Connect with us

ದಿನದ ಸುದ್ದಿ

38,32,50,000- ಈ ಸಂಖ್ಯೆಯೊಂದಿಗೆ ಬೆಂಗಳೂರಿನ ನಂಟೇನು? ಗಾಯಕ ವಾಸು ದೀಕ್ಷಿತರಿಗೆ ಇದರಿಂದ ಸ್ಪೂರ್ತಿ ಏನು?

Published

on


ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಗಾಯಕ ವಾಸು ದೀಕ್ಷಿತ್ ಸಹಯೋಗದಲ್ಲಿ, ಬೆಂಗಳೂರಿನ ಸರ್ಕುಲಾರ್‌ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರದ ಕುರಿತು ಹ್ಯಾಪಿ ನಂಬರ್ ಹಾಡು ಮಾತನಾಡುತ್ತದೆ.


ಸುದ್ದಿದಿನ,ಬೆಂಗಳೂರು: ಬೆಂಗಳೂರಿನ ಸರ್ಕುಲಾರ್‌ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರ ಮತ್ತು ಕೊಡುಗೆಯನ್ನು ಹೈಲೈಟ್ ಮಾಡುವ “Invaluables”ನ ಎರಡನೇ ಹಂತದ #Invaluable Recyclers ಪ್ರಾರಂಭಿಸುವುದಾಗಿ ಬಿಬಿಸಿ ಮೀಡಿಯಾ ಆಕ್ಷನ್ ಇಂದು ಘೋಷಿಸಿತು.

ಬಿಬಿಸಿ ಮೀಡಿಯಾ ಆಕ್ಷನ್ ಗಾಯಕ ವಾಸು ದೀಕ್ಷಿತ್ ಅವರ ಸಹಯೋಗದೊಂದಿಗೆ ‘ಹ್ಯಾಪಿ ನಂಬರ್’ ಎಂಬ ಶೀರ್ಷಿಕೆಯ ಹಾಡನ್ನು ಬಿಡುಗಡೆ ಮಾಡಿದೆ. ಇದು ನಗರದಲ್ಲಿ ತ್ಯಾಜ್ಯ ಸಂಗ್ರಾಹಕರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ನಗರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಮಾಡಬಹುದಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವುದು ಮತ್ತು ಮರುಬಳಕೆ ಮಾಡುವುದರ ಮೂಲಕ ಭೂಮಿಯ ಒಡಲು ಸೇರಬಹುದಾದ 383,250 ಟನ್‌ ತ್ಯಾಜ್ಯವನ್ನು ಬೇರೆಡೆ ವರ್ಗಾಯಿಸುವ ಪ್ರಕ್ರಿಯೆಯಾಗಿದೆ.

ಭೂಮಿಯ ಒಡಲಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ಅಪಾರ ಪ್ರಮಾಣದಲ್ಲಿ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದು ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೂ ಕಾರಣವಾಗುತ್ತದೆ.

ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಅದರ ಪಾಲುದಾರರು ಇಂದು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗಾಯಕ ವಾಸು ದೀಕ್ಷಿತ್, ಪರಿಸರವಾದಿ ವಾಣಿ ಮೂರ್ತಿ ಮತ್ತು ನಟಿ ಶ್ರದ್ಧಾ ಜೈನ್ ಅವರ ಉಪಸ್ಥಿತಿಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿಗರಲ್ಲಿ ತ್ಯಾಜ್ಯವನ್ನು ಆರಿಸುವ ಸಮುದಾಯದ ಬಗ್ಗೆ ಜಾಗೃತಿ ಮತ್ತು ಸಹಾನುಭೂತಿ ಮೂಡಿಸುವುದು ಇದರ ಉದ್ದೇಶ.

ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು 22,500 ಕ್ಕೂ ಹೆಚ್ಚು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರಿಗೆ ನೆಲೆಯೂ ಹೌದು. ಅವರು ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದಾರೆ. ಮರುಬಳಕೆ ಮಾಡಲಾಗದ ವಸ್ತುಗಳು ಮಾತ್ರ ಲ್ಯಾಂಡ್‌ ಫಿಲ್‌ನಲ್ಲಿ ಉಳಿಯವಂತೆ ಅವರು ನೋಡಿಕೊಳ್ಳುತ್ತಾರೆ.

Invaluable Recyclers ಬಗ್ಗೆ ಮಾತನಾಡಿದ ಬಿಬಿಸಿ ಮೀಡಿಯಾ ಆಕ್ಷನ್‌ನ ಕಾರ್ಯನಿರ್ವಾಹಕ ಕ್ರಿಯೇಟಿವ್ ಡೈರೆಕ್ಟರ್ ಸೋಮಾ ಕಟಿಯಾರ್, “ಸಾಂಕ್ರಾಮಿಕ ಸಂಕಷ್ಟದ ಪರಿಣಾಮ ಅಂಕಿ-ಸಂಖ್ಯೆಗಳು ಭಯಾನಕವಾಗಿವೆ. ಕೆಟ್ಟ ಸಂಭವನೀಯ ಸುದ್ದಿಗಳ ಮುನ್ನುಡಿ ಇದು! ಆದರೆ, ನಾವು ತಿಳಿದುಕೊಳ್ಳಬೇಕಾದ ಮತ್ತು ಆಚರಿಸಬೇಕಾದ ‘ಸಂತೋಷದ ಸಂಖ್ಯೆ’ ಇಲ್ಲಿದೆ – ಅಂದಾಜು 38,32,50,000 ಕಿಲೋಗ್ರಾಂ ತ್ಯಾಜ್ಯವನ್ನು ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಈಗಾಗಲೇ ತುಂಬಿರುವ ಲ್ಯಾಂಡ್‌ ಫಿಲ್‌ಗಳಿಗೆ ಸೇರದಂತೆ ತಡೆದಿದ್ದಾರೆ.

ನಾವು ಅವರನ್ನು ಸದ್ದಿಲ್ಲದೇ ಕೆಲಸ ಮಾಡುವ ಪರಿಸರವಾದಿಗಳಂತೆ ಕಾಣುತ್ತೇವೆ. ತ್ಯಾಜ್ಯ ಮರುಬಳಕೆಯ ವ್ಯಾಲ್ಯೂ ಚೇನ್‌ನಲ್ಲಿ ಅವರೇ ಮೊದಲಿಗರು. ಅವರು ನಗರಕ್ಕಾಗಿ ಮಾಡುವ ಈ ಅಮೂಲ್ಯವಾದ ಕೆಲಸವನ್ನು “#InvaluableRecyclers ” ಈ ಹಾಡು ಕೊಂಡಾಡುತ್ತದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತದೆ. ಬಿಬಿಸಿ ಮೀಡಿಯಾ ಆಕ್ಷನ್ ನಗರದ ಸರ್ಕುಲಾರ್‌ ಎಕಾನಮಿಯಲ್ಲಿ ಈ ಹ್ಯಾಪಿ ನಂಬರ್ ಹಾಡು ಮತ್ತು ಅಭಿಯಾನದ ಮೂಲಕ, ತ್ಯಾಜ್ಯವನ್ನು ಆರಿಸುವ ವೃತ್ತಿಗೆ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಅವರ ಪಾತ್ರವನ್ನು ಹೈಲೈಟ್ ಮಾಡುತ್ತದೆ.

ಹ್ಯಾಪಿ ನಂಬರ್ ಹಾಡನ್ನು ಸಂಯೋಜಿಸಿದ ಸಂಗೀತಗಾರ ವಾಸು ದೀಕ್ಷಿತ್ (@dixitvasu), “ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ವಿಚಾರದಲ್ಲಿ ನಾಗರಿಕರಾದ ನಮಗೆ ಹೊಣೆಗಾರಿಕೆ ಇದೆ.ನಮ್ಮ ಪರಿಸರವನ್ನು ರಕ್ಷಿಸುವ ಅವರಿಗೆ ಅರ್ಹ ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಹೊಣೆಗಾರಿಕೆ ಅದು. ನಾವು ಅವರಿಗೆ ನೀಡುವ ತ್ಯಾಜ್ಯ ಮರುಬಳಕೆಗೆ ಯೋಗ್ಯವಾದುದು ಎಂಬುದನ್ನು ನಾವು ಖಾತರಿಪಡಿಸಬೇಕು. ಹ್ಯಾಪಿ ನಂಬರ್ ಹಾಡು ಅವರನ್ನು ಮತ್ತು ಅವರ ಕೆಲಸವನ್ನು ಪರಿಚಯಿಸಿ ಸಂಭ್ರಮಿಸುವುದಕ್ಕೆ ನನಗೆ ಸಿಕ್ಕ ಉತ್ತಮ ಅವಕಾಶ.

ಬೆಂಗಳೂರಿಗರು ಜೊತೆಯಲ್ಲಿ ಹಾಡಿದರೆ ಮತ್ತು ತ್ಯಾಜ್ಯ ತೆಗೆಯುವವರನ್ನು ಗುರುತಿಸಿದರೆ ಆ ಕನಸು ನನಸಾದಂತೆ ಆಗುತ್ತದೆ ಎಂದು ಹೇಳಿದರು.

ಬಿಬಿಸಿ ಮೀಡಿಯಾ ಆಕ್ಷನ್‌ನ ಸಂಶೋಧನೆಯ ಪ್ರಕಾರ, ಬೆಂಗಳೂರಿನ ಬೀದಿಗಳಲ್ಲಿ ತ್ಯಾಜ್ಯವು ಗೋಚರಿಸುತ್ತಿದೆ. ವಾಸ್ತವದಲ್ಲಿ ಇದು ಕಳವಳಕಾರಿಯಾಗಿದ್ದರೂ, ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ವರ್ಚುವಲ್‌ ಆಗಿ ಹೆಚ್ಚಿನ ಜನರಿಗೆ ‘ಅಗೋಚರ’ವಾಗಿದ್ದಾರೆ ಎಂಬುದು ವ್ಯಕ್ತವಾಗಿದೆ. ಅಧ್ಯಯನ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಶೇಕಡ 55% ರಷ್ಟು ಜನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರನ್ನು ನೋಡುವುದಕ್ಕೆ ಕೊಳಕಾಗಿ ಇರುತ್ತಾರೆ ಎಂದಿದ್ದಾರೆ.

ಶೇಕಡ 56% ರಷ್ಟು ಜನ ಕಟ್ಟಡ ಸಂಕೀರ್ಣಗಳು ಮತ್ತು ಸಮಾಜದೊಳಗೆ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.

ಪ್ರಚಾರ ಪೂರ್ವದಲ್ಲಿ ಸಹಕರಿಸಿದ ಜನಪ್ರಿಯ ಹಾಸ್ಯ ನಿರೂಪಕಿ ಮತ್ತು ನಟಿ ಶ್ರದ್ಧಾ ಜೈನ್ (@AiyyoShraddha), “ಈ ಹ್ಯಾಪಿ ನಂಬರ್ ಹಾಡನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಅವಕಾಶ ಸಿಕ್ಕಿದ್ದು ಒಂದು ಸುಯೋಗವೆಂದು ಭಾವಿಸುತ್ತೇನೆ. ತ್ಯಾಜ್ಯ ಆಯುವವರು ಬೆಂಗಳೂರಿಗೆ ಏನು ಮಾಡುತ್ತಾರೆ ಎಂಬುದು ಮುಖ್ಯ. ಅವರ ಕೌಶಲ್ಯಪೂರ್ಣ ಕೆಲಸವು ನಮ್ಮ ಜೀವನವನ್ನು ಹಗುರಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹ್ಯಾಪಿ ನಂಬರ್ ಮತ್ತು #InvaluableReclyers ಅಭಿಯಾನವು ಅವರ ಪಾತ್ರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನ ಜನರು ಅವರ ಕೊಡುಗೆಯನ್ನು ಗುರುತಿಸಬೇಕಾಗಿದೆ” ಎಂದು ಹೇಳಿದರು.

ಪ್ಲಾಸ್ಟಿಕ್ ಅನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದಕ್ಕಾಗಿ ತ್ಯಾಜ್ಯ ಆಯುವವರು, ಗೋಡೌನ್ ಪ್ರಕಾರವನ್ನು ಅವಲಂಬಿಸಿ ಅವುಗಳನ್ನು 35 ರಿಂದ 70 ಕ್ಕೂ ಹೆಚ್ಚು ವರ್ಗಗಳಾಗಿ ವಿಂಗಡಿಸುತ್ತಾರೆ. ನೋಟ, ಸ್ಪರ್ಶದ ಧ್ವನಿ ಮತ್ತು ದಪ್ಪದ ಆಧಾರದ ಮೇಲೆ ವಸ್ತುಗಳನ್ನು ಗುರುತಿಸುವಲ್ಲಿ ಇವರು ಪರಿಣತರು ಮತ್ತು ಅನುಭವಿಗಳು.
ಗೊಬ್ಬರ ತಯಾರಿಕೆ ಮತ್ತು ನಗರ ಕೃಷಿ ಬಗ್ಗೆ ಒಲವು ಹೊಂದಿರುವ ಪರಿಸರವಾದಿ ವಾಣಿ ಮೂರ್ತಿ (@WormRani), “ನಗರದಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಪೆಟ್‌ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಪ್ಲಾಸ್ಟಿಕ್ ಆಹಾರದ ಪಾತ್ರೆಗಳನ್ನು ತ್ಯಾಜ್ಯವೆಂದು ಬಿಸಾಡುವ ಮೊದಲು ತೊಳೆಯುವಂತಹ ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು.

ಈ ಕ್ರಮವು ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ಯೋಗ್ಯವಾಗಿಸುತ್ತದೆ. ಮಾತ್ರವಲ್ಲದೆ ತ್ಯಾಜ್ಯ ಸಂಗ್ರಾಹಕರ ಕೆಲಸವನ್ನು ಸುಲಭ ಮಾಡುತ್ತದೆ. ಅದೇ ರೀತಿ, ಆಹಾರ ಅಥವಾ ತ್ಯಾಜ್ಯ ಕೊಳೆತು ಸಂಗ್ರಾಹಕರಿಗೆ ಆಗಬಹುದಾದ ಅಪಾಯದಿಂದ ರಕ್ಷಿಸುತ್ತದೆ. ಒಟ್ಟಾಗಿ, ನಾವು ಬಿಸಾಡುವ ತ್ಯಾಜ್ಯದ ಮೌಲ್ಯವನ್ನು ತಿಳಿದಿರುವ ಜನರನ್ನು ಆದರಿಸೋಣ ಮತ್ತು ಗೌರವಿಸೋಣ”.

ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಬಿಬಿಸಿ ಮೀಡಿಯಾ ಆಕ್ಷನ್‌ನ #Invaluables ಸಾಮಾಜಿಕ ಮಾಧ್ಯಮ ಅಭಿಯಾನದ ಎರಡನೇ ಹಂತ ಈ #InvaluableRecyclers. ಹಿಂದಿನ ಹಂತದ ಈ ಅಭಿಯಾನದ ನಂತರದಲ್ಲಿ ನಡೆದ ಸಂಶೋಧನೆಯು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜಾಗೃತಿ ವಿಚಾರಕ್ಕೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇಕಡ 6% ರಷ್ಟು ಹೆಚ್ಚಳವಾಗಿದೆ.

ತ್ಯಾಜ್ಯವನ್ನು ಆರಿಸುವ ಮತ್ತು ವಿಂಗಡಿಸುವ ಮೂಲಕ ಪರಿಸರಕ್ಕೆ ಸಹಾಯ ಮಾಡುವಲ್ಲಿ ಅವರ ಕೊಡುಗೆಯ ಅರಿವು ಅವರಿಗೆ ಆಗಿದೆ.

ಬೆಂಗಳೂರಿನಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜೀವನವನ್ನು ಸುಧಾರಿಸುವುದಕ್ಕಾಗಿ ಬಿಬಿಸಿ ಮೀಡಿಯಾ ಆಕ್ಷನ್‌ ಮಾಡುತ್ತಿರುವ ಕೆಲಸವು ಎಚ್‌&ಎಂ ಫೌಂಡೇಶನ್ ಅನುದಾನಿತ ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿದೆ. ಕೇರ್ ಇಂಡಿಯಾ, ಹಸಿರು ದಳ, ಲೇಬರ್‌ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ ಮತ್ತು ವಾಟರ್‌ಏಡ್, ಜೊತೆಗೆ ದಿ ನಡ್ಜ್ ಫೌಂಡೇಶನ್ ಮಧ್ಯಸ್ಥಿಕೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತ ಈ ಸಹಯೋಗದ ಪಾಲುದಾರಿಕೆ ಹೊಂದಿವೆ.

ಬಿಬಿಸಿ ಮೀಡಿಯಾ ಆಕ್ಷನ್‌ನ ಕಿರುಪರಿಚಯ

ಬಿಬಿಸಿ ಮೀಡಿಯಾ ಆಕ್ಷನ್ ಎಂಬುದು ಬಿಬಿಸಿ ಅಂತಾರಾಷ್ಟ್ರೀಯ ಚಾರಿಟಿಯಾಗಿದೆ. ನಾವು ಮಾಧ್ಯಮ ಮತ್ತು ಸಂವಹನವಿರುವುದು ಒಳಿತಿಗಾಗಿ ಎಂದು ನಂಬುತ್ತೇವೆ. ಪ್ರಪಂಚದ ಕೆಲವು ಬಡ ಮತ್ತು ಅತ್ಯಂತ ದುರ್ಬಲ ದೇಶಗಳಲ್ಲಿ ನಾವು ಪ್ರತಿ ವರ್ಷ 100 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಲುಪುತ್ತೇವೆ. ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜೀವಗಳನ್ನು ಉಳಿಸುತ್ತವೆ ಹಾಗೂ ಜೀವನೋಪಾಯವನ್ನು ರಕ್ಷಿಸುತ್ತವೆ. ಅದೇ ರೀತಿ ತಪ್ಪು ಮಾಹಿತಿಯನ್ನು ನಿವಾರಿಸುತ್ತವೆ. ಪೂರ್ವಾಗ್ರಹಗಳಿಗೆ ಸವಾಲೊಡ್ಡಿ ಪ್ರಜಾಪ್ರಭುತ್ವಕ್ಕೆ ಬಲ ತುಂಬುತ್ತೇವೆ ಮಾನವ-ಕೇಂದ್ರಿತ ವಿನ್ಯಾಸ ವಿಧಾನವನ್ನು ಬಳಸಿಕೊಂಡು ಮಾಡುವ ನಮ್ಮ ಕೆಲಸವು ಪುರಾವೆಗಳು ಮತ್ತು ಒಳನೋಟಗಳಿಂದ ಕೂಡಿಕೊಂಡಿದೆ.

ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಯನ್ನು ತರುವುದಕ್ಕಾಗಿ ಪ್ರಭಾವ-ಪರೀಕ್ಷಿತ, ಸ್ಕೇಲೆಬಲ್, ದೊಡ್ಡ ಆಲೋಚನೆಗಳನ್ನು ನಿಯಂತ್ರಿಸುತ್ತ ಮುನ್ನಡೆಯುತ್ತೇವೆ. ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ, ನಾವು ಆರೋಗ್ಯ (ಎಚ್‌ಐವಿ ತಡೆಗಟ್ಟುವಿಕೆ, ಕ್ಷಯರೋಗ, ರೋಗನಿರ್ಣಯ ಮತ್ತು ಚಿಕಿತ್ಸೆ, ಸಂತಾನೋತ್ಪತ್ತಿ, ತಾಯಿಯ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ), ನೈರ್ಮಲ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಜೀತ ತಡೆಗಟ್ಟುವಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದೇವೆ.

ವೆಬ್‌ಸೈಟ್‌:https://www.bbc.co.uk/mediaaction/where-we-work/asia/india/

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಹೆಚ್. ಕೇಶವ ವಿರುದ್ಧ ಲೋಕಾಗೆ ದೂರು

Published

on

ಸುದ್ದಿದಿನ,ಶಿವಮೊಗ್ಗ:ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ನೇಮಕ ಮಾಡಿಕೊಳ್ಳಲಾದ ಹುದ್ದೆಗಳನ್ನು ಇಲಾಖಾ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿ 2 ತಿಂಗಳು ಕಳೆದರೂ ಯಾವುದೇ ತನಿಖಾ ವರದಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ನಿರ್ಲಕ್ಷ್ಯ ತೋರಿದ ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇಲ್ಲಿಯ ಜಂಟಿ ನಿರ್ದೇಶಕರಾದ ಶ್ರೀ ಕೇಶವ ಹೆಚ್. ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಎಸ್.ಜೆ.ಎಂ ವಿದ್ಯಾಪೀಠ (ರಿ), ಚಿತ್ರದುರ್ಗ ಇಲ್ಲಿ 2022ನೇ ಸಾಲಿನಲ್ಲಿ ಬ್ಯಾಕ್‌ಲಾಗ್ ಅಡಿಯಲ್ಲಿ ಅರ್ಥಶಾಸ್ತç (ಎಸ್.ಟಿ), ರಾಜ್ಯಶಾಸ್ತç (ಎಸ್.ಸಿ), ಗ್ರಂಥಪಾಲಕರು (ಎಸ್.ಟಿ) ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇಲ್ಲಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾದ ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರಿಗೆ ದಿನಾಂಕ: 24-11-2025 ರಂದು ಅರ್ಜಿ ಸಲ್ಲಿಸಿ, ಬ್ಯಾಕ್ ಲಾಗ್ ನೇಮಕಾತಿಯ ಬಗ್ಗೆ ತನಿಖೆ ನಡೆಸಿ, ತನಿಖಾ ವರದಿಯನ್ನು ನೀಡುವಂತೆ ಕೋರಲಾಗಿತ್ತು.

ಅರ್ಜಿ ಸಲ್ಲಿಸಿ ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನಾಗಲಿ ಅಥವಾ ಹಿಂಬರಹವನ್ನಾಗಲಿ ನೀಡದೆ ಇರುವ ಕಾರಣ ಜ್ಞಾಪನ ನೀಡಿ 7 ದಿನಗಳ ಒಳಗಾಗಿ ತನಿಖಾ ವರದಿಯನ್ನು ನೀಡುವಂತೆ ವಿನಂತಿಸಲಾಗಿತ್ತು. ಆದರೆ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರು ಅರ್ಜಿ ಸಲ್ಲಿಸಿ 2 ತಿಂಗಳಾದರೂ ಕನಿಷ್ಠ ಹಿಂಬರಹವನ್ನಾದರೂ ನೀಡದೆ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಕರ್ತವ್ಯ ಲೋಪ ಎಸಗಿದ ಕಾರಣ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದೇವದಾಸಿ ಪುನರ್‍ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್‍ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್‍ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್‍ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್‍ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ  ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Continue Reading

Trending