Connect with us

ರಾಜಕೀಯ

ಪೌರತ್ವ (ತಿದ್ದುಪಡಿ) ಮಸೂದೆ : ಹೊಸ ವಿಭಜನಕಾರೀ ಅಜೆಂಡಾ

Published

on

ಪೌರತ್ವ (ತಿದ್ದುಪಡಿ) ಮಸೂದೆ ಅಥವ ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸುವ ದುಷ್ಟತನದಿಂದ ತುಂಬಿರುವ ಶಾಸನವಾದರೆ ಎನ್.ಆರ್.ಸಿ., ಅಂದರೆ, ರಾಷ್ಟ್ರೀಯ ಪೌರರ ನೋಂದಣಿ ಎಂಬುದು ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ.ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು.

ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ. ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್‌ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.

ಬಿಜೆಪಿಯ ದುಷ್ಟತಂತ್ರಗಳನ್ನು ವಿಫಲಗೊಳಿಸಲು ಈ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕುವುದರೊಂದಿಗೇ, ಅವನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.

  • ಪ್ರಕಾಶ ಕಾರಟ್

ಪೌರತ್ವ (ತಿದ್ದುಪಡಿ) ಮಸೂದೆ, 2019(ಸಿ.ಎ.ಬಿ.) ಸಂಸತ್ತಿನ ಒಳಗೂ, ಹೊರಗೂ ಬಲವಾದ ಪ್ರತಿಭಟನೆಗಳ ನಡುವೆ ಅಂಗೀಕಾರಗೊಂಡಿದೆ. ಸಿ.ಎ.ಬಿ. ಸಂವಿಧಾನದ ಮೂಲ ನೀತಿಗಳಿಗೆ ತದ್ವಿರುದ್ಧವಾಗಿರುವ ಒಂದು ಅಪಯಕಾರಿ ಶಾಸನ. ಈ ಮಸೂದೆಯಲ್ಲಿ ವಿಧಿಸಿರುವ ಅಂಶಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿತಗೊಂಡಿರುವ ಪೌರತ್ವದ ಜಾತ್ಯತೀತ ಪರಿಕಲ್ಪನೆಯನ್ನು ಶಿಥಿಲಗೊಳಿಸುತ್ತವೆ.

ಸಂವಿಧಾನದ ಕಲಮು 14, ಭಾರತದ ಪ್ರದೇಶದ ಒಳಗೆ ಯಾವುದೇ ವ್ಯಕ್ತಿಗೆ ಕಾನೂನಿನ ಎದುರು ಸಮಾನತೆ ಅಥವ ಕಾನೂನಿನ ಸಮಾನ ರಕ್ಷಣೆಯನ್ನು ನಿರಾಕರಿಸಲಾಗದು ಎಂದು ವಿಧಿಸಿದೆ. ಸಂವಿಧಾನವು ಮತ, ಜಾತಿ, ಪಂಥ ಅಥವ ಲಿಂಗದ ಆಧಾರದಲ್ಲಿ ತಾರತಮ್ಯವನ್ನು ಕೂಡ ನಿಷೇದಿಸಿದೆ.

ಸಿ.ಎ.ಬಿ. ಕೆಲವು ವಿಭಾಗಗಳ ಜನರನ್ನು ಪೌರತ್ವ ನೀಡಿಕೆಗೆ ಪರಿಶೀಲಿಸುವಾಗ ಒಂದು ಮತೀಯ ಮಾನದಂಡವನ್ನು ಸೇರಿಸಿದೆ. ಈ ತಿದ್ದುಪಡಿಯ ಪ್ರಕಾರ ಡಿಸೆಂಬರ್ 31, 2014ರ ಮೊದಲು ಅಫಘಾನಿಸ್ತಾನ, ಬಾಂಗ್ಲಾದೇಶ್ ಅಥವ ಪಾಕಿಸ್ತಾನದಿಂದ ಬಂದಿರುವ ಹಿಂದೂಗಳು, ಸಿಖ್ಖರು, ಔದ್ಧರು, ಜೈನರು, ಪಾರ್ಸಿಗಳು ಅಥವ ಕ್ರಿಶ್ಚಿಯನ್ನರನ್ನು ಕಾನೂನುಬಾಹಿರ ವಲಸಿಗರು ಎಂದು ಕಾಣುವುದಿಲ್ಲ.

ಅವರು ಭಾರತದಲ್ಲಿ ಕನಿಷ್ಟ ಐದು ವರ್ಷಗಳನ್ನು ಕಳೆದಿದ್ದರೆ,ಸಹಜೀಕರಣ(ನೆಚುರಲೈಸೇಶನ್)ದಿಂದ ಪೌರತ್ವಕ್ಕೆ ಅರ್ಹರಾಗಬಹುದು. ಈ ಮೊದಲು ಸಹಜೀಕರಿಸಲು ಸಮಯಮಿತಿ ಹನ್ನೊಂದು ವರ್ಷಗಳಾಗಿದ್ದವು. ಅಂದರೆ ಈ ಮಿತಿಯನ್ನು ಸಡಿಲಿಸಲಾಗುತ್ತಿದೆ.

ಅದರೆ ಇದು ಈ ಮೂರು ದೇಶಗಳಿಂದ ಬಂದಿರುವ ಮುಸ್ಲಿಮರಿಗೆ ಅನ್ವಯಿಸುವುದಿಲ್ಲ. ಅವರನ್ನು ಕಾನೂನುಬಾಹಿರ ವಲಸಿಗರೆಂದು ಪರಿಗಣಿಸಲಾಗುತ್ತದೆ. ಮತೀಯ ಆಧಾರದಲ್ಲಿ ಈ ತಾರತಮ್ಯವೇ ಪೌರತ್ವದ ಕಾಯ್ದೆಗೆ ಈ ತಿದ್ದುಪಡಿಯನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರಗೊಳಿಸುತ್ತದೆ.

ಬಿಜೆಪಿ ಈ ಮೊದಲೇ ಹಿಂದಿನ ಲೋಕಸಭೆಯಲ್ಲಿ ಈ ಮಸೂದೆಯನ್ನು ಪಾಸುಮಾಡಿಕೊಂಡಿತ್ತು. ಆದರೆ ರಾಜ್ಯಸಭೆಯಲ್ಲಿ ಬಹುಮತವಿಲ್ಲದ್ದರಿಂದ ಪಾಸಾಗಲಿಲ್ಲ. ಈ ಮಸೂದೆಯ ಉದ್ದೇಶ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದಿರುವ ಹಿಂದೂ ವಲಸಿಗರಿಗೆ ಪೌರತ್ವವನ್ನು ಖಾತ್ರಿಪಡಿಸುತ್ತಲೇ, ಆ ದೇಶದಿಂದ ಬರುವ ಯಾವುದೇ ಮುಸ್ಲಿಂ ವಲಸಿಗರನ್ನು ಹೊರಗಿಡುವ ಕೋಮುವಾದಿ ಅಜೆಂಡಾ. ಅಸ್ಸಾಂನಲ್ಲಿ ಎನ್.ಆರ್.ಸಿ. ಪ್ರಕ್ರಿಯೆ ಮಾರ್ಚ್ 24, 1971ರ ನಂತರ ಪ್ರವೇಶಿಸಿರುವ ಎಲ್ಲರನ್ನೂ ಹೊರಗಿಡುವುದರಿಂದಾಗಿ ಈ ಕ್ರಮ ಅಗತ್ಯವಾಗಿತ್ತು.

ಅಸ್ಸಾಂನಲ್ಲಿ ರಾಷ್ಟ್ರೀಯ ಪೌರರ ನೋಂದಣಿ(ಎನ್.ಆರ್.ಸಿ.)ಯ ಅಂತಿಮ ಪಟ್ಟಿಯನ್ನು ಈ ವರ್ಷ ಆಗಸ್ಟ್ 31ರಂದು ಸಿ.ಎ.ಬಿ.ಯನ್ನು ಜಾರಿಗೊಳಿಸುವ ಮೊದಲು ಪ್ರಕಟಿಸಲಾಯಿತು. ಇದರ ಫಲಿತಾಂಶವಾಗಿ ಬಾಂಗ್ಲಾದೇಶದಿಂದ ಬಂದು ಹಿಂದೂಗಳನ್ನೂ ದೊಡ್ಡ ಸಂಖ್ಯೆಯಲ್ಲಿ ಹೊರಗಿಡಲಾಗಿದೆ. ಆದ್ದರಿಂದಲೇ ಅಸ್ಸಾಂನ ಬಿಜೆಪಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಎನ್.ಆರ್.ಸಿ. ಪಟ್ಟಿಯನ್ನು ವಿರೋಧಿಸಿವೆ.

ಹೀಗೆ ಮೋದಿ ಸರಕಾರಕ್ಕೆ ಇಡೀ ದೇಶಕ್ಕೆ ಎನ್.ಆರ್.ಸಿ. ಯನ್ನು ಸಿದ್ದಪಡಿಸುವ ಕೆಲಸಕ್ಕೆ ಕೈಹಾಕುವ ಮೊದಲು ಸಿ.ಎ.ಬಿ.ಯನ್ನು ಅಂಗೀಕರಿಸುವ ತುರ್ತು ಬಂದಿತು. ಗೃಹಮಂತ್ರಿ ಅಮಿತ್ ಷಾ ಕಪಟತನದಿಂದ ಅಸ್ಸಾಂನಲ್ಲಿ ಎನ್.ಆರ್.ಸಿ. ಯನ್ನು ಇಡೀ ದೇಶದ ಜತೆಗೆ ಮತ್ತೊಮ್ಮೆ ಮಾಡಲಾಗುವುದು ಎಂದು ಪ್ರಕಟಿಸಿದ್ದಾರೆ.

ಈ ಸಿ.ಎ.ಬಿ. ಗೆ ಅಸ್ಸಾಂ ಮತ್ತು ಈಶಾನ್ಯ ಭಾರತದ ಜನಗಳಿಂದ ಕೋಪಾವೇಶದ ಪ್ರತಿಕ್ರಿಯೆ ಎದುರಾಗಿದೆ. ಅಸ್ಸಾಂನ ಜನರು ಈ ಶಾಸನ ಅಸ್ಸಾಂ ಒಪ್ಪಂದದಲ್ಲಿ ನೀಡಿದ ವಚನಕ್ಕೆ ಮಾಡಿರುವ ವಿಶ್ವಾಸದ್ರೋಹ ಎಂದು ಕಾಣುತ್ತಿದ್ದಾರೆ. ಏಕೆಂದರೆ ಆ ಒಪ್ಪಂದದ ಪ್ರಕಾರ ಮಾರ್ಚ್ 1971ರ ನಂತರ ಅಸ್ಸಾಂ ಪ್ರವೇಶಿಸಿದವರಿಗೆ ಪೌರತ್ವವನ್ನು ಕೊಡಲಾಗುವುದಿಲ್ಲ.

ಸಿ.ಎ.ಬಿ. ಈ ಸಮಯಮಿತಿಯನ್ನು ಡಿಸೆಂಬರ್ 31, 2014 ರ ವರೆಗೆ ವಿಸ್ತರಿಸಿ ಕಾನೂನುಬಾಹಿರ ವಲಸಿಗರನ್ನು ಕಾನೂನುಬದ್ಧಗೊಳಿಸಿ, 1985ರಲ್ಲಿ ಅಸ್ಸಾಂ ಒಪ್ಪಂದದ ಮೂಲಕ ಏರ್ಪಟ್ಟಿರುವ ಜಾಗರೂಕತೆಯಿಂದ ಸಮತೋಲಗೊಳಿಸಿದ್ದ ಒಡಂಬಡಿಕೆಯನ್ನು ತಲೆಕೆಳಗಾಗಿಸಿದೆ.

ಈಶಾನ್ಯ ಭಾರತದ ಎಲ್ಲ ರಾಜ್ಯಗಳಲ್ಲಿ ಅಲ್ಲಿಯ ಮೂಲನಿವಾಸಿಗಳ ಅಸ್ಮಿತೆಗಳು ಹೊಸದಾಗಿ ಪೌರತ್ವ ಪಡೆಯುವ ಜನಗಳು ದೊಡ್ಡಪ್ರಮಾಣದಲ್ಲಿ ಬಂದು ಸೇರುವುದರಿಂದಾಗಿ ಮುಳುಗಿ ಹೋಗಬಹುದು ಎಂಬ ಭಯ ಮೂಡಿದೆ.

ಸಂವಿಧಾನದ ಆರನೇ ಶೆಡ್ಯೂಲಿನ ಅಡಿಯಲ್ಲಿ ಬರುವ ಬುಡಕಟ್ಟು ಪ್ರದೇಶಗಳಿಗೆ ಮತ್ತು ಇನ್ನರ್ ಲೈನ್(ಒಳಗಣ ರೇಖೆ) ಇರುವ ಪ್ರದೇಶಗಳಿಗೆ ಈ ಸಿ.ಎ.ಬಿ.ಯಿಂದ ವಿನಾಯ್ತಿ ಕೊಟ್ಟು ಅವರನ್ನು ಸಮಾಧಾನ ಪಡಿಸುವ ಮೋದಿ ಸರಕಾರದ ಪ್ರಯತ್ನ ವಿಫಲವಾಗಿದೆ. ಈ ಸುರಕ್ಷಿತ ಕ್ಷೇತ್ರಗಳು ಹೊರಗಿಂದ ಅಲ್ಲಿಯೇ ನೆಲೆಸಲು ಬರುವ ಜನಗಳಿಂದ ಸತತವಾಗಿ ಒತ್ತಡಗಳನ್ನು ಎದುರಿಸುತ್ತಲೇ ಇರುವುದರಿಂದಾಗಿ ಮೋದಿ ಸರಕಾರದ ಈ ಪ್ರಯತ್ನ ಫಲ ಕೊಟ್ಟಿಲ್ಲ.

ಸಿ.ಎ.ಬಿ. ಮತ್ತು ಎನ್.ಆರ್.ಸಿ. ಯನ್ನು ಒಟ್ಟಾಗಿ ಕಾಣಬೇಕು. ಸಿ.ಎ.ಬಿ. ಮುಸ್ಲಿಮೇತರ ವಲಸಿಗರನ್ನು ನಾಗರಿಕರೆಂದು ಕಾನೂನುಬದ್ಧಗೊಳಿಸಿದರೆ, ಎನ್.ಆರ್.ಸಿ. ಮುಸ್ಲಿಂ ನುಸುಳುಕೋರರು ಎನ್ನಲಾಗುವವರ ಮೇಲೆ ಗುರಿಯಿಡುತ್ತದೆ. ಬಿಜೆಪಿ ಇಟ್ಟುಕೊಂಡಿರುವ ಗುರಿಯೆಂದರೆ, ಎರಡನೇ ದರ್ಜೆಯ ನಾಗರಿಕರು ಎಂಬೊಂದು ವಿಧವನ್ನು ಸೃಷಿಸುವುದು ಮತ್ತು ಅವರ ಹಕ್ಕುಗಳನ್ನು ತೀವ್ರವಾಗಿ ಮಿತಿಗೊಳಿಸುವುದು. ಈ ಯೋಚನೆಯ ಹಿಂದೆ ಇರುವುದು ವಿ.ಡಿ.ಸಾವರ್ಕರ್ ಪ್ರತಿಪಾದಿಸಿದ ಎರಡು-ರಾಷ್ಟ್ರಗಳ ಸಿದ್ಧಾಂತ.

ಸಿ.ಎ.ಬಿ. ಮತ್ತು ಎನ್.ಆರ್.ಸಿ.ಯ ಎರಡು ಕಡೆಗಳಿಂದ ಸುತ್ತುವರೆಯುವ ತಂತ್ರವನ್ನು ಬಿಜೆಪಿ-ಆರೆಸ್ಸೆಸ್‌ನ ಸಂಕುಚಿತ ರಾಜಕಾರಣಕ್ಕೆ ಹೊಂದುವಂತೆ ಕೋಮು ಆತಂಕಗಳನ್ನು ಹೆಚ್ಚಿಸಲು ಮತ್ತು ಒಂದು ಹೊಸ ವಿಭಜನಕಾರೀ ಅಜೆಂಡಾವನ್ನು ಸೃಷ್ಟಿಸಲು ಉಪಯೋಗಿಸಲಾಗುತ್ತದೆ.

ಈ ಪೌರತ್ವ ತಿದ್ದುಪಡಿ ಮಸೂದೆಗೆ ಸುಪ್ರಿಂ ಕೋರ್ಟಿನಲ್ಲಿ ಸವಾಲು ಹಾಕಬೇಕು. ಹಾಗೆ ಮಾಡುತ್ತಲೇ, ಸಿ.ಎ.ಬಿ.-ಎನ್.ಆರ್.ಸಿ.ಗೆ ಸಂಬಂಧಪಟ್ಟಂತೆ ಬಿಜೆಪಿಯ ದುಷ್ಟತಂತ್ರಗಳನ್ನು ಬಯಲಿಗೆಳೆಯಲು ವ್ಯಾಪಕವಾದ ಪ್ರಚಾರಾಂದೋಲನವನ್ನು ನಡೆಸಬೇಕು.

(ಈ ವಾರದ ಜನಶಕ್ತಿ ವಾರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರೈತರಿಗೆ ಉಚಿತ ವಿದ್ಯುತ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳ ಸ್ಥಾಪನೆ : ಸಚಿವ ಕೆ.ಜೆ.ಜಾರ್ಜ್

Published

on

ಸುದ್ದಿದಿನ,ಚಿತ್ರದುರ್ಗ:ರೈತರಿಗೆ ಹಗಲು ಹೊತ್ತು ಏಳು ಘಂಟೆ ಉಚಿತ ಕರೆಂಟ್ ನೀಡಲು ರಾಜ್ಯಾದ್ಯಂತ ಸೋಲಾರ್ ಘಟಕಗಳಿಗೆ ಚಾಲನೆ ನೀಡಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ನೀರಗುಂದ ಗ್ರಾಮದ ಬಳಿ ನೂತನವಾಗಿ ನಿರ್ಮಾಣವಾಗಿರುವ ಸೋಲಾರ್ ಘಟಕದ ಕಾಮಗಾರಿ ಪರಿಶೀಲಿಸಿದ ಅವರು, ಜಿಲ್ಲೆಯ ಆರೂ ತಾಲೂಕುಗಳಲ್ಲಿ ಒಂಬತ್ತು ಸೋಲಾರ್ ಘಟಕಗಳು ಸ್ಥಾಪನೆಯಾಗಲಿದ್ದು ಇದರಿಂದ ಅರವತ್ತೆರಡು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುವುದು ಎಂದು ಹೇಳಿದರು.

ಇಂಧನ ಇಲಾಖೆಯು ರಾಜ್ಯಾದ್ಯಂತ 154 ಸೋಲಾರ್ ಘಟಕಗಳನ್ನು ಸ್ಥಾಪಿಸಿ 1 ಸಾವಿರದ 81 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಿ ಸ್ವಾವಲಂಬನೆ ಸಾಧಿಸಲು ನಿರ್ಧರಿಸಿದೆ ಎಂದು ತಿಳಿಸಿದರು.

ಇನ್ನೊಂದೆಡೆ ತುಮಕೂರಿನ ಸಿರಾ ತಾಲ್ಲೂಕಿನ ಚೆಂಗಾವರದಲ್ಲಿ ಪಿ.ಎಂ.ಕುಸುಮ್ ಯೋಜನೆಯಡಿ ನಿರ್ಮಿಸಿರುವ ಸೋಲಾರ್ ಪಾರ್ಕ್ ವೀಕ್ಷಿಸಿ ಮಾತನಾಡಿದ ಅವರು, ರಾಜ್ಯದಾದ್ಯಂತ ಸೋಲಾರ್ ಘಟಕಗಳನ್ನು ನಿರ್ಮಿಸಿ 3 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ ; ನಾಳೆ ಸರ್ಕಾರಿ ರಜೆ ಘೋಷಣೆ

Published

on

ಸುದ್ದಿದಿನಡೆಸ್ಕ್:ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ. ನಾಳೆ ಅವರ ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಒಂದು ದಿನ ಸರ್ಕಾರಿ ರಜೆಯನ್ನು ಘೋಷಿಸಿ ಡಿಸಿಎಂ ಡಿ.ಕೆ ಶಿವಕುಮಾ‌ರ್ ಆದೇಶಿಸಿದ್ದಾರೆ.

ಕರ್ನಾಟಕ ರಾಜಕಾರಣದ ಮುತ್ಸದ್ದಿ ರಾಜಕಾರಣಿ, ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಇಂದು ನಸುಕಿನ ಜಾವ 2:30ರ ಸುಮಾರಿಗೆ ನಿಧನರಾಗಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ನಾಳೆ ಬೆಳಗಾವಿ ಸೌಧದಲ್ಲಿ ನಡೆಯ ಬೇಕಾಗಿದ್ದ ಕಲಾಪಗಳನ್ನು ಗುರುವಾರಕ್ಕೆ ಮುಂದೂಡಲಾಗಿದೆ.

ವಯೋಸಹಜ ಅನಾರೋಗ್ಯದ ಕಾರಣ ಅವರು ಇತ್ತೀಚೆಗಷ್ಟೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾಗಿದ್ದರು. ಆದಾಗ್ಯೂ ನಂತರ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು.

ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಮೃತರ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
2009 ರಿಂದ 2012ರ ಅಕ್ಟೋಬರ್ 28ರವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಎಸ್. ಎಂ. ಕೃಷ್ಣ ಅವರು, 2004ರಿಂದ 2008ರವರೆಗೆ ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

1999ರ ಅಕ್ಟೋಬರ್ 11ರಿಂದ 2004ರ ಮೇ 28ರವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಎಸ್. ಕೃಷ್ಣ ಅವರು, ಉಪಮುಖ್ಯಮಂತ್ರಿಯಾಗಿ, ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರು ಹಾಗೂ ಹಿರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು, ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ತುಮಕೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿ ಪೂಜೆ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ತುಮಕೂರು:ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ತುಮಕೂರಿನಲ್ಲಿ ಒಟ್ಟು 50 ಎಕರೆ ಜಾಗವನ್ನು ಕರ್ನಾಟಕ ಕ್ರಿಕೆಟ್ ಸಂಸ್ಥೆಗೆ ನೀಡಲಾಗಿದ್ದು ಇದು ಜಿಲ್ಲೆಯ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಪೂರಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಆದಷ್ಟು ಶೀಘ್ರವೇ ಕ್ರೀಡಾಂಗಣ ನಿರ್ಮಾಣ ಮುಗಿಸಿ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆ ಪೂರೈಸಲಾಗುವುದು ಎಂದು ಹೇಳಿದ್ದಾರೆ. ಮೈಸೂರಿನಲ್ಲೂ ಕ್ರೀಡಾಂಗಣ ನಿರ್ಮಾಣಕ್ಕೆ ಕರ್ನಾಟಕ ಕ್ರಿಕೆಟ್ ಸಂಸ್ಥೆ ಬೇಡಿಕೆ ಮುಂದಿಟ್ಟಿದ್ದು ಮೈಸೂರಿನಲ್ಲೂ ಜಾಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಚೆನ್ನೈ-ಮುಂಬೈ ಇಂಡಸ್ಟ್ರೀಯಲ್ ಕಾರಿಡಾರ್ ಗಾಗಿ ಆರು ಹಂತದಲ್ಲಿ 20 ಸಾವಿರ ಎಕರೆ ಸ್ವಾಧೀನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಸಂತನರಸಾಪುರದಲ್ಲಿ ಏಷ್ಯಾದಲ್ಲಿಯೇ ಅತಿ ದೊಡ್ಡ ಟೌನ್ ಶಿಪ್ ಪ್ರಾರಂಭವಾಗಿದೆ ಎಂದು ತಿಳಿಸಿದ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಕೈಗಾರಿಕೆಗಳಿಗೆ ಮನವಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending