Connect with us

ದಿನದ ಸುದ್ದಿ

ಸಂತೇಬೆನ್ನೂರು | ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ ಎನ್. ಅವರಿಗೆ ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಭಿನಂದನಾ ಕಾರ್ಯಕ್ರಮ

Published

on

ಹಿರಿಯ ಕಿರಿಯ ಅಧಿಕಾರಿಗಳು ಹಾಗೂ ಕುಟುಂಬದವರ ಸಹಕಾರ ಮತ್ತು ಸ್ವಂತ ಜ್ಞಾನವೆ ಕಾರಣ ಡಿವೈಎಸ್ಪಿ ಪ್ರಶಾಂತ್ ಜಿ ಮುನ್ನೂಳಿ ಅಭಿಮತ 

ಸುದ್ದಿದಿನ,ಚನ್ನಗಿರಿ/ಸಂತೇಬೆನ್ನೂರು:ಕುಟುಂಬಸ್ಥರ ಹಾಗೂ ಸಹಪಾಠಿ ಸ್ನೇಹಿತರನ್ನೊಳಗೊಂಡು ತಾನು ಓದಿದ ಶಾಲೆಯಲ್ಲಿ ಗ್ರಾಮಸ್ಥರಿಂದ ಸನ್ಮಾನವನ್ನು ಸ್ವೀಕರಿಸುವುದು ಅತ್ಯಂತ ಉನ್ನತ ಮಟ್ಟದ ಸನ್ಮಾನವಾಗಿದೆ, ಇದಕ್ಕಿಂತ ದೊಡ್ಡ ಸನ್ಮಾನ ಬೇರೊಂದಿಲ್ಲ ಎಂದು ಚನ್ನಗಿರಿ ಉಪವಿಭಾಗದ ಉಪಾದೀಕ್ಷರಾದ ಪ್ರಶಾಂತ್ ಜಿ ಮುನ್ನೂಳಿರವರು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರಪತಿ ಪದಕ ಪ್ರಶಸ್ತಿ ಪಡೆಯಲು ಹಿರಿಯ -ಕಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸ್ವಂತ ಕುಟುಂಬದವರ ಸಹಕಾರ ಹಾಗೂ ಸ್ವಂತ ಜ್ಞಾನೇ ಕಾರಣ ಎಂದರು.

ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚನ್ನಗಿರಿ ತಾಲೂಕಿನ ಸಂತೇಬೆನ್ನೂರು
ಗ್ರಾಮದವರಾದ ಎಮ್,ಎನ್ ರುದ್ರಪ್ಪ ನಿವೃತ್ತ
ಪೋಲೀಸ್  ಉಪ ಆಯುಕ್ತರು ಸಂತೇಬೆನ್ನೂರು ಇವರು ಇತ್ತೀಚಿಗೆ ರಾಷ್ಟ್ರಪತಿ ಪದಕ  ಸ್ವೀಕರಿಸಿದ್ದರು.

ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪುರಸ್ಕೃತರಿಗೆ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು. ಇಲಾಖೆಯ ಮೇಲಾಧಿಕಾರಿಗಳಿಂದ ಸಿಗುವ ಪ್ರಶಸ್ತಿಗಳು ದೊರೆತರೆ ತುಂಬಾನೆ ಖುಷಿ ಪಡುತ್ತೇವೆ ರಾಷ್ಟ್ರಪತಿಗಳ ಪದಕ ದೊರೆಯುವುದು ಸಾಕಷ್ಠು ಶ್ರಮ ಬೇಕಾಗುತ್ತದೆ.

ಸಂತೇಬೆನ್ನೂರು ಗ್ಯಾಲಕ್ಸಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರು ವಿಶೇಷತೆಯನ್ನೊಳಗೊಂಡಿದ್ದವರಾಗಿದ್ದಾರೆ, ಇಲ್ಲಿನ ಪ್ರತಿಭೆಗಳು, ವ್ಯಕ್ತಿತ್ವಗಳು, ಸಾಧನೆಗಳು ಹಾಗೂ ಐತಿಹಾಸಿಕ ಕೊಡುಗೆಗಳು ಮತ್ತು ಈ ಊರಿನ ಜನರು ವಿಶೇಷತೆಯುಳ್ಳವರಾಗಿದ್ದಾರೆ. 15 ದಿನಗಳೊಳಗೆ ಇಲಾಖೆಯ ಸಹಕಾರದೊಂದಿಗೆ ಸಾರ್ವಜನಿಕ ಕಾರ್ಯಕ್ರಮ ರೂಪಿಸಲು ಗ್ಯಾಲಕ್ಸಿ ತಂಡದ ಸದಸ್ಯರಿಗೆ ಈ ಸಂದರ್ಭದಲ್ಲಿ ಸೂಚಿಸಿದರು.

ನಿವೃತ್ತ ಎ,ಸಿ,ಪಿ ರುದ್ರಪ್ಪ ಎಂ,ಎನ್ ನನ್ನ ಗುರುಗಳು  ಸಿ,ಪಿ,ಐ ಆರ್.ಆರ್. ಪಾಟೀಲ್ .
1978-79 ರಲ್ಲಿ ನಾನು ಧಾರಾವಾಡದ ವಿಧ್ಯಾರಣ್ಯ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ರುದ್ರಪ್ಪ ಎಮ್ ಎನ್ ಧೈಹಿಕ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು ಇವರು ಕ್ರೀಡಾಪಟುವಾಗಿ ಉನ್ನತ ಶಿಖರದಲ್ಲಿದ್ದರು, ಇವರ ಆಟದ ವೈಖರಿಯನ್ನ ನನ್ನ ಜೀವನದಲ್ಲಿ ಅಳವಡಿಸಿಕೊಂಡು ನಾನೊಬ್ಬ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲಿಕ್ಕೆ ಇವರ ಹಿತನುಡಿಗಳು , ನನ್ನ ಜೀವನದಲ್ಲಿ ಪರಿಣಾಮ ಬೀರಿದೆ ನನ್ನ ಗುರುಗಳ ಜನನ ಸ್ಥಳದಲ್ಲಿ ನಾನು ವೃತ್ತ ನಿರೀಕ್ಷಕನಾಗಿ ಸೇವೆ ಸಲ್ಲಿಸಲ್ಲಿಸುತ್ತಿರುವುದು ನನಗೆ ತುಂಭಾ ಹೆಮ್ಮೆಎನಿಸುತಿದೆ ಎಂದರು.

ಮುಖ್ಯಮಂತ್ರಿ ಪದಕ ಪ್ರಶಸ್ತಿ ವಿಜೇತರಾದ ಚನ್ನಗಿರಿ ವೃತ್ತ ನಿರೀಕ್ಷಕರಾದ ಆರ್ ಆರ್ ಪಾಟೀಲ್ ಮಾತನಾಡಿದರು. ನಂತರ ಸಂತೇಬೆನ್ನೂರು ಪಿಎಸ್ಐ ಎಸ್ ಎಸ್ ಮೇಟಿ ಮಾತನಾಡಿ ಸಂತೇಬೆನ್ನೂರು ಪೋಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಸೇವೆ ಸಲ್ಲಿಸುತ್ತಿರುವುದು ನನ್ನ ಭಾಗ್ಯವಾಗಿದೆ ಎಂದರು. ಇಲ್ಲಿನ ಜನರ ಪ್ರೀತಿ ವಿಶ್ವಾಸ ಪ್ರೋತ್ಸಹ ಶ್ಲಾಘನೀಯವಾದುದು.

ಇಲ್ಲಿನ ಜನ ಶ್ರೇಯೋಬಿವೃದ್ದಿಗೆ ಗ್ಯಾಲಕ್ಸಿ ಟೀಮ್ ಹಾಗೂ ತಂಡ ಇಲಾಖೆಯೊಂದಿಗೆ ಸಹಕರಿಸಿರುತ್ತಾರೆ ಸಂತೇಬೆನ್ನೂರು ವಾಲಿಬಾಲ್ ಆಟದ ತವರೂರಾಗಿದೆ. ನೋಬೆಲ್ ಸನ್ಮಾನಕ್ಕಿಂತ ದೊಡ್ಡದಾದ ಹುಟ್ಟೂರಲ್ಲಿ ಕುಟುಂಬಸ್ಥರ ಜೊತೆ  ಸನ್ಮಾನ ಸ್ವಿಕರಿಸಿರು ಅತ್ಯುನ್ನತವಾಗಿದ್ದು ಬೆಳೆಯುವ ನಮ್ಮಂತ ಕಿರಿಯ ಅಧಿಕಾರಿಗಳಿಗೆ ನಿಮ್ಮ ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿರೇಶ್ ಪ್ರಸಾದ್ ಕೆಎಸ್.ಪ್ರಜಾವಾಣಿ ವರದಿಗಾರರು ವಹಿಸಿ ಪ್ರಸ್ತಾವಿಕ ನುಡಿಯನ್ನು ನುಡಿದರು,  ಚಂದ್ರಶೇಖರ್ ಲೋಕಯುಕ್ತ ಡಿವೈಎಸ್ಪಿ ಗಂಗಾವತಿ, ಬಾಷಾ. ಅಬ್ದುಲ್ ರೆಹಮಾನ್ ನಿ,ಪೋಲೀಸ್ ಅಧೀಕ್ಷರು,ಬಸವರಾಜ ಮುಖಂಡರು. ಮೋಹನ್ ಕುಮಾರ್ ಪೋಲೀಸ್ ಉಪನಿರೀಕ್ಷಕರು ಮಾಯಕೊಂಡ. ಸಿದ್ದಪ್ಪ ಎಂ ಗ್ರಾಮದ ಹಿರಿಯ ಮುಖಂಡರು, ರಂಗನಾಥ್ ಜೆ, ಶಿವರುದ್ರಪ್ಪ .ಏಜೀಜ್ ಅಹಮದ್. ಮಹೇಶ್. ಗ್ರಾಮಸ್ಥರು ಮುಖಂಡರು,ಗ್ಯಾಲಕ್ಸಿ ತಂಡದ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  • ಪ್ರಶಸ್ತಿ ವಿಜೇತ ನಿವೃತ್ತ ಎ.ಸಿ.ಪಿ ರುದ್ರಪ್ಪ ಎಮ್ .ಎನ್ ಮಾತು

ಸನ್ಮಾನ ಸ್ವೀಕರಿಸಿ ಮನದಾಳದ ಮಾತನಾಡಿದ  ರಾಷ್ಟ್ರಪತಿ ಪದಕ ಪ್ರಶಸ್ತಿ  ವಿಜೇತ ನಿವೃತ ಎ,ಸಿ,ಪಿ, ರುದ್ರಪ್ಪ ಎಮ್,ಎನ್ ನಾನು ಪೋಲಿಸ್ ಇಲಾಖೆಯ ವೃತ್ತಿಯಿಂದ ನಿವೃತ್ತಿ ಹೊಂದಿದಾಗ ಪುನಃ ನಾಲ್ಕು ದಿನಗಳ ವರೆಗೆ ಪೋಲೀಸ್ ಸಮವಸ್ತ್ರ ದರಿಸುವ ಬಾಗ್ಯ ಎಲ್ಲರಿಗೂ ಸಿಗುವುದಿಲ್ಲಾ ಇದು ನನ್ನ ಅದೃಷ್ಠ, ಇದಕ್ಕೆ ಕಾರಣ ನನ್ನ ತಂದೆ ತಾಯಿಗಳ ಆಶೀರ್ವಾದವೆ ಕಾರಣ ಎಂದರು.

ನನ್ನ ಸ್ನೇಹಿತರ ಜೊತೆ ಸೇರದೆ ಇದ್ದರೆ  ನಾನು ಎಸ್ ಎಸ್ ಎಲ್ ಸಿ ವರೆಗೆ ಅಷ್ಟೇ ವಿಧ್ಯಾಭ್ಯಾಸಕ್ಕೆ ಕೊನೆಗೊಳ್ಳುತಿತ್ತು. ಈ ಪ್ರಶಸ್ತಿಗೆ ಮೇಲಾಧಿಕಾರಿಗಳ ಮಾರ್ಗದರ್ಶನ, ಸಹದ್ಯೋಗಿಗಳ ಸಹಕಾರ ಇರದೆ ಎನನ್ನು ಸಾದಿಸಲಾಗುವುದಿಲ್ಲಾ. ನನ್ನ ವೃತ್ತಿಯ ಜೀವನದಲ್ಲಿ ಸಮಸ್ಯೆಗಳಿರುವ ಸ್ಥಳಗಳಿಗೆ ವರ್ಗಾಹಿಸುತಿದ್ದರು.

ನಾನು ಯಾವುದಕ್ಕೂ ಅಂಜದೆ ಕರ್ತವ್ಯವನ್ನು ನಿರ್ವಹಿಸುತ್ತ ಬಂದಿದ್ದೇನೆ, ನನ್ನ ಮಡದಿ ನನ್ನ ವರ್ಗ ಆದ ಕೂಡಲೆ ಲಗೇಜ್ ಕಟ್ಟಿ ಕಟ್ಟಿ ತುಂಬಾನೆ ನೊಂದಿದ್ದಾರೆ ಎಂದರು. ಕರ್ತವ್ಯೆವನ್ನು ನಿರ್ವಹಿಸಿದ್ದ ಸ್ಥಳಗಳ ಬಗ್ಗೆ ಈ ಸಂದರ್ಭದಲ್ಲಿ ಮೆಲುಕು ಹಾಕಿದರು.


ಸುದ್ದಿದಿನ.ಕಾಂ|ವಾಟ್ಸಾಪ್|9980346243 

ದಿನದ ಸುದ್ದಿ

ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.

ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ

Published

on

ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. www.eci.gov.in/candidate-politicalparty ವೆಬ್‌ಸೈಟ್‌ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.

ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿತ್ತು.

ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್‌ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ

Published

on

ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.

ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.

ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending