ದಿನದ ಸುದ್ದಿ
ಜೀವನಶೈಲಿಯಲ್ಲಾದ ಬದಲಾವಣೆಯೇ ಹೃದಯ ಸಂಬಂಧಿ ಖಾಯಿಲೆಗಳಿಗೆ ಕಾರಣ : ಸಂಸದ ಡಾ. ಸಿ.ಎನ್. ಮಂಜುನಾಥ್

ಸುದ್ದಿದಿನಡೆಸ್ಕ್:ಜಗತ್ತಿನಾದ್ಯಂತ ಇಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತಿದೆ. ಜಾಗತಿಕವಾಗಿ ಹೃದಯದ ಆರೋಗ್ಯದ ಬಗ್ಗೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ 29 ಅನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನ ಜಗತ್ತಿನಾದ್ಯಂತ ಅತಿ ಹೆಚ್ಚಿನ ಪ್ರಮಾಣದ ಜನರ ಸಾವಿಗೆ ಕಾರಣವಾಗಿರುವ ಹೃದ್ರೋಗದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ವರ್ಷದ ಘೋಷವಾಕ್ಯ ಕ್ರಿಯೆಗಾಗಿ ಹೃದಯವನ್ನು ಬಳಸಿ ಎಂಬುದಾಗಿದೆ.
ದೇಶದಲ್ಲಿ ವರ್ಷಕ್ಕೆ ಸುಮಾರು 30 ಲಕ್ಷದಷ್ಟು ಜನರು ಹೃದಯ ಸಂಬAದಿ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ ಇದಕ್ಕೆ ಪ್ರಮುಖ ಕಾರಣ ಜೀವನ ಶೈಲಿಯಲ್ಲಾದ ಬದಲಾವಣೆ ಎಂದು ಹೃದ್ರೋಗತಜ್ಞ ಹಾಗು ಸಂಸದ ಡಾ: ಸಿ.ಎನ್ ಮಂಜುನಾಥ್ ಹೇಳಿದ್ದಾರೆ.
ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆ ಆವರಣದಲ್ಲಿ ನಡೆದ ವಿಶ್ವ ಹೃದಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ 1960 ರಲ್ಲಿ ಶೇಕಡ 4 ರಷ್ಟು ಇದ್ದ ಹೃದಯ ಸಂಬಂದಿ ಕಾಯಿಲೆಗಳು ಶೇಕಡ ಈಗ 10ರಷ್ಟು ಏರಿಕೆಯಾಗಿದೆ. ಇತ್ತೀಚೆಗೆ 50 ಕ್ಕಿಂತ ಕಡಿಮೆ ವಯಸಿನವರಲ್ಲಿ ಹೆಚ್ಚಾಗಿ ಈ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್. ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ, ನಗರದ ಹೃದ್ರೋಗ ತಜ್ಞ ಡಾ: ವಿಜಯ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿಶ್ವ ಹೃದಯ ದಿನದ ಅಂಗವಾಗಿ ಶಿವಮೊಗ್ಗದಲ್ಲಿಂದು ಸಹ್ಯಾದ್ರಿ ಸ್ನೇಹ ಸಂಘ, ಐಎಂಎ ಮತ್ತು ಮೆಟ್ರೋ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಹೃದಯ ತಪಾಸಣಾ ಶಿಬಿರ ಮತ್ತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಾ ಶಿವಶಂಕರ್ ಹೃದಯ ರೋಗ ತಜ್ಞರು ಮೆಟ್ರೋ ಆಸ್ಪತ್ರೆ, ಐಎಂಎ ಜಿಲ್ಲಾ ಶಾಖೆ ಅಧ್ಯಕ್ಷ ಡಾ ಶ್ರೀಧರ್, ಕಾರ್ಯದರ್ಶಿ ಡಾ ವಿನಯಾ ಶ್ರೀನಿವಾಸ್, ಮೆಟ್ರೋ ಆಸ್ಪತ್ರೆಯ ಆಡಳಿತಾಧಿಕಾರಿ ರೆಹಮತ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮುಖ್ಯಮಂತ್ರಿ ಪದಕ ; ಮುಖ್ಯ ಪೊಲೀಸ್ ಪೇದೆ ಕೊಟ್ರೇಶ್ ಅಯ್ಕೆ

ಸುದ್ದಿದಿನ,ಕೊಟ್ಟೂರು:ತಾಲೂಕಿನ ಬೋರನಹಳ್ಳಿ ಗ್ರಾಮ ಮುಖ್ಯಪೊಲೀಸ್ ಪೇದೆ ಕೊಟ್ರೇಶ್ ಚಿಮ್ಮನಹಳ್ಳಿ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲು 02.04.2025 ರಂದು ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೊಟ್ರೇಶ್ ಅವರು 2005 ರಿಂದ ಪೊಲೀಸ್ ಇಲಾಖೆಯಲ್ಲಿ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ವಿಭಾಗದಲ್ಲಿ ಅಪಾರ ಸೇವೆ ಸಲ್ಲಿಸಿ, ಮಾಡಿದ ಸಾಧನೆಗೆ ಸುಮಾರು 37 ನಗದು ಬಹುಮಾನ, 54 ಪ್ರಶಸ್ತಿ, 3 ಪ್ರಶಂಸೆ ಪತ್ರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಲಾಗಿದೆ.
ಪ್ರಸ್ತುತ ಇವರು ಕೂಡ್ಲಿಗಿಯ ಡಿವೈಎಸ್ಪಿ ಕಛೇರಿಯ ಅಪರಾಧ ವಿಭಾಗದಲ್ಲಿ ಮುಖ್ಯ ಪೊಲೀಸ್ ಪೇದೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮುಖ್ಯಮಂತ್ರಿ ಪದಕಕ್ಕೆ ಕೊಟ್ರೇಶ್ ಅವರು ಆಯ್ಕೆಯಾಗಿರುವುದು ಊರಿಗೆ ಮತ್ತು ಹೆಮ್ಮೆಯ ವಿಷಯವಾಗಿದೆ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಇವರಿಗೆ ಗ್ರಾಮಸ್ಥರು, ಸ್ನೇಹಿತರು ಶುಭ ಹಾರೈಸಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ವೃತ್ತಿಪರ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿಗೆ ಐಐಎಸ್ಸಿ, ಐಐಟಿ ಮತ್ತು ನೀಟ್ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅಂಡ್ ಮಶಿನ್ ಲರ್ನಿಂಗ್ ವೃತ್ತಿಪರ ಕೋರ್ಸ್‍ಗಳಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡದ 200 ಇಂಜಿನಿಯರಿಂಗ್ ಪದವೀಧರರಿಗೆ ಶಿಷ್ಯವೇತನ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ಮೊದಲನೇ ಮಹಡಿ, ಜಯವಿಭವನಿಲಯ, ರಾಂ & ಕೋ ಅಂಗಡಿ ಎದುರು, 4ನೇ ಮೇನ್, ಪಿ.ಜೆ ಬಡಾವಣೆ ದಾವಣಗೆರೆ ಇಲ್ಲಿ ಪಡೆದು ಏಪ್ರಿಲ್ 9 ರೊಳಗಾಗಿ ಸೂಕ್ತ ದಾಖಲೆಗಳೊಂದಿಗೆ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಚನ್ನಗಿರಿ ತಾಲ್ಲೂಕು ಪ.ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸಂಪರ್ಕಿಸಬೇಕೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜನಪದ ಕಲೆ ಗ್ರಾಮೀಣ ಜನರ ಜೀವನಾಡಿ : ಪ್ರಾಚಾರ್ಯೆ ಡಾ.ಶಶಿಕಲಾ.ಎಸ್

ಸುದ್ದಿದಿನ,ಭರಮಸಾಗರ:ಜನಪದ ಕಲೆ ನಮ್ಮ ನಾಡಿನ ಗ್ರಾಮೀಣ ಜನರ ಜೀವನಾಡಿಯಾಗಿದೆ. ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಸಂಸ್ಕೃತಿಯ ಬೇರುಗಳಿದ್ದಂತೆ. ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯೇ ಜಾನಪದ ಉತ್ಸವವೆಂದು ಪ್ರಾಚಾರ್ಯೆ ಡಾ.ಶಶಿಕಲಾ ಎಸ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ( 27 ಮಾರ್ಚ್) ನಡೆದ ‘ಜಾನಪದ ಉತ್ಸವ-2025’ ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರಿಂದ ಜನರಿಗೆ ವರ್ಗಾವಣೆ ಯಾಗುವ ಕಲೆಯೇ ಜಾನಪದ. ಇಂತಹ ಜಾನಪದ ಉತ್ಸವಗಳಿಂದ ಗ್ರಾಮೀಣ ಸಂಸ್ಕೃತಿಯನ್ನು ಉನ್ನತೀಕರಿಸಬಹುದು. ಇದನ್ನ ಬೆಳೆಸುವ ಸಂರಕ್ಷಿಸುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಪದ ಕಲಾವಿದರಾದ ಪರಮೇಶ್ವರಪ್ಪ ಕಟ್ಟಿಗೆ ಯವರು ಮಾತನಾಡಿ, ತತ್ವಪದಗಳು ಜಾನಪದ ಸಾಹಿತ್ಯದ ಅಂಗವಾಗಿದೆ. ತತ್ವಪದಗಳಿಂದ ಸಮಾಜದ ಸ್ವಾಸ್ಥ್ಯವನ್ನು ತಿದ್ದುವ ಹಸನುಗೊಳಿಸುವ ಕೆಲಸವನ್ನು ನಿರ್ವಹಿಸುತ್ತಿದೆ. ಇಂತಹ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂದರು.
ಇಂತಹ ಕಲೆಯನ್ನು ನಂಬಿಕೊಂಡವರ ಬದುಕು ಕಷ್ಟವಾಗುತ್ತಿದೆ. ಇಂತಹ ಉತ್ಸವಗಳಿಂದ ನಮ್ಮ ಕಲೆಗೆ ಪ್ರೋತ್ಸಾಹ ನೀಡಿದರೆ ಜಾನಪದ ಕಲೆಯು ಉಳಿಯುತ್ತದೆ ಎಂದು ಅನೇಕ ತತ್ವಪದಗಳನ್ನು ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವ ಮೂಲಕ ಅದರ ಮಹತ್ಚ ಸಾರಿದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಸತ್ಯನಾರಾಯಣ ಹಾಗೂ ಸಮಿತಿಯ ಸದಸ್ಯರಾದ ಚಂದ್ರಕುಮಾರ್ ಎಸ್. ಡಾ.ಗಿರೀಶ್, ಮಸೂದ್ ಅಹಮ್ಮದ್ ಕೆ.ಎಚ್. ಮಮತ, ರಿಯಾಜ್ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ’; ವಿದ್ಯಾರ್ಥಿಗಳ ಕಲರವ
-
ದಿನದ ಸುದ್ದಿ4 days ago
2 ಸಾವಿರ ಹೊಸ ಬಸ್ ಖರೀದಿಗೆ ಅನುದಾನ ಬಿಡುಗಡೆ
-
ದಿನದ ಸುದ್ದಿ5 days ago
ದಾವಣಗೆರೆ | ಏಪ್ರಿಲ್ 22ರಿಂದ ಉಪಲೋಕಾಯುಕ್ತರ ಪ್ರವಾಸ : ಸಾರ್ವಜನಿಕರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ5 days ago
ಜನಪದ ಕಲೆ ಸಾಹಿತ್ಯದ ಬೇರು : ಪ್ರಾಂಶುಪಾಲ ಡಾ. ಧನಂಜಯ ಬಿ.ಜಿ
-
ದಿನದ ಸುದ್ದಿ5 days ago
ಏಪ್ರಿಲ್ 2 ರಂದು ದಾವಣಗೆರೆ ವಿವಿ 12ನೇ ಘಟಿಕೋತ್ಸವ
-
ದಿನದ ಸುದ್ದಿ5 days ago
ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ಜಗಳೂರು | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ : ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಭವಿಷ್ಯಕ್ಕಾಗಿ ಹೂಡಿಕೆಯ ಜ್ಞಾನ ಅವಶ್ಯಕ