ದಿನದ ಸುದ್ದಿ
ವಿಶ್ವ ಪಶುವೈದ್ಯ ದಿನ | ಪಶುವೈದ್ಯ ವೃತ್ತಿಯ ಸುತ್ತ ಒಂದು ಪಕ್ಷಿ ನೋಟ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/04/world-veterinary-day_suddidina.jpg&description=ವಿಶ್ವ ಪಶುವೈದ್ಯ ದಿನ | ಪಶುವೈದ್ಯ ವೃತ್ತಿಯ ಸುತ್ತ ಒಂದು ಪಕ್ಷಿ ನೋಟ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/04/world-veterinary-day_suddidina.jpg&description=ವಿಶ್ವ ಪಶುವೈದ್ಯ ದಿನ | ಪಶುವೈದ್ಯ ವೃತ್ತಿಯ ಸುತ್ತ ಒಂದು ಪಕ್ಷಿ ನೋಟ', 'pinterestShare', 'width=750,height=350'); return false;" title="Pin This Post">
- ಡಾ. ಕಮಲೇಶ್ ಕುಮಾರ್ ಕೆ ಎಸ್,ಪಶುವೈದ್ಯಾಧಿಕಾರಿಗಳು,ಪಶುಚಿಕಿತ್ಸಾಲಯ, ಮತ್ತೂರು,ಶಿವಮೊಗ್ಗ
ಎಲ್ಲಾ ವರ್ಷದ ಏಪ್ರಿಲ್ ಕಡೆಯ ಶನಿವಾರ ವಿಶ್ವ ಪಶುವೈದ್ಯ ದಿನಾಚರಣೆ ಆಚರಿಸುವ ವಿಶ್ವದ ಪಶುವೈದ್ಯರು ಇಡೀ ವಿಶ್ವವೇ ಕರೋನದಿಂದ ತತ್ತರಿಸಿ ಹೋಗಿರುವ ಈ ಸಂದರ್ಭದಲ್ಲಿ ಈ ಬಾರಿ ಒಂದು ಉತ್ತಮ ಗುರಿಯಾದ “ಪರಿಸರ ಸಂರಕ್ಷಣೆಯಿಂದ ಪ್ರಾಣಿ ಹಾಗು ಮನುಷ್ಯರ ಆರೋಗ್ಯ ಸುಧಾರಣೆ” (“Environmental protection for improving animal and human health”) ಎಂಬ ವಿಷಯವನ್ನು ಉತ್ತೇಜಿಸುತ್ತಿದ್ದಾರೆ. ಪರಿಸರ ಸಂರಕ್ಷಣೆಯಿಂದ ಆಗುವ ಮಾಲಿನ್ಯ ತಡೆ, ಕಡಿಮೆ ರೋಗ ಹರಡುವಿಕೆ ಹಾಗೂ ಹೆಚ್ಚುವ ರೋಗ ನಿರೋಧಕ ಶಕ್ತಿಯಿಂದ ಖಂಡಿತವಾಗಿಯೂ ಎಲ್ಲಾ ಜೀವಿಗಳ ಆರೋಗ್ಯ ಸುಧಾರಣೆ ಸಾಧ್ಯವಾಗುತ್ತದೆ.
ರೈತರ ಏಳಿಗೆಗಾಗಿ ಕರೋನಾದಲ್ಲೂ ಪಶುವೈದ್ಯರ ಹೋರಾಟ
ಕರೋನದಿಂದ ಆಗಿರುವ ಇಂಥಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಎಲ್ಲ ಉದ್ಯಮಗಳು ಸ್ಥಗಿತವಾಗಿ ದೇಶದ ಆರ್ಥಿಕತೆ ಕುಸಿಯುತ್ತಿದ್ದರು ಸಹ ಹೈನುಗಾರಿಕೆ ಬಡ ರೈತರ ಕೈ ಹಿಡಿದಿದೆ, ನೆಮ್ಮದಿಯಾಗಿ ಜೀವನ ನಡೆಸಿ ನಿಟ್ಟುಸಿರು ಬಿಡಲು ಸಹಾಯ ಹಸ್ತ ನೀಡಿದೆ, ಇದಕ್ಕೆ ಪಶುವೈದ್ಯರು ಎಗ್ಗಿಲ್ಲದೆ ನೀಡುತ್ತಿರುವ ಅಗತ್ಯ ಸೇವೆಯು ಬೆನ್ನೆಲುಬಾಗಿದೆ.
ಪಶುವೈದ್ಯ ವೃತ್ತಿಯ ಇತಿಹಾಸ
ಇತಿಹಾಸದ ಪ್ರಕಾರ ಮೊಟ್ಟಮೊದಲು ಪಶು ವೈದ್ಯಕೀಯ ವಿಜ್ಞಾನದಲ್ಲಿ ಪಾಂಡಿತ್ಯವನ್ನು ಪಡೆದ ವ್ಯಕ್ತಿಯು ಭಾರತೀಯ, ಅವನು ಹಯಘೋಷ ಎಂಬ ಋಷಿಯ ಮಗನಾದ ಶಾಲಿಹೋತ್ರ (2350 BCE) ಎಂಬ ಉಲ್ಲೇಖವಿದೆ.
ಫ್ರಾನ್ಸನ ಜಾನುವಾರುಗಳಲ್ಲಿ ಏಕಾಏಕಿ ಪಿಡುಗು ರೋಗ ಕಾಣಿಸಿಕೊಂಡಾಗ, ಅದಕ್ಕೆ ಪರಿಹಾರ ಕಂಡುಹಿಡಿಯಲೆಂದೇ ಕ್ಲಡ್ ಬೊರ್ಗಲಟ್ (Claude Bourgelat) ಎಂಬಾತನು ಮೊಟ್ಟಮೊದಲ ಪಶು ವೈದ್ಯಕೀಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿದರು ತದ ನಂತರ ಇನ್ನುಳಿದ ದೇಶಗಳಲ್ಲಿ ಪ್ರಾರಂಭವಾದವು. ಹೀಗೆ ಪಶುವೈದ್ಯ ವಿಜ್ಞಾನವು ಬೆಳೆಯತೊಡಗಿತು.
ಪಶುವೈದ್ಯರು ಹೀಗೆ ಉತ್ತಮರು
ಜಾನುವಾರುಗಳೇ ದೇವರು ಎಂದು ಕಲ್ಪಿಸಿಕೊಂಡಿರುವ ನಮ್ಮ ದೇಶದಲ್ಲಿ, ಕೇವಲ ಪೂಜೆಯ ವಸ್ತುವೆಂದು ನೋಡದೆ ಜಾನುವಾರುಗಳಿಂದ ಆರ್ಥಿಕವಾಗಿ ಸದೃಢತೆ ಹೊಂದಿದ ಸಾಕಷ್ಟು ರೈತರು ನಮ್ಮ ಸುತ್ತಲೂ ಇರುವುದನ್ನು ನಾವೆಲ್ಲರೂ ಗಮನಿಸಿಯೇ ಇರುತೇವೆ. ಅದೆಷ್ಟೋ ಸಣ್ಣ ಹಾಗೂ ಅತೀ ಸಣ್ಣ ರೈತರು ತಮ್ಮಲ್ಲಿರುವ ಬೆರಳೆಣಿಕೆಯಷ್ಟು ಕೋಳಿ, ಕುರಿ, ಮೇಕೆ, ಹಸುಗಳನ್ನು ಕಟ್ಟಿಕೊಂಡು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತಿರುವುದಕ್ಕೆ ಲೆಕ್ಕವಿಲ್ಲದಷ್ಟು ಉದಾಹರಣೆ ನಮ್ಮ ಬಳಿ ಇವೆ. ಪಶುವೈದ್ಯರು ಜಾನುವಾರು ಸಾಗಾಣಿಕೆ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರ ಏಳಿಗೆಗೆ ನೀಡುತ್ತಿರುವ ಸಹಕಾರ ಬಹಳಷ್ಟು.
ಪಶುವೈದ್ಯರಾಗಲು ಇರಲೇಬೇಕಾದ ಗುಣಗಳು
ನಟ ವಿಲ್ ರೋಜರ್ಸ್ಸ ಎಂಬಾತನ “Best doctor in the world is a veterinarian. He can’t ask his patients what’s the matter. He’s just got to know.” ಹೇಳಿಕೆಯಂತೆ ನಮಗೆಲ್ಲ ತಿಳಿದಿರುವ ಹಾಗೆ ಸಾಮಾನ್ಯವಾಗಿ ಪ್ರಾಣಿಗಳು ರೋಗದ ಲಕ್ಷಣಗಳನ್ನು ತೋರಿಸುವುದಿಲ್ಲ, ಪ್ರಾಣಿಯ ವಾರಸುದಾರರ ಹೇಳಿಕೆಯ ಮೇಲೆ ಅವಲಂಬಿತವಾಗಿಯೋ ಇಲ್ಲವಾದಲ್ಲಿ ತಾವಾಗಿಯೇ ಪರೀಕ್ಷಿಸಿ ಅದನ್ನು ಕಂಡು ಹಿಡಿಯ ಬೇಕಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಳೆಯ ಚಿಕಿತ್ಸೆಯ ಅನುಭವ, ಜಾಣ್ಮೆ, ತಾಳ್ಮೆ, ಉತ್ತಮ ದೃಷ್ಟಿ, ಸ್ಪರ್ಶ ಸಂವೇದನೆ ಹಾಗು ಪ್ರಾಣಿಗಳ ಮೇಲಿನ ಪ್ರೀತಿ ಸಾಕಷ್ಟು ಇರಬೇಕಾಗುತ್ತದೆ.
ಪಶುವೈದ್ಯರು ಕೇವಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದಲ್ಲದೆ ಸಾಕಷ್ಟು ಬಾರಿ ಜಾನುವಾರು ಮಾಲೀಕರ ಮನೆಯ ಬಾಗಿಲಿಗೆ ಹೋಗಿ ಚಿಕಿತ್ಸೆಯನ್ನು ನೀಡಬೇಕಾಗಿರುತ್ತದೆ ಆದ್ದರಿಂದ
ಕೇವಲ ಮಾನಸಿಕರೀತಿಯಿಂದ ಅಲ್ಲದೆ ದೈಹಿಕವಾಗಿಯೂ ಸದೃಢವಾಗಿರಬೇಕಾಗಿರುತ್ತದೆ.
ಪಶುವೈದ್ಯರ ಶ್ರೇಷ್ಠತೆ ಹಾಗು ವೈವಿಧ್ಯತೆ
ವೈದ್ಯರೆಂದರೆ ಅವರ ಜೀವನಾದ್ಯಂತ ಕಲಿಕೆಯು ಅವರ ಜೊತೆಗೂಡಿರುತ್ತದೆ, ಅದೇ ರೀತಿ ಮನುಷ್ಯನನ್ನು ಬಿಟ್ಟು ಬೇರೆಲ್ಲಾ ಜೀವಿಗಳ ಎಲ್ಲ ರೀತಿಯ ರೋಗಗಳಿಗೂ ಚಿಕಿತ್ಸೆ ನೀಡಬಲ್ಲ ಪಶುವೈದ್ಯರು ದಿನನಿತ್ಯವೂ ಸಾಕಷ್ಟು ಕಲಿಯುತ್ತಿರಬೇಕಾಗಿರುತ್ತದೆ. ಹೇಳಬೇಕೆಂದರೆ ಸಾಕಷ್ಟು ಪಶುವೈದ್ಯರು ಸಾಮಾನ್ಯ ಜ್ವರದ ಚಿಕಿತ್ಸೆಯಿಂದ ಹಿಡಿದು ಎಂತಹ ಅರವಳಿಕೆಯಿಂದ ಕೂಡಿದ ಶಾಸ್ತ್ರಚಿಕಿತ್ಸೆಯನ್ನು ಕೂಡ ಮಾಡಬಲ್ಲರು ಹಾಗೂ ತಮ್ಮ ಕಾರ್ಯ ವ್ಯಾಪ್ತಿಯ ಸ್ಥಳದಲ್ಲಿ ಕಂಡು ಬರುವ ರೋಗಗಳನ್ನು ಚಾಣಾಕ್ಷ ರೀತಿಯಿಂದ ಕಂಡು ಹಿಡಿದು ಅದಕ್ಕೆ ಸೂಕ್ತ ರೀತಿಯ ಚಿಕಿತ್ಸೆಯನ್ನು ನೀಡಬಲ್ಲರು.
ವಿಶ್ವದಲ್ಲಿ ಪಶು ವೈದ್ಯಕೀಯ ವಿಜ್ಞಾನವು ಸಾಕಷ್ಟು ಮುಂದುವರೆದಿದೆ ಆದರೂ ಭಾರತವು ಅದರಲ್ಲೇನು ಮಿಗಿಲಿಲ್ಲ. ಆದರೆ ವಾಸ್ತವ ಸ್ಥಿತಿ ಗಮನಿಸಿದರೆ ಇಂದಿಗೂ ಭಾರತದಲ್ಲಿ ಸುಸಜ್ಜಿತವಾದ ಸಲಕರಣೆಗಳನ್ನು ಹೊಂದಿರುವ ಪಶು ಆಸ್ಪತ್ರೆ ಬೆರಳೆಣಿಕೆಯಷ್ಟು ಮಾತ್ರ. ಪ್ರಾಥಮಿಕ ಚಿಕಿತ್ಸೆಯಿಂದ ಹಿಡಿದು ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಯನ್ನು ಕೂಡ ಒಬ್ಬ ಪಶುವೈದ್ಯನೇ ನೀಡಬೇಕಾಗಿರುತ್ತದೆ. ಇಂತಹ ಸಂದರ್ಭದಲ್ಲೂ ಕೂಡ ನಮ್ಮ ಪಶುವೈದ್ಯರು ದೃತಿಗೆಡದೆ ಸಾಕಷ್ಟು ಮೇಲುಗೈ ಸಾಧಿಸಿದ್ದಾರೆ.
ಜನರಿಗೆ ಸೇವೆಯನ್ನು ಒದಗಿಸುವ ಅಧಿಕಾರಿಗಳಲ್ಲಿ ಸಾಕಷ್ಟು ಹತ್ತಿರವಾಗಿರುವ ಪಶುವೈದ್ಯರು ರೈತರ ಏಳಿಗೆಗೆ ಸಾಕಷ್ಟು ಮಾಹಿತಿಯನ್ನು ನೀಡಬಲ್ಲರು ಹಾಗೂ ಅವರ ದಿನನಿತ್ಯ ಜೀವನದಲ್ಲಿ ವೈಜ್ಞಾನಿಕ ಜೀವನವನ್ನು ಅಳವಡಿಸಿಕೊಳ್ಳಲು ಉಪಕಾರಿಯಾಗಿದ್ದಾರೆ. ಪಶುವೈದ್ಯರು ಕೇವಲ ವೈದ್ಯಕೀಯ ಸೇವೆ ಅಲ್ಲದೆ ಇನ್ನಿತರ ಸೇವೆಯನ್ನು ಒಡಗಿಸುತ್ತಿದ್ದಾರೆ.
- ಪ್ರಾಣಿಗಳಿಂದ ಮಾನವನಿಗೆ ಬರುವ ರೋಗ ತಡೆಗಟ್ಟುವಿಕೆ ಹಾಗೂ ಅದರ ಕುರಿತು ಸಂಶೋಧನೆ (ಉದಾ: ರೇಬಿಸ್, ಹಕ್ಕಿ ಜ್ವರ, ಬ್ರುಸೆಲೋಸಿಸ್)
- ಎಲ್ಲಾ ತರಹದ ಪ್ರಾಣಿ, ಕಾಡು ಪ್ರಾಣಿಗಳ ರಕ್ಷಣೆ, ಚಿಕಿತ್ಸೆ ಹಾಗೂ ರೋಗ ತಡೆಗಟ್ಟುವಿಕೆ.
- ಸಸಾರ ಜನಕ ಆಹಾರ ಪದಾರ್ಥಗಳಾದ ಹಾಲು, ಮಾಂಸ ಹಾಗೂ ಮೊಟ್ಟೆಗಳ (ಪ್ರೊಟೀನ್) ಉತ್ಪಾದನೆಯಿಂದ ಪೌಷ್ಟಿಕ ಆಹಾರ ಉತ್ಪಾದನೆ.
- ಮನುಷ್ಯರ ಔಷಧ ಉತ್ಪಾದನೆ.
- ಜಾನುವಾರುಗಳ ಔಷಧ ಉತ್ಪಾದನೆ.
- ಯಾವುದೇ ರೀತಿಯ ಹೊಸ ಸಂಶೋಧನೆಯು ಮೊದಲು ಪ್ರಾಣಿಗಳೇ ಮೇಲೆ ಪ್ರಯೋಗಿಸಿ ಉತ್ತಮ ಫಲಿತಾಂಶ ಇದ್ದಲ್ಲಿ ನಂತರ ಮಾನವರ ಉಪಯೋಗಕ್ಕೆ ಬಳಕೆ. (ಉದಾ: ಬಾಡಿಗೆ ತಾಯಿಯಿಂದ ಮಗುವಿನ ಜನನ)
- ಸತ್ತ ಜಾನುವಾರುಗಳಿಂದ ವ್ಯವಸಾಯಕ್ಕಾಗಿ ಉತ್ತಮವಾದ ರಾಸಾಯನಿಕ ಉತ್ಪಾದನೆ.
- ಗೊಬ್ಬರ ಉತ್ಪಾದನೆ.
- ಗೋಮೂತ್ರದ ಔಷಧೀಯ ಉಪಯೋಗದ ಕುರಿತು ಸಂಶೋಧನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ
ಸುದ್ದಿದಿನಡೆಸ್ಕ್:ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಇಂದು ಅವರು ಮಾತನಾಡಿದರು.
ಊಹಾ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು. ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ ಹೆಂಡತಿ ಜಗಳವನ್ನು ಇಡೀ ದಿನ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ? ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ. ಅದು ಮುಂದುವರೆಯಲಿ ಎನ್ನುವುದು ಪಟ್ಟಭದ್ರರ ಹಿತಾಸಕ್ತಿಯಾಗಿದೆ ಎಂದರು.
ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು.
ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು.
ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರ್ಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ.
ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ.
ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸವಲತ್ತನ್ನು ಜಾರಿ ಮಾಡಿದ್ದೇ ನಾನು. ಇದರಲ್ಲಿನ ನಿಯಮಗಳಲ್ಲಿ ತೊಂದರೆ ಇದ್ದರೆ, ಆ ಬಗ್ಗೆ ಚರ್ಚಿಸಿ ನಿವಾರಣೆಗೊಳಿಸಲಾಗುವುದು ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದ ವಿಶ್ಲೇಷಣೆ
ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗ (Commerce)
ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂತರಂಗ6 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ4 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ5 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ5 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
-
ದಿನದ ಸುದ್ದಿ3 days agoದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
-
ದಿನದ ಸುದ್ದಿ1 day agoಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ಪ್ರಶ್ನಿಸಿಕೊಳ್ಳಬೇಕು : ಸಿಎಂ ಸಿದ್ದರಾಮಯ್ಯ

