Connect with us

ಬಹಿರಂಗ

‘ಸನಾತನ ಧರ್ಮ’ದ ವಿರುದ್ದ ಬಂಡೆದ್ದ ಬಸವಣ್ಣ..!

Published

on

 

ಕುರಿ ಕೋಳಿ ಕಿರಿಮೀನು ತಿಂಬುವರಿಗೆಲ್ಲ ಕುಲಜ ಕುಲಜರೆಂದಂಬರು.
ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು‌.
ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?.
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು.
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಗೆ ಶೋಭಿತವಾಯಿತು.
ಅದೆಂತೆಂದಡೆ;
ಸಿದ್ದಲಿಕೆಯಾಯಿತು,
ಸಗ್ಗಳೆಯಾಯಿತು.
ಸಿದ್ದಲಿಕೆಯ ತುಪ್ಪವನು,ಸಗ್ಗಳೆಯ ನೀರನು
ಶುದ್ದವೆಂದು ಕುಡಿವ ಬುದ್ದಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ;
ಉರಿಲಿಂಗಪೆದ್ದಿಗಳ ಅರಸು ಒಲ್ಲನವ್ವಾ.

ಹನ್ನೆರಡನೆಯ ಶತಮಾನದ ಬಸವಣ್ಣನ ಸಮಕಾಲಿನಳಾದ ಶರಣೆ ಬಂಡಾಯಗಾರ್ತಿ ಉರಿಲಿಂಗಪೆದ್ದಿಗಳ ಪುಣ್ಯ ಸ್ತ್ರೀ
ಕಾಳವ್ವೆಯ ಈ ವಚನ ಬ್ರಾಹ್ಮಣರು ನಿರ್ಮಿಸಿದ ಸನಾತನ ಅಮಾನುಷ ಪರಂಪರೆಯ ಜಾತಿ ಸಂಕುರವನ್ನು ಪುಡಿಮಾಡುತ್ತಾದೆ.
ಒಬ್ಬ ಕೆಳ ಜಾತಿಯ ದಲಿತ ಮಹಿಳೆ ಈ ರೀತಿಯ ಜಾತಿಯನ್ನೆ ಪ್ರಶ್ನಿಸುತ್ತಾಳೆ ಎಂದರೆ ಅವತ್ತಿನ ಆ ಕಾಲದ ಚಳುವಳಿಯ ಧೈರ್ಯವನ್ನ ಮೆಚ್ಚಲೆಬೇಕಾಗುತ್ತದೆ.

ಇಡೀ ವಿಶ್ವದಲ್ಲೆ ಮೊತ್ತ ಮೊದಲು ಕಾಯಕಜೀವಿಗಳು.ಗುಲಾಮರು.ಮಹಿಳೆಯರು.ಶ್ರಮಿಕರು. ದಲಿತರು.ಹಿಂದುಳಿದವರು ಧೈರ್ಯದಿಂದ ಮಾತನಾಡಿದ್ದು.ಬರೆದಿದ್ದು.
ಪ್ರತಿರೋಧವನ್ನು ಒಡ್ಡಿದ್ದು ಎಂದರೆ ಹನ್ನೆರಡನೆ ಶತಮಾನದ ಬಸವಾದಿ ಶರಣರ ಕಲ್ಯಾಣ ರಾಜ್ಯದಲ್ಲಿ.

ಜಾತಿಯ ತಳಪಾಯದಿಂದ ನಿಂತಿರುವ ಹಿಂದುಧರ್ಮದಲ್ಲಿ ಕುರಿ.ಕೋಳಿ.ಮೀನು.
ತಿನ್ನುವರನ್ನು ಸ್ವಲ್ಪ ಶ್ರೇಷ್ಠ ಜಾತಿಗಳೆನ್ನುತ್ತಾರೆ.ಆದರೆ ಶಿವನಿಗೆ ಪಂಚಾಮೃತ ಕೊಡುವ ಗೋವು ತಿಂದರೆ ಕೀಳುಮಾದಿಗ ಎನ್ನುವರು ಎಂದು ಬಂಡಾಯ ಸಾರುತ್ತಲೆ ಇಂತಹ ಕಟ್ಟುಪಾಡನ್ನು ಹೇರಿದ ಬ್ರಾಹ್ಮಣರ ಪಾಂಡಿತ್ಯಕ್ಕೆ ದಿಕ್ಕಾರ ಹೇಳುತ್ತಾಳೆ.
ಪ್ರಸ್ತುತ ದಿನಗಳಲ್ಲಿ ಗೋಹತ್ಯೆಯ ಹೇಸರಿನಲ್ಲಿ ಮುಗ್ದ ಅಮಾಯಕ ದಲಿತ ಹಾಗು ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯಗೈಯ್ಯುವ ಮನುವಾದಿಗಳ ಮರ್ಮಕ್ಕೆ ಈ ವಚನ ಕೊಡಲಿ ಏಟು ಹಾಕುತ್ತದೆ.

ಶರಣರ ಕಾಲವೆಂದರೆ ಇಡೀ ಪ್ರಪಂಚದಲ್ಲಿ ಮೊತ್ತಮೊದಲು ಸಮಾನತೆ.ಸ್ವಾತಂತ್ರ್ಯ. ಸಹೋದರತೆ ಎಂಬ ತತ್ವಗಳು ತಲೆ ಎತ್ತಿದ ಕಾಲ.ಅಂದರೆ ಎಲ್ಲಾ ದೇಶಗಳಿಗಿಂತ ಮೊದಲು ಕಾಯಕ ವರ್ಗ ಸಮಾನತೆಗಾಗಿ ಒಂದೆಡೆ ಸೇರಿ ವೈಚಾರಿಕ ವೈಜ್ಞಾನಿಕವಾಗಿ ಸತ್ಯವನ್ನ ಶೋಧಿಸುತ್ತಲೇ ಅಮಾನವೀಯ ಜಾತಿವ್ಯವಸ್ಥೆ ಅಸಮಾನತೆಯ ವರ್ಣವ್ಯವಸ್ಥೆ ಅಜ್ಞಾನದ ಲಿಂಗ ತಾರತಮ್ಯ ಅವಿವೇಕದ ಮೌಡ್ಯಕಂದಚಾರಗಳಂತ ಬ್ರಾಹ್ಮಣರು ಸ್ಥಾಪಿಸಿದ್ದ ವಿಷವರ್ತುಲ ವ್ಯವಸ್ಥೆಯ ವಿರುದ್ದ ಚಳುವಳಿ ಮಾಡಿದ ಕ್ರಾಂತಿಕಾರಿ ದಿನಗಳವು.

ವೇದ ನಡುಗಿಸಿ ಶಾಸ್ತ್ರಕ್ಕೆ ನಿಗಳವನಿಕ್ಕಿದ ಬಸವಣ್ಣ ನೇರವಾಗಿ ಬ್ರಾಹ್ಮಣರ ಸನಾತನ ಸಂಪ್ರದಾಗಳನ್ನು ವಿರೋದಿಸುತ್ತಿದ್ದ ಅನುತ್ಪಾದಕರಾದ ಅಲ್ಪಸಂಖ್ಯಾತ ಬ್ರಾಹ್ಮಣರು ಉತ್ಪಾದಕವರ್ಗದ ಬಹುಸಂಖ್ಯಾತ ಶೂದ್ರರ ಮೇಲೆ ನಡೆಸುವ ಶೋಷಣೆಯನ್ನು ಖಂಡಿಸುತಿದ್ದರು. ಸೂಕ್ಮಮತಿಗಳಾದ ಬಸವಣ್ಣನವರು ಶೋಷಣೆಯ ವಿವಿಧ ಮೂಲಗಳನ್ನು ಅರಿತು ಬಹಳ ಎಚ್ಚರಿಕೆಯಿಂದ ಕಾಯಕ ಪರಂಪರೆಯ ಶ್ರಮಿಕರ ಬೆವರಿನ ಚಳುವಳಿಯನ್ನು ಆರಂಭಿಸಿದರು.ಬಸವಾದಿ ಶರಣರ ಚಳುವಳಿಯೆಂದರೆ ಶೂದ್ರಾತಿಶೂದ್ರ ಸಮುದಾಯಗಳು ಒಂದಾಗಿ ಮನುಷ್ಯತ್ವದ ಉಳಿವಿಗಾಗಿ ಮಾಡಿದ ದೊಡ್ಡ ಚಳುವಳಿಯಾಗಿದೆ. ಈ ಸತ್ಯವನ್ನು ಪ್ರತಿಯೊಬ್ಬರಿಗು ಅರ್ಥಮಾಡಿಸಬೇಕಿದೆ.

ಯುರೋಪಿನಲ್ಲಿ ಬಂಡವಾಳ ಶಾಹಿವ್ಯವಸ್ಥೆ ಜನ್ಮ ತಾಳಿದ್ದು 13 ನೇ ಶತಮಾನದಲ್ಲಿ.18ನೇಶತಮಾನದಲ್ಲಿ ಯೋರೋಪಿನ ಕೆಲವು ರಾಷ್ಟ್ರಗಳಲ್ಲಿ ಔದ್ಯೋಗಿಕ ಕ್ರಾಂತಿಯ ನಂತರ ಸಂಘಟಿತ ದುಡಿಯುವ ವರ್ಗ ರೂಪಗೊಂಡಿತು.ಕಾರ್ಲ್ ಮಾರ್ಕ್ .ಪ್ರೆಡೆರಿಕ್ ಎಂಗೆಲ್ಸ್ ಮುಂತಾದ ತತ್ವಜ್ಞಾನಿಗಳು ಶ್ರಮಿಕರ ಕಾಯಕಜೀವಿಗಳ ಹಾಗು ದುಡಿತುವ ವರ್ಗಗಳ ತತ್ವ ಸಿದ್ದಾಂತವನ್ನು ವೈಜ್ಞಾನಿಕವಾಗಿ ಬರೆದದ್ದು 19ನೇ ಶತಮಾನದಲ್ಲಿ.
ಅಲ್ಲದೆ ಬಂಡವಾಳಶಾಹಿಗಳ ವಿರುದ್ದ ಕಾರ್ಮಿಕರು ಹೋರಾಡುವ ಹಾಗು ಅಥವಾ ಉಳ್ಳವರು ಹಾಗು ಇಲ್ಲದವರ ನಡುವೆ ನಡೆದ ಅನೇಕ ಚಳುವಳಿಗಳು ಸಹ 19ನೇ ಶತಮಾನದಲ್ಲಿ.

ಆದರೆ ದುಡಿಯದೆ ಕಾಲಹರಣಮಾಡುತ್ತಾ ಹೋಮ.ಹವನ.ಯಜ್ಞ.
ಯಾಗಗಳೆಂಬ ಮೌಡ್ಯಕಂದಾಚಾರಗಳ ಮೂಲಕ ಜನರಲ್ಲಿ ಭಯಹುಟ್ಟಿಸಿ ವಸೂಲಿ ಮಾಡುತಿದ್ದ ಸಮುದಾಯದ ವಿರುದ್ದ ದುಡಿಯುವ ಕಾಯಕ ವರ್ಗ ಹೋರಾಡಿದ್ದು ಬಸವಣ್ಣನ ನೇತೃತ್ವದಲ್ಲಿ. ಸಮಾಜದ ಕಟ್ಟಕಡೆಯಲ್ಲಿ ಅಸ್ಪೃಶ್ಯತೆಗೊಳಗಾದ ದಲಿತಸಮುದಾಯಗಳಿಂದ ಹಿಡಿದು ಎಲ್ಲಾ ಕಾಯಕಜಾತಿಗಳನ್ನುಒಂದುಗೂಡಿಸಿ”ಕಾಯಕವೆ ಕೈಲಾಸ “ದ ತತ್ವದೊಂದಿಗೆ ಹೊಸಕ್ರಾಂತಿಗೆ ಮುನ್ನುಡಿ ಬರೆದ ವಿಶ್ವದ ಮೊದಲಿಗ ಎಂದರೆ ಬಸವಣ್ಣ.ಇಂತ ಕಾಯಕ ಗುಂಪಿನ ನಾಯಕನಾದ ಬಸವಣ್ಣ ಶತಶತಮಾನದಿಂದ ನೊಂದಬೆಂದ ಜನರಿಗೆ ನಗುವಾಗುತ್ತಾನೆ.
ಬಸವಣ್ಣನ ಈ ಕಾಯಕ ಚಳುವಳಿ ಅನೇಕ ಮಹತ್ತರವಾದ ಹೊಸಹೊಸ ಪರಿವರ್ತನೆಗೆ ಹಾಗು ವೈಚಾರಿಕ ಚಿಂತನೆಗೆ ಪ್ರಥಮ ಪ್ರಾಶಸ್ತ್ಯ ಕೊಡುತ್ತದೆ.

ಜಾತಿಸಂಕೋಲೆಗಳಿಂದ ಸಮಾನ ಹಕ್ಕುಗಳನ್ನು ಪಡೆಯುವ. ಛಿದ್ರಛಿದ್ರಗೊಂಡಿರುವ ವಿವಿಧ ಕಾಯಕ ಜಾತಿಗಳ ನುಡುವೆ ಒಗ್ಗಟ್ಟು.ಕಷ್ಟಸುಖದಲ್ಲಿ ಭಾಗಿಯಾಗುವ ಮಾನವೀಯಗುಣ. ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವಂತ ಏಕದೇವ ಪ್ರಜ್ಞೆ. ಜ್ಞಾನದ ವೃದ್ದಿಗೆ ಅಕ್ಷರದ ಅರಿವು.ಸ್ತ್ರೀ ಪುರುಷ ಸಮಾನ.ಕಾಯಕ ಸಿದ್ದಾಂತಗಳೆಂಬ ಬದುಕಿನ ವಿಧಾನಗಾಳ ಮೌಲ್ಯವನ್ನು ಈ ಶರಣ ಚಳುವಳಿ ಕೊಡುತ್ತದೆ.

ಅಸ್ಪೃಶ್ಯ ಬಡವನಾಗಿ ಹುಟ್ಟುವುದು ಜನ್ಮಜನ್ಮದ ಮಹಾಪಾಪ ಎಂದು ಹೇಳುವ ವೈದಿಕರಿಗೆ ಬಸವಣ್ಣ” ಮನೆ ನೋಡ…ಬಡವರ ಮನ ನೋಡ..ಘನ ಕೂಡಲಸಂಗನಶರಣರು ಸ್ವತಂತ್ರಧೀರರು”ಎಂದು ಶೋಷಿತರ ಎದೆಯೊಳಗೆ ಸ್ವಾಭಿಮಾನ ಬಿತ್ತಿ ಶೋಷಣೆಯ ಅರಿವನ್ನು ಶರಣರಿಗೆ ಸಾರಿಹೇಳುತ್ತಾರೆ.

ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಾಲುಸಾಲಾಗಿ ಹತ್ಯೆಗಳಾಗುತ್ತಿವೆ.ಆದರೆ ಬಸವಣ್ಣ ಹನ್ನೆರಡನೆಯ ಶತಮಾನದಲ್ಲಿ “ಅನುಭವ ಮಂಟಪ” ನಿರ್ಮಿಸಿ ಪ್ರತಿಯೊಬ್ಬರ ಅನುಭವ ಹಾಗು ಅಭಿವ್ಯಕ್ತಿ ಗೌರವಯುತವಾದದ್ದು.ಎಲ್ಲಾರು ಅನಭವ ಮಂಟಪದಲ್ಲಿ ಜಾತಿಎಲ್ಲೆಯಿಲ್ಲದೆ. ಮೇಲುಕೀಳೆನ್ನದೆ.ಬಡವಬಲ್ಲಿದ. ಸ್ತ್ರೀ ಪುರುಷ ಎಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರೂ ಸಮಾಜಲ್ಲಿ ಬೇರೊರಿದ್ದ ಕಂದಾಚಾರ ಮೌಡ್ಯವನ್ನು ವಿರೋಧಿಸುತ್ತಾ ಸನಾತನವಾದಿಗಳ ಪೈಶಾಚಿಕ ರೀತಿನೀತಿಗಳನ್ನು ತಮ್ಮ ವಚನದ ಮೂಲಕ ಕಟುವಾಗಿ ಟೀಕಿಸುತಿದ್ದರು.

“ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅನುಭವ ಮಂಟಪ ನಿರ್ಮಿಸಿದ ಬಸವಣ್ಣ ಅದರ ಇಡೀ ನಾಯಕತ್ವವನ್ನು ತಳಸಮುದಾಯಗಳಿಗೆ ನೀಡುತ್ತಾನೆ. 770 ಪ್ರತಿನಿಧಿಗಳು (ಶರಣರು) ಇದ್ದ ಈ ಅನುಭವ ಮಂಟಪ ಒಂದು ರೀತಿಯಲ್ಲಿ ವಿಶ್ವದ ಮೊದಲನೆ ಪಾರ್ಲಿಮೆಂಟ್ ಆಗಿ ಕಂಡುಬರುತ್ತದೆ.ಅನುಭವ ಮಂಟಪದ ಶೂನ್ಯ ಪೀಠಾಧ್ಯಕ್ಷಾರದ ಅಲ್ಲಮ ಪ್ರಭಗಳು(ದಲಿತ) ಮೊದಲ ಸ್ಪೀಕರ್ ಆಗಿ ಕಾಣುತ್ತಾರೆ.ಅಲ್ಲಿ ಅಕ್ಕಮಹಾದೇವಿ. ಗಂಗಾಂಬಿಕೆ.ನೀಲಾಂಬಿಕೆ.ಸೂಳೆಸಂಕವ್ವ.ದಾನಮ್ಮ.ಕಲ್ಯಾಣವ್ವ.ಆಯ್ದಕ್ಕಿ ಲಕ್ಕಮ್ಮ.ಸತ್ಯಕ್ಕ.ಮುಂತಾದ ಮಹಿಳಾ ಶರಣೆಯರು.ಮಾದರ ದೂಳಯ್ಯ .ಮಡಿವಾಳ ಮಾಚಯ್ಯ.ಸಮಗಾರ ಹರಳಯ್ಯ.ಚನ್ನಬಸವಣ್ಣ.
ಡೋಹಾರ ಕಕ್ಕಯ್ಯ.ಅಜಗಣ್ಣ.ಕುರಬರ ಬೊಮ್ಮಣ್ಣ.ಬ್ರಾಹ್ಮಣರ ಮದುವರಸ.ನೂರಾರು ಜಾತಿಯ ಶರಣರು ಒಂದೆಡೆ ಸೇರಿ ತಮ್ಮ ಕಾಯಕನಿರತ ಅನಭವಗಳು ಹಾಗು ಸಮಾಜದ ಅಂಕುಡೊಂಕು. ದೇಶದ ಸಮಸ್ಯೆಗಳು ಅವುಗಳಿಗೆ ಪರಿಹಾರಗಳನ್ನು ಸೂಚಿಸುತ್ತ ಅಧಿವೇಶನದಲ್ಲಿ ಚರ್ಚಿಸುತಿದ್ದರು.

ಮಹಿಳೆಯರಿಗೆ ಮೊದಲು ವಿಶ್ವದಲ್ಲೆ ರಾಜಕೀಯ ಪ್ರಜ್ಞೆ ಹಾಗು ಸಮಾನತೆ ಸ್ವಾತಂತ್ರ್ಯಗಳನ್ನು ನೀಡಿದ ಏಕೈಕ ವ್ಯಕ್ತಿ ಬಸವಣ್ಣ.ಅಲ್ಲದೆ ಶ್ರಮಿಕವರ್ಗವನ್ನು ಒಂದೆಡೆ ಸೇರಿಸಿ ವೈಜ್ಞಾನಿಕ ಕ್ರಾಂತಿಗೆ ಅನುಗೊಳಿಸಿದ ವಿಶ್ವದ ಮೂದಲ ಸಂಘಟಕ ಬಸವಣ್ಣ .

ಬಸವಣ್ಣ ವಯಸ್ಕರ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದಿರುವುದು ಕೆಲವು ತಳಸಮುದಾಯಗಳು ಶರಣರು ಅನುಭವ ಮಂಟಪದಲ್ಲಿ ಅಕ್ಷರ ಕಲಿತು ವಚನಗಳ ರಚನೆಗೆ ಮುಂದಾಗುತ್ತಾರೆ. ಅಲ್ಲದೆ ದಲಿತರಿಗು ಮಹಿಳೆಯರಿಗು ಅಕ್ಷರದ ಅರಿವು ನೀಡುತಿದ್ದ ಬಸವಣ್ಣ ಜ್ಞಾನಕ್ಕೆ ಜಾತಿಭೇಧವಿಲ್ಲ ಎಂಬ ಮಾತನ್ನು ಸಾಬೀತು ಮಾಡಿದ್ದರು.ಹಾಗಾಗಿ ಬಹುಸಂಖ್ಯಾತ ವಚನಕಾರರು ದಲಿತರು .ಮಹಿಳೆಯರು ಹಾಗು ಹಿಂದುಳಿದ ವರ್ಗದವರಾಗಿದ್ದಾರೆ.ಇದು ಇಡೀ ಭಾರತದಲ್ಲೆ ಒಂದು ಹೊಸ ವಿಶಿಷ್ಟ ಪ್ರಯೋಗವಾಗಿದೆ.

ಈ ದಲಿತರು.ಮಹಿಳೆಯರು.ಹಿಂದುಳಿದವರು ವಚನಗಳ ಮೂಲಕ ಕನ್ನಡದಲ್ಲಿ ಬರೆದ ವಿಶ್ವದ ಮೂದಲ ಸಾಹಿತ್ಯವಾಗುತ್ತದೆ.ಏಕೆಂದರೆ ಈ ಸಂಧರ್ಭದಲ್ಲಿ ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚನೆಯಾಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇಡೀ ವಿಶ್ವದಲ್ಲಿನ ಯಾವ ದೇಶದಲ್ಲೂ ಸಂವಿಧಾನ ರಚನೆಯಾಗದ ದಿನಮಾನಗಳಲ್ಲಿ ಕನ್ನಡದ ಶರಣರು ಸಮಾನತೆ. ಸಹೋದರತೆ.ಸ್ವಾತಂತ್ರ್ಯ. ಭ್ರಾತೃತ್ವ.ಮೀಸಲಾತಿ.ಧಾರ್ಮಿಕ ಹಕ್ಕು.ಮುಂತಾದವುಗಳ ಕುರಿತು ವೈಜ್ಞಾನಿಕ ವೈಚಾರಿಕ ವಚನಗಳನ್ನು ರಚಿಸಿದ್ದರು.

1215ರಲ್ಲಿ ಇಂಗ್ಲೆಂಡ್ ನಲ್ಲಿ ಕಿಂಗ್ ಜಾನ್ ಮತ್ತು ಜಮಿನ್ದಾರರ ನಡುವೆ ಒಂದು ಬಹುಮುಖ್ಯ ಒಪ್ಪಂದವಾಗುತ್ತದೆ.ರಾಜನ ಅಧಿಕಾರವನ್ನು ಮೊಟಕುಗೊಳಿಸಿದಂಥ ವಿಶ್ವದ ಮೂದಲ ಒಪ್ಪಂದಕ್ಕೆ”ಮ್ಯಾಗ್ನಾಕಾಟ್” ಮಹಾ ಒಪ್ಪಂದ ಎಂದುಕರೆಯುತ್ತಾರೆ. 13 ನೇ ಶತಮನದಲ್ಲಿ ನಡೆದ ಈ ಒಪ್ಪಂದ “ಜಗತ್ತಿನ ಸಂವಿಧಾನಗಳ ತಾಯಿ” ಎಂದು ಇತಿಹಾಸತಜ್ಞರ ಅಭಿಪ್ರಾಯವಾಗಿದೆ. ಇದಕ್ಕಿಂತ ಮುಂಚೆ ಮಾನವ ಹಕ್ಕುಗಳ ಘನತೆ ಗೌರವಗಳಿಂದ ತುಂಬಿರುವ ವಚನಗಳನ್ನು ವಿಶ್ವಕ್ಕೆ ಅರ್ಥಮಾಡಿಸಿಕೊಡುವಲ್ಲಿ ಇಂಡಿಯಾ ಸೋತಿರುವುದು ನಮ್ಮ ದುರಂತವಾಗಿದೆ.

ಕೇವಲ ಒಂದೆ ಒಂದು ತಲೆಮಾರಿನ ಶ್ರಮಿಕರ ವರ್ಗ ಬಸವಣ್ಣನವರ ನೇತೃತ್ವದಲ್ಲಿ ಏನೆಲ್ಲಾ ಕ್ರಾಂತಿ ಮಾಡಿತು ಎಂಬುದು ನಿಜಕ್ಕು ಅಚ್ಚರಿಯಾಗುತ್ತದೆ.

ಬಸವಣ್ಣ ಮತ್ತು ಅಲ್ಲಮಾದಿ ಶರಣರ ಚಳುವಳಿಯು ಕಾಯಕ ಸಿದ್ದಾಂತಕ್ಕೆ ಬದ್ದವಾಗಿದೆ.” ಕಾಯಕವೆ ಕೈಲಾಸವೆಂಬ” ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ.ದುಡಿಮೆಯೆ ದೇವರು ಎಂಬ ಸತ್ವ ಶರಣರ ಸಿದ್ದಾಂತದಲ್ಲಿದೆ.

“ಕ್ರೈಸ್ತರು ಯುರೋಪಿಯನಲ್ಲಿ ಸೃಷ್ಟಿಸಿದ್ದಕ್ಕಿಂತಲು ಭಯಂಕರವಾದ ನರಕವನ್ನು ಬ್ರಾಹ್ಮಣರು ಭಾರತದಲ್ಲಿ ಸೃಷ್ಟಿಸಿದ್ದಾರೆ” ಎಂದು ಕಾರ್ಲ್‌ ಮಾರ್ಕ್ಸ್‌ ಸುಮಾರು 150ವರ್ಷಗಳ ಹಿಂದೆ ಬರೆದ “ಫಸ್ಟ್‌ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್” ಗ್ರಂಥದಲ್ಲಿ ಹೇಳಿದ್ದಾರೆ.ಇದು ಸತ್ಯವೂ ಕೂಡ.ಆದರೆ ನಮ್ಮ ಬಸವಾದಿ ಪ್ರಮಥರು ಈ ಅಸಮಾನತೆಯ ನರಕವನ್ನು ಅರಿವುಗಳ ಮೂಲಕ ಸಡುತ್ತಾರೆ. ಬ್ರಾಹ್ಮಣ್ಯದ ಹಾಗು ಹಿಂದುತ್ವದ ವಿರುದ್ದ ಹುಟ್ಟಿಕೊಂಡ ಕಾಯಕ ಸಿದ್ದಾಂತ ಜಾತಿವಿನಾಶಕ್ಕಾಗಿ ಅಣಿಯಾಯಿತು.

ಮನುಧರ್ಮ ಸೃಷ್ಟಿಸಿದ ವರ್ಣವ್ಯವಸ್ಥೆಯನ್ನು ಕಟ್ಟಕಡೆಯ ಅಸ್ಪೃಶ್ಯ ದಲಿತ ಜಾತಿಯ ಸಮಗಾರ ಹರಳಯ್ಯ ಇಷ್ಟ ಲಿಂಗ ದೀಕ್ಷೆಯ ನಂತರ ಲಿಂಗವಂತರಾದರು.ಅಲ್ಲದೆ ಬಿಜ್ಜಳನ ಆಸ್ಥಾನದಲ್ಲಿದ್ದ ಮದುವರಸ ತಮ್ಮ ಪೂರ್ವಿಕರು ಮಾಡಿದ ಮೋಸದ ಅರಿವಾಗಿ ಬಸವನ ಬಳಿಗೆ ಬಂದು ಲಿಂಗದೀಕ್ಷೆ ಪಡೆದು ಲಿಂಗವಂತನಾಗುತ್ತಾನೆ.ಕೊನೆಗೆ ಶರಣ ಸಂಗಮದಲ್ಲಿ ಒಂದಾಗಿ ಸಹಸಧಸ್ಯರಾಗುತ್ತಾರೆ. ಜಾತಿವಿನಾಶಕ್ಕೆ ಮುನ್ನುಡಿ ಬರೆಯಲು ಬಸವಣ್ಣ ಮತ್ತು ಶರಣರು ಸಿದ್ದರಾದರು. ಸಮಗಾರ ಹರಳಯ್ಯನ ಹಾಗು ಬ್ರಾಹ್ಮಣರ ಮದುವರಸನ ಮಕ್ಕಳಿಗೆ ಮದುವೆ ನಿಶ್ಚಯ ಮಾಡಿದರು.ನಾವು ಜಾತಿ ತೊಳೆದು ಲಿಂಗವಂತರಾಗಿದ್ದೇವೆ ಎಂಬುದು ಅವರ ವಾದವಾಗಿತ್ತು.ಅಲ್ಲದೆ ಮಾನವ ಹಕ್ಕುಗಳ ಉಳಿವಿಗೋಸ್ಕರ ಜಾತಿನಾಶಕ್ಕಾಗಿ ಈ ಮದುವೆಯನ್ನು ಏರ್ಪಡಿಸಿದಾಗ ಕೆಲವು ಬ್ರಾಹ್ಮಣಪಟ್ಟಭದ್ರ
ಹಿತಾಸಕ್ತಿಗಳು ರಾಜ್ಯಾದ್ಯಂತ ಸುಳ್ಳು ಮೋಸವನ್ನು ಸತ್ಯವೆಂದು ನಂಬಿಸಿ ನೂರಾರು ಶರಣನ್ನು ಕಗ್ಗೊಲೆ ಮಾಡುತ್ತಾರೆ ಸತ್ಯಜ್ವಾಲೆಯಂತೆ ಪ್ರಜ್ವಲಿಸುತಿದ್ದ ವಚನಗಳ ಕಟ್ಟುಗಳಿಗೆ ಬೆಂಕಿ ಹಚ್ಚಿ ಸುಡುತ್ತಾರೆ.

1939 ರಿಂದ 1945 ರವರೆಗೆ ನಡೆದ ಎರಡನೆ ಮಹಾಯುದ್ದದಲ್ಲಿ ಕೋಟ್ಯಾಂತರ ಜನರು ಸಾಯುತ್ತಾರೆ. ಆಗ 1945 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಉಳಿವಿಗಾಗಿ ಸ್ಥಾಪನೆಯಾಗುತ್ತದೆ.ಆದರೆ ಹನ್ನೆರಡನೆ ಶತಮಾನದಲ್ಲಿ ನೂರಾರು ಶರಣ ಹತ್ಯೆಯು ಮಾನವ ಹಕ್ಕುಗಳಿಗೆ.ಹಾಗು ಅಸಮಾನತೆಯ ವಿರುದ್ದ ನಡೆದ ಚಳುವಳಿಯಾಗಿದೆ.ಹರಳಯ್ಯ ಮದುವರಸರು ಲಿಂಗವಂತರಾಗುವ ಮೂಲಕ ಮನುಧರ್ಮದಿಂದ ಸೇರಿಕೊಂಡಿದ್ದ ವರ್ಣ. ಜಾತಿಸಂಕೋಲೆಯನ್ನು ಮೀರಿದ್ದರು ಮನುಷ್ಷತ್ವದ ಉಳಿವಿಗೆ ಮನುಷ್ಯರಾಗಿ ಚಿಂತಿಸಿದ್ದರು.ಹರಳಯ್ಯನವರ ಮಗ ಶೀಲವಂತ ಮದುವರಸರ ಮಗಳು ಲಾವಣ್ಯವತಿ ಇವರು ಲಿಂಗವಂತರಾಗಿದ್ದರಿಂದ ಇವರ ಮದುವೆ ಸಹಜ ಸ್ಥಿತಿಯಲ್ಲಿರಬೇಕಿತ್ತು.ಆದರೆ ಮನುವಾದಿಗಳ ಯಥಾಸ್ಥಿತಿವಾದಕ್ಕೆ ಇಷ್ಟವಾಗಿರಲಿಲ್ಲ.

ಹಾಗಾಗಿ ಈ ಮೂಲಕ ಧರ್ಮನಾಶಕ್ಕೆ.
ಸಂಪ್ರದಾಯಗಳ ದಿಕ್ಕರಿಸುವಿಕೆ.ಈ ದೇಶದ ನಾಶಕ್ಕೆ.ಹಾಗು ರಾಜಧರ್ಮದ ವಿರುದ್ದವಾದ ಮದುವೆಯೆಂದು ಸನಾತನವಾದಿಗಳು ಸುಳ್ಳಬ್ಬಿಸಿ ಗದ್ದಲ ಗಲಾಟೆ ಅಚ್ಚುತ್ತಾರೆ. ಆದರೆ ಶರಣರ ಅಭಿಪ್ರಾಯದಲ್ಲಿ ಧರ್ಮಬಾಹಿರ.ಮನುಷ್ಯರ.ನಾಗರೀಕ.ಲಿಂಗವಂತರ ಮದುವೆಯಾಗಿತ್ತು. ಒಂದು ರೀತಿಯಲ್ಲಿ ಈ ಶರಣ ಚಳುವಳಿ ಎಂಬುದು ಮೇಲುಕೀಳು ಎಂದು ಪ್ರತಿಪಾದಿಸುವ ಹಾಗು ಮೇಲುಕೀಳಿನ ಅಸಮಾನತೆಯ ಬೆನ್ನುಮೂಳೆ ಮುರಿದ ಲಿಂಗಾಯ್ತಧರ್ಮಕ್ಕು ನಡುವೆ ನಡೆವ ಸಮರವಾಗಿತ್ತು. ಮನುವಾದದ ಕ್ರೌರ್ಯದ ವಿರುದ್ದ ಚಳುವಳಿ ರೂಪಿಸಿದ್ದ ಶರಣರು ತಮ್ಮ ಕಾಯಕ ಬೆವರಿನ ಸಮಾನತೆಯ ಸಿದ್ದಾಂತಕ್ಕೆ ತಮ್ಮ ಪ್ರಾಣವನ್ನು ಕಳೆದುಕೊಳ್ಳಲು ಸಿದ್ದರಾದರು.

ನಾಳೆ ಬಪ್ಪುದು ಇಂದೆ ಬರಲಿ
ಇಂದು ಬಪ್ಪುದು ಇಗೆ ಬರಲಿ”..ಎಂದು
ಕ್ರಾಂತಿಗೆ ಎದೆಕೊಟ್ಟು ನಿಂತರು.ಮಾನವೀಯತೆಯ ಕೊ‌ಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೊದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು.ಸನಾತನಿ ವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.
ಸಮಾನತೆಗಾಗಿ ಹುತಾತ್ಮ ರಾದರು.

ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ ತತ್ವ ಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ “ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ.ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.

ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.

ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇಧಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು. ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೊದಲ ಪಾರ್ಲಿಮೆಂಟ್ ಅನುಭವ ಮಂಟಪವಾಗಿತ್ತು.

ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.

ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಕೆಸರೆರೆಚುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.

ಈ ಬಸವಾದಿ ಶರಣರ ಹತ್ಯೆಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳ ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.

ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು ಮತ್ತೊಮ್ಮೆ ಕಲ್ಯಾಣವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.ಮಾನವೀಯತೆಯ ಕೊ‌ಂಡಿಯಂತಿರುವ ಈ ಶರಣರ ಮದುವೆಗೆ ವೈದಿಕರ ಹಾಗು ಬಿಜ್ಜಳನ ವಿರೋಧವಿದ್ದರು ಸಾವಿಗಂಜದೆ ಸಮಾನತೆಯ ಉಳಿವಿಗೆ ವಿಶ್ವದ ಮೂದಲ ಅಂತರ್ಜಾತಿ ವಿವಾಹವನ್ನು ಮಾಡಿಸಿದರು.

ಆಗ ಸನಾತನವಾದಿ ವೈದಿಕಶಾಹಿ ಕ್ರೂರಿ ಬ್ರಾಹ್ಮಣರು ಶರಣರ ಕಣ್ಣುಗಳನು ಕೀಳಿಸಿ ಆನೆಕಾಲಿಗೆ ಕಟ್ಟಿ ಎಳೆಸಿ ಗಜಕಾಲುಗಳಿಂದ ಶರಣರ ತಲೆ ತುಳಿಸಿ ಕೊಲೆಗೈದರು.ಶರಣರ ತತ್ವ ಸಿದ್ದಾಂತ ಮಾನವಹಕ್ಕುಗಳ ಸಂಪತ್ತಾಗಿದ್ದ ವಚನಗಳನ್ನು ಉಳಿಸಲು ಶರಣರು ದೇಶಾಂತರ ಹೊರಟರು. ಹಿಂದುತ್ವದವ್ಯಾಘ್ರರು ಸಿಕ್ಕಸಿಕ್ಕವರ ಶರಣರ ರುಂಡಗಳನ್ನು ಚಂಡಾಡಿ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿದರು.ಒಂದು ಜಾತ್ಯಾತೀತ ಮದುವೆಗೆ ಶರಣರು ಸರ್ವಸ್ವವನ್ನೂ ಕಳೆದುಕೊಂಡರು.ಸಮಾನತೆಗಾಗಿ
ಹುತಾತ್ಮ ರಾದರು.

ಮಾನವ ಘನತೆಯ ರಕ್ಷಣೆಗಾಗಿ “ನಡೆ ಒಂದೆ ನುಡಿ ಒಂದೆ” ಸಿದ್ಧಾಂತದಿಂದ ಕೂಡಿದ
ತತ್ವಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ”ಕಲ್ಯಾಣ ಕ್ರಾಂತಿ ”
ಎಂಬ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಮತ್ತೊಂದಿಲ್ಲ ಎಂದು ಶರಣ ಸಾಹಿತ್ಯದ ಸಂಶೋಧಕ ರಂಜಾನ್ ದರ್ಗರವರು ಹೇಳುತ್ತಾರೆ. ಅವರು ಮುಂದುವರೆದು “ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣ ಕ್ರಾಂತಿ ಅಲ್ಲ.ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರ ಕ್ರಾಂತಿ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವೆನ್ನುತ್ತಾರೆ.

ಬಾಬಸಾಹೇಬ ಅಂಬೇಡ್ಕರ್ ರವರು ಭಾರತದ ಚರಿತ್ರೆಯನ್ನು ವಿಶ್ಲೇಷಿಸುವಾಗ ಬುದ್ದನ ಕ್ರಾಂತಿಗೆ ಬ್ರಾಹ್ಮಣರ ಪ್ರತಿಕ್ರಾಂತಿಯಾಯಿತು ಇದರಿಂದ ಮನುವ್ಯವಸ್ಥೆಯ ವಿಸ್ತಾರವಾಗುತ್ತದೆ ತನ್ನ ಅಸಮಾನತೆಯ ಕ್ರೌರ್ಯದ ನಾಲಿಗೆಯನ್ನು ಚಾಚುತ್ತದೆ ಎಂದು ಹೇಳುತ್ತಾರೆ. ಕರ್ನಾಟಕದಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ವಿರುದ್ದ ಕ್ಷಿಪ್ರ ಕ್ರಾಂತಿ ಮಾಡಿದ್ದು ಚರಿತ್ರೆಯ ದುರಂತ.

ಅದೇನೆ ಇರಲಿ ಆದರೆ ಸನಾತನಿಗಳ ಅನಿಷ್ಟ ಸಂಪ್ರದಾಯಗಳ ವಿರುದ್ದ ಈ ಕಲ್ಯಾಣ ಶರಣರ ಸಮಾನತೆ ಹಾಗು ಜಾತಿವಿನಾಶದ ಮದುವೆಯನ್ನು ಇತಿಹಾಸ ಮರೆಯಬಾರದು.ಬಸವಾದಿ ಶರಣರು ಮನುವ್ಯವಸ್ಥೆಯ ಮರಕ್ಕೆ ಕೊಡಲಿ ಏಟಾಕಿದ್ದು ನಿಜ. ಸತ್ಯಕ್ಕೆ.ಸಮಾನತೆಗೆ.ಮಾನವ ಹಕ್ಕುಗಳ ಘನತೆಗೆ.ಜಾತಿವಿನಾಶಕ್ಕೆ.ವರ್ಣನಿರ್ನಾಮಕ್ಕೆ.ಮೇಲುಕೀಳು ಸ್ತ್ರೀ ಪುರುಷ.ಬಡವ ಬಲ್ಲಿದ ಎಂಬ ಭೇದಗಳ ವಿರುದ್ದ ಬಸವಣ್ಣನ ಕ್ರಾಂತಿಯಾಗಿತ್ತು.
ಮನುಷ್ಯತ್ವದ ಉಳಿವಿಗಾಗಿ” ಕಾಯಕ ಸಿದ್ದಾಂತಕ್ಕಾಗಿ ಕಲ್ಯಾಣದ ಕ್ರಾಂತಿಯಾಯಿತು.ಅಲ್ಲಿ ನೊಂದವರು ನೋವುಗಳನ್ನು ಹಂಚಿಕೊಳ್ಳುವ ವಿಶ್ವದ ಮೂದಲ ಪಾರ್ಲಿಮೆಂಟ್ ಎಂಬುದು ಅನುಭವ ಮಂಟಪವಾಗಿತ್ತು.

ಶರಣರು ಹತ್ಯೆಯಾಗಿ ಸತ್ತರು.ಅವರ ವೈಚಾರಿಕ. ವೈಜ್ಞಾನಿಕ ಪ್ರಗತಿಪರ ನೆಲೆಗಟ್ಟಿನಲ್ಲಿ ವಚನಗಳ ಮೂಲಕ ಹಾಗು ತಾವು ಮಾಡಿದ ಜಾತಿವಿನಾಶದ ತ್ಯಾಗಕ್ಕಾಗಿ ಜೀವದ ಅರ್ಪಣೆ ಶೋಷಿತರ ಎದೆಯೊಳಗೆ ಇಂದಿಗು ಬೆಳಕಾಗಿ ನಂದಾದೀಪವಾಗಿ ಪ್ರಜ್ವಲಿಸುತ್ತಿದೆ.
ಇತ್ತೀಚೆಗೆ ಲಿಂಗಾಯ್ತರು ಬಸವಣ್ಣನವರನ್ನು ಜಾತಿಯ ನಾಯಕನಂತೆ ಬಿಂಬಿಸುತಿದ್ದಾರೆ ಕೆಲವು ಬಸವಭಕ್ತರು
ಆರ್.ಎಸ್.ಎಸ್.ಚೆಡ್ಡಿಯೊಳಗೆ ಬಸವಣ್ಣನ ಸಿದ್ದಾಂತಗಳನ್ನ ಅದುಮಿಟ್ಟು
ಹಿಂದು ದೇವರುಗಳನ್ನು ವೈಭವಿಕರೀಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬಸವಣ್ಣನ ಹೆಸರಿನಲ್ಲಿ ಸಾವಿರಾರು ಮಠಮಾನ್ಯಗಳು ನಿರ್ಮಾಣವಾದರು ಇವತ್ತು ವ್ಯವಹಾರದ ಕೇಂದ್ರಗಳಾಗಿವೆ.ಪ್ರತ್ಯೇಕ ಲಿಂಗಾಯ್ತಧರ್ಮಕ್ಕೆ ಕೆಲವು ಮನುಚೇಲಗಳು ವಿರೋಧ ಮಾಡುತ್ತಿವೆ.ಬಸವಣ್ಣನ ಹೆಸರಿಗೆ ಮಸಿಬಳಿಯುವ ಸಂಘಪರಿವಾರದವರೊಂದಿಗೆ ಸೇರಿ ಹಾದಿತಪ್ಪುತಿದ್ದಾರೆ.

ಈ ಬಸವಾದಿ ಶರಣರ ಹತ್ಯಯನ್ನು ಕುರಿತು ಆಳವಾದ ಅಧ್ಯಯನ ಮಾಡಿ “ಕೆಟ್ಟಿತ್ತೊ ಕಲ್ಯಾಣ” ಎಂಬ ಸಂಶೋಧನಾ ಕೃತಿ ಬರೆದ ಪ್ರಗತಿಪರ ಸಂಶೋಧಕ ಎಂ.ಎಂ.ಕಲ್ಬುರ್ಗಿ ಹಿಂದುತ್ವದ ಬುಲೇಟಿಗೆ ಬಲಿಯಾದರು.ಬಸಾವದಿ ಶರಣ ಸಿದ್ದಾಂತವನ್ನು ಎದೆಗುಂದದೆ ದೈರ್ಯವಾಗಿ ಹೇಳುತಿದ್ದ ಗೌರಿ ಲಂಕೇಶ್ ಮನುಸೂಳೆಮಕ್ಕಳ ಬಂದೂಕಿಗೆ ಎದೆಕೊಟ್ಟು ಹತ್ಯೆಯಾದಳು.ಹೀಗೆ ಶರಣರ ಕ್ರಾಂತಿಕಾರಿ ವಿಚಾರಗಳನ್ನು ಹೇಳುವರನ್ನು ಕೊಲ್ಲುವ. ಶರಣರ ಬಗ್ಗೆ ಬರೆಯುವರ ಕೈಗಳನ್ನು ಕತ್ತರಿಸುವ ಸನಾತನವಾದಿಗಳು ದಿನೆದನೆ ಹಣಬೆಗಳಂತೆ ಬೆಳೆಯುತ್ತಿರುವುದು ಬಸವನ ಅನುಯಾಯಿಗಳು ಗಂಭೀರವಾಗಿ ಚಿಂತನೆ ಮಾಡಬೇಕಿದೆ.

ಬಸವಾದಿ ಶರಣರ ಸಿದ್ದಾಂತದಲ್ಲಿ ಈ ದೇಶದ ಸಂವಿಧಾನ ಅಡಗಿದೆ ಎಂಬುದನ್ನು ಪ್ರತಿಯೊಬ್ಬ ಇಂಡಿಯನ್ಸ್ ಅರ್ಥ ಮಾಡಿಕೊಂಡು “ಮತ್ತೊಮ್ಮೆ ಕಲ್ಯಾಣ”ವೆಂಬ ಚಳುವಳಿಯನ್ನು ಹೊಸ ರೀತಿಯಲ್ಲಿ ಕಟ್ಟ ಬೇಕಿದೆ. ಮಾನವನ ಘನತೆಯ ಚಳುವಳಿಗೆ ಎಲ್ಲರು ಸ್ವಾಭಿಮಾನದಂದ ಬರಬೇಕಾದ ದರ್ದು ಇಂದು ತುರ್ತಾಗಿದೆ.

ಹುಚ್ಚಂಗಿ ಪ್ರಸಾದ್ ಸಂತೇಬೆನ್ನೂರು

ಈ ಲೇಖನ ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದ್ದು, ಅದರ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ ಓದಿ.

Basavanna – A man who rebelled against Sanatana Tradition

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ7 hours ago

ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕ ರಮೇಶ್ ದೇಸಾಯಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ:ಪ್ರಾಚಾರ್ಯರು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಶ್ರೀ ಅನ್ನದಾನೇಶ್ವರ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆ, ಗಜೇಂದ್ರಗಡ ಇವರ ಸಹಿಯನ್ನು ತನಿಖೆಗೆ ಒಳಪಡಿಸುವಂತೆ ದೂರು ನೀಡಿ 3 ತಿಂಗಳು...

ದಿನದ ಸುದ್ದಿ7 hours ago

ಚಿತ್ರದುರ್ಗ | ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅಮರ್‌ನಾಥ್ ಜೈನ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: 2023-24 ಮತ್ತು 2024-25ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲ್ಲೂಕುಗಳಿಗೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಇಲಾಖಾ ತನಿಖೆಗೆ...

ದಿನದ ಸುದ್ದಿ1 week ago

ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ

ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್...

ದಿನದ ಸುದ್ದಿ2 weeks ago

ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್

ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಸೋಮವಾರ(ಫೆ.23) ರಂದು ನಗರದ...

ದಿನದ ಸುದ್ದಿ2 weeks ago

ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ

ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ. ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ,...

ದಿನದ ಸುದ್ದಿ3 weeks ago

ಜನರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸುವುದು ಅಧಿಕಾರಿಗಳ ಕರ್ತವ್ಯ : ಡಾ.ಹೆಚ್.ಕೃಷ್ಣ

ಸುದ್ದಿದಿನ,ದಾವಣಗೆರೆ:ಆಹಾರ ಪಡೆಯುವುದು ಜನರ ಹಕ್ಕು, ಅದನ್ನು ಅನುಷ್ಠಾನಗೊಳಿಸುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಅದಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸುವುದು ಸಹ ನಮ್ಮೆಲ್ಲರ ಜವಾಬ್ದಾರಿ. ಜನರಿಗೆ ಕೇವಲ ಆಹಾರ ಧಾನ್ಯಗಳನ್ನು...

ದಿನದ ಸುದ್ದಿ3 weeks ago

ದಾವಣಗೆರೆ | ಕಂದಾಯ ಹಕ್ಕು ಪತ್ರ ಮತ್ತು ಪಾವತಿ ಆಂದೋಲನ

ಸುದ್ದಿದಿನ,ದಾವಣಗೆರೆ:ಜಿಲ್ಲೆಯಲ್ಲಿ 298 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು, ಈಗಾಗಲೇ 12,000ಕ್ಕೂ ಹೆಚ್ಚು ಹಕ್ಕು ಪತ್ರಗಳನ್ನು ವಿತರಿಸಲಾಗಿದ್ದು, ಬಾಕಿ ಇರುವವರು ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ...

ದಿನದ ಸುದ್ದಿ3 weeks ago

ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣ | ಭದ್ರಾ ನಾಲೆ ನೀರು ನಿರ್ವಹಣೆ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕಾಗಿ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು. ಗುರುವಾರ(ಫೆ.19) ರಂದು ಜಿಲ್ಲಾಡಳಿತ ಕಚೇರಿ...

ದಿನದ ಸುದ್ದಿ3 weeks ago

ಏ.1 ರಿಂದ 2026ರ ಡಿಜಿಟಲ್ ಜನಗಣತಿ

ಸುದ್ದಿದಿನ,ದಾವಣಗೆರೆ :2026ರ ಜನಗಣತಿ ಪ್ರಕ್ರಿಯೆ ಏಪ್ರಿಲ್ 1 ರಿಂದ ಆರಂಭವಾಗಲಿದ್ದು, ಈ ಬಾರಿ ಸಂಪೂರ್ಣ ಡಿಜಿಟಲ್ ರೂಪದಲ್ಲಿ ಜನಗಣತಿ ನಡೆಯಲಿದೆ. ಸಾರ್ವಜನಿಕರು ಆನ್‌ಲೈನ್ ಮೂಲಕ ಸ್ವಯಂ ದೃಢೀಕರಣ...

ದಿನದ ಸುದ್ದಿ3 weeks ago

ದುರ್ಗಾಂಬಿಕ ಜಾತ್ರೆ ; ಫ್ಲೆಕ್ಸ್ ಹಾವಳಿ ವಿರುದ್ಧ ಕಠಿಣ ಕ್ರಮ

ಸುದ್ದಿದಿನ,ದಾವಣಗೆರೆ:ದುರ್ಗಾಂಬಿಕಾ ಜಾತ್ರೆಯ ಸಂದರ್ಭದಲ್ಲಿ ನಗರದ ಪರಿಸರ ಮಾಲಿನ್ಯಕ್ಕೆ ಧಕ್ಕೆ ತರುವಂತೆ ಅನಧಿಕೃತ ಫ್ಲೆಕ್ಸ್ ಅಳವಡಿಸುವವರ ವಿರುದ್ಧ ‘ಡಿ ಫಿಗರ್‌ಮೆಂಟ್ ಆಕ್ಟ್’ ಅಡಿಯಲ್ಲಿ ನಿರ್ದಾಕ್ಷಿಣ್ಯವಾಗಿ ಎಫ್‌ಐಆರ್ ದಾಖಲಿಸಲಾಗುವುದು ಎಂದು...

Trending