ದಿನದ ಸುದ್ದಿ
36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ..?!
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2019/05/Modi-suddidina-64.jpg&description=36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ..?!', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2019/05/Modi-suddidina-64.jpg&description=36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ..?!', 'pinterestShare', 'width=750,height=350'); return false;" title="Pin This Post">
ಪ್ರತಿವಾರ ಉದ್ಯೋಗದ ಸರ್ವೆ ನಡೆಸುವ ಸಿಎಂಐಇ ಸಂಸ್ಥೆಯ ಎಪ್ರಿಲ್ ತಿಂಗಳ ವರದಿ ಈಗ ಬಂದಿದೆ. ಇಡೀ ಎಪ್ರಿಲ್ ತಿಂಗಳಲ್ಲಿ 12.12 ಕೋಟಿ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಅದು ತೋರಿಸಿದೆ. ಮಾರ್ಚ್ ಕೊನೆಯ ವಾರದಲ್ಲಿ ಅಂದರೆ ಲಾಕ್ಡೌನಿನ ಮೊದಲ ವಾರದಲ್ಲಿ 85 ಲಕ್ಷ ಉದ್ಯೋಗಗಳು ನಷ್ಟ ಆದವು ಎಂದು ಈ ಹಿಂದೆ ಅದರ ಸವೇ ಹೇಳಿತ್ತು. ಅಂದರೆ ಲಾಕ್ ಡೌನಿನ 36 ದಿನಗಳಲ್ಲಿ ಒಟ್ಟು 13 ಕೋಟಿ ಉದ್ಯೋಗ ನಷ್ಟವಾಗಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಸರಾಸರಿ ಉದ್ಯೋಗಿಗಳ ಸಂಖ್ಯೆಯ 30ಶೆ.ದಷ್ಟು. ಅಂದರೆ ಸುಮಾರು ಪ್ರತಿ ಮೂರರಲ್ಲಿ ಎರಡು ಉದ್ಯೋಗಗಳಷ್ಟೇ ಉಳಿದಿವೆ.
ನಿಜ, ಇವು ಅಂದಾಜು ಅಂಕಿ-ಅಂಶಗಳಷ್ಟೇ. ಆದರೆ ದೇಶ, ಅದರಲ್ಲೂ ಜನಸಾಮಾನ್ಯರು ಎಂತಹ ಆರ್ಥಿಕ ಸಂಕಟವನ್ನು ಎದುರಿಸಬೇಕಾಗಿ ಬಂದಿದೆ ಎಂಬುದನ್ನು ಇದು ಖಂಡಿತವಾಗಿಯೂ ಸೂಚಿಸುತ್ತದೆ ಎನ್ನುತ್ತಾರೆ ಪರಿಣಿತರು.ಎಪ್ರಿಲ್ ತಿಂಗಳ ಸರ್ವೆಯ ಅಂಕಿ-ಅಂಶಗಳ ವಿವರಗಳಿಗೆ ಹೋದಾಗ ಇನ್ನಷ್ಟು ಆಘಾತಕಾರೀ ಚಿತ್ರಗಳು ಮೂಡಿ ಬರುತ್ತವೆ.
ವಿಭಾಗವಾರು ಏರಿಳಿಕೆಗಳನ್ನು ನೋಡಿ
- ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳು -9.1 ಕೋಟಿ
- ಉದ್ಯಮಿಗಳು -1.8 ಕೋಟಿ
- ಸಂಬಳದಾರ ನೌಕರರು -1.8 ಕೋಟಿ
- ರೈತರು +58 ಲಕ್ಷ
–ಒಟ್ಟು -12.12 ಕೋಟಿ
ಮುಕ್ಕಾಲು ಪಾಲು ಉದ್ಯೋಗ ನಷ್ಟ ಆಗಿರುವುದು ಸಣ್ಣ ವ್ಯಾಪಾರಿಗಳು ಮತ್ತು ಕೂಲಿಗಳಿಗೆ. ಇದರಲ್ಲಿ ಬೀದಿ ಮಾರಾಟಗಾರರು, ಸಣ್ಣ-ಪುಟ್ಟ ವ್ಯಾಪಾರಿಗಳು, ಅಂಗಡಿದಾರರು, ಅಲ್ಲಿ ಕೆಲಸ ಮಾಡುವವರು ಮತ್ತು ದಿನಗೂಲಿಗಳು ಸೇರುತ್ತಾರೆ. ಇವರು ನಮ್ಮ ಉದ್ಯೋಗ ಪಿರಮಿಡ್ಡಿನ ತಳಬಾಗದಲ್ಲಿರುವ ದೊಡ್ಡ ವಿಭಾಗ, ಅದಕ್ಕನುಗುಣವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಉದ್ಯಮಿಗಳು ಎನ್ನುವಾಗ ಇಲ್ಲಿ ಹೆಚ್ಚಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳವರು(ಎಂಎಸ್‌ಎಂಇ), ಕೆಲವು ದೊಡ್ಡ ಪ್ರಮಾಣದ ಉದ್ದಿಮೆದಾರರು ನಷ್ಟ ಅನುಭವಿಸಿರಬಹುದು. ಆದರೂ ಬಹುಪಾಲು ಈ ಎಂಎಸ್‌ಎಂಇ ಗಳದ್ದೇ.
ಮಾಸಿಕ ಸಂಬಳ ಪಡೆಯುವ ನೌಕರರಲ್ಲೂ 1.8 ಕೋಟಿ ಜನ ಉದ್ಯೋಗ ಕಳಕೊಂಡಿದ್ದಾರೆ ಎಂಬುದು ಗಮನಾರ್ಹ. ರೈತರ ಸಂಖ್ಯೆ, ಅಂದರೆ ಕೃಷಿಯಲ್ಲಿ ತೊಡಗಿರುವವವರ ಸಂಖ್ಯೆ ಮಾತ್ರ ಸುಮಾರು 58ಲಕ್ಷದಷ್ಟಾದರೂ ಹೆಚ್ಚಾಗಿದೆ. ಆದರೆ ಇದರರ್ಥ ಕೃಷಿ ರಂಗದಲ್ಲಿ ಉದ್ಯೋಗಾವಕಾಶ ಹೆಚ್ಚಿದೆಯೆಂದೇನಲ್ಲ. ನಗರಗಳಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ಮರಳಿದವರಲ್ಲಿ ಕೆಲವರು ಮತ್ತೆ ಕೃಷಿರಂಗದಲ್ಲೇ ಏನೋ ಕೆಲಸ ಹುಡುಕಿಕೊಂಡಿದ್ದಾರೆ ಎಂದರ್ಥ.
ಅಂದರೆ ಕೃಷಿರಂಗದ ಒಟ್ಟು ಆದಾಯ ಈಗ ಈ ಹೆಚ್ಚುವರಿ 58 ಲಕ್ಷ ಜನಗಳ ನಡುವೆಯೂ ಹಂಚಿ ಹೋಗುತ್ತದೆ, ವಾಸ್ತವಿಕವಾಗಿ ರೈತರ ತಲಾ ಆದಾಯ ಇಳಿಯುತ್ತದೆ. ಅಲ್ಲದೆ ಇದು ಕಟಾವಿನ ಸಮಯವಾದ್ದರಿಂದ ಸದ್ಯಕ್ಕೆ ಇವರಿಗೆ ಏನೋ ತುಸು ಆದಾಯ ಬರುವ ಕೆಲಸ ಸಿಕ್ಕಿದೆ. ಮುಂದೇನು ಎಂಬ ಚಿಂತೆ ಇದ್ದೇ ಇದೆ.
ಒಟ್ಟಾರೆಯಾಗಿ, ಲಾಕ್‌ಡೌನಿನಿಂದಾಗಿ ಆಗಿರುವ 13 ಕೊಟಿ ಉದ್ಯೋಗನಷ್ಟಗಳಲ್ಲಿ 8.5 ಕೋಟಿ ನಗರ ಪ್ರದೇಶಗಳಲ್ಲಿ, 4.5 ಕೊಟಿ ಗ್ರಾಮೀಣ ಪ್ರದೇಶಗಳಲ್ಲಿ. ಕೃಷಿ ಚಟುವಟಿಕೆಗಲಲ್ಲಿ ತೊಡಗಿರುವವರ ಸಂಖ್ಯೆ ತಸು ಹೆಚ್ಛಾಗಿದ್ದರ ಅರ್ಥ, ಗ್ರಾಮೀಣ ಪ್ರದೇಶದ ಉಳಿದ ವಲಯಗಳಲ್ಲಿ. ಮುಖ್ಯವಾಗಿ ಚಿಲ್ಲರೆ ವ್ಯಾಪಾರಗಳಲ್ಲಿ, ಸಾರಿಗೆ ಮುಂತಾದವುಗಳಲ್ಲಿ ಇನ್ನಷ್ಟು ಹೆಚ್ಚು ನಷ್ಟಗಳು ಉಂಟಾಗಿವೆ. ಇವರು ಈ ಮೊದಲಿನಂತೆ ನಗರಗಳಿಗೂ ಹೋಗುವಂತಿಲ್ಲ.
ಇವೆಲ್ಲ ಅನಿರೀಕ್ಷಿತವೇನಲ್ಲ. ಇದನ್ನು ಮುಂಗಂಡು ಸರಕಾರ ಸರಿಯಾದ ಯೋಜನೆಯೊಂದಿಗೆ ಲಾಕ್‌ಡೌನ್ ಹಾಕಿದ್ದರೆ ಜನಸಾಮಾನ್ಯರು ಅದರಲ್ಲೂ ಕೋಟ್ಯಂತರ ವಲಸೆ ಕಾರ್ಮಿಕರು ಈಗ ಕಾಣುತ್ತಿರುವಂತೆ ಹಸಿವು, ಅವಮಾನ, ಸಾವುಗಳನ್ನು ಎದುರಿಸಬೇಕಾಗಿ ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಪ್ರಜಾಪ್ರಭುತ್ವವಾದಿಗಳು ಆಗ್ರಹಿಸಿರುವಂತೆ ಅಗತ್ಯ ಇರುವ ಎಲ್ಲರಿಗೆ 10 ಕೆ.ಜಿ. ಆಹಾರಧಾನ್ಯಗಳು ಸೇರಿದಂತೆ ಆವಶ್ಯಕ ವಸ್ತುಗಳನ್ನು ಮತ್ತು ಸ್ಥಬ್ಧಗೊಂಡ ಅರ್ಥವ್ಯವಸ್ಥೆ ಮತ್ತೆ ಚಾಲನೆ ಪಡೆಯುವ ವರೆಗೆ,ಅಂದರೆ ಮುಂದಿನ ಮೂರು ತಿಂಗಳಾದರೂ ಒಂದು ಕುಟುಂಬಕ್ಕೆ ತಿಂಗಳಿಗೆ 7500 ರೂ. ಕೊಡುವ ವ್ಯವಸ್ಥೆ ಮಾಡಿದ್ದರೆ ದೇಶದ ಜನಸಾಮಾನ್ಯರು ಇಷ್ಟೊಂದು ಸಂಕಟ ಪಡುವ ಅಗತ್ಯ ಬರುತ್ತಿರಲಿಲ್ಲ. ಇದಕ್ಕೆ ಹೆಚ್ಚೆಂದರೆ ಜಿಡಿಪಿಯ 3ಶೇ. ವೆಚ್ಚ ತಗಲುತ್ತದಷ್ಟೇ.
ಹಿಡಿಯಷ್ಟು ಸೂಪರ್ ಶ್ರೀಮಂತರಿಗೆ, ನಮ್ಮ ಬ್ಯಾಂಕುಗಳಿಗೆ ನಷ್ಟ ಉಂಟುಮಾಡಿ ಆರಾಮವಾಗಿ ಇರುವ, ದೇಶ ಬಿಟ್ಟು ಪಲಾಯನ ಮಾಡಿದ ಮಂದಿಗೂ 69 ಸಾವಿರ ಕೋಟಿ ರೂ.ಗಳನ್ನು ಇತ್ತೀಚೆಗಷ್ಟೇ ಕೊಟ್ಟಿರುವ ಸರಕಾರಕ್ಕೆ ಇದು ಖಂಡಿತಾ ಅಸಾಧ್ಯವೇನಲ್ಲ. ಆದರೆ ಅದು ಪರಿಹಾರದ ಹೆಸರಲ್ಲಿ ಕೊಟ್ಟದ್ದು ಜಿಡಿಪಿಯ 0.7ಶೇ.ದಷ್ಟು ಮಾತ್ರ. ಇದರಿಂದ ಜನಧನ ಖಾತೆಗಳಿಗೆ ಕೇವಲ ಒಮ್ಮೆ 500ರೂ. ಕೊಡುವುದಾಗಿ ಸರಕಾರ ಹೇಳಿತು. ಅದೂ ಬಹಳಷ್ಟು ಮಂದಿಗೆ ತಲುಪಿಲ್ಲ ಎಂದು ವರದಿಯಾಗಿದೆ.
ನಂತರ ಯಾವುದೇ ಪರಿಹಾರ ಪ್ರಕಟವಾಗಲಿಲ್ಲ, ಲಾಕ್‌ಡೌನನ್ನು ವಿಸ್ತರಿಸಿದಾಗಲೂ ಯಾವುದೇ ಪರಿಹಾರದ ಮಾತೂ ಪ್ರಧಾನಿಗಳ ಮನದಿಂದಲೇ ಆಗಲಿ, ಬಾಯಿಂದಲೇ ಆಗಲಿ ಬರಲೇ ಇಲ್ಲ. ಲಾಕ್‌ಡೌನಿನ ಮೂರನೇ ಘಟ್ಟ ಮುಗಿರುವ ಒಮದು ವಾರದ ಮೊದಲು, ಮೇ 11ರಂದು ಮುಖ್ಯಮಂತ್ರಿಗಳೊಂದಿಗೆ ನಡೆದ ವಿಡಿಯೊ ಕಾನ್ಫರೆನ್ಸಿನಲ್ಲೂ ಹಲವು ಮುಖ್ಯಮಂತ್ರಿಗಳು ಕೇಳಿದರೂ ಅದಕ್ಕೆ ಉತ್ತರ ದೊರೆತಿಲ್ಲ. ಬದಲಿಗೆ, ಉದ್ಯೋಗದಾತರೆನಿಸಿಕೊಳ್ಳುವ ಮಾಲಕರಿಗೆ ಕಾರ್ಮಿಕ ಕಾನೂನುಗಳಲ್ಲಿ ಭಾರೀ ರಿಯಾಯ್ತಿ/ವಿನಾಯ್ತಿಗಳನ್ನು ನೀಡುವ ಮೂಲಕ ನೇರ ರಿಟ್ರೆಂಚ್‌ಮೆಂಟ್ ಇತ್ಯಾದಿಗಳ ಮೂಲಕ ಇನ್ನಷ್ಟು ಉದ್ಯೋಗ ನಷ್ಟಗಳಿಗೆ ಅವಕಾಶವನ್ನು ತೆರೆದು ಕೊಡಲಾಗುತ್ತಿದೆ.
- ಕೃಪೆ : ಜನಶಕ್ತಿ ಮೀಡಿಯಾ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅಂಧ ಮಕ್ಕಳ ವಸತಿ ಶಾಲೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆ 1 ನೇ ತರಗತಿ (6ವರ್ಷ) ಯಿಂದ 10ನೇ ತರಗತಿ (16ವರ್ಷ) ವರೆಗೆ ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿಯು ಪ್ರಾರಂಭವಾಗಿದೆ.
ಈ ಶಾಲೆಯಲ್ಲಿ ಅಂಧ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿಯುತ ಶಾಲೆಯಾಗಿರುತ್ತದೆ. ಸಾರ್ವಜನಿಕ ಶಿಕ್ಷಣ ಇಲಾಖೆಯವರು ನಿಗದಿಪಡಿಸಿರುವ ಸಾಮಾನ್ಯ ಮಕ್ಕಳಿಗೆ ನೀಡುತ್ತಿರುವ ಶಿಕ್ಷಣವನ್ನೇ ಇಲ್ಲಿಯೂ ಭೋದಿಸುವುದರ ಜೊತೆಗೆ ಬೈಲ್ ಲಿಪಿಯನ್ನು ಅಳವಡಿಸಿಲಾಗಿದೆ.
ಶೈಕ್ಷಣಿಕ ಅವಧಿಯಲ್ಲಿ ಅಂಧ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಾದ Daily Living Skills(DLS), ಯೋಗ, ದೈಹಿಕ ಶಿಕ್ಷಣ, ಸಂಗೀತ, ಡ್ಯಾನ್ಸ್ ಚಲನ-ವಲನ ತರಬೇತಿ, ಕಂಪ್ಯೂಟರ್ ತರಬೇತಿ, ಒಳಾಂಗಣ ಹಾಗೂ ಹೊರಾಂಗಣ ಆಟಗಳು, ಬ್ರೈಲ್ ಪುಸ್ತಕಗಳು, ಶಾಲಾ ಸಮವಸ್ತ್ರ, ಕಲಿಕಾ ಉಪಕರಣಗಳು, ವೈದ್ಯಕೀಯ ತಪಾಸಣೆಗಳು, ಕರಕುಶಲ ಕಾರ್ಯ ಚಟುವಟಿಕೆಗಳನ್ನು ಕಳಿಸಲಾಗುವುದು.
ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ದೃಷ್ಟಿ ವಿಕಲಚೇತನ ಮಕ್ಕಳು ಕಂಡು ಬಂದಲ್ಲಿ ಅವರ ಪೋಷಕರಿಗೆ ನಮ್ಮ ಶಾಲೆಯ ಬಗ್ಗೆ ಮಾಹಿತಿ ನೀಡಿ ಶೇ.40 ಕ್ಕಿಂತ ಹೆಚ್ಚಿನ ದೃಷ್ಟಿದೋಷ ಹೊಂದಿರುವ ಮಕ್ಕಳು ನಮ್ಮ ಸರ್ಕಾರಿ ಶಾಲೆಗೆ ದಾಖಲಾಗುವಂತೆ ಮಾಡಿ ವಿಕಲಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಾಲೆಯ ಮುಖ್ಯೋಪಾಧ್ಯಾಯರು, ಅಧೀಕ್ಷರಾದ ಗಂಗಾಧರಪ್ಪ.ಹೆಚ್.ಎನ್ ಮೊ.ಸಂ: 9984534883, 08182-250442 ಸಂಪರ್ಕಿಸಬಹುದೆAದು ಇಲಾಖೆಯ ಅಧೀಕ್ಷಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆ ಡಾ. ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಈ ವರ್ಷದ ಡಾ|| ಬಿ.ಆರ್. ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಪ್ರಿಲ್ 14 ರಂದು ಮಂಗಳವಾರ ಬೆಳಿಗ್ಗೆ 9:00 ಗಂಟೆಗೆ ಡಾ|| ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು. ನಂತರ ಬೆಳಿಗ್ಗೆ 11:00 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯ “ತುಂಗಭದ್ರಾ” ಸಭಾಂಗಣದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೆರವಣಿಗೆ ಮಾರ್ಗ
ಬೆಳಿಗ್ಗೆ 9:00 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಭಾವಚಿತ್ರದ ಮೆರವಣಿಗೆ ಆರಂಭವಾಗಲಿದ್ದು, ಹೈಸ್ಕೂಲ್ ಮೈದಾನ ಮಾರ್ಗವಾಗಿ ಮಹಾನಗರ ಪಾಲಿಕೆ, ಗಾಂಧಿ ವೃತ್ತ ಹಾಗೂ ಜಯದೇವ ವೃತ್ತದ ಮೂಲಕ ಸಾಗಿ ಪುನಃ ಅಂಬೇಡ್ಕರ್ ವೃತ್ತಕ್ಕೆ ತಲುಪಲಿದೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ದಾವಣಗೆರೆ ತಾಲ್ಲೂಕು ಮಟ್ಟದ ಅಧಿಕಾರಿಗಳು, ದಲಿತಪರ ಸಂಘಟನೆಯ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ ರವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಚಿಕ್ಕಮಗಳೂರು | ನೂತನ ಭದ್ರಾ ಸೇತುವೆ ಲೋಕಾರ್ಪಣೆಗೊಳಿಸಿ
ಸುದ್ದಿದಿನ,ಚಿಕ್ಕಮಗಳೂರು:ಜಿಲ್ಲೆಯ ಎನ್‌ಆರ್ ಪುರದಲ್ಲಿ ಇಂದುಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಹಂದೂರು ಗ್ರಾಮದಿಂದ ಎನ್.ಆರ್.ಪುರಕ್ಕೆ ಸಂಪರ್ಕಿಸುವ ನೂತನ ಭದ್ರಾ ಸೇತುವೆಯನ್ನು ಲೋಕಾರ್ಪಣೆಗೊಳಿಸಿ, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ವಿತರಿಸಿದೆ.
ಸಚಿವರಾದ ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಶೃಂಗೇರಿ ಶಾಸಕರಾದ ಟಿ.ಡಿ.ರಾಜೇಗೌಡ, ಕಡೂರು ಶಾಸಕರಾದ ಆನಂದ್, ತರೀಕೆರೆ ಶಾಸಕರಾದ ಶ್ರೀನಿವಾಸ್, ಮಾಗಡಿ ಶಾಸಕ ಬಾಲಕೃಷ್ಣ ಸೇರಿ ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರು, ಮುಖಂಡರು ಹಾಗೂ ಸಂಪಾದಕರಾದ ವಿಶ್ವೇಶ್ವರ ಭಟ್, ಕೆಎಸ್‌ಟಿಡಿಸಿ ಅಧ್ಯಕ್ಷರಾದ ಸರೋವರ್ ಶ್ರೀನಿವಾಸ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ7 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ5 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ6 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ4 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ4 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ6 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ
-
ದಿನದ ಸುದ್ದಿ2 days agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

