Connect with us

ದಿನದ ಸುದ್ದಿ

ಬಹುಜನ ನಾಯಕನ ‘ದಾದಾಸಾಹೇಬ್ ಕಾನ್ಸಿರಾಂ’ ಪರಿನಿಬ್ಬಾಣದ ಸ್ಮರಣೆ

Published

on

ಭಾರತದ ಬಹುಜನ ರಾಜಕಾರಣ ಕಟ್ಟಿ ಯಶಸ್ವಿಯಾದ ರಾಜಕೀಯ ಸಾಮಾಜಿಕ ವಿಜ್ಞಾನಿ ‘ದಾದಾಸಾಹೇಬ್ ಕಾನ್ಸಿರಾಂ ಜೀ’ ಅವರನ್ನು ‘ಪೊಲಿಟಿಕಲ್ ಲೆಜೆಂಡ್ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ. ರಾಜಕಾರಣ ಎಂದರೆ ನಮಗೆ ಬೇಡವೇ ಬೇಡ ಎನ್ನುವ ಅಸಮರ್ಥ ಅಸಹಾಯಕ ಸಮುದಾಯದ ಎದೆಯೊಳಗೆ ಅರಸೊತ್ತಿಗೆಯ ಕನಸು ಬಿತ್ತಿದ ಮಹಾನ್ ಚೇತನ ಕಾನ್ಸಿರಾಮ್ ಜಿ.

ಭಾರತದಲ್ಲಿ ಯಾವುದಾದರೂ ಒಂದು ಹಿಂದೂಳಿದ ವರ್ಗ ದಲಿತ,ಅಲ್ಪಸಂಖ್ಯಾತ, ಎಂದು ಬಹುಜನ ಪರಿವರ್ತನಾ ಚಳವಳಿ ಯಶಸ್ವೀ ಆಗಿದೆ ಅಧಿಕಾರ ಇಡಿದ ರಾಜಕಾರಣ ಮಾದರಿ ಇದ್ದರೆ ಅದೊಂದು BSP ಎಂದು ಹೇಳಬಹುದು. ಭಾರತಾದ್ಯಂತ ಕಾನ್ಸಿರಾಂ ಜೀ ರಾಜಕಾರಣ ವಿದ್ಯೆ ಬಳಸಿಕೊಂಡು ಇಂದಿಗೂ ರಾಜಕಾರಣ ಮಾಡಿ ಕಡಿಮೆ ಸಂಖ್ಯೆಯ ಶಾಸಕರು ಆಯ್ಕೆಯಾದರು ಮುಖ್ಯಮಂತ್ರಿ ಪದವಿ ಪಡೆಯಬಹುದು ಎಂದು ತೋರಿಸಿಕೊಟ್ಟರು.

ಇಂದಿಗೂ ಭಾರತದಲ್ಲಿ ಬ್ರಾಹ್ಮಣಶಾಹಿ ವ್ಯವಸ್ಥೆ ಅಡಿಯಲ್ಲಿ ಹುಟ್ಟಿದ ಪಕ್ಷಗಳಾದ CONGRESS,BJP, ಅಂತಹ ಪಕ್ಷಗಳು ಪರ್ಯಾಯವಾಗಿ ರಾಜಕಾರಣ ಮಾಡಬಹುದು ಮತ್ತು ಅತಿ ಕಡಿಮೆ ಸಮಯದಲ್ಲಿ BSP ರಾಷ್ಟ್ರದ ಮೂರನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಹಿಂದೂಳಿದ ವರ್ಗದ ಮಹಾತ್ಮರ ಬಗ್ಗೆ ಸಂಶೋಧನೆ ನಡೆಸಿ ಇವತ್ತಿಗೂ ಸಂತ ರವಿದಾಸ್, ಜ್ಯೋತಿ ಬಾಹುಪುಲೆ ದಂಪತಿಗಳ ಶಾಹುಮಹರಾಜ್,ಸಯ್ಯಾಜಿ ಗಾಯಕವಾಡ,ನಾಲ್ವಡಿ ಕೃಷ್ಣರಾಜ ಒಡೆಯರ್,ಪೆರಿಯಾರ್ ನಾರಯಣಗುರು,ಬುದ್ದ ಬಸವ ಬಾಬಾಸಾಹೇಬ್ ಸಂವಿಧಾನವನ್ನು ಅಂತಹ ಮಹನೀಯರು ವಿಚಾರಧಾರೆ ತನ್ನ ಮೊದಲ ತತ್ವ ಸಿದ್ದಾಂತ ಚಳವಳಿಯನ್ನು ಮುನ್ನಡೆಗೆ ಕಾರಣವಾದ ಬಹುಜನ ಚಳವಳಿ ಒಂದು ಪರಿವರ್ತನಾ ಹಾದಿಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಬಹುಶಃ ಭಾರತದಲ್ಲಿ ಕಾಂಗ್ರೆಸ್ ಬಿಜೆಪಿ ಹೊರತುಪಡಿಸಿ ಶೋಷಿತ ವರ್ಗದ ಜನರು ಕೂಡ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂದು ತೊರೊಸಿಕೊಟ್ಟ ರಾಜಕೀಯ ನಿಪುಣ ಕಾನ್ಸಿರಾಮ್ ಜೀ.

ದಲಿತ,ಅಲ್ಪಸಂಖ್ಯಾತ, ಹಿಂದೂಳಿದ ವರ್ಗಗಳು ಅಧಿಕಾರ ವಂಚಿತ ಸಣ್ಣಪುಟ್ಟ ಸಮುದಾಯದವರು ನಾವು ಕೂಡ ಸ್ವಂತ ಪವರ್ ಪಾಲಿಟಿಕ್ಸ್ ಮಾಡಬೇಕು ಅದನ್ನು ತಮ್ಮ ಜೀವಿತಾವಧಿಯಲ್ಲಿ ನೋಡಲೇಬೇಕು ಎಂದು ಪಣತೊಟ್ಟ ದಾದಾಸಾಹೇಬ್ ಕಾನ್ಸಿರಾಮ್ ದೇಶ ಬಹುದೊಡ್ಡ ಪ್ರಮಾಣದ ಜನಸಂಖ್ಯೆಯುಳ್ಳ ಉತ್ತರ ಪ್ರದೇಶದಲ್ಲಿ ಕುಮಾರಿ ಮಾಯಾವತಿ ಮೇಡಂ ಅವರಿಗೆ ನಾಲ್ಕು ಸಾರಿ ಮುಖ್ಯಮಂತ್ರಿ ಮಾಡೋದು ಎಂದರೆ ಸಾಮಾನ್ಯ ಕಾರ್ಯವಲ್ಲ.

ಬಹುತೇಕ ಇತ್ತೀಚೆನ ವರ್ಷಗಳ ರಾಜಕಾರಣದಲ್ಲಿ ಕಾನ್ಸಿರಾಮ್ ಜೀ ಅವರ ರಾಜಕೀಯ ಲೆಕ್ಕಾಚಾರ ಮಾದರಿ ಬಳಸಿಕೊಂಡು ಇಪ್ಪತ್ತೈದು ಶಾಸಕರನ್ನು ಹೊಂದಿರುವ ಪಕ್ಷಗಳು ಕೂಡ ಮುಖ್ಯಮಂತ್ರಿ ನಾನೆ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳಬಹುದು ಎಂದರೆ ಆದರ ಮೂಲಪುರುಷ ಕಾನ್ಸಿರಾಮ್ ರಾಜಕಾರಣ ಮಾದರಿ ಕೊನೆಗೆ ಉ.ಪ್ರ.ಬಿಹಾರ್,ಕರ್ನಾಟಕದ ಜೆಡಿಎಸ್ ಪಕ್ಷ ಕೂಡ ಅಲ್ಪಸ್ವಲ್ಪ ಶಾಸಕರು ಹೊಂದಿದ್ದರೂ ಕೂಡ ಮುಖ್ಯಮಂತ್ರಿ ಗಾದಿಯನ್ನು ಅನುಭವಿಸಲು ಸಾಧ್ಯವಾಗಿದೆ ಎಂದರೆ ಕಾನ್ಸಿರಾಮ್ ರಾಜಕಾರಣ ತಂತ್ರ ನೀತಿಗಳನ್ನು ಇವೆಲ್ಲವೂ ಪಕ್ಷಗಳು ಅವರು ನಾಯಕರು ಅನುಸರಿಸಿ ಅಧಿಕಾರ ಪಡೆದುಕೊಂಡರು.

ಕರ್ನಾಟಕದಲ್ಲಿ ಒಂದೂವರೆ ಕೋಟಿಗೂ ಅಧಿಕ
ಜನಸಂಖ್ಯೆ ಅಸ್ಪೃಶ್ಯರಾದ ದಲಿತ ವರ್ಗದವರು
ಇದ್ದಾರೆ ಹಾಗೂ ವಾಲ್ಮೀಕಿ, ಅಲ್ಪಸಂಖ್ಯಾತ,ಗೊಲ್ಲರ ಸಮುದಾಯ,ಮಡಿವಾಳ,ಉಪ್ಪಾರ,ಸವಿತಾ,ಇನ್ನಿತರ ಸಣ್ಣಪುಟ್ಟ ಸಮುದಾಯದವರು ಕೂಡಿಕೊಂಡು ಬಹುಜನ ಸಮಾಜದ ಚಳುವಳಿ ಮುನ್ನಡೆಸಿದರೆ ಕೇವಲ ಹತ್ತು ವರ್ಷಗಳಲ್ಲಿ ಒಬ್ಬ ಮುಖ್ಯಮಂತ್ರಿಯಾದರು ಆಗಬಹುದು.

ಆದರೆ ಈ ಸಮುದಾಯದವರು ಕೇವಲ ಹಲವು ಪಕ್ಷಗಳಿಗೆ ಮತಬ್ಯಾಂಕ್ ಆಗಿವೆ ಸ್ವಂತ ಅಧಿಕಾರ ಗದ್ದುಗೆ ಹಿಡಿಯಬಹುದು ಎನ್ನುವ ಆಶಭಾವನೆ ಕಳಕೊಂಡು ಕಮರಿ ಹೋಗಿವೆ ಆದರೆ ನಮ್ಮ ಮುಂದೆ ಇರುವ ಒಕ್ಕಲಿಗರ ಸಮುದಾಯದವರು ತಮ್ಮದೆ ಜಾತಿ ಜನಸಂಖ್ಯೆ ಇಟ್ಟುಕೊಂಡು ಪಕ್ಷ ಕಟ್ಟಿ ಎರಡು ಬಾರಿ ಮುಖ್ಯಮಂತ್ರಿ, ಒಂದು ಬಾರಿ ದೇಶದ ಪ್ರಧಾನಿ ಆದರೂ ಇದೇ ರೀತಿ ಸಂಘಪರಿವಾರದ ಪೋಷಕ ಪಾತ್ರದಲ್ಲಿ ವಹಿಸಿಕೊಂಡ ಲಿಂಗಾಯತರು ಸತತ ಮುಖ್ಯಮಂತ್ರಿ ಗಾದಿ ಅನುಭವಿಸುತ್ತಲೇ ಇದ್ದಾರೆ ಆದರೆ ಜನಸಂಖ್ಯೆನೆ ಇಲ್ಲದ ಬ್ರಾಹ್ಮಣರು ಎಲ್ಲಾ ಸಚಿವ ಸಂಪುಟದಲ್ಲಿ ನಾಲ್ಕು ಖಾತೆಯನ್ನು ಹೊಂದಬಹುದು.

ಈ ದಲಿತರಲ್ಲೆ ಬಲಾಡ್ಯ ಸಮುದಾಯಗಳಾದ,ವಾಲ್ಮಿಕಿ,ಮಾದಿಗರು,ಹೊಲೆಯರು, ಗಳು,ಮುಸ್ಲಿಂರು,ಸದಾಕಾಲವೂ BJP,CONG,ಪಕ್ಷಗಳು ಕಾಲಕೆಳಗೆ ಅಧಿಕಾರ ಪಡೆದು ತನ್ನದೆ ಸಮುದಾಯದ ಜನರ ಮೇಲೆ ದಿನ ನಿತ್ಯ ನಡೆಯುವ ದೌರ್ಜನ್ಯ ಹಿಂಸೆ ಕೊಲೆ ಅತ್ಯಾಚಾರ ಮಾಡುವುದನ್ನು ಕನಿಷ್ಟ ವಿರೋಧ ವ್ಯಕ್ತಪಡಿಸದಷ್ಟು ನಿಷ್ಪ್ರಯೋಜಕ ಅಸಹಾಯಕ ಜೀವಂತ ಸಮಾಧಿ ಆಗಿದ್ದಾರೆ.

ಕರ್ನಾಟಕದಲ್ಲಿ ಬಹುಸಂಖ್ಯಾತರಾದ ದಲಿತ,
ಅತಿ ಹಿಂದೂಳಿದ ವರ್ಗ,ಅಲ್ಪಸಂಖ್ಯಾತರು ಈ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ಅಧಿಕಾರದಿಂದ ವಂಚಿತ ಈ ಸಮುದಾಯಗಳು ಅಧಿಕಾರವನ್ನು ಹಿಡಿಯಬಹುದು ಏಕೆಂದರೆ ಈ ಚಳವಳಿ ಮರೆಮಾಚಿದ ಇತಿಹಾಸವನ್ನು ಪೂರ್ವಿಕರು ಬಗ್ಗೆ ತನ್ನ ಚಳವಳಿ ಭಾಗವಾಗಿ ತೆಗೆದುಕೊಂಡು ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಬಹುಜನ ಚಳುವಳಿ ನೇತೃತ್ವವನ್ನು ಅಹಿಂದ ವರ್ಗಕ್ಕೆ ಕೈಗೆ ಕೊಟ್ಟು ತ್ಯಾಗ ಮನೋಭಾವ ಇಟ್ಟುಕೊಂಡು ರಾಜಕಾರಣ ಯುದ್ಧನೀತಿ ನಿರೂಪಿಸಿದರೆ ಅನೇಕ ಸಣ್ಣಪುಟ್ಟ ಅಧಿಕಾರ ವಂಚಿತ ಸಮುದಾಯಗಳು ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರೆ
ಈ ರಾಜ್ಯದ ಸುಧಾರಣೆ ಕಾಣಲು ಸಾದ್ಯ ಜೊತೆಗೆ ಕಾನ್ಸಿರಾಂ ಜೀ ಅವರ ರಾಜಕೀಯ ವಿಚಾರಧಾರೆ ಪ್ರಸ್ತುತ ರಾಜಕಾರಣದಲ್ಲಿ ಸಮೀಕರಣವನ್ನು ಬಳಸಿಕೊಂಡು ಒಂದು ಅದ್ಭುತ ಯಶಸ್ಸನ್ನು ದಾಖಲಿಸಬಹುದು ಸಕ್ಸಸ್ ಮಾದರಿ ರಾಜಕಾರಣ ಬಗ್ಗೆ ಹೆಚ್ಚು ಗಮನ ಹರಿಸಿದರೆ ಈ ಮಾದರಿ ರಾಜಕಾರಣ ಸಕ್ಸಸ್ ಆಗಬಹುದು.

-ಹನುಮೇಶ್ ಗುಂಡೂರು, ವಕೀಲರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕೆ.ಆರ್.ಐ.ಡಿ.ಎಲ್, ಮಾಯಕೊಂಡ ವ್ಯಾಪ್ತಿ ; 20 ಕೋಟಿ ಅನುದಾನ : ತನಿಖೆಗೆ ಒಳಪಡಿಸಲು ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಕೆ‌ಆರ್.ಐ.ಡಿ.ಎಲ್  ವಿಭಾಗ-2ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ದಾವಣಗೆರೆ ಜಿಲ್ಲೆ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬಿಡುಗಡೆಯಾದ ರೂ. 20 ಕೋಟಿ ಮೊತ್ತದ 51 ಕಾಮಗಾರಿಗಳನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಮಾಯಕೊಂಡ  ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿರುವ ರೂ. 20 ಕೋಟಿ ಅನುದಾನದಲ್ಲಿ ನಡೆದಿರುವ 51 ಕಾಮಗಾರಿಗಳ ಬಗ್ಗೆ ಅನುಮಾನ ಕಂಡುಬಂದಿದ್ದು, ಮಾಹಿತಿಹಕ್ಕು ಅಡಿಯಲ್ಲಿ ದಾಖಲೆ ಕೋರಿದಾಗ ಬಹುತೇಕ ಕಾಮಗಾರಿಗಳು ನಡೆದಿರುವುದಿಲ್ಲ ಎಂಬುದಾಗಿ ಹಿಂಬರಹ ನೀಡಿರುತ್ತಾರೆ. ಹೀಗಾಗಿ 51 ಕಾಮಗಾರಿಗೆ ಸಂಬಂಧಿಸಿದಂತೆ ನಿತೀನ್ ಎಸ್. ಜಾಧವ್, ಸಹಾಯಕ ಕಾರ್ಯಪಾಲಕ ಅಭಿಯಂತರು, ಕೆ.ಆರ್.ಐ.ಡಿ.ಎಲ್, ಮಾಯಕೊಂಡ ಇವರ ವಿರುದ್ಧ ಪ್ರಕರಣ ದಾಖಲಿಸಿ ರೂ. 20 ಕೋಟಿ ಮೊತ್ತದಲ್ಲಿ ನಡೆದಿರುವ 51 ಕಾಮಗಾರಿಗಳನ್ನು ನಿಯಮಾನುಸಾರ ತನಿಖೆಗೆ ಒಳಪಡಿಸುವಂತೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

Continue Reading

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ದಾವಣಗೆರೆ:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ನೀಡಿರುವ ಮುಂಬಡ್ತಿಯ ಸ್ಥಳ ನಿಯುಕ್ತಿಗೆ ಸಂಬAಧಿಸಿದ ಆನ್‌ಲೈನ್ ಕೌನ್ಸಿಲಿಂಗ್‌ನಲ್ಲಿ ಪಾರದರ್ಶಕತೆಯನ್ನು ಉಲ್ಲಂಘಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಅಡಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ಲೋಕಾಯುಕ್ತಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳನ್ನು ಸೇವಾ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಅರ್ಹ ದ್ವಿತೀಯ ದರ್ಜೆ ಸಹಾಯಕರ ವೃಂದದಿAದ ಮುಂಬಡ್ತಿ ಮೂಲಕ ಭರ್ತಿ ಮಾಡಲು ಮುಂದಾಗಿದ್ದು, ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ದಿನಾಂಕ: 12-11-2025 ರಂದು ಆನ್‌ಲೈನ್ ಕೌನ್ಸಿಲಿಂಗ್ ನಡೆಸಿ, ಸ್ಥಳ ನಿಯುಕ್ತಿ ಮಾಡಿ, ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಿಕೊಂಡ ಪ್ರಥಮ ದರ್ಜೆ ಸಹಾಯಕರ ಪಟ್ಟಿಯನ್ನು ಬಿಡುಗಡೆಗೊಸಲಾಗಿರುತ್ತದೆ.

ಆದರೆ ಕಾಲೇಜು ಶಿಕ್ಷಣ ಇಲಾಖೆಯಿಂದ ಹೊರಡಿಸಿರುವ ಪಟ್ಟಿಯಲ್ಲಿ ಆಯುಕ್ತರ ಕಛೇರಿ, ಬೆಂಗಳೂರು ಇಲ್ಲಿ 03 ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರ ಹುದ್ದೆಯನ್ನು ಗುರುತಿಸಲಾಗಿರುತ್ತದೆ. ಆದರೆ ಆದೇಶ ಪ್ರತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಮುಂಬಡ್ತಿಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿಗೆ ಆಯ್ಕೆ ಮಾಡಿಕೊಂಡಿರುವ 10 ಅಭ್ಯರ್ಥಿಗಳಲ್ಲಿ 05 ಅಭ್ಯರ್ಥಿಗಳನ್ನು ದ್ವಿತೀಯ ದರ್ಜೆ ಸಹಾಯಕರಿಂದ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಮುಂಬಡ್ತಿ ನೀಡಿ ಯಥಾ ಪ್ರಕಾರ ಮುಂದುವರೆಸಲಾಗಿರುತ್ತದೆ.

ಹೀಗಾಗಿ ಸದರಿ ಮುಂಬಡ್ತಿ ಪ್ರಕ್ರಿಯೆಯು ನಿಯಮಬಾಹಿರವಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿ 10 ತಿಂಗಳು ಕಳೆಯುತ್ತ ಬಂದರೂ ಯಾವುದೇ ಕ್ರಮ ಕೈಗೊಳ್ಳದ ಕಾಲೇಜು ಶಿಕ್ಷಣ ಇಲಾಖೆಯ ಹಿಂದಿನ ಆಯುಕ್ತೆ ಮಂಜುಶ್ರೀ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಖುಷ್ಬೂ ಗೋಯಲ್ ಚೌದರಿ ವಿರುದ್ಧ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending