Connect with us

ದಿನದ ಸುದ್ದಿ

ಪ್ರಥಮವಾಗಿ ಕಿಡ್ನಿ ವರ್ಗಾವಣೆ ಯಶಸ್ವಿ : ಕೀಮ್ಸ್ ಡಾ.ರಾಮಲಿಂಗಪ್ಪ.ಅಂಟರಾಥಾನಿ

Published

on

ಸುದ್ದಿದಿನ,ಹುಬ್ಬಳ್ಳಿ : ಬಹುನಿರಿಕ್ಷೀತ ಪ್ರಯತ್ನದಿಂದ ನಮ್ಮೆಲ್ಲಾ ವೈದ್ಯಕೀಯ ತಜ್ಞರಿಂದ ಯಶಸ್ವಿಯಾಗಿ ಕಿಡ್ನಿ ವರ್ಗಾವಣೆಯ ಶಸ್ತ್ರಕ್ರಿಯೆ ನೆಡಸಲಾಯಿತು. ಎಂದು ಕೀಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ.ಅಂಟರಾಥಾನಿಯವರು ಹೇಳಿದರು.

ಅವರು ಇಂದು ಕೀಮ್ಸ್ ಆಸ್ಪತ್ರೆಯ ಜುಬ್ಲಿ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಕಡುಬಡವರು ಹಾಗೂ ಮಧ್ಯಮವರ್ಗದ ಜನರಿಗೆ ನಿಲುಕುವಲ್ಲಿ ಅತ್ಯಂತ ಕಡಿಮೆ ದರದಲ್ಲಿ ಮೂತ್ರಪಿಂಡದಿಂದ ಬಳಲುವ ವ್ಯಕ್ತಿಗೆ ಕಿಡ್ನಿ ಸಹಾಯವನ್ನು ಮಾಡಲಾಗುತ್ತದೆ. ಮತ್ತು APL ಕಾರ್ಡು ಹೊಂದಿದವರಿಗೆ ಶೇಕಡಾ 75 ರಷ್ಟು ವಿನಾಯತಿ ಹಾಗೂ BPL ಮತ್ತು ಅಂತ್ಯೋದಯ ಕಾರ್ಡು ಹೊಂದಿದವರಿಗೆ ಉಚಿತವಾಗಿ ಕನಿಷ್ಠಪಕ್ಷ ಇತರೆ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸದಾಗ ಕನಿಷ್ಠಪಕ್ಷ 1ಲಕ್ಣ 50. ಸಾವಿರ ಗಳವರೆಗೆ ಶಸ್ತ್ರ ಚಿಕಿತ್ಸೆಯನ್ನುಮಾಡಲಾಗಿವದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಹಾಗೂ ಮುಖ್ಯ ವಿಭಾಗದ ವ್ಯವಸ್ಥಾಪಕ ಡಾ. ವೆಂಕಟೇಶ ಮುಗೆರ ಮಾತನಾಡಿ ಕಿಡ್ನಿ ಸಮಸ್ಯೆಯ ಪರಿಹಾರವಾಗಿ ಇರುವಂತಹ ಸಮಸ್ಯೆಗಳಿಗೆ ಸೂಕ್ತ ಸಲಹೆ ಹಾಗೂ ಸಮಸ್ಯೆಗಳ ಬಗ್ಗೆ ಪರಿಹಾರವನ್ನು ನೀಡುವಂತಹ ಸೂಚನೆಗಳನ್ನು ಪತ್ರಿಕಾ ಗೋಷ್ಠಿಯಲ್ಲಿ ಮಂಡಿಸಿದರು.

ತದನಂತರ ಕಿಡ್ನಿ ವರ್ಗಾವಣೆಯ ಸಂದರ್ಭದಲ್ಲಿ ನೇರವಾಗಿ ತಮ್ಮ ರಕ್ತಸಂಬಂಧಿಗಳ ಕಿಡ್ನಿಯನ್ನು ವರ್ಗಾಯಿಸಬಹುದಾಗಿದೆ. ಇದು ಶೀಘ್ರವಾಗಿ ಇರುತ್ತದೆ. ಅಲ್ಲದೆ ವರ್ಗಾವಣೆ ಸಂದರ್ಭದಲ್ಲಿ ದಾನಿಯಾಗಿ ನಿಡುತ್ತಿರುವವರು ಯಾವುದೇ ತರನಾದ ಮಧುಮೇಹ, ಸಕ್ಕರೆ ಕಾಯಿಲೆ ಹೊಂದಿರತಕ್ಕದಲ್ಲ ಮುಂದುವರೆದು ಮಾತನಾಡಿದ ಅವರು ಯಾವುದೇ ದಾನಿಯು 18 ವರ್ಷ ಮೇಲ್ಪಟ್ಟ ಹಾಗೂ 62 ವರ್ಷದೊಳಗಿನ ವಯೋಮಿತಿಯನ್ನು ಹೊಂದಿರುವದು ಅತಿ ಅವಶ್ಯಕ.

ಈ ಸಂದರ್ಭದಲ್ಲಿ 21 ವರ್ಷದ ಹುಡಗನಿಗೆ ಅವರ 44 ವರ್ಷದ ತಾಯಿ ಕಿಡ್ನಿ ದಾನ ಮಾಡಿರುವದನ್ನು ಡಾ.ವೆಂಕಟೇಶ ಮುಗೆರ ಶ್ಲಾಘಿಸಿದರು. ಮತ್ತು ಸಾವಿರಕ್ಕು ಹೆಚ್ಚು ಡಯಾಲೀಸಿಸ್ ಮಾಡುತ್ತಿದ್ದೆವೆ ಎಂದರು.

1994 ರಲ್ಲಿ ಜಾರಿಯಾದ ಕಿಡ್ನಿ ವರ್ಗಾವಣೆ ನಿಯಮದಂತೆ ಪರಸ್ಪರ ಹೊಂದಾಣಿಕೆಯ ನಿಯಮದಂತೆ ಸಂಬಧಿಕರು ಅಥವಾ ಬೇರೆಯವರ ಸಕ್ಷಮ ಒಪ್ಪಗೆ ಮೇರೆಗೆ ಕಿಡ್ನಿಯನ್ನು ವರ್ಗಾಯಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಅರವಳಿಕೆ ವಿಭಾಗದ ಮುಖ್ಯಸ್ತರಾದ ಡಾ. ಮಾಧುರಿ ಅವರು ಮಾತನಾಡಿ ಕಿಡ್ನಿ ವರ್ಗಾವಣೆಯು ಅತ್ಯಂತ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ಯಾಗಿದ್ದು ಇದನ್ನು ವೈದ್ಯಕೀಯ ಮಟ್ಟದಲ್ಲಿ ಅತಿ ಗಂಭೀರವಾಗಿ ಪ್ರಥಮವಾಗಿ ಶಸ್ತ್ರಚಿಕಿತ್ಸೆಯನ್ನು ಕೀಮ್ಸ್ ಆಸ್ಪತ್ರೆಯಿಂದ ಯಶಸ್ವಿಯಾಗಿ ಮಾಡಲಾಗಿದೆ ಎಂದು ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ಅರುಣ ಕುಮಾರ, ಕೀಮ್ಸ ಪ್ರಾಚಾರ್ಯರಾದ ಡಾ.ಈಶ್ವರ ಹೊಸಮನಿ, ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ, ಮೂತ್ರಪಿಂಡ ತಜ್ಞರಾದ ಡಾ.ಮಾಯಾ,ಡಾ.ಎಮ್. ಆರ್. ಪಾಟೀಲ, ಡಾ.ವಿವೇಕ ಗಾಣಿಗೇರ, ಮೂತ್ರನಾಳದ ತಜ್ಞರಾದ ಡಾ.ರವಿಕುಮಾರ. ಜಾಧವ್, ಡಾ.ಸಂಪತ್ ಕುಮಾರ ಡಾ.ಆರ್.ಆರ್.ರಾಯ್ಕರ್, ಡಾ ಜಯದೀಪ್ ರಟಕಲ್, ಡಾ.ಟಾಕಪ್ಪ, ಅರವಳಿಕೆ ತಜ್ಞರಾದ ಡಾ.ಭೋಸಲೆ, ಡಾ.ಶಿತಲ್. ಹಿರೇಗೌಡರ ಹಾಗೂ ಕಸಿ ನಿರ್ವಾಹಕರಾದ ಶಿವಾನಂದ. ಹೊನಕೇರೆ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕವಿತೆ | ಮತ್ತಿನ ಕುಣಿಕೆ

Published

on

  • ಗುರು ಸುಳ್ಯ

ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ

ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ

ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…

ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ

ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ

ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)

ಕವಿ : ಗುರು ಸುಳ್ಯ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ

Published

on

ಸುದ್ದಿದಿನ,ದಾವಣಗೆರೆ:2024ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.

ಶಾಸಕ ನಿವಾಸದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಶಾಸಕರು, ಇದೇ ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕಗಳನ್ನು ಪಡೆಯುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಇಸಿಒ ಗೋವಿಂದರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬೆಂವಿವಿ | ಸಂವಹನ ವಿದ್ಯಾರ್ಥಿಗಳಿಂದ ಹೋಳಿ ಸಂಭ್ರಮ

Published

on

ಸುದ್ದಿದಿನ,ಬೆಂಗಳೂರು:ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದಿಂದ ಆಯೋಜಿಸಿದ್ದ ಹೋಳಿ ಹಬ್ಬದ ಅಂಗವಾಗಿ ವಿಭಾಗದ ಮುಂಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಗಳು, ಸ್ನಾತಕೋತ್ತರ ವಿದ್ಯಾರ್ಥಿಗಳು ಕಲರ್‌ ಹಚ್ಚುವ ಮೂಲಕ ಹೋಳಿ ಸಂಭ್ರಮ ಮಾಡಲಾಯಿತು. ಇದೇ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಬಿ ಶೈಲಶ್ರೀರವರು, ಸಂಶೋಧನಾ, ಸ್ನಾತಕೋತ್ತರ ಪ್ರಥಮ ಹಾಗೂ ದ್ವೀತಿಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending