ದಿನದ ಸುದ್ದಿ
ದಾವಣಗೆರೆ | ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ 1095 ಸಿಬ್ಬಂದಿಗಳು, 331 ಟೇಬಲ್‍ಗಳು, 06 ಕೇಂದ್ರಗಳಲ್ಲಿ ಮತ ಎಣಿಕೆಗೆ ಸಜ್ಜು : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ಸುದ್ದಿದಿನ,ದಾವಣಗೆರೆ : ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ 06 ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕಳೆದ ಡಿ. 22 ಹಾಗೂ ಡಿ. 27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಶಾಂತಿಯುತವಾಗಿ ಜರುಗಿದೆ.
ದಾವಣಗೆರೆ ತಾಲ್ಲೂಕಿನ ಹೆಬ್ಬಾಳ ಗ್ರಾ.ಪಂ.ನ ಎರಡು ಮತಗಟ್ಟೆಗಳಲ್ಲಿ ಡಿ. 29 ರಂದು ಮರು ಮತದಾನ ನಡೆಸಲಾಗಿದೆ. ಜಿಲ್ಲೆಯ ಒಟ್ಟು 187 ಗ್ರಾಮ ಪಂಚಾಯತಿಗಳಿಗೆ ಜರುಗಿದ ಚುನಾವಣೆಯಲ್ಲಿ ಈ ಬಾರಿ ಒಟ್ಟು 374 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 09 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದ ಕಾರಣ ಖಾಲಿ ಉಳಿದಿವೆ.
ಒಟ್ಟು 2200 ಸದಸ್ಯ ಸ್ಥಾನಗಳಿಗೆ 1158 ಮತಗಟ್ಟೆಗಳಲ್ಲಿ ಜರುಗಿದ ಚುನಾವಣೆಯಲ್ಲಿ ಒಟ್ಟಾರೆ ಶೇ. 85.79 ರಷ್ಟು ಮತದಾನವಾಗಿದ್ದು, ಹೊನ್ನಾಳಿ ತಾಲ್ಲೂಕು- ಶೇ. 86.31, ದಾವಣಗೆರೆ- ಶೇ. 86.23, ಜಗಳೂರು-ಶೇ. 85.08, ಚನ್ನಗಿರಿ- ಶೇ. 84.56, ನ್ಯಾಮತಿ-87.49 ಹಾಗೂ ಹರಿಹರ ತಾಲ್ಲೂಕಿನಲ್ಲಿ ಶೇ. 87.15 ರಷ್ಟು ಮತದಾನವಾಗಿದೆ. ಇದೀಗ ಡಿ. 30 ರಂದು ಮತಗಳ ಎಣಿಕೆ ಕಾರ್ಯ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮತ ಎಣಿಕೆ ಕೇಂದ್ರಗಳು
ದಾವಣಗೆರೆಯ ಮೋತಿ ವೀರಪ್ಪ ಪ್ರೌಢಶಲೆ ಮತ್ತು ಪ.ಪೂ. ಕಾಲೇಜು. ಜಗಳೂರಿನ ಸರ್ಕಾರಿ ಜೂನಿಯರ್ ಕಾಲೇಜು. ಹೊನ್ನಾಳಿಯ ಗಂಗಮ್ಮ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ ಹಿರೇಕಲ್ಮಠ. ನ್ಯಾಮತಿಯ ಕರ್ನಾಟಕ ಪಬ್ಲಿಕ್ ಸ್ಕೂಲ್. ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ ಹಾಗೂ ಚನ್ನಗಿರಿಯ ಸರ್ಕಾರಿ ಪ.ಪೂ. ಕಾಲೇಜು ಇಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
1095 ಸಿಬ್ಬಂದಿ, 331 ಟೇಬಲ್‍ಗಳು
ಮತಗಳ ಎಣಿಕಾ ಕಾರ್ಯ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಅಗತ್ಯ ಸಿಬ್ಬಂದಿಗಳಿಗೆ ಮಾಸ್ಟರ್ ಟ್ರೇನರ್‍ಗಳ ಮೂಲಕ ಮತ ಎಣಿಕೆ ಸಿಬ್ಬಂದಿಗಳಿಗೆ ಎರಡು ಬಾರಿ ತರಬೇತಿ ನೀಡಿ, ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1158 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆ ಒಟ್ಟು 06 ತಾಲ್ಲೂಕು ಕೇಂದ್ರಗಳಲ್ಲಿ ಜರುಗಲಿದೆ.
ಒಟ್ಟು 331 ಟೇಬಲ್‍ಗಳನ್ನು ಮತಗಳ ಎಣಿಕೆಗೆ ವ್ಯವಸ್ಥೆಗೊಳಿಸಿದ್ದು, 331 ಎಣಿಕಾ ಮೇಲ್ವಿಚಾರಕರು, ಹೆಚ್ಚುವರಿ 32 ಸೇರಿದಂತೆ ಒಟ್ಟು 363 ಮೇಲ್ವಿಚಾರಕರನ್ನು ನೇಮಿಸಿದೆ. ಅಲ್ಲದೆ 666 ಎಣಿಕಾ ಸಹಾಯಕರು ಹಾಗೂ ಹೆಚ್ಚುವರಿ 66 ಸೇರಿದಂತೆ ಒಟ್ಟು 732 ಎಣಿಕಾ ಸಹಕಾಕರನ್ನು ನಿಯೋಜಿಸಿದ್ದು, ಒಟ್ಟಾರೆ 1095 ಸಿಬ್ಬಂದಿಗಳನ್ನು ಮತ ಎಣಿಕಾ ಕಾರ್ಯಕ್ಕೆ ನೇಮಿಸಲಾಗಿದೆ.
ತಾಲ್ಲೂಕುವಾರು ವಿವರ
ಹೊನ್ನಾಳಿ ತಾಲ್ಲೂಕಿನಲ್ಲಿ 147 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 41 ಟೇಬಲ್‍ಗಳು, 45 ಮೇಲ್ವಿಚಾರಕರು, 90 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 135 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ದಾವಣಗೆರೆ ತಾಲ್ಲೂಕಿನಲ್ಲಿ 253 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 73 ಟೇಬಲ್‍ಗಳು, 80 ಮೇಲ್ವಿಚಾರಕರು, 161 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 241 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಗಳೂರು ತಾಲ್ಲೂಕಿನಲ್ಲಿ 172 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 51 ಟೇಬಲ್‍ಗಳು, 56 ಮೇಲ್ವಿಚಾರಕರು, 112 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 168 ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ 368 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತ ಎಣಿಕೆಗೆ 100 ಟೇಬಲ್‍ಗಳು, 110 ಮೇಲ್ವಿಚಾರಕರು, 220 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 330 ಸಿಬ್ಬಂದಿ ನೇಮಿಸಲಾಗಿದೆ. ಹರಿಹರ ತಾಲ್ಲೂಕಿನಲ್ಲಿ 151 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 42 ಟೇಬಲ್‍ಗಳು, 46 ಮೇಲ್ವಿಚಾರಕರು, 92 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 138 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ 93 ಮತಗಟ್ಟೆಗಳಲ್ಲಿ ಚುನಾವಣೆ ನಡೆದಿದ್ದು, ಮತಗಳ ಎಣಿಕೆಗೆ 24 ಟೇಬಲ್‍ಗಳು, 26 ಮೇಲ್ವಿಚಾರಕರು, 57 ಎಣಿಕಾ ಸಹಾಯಕರು ಸೇರಿದಂತೆ ಒಟ್ಟು 83 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಮಾನ ಮತಗಳು ಬಂದಲ್ಲಿ ಚೀಟಿ ಮೂಲಕ ಆಯ್ಕೆ
ಮತಗಳ ಎಣಿಕೆ ಮುಕ್ತಾಯ ಬಳಿಕ ಅಭ್ಯರ್ಥಿಗಳ ನಡುವೆ ಸಮಾನ ಮತಗಳು ಇರುವುದು ಕಂಡುಬಂದಲ್ಲಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ) ನಿಯಮ 1993 (73) ಅನ್ವಯ ಚುನಾವಣಾಧಿಕಾರಿಯು ಚೀಟಿ ಎತ್ತುವ ಮೂಲಕ ಅಭ್ಯರ್ಥಿಯ ಆಯ್ಕೆಯನ್ನು ನಿರ್ಣಯಿಸುವರು.
ಒಂದು ವೇಳೆ ಮತಪತ್ರದಲ್ಲಿ ಗುರುತು ಮಾಡದೇ ಇರುವುದು, ಖಾಲಿ ಜಾಗದ ಮೇಲೆ ಗುರುತು ಮಾಡಿದಲ್ಲಿ, ಆಯ್ಕೆ ಮಾಡಬೇಕಾಗಿರುವ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದ್ದಲ್ಲಿ, ಮತದಾರರನ್ನು ಗುರುತಿಸಿದ್ದಲ್ಲಿ, ಮತಪತ್ರವನ್ನು ವಿರೂಪಗೊಳಿಸಿದ್ದಲ್ಲಿ, ಮತಪತ್ರ ನೈಜವಾದುದಲ್ಲ ಎಂದು ಕಂಡುಬಂದಲ್ಲಿ ಅಂತಹ ಮತಪತ್ರವನ್ನು ತಿರಸ್ಕರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ

ಸುದ್ದಿದಿನ,ದಾವಣಗೆರೆ : ಮಾ.10 ರಂದು ಬೆಳಿಗ್ಗೆ 10.30 ಕ್ಕೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಲಿಟಿ, ಜಿಲ್ಲಾ ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮ #1027, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಎಸ್.ಬಿ.ಎಂ ಬ್ಯಾಂಕ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ ಇಲ್ಲಿ ಅಂಗವಿಕಲರಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ (ssc) ವತಿಯಿಂದ ನಾನ್-ಟೆಕ್ನಿಕಲ್(ತಾಂತ್ರಿಕೇತರ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳ ವಯೋಮಿತಿ 27 ವರ್ಷ. ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಮಾ.21 ಕೊನೆಯ ದಿನಾಂಕವಾಗಿದ್ದು, ಈ ವೆಬ್ಸೈಟ್
https://ssc.nic.in or www.ssckkr.kar.nic.in
ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ | ದಾವಣಗೆರೆ | ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು : ನ್ಯಾ.ಗೀತಾ.ಕೆ.ಬಿ
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ನಂ: 08025502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್.ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ನಗರದಲ್ಲಿಂದು ವಿದ್ಯುತ್ ವ್ಯತ್ಯಯ

ಸುದ್ದಿದಿನ,ದಾವಣಗೆರೆ : 220/66 ಕೆ.ವಿ. ಕೇಂದ್ರದಿಂದ ಎಸ್.ಆರ್.ಎಸ್.ನಿಂದ ಸರಬರಾಜಾಗುವ 66 ಕೆ.ವಿ. ದಾವಣಗೆರೆ ಹಾಗೂ ಯರಗುಂಟ ವಿತರಣಾ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.09 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 4 ಗಂಟೆಯವರೆಗೆ 66/11 ಕೆ.ವಿ. ದಾವಣಗೆರೆ, 220/66 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಮತ್ತು 66/11ಕೆ.ವಿ. ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇದನ್ನೂ ಓದಿ | ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?
ದಾವಣಗೆರೆ ತಾಲೂಕಿನ ದಾವಣಗೆರೆ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಬೆಳವನೂರು, ಶಿರಮಗೊಂಡನಹಳ್ಳಿ, ಶಾಮನೂರು, ಕುಂದವಾಡ, ಬಾತಿ ಅಮೃತನಗರ, ನೀಲನಹಳ್ಳಿ, ಬೂದಿಹಾಳ್, ಕಕ್ಕರಗೊಳ್ಳ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ5 days ago
ಗಾಳಿಪಟ ವೇಗದ ರಾಜಕುಮಾರ ‘ಬೀರ್ ಚಿಲಾರಾಯ್’..!
-
ದಿನದ ಸುದ್ದಿ6 days ago
ಕೊಟ್ಟ ಮಾತಿನಂತೆ ನಡೆದ ಡಿ ಬಾಸ್ ದರ್ಶನ್;ಕುದುರೆಯ ತಡಿ ನೀಡಿ, ಎಸ್.ಎಸ್.ಮಲ್ಲಿಕಾರ್ಜುನಗೆ ಕೃತಜ್ಞತೆ
-
ಕ್ರೀಡೆ7 days ago
ಆಸ್ಟ್ರೇಲಿಯಾ ಕ್ರಿಕೆಟ್ ಆಟಗಾರ ಡೇವಿಡ್ ವಾರ್ನರ್ ಮರಳಿ ತಂಡಕ್ಕೆ..!
-
ದಿನದ ಸುದ್ದಿ5 days ago
24 ಕೆರೆ ತುಂಬಿಸುವ ಯೋಜನೆಗೆ ರೂ.48 ಕೋಟಿಗಳ ಅನುದಾನ ಮಂಜೂರು : ಎಂ.ಪಿ ರೇಣುಕಾಚಾರ್ಯ
-
ದಿನದ ಸುದ್ದಿ5 days ago
ಮಾಧ್ಯಮ ಉದ್ಯಮವಾಗಿರುವ ಈ ಕಾಲಘಟ್ಟದಲ್ಲಿ ಜನರೇ ಜನಾಭಿಪ್ರಾಯ ರೂಪಿಸುವ ಹೊಣೆ ಹೊರಬೇಕು : ಹಿರಿಯ ಪತ್ರಕರ್ತ ಬಸವರಾಜ್ ದೊಡ್ಮನಿ
-
ದಿನದ ಸುದ್ದಿ5 days ago
ಅಡಿಕೆಯಲ್ಲಿ ಅರಳು ಉದುರುವ, ಹಿಂಗಾರು ಒಣಗುವ ಮತ್ತು ಹಿಂಗಾರ ತಿನ್ನುವ ಸಮಸ್ಯೆ : ರೈತರು ತೆಗೆದುಕೊಳ್ಳಬೇಕಾದ ಕ್ರಮಗಳು
-
ನಿತ್ಯ ಭವಿಷ್ಯ6 days ago
ಜ್ಯೋತಿಷ್ಯಶಾಸ್ತ್ರ ಅಥವಾ ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು?ಕಂಕಣಬಲ ಕೂಡಿ ಬರಲು ಏನು ಮಾಡಬೇಕು?
-
ಬಹಿರಂಗ4 days ago
ಸುಳ್ಳಿನ ಸುಳಿಯಲ್ಲಿ ಸುಲ್ತಾನ