Connect with us

ಲೈಫ್ ಸ್ಟೈಲ್

ಮೂಕಜೀವಿಗಳ ಪಾಡು ಕೇಳೋರು ಯಾರು..?

Published

on

ಪ್ಲಾಸ್ಟಿಕ್ ಘನತ್ಯಾಜ್ಯ ಮತ್ತಿತರ ಅಪಾಯಕಾರಿ ತ್ಯಾಜ್ಯಗಳ ತಿಪ್ಪೆಯಲ್ಲಿರುವ ಈ ಮೂಕದನಗಳು ನಾನು ವಾಸವಿರುವ ಬೆಂಗಳೂರು ವಿವಿಯ ಜ್ಞಾನಭಾರತಿ ಪಕ್ಕದ ಜಗಜ್ಯೋತಿನಗರ ಬಡಾವಣೆ ಸೇರಿದಂತೆ ಮರಿಯಪ್ಪನಪಾಳ್ಯ – ಭುವನೇಶ್ವರಿ ನಗರ – ನಾಗದೇವನಹಳ್ಳಿ ಬಡಾವಣೆಗಳಲ್ಲಿ ಬೀಡಾಡಿಗಳಾಗಿವೆ. ಕೆಂಗೇರಿ ಔಟರ್ ರಿಂಗ್ ರೋಡಿನಲ್ಲಿ ಮತ್ತು ರೈಲ್ವೆ ಅಳಿಗಳಲ್ಲಿ ಅಪಘಾತಕ್ಕೀಡಾಗಿ ಅನೇಕ ದನಗಳು ಅಸುನೀಗಿವೆ. ರಸ್ತೆಗಳಲ್ಲಿ ಮತ್ತು ಪಾದಚಾರಿ ರಸ್ತೆಗಳಲ್ಲಿ ಅಡ್ಡ ನುಗ್ಗುವ ಇವು ಪ್ರಯಾಣಿಕರಿಗೆ ತೊಂದರೆದಾಯಕವಾಗಿ ಪರಿಣಮಿಸುತ್ತಲೂ ಇವೆ.

ಕಳೆದ ಹತ್ತು ವರ್ಷಗಳಲ್ಲಿ ಕಡಿಮೆ ಎಂದರೂ ಐದಾರು ದನಗಳು ಅಪಘಾತಕ್ಕೀಡಾಗಿರುವುದನ್ನು ನಾನು ನೋಡಿದ್ದೇನೆ. ಕೆಲವು ಕಾಲು ಮುರಿದು, ಕೊಂಬು ಮುರಿದು, ಮೈಮೇಲೆ ಗಾಯಗಳಾಗಿ ನರಳಿ ಸತ್ತಿದ್ದರೆ ಮತ್ತೆ ಕೆಲವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸೇವಿಸಿ ಸತ್ತುಹೋಗಿವೆ. ಈ ದನಗಳ ಮಾಲೀಕರು ಯಾರೆಂಬುದು ನನಗೆ ಈವರೆಗೆ ಯಾರಿಂದಲೂ ತಿಳಿದುಕೊಳ್ಳಲಾಗಿಲ್ಲ. ಯಾವುದೇ ದನಕ್ಕೆ ಹಗ್ಗ ಮೂಗದಾರ ಕೊರಳದಾರ ಮೊಕಾಡ ಇರುವುದಿಲ್ಲ.

ಇಂತಹ ದನಗಳಲ್ಲಿ ನಾನು ಗುರುತಿಸಿದ ಕೆಲವು ಹಸುಗಳು ಕರುಗಳು ಹೋರಿಗಳು ಒಂದೊಂದೇ ಕಾಣೆಯಾಗುತ್ತಿರುತ್ತವೆ. ಯಾವುದೋ ಜಾನುವಾರು ಚೋರರಿಂದ ಇವು ಕಳುವಾಗುತ್ತಿರಬಹುದು ಅನ್ನಿಸುತ್ತಿದೆ. ಈ ದನಗಳು ಮೇವು ನೀರಿಗಾಗಿ ಅಲೆದಾಡುವಾಗ ಕೆಲವೊಮ್ಮೆ ಅಂಗಡಿಗಳ ವಸ್ತುಗಳಿಗೆ ಬಾಯಾಕುತ್ತವೆ. ಮನೆಗಳ ಮುಂದಿರುವ ಮರಗಿಡಗಳಿಗೆ ಬಾಯಾಕುತ್ತವೆ. ಈ ಮೂಕದನಗಳ ಮೇಲೆ ಕರುಣೆ ಇಲ್ಲದ ಜನ ತುಂಡುಕೋಲು ಪ್ಲಾಸ್ಟಿಕ್ ಪೈಪು ಕಬ್ಬಿಣದ ಕಂಬಿ ಮುಂತಾದ ವಸ್ತುಗಳಿಂದ ನಿರ್ದಯವಾಗಿ ಬಾರಿಸಿ ಓಡಿಸುತ್ತಾರೆ. ಆಸಿಡ್ ಎರಚಿರುವ ಉದಾಹರಣೆಗಳೂ ಇವೆ.

ಈಗ ನಾನು ಹೇಳಹೊರಟಿರುವ ಸಂಗತಿ ಏನೆಂದರೆ, ಕಳೆದ ಮಳೆಗಾಲದಲ್ಲಿ ಈ ಭಾಗದಲ್ಲಿ ಸಮೃದ್ಧಿಯಾಗಿ ಮಳೆಬಾರದ ಕಾರಣದಿಂದ ಈಗ ಬೇಸಿಗೆಯ ರಣ ಬಿಸಿಲಿನ ತಾಪ ಮತ್ತು ನೀರಿನ ತತ್ವಾರ ಭಯಾನಕವಾಗಿದೆ. ವಾರಕ್ಕೆರಡು ಸಲವೋ ಅಥವಾ ಮೂರು ಸಲವೋ ನೀರು ಸರಬರಾಜು ಮಂಡಲಿಯವರು ವಿತರಿಸುವ ನೀರು ಗೃಹ ಬಳಕೆಗೂ ಸಾಲದಾಗಿ ಈ ಬಡಾವಣೆಗಳ ಜನರಿಗೆ ಕುಡಿಯುವ ನೀರಿಗೆ ಭೀಕರ ಸಮಸ್ಯೆ ಎದುರಾಗಿದೆ. ಮಾತು ಬಲ್ಲ ಮನುಷ್ಯರಾದ ನಮ್ಮ ಪರಿಸ್ಥಿತಿಯೇ ಹೀಗಿರುವಾಗ ಮೂಕಜೀವಿಗಳಾದ ಈ ಬೀಡಾಡಿ ದನಗಳು, ಬೀದಿ ನಾಯಿಗಳು, ಪಕ್ಷಿ ಸಂಕುಲ, ಅಳಿಲು ಹಾವು ಹಲ್ಲಿ ಹೋತಿ ಕೋತಿ ಕಪ್ಪೆ ಹುಳುಉಪ್ಪಟೆ ಮುಂತಾದ ಸಣ್ಣಪುಟ್ಟ ಜೀವಿಗಳ ಪಾಡೇನು? ಅವುಗಳಿಗೆ ಕುಡಿಯುವ ನೀರು ಮತ್ತು ಅಹಾರ ಎಲ್ಲಿ ದೊರೆಯುತ್ತದೆ? ಪ್ಲಾಸ್ಟಿಕ್ ತ್ಯಾಜ್ಯದ ತಿಪ್ಪೆಯನ್ನು ಆಹಾರಕ್ಕಾಗಿ ಆಶ್ರಯಿಸಿರುವ ಈ ಮೂಕಜೀವಿಗಳ ಪಾಡು ಘನಘೋರ ನರಕವಾಗಿ ಮಾರ್ಪಟ್ಟಿದೆ.

ವಿಸರ್ಜಿತ ಕೊಳೆತ ತರಕಾರಿ, ಕಸ, ಪ್ಲಾಸ್ಟಿಕ್, ಕೊಳಕು ಪೇಪರ್ ತಿಂದು ವಿಚಿತ್ರ ಕಾಯಿಲೆಗಳಿಗೆ ಗುರಿಯಾಗಿ ಬಳಲುವುದು ಒಂದು ಕಡೆಯಾದರೆ, ಈ ದನಗಳಿಗೆ ಕುಡಿಯಲು ನೀರು ಸಿಗದೆ ಮೂಕವಾಗಿ ಗೋಳಿಡುತ್ತಿರುವ ಕರುಣಾಜನಕ ಸ್ಥಿತಿ ಮತ್ತೊಂದು ಕಡೆಗೆ ಕಾಣಿಸುತ್ತಾ ಕರುಳು ಹಿಂಡಿದಂತಾಗುತ್ತಿದೆ. ಇಲ್ಲಿನ ನಿವಾಸಿಗಳು ಕಸ ವಿಲೇವಾರಿಯ ಗಾಡಿಯವರಿಗೆ ತಮ್ಮ ಮನೆಗಳ ತ್ಯಾಜ್ಯಗಳನ್ನು ನೀಡುತ್ತಿರುವುದರಿಂದ ಈ ಜೀವಿಗಳಿಗೆ ತ್ಯಾಜ್ಯಾಹಾರಗಳೂ ಸಿಗದಂತಾಗಿದೆ. ಇಂತಹ ಮೂಕಜೀವಿಗಳ ಬಗ್ಗೆ ದಯಾದರ್ಶ ಕಾರುಣ್ಯವುಳ್ಳ ಜನ ತಮ್ಮ ಮನೆಯ ಮತ್ತು ನೆರೆಹೊರೆಯ ಮನೆಗಳ ಉಳಿಕೆ ಆಹಾರ ತ್ಯಾಜ್ಯ ಮತ್ತು ನೀರನ್ನು ಒದಗಿಸಿದರೆ ಇಂತಹ ಗೊಟ್ಟು ಕಾಲದಲ್ಲಿ ಈ ಜೀವಿಗಳನ್ನು ಕಾಪಾಡಿದ ಸಾರ್ಥಕತೆಯಾದರೂ ಸಿಕ್ಕೀತು.

ನಾನು ಮತ್ತು ನನ್ನ ಕುಟುಂಬದವರು ತರಕಾರಿ ತ್ಯಾಜ್ಯ, ಹಣ್ಣುಗಳ ತ್ಯಾಜ್ಯ, ಉಳಿದ ಆಹಾರ ಮುಂತಾದ ಪದಾರ್ಥಗಳನ್ನು ಒಂದು ಡಬ್ಬದಲ್ಲಿ ಶೇಖರಿಸಿ ನಮ್ಮ ಮನೆ ಮುಂದಕ್ಕೆ ಬರುವ ಬೀಡಾಡಿ ದನಗಳಿಗೂ ಬೀದಿ ನಾಯಿಗಳಿಗೂ ಒದಗಿಸುತ್ತಿದ್ದೇವೆ. ನಾನು 1992 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ಜ್ಞಾನಭಾರತಿಯ ವಿಶಾಲ ಕ್ಯಾಂಪಸ್ ದಟ್ಟವಾದ ಹಸಿರು ಮರಗಳಿಂದ ಕಂಗೊಳಿಸುತ್ತಿತ್ತು. ನಂತರದ ಕಾಲದಲ್ಲಿ Institute for Socio Economic Change ( ISEC ), National Law School of India University (NLSOIU), National Academic Accreditation Council (NAACK), ಇಂದಿರಾಗಾಂಧಿ ಕಲಾಗ್ರಾಮ, ರಾಷ್ಟ್ರೀಯ ನಾಟಕ ಶಾಲೆ- NSD (National School of Drama), ಕುವೆಂಪು ಭಾಷಾಭಿವೃದ್ಧಿ ಪ್ರಾಧಿಕಾರ ಇನ್ನೂ ಮುಂತಾದ ಇಲಾಖೆಗಳ ಕಛೇರಿಗಳು ಜ್ಞಾನಭಾರತಿಯ ಕ್ಯಾಂಪಸ್ಸಿನೊಳಕ್ಕೆ ಪ್ರವೇಶಿಸಿದವು. ಅಪಾರ ಕಾಡು ನಾಶವಾಗಿ ಕಛೇರಿಗಳ ಭವ್ಯ ಕಾಂಕ್ರೀಟು ಕಟ್ಟಡಗಳು ಎದ್ದು ನಿಂತವು, ಇದರ ಜೊತೆಗೆ ಭೂಗಳ್ಳರ ಒತ್ತುವರಿಯಿಂದ ಹಾಗೂ ಮರಗಳ್ಳರಿಂದ ಜ್ಞಾನಭಾರತಿಯ ಆವರಣದ ಅಪಾರ ಪ್ರಮಾಣದ ಕಾಡು ನಾಶವಾಗಿ ಹೋಯಿತು. ಅಮೂಲ್ಯ ಸಸ್ಯ ಪ್ರಭೇದಗಳು ನಾಶವಾಗಿಹೋದವು.

ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿ ಇಲ್ಲಿನ ವೃಷಭಾವತಿ ನದಿಯ ನೀರು ಇವತ್ತಿನಂತೆ ತೀರಾ ಕೆಟ್ಟಿರಲಿಲ್ಲ. ಜ್ಞಾನಭಾರತಿ ಕಾಡಿನಲ್ಲಿದ್ದ ಅಳಿಲು ಆಮೆ ಗುಬ್ಬಿ ಗೊರವಂಕ ನರಿ ಹಾವು ಹಲ್ಲಿ ಹೋತಿ ಕೋತಿ ಮುಂತಾದ ಜೀವಿಗಳಲ್ಲದೆ ನೆರೆಯ ಹಳ್ಳಿಗಳ ರೈತಾಪಿಗಳ ದನಕರು ಕುರಿಮೇಕೆ ಮುಂತಾದ ಮೂಕಜೀವಿಗಳಿಗೆ ಇಲ್ಲಿ ನೀರಿನ ಒಡ್ಡುಗಳಿದ್ದವು, ಸಣ್ಣ ಸಣ್ಣ ಕಟ್ಟೆ ಕುಂಟೆಗಳಿದ್ದವು. ಆಗಿನ ಕಾಲದಲ್ಲಿ ಜ್ಞಾನಭಾರತಿಯ ಆವರಣದ ಕಾಡಿನಲ್ಲಿ ಕಾಣಿಸದಿದ್ದ ನವಿಲುಗಳ ಒಂದು ಗುಂಪು ಈಗ್ಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಬನ್ನೇರುಘಟ್ಟ ಕಾಡಿನಿಂದ ಬಂದು ವಂಶಾಭೀವೃದ್ದಿ ಮಾಡಿಕೊಂಡು ಮೂವತ್ತಕ್ಕೂ ಹೆಚ್ಚು ನವಿಲುಗಳು ಇಲ್ಲಿಯೇ ನೆಲೆಸಿವೆ. ನಾನು ಬಾಡಿಗೆ ಹಿಡಿದು ಕಳೆದ ಹನ್ನೊಂದು ವರ್ಷಗಳಿಂದ ವಾಸವಿರುವ #388, 1 ನೇ ಮುಖ್ಯರಸ್ತೆ, ಜಗಜ್ಯೋತಿನಗರ, ಜ್ಞಾನಭಾರತಿ, ಬೆಂಗಳೂರು ಇಲ್ಲಿನ ಮನೆಯ ಎದುರಿಗೇ ಜ್ಞಾನಭಾರತಿ ಕ್ಯಾಂಪಸ್ಸಿನ ಕಾಂಪೌಂಡ್ ಗೋಡೆಯಿದೆ. ಪ್ರತೀ ದಿನ ನಮ್ಮ ಮನೆಯ ಮುಂದಿರುವ ಕಾಂಪೌಂಡ್ ಗೆ ಹೊಂದಿಕೊಂಡ ಮರಗಳ ನಡುವೆ ಈ ನವಿಲುಗಳು ಕೂಗುತ್ತಾ ಗರಿಬಿಚ್ಚಿ ನರ್ತಿಸುವುದನ್ನು ನಾವು ನೋಡುತ್ತಿದ್ದೇವೆ. ಈ ನವಿಲುಗಳು ಮತ್ತು ಶ್ರೀಗಂಧದ ಮರಗಳು ಚೋರರ ಕೈಗೆ ಸಿಕ್ಕಿರುವುದು ಸುಳ್ಳಲ್ಲ. ಇವುಗಳ ರಕ್ಷಣೆಗೆ ಯಾರು ಹೊಣೆ?

ವೃಷಭಾವತಿ ನದಿಯು ಇಂದು ಕೊಳಚೆ ಚರಂಡಿಯಾಗಿ ರೂಪಾಂತರವಾಗಿದ್ದು ನದಿ ಎಂಬ ಹೆಸರು ಈಗ ಉಳಿದಿಲ್ಲ. ಹಿಂದೆ ಇದ್ದ ಕೆರೆ ನೀರಿನ ನಾಲೆ ಕಾಲುವೆಗಳೆಲ್ಲವೂ ಇಂದು ಕೊಳಚೆ ಮೋರಿಗಳಾಗಿ ನೀರು ವಿಷ ತ್ಯಾಜ್ಯದಿಂದ ತುಂಬಿಹೋಗಿದೆ, ಸುತ್ತಮುತ್ತ ಹತ್ತಿರದಲ್ಲಿರುವ ಕೆರೆಗಳಲ್ಲಿ ಇದೇ ವಿಷತ್ಯಾಜ್ಯದ ನೀರು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ. ಇಲ್ಲಿನ ಯಾವ ನೀರೂ ಈ ಜೀವಿಗಳಿಗೆ ಕುಡಿಯಲು ಯೋಗ್ಯವಾಗಿಲ್ಲ. ಕ್ರಿಕೆಟ್ ಗೆಲುವು, ಗಣಪತಿ ಉತ್ಸವ, ದೀಪಾವಳಿ, ಹುಟ್ಟಿದ ಹಬ್ಬ, ರಾಜ್ಯೋತ್ಸವ, ರಂಜಾನ್, ಕ್ರಿಸ್ಮಸ್ ಮುಂತಾದ ಆಚರಣೆಗಳನ್ನು ಆಚರಿಸಲು ವಿಷಕಾರಕ ರಾಸಾಯನಿಕಗಳ ಪಟಾಕಿಗಳನ್ನು ಸುಡುವ ಹುಚ್ಚರು, ಗಾಳಿ ನೀರು ಮಣ್ಣು ಮೌನ ಎಲ್ಲವನ್ನೂ ಮಲಿನಗೊಳಿಸುವ ಕೇಡುಗಳಿಗೆ ಹೆಚ್ಚು ಕೊಡುಗೆ ನೀಡುತ್ತಿದ್ದಾರೆ. ಕೈಗಾರಿಕಾ ತ್ಯಾಜ್ಯಗಳ ವಿಲೇವಾರಿಗೆ ಇಲ್ಲಿನ ನದಿ ಮತ್ತು ನಾಲೆಗಳೇ ಆಸರೆಯಾಗಿವೆ. ಇಷ್ಟರ ನಡುವೆಯೂ ಶ್ರೀಮಂತರ ಮಹಲುಗಳಲ್ಲಿ ಅನಗತ್ಯವಾಗಿ ನೀರು ಪೋಲಾಗಿ ಚರಂಡಿಗೆ ಹರಿದುಹೋಗುತ್ತಿದೆ. ಅನಗತ್ಯವಾಗಿ ನೂರಾರು ವಿದ್ಯುತ್ ದೀಪಗಳು ಅಲಂಕಾರಿಕ ದೀಪಗಳು ಉರಿಯುತ್ತಿರುತ್ತವೆ. ಹೋಸ್ ಪೈಪುಗಳನ್ನು ಹಿಡಿದು ಮನೆ ಮುಂದಿನ ಉದ್ಯಾನಕ್ಕೆ, ಅಲಂಕಾರಿಕ ಸಸ್ಯಗಳಿಗೆ ನೀರಾಯಿಸುವ, ಕಾರುಗಳನ್ನು ತೊಳೆಯಲು, ಮನೆ ಆವರಣ ತೊಳೆಯಲು ಅಪಾರ ಪ್ರಮಾಣದ ನೀರನ್ನು ಬಳಸಿ ಚರಂಡಿಗೆ ಹರಿದುಹೋಗುತ್ತಿರುವುದನ್ನು ನೋಡಿದರೆ ಅಂಥವರ ಸಿರಿವಂತಿಕೆ ಅಸಹ್ಯ ಹುಟ್ಟಿಸುತ್ತಿದೆ. ಮೂಕಜೀವಿಗಳಿಗೆ ನೀರು ಆಹಾರ ಒದಗಿಸದ ಈ ಶ್ರೀಮಂತ ಪಾಪಿಗಳು ಹೇಗಾದರೂ ನೆಮ್ಮದಿಯಾಗಿ ಉಸಿರಾಡುತ್ತಿದ್ದಾರೋ ನನಗೆ ತಿಳಿಯುತ್ತಿಲ್ಲ.

ಕರುಣಾಳು ಗೆಳೆಯರೇ ನಿಮ್ಮಲ್ಲಿ ನನ್ನ ಪ್ರಾರ್ಥನೆ ಏನೆಂದರೆ, ನಾವು ನಮ್ಮ ಸಹಮಾನವರೊಂದಿಗೆ ಸೌಹಾರ್ದ ಸಾಮರಸ್ಯಗಳಿಂದ ಬದುಕುತ್ತಿರುವಂತೆಯೇ ನಮ್ಮ ಸಹಜೀವಿಗಳಿಗೆ ನೀರು ಆಹಾರ ಒದಗಿಸುವುದರೊಂದಿಗೆ ಸಾಮರಸ್ಯದಿಂದ ಸಹಬಾಳ್ವೆ ನಡೆಸೋಣ.

-ಡಾ.ವಡ್ಡಗೆರೆ ನಾಗರಾಜಯ್ಯ
8722724174

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ನಾಲೆಯುದ್ದಕ್ಕೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಅನಧಿಕೃತವಾಗಿ ನೀರು ಎತ್ತುವವರ ಮೋಟಾರ್‌ಗಳನ್ನು ವಶಪಡಿಸಿಕೊಳ್ಳಲಾಗುವುದು.

ಪ್ರಿಪೇಯ್ಡ್ ಆಟೋಗಳನ್ನು ಚಾಲ್ತಿಗೊಳಿಸಿದ್ದು, ಇದಕ್ಕೆ ರೂ.38/-ಶುಲ್ಕ ನಿಗದಿಪಡಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಶೇಖರ್ ಹೆಚ್.ಟಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂಕಣ

Indian birthwort: ಪರಮಾತ್ಮನ ಹೆಸರಲ್ಲೇ ಇರುವ ದಿವ್ಯೌಷದ ಈಶ್ವರ ಬಳ್ಳಿ ಬಗ್ಗೆ ಗೊತ್ತೇ?

Published

on

indian birthwort, Aristolochia tagala

‘ಈಶ್ವರ’ ಎಂದ ಕೂಡಲೇ ಪರಮಾತ್ಮನನ್ನೆ ನೆನಪಿಸಿಕೊಳ್ಳೋ ನಮಗೆ ಅದೇ ಹೆಸರಿನಲ್ಲಿ ದಿವ್ಯೌಷಧಿ ಇದೆ ಎಂಬುದು ಎಷ್ಟು ಜನರಿಗೆ ತಿಳಿದೀತು? ಹೌದು! ಪರಮಾತ್ಮನ ಹೆಸರಿನಲ್ಲೇ ಒಂದು ಗಿಡಮೂಲಿಕೆ ಇದೆ (Indian birthwort). ಇದರ ವಿಶೇಷತೆ ಏನು? ಅದರಿಂದಾಗುವ ಪ್ರಯೋಜನಗಳೇನು? ಆರೋಗ್ಯದ ಮೇಲೆ ಬೀರುವ ಪ್ರಬಾವಗಳೇನು? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಈ ಬಳ್ಳಿಯನ್ನು ಹೆಚ್ಚಾಗಿ ಭಾರತ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಬಹುದಾಗಿದೆ. ಇದರ ವೈಜ್ಞಾನಿಕ ಹೆಸರು ಅರಿಸ್ಟೋಲೋಚಿಯ ಇಂಡಿಕಾ. ಸಾಮಾನ್ಯವಾಗಿ ಮೂಲಿಕೆ ಮರಕ್ಕೆ ಸುತ್ತಿಕೊಂಡು ಬೆಳೆಯುವ ಕಪ್ಪು ಬಳ್ಳಿಯಾಗಿದ್ದು, ಇದರ ಎಲೆಗಳು ಉದ್ದವಾಗಿ, ತಳದಲ್ಲಿ ಅಗಲವಾಗಿ, ತುದಿಯಲ್ಲಿ ಮೊನಚಾಗಿ, ಮೃದುವಾಗಿರುತ್ತದೆ. ಇನ್ನೂ ಇದರ ಬೀಜಗಳು ಚಪ್ಪಟೆಯಾಗಿ, ಅಂಡಕಾರವಾಗಿದ್ದು ಪುಕ್ಕಗಳನ್ನು ಹೊಂದಿದೆ ಹಾಗು ಇದರ ಬೇರುಗಳಲ್ಲಿ ಸುಗಂಧ ತೈಲವಿರುತ್ತದೆ.

ಈಶ್ವರ ಬಳ್ಳಿ (Indian birthwort)ಯ ಪೌರಾಣಿಕ ಹಿನ್ನೆಲೆ:

ನಮ್ಮೆಲ್ಲರಿಗೂ ತಿಳಿದಂತೆ ಶಿವ ಸಮುದ್ರ ಮಂಥನ ಮಾಡುವಾಗ ಹಾಲಾಹಲ (ವಿಷ) ಉತ್ಪತ್ತಿಯಾಯಿತು. ಆ ವಿಷ ಯಾರಿಗೂ ತೊಂದರೆಯಾಗಬಾರದೆಂದು ತಾನೇ ಅದನ್ನು ಕುಡಿದ. ಇದನ್ನು ನೋಡಿದ ಪಾರ್ವತಿ ದೇವಿ ಆ ವಿಷ ತನ್ನ ಪತಿಯ ಹೊಟ್ಟೆ ಸೇರಬಾರದೆಂದು ಆತನ ಕುತ್ತಿಗೆಯನ್ನು ಒತ್ತಿ ಹಿಡಿದಳು. ವಿಷ ಒಳ ಹೋಗಲಿಲ್ಲ. ವಿಷದ ಪ್ರಭಾವದಿಂದ ಕುತ್ತಿಗೆ ನೀಲ ವರ್ಣವಾಯಿತು. ಶಿವ ನೀಲಕಂಠನಾದ. ಶಿವ ವಿಷ ಕುಡಿದರೂ ಶಿವನಿಗೆ ಏನೂ ಆಗಲಿಲ್ಲ. ವಿಷವನ್ನು ನಿರ್ವಿಷ ಮಾಡುವ ಗುಣ ಶಿವನಿಗಿದ್ದಂತೆ ಈ ಗಿಡಕ್ಕೂ ಇರುವ ಕಾರಣ ‘ಈಶ್ವರ’ ಎಂಬ ಹೆಸರು ಈ ವನಸ್ಪತಿಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಓಂಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

‘ಈಶ್ವರ’ ಬಳ್ಳಿ ಮತ್ತು ಅದರ ಫಲ ನೋಡಲು ಹೇಗಿರುತ್ತದೆ?

ಕೆಲ ‘ಈಶ್ವರ’ ಬಳ್ಳಿಯು ಮರದಂತೆ ಉದ್ದಕ್ಕೆ ಏರುತ್ತದೆ. ಮತ್ತಷ್ಟು ಬಳ್ಳಿಯು ಪೊದೆಯಾಗಿ ಆವರಿಸಿಕೊಳ್ಳುತ್ತದೆ. ಸ್ವಲ್ಪ ಉದ್ದ ಆಯತಾಕಾರದ ಎಲೆಗಳು. ಎಲೆಗಳು ಅಲ್ಲಾಡಿದರೆ ಪರಿಮಳ ಸೂಸುತ್ತದೆ. ಎಲೆಯನ್ನು ಕಿವಿಚಿದರೂ ಪರಿಮಳ ಬರುತ್ತದೆ. ಹೂಗಳು ಬಾಯಿ ತೆರೆದ ಹಕ್ಕಿಗಳಂತೆ ಕಂಡುಬರುತ್ತದೆ. ಫಲಗಳು ಉದ್ದ ಹಾಗೂ ಸ್ವಲ್ಪ ದುಂಡಾಗಿ ಇರುತ್ತದೆ. ಫಲ ಬೆಳೆದು ಒಡೆದಾಗ ತಲೆ ಕೆಳಗಾಗಿ ಬಿಡಿಸಿದ ಪ್ಯಾರಾಚೂಟ್‌ನಂತೆ ಕಾಣುತ್ತದೆ. ಅದರೊಳಗೆ ತೆಳುವಾದ ತ್ರಿಕೋಣಾಕಾರದ ಬೀಜಗಳು ಇರುತ್ತದೆ.

‘ಈಶ್ವರ’ ಬಳ್ಳಿ (Indian birthwort)ಯಿಂದ ಆಗುವ ಪ್ರಯೋಜನಗಳೇನು?

ಭಾರತದ ಎಲ್ಲಾ ಕಡೆ ಕಂಡು ಬರುವ ಈಶ್ವರ ಬಳ್ಳಿಯ ಬೇರು, ಎಲೆಗಳು ಔಷಧಿಗಾಗಿ ಉಪಯೋಗಿಸಲ್ಪಡುತ್ತದೆ. ಕ್ರಿಮಿ ಬಾಧೆ, ಕಫ ಬಾಧೆ, ಸ್ತ್ರೀಯರ ಕೆಲವು ತೊಂದರೆಗಳಲ್ಲಿ, ವಿಷ ಚಿಕಿತ್ಸೆಯಲ್ಲಿ ವಿಶೇಷವಾಗಿ ಇದನ್ನು ಉಪಯೋಗಿಸಲ್ಪಡುತ್ತದೆ.

ಜೇಡ, ಚೇಳು, ಇಲಿ ಕಚ್ಚಿದರೆ: ಇದರ 3ಗ್ರಾಂ ಬೇರನ್ನು ಅಕ್ಕಿ ತೊಳೆದ ನೀರಲ್ಲಿ ಕಲಸಿ ಕುಡಿಸಬೇಕು ಹಾಗೂ ಅದರ ಎಲೆಯನ್ನು ನೀರಲ್ಲಿ ಅರೆದು ಕಚ್ಚಿದಲ್ಲಿಗೆ ಲೇಪಿಸಬೇಕು.
ತಲೆ ನೋವಿಗೆ ರಾಮಬಾಣ: ಈಶ್ವರ ಬಳ್ಳಿಯ ಎಲೆಯಲ್ಲಿ 10 ಗ್ರಾಂ ರಸ ತೆಗೆದು, 3ಗ್ರಾಂ ಅರಿಶಿನ ಪುಡಿ ಸೇರಿಸಿ ಕುಡಿಯುವುದರಿಂದ ತಲೆನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.
ಗಂಟುನೋವು, ಬಿಳಿ ಮಚ್ಚೆಗಳು: ಈ ಎಲೆಯನ್ನು ನೀರಲ್ಲಿ ಅರೆದು ಗಂಟುನೋವು ಅಥವಾ ಬಿಳಿ ಮಚ್ಚೆಗಳ ಮೇಲೆ ಹಚ್ಚುತ್ತ ಬಂದರೆ ಕ್ರಮೇಣ ವಾಸಿಯಾಗುತ್ತದೆ.
ಕೆಮ್ಮು ಕಫಕ್ಕೆ ಔಷಧಿ: ಇದರ ಎಲೆಯ ಜ್ಯೂಸ್ ತೆಗೆದು 15 ಎಂಎಲ್ ನಷ್ಟು ಕುಡಿಸುವುದರಿಂದ ಕಡಿಮೆಯಾಗುವುದು. ಕೆಲವೊಮ್ಮೆ ಈ ಎಲೆಯ ಜ್ಯೂಸ್ ಕುಡಿದ ಸ್ವಲ್ಪ ಹೊತ್ತಿನಲ್ಲಿ ಕಫ ವಾಂತಿಯಾಗಿ ಕರಗಿ ಹೋಗುತ್ತದೆ. ಕಫ ಜಾಸ್ತಿ ಇರುವಾಗ ಸಾಮಾನ್ಯವಾಗಿ ಅಮೃತಾಂಜನ, ವಿಕ್ಸ್ ಎದೆಗೆ ಹಚ್ಚುತ್ತಾರೆ. ಅದೇ ರೀತಿ ಎಲೆಯನ್ನು ಅರೆದು ಎದೆಗೆ ಹಚ್ಚಬಹುದು.
ಮುಟ್ಟಿನ ದೋಷ ನಿವಾರಣೆ: ಹೆಣ್ಣುಮಕ್ಕಳ ಋತುಚಕ್ರದ ವೇಳೆ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ 10ಗ್ರಾಂ ಈಶ್ವರ ಬೇರಿನ ಕಷಾಯ ಮಾಡಿ (30 ರಿಂದ 40 ಎಂ.ಎಲ್) ಕುಡಿಸಬೇಕು.
ಹೊಟ್ಟೆ ಕ್ರಿಮಿ ಬಾಧೆ: 5-10 ಮಿಲಿ ಎಲೆರಸವನ್ನು 3 ದಿನ ಕುಡಿಯುವುದರಿಂದ ಕಡಿಮೆಯಾಗುವುದು.
ಜ್ವರಕ್ಕೆ ದಿವ್ಯೌಷಧಿ: 5 ಗ್ರಾಂ ಈಶ್ವರ ಬೇರನ್ನು ಕಷಾಯ ಮಾಡಿ ಅದಕ್ಕೆ 1/2 ಚಮಚ ಕಾಳು ಮೆಣಸು ಪುಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು. ಶರೀರ ಬಿಸಿ ಆಗಿ ಚಳಿಯಿಂದ ಕೂಡಿದ ಜ್ವರವಿದ್ದರೆ ಈಶ್ವರ ಬೇರಿನ ಕಷಾಯದೊಂದಿಗೆ ಈಶ್ವರ ಬೇರಿನ ಎಲೆ ರಸಕ್ಕೆ ಹಿಪ್ಪಿಯನ್ನು ಪುಡಿಮಾಡಿ ಸೇರಿಸಿ ಕುಡಿಯುವುದರಿಂದ ಕಡಿಮೆಯಾಗುವುದು.
ಸರ್ಪ ಸುತ್ತಿಗೆ ರಾಮಬಾಣ: ಇತ್ತೀಚೆಗೆ ಸರ್ಪ ಸುತ್ತಿಗೆ ಅನೇಕ ಔಷಧಿಗಳಿದ್ದರು ಈಶ್ವರ ಬೇರು ಮತ್ತು ನೀಲಿ ಸೊಪ್ಪನ್ನು ಸೇರಿಸಿ ಅರೆದು ಹಚ್ಚುವುದರಿಂದ ಉರಿ ನೋವು ಕಡಿಮೆಯಾಗುವುದು.
ದೃಷ್ಟಿ ದೋಷ ನಿವಾರಣೆ: ಇದರ ಬೇರನ್ನು ನಯವಾಗಿ ಚೂರ್ಣಮಾಡಿ ಅದಕ್ಕೆ ಅಪ್ಪಟ ಗೋರೋಜನ ಮತ್ತು ಚಂದನ ಸೇರಿಸಿ ತಿಲಕವಿಟ್ಟರೆ ದೃಷ್ಟಿ ದೋಷ ಪರಿಹಾರವಾಗುತ್ತದೆ.
ಮಲಬದ್ಧತೆ ಮತ್ತು ಮೂಲವ್ಯಾಧಿ ನಿವಾರಣೆ: ಈಶ್ವರಿಬೇರು, ಹಾವು ಮೆಕ್ಕೆ ಬೇರು ದಂತಿ, ತಿಗಡೆ ಕೊಮ್ಮೆ ಬೇರು, ಅಳಲೆಕಾಯಿ ಸಿಪ್ಪೆ, ಹಿಪ್ಪಲಿ ಇವುಗಳೆಲ್ಲವನ್ನು ಸಮತೂಕದಲ್ಲಿ ನಯವಾಗಿ ಚೂರ್ಣಿಸಬೇಕು. ನಂತರ 2 ರಿಂದ 2.5 ಗ್ರಾಂ ಚೂರ್ಣವನ್ನು ಸೇವಿಸಿ ಬಿಸಿನೀರು ಕುಡಿದರೆ ಮಲಬದ್ಧತೆ ಮತ್ತು ಮೂಲವ್ಯಾದಿ ನಿವಾರಣೆಯಾಗುತ್ತದೆ.

ಹೀಗೆ ಈಶ್ವರ ಬೇರು (Indian birthwort) ಮತ್ತು ಅದರ ಎಲೆಯಲ್ಲಿ ಅಡಗಿರುವ ದಿವ್ಯೌಷಧಿ ಅಪಾರ. ಅದರಲ್ಲಿ ತೀಕ್ಷ ಗುಣಗಳುಳ್ಳ ಮದ್ದಾಗಿದ್ದು, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ. ಯಾವುದೇ ಔಷಧಿಯಾದರು ಉಪಯೋಗಿಸು ಮುನ್ನ ಒಮ್ಮೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತ.

Continue Reading
Advertisement

Title

ದಿನದ ಸುದ್ದಿ14 hours ago

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು...

ದಿನದ ಸುದ್ದಿ14 hours ago

ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ...

ದಿನದ ಸುದ್ದಿ1 week ago

ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್...

ದಿನದ ಸುದ್ದಿ2 weeks ago

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ(ಫೆ.23) ರಂದು ನಗರದ...

ದಿನದ ಸುದ್ದಿ3 weeks ago

ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ

ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ,...

ದಿನದ ಸುದ್ದಿ3 weeks ago

ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ

ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು...

ದಿನದ ಸುದ್ದಿ3 weeks ago

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ...

ದಿನದ ಸುದ್ದಿ3 weeks ago

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ...

ದಿನದ ಸುದ್ದಿ3 weeks ago

ಏ.1 ರಿಂದ 2026ರ ಡಿಜಿಟಲ್ ಜನಗಣತಿ

ಸುದ್ದಿದಿನ,ದಾವಣಗೆರೆ :2026ರ ಜನಗಣತಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ದೃಢೀಕರಣ...

ದಿನದ ಸುದ್ದಿ3 weeks ago

ದುರ್ಗಾಂಬಿಕ ಜಾತ್ರೆ ; ಫ್ಲೆಕ್ಸ್ ಹಾವಳಿ ವಿರುದ್ಧ ಕಠಿಣ ಕ್ರಮ

ಸುದ್ದಿದಿನ,ದಾವಣಗೆರೆ:ದುರ್ಗಾಂಬಿಕಾ ಜಾತ್ರೆಯ ಸಂದರ್ಭದಲ್ಲಿ ನಗರದ ಪರಿಸರ ಮಾಲಿನ್ಯಕ್ಕೆ ಧಕ್ಕೆ ತರುವಂತೆ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ‘ಡಿ ಫಿಗರ್‌ಮೆಂಟ್ ಆಕ್ಟ್’ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂದು...

Trending