರದ ಎರಡನೇ ಅವಧಿಯು ಅಮೆರಿಕದ ಕಿರಿಯ ಪಾಲುದಾರನಾಗಿ ಭಾರತದ ಪಾತ್ರವನ್ನು ಇನ್ನಷ್ಟು
ಗಟ್ಟಿಗೊಳಿಸುವಂತದ್ದಾಗುತ್ತದೆ ಎನ್ನುವುದಕ್ಕೆ ಆಗಲೇ ಎಲ್ಲ ಸುಳಿವುಗಳು ಸಿಕ್ಕಿವೆ. ಪರಿಣಾಮವಾಗಿ ಇದು ನವ-ಉದಾರವಾದಿ ಅಜೆಂಡಾದ ಅನುಷ್ಠಾನವನ್ನು ಇನ್ನಷ್ಟು ತ್ವರಿತಗೊಳಿಸುತ್ತದೆ, ಮತ್ತು ಅದರಿಂದಾಗಿ ಜನತೆಯ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ.

2014-2019ರ ಅವಧಿಯಲ್ಲಿ ಮೋದಿ ಸರಕಾರವು ಭಾರತವನ್ನು ಅಮೆರಿಕದೊಂದಿಗೆ ವ್ಯೂಹಾತ್ಮಕವಾಗಿಯೂ ಮತ್ತು ಮಿಲಿಟರಿ ಕ್ಷೇತ್ರದಲ್ಲಿ ಮತ್ತಷ್ಟು ಜೋಡಿಸಿಕೊಳ್ಳಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು. ಮಿಲಿಟರಿ ಸಾಗಾಣಿಕೆ ಬೆಂಬಲ ಮತ್ತು ಸೇನಾ ಸಂಪರ್ಕ ಸಾಧನಗಳನ್ನು ಸಮಗ್ರೀಕರಿಸುವ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಜಪಾನ್, ಆಸ್ಟ್ರೇಲಿಯಾ, ಭಾರತ ಮತ್ತು ಅಮೆರಿಕ ಒಳಗೊಂಡ ಚತುಷ್ಪಕ್ಷೀಯ ಮೈತ್ರಿಕೂಟ ಮಾಡಿಕೊಳ್ಳುವ ಬಗ್ಗೆ ಅಮೆರಿಕ ಮಾಡಿದ್ದ ಪ್ರಸ್ತಾವನೆಗೆ ಭಾರತವೂ ಕೈಜೋಡಿಸಿತ್ತು.

ಈ ವ್ಯೂಹಾತ್ಮಕ ಅಪ್ಪುಗೆಯು ಏಷ್ಯಾ-ಶಾಂತಸಾಗರ ವಲಯದಲ್ಲಿ ಅಮೆರಿಕದ ಭೌಗೋಳಿಕ-ರಾಜಕೀಯ ಹಿತಗಳಿಗೆ ಸಂಪೂರ್ಣವಾಗಿ ಅನುಕೂಲಕರವಾದ ಒಂದು ವಿದೇಶಾಂಗ ನೀತಿಯನ್ನು ಭಾರತವು ಅನುಸರಿಸುವಂತೆ ಮಾಡಿತು.

ಈ ಹಿಂದೆ ರಷ್ಯಾ ಭಾರತಕ್ಕೆ ಶಸ್ತ್ರಾಸ್ತ್ರಗಳ ಮತ್ತು ಸಾಧನಗಳ ಪ್ರಮುಖ ಪೂರೈಕೆದಾರನಾಗಿತ್ತು. ಈಗ ಅಮೆರಿಕದ ಒತ್ತಡಕ್ಕೆ ಮಣಿದು ರಷ್ಯಾವನ್ನು ಬಿಟ್ಟು ಅಮೆರಿಕದಿಂದ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ಖರೀದಿಸುವ ಪ್ರಕ್ರಿಯೆಗೆ ಭಾರತ ವೇಗವನ್ನು ನೀಡಿತು. ಆಂತರಿಕ ನೀತಿಗಳ ಬಗ್ಗೆ ಹೇಳುವುದಾದರೆ, ಮೋದಿ ಸರಕಾರವು ಅಮೆರಿಕದ ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ಹಣಕಾಸು ಹಿತಗಳಿಗೆ ನೆರವಾಗುವ ಅನೇಕ ಕ್ರಮಗಳನ್ನು ಕೈಗೊಂಡಿತು.

ಡೊನಾಲ್ಡ್ ಟ್ರಂಪ್ 2018ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಟ್ರಂಪ್‌ರ ಅಮೆರಿಕ ಮೊದಲು ಹಾಗೂ ಸ್ವರಕ್ಷಣಾತ್ಮಕ ನೀತಿಗಳಿಗೆ ಅನುಗುಣವಾಗಿ ಭಾರತದ ಮೇಲೆ ಅನೇಕ ಒತ್ತಡಗಳನ್ನು ಹೇರಲಾಯಿತು.

250 ಬಿಲಿಯ ಡಾಲರ್ ಮೌಲ್ಯದ ವಸ್ತುಗಳ ಮೇಲೆ ಸುಂಕವನ್ನು ಹೆಚ್ಚಿಸುವ ಮೂಲಕ ಹಾಗೂ ಇನ್ನೂ 325 ಬಿಲಿಯ ಡಾಲರ್ ವಸ್ತುಗಳಿಗೆ ಹಾಗೇ ಮಾಡುವುದಾಗಿ ಬೆದರಿಸುವ ಮೂಲಕ ಚೀನಾದ ವಿರುದ್ಧ ಟ್ರಂಪ್ ವಾಣಿಜ್ಯ ಸಮರವನ್ನು ಸಾರಿದರು. ಚೀನಾದ ಮಾರುಕಟ್ಟೆಯಲ್ಲಿ ಹೆಚ್ಚು ಅವಕಾಶಗಳನ್ನು ನೀಡಬೇಕು ಹಾಗೂ ಅಮೆರಿಕದ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ರಕ್ಷಣೆಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು.

ಟ್ರಂಪ್ ಭಾರತವನ್ನು ಕೂಡ ಬಿಡಲಿಲ್ಲ. ಭಾರತದೊಂದಿಗಿನ ವಾಣಿಜ್ಯ ಕೊರತೆಯನ್ನು ತಿರುಗು-ಮುರುಗು ಮಾಡಬೇಕು ಹಾಗೂ ಭಾರತವು ಸುಂಕಗಳನ್ನು ಇಳಿಸಬೇಕು ಮತ್ತು ಅಮೆರಿಕದ ವಸ್ತುಗಳನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಈ ವಿಷಯದಲ್ಲಿ ಮೊದಲ ಹೆಜ್ಜೆಯಾಗಿ ಅವರು ಅಮೆರಿಕ ಆಮದು ಮಾಡಿಕೊಳ್ಳುತ್ತಿದ್ದ ಭಾರತದ ಅಲ್ಯುಮಿನಿಯಮ್ ಮತ್ತು ಉಕ್ಕಿನ ಮೇಲಿನ ಸುಂಕಗಳನ್ನು ಹೆಚ್ಚಿಸಿದರು. ಅದರ ಬೆನ್ನಲ್ಲೇ ಸುಂಕಗಳಿಲ್ಲದೆ ಭಾರತವು ಅನೇಕ ವಸ್ತುಗಳನ್ನು ರಫ್ತು ಮಾಡಲು ಅವಕಾಶ ನೀಡುವ ಪ್ರಾಶಸ್ತ್ಯದ ವ್ಯಾಪಾರ ಎಂದು ಪರಿಗಣಿಸುವುದನ್ನು ಕೊನೆಗೊಳಿಸಲು ಅವರು ನಿರ್ಧರಿಸಿದರು. ಈ ವ್ಯವಸ್ಥೆಯನ್ನು ತೆಗೆದು ಹಾಕಿದ್ದರಿಂದ ಭಾರತದಿಂದ ರಫ್ತಾಗುವ 1900 ವಸ್ತುಗಳಿಗೆ ಈಗ ಕಸ್ಟಮ್ಸ್ ಸುಂಕ ತೆರಬೇಕಾಗಿದೆ.

ಮಾರ್ಚ್ ಆರಂಭದಲ್ಲಿ ಅಮೆರಿಕ ಈ ಪ್ರಕಟಣೆಯನ್ನು ಮಾಡಿತು ಹಾಗೂ 60 ದಿನಗಳ ನಂತರ ಇದು ಅನುಷ್ಠಾನಕ್ಕೆ ಬರಲಿದೆ ಎಂದು ಹೇಳಿತು ಎನ್ನುವುದನ್ನು ಇಲ್ಲಿ ಗಮನಿಸಬೇಕು. ಆದಾಗ್ಯೂ ಈ ಪ್ರತಿಕೂಲ ಕ್ರಮವನ್ನು ನಿಲ್ಲಿಸಲು ಮೋದಿ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಅಥವಾ ಪ್ರತಿ-ಕ್ರಮಗಳಿಗೂ ಮುಂದಾಗಲಿಲ್ಲ. ಸುಂಕ ಹೇರಿದ್ದನ್ನು ಚೀನಾ ಯಾವ ರೀತಿಯಲ್ಲಿ ನಿರ್ವಹಿಸಿತು ಎನ್ನುವುದಕ್ಕೆ ಪೂರ್ತಿ ವ್ಯತಿರಿಕ್ತವಾದ ನಡೆ ಭಾರತದ್ದಾಗಿದೆ. ಚೀನಾವನ್ನು ಪ್ರವೇಶಿಸುವ ಅಮೆರಿಕದ ವಸ್ತುಗಳ ಮೇಲೆ ಸುಂಕವನ್ನು ಹೇರುವ ಮೂಲಕ ಚೀನಾ ತಿರುಗೇಟು ನೀಡಿತು.

ಮೋದಿ ಸರಕಾರ ತನ್ನನ್ನು ಒಂದು ಅಡಿಯಾಳು ವ್ಯೂಹಾತ್ಮಕ ಮಿತ್ರನಾಗಿ ಕಟ್ಟಿಸಿಕೊಂಡಿರುವುದರಿಂದಾಗಿಯೇ ಅಮೆರಿಕವನ್ನು ಪ್ರತಿರೋಧಿಸಿ ನಿಲ್ಲಲು ಅಸಮರ್ಥವಾಗಿರುವುದು.

ಮಹಾನ್ ರಾಷ್ಟ್ರೀಯವಾದಿ ಎಂದು ಬಿಂಬಿಸಲಾಗಿರುವ ನರೇಂದ್ರ ಮೋದಿ, ಒಂದಾದ ಮೇಲೆ ಒಂದರಂತೆ ಅಮೆರಿಕದ ಆದೇಶಗಳಿಗೆ ಮಂಡಿಯೂರುತ್ತಿದ್ದಾರೆ. ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ಶಿರಸಾವಹಿಸಿ ಪಾಲಿಸಲಾಯಿತು. ಇದರಿಂದಾಗಿ ಭಾರತಕ್ಕೆ ತುಂಬಾ ನಷ್ಟವಾಗಲಿದೆ. ಯಾಕೆಂದರೆ ಅಂತಾರ್ರಾಷ್ಟ್ರೀಯ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಇರಾನ್‌ನಿಂದ ಎಣ್ಣೆಯನ್ನು ತರಿಸಿಕೊಳ್ಳಲಾಗುತ್ತಿತ್ತು. ಅದಾದ ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು.

ರಷ್ಯಾದ ಟ್ರೈಯಂಫ್ ಎಸ್-400 ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.

ಲಾಕ್‌ಹೀಡ್ ನಿರ್ಮಿತ ಎಫ್-21 ಯುದ್ಧ ವಿಮಾನಗಳನ್ನು ಖರೀದಿಸುವಂತೆ ಭಾರತದ ಮೇಲೆ ಅಪಾರ ಒತ್ತಡ ಹೇರಲಾಗುತ್ತಿದೆ. 110 ಯುದ್ಧ ವಿಮಾನಗಳ ಖರೀದಿಗೆ (ರಫೇಲ್ ಯುದ್ಧ ವಿಮಾನ ಖರೀದಿಯನ್ನು 36ಕ್ಕೆ ಇಳಿಸಿದ ನಂತರ) ಭಾರತದ ಒಂದು ಟೆಂಡರ್ ಪ್ರಕಟಿಸಿದೆ. ಬಿಲಿಯಗಟ್ಟಲೆ ಡಾಲರ್ ಮೌಲ್ಯದ ಈ ಗುತ್ತಿಗೆಯನ್ನು ಪಡೆಯಲು ಅಮೆರಿಕ ಭಾರತವನ್ನು ಪೀಡಿಸುತ್ತಿದೆ.

ಅಮೆರಿಕದ ವಿದೇಶ ಸಚಿವ ಮೈಕ್ ಪಾಂಪಿಯೊ ಜೂನ್ ಮೂರನೇ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಅಧಿಕಾರಕ್ಕೆ ಮರಳಿದ ನಂತರದ ಮೊದಲ ಭೇಟಿಯಿದು. ವಾಣಿಜ್ಯ ವಿಚಾರದಲ್ಲಿ ಕಠಿಣ ಮಾತು, ರಷ್ಯಾದ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ಪರಿಹಾರವಾಗಿ ಅಮೆರಿಕದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವಂತೆ ಒತ್ತಾಯಿಸುವುದು, ಚೀನಾದ ಬೃಹತ್ ಕಂಪೆನಿಯಾದ ಹುವೈ ಭಾರತದಲ್ಲಿ ನಡೆಯುವ 5ಜಿ ಕಾರ್ಯಕ್ರಮದಲ್ಲಿ ಭಾಗವಹಿಸುವುದನ್ನು ನಿಷೇಧಿಸುವುದು- ಇವೆಲ್ಲ ಪಾಂಪಿಯೊ ಭೇಟಿ ವೇಳೆ ಇರಲಿರುವ ಕಾರ್ಯಸೂಚಿಯಾಗಿದೆ.

ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಇದೀಗ ಮೋದಿ ಸರಕಾರದ ಹೊಸ ವಿದೇಶ ಸಚಿವರು. ಒಬ್ಬ ವೃತ್ತಿನಿರತ ರಾಜತಾಂತ್ರಿಕನನ್ನು ನೇರವಾಗಿ ಸಚಿವ ಸಂಪುಟಕ್ಕೆ ಬಡ್ತಿ ನೀಡಿದ್ದು ಇದೇ ಮೊದಲ ಸಲವಾಗಿದೆ. ಅಮೆರಿಕ-ಪರ ಚಟುವಟಿಕೆಗಳಿಗೆ ಜೈಶಂಕರ್ ಖ್ಯಾತರು. ವಿದೇಶ ವ್ಯವಹಾರಗಳ ಸಚಿವಾಲಯದಲ್ಲಿನ ಹಾಗೂ ವಿದೇಶಾಂಗ ಕಾರ್ಯದರ್ಶಿಯಾಗಿ ಅವರ ಕಾರ್ಯಗಳ ದಾಖಲೆಗಳು ಹೇಗೆ ಅವರು ಅಮೆರಿಕದೊಂದಿಗೆ ನಿಕಟ ವ್ಯೂಹಾತ್ಮಕ ಮೈತ್ರಿಗೆ ಒತ್ತು ನೀಡಿದ್ದರು ಎನ್ನುವುದನ್ನು ತೋರಿಸುತ್ತವೆ.

ಟ್ರಂಪ್ ಆಡಳಿತದ ಭಂಡ ಆಗ್ರಹಗಳಿಗೆ ಮೋದಿ ಸರಕಾರದ ಹಲ್ಲುಗಿಂಜುವ ಇದುವರೆಗಿನ ಧೋರಣೆಯನ್ನು ಗಮನಿಸಿದರೆ ಅದು ಅಮೆರಿಕದ ಕಿರಿಯ ಮಿತ್ರನ ಪಾತ್ರ ವಹಿಸುವುದನ್ನು ಮುಂದುವರಿಸುತ್ತದೆ ಎಂಬುದು ಗೋಚರಿಸುತ್ತದೆ. ಭಾರತದ ರಾಷ್ಟ್ರೀಯ ಹಿತಗಳನ್ನು ಸಾಮ್ರಾಜ್ಯಶಾಹಿ ಸೂಪರ್ ಪವರ್‌ನ ಹಿತಾಸಕ್ತಿಗಳಿಗೆ ಒತ್ತೆಯಿಡಲಾಗುವುದು.

ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳದಂತೆ ಭಾರತಕ್ಕೆ ಅಮೆರಿಕ ಆದೇಶಿಸಿತು. ಅದನ್ನು ,ದೇಶಕ್ಕೆತುಂಬಾನಷ್ಟವಾಗುತ್ತಿದ್ದರೂಶಿರಸಾವಹಿಸಿ ಪಾಲಿಸಲಾಯಿತು. ನಂತರ, ವೆನಿಜುವೆಲಾ ವಿರುದ್ಧದ ಆರ್ಥಿಕ ಸಮರದ ಭಾಗವಾಗಿ ಅಮೆರಿಕವು ವೆನಿಜುವೆಲಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತಕ್ಕೆ ಒತ್ತಾಯಿಸಿತು. ಮೋದಿ ಸರಕಾರ ಇದನ್ನು ಕೂಡ ತಡ ಮಾಡದೆ ಪಾಲಿಸಿತು. ರಷ್ಯಾದ ಟ್ರೈಯಂಫ್ ಎಸ್-೪೦೦ ಕ್ಷಿಪಣಿಗಳನ್ನು ಖರೀದಿಸಿದ್ದಕ್ಕೆ ದಿಗ್ಬಂಧನಗಳನ್ನು ಹೇರದಂತೆ ಅಮೆರಿಕಕ್ಕೆ ಭಾರತ ಅಂಗಲಾಚುತ್ತಿದೆ. ಆದರೆ ಭಾರತದ ವಿರುದ್ಧ ದಿಗ್ಬಂಧನ ವಿಧಿಸುವುದಾಗಿ ಅಮೆರಿಕ ಬೆದರಿಕೆ ಹಾಕುತ್ತಲೇ ಇದೆ. ಪರಿಹಾರವಾಗಿ ಅಮೆರಿಕದಿಂದ ಹೆಚ್ಚು ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವಂತೆ ಒತ್ತಡ ಹೇರುವುದು ಇದರ ಉದ್ದೇಶವಾಗಿದೆ.

ಪ್ರಕಾಶ್ ಕಾರಟ್
ಅನು: ವಿಶ್ವ

(ಕೃಪೆ : ಜನಶಕ್ತಿ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

Published

on

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ ತೆಗೆದುಕೊಳ್ಳಲು ಸೆಪ್ಟೆಂಬರ್ 17ಕ್ಕೆ ಸಂಪುಟ ಸಭೆ ನಡೆಯಲಿದೆ.

ಜಿಲ್ಲೆಯ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಬಗ್ಗೆ ವಿಶೇಷ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಈ ಹಿಂದೆ 2014ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

Published

on

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ ಖಾತೆ ಆಂದೋಲನವನ್ನು ರಾಜ್ಯದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಕಂದಾಯ ಖಾತೆ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

Published

on

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ.

ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಇದೇ ತಿಂಗಳ 9 ಕ್ಕೆ ಮುಂದೂಡಿದೆ.

ಇದೇ ವೇಳೆ ಮಧ್ಯಂತರ ಆದೇಶವನ್ನು ನ್ಯಾಯಾಲಯ ವಿಸ್ತರಿಸಿದೆ. ಇದೇ 9 ರಂದು ಎ.ಜೆ.ಶಶಿಕಿರಣ್ ಶೆಟ್ಟಿ ವಾದ ಮಂಡಿಸಲಿದ್ದು, ಇದೇ 12 ರಂದು ಮುಖ್ಯಮಂತ್ರಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡನೆ ಮಾಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, ಸೆಪ್ಟೆಂಬರ್ 12ರಂದು ಸಂಪೂರ್ಣ ವಿಚಾರಣೆ ಮುಗಿಸೋಣ ಎಂದು ಹೇಳಿ ನ್ಯಾಯಾಲಯದ ಕಲಾಪ ಮುಂದೂಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ9 hours ago

ಭಾನುವಾರವೂ ಕ್ಯಾಶ್ ಕೌಟರ್ ಓಪನ್ ; ವಿದ್ಯುತ್ ಬಿಲ್ ಬಾಕಿ ಪಾವತಿಸಿ : ಬೆಸ್ಕಾಂ

ಸುದ್ದಿದಿನಡೆಸ್ಕ್:ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ವಿದ್ಯುತ್ ಸಂಪರ್ಕದ ಕಡಿತದಿಂದ ತೊಂದರೆಗೊಳಗಾಗದಂತೆ ನಾಳೆ ಮತ್ತು ಇದೇ 15ರ ಭಾನುವಾರವೂ ಬೆಸ್ಕಾಂ ಉಪ ವಿಭಾಗಗಳ ಕ್ಯಾಶ್ ಕೌಂಟರ್‌ಗಳು ತೆರೆದಿರಲಿವೆ...

ದಿನದ ಸುದ್ದಿ9 hours ago

ಹತ್ತು ವರ್ಷಗಳ ಬಳಿಕ ಕಲಬುರಗಿಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧಾರ

ಸುದ್ದಿದಿನಡೆಸ್ಕ್:ಹತ್ತು ವರ್ಷಗಳ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ನಿರ್ಧರಿಸಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತಂತೆ ಚರ್ಚೆ ನಡೆಸಿ, ನಿರ್ಣಯ...

ದಿನದ ಸುದ್ದಿ17 hours ago

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ

ಸುದ್ದಿದಿನಡೆಸ್ಕ್:ಇಂದು ಗಣೇಶ ಚತುರ್ಥಿ, ದೇಶ ಸೇರಿ ನಾಡಿನದ್ಯಂತ ಹಿಂದೂ ಸಂಪ್ರದಾಯದಲ್ಲಿ ನಾಡಿನ ಜನತೆ ತಮ್ಮ ಒಳಿತಿಗಾಗಿ, ಜ್ಞಾನ ಸಮೃದ್ಧಿಗಾಗಿ ಶಿವನ ಪುತ್ರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ...

ದಿನದ ಸುದ್ದಿ1 day ago

ಸರ್ಕಾರಿ ಐಟಿಐ ಪ್ರವೇಶಕ್ಕೆ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನಲ್ಲಿ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎಂ.ಎಂ.ಟಿ.ಎಂ 1, ಡಿಎಂಎಂ 20, ಸಿಒಪಿಎ 20, ವೆಲ್ಡರ್ 34 ಹಾಗೂ ರೋಬೊಟಿಕ್ಸ 12 ಖಾಲಿ ಇರುವ...

ದಿನದ ಸುದ್ದಿ1 day ago

ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪರಿಶಿಷ್ಟ ಜಾತಿ ಯುವಕ , ಯುವತಿಯರಿಗೆ ಯುವಜನರನ್ನು ಸ್ವಾವಲಂಭಿಯಾಗಿ ಉತ್ತೇಜಿಸುವ ದೃಷ್ಠಿಯಿಂದ ಜಿಮ್ ಫಿಟ್ನೆಸ್, ಬ್ಯೂಟೀಷಿಯನ್, ಚಾಟ್ಸ್ ತಯಾರಿಕೆ ತರಬೇತಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿ ಇರುವ ಪರಿಶಿಷ್ಟ...

ದಿನದ ಸುದ್ದಿ2 days ago

ರಾಯಚೂರು | ಶಾಲಾ ಬಸ್ ಅಪಘಾತ ; ಇಬ್ಬರು ವಿದ್ಯಾರ್ಥಿಗಳು ಸಾವು

ಸುದ್ದಿದಿನಡೆಸ್ಕ್:ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ಶಾಲಾ ಬಸ್ ಮತ್ತು ಸರ್ಕಾರಿ ಬಸ್ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮಕ್ಕಳು ಮೃತಪಟ್ಟು, ಹಲವು...

ದಿನದ ಸುದ್ದಿ4 days ago

ಪೌತಿ ಖಾತೆ ಆಂದೋಲನ ; ಸಚಿವ ಕೃಷ್ಣ ಬೈರೇಗೌಡ

ಸುದ್ದಿದಿನಡೆಸ್ಕ್:ಬಹು ಮಾಲೀಕತ್ವ ಹೊಂದಿರುವ ಖಾಸಗಿ ಜಮೀನುಗಳ ಪೋಡಿ ಕಾರ್ಯ, ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿನ ದರಾಖಾಸ್ತು ಪೋಡಿ ಕಾರ್ಯ ಹಾಗೂ ಜಮೀನು ಮಾಲೀಕತ್ವವನ್ನು ವಾರಸುದಾರರಿಗೆ ಮಾಡಿಕೊಡುವ ಪೋತಿ...

ದಿನದ ಸುದ್ದಿ5 days ago

ಮುಡಾ ಪ್ರಕರಣ ; ಅರ್ಜಿ ವಿಚಾರಣೆ ಮುಂದೂಡಿಕೆ

ಸುದ್ದಿದಿನಡೆಸ್ಕ್:ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿರುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಉಚ್ಛ ನ್ಯಾಯಾಲಯ ಮುಂದೂಡಿದೆ. ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ...

ದಿನದ ಸುದ್ದಿ5 days ago

KPSC | 2 ತಿಂಗಳೊಳಗೆ ಮರು ಪರೀಕ್ಷೆ

ಸುದ್ದಿದಿನಡೆಸ್ಕ್:ಇತ್ತೀಚಿನ ಕೆ.ಪಿ.ಎಸ್.ಸಿ. ಗಜೆಟೆಡ್ ಪ್ರೊಬೆಷನರಿ ಹುದ್ದೆಗಳ ಪರೀಕ್ಷೆಯಲ್ಲಿ, ಅಸಮರ್ಪಕ ಕನ್ನಡಾನುವಾದ ಹಿನ್ನೆಲೆ, ಎಲ್ಲ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ, 2 ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ, ಕರ್ನಾಟಕ ಲೋಕ...

ದಿನದ ಸುದ್ದಿ5 days ago

ADITYA-L1 | ಇಸ್ರೋ ಆದಿತ್ಯ ಎಲ್-1 ನೌಕೆ ಉಡಾವಣೆಗೆ ಒಂದು ವರ್ಷ; ಸೂರ್ಯನ ಅಧ್ಯಯನದಲ್ಲಿ ಮಹತ್ವದ ಪ್ರಗತಿ

ಸುದ್ದಿದಿನಡೆಸ್ಕ್:ಇಸ್ರೋದಿಂದ ಆದಿತ್ಯ ಎಲ್-1 ನೌಕೆ ಯಶಸ್ವಿ ಉಡಾವಣೆಗೊಂಡು ಇಂದಿಗೆ ಒಂದು ವರ್ಷ ಪೂರೈಸಿದೆ. 2023ರ ಸೆಪ್ಟೆಂಬರ್ 2 ರಂದು ಉಡಾವಣೆಗೊಂಡಿರುವ ಎಲ್-1ನೌಕೆ ಕಕ್ಷೆ ತಲುಪಿದ್ದು, ಭೂಮಿಯಿಂದ ಸುಮಾರು...

Trending