ದಿನದ ಸುದ್ದಿ
ವಿಂಟೇಜ್ ಕಾರುಗಳ ಒಡೆಯ ಕುಟ್ಟಿ ಹಾಜಿ ಬಗ್ಗೆ ನಿಮಗೆ ಗೊತ್ತಿರದ ಸತ್ಯಗಳು
ಸುದ್ದಿ ದಿನ ಡೆಸ್ಕ್: ನೂರಾರು ವಿಂಟೇಜ್ ಕಾರುಗಳ ಒಡೆಯ ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಮೂಲದ ಪಿ.ಸಿ. ಅಹಮ್ಮದ್ ಕುಟ್ಟಿ ಹಾಜಿ ಶನಿವಾರ ಸಾವಿಗೀಡಾದರು. ತೋಟದಲ್ಲಿ ಮರದ ಕೊಂಬೆಯೊಂದು ತಲೆ ಮೇಲೆ ಬಿದ್ದು, ಚಿಕಿತ್ಸಾ ವೈಫಲ್ಯದಿಂದ ಅವರು ಕೊನೆಯಿಸಿರೆಳೆದರು. ಹಾಜಿ ಅವರ ಬಗ್ಗೆ ನಿಮಗೆ ಗೊತ್ತಿರದ ಸತ್ಯಗಳು ಇಲ್ಲಿವೆ.
- ಕುಟ್ಟಿ ಹಾಜಿ ಅವರು ಮೂಲತಃ ಕೇರಳದ ಕಣ್ಣೂರು ಜಿಲ್ಲೆಯವರು.
- ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಪಿ.ಸಿ. ಹಸೈನಾರ್, ಹಾಜಿ ಅವರ ಸಹೋದರ.
- ನೂರಾರು ಕ್ಲಾಸಿಕ್ ಅಥವಾ ವಿಂಟೇಜ್ ಕಾರುಗಳನ್ನು ಸಂಗ್ರಹಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದ ಹಾಜಿ.
- ಸಾಕಷ್ಟು ವರ್ಷಗಳಿಂದ ವಿಂಟೇಜ್ ಕಾರುಗಳನ್ನು ಸಂಗ್ರಹಿಸುವ ಹವ್ಯಾಸ.
- ಬ್ರಿಟಿಷರ ಕಾರುಗಳಿಂದ ಹಿಡಿದು ವಿದೇಶಿ ಕಾರುಗಳ ವರೆಗೆ ಸಂಗ್ರಹ ಮಾಡಿದ್ದರು.
- ಇವರ ಮನೆ ಮುಂದೆ ಇರುವ ಕಾರು ಸಂಗ್ರಹಾಲಯ ನೋಡಲು ವಿದೇಶದಿಂದಲೂ ಬರುತ್ತಿದ್ದ ಜನ.
- ತಮ್ಮಲ್ಲಿದ್ದ ಎಲ್ಲ ಕಾರುಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಹಾಜಿ.
- ಇವರ ಬಳಿ ಇದ್ದ ಎಲ್ಲ ಕಾರುಗಳು ರನ್ನಿಂಗ್ ಕಂಡಿಶನ್ ನಲ್ಲಿದ್ದವು.
- ಕೆಲವೊಮ್ಮೆ ಇವುಗಳ ಮೆರವಣಿಗೆ ಕೂಡ ನಡೆಸುತ್ತಿದ್ದರು.
- ಕಾರುಗಳ ವೀಕ್ಷಣೆಗೆ ಸ್ಥಳೀಯರು ಮತ್ತು ವಿದ್ಯಾರ್ಥಿಗಳಿಗೆ ಉಚಿತವಾಗಿ ಅವಕಾಶ ಕೊಟ್ಟಿದ್ದರು.
- ಸೋಮವಾರಪೇಟೆ ತಾಲೂಕು ನೆಲ್ಲಿಹುದಿಕೇರಿಯ ಮುಬಾರಕ್ ಎಸ್ಟೇಟ್ ಕಾಫಿ ತೋಟದಲ್ಲಿ ಶೆಡ್‌ವೊಂದನ್ನು ನಿರ್ಮಿಸಿ ಅಲ್ಲಿಯೇ ತಾವು ಸಂಗ್ರಹಿಸಿದ್ದ ಪುರಾತನ, ಅಪರೂಪದ ನೂರಾರು ವಿಂಟೇಜ್ ಕಾರುಗಳನ್ನು ಪ್ರದರ್ಶನಕ್ಕಿಟ್ಟಿದ್ದರು.
- ಇವರ ಸಂಗ್ರಹದಲ್ಲಿ ಕಾರುಗಳು ಮಾತ್ರವಲ್ಲದೆ ಹಳೆ ಕಾಲದ ಮೋಟಾರ್ ಬೈಕ್, ಸೈಕಲ್‌ಗಳು, ಎತ್ತಿನ ಗಾಡಿ, ಸಿನಿಮಾ ಪ್ರೊಜೆಕ್ಟರ್‌ಗಳು, ಗಡಿಯಾರ, ಮ್ಯೂಸಿಕ್ ಪ್ಲೇಯರ್, ರೇಡಿಯೋಗಳಿದ್ದವು.
- ರಾಜ್ಯದಲ್ಲೇ ಇವರಷ್ಟು ಹೆಚ್ಚು ಕಾರುಗಳ ಸಂಗ್ರಹ ಯಾರ ಬಳಿಯೂ ಇಲ್ಲ. ದೇಶ, ವಿದೇಶಗಳ ಮಾಧ್ಯಮಗಳು ಇವರ ಬಳಿ ಇದ್ದ ಕಾರುಗಳ ಸಂಗ್ರಹದ ಬಗ್ಗೆ ಲೇಖನ, ವರದಿಗಳನ್ನು ಪ್ರಕಟಿಸಿವೆ.
- ಶ್ರೀಮಂತರಾಗಿದ್ದರೂ ಸರಳ, ಸಜ್ಜನರಾಗಿದ್ದರು.
- ಸಿದ್ದಾಪುರ ಮುಸ್ಲಿಂ ಜಮಾಅತ್ ಕಮಿಟಿಯಲ್ಲಿ ಉಪಾಧ್ಯಕ್ಷರಾಗಿದ್ದರು. ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು.
- ಪ್ರತಿ ವರ್ಷ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹಳೆಯ ಕಾರುಗಳ ಸಂಗ್ರಹದ ಬಗ್ಗೆ ಮಾಹಿತಿ ನೀಡುತ್ತಿದ್ದರು.

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


