Connect with us

ದಿನದ ಸುದ್ದಿ

ದಾವಣಗೆರೆ | ವಿಶ್ವಗುರು ಭಾರತ ಪ್ರತಿಷ್ಠಾನದಿಂದ ಬಿ. ವಾಮದೇವಪ್ಪ ನವರಿಗೆ ‘ನಮ್ಮ ಸಾಧಕರು’ ಪ್ರಶಸ್ತಿ ಪ್ರಧಾನ

Published

on

ಸುದ್ದಿದಿನ,ದಾವಣಗೆರೆ : ತಾನಷ್ಟೇ ಬೆಳೆಯುವವರು ಸಾಧಕರು ಆಗಲಿಕ್ಕೆ ಸಾಧ್ಯವಿಲ್ಲ. ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವವರು ಯಾರೋ ಅವರೇ ಸಾಧಕರು. ಅಂತಹ ಸಾಲಿಗೆ ಸೇರಿದವರು ಶ್ರೀಯುತ ಬಿ ವಾಮದೇವಪ್ಪ ನವರು ಎಂದು ದಾವಣಗೆರೆ ತಾಲೂಕು ದೊಡ್ಡ ಬಾತಿಯ ವಿಶ್ವಗುರು ಭಾರತ ಪ್ರತಿಷ್ಠಾನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಿವಕುಮಾರ್ ಮೇಗಳಮನೆ ಅವರು ನುಡಿದರು.

ಅವರು ಇಂದು ದೊಡ್ಡ ಬಾತಿಯ ವಿಶ್ವಗುರು ಭಾರತ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ನಮ್ಮ ಸಾಧಕರು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಯುತ ಬಿ ವಾಮದೇವಪ್ಪ ನವರಿಗೆ ನಮ್ಮ ಸಾಧಕರು ಪ್ರಶಸ್ತಿ ಪ್ರದಾನ ಮಾಡಿ ಪ್ರಶಸ್ತಿ ಪುರಸ್ಕೃತರನ್ನು ಕುರಿತಂತೆ ಮೇಲಿನಂತೆ ಮಾತನಾಡಿದರು.

ಮುಂದುವರೆದು ಮಾತನಾಡುತ್ತ ವ್ಯಕ್ತಿಯ ಸಾಧನೆಗಳನ್ನು ಕೊಡುಗೆಗಳನ್ನು ಗುರುತಿಸಿ ಅಂತಹ ವ್ಯಕ್ತಿಗಳನ್ನು ನಮ್ಮ ಸಂಸ್ಥೆಗೆ ಕರೆಸಿ ಅವರ ಮೂಲಕ ಅವರ ಅನುಭವ ಜ್ಞಾನ ತಿಳುವಳಿಕೆ ಮಾರ್ಗದರ್ಶನಗಳನ್ನು ನಮ್ಮ ಮಕ್ಕಳಿಗೆ ಪರಿಚಯಿಸುವುದರೊಂದಿಗೆ ಮುಂದೆ ಮಕ್ಕಳು ನೆಲೆಗಟ್ಟಿನಲ್ಲಿ ಬೆಳೆಯಲಿ ಎಂಬ ಆಶಯ ನಮ್ಮದಾಗಿದೆ. ಆ ನಿಟ್ಟಿನಲ್ಲಿ ಶ್ರೀಯುತ ಬಿ ವಾಮದೇವಪ್ಪ ನವರ ಅಪಾರ ಸಾಧನೆ ಕೊಡುಗೆ ಸೇವೆಯನ್ನು ಗುರುತಿಸಿ ಅವರಿಗೆ ನಮ್ಮ ಸಂಸ್ಥೆಯವರು ಇಂದು ಈ ಪ್ರಶಸ್ತಿ ಪುರಸ್ಕಾರ ಮಾಡುತ್ತಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ಎಂದು ತಿಳಿಸಿದರು.

ಶ್ರೀಯುತ ಬಿ ವಾಮದೇವಪ್ಪ ನವರು ನಮ್ಮ ಸಂಸ್ಥೆಯ ನಾಲ್ಕನೆಯ ನಮ್ಮ ಸಾಧಕರಾಗಿದ್ದಾರೆ ಅವರು ಸರಳ ಸಜ್ಜನಿಕೆಯ ಕನ್ನಡ ಸೇವಕರು. ಇವರ ಕನ್ನಡ ಸೇವೆ ನಿಜಕ್ಕೂ ಶ್ಲಾಘನೀಯ ಅವರು ಮಾಡಿದ ಅಂತರ್ಜಾಲದ ಮೂಲಕ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ಜನ ಮಾತ್ರ ಜನಮಾನಸದಲ್ಲಿ ನೆಲೆಯೂರಿದೆ ಹಾಗೆ ದೇಶ-ವಿದೇಶಗಳಲ್ಲಿರುವ ಕನ್ನಡಿಗರ ಮನಮುಟ್ಟುವಂತಹ ಕೆಲಸ ಮಾಡಿರುವುದು ನಿಜಕ್ಕೂ ಅತ್ಯಂತ ಶ್ಲಾಘನೀಯ ಎಂದು ಕೊಂಡಾಡಿದರು.

ನಮ್ಮ ಸಾಧಕರು ಪ್ರಶಸ್ತಿ ಸ್ವೀಕರಿಸಿದ ಬಿ ವಾಮದೇವಪ್ಪ ನವರು ಮಾತನಾಡುತ್ತಾ ಪ್ರತಿಭೆಗೆ, ಯಾವುದೇ ಸಾಧನೆಗೆ ಬಡತನ ಅಡ್ಡಿ ಬರಲಾರದು. ಶ್ರದ್ಧೆ, ನಿರಂತರ ಪರಿಶ್ರಮದಿಂದ ಯಾವುದೇ ವ್ಯಕ್ತಿ ಸಾಧನೆ ಮಾಡಲಿಕ್ಕೆ ಸಾಧ್ಯ. ನಮ್ಮನ್ನು ಸಾಧಕರಾಗಿ ಗುರುತಿಸಿ ಗೌರವಿಸಿರುವುದು ಕೇವಲ ಒಂದು ಸಂಕೇತ ಮಾತ್ರ. ಮುಂದೆ ನೀವು ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂದು ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದ ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ವಿಶ್ವಗುರು ಭಾರತ ಪ್ರತಿಷ್ಠಾನದ ಸಮಾಜಮುಖೀ ಕೆಲಸ ನಿಜಕ್ಕೂ ಮೆಚ್ಚುವಂತದ್ದಾಗಿದೆ ಮಕ್ಕಳು ಸಾಧಕರ ಅನುಭವದ ನುಡಿಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಂಡಾಡಿದರು. ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೆ ಮಾಡುವ ಇವರ ಸೇವೆ ನಿಜವಾದ ಸಾರ್ಥಕ ಸೇವೆಎಂದುಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಾಲಿಗ್ರಾಮ ಗಣೇಶ್ ಶೆಣೈ ರವರು ಮಾತನಾಡುತ್ತಾ ಜೀವಮಾನ ಪರ್ಯಂತ ಅಂತರಾಳದ ಭಾವನೆಗಳಿಂದ ಕನ್ನಡದ ಭಾವನೆಗಳನ್ನು ಭಿತ್ತಿ ಬೆಳೆಸಿದಂತ ವ್ಯಕ್ತಿ ಬಿ . ವಾಮದೇವಪ್ಪ ನವರು. ಇವರ ಕನ್ನಡ ನುಡಿ ಸೇವೆ ನಿಜಕ್ಕೂ ಅತ್ಯಂತ ಶ್ಲಾಘನೀಯ. ಕನ್ನಡ ನುಡಿ ಸೇವೆಯ ಮೂಲಕ ದಾವಣಗೆರೆ ತಾಲೂಕು, ಜಿಲ್ಲೆ, ರಾಜ್ಯ, ದೇಶ -ವಿದೇಶಗಳಾದ್ಯಂತ ಕನ್ನಡ ಡಿಂಡಿಮವನ್ನು ಬಾರಿಸುತ್ತಿರುವುದು ಮೆಚ್ಚುಗೆಯ ವಿಷಯವಾಗಿದೆ ಎಂದು ನಮ್ಮ ಸಾಧಕರು ಪ್ರಶಸ್ತಿಗೆ ಭಾಜನರಾದ ಬಿ ವಾಮದೇವಪ್ಪ ನವರ ಕುರಿತು ಮಾತನಾಡಿದರು.

ಸಾಹಿತಿ ಪಾಪು ಗುರು, ಲೇಖಕ ಗಂಗಾಧರ ಬಿ.ಎಲ್ ನಿಟ್ಟೂರು, ಶಾರದಮ್ಮ ಶಿವನಪ್ಪ, ಎಚ್ ಕೆ ಮಂಜುನಾಥ್, ಶ್ರೀಮತಿ ರುದ್ರಾಕ್ಷಿ ಬಾಯಿ ಸಿಕೆ ಪುಟ್ಟ ನಾಯಕ್, ಬಸವರಾಜ್, ಮಲ್ಲಿಕಾರ್ಜುನಸ್ವಾಮಿ, ಸಿಜಿ ಜಗದೀಶ್ ಕೂಲಂಬಿ, ವಿಶ್ವಗುರು ಭಾರತ ಪ್ರತಿಷ್ಠಾನದ ಸಿಬ್ಬಂದಿವರ್ಗದವರು, ಪ್ರೇರಣಾ ಮಕ್ಕಳ ಆರೈಕೆ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆರಂಭದಲ್ಲಿ ವಿಶ್ವಗುರು ಭಾರತ ಪ್ರತಿಷ್ಠಾನದ ಕಾರ್ಯದರ್ಶಿ ಶಂಭುಲಿಂಗ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ರುದ್ರಾಕ್ಷಿ ಬಾಯಿ ಯಾಕೆ ಪುಟ್ಟ ನಾಯಕ್ ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕುಮಾರಿ ವತ್ಸಲಾ ಕಾರ್ಯಕ್ರಮವನ್ನು ನಿರೂಪಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

Published

on

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.

ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್‌ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.

ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.

ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending