ಭಾವ ಭೈರಾಗಿ
ಲವ್ವಲ್ಲಿರೋ ಕಿಕ್ಕು ಮದುವೆ ನಂತರ ಕಡಿಮೆಯಾಗುತ್ತಾ..

ಹೌದಂತೆ ಇತ್ತೀಚೆಗೆ ಯಾವುದೋ ಪತ್ರಿಕೆ ನೋಡುವಾಗ ಅದರಲ್ಲಿ ಒಂದು ಸರ್ವೆ ಬಗ್ಗೆ ಬರೆದಿದ್ದರು. ಪ್ರೀತಿಸುವಾಗ ಪರಸ್ಪರರ ಮೇಲಿರುವ ಸೆಳೆತ ಮದುವೆಯಾದ ನಂತರ ಕಡಿಮೆಯಾಗುತ್ತಾ ಅಂತ ಕೇಳಿ ಒಂದು ಸರ್ವೆ ಮಾಡಿದ್ದರು. ಅದಕ್ಕೆ ಶೇಕಡಾ ಎಪ್ಪತ್ತರಷ್ಟು ವಿವಾಹಿತರ ಉತ್ತರ ಹೌದು ಎಂದಿತ್ತು. ಇದು ನನ್ನನ್ನು ಬಹಳವಾಗಿ ಚಿಂತೆಗೀಡು ಮಾಡಿತು. ಪ್ರೀತಿಸುವಾಗ ಇರುವ ಸೆಳೆತ ಮದುವೆಯ ನಂತರ ಇರಲ್ಲವಂತೆ. ಪ್ರೇಮ ವಿವಾಹವನ್ನೇ ಮಾಡಿಕೊಳ್ಳಬೇಕೆಂದು ಕನಸಿನ ಲೋಕ ಕಟ್ಟುವ ನನ್ನಂತ ಅದೆಷ್ಟೋ ಆಶಾವಾದಿಗಳಿಗೆ ಈ ವರದಿ ನೋವುಂಟುಮಾಡಿರಬಹುದು. ಇದನ್ನು ಅಷ್ಟಕ್ಕೆ ಬಿಡುವುದಾದರೂ ಎಂತು? ಒಂದೆರಡು ರಾತ್ರಿ ಇದರ ಬಗ್ಗೆ ಚಿಂತಿಸಿದೆ ಸಣ್ಣ ಸಣ್ಣ ವಿಚಾರಗಳು ಇಂಥ ದೊಡ್ಡ ಸಮಸ್ಯೆಗೆ ಉತ್ತರವಾಗಬಲ್ಲವು. ಬಹಳ ಆಲೋಚಿಸಿದ ನಂತರ ಮನಸ್ಸಿಗೆ ಸಮಾಧಾನ ಸಿಕ್ಕಿತು.
ನಾವು ಎಷ್ಟೋಬಾರಿ ಯಾವುದನ್ನು ಪ್ರೀತಿ ಎಂದುಕೊಂಡಿರುತ್ತೇವೆಯೋ ಅದು ಪ್ರೀತಿಯೇ ಆಗಿರುವುದಿಲ್ಲ. ಕೆಲವೊಮ್ಮೆ ಯಾವುದನ್ನು ಪ್ರೀತಿಯಲ್ಲ ಎಂದುಕೊಂಡಿರುತ್ತೇವೆಯೋ ಅದು ನಿಜವಾದ ಪ್ರೀತಿಯಾಗಿರುತ್ತದೆ. ಹಲವು ಬಾರಿ ಅಧಿಕಾರವನ್ನೇ ಪ್ರೀತಿ ಎಂದುಕೊಂಡಿರುವವರುಂಟು, ಇನ್ನು ಕೆಲವೊಮ್ಮೆ ಸಮಯ ನೀಡಿಕೆಯನ್ನು ಪ್ರೀತಿ ಎಂದುಕೊಂಡಿರುತ್ತೇವೆ, ಹಲವುಬಾರಿ ಸೆಳೆತವನ್ನೋ ಮತ್ತೆ ಕೆಲವೊಮ್ಮೆ ಸಾಂಗತ್ಯವನ್ನೋ, ಬಹುತೇಕ ಸಮಯದಲ್ಲಿ ಕೇವಲ ಇಂಪಾರ್ಟೆನ್ಸ್ ನ್ನೇ ಪ್ರೀತಿ ಎಂದುಕೊಳ್ಳುವುದುಂಟು. ಇಂತಹ ಕೆಲವು ಸಂದರ್ಭಗಳಲ್ಲಿ ಮೇಲೆ ಹೇಳಿರುವ ಸರ್ವೆಯ ಫಲಿತಾಂಶ ಸಿಗುವುದು ಸಾಮಾನ್ಯವೆ.
ಆಚಾರ್ಯ ರಜನೀಶರು ಒಂದು ಮಾತು ಹೇಳುತ್ತಾರೆ. “ಇಬ್ಬರು ಪ್ರೇಮಿಗಳಲ್ಲಿ ಸದಾ ಪುಟಿಯುವ ಜೀವಂತಿಕೆ ಇರುತ್ತದೆ, ಆದರೆ ಇಬ್ಬರು ವಿವಾಹಿತರನ್ನು ನೋಡಿದಾಗ ನನಗೆ ಅಯ್ಯೋ ಎನಿಸುತ್ತದೆ ಯಾಕೆಂದರೆ ಅಲ್ಲಿ ಎರಡು ಜೀವವಿಲ್ಲದ ದೇಹಗಳು ಸಂಸಾರ ಮಾಡುತ್ತಿರುತ್ತವೆ ಎಂದು” ಇದರಲ್ಲಿ ಎಷ್ಟೊಂದು ಅರ್ಥವಿದೆ ಅಲ್ವಾ. ಸರಿ ಆಚಾರ್ಯರು ಹೀಗೆ ಯಾಕೆ ಹೇಳಿದರು ಅಂತ ಚಿಂತಿಸಿದರೆ ಬಹುತೇಕ ಸಮಯದಲ್ಲಿ ಆಗುವುದೇ ಹೀಗೆ ಮದುವೆಗೂ ಮೊದಲು ಪ್ರೇಮಿಗಳಿಬ್ಬರು ಒಬ್ಬರನ್ನೊಬ್ಬರು ಅತಿಯಾಗಿ ಪ್ರೀತಿಸುತ್ತಾರೆ. ಪರಸ್ಪರರನ್ನು ಆಕರ್ಷಿಸಲು ಅವರನ್ನವರು ಚೆಂದಗೆ ಕಾಣುವಂತೆ ಅಲಂಕರಿಸಿಕೊಳ್ಳುತ್ತಾರೆ. ಜೊತೆಗೆ ಉಡುಗೊರೆಗಳನ್ನು ನೀಡುವುದು, ತಮ್ಮ ಪ್ರೇಮಿಗಾಗಿ ಚೆಂದದ ಮಾತುಗಳನ್ನಾಡುವುದು ಹೀಗೆ ಒಂದಿಲ್ಲೊಂದನ್ನು ಮಾಡುತ್ತಾ ತಮ್ಮ ಪ್ರೇಮಿಯ ಗಮನ ತಮ್ಮತ್ತಲೇ ಇರುವಂತೆ ಇಬ್ಬರೂ ಪ್ರಯತ್ನಿಸುತ್ತಿರುತ್ತಾರೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಈ ಎಲ್ಲ ಪ್ರಯತ್ನಗಳೂ ನಿಂತು ಹೋಗುತ್ತವೆ . ಆಗ ಆರಂಭವಾಗುತ್ತೆ ನೋಡಿ ನಿನಗೆ ಮೊದಲಿದ್ದ ಆಸಕ್ತಿಯಿಲ್ಲ,,, ನಿನಗೂ ಅಷ್ಟೆ ಆಗಿನಷ್ಟು ಪ್ರೀತಿ ಉಳಿದಿಲ್ಲ ಎಂಬ ಪರಸ್ಪರ ಆರೋಪಗಳು. ಇದರ ಪ್ರತಿಫಲವೇ ಈ ಮೇಲೆ ಹೇಳಿರುವ ಸರ್ವೆ.
ಇದಕ್ಕೆ ಮೂಲ ಕಾರಣ ಮದುವೆಯೆಂಬ ಅಗ್ರಿಮೆಂಟು. ಈ ಅಗ್ರಿಮೆಂಟ್ ಮಾಡಿಕೊಳ್ಳುವ ಮೊದಲು ಇಬ್ಬರೂ ಸ್ವತಂತ್ರರಾಗಿದ್ದರು ಏಕೆಂದರೆ ಆಗ ಇಬ್ಬರಲ್ಲಿ ಯಾರಿಗಾದರೂ ಬೇಸರವಾದರೆ, ನಮಗಿಬ್ಬರಿಗೂ ಒಟ್ಟಿಗಿರುವುದು ಅಸಾಧ್ಯ ಎನಿಸಿದರೆ ಸುಲಭವಾಗಿ ಹೊರ ಹೋಗಬಹುದಿತ್ತು ಈ ಅರಿವು ಇಬ್ಬರಿಗೂ ಇತ್ತು. ತನ್ನ ಪ್ರೇಯಸಿ ಲವ್ ಬ್ರೇಕಪ್ ಮಾಡಿಕೊಂಡು ಹೋಗಿಬಿಟ್ಟರೆ ಎಂಬ ಭಯ ಅವನಿಗೂ ಇತ್ತು, ಒಂದು ವೇಳೆ ಅವನು ಬಿಟ್ಟು ಹೋದರೆ ಎಂಬ ಭಯ ಅವಳಿಗೂ ಇತ್ತು. ಹೀಗಾಗಿ ಇಬ್ಬರೂ ಒಬ್ಬರಿಗೊಬ್ಬರು ಬೇಜಾರಾಗದಂತೆ, ಬೋರಾಗದಂತೆ ಮಾತು, ಹರಟೆ, ಚೇಷ್ಟೆ , ತಮಾಷೆ ,ಗಿಫ್ಟು ಹೀಗೆ ರಂಜಿಸುತ್ತಾ ಸದಾ ಬದುಕಿರುತ್ತಿದ್ದರು. ಯಾವಾಗ ಅವರಿಬ್ಬರಿಗೂ ಮದುವೆಯಾಯಿತೋ ಅಲ್ಲಿಗೆ ಅವಳು ನನ್ನನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂಬ ಗ್ಯಾರೆಂಟಿಯಾಯ್ತು . ಅವಳಿಗೂ ಅಷ್ಟೆ ಸಾವಿರಾರು ಜನರೆದುರು ತಾಳಿಕಟ್ಟಿದ ಇವನು ನನ್ನನ್ನು ಬಿಟ್ಟು ಮತ್ತೊಬ್ಬಳ ಹಿಂದೆ ಹೋಗಲು ಅಸಾಧ್ಯ ಎಂಬ ಮನೋಭಾವ ಬರುತ್ತೆ. ಅಲ್ಲಿಗೆ ಒಬ್ಬರನ್ನೊಬ್ಬರು ಆಕರ್ಷಿಸುವ ಆ ಎಲ್ಲ ಕ್ರಿಯೆಗಳಿಗೂ ತಿಲಾಂಜಲಿ ಇಡುತ್ತಾರೆ . ಆಗಲೇ ಪ್ರೀತಿ ಕಡಿಮೆಯಾಯ್ತು, ಮೊದಲಿನಂತಿಲ್ಲ ಎಂಬ ಗೊಣಗಾಟಗಳು ಆರಂಭ. ಇದಕ್ಕೆ ಕಾರಣ ಮದುವೆ ಎಂಬ ಒಂದು ಅಗ್ರಿಮೆಂಟು. ಇದು ನಮ್ಮ ಅಂದರೆ ಮನುಷ್ಯರ ಸ್ವಾಭಾವಿಕ ಬುದ್ದಿಯಿರಬಹುದು. ಯಾವುದು ನನ್ನದು ಎಂದು ಖಾತ್ರಿಯಾಗುತ್ತದೆಯೋ ಅದಕ್ಕೆ ಅವನು ಇಂಪಾರ್ಟೆನ್ಸ್ ಕೊಡಲಾರ. ಯಾವುದು ಇತರರದ್ದೋ ಅಥವಾ ನನ್ನಿಂದ ಇದು ಕೈತಪ್ಪಿ ಹೋಗಬಹುದೋ ಅದರ ಬಗ್ಗೆ ಗಮನ ಹೆಚ್ಚು. ಮದುವೆಯ ನಂತರವೂ ಪ್ರೀತಿಸುವಾಗ ಕೊಡುವಷ್ಟು ಸ್ವತಂತ್ರ ವನ್ನೇ ಪರಸ್ಪರರು ನೀಡಿದರೆ ಮತ್ತು ಅವರನ್ನು ತನ್ನ ಆಸ್ತಿಯಂತೆ ನೋಡದೇ ಇದ್ದರೆ ಈ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಇದಕ್ಕೆ ಉತ್ತರವಾಗಬಲ್ಲ ಸಾವಿರಾರು ಅಂಶಗಳಿವೆ ಎಲ್ಲವನ್ನೂ ಒಟ್ಟಿಗೆ ಮಾತನಾಡಿದರೆ ಬೋರಾಗಬಹುದು ಮತ್ತೆ ಮಾತಾಡುವ ಅಷ್ಟರಲ್ಲಿ ನಾನು ಹೇಳಿದ ಕಾರಣ ಸರಿಯೋ ಎಂಬ ಬಗ್ಗೆ ನೀವೂ ಸ್ವಲ್ಪ ಆಲೋಚಿಸಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ಭಾವ ಭೈರಾಗಿ
ಕವಿತೆ | ಯುಗಾದಿ ಪುರುಷ

- ಡಾ.ಕೆ.ಎ.ಓಬಳೇಶ್
ಯುಗ ಯುಗದಾಚೆಗಿನ
ಬಂಧನದ ಬದುಕಿಗೆ
ಬಿಡುಗಡೆಯ ಹಾದಿ ತೋರಿ
ಹೊಸ ಯುಗದತ್ತ ಕೊಂಡೊಯ್ದ
ಯುಗಪುರುಷ ನೀನಾದೆ.
ಯುಗ ಯುಗದಾದಿಯಾಗಿ
ಸಾಗುತ್ತಲೆ ಇತ್ತು
ಸ್ವಾಭಿಮಾನವಿರದ ಯುಗಾದಿ
ನಿಮ್ಮ ಜ್ಞಾನವೇ ನಮಗಾಯ್ತು
ಹೊಸ ಸಂವತ್ಸರಕೆ ನಾಂದಿ.
ಸ್ವಾಭಿಮಾನಿ ಹೋರಾಟದಲಿ
ಕಹಿಯ ತಾನುಂಡು
ಸಿಹಿಯ ನಮಗಂಚಿ
ನಮಗೊಂದು ಹೊಸ ಯುಗವ
ಕರುಣಿಸಿದ ಕರುಣಾಳು ನೀನಾದೆ.
ನಿಮ್ಮ ಹೊರತು ಸ್ವಾಭಿಮಾನದ ಯುಗವೇ ಇಲ್ಲ
ನೀವೆ ಈ ಜಗದ ಹಾದಿ
ನೀವೆ ಯುಗದ ಆದಿ
ನೀವೆ ನಮ್ಮ ಯುಗಾದಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಭಾವ ಭೈರಾಗಿ
ಕವಿತೆ | ಅವಳು ಮಸಣ ಕಾಯುವ ಪಾರ್ವತಿ..!

- ಪದ್ಮಶ್ರೀ ಗೋವಿಂದರಾಜು,ಭದ್ರಾವತಿ
ಹುಂ!!
ಅವಳ ಪರಶಿವನು ಅದೇ ಮಸಣದಲಿ ಐಕ್ಯವಾಗಿಹನು
ಅದಕೇ ಅವಳು ಹಲವು ನಿರ್ಜೀವ ಅನಾಥ ದೇಹಗಳ
ಹಗಲು ರಾತ್ರಿಯೇನ್ನದೆ ಕಾಯುವಳು
ಅನಾಥವಾದ ದೇಹಕೆ ಅವಳಿಂದಲೇ ಮೋಕ್ಷ
ಅವಳೇ ವಂಶವಿಲ್ಲದ ದೇಹಕೆ ವಾರಸುದಾರಳು!!
ಚಿತೆಯ ಅಗ್ನಿ ಸ್ಪರ್ಶ ಮಾಡಿ ತಿರುಗಿ
ನೋಡದೆ ಹೋದ ನೆಂಟರು,
ಉಳಿಸಿ ಹೋದ ಬೆಂಕಿಯ
ಅರದಂತೆ ಉರಿಸುವಳು ಅವಳು.
ಮಕ್ಕಳು ಮರಿಯ ಸಂಸಾರವೇ
ಇಲ್ಲದ ಅವಳಿಗೆ ಆಗಾಗ ಬರುವ
ದೇಹಗಳ ಜೊತೆ ಬಂದ ಜನರು
ನಡೆದಾಡುವ ಶವಗಳಂತೆ ಕಾಣುವರು
ಕಾರಣ
ಮಸಣವೊಂದೇ ಕೊನೆಯ ಮನೆ
ಆಕೆ ಅರಿತಿದ್ದಾಳೆ
ಅದಕೇ
ಆಕೆ ಮಸಣ ಕಾಯುವ ಪಾರ್ವತಿ!!
(ಸುಮಾರು ವರ್ಷಗಳಿಂದ ಶಿವಮೊಗ್ಗ ಸ್ಮಶಾನ ಕಾಯುವುದು ಒಬ್ಬ ಹೆಣ್ಣು.
ಆಕೆಯ ಛಲದ ಬದುಕಿಗೆ ಒಂದು ಪ್ರಣಾಮ )
ಸುದ್ದಿದಿನ.ಕಾಂ | ವಾಟ್ಸಾಪ್ | 9980346243

ಭಾವ ಭೈರಾಗಿ
ಕಾದಂಬರಿ ವಿಮರ್ಶೆ | ಸ್ವಪ್ನದಲ್ಲಿ ಸೊರಗಿದ ಪ್ರೀತಿ

- ಸಿಂಪಲ್ ಸಿಂಚು
ಇತ್ತೀಚಿಗಷ್ಟೇ ಕರುನಾಡ ಹಣತೆ ಕವಿ ಬಳಗದ ಮೂಲಕ ಪರಿಚಿತರಾದ ಕೆ.ಸಿರಿ (ಗ್ರಾಮ ಲೆಕ್ಕಿಗರು) ಚಾಮರಾಜನಗರ. ಇವರು ಪರಿಚಯವಾದ ಹತ್ತು ನಿಮಿಷದಲ್ಲಿಯೇ ಇವರ ಕಾದಂಬರಿ ನನ್ನ ಕೈಗೆ ತಲುಪಿತು. “ಸ್ವಪ್ನದಲ್ಲಿ ಸೊರಗಿದ ಪ್ರೀತಿ”. ಅತ್ಯದ್ಭುತವಾದ ಶೀರ್ಷಿಕೆ ಹೊಂದಿದೆ. ನಾನು ಒಬ್ಬಳು ಬರಹಗಾರ್ತಿಯಾಗಿ ಶೀರ್ಷಿಕೆ ನೋಡಿ ನನ್ನದೇ ಆದಂತಹ ಒಂದು ಕಲ್ಪನೆಯಲ್ಲಿ ನಾನು ಮುಳುಗಿದಾಗ.
ಪ್ರೀತಿಯೆಂದರೆ, ಪ್ರೇಮ ಅಷ್ಟೇ ಅಂದುಕೊಂಡಿದ್ದೆ ಆದರೆ ಕುತೂಹಲದಿಂದ ಕಾದಂಬರಿಯನ್ನು ಓದುತ್ತಿರುವಾಗ ಅರ್ಥವಾಯಿತು, ಪ್ರೀತಿಯೆಂದರೆ ಹೆಸರು ಹಾಗೆಯೇ ಪ್ರೇಮ ಅನ್ನೋದು ಕೂಡ ಹೆಸರು, ಅಂತ. ಸಮಾಜದಲ್ಲಿ ಪ್ರೇಮ ನಿವೇದನೆಯನ್ನು ಮೊದಲಿಗೆ ಹುಡುಗರು ಮಾಡಬೇಕು, ಅದಕ್ಕೂ ಮೊದಲು ಪ್ರೇಮ ನಿವೇದನೆಯನ್ನು ಹುಡುಗಿ ಮಾಡಿದರೆ ತಪ್ಪು.
ಎಂಬುದು ವಿಶ್ವವಿಖ್ಯಾತಿ ಅಭಿಪ್ರಾಯ. ಅದು ಇನ್ನು ಹಲವಾರು ಜನರ ಅಭಿಪ್ರಾಯವೂ ಹೌದು. ಹೆಣ್ಣಾದವಳು ತನ್ನೊಳಗಿನ ಭಾವನೆಗಳನ್ನು, ನನ್ನೊಳಗಿನ ತಲ್ಲಣಗಳನ್ನು ಹೊರಹಾಕಲು ಸಮಾಜದಲ್ಲಿ ಸರಿಯಾದ ರೀತಿಯ ಸ್ವತಂತ್ರ ಕೂಡ ಇಲ್ಲ ಅಂತಹ ಕಟ್ಟುಪಾಡುಗಳಿಗೆ ಸ್ವಪ್ನದಲ್ಲಿ ಸೊರಗಿದ ಪ್ರೀತಿಯು ಪರಿಹಾರವಾಗಿದೆ.
ಇದನ್ನೂ ಓದಿ | ಪುಸ್ತಕ ವಿಮರ್ಶೆ | ಮೋಹದ ಮೋಡಗಳು
ಈ ಕಾದಂಬರಿಯನ್ನೂ ಪೂರ್ತಿಯಾಗಿ ಇದರಲ್ಲಿ ಮುಳುಗಿ ಓದಿದಾಗ ಮಧ್ಯದಿಂದ ಹಿಡಿದು ಕೊನೆಯವರೆಗೂ ದುಃಖ ನನ್ನನ್ನು ಅವರಿಸುತ್ತದೆ. ಪ್ರೀತಿ ಪ್ರೇಮ್ ಎಂಬ ಹೆಸರಿನ ಹೊಂದಾಣಿಕೆ ತುಂಬಾ ಅದ್ಭುತವಾಗಿದೆ. ಪ್ರೀತಿ ಪ್ರೇಮ್ ನಾ ಹುಟ್ಟಿದ ದಿನ, ಕೆಂಪುಬಣ್ಣದ ಅಭಿರುಚಿ, ಪ್ರೀತಿ ಪ್ರೇಮಿಗಳ ದಿನವನ್ನು ಆಚರಿಸುತ್ತಿದಂತಹ ಪದ್ಧತಿ.
ಎಲ್ಲವೂ ಕೂಡ ತುಂಬಾ ಮನಸ್ಸಿಗೆ ಇಷ್ಟವಾಯಿತು. ಹಾಗೆಯೇ ಪ್ರೀತಿ ಎಷ್ಟು ವರ್ಷಗಳ ಕಾಲವಾದರೂ ತನ್ನ ಪ್ರೀತಿಯನ್ನು ಉಳಿಸಿಕೊಂಡು ಹೋಗುವ ರೀತಿ. ನಮ್ಮಂತಹ ಹೂಮನಸ್ಸಿಗರಿಗೆ ಸ್ಫೂರ್ತಿದಾಯಕವಾಗಿದೆ. ಈ ಕಾದಂಬರಿಯಲ್ಲಿ ಹುಚ್ಚುಕೋಡಿ ಮನಸ್ಸಿನ ಚಿತ್ರಣವನ್ನು ಮತ್ತು ನಿಯಂತ್ರಣವನ್ನು, ಪ್ರೇಮ್ನಾ ಮೂಲಕ ಬಣ್ಣಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರೀತಿ-ಪ್ರೇಮವೆಂದು ಆವೇಶ ಪಟ್ಟು ಆತ್ಮಹತ್ಯೆ, ಸಾವಿನ ಕೃತ್ಯಗಳನ್ನು ಕೈಗೊಳ್ಳುವ ಯುವಜನರಿಗೆ ಜೀವನದ ಗುರಿ ಮುಖ್ಯ ಎಂಬುದನ್ನು ತಿಳಿಸುತ್ತದೆ. ಮುಂದುವರೆದು ಕನ್ನಡ ದೇಸಿ ಪದಗಳ ಸಂಭಾಷಣೆ, ನಿರ್ಗಳತೆಯಿಂದ ಕಾದಂಬರಿ ಓದುವವರಿಗೆ ಪ್ರಯಾಣದಲ್ಲಿ ನಿಲ್ದಾಣಗಳಂತೆ ಸರಳವಾಗಿ ಅರ್ಥವಾಗುವ ಕವನಗಳು ಕಾದಂಬರಿಯ ವಿಶೇಷತೆಯಾಗಿದೆ.
ಅಪ್ಪ-ಅಮ್ಮನ ಮಾತಿಗೆ ಬೆಲೆ ಕೊಡದಿರುವ ಯುವಜನಾಂಗಕ್ಕೆ ಮಾದರಿ ಪ್ರೇಮ್ ಒಂದೆಡೆ ಆದರೆ, ಇನ್ನೊಂದೆಡೆ ಅದೇ ಪ್ರೇಮ್ ಪ್ರೀತಿಯ ಪ್ರೀತಿಯನ್ನು ನಿಭಾಯಿಸಲು ಬರದೆ, ತನಗೆ ತಾನು ಮೋಸ ಮಾಡಿಕೊಂಡಿದ್ದು ತುಂಬಾ ದುಃಖಕರ ವಿಚಾರ. ಅತಿ ಹೆಚ್ಚು ಭಾವುಕರಾದ ಕ್ಷಣ ಪ್ರೇಮ್ ತನ್ನ ಅಪ್ಪನನ್ನು ಪ್ರೀತಿಯ ಗೋರಿಯ ಹತ್ತಿರ ಕರೆದುಕೊಂಡು ಹೋಗಿ.
ತನ್ನ ದುಃಖವನ್ನು ಹೇಳಿಕೊಂಡು ಅಪ್ಪ-ಮಗ ಇಬ್ಬರೂ ಪಶ್ಚತಾಪ ಪಡುವ ಕ್ಷಣ.ಪ್ರೀತಿಯ ಬದಲಿಗೆ ಪಾರ್ವತಿ ಬಂದಾಗ, ಪ್ರೀತಿಯನ್ನು ಪಾರ್ವತಿಯಲ್ಲಿ ಕಾಣುವುದು!! ಇಲ್ಲದಿರುವ ವ್ಯಕ್ತಿಗಳನ್ನು ಇರುವ ವ್ಯಕ್ತಿಗಳೊಂದಿಗೆ ಕಲ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅಂತಹ ಸಂದರ್ಭವನ್ನು ತುಂಬಾ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.
ನಾನು ಪಿಯುಸಿ ನಲ್ಲಿರುವಾಗ ವಿನಿತ್ ಎಂಬ ಹುಡುಗ ದ್ವಿತೀಯ ಪಿಯುಸಿ ಪರೀಕ್ಷೆಯ ಸಮಯದಲ್ಲಿ ಪ್ರೇಮ ನಿವೇದನೆಯನ್ನು ತನ್ನ ಗೆಳೆಯರೊಂದಿಗೆ ಹೇಳಿಕಳಿಸಿದ್ದ ನಾನು ಮೊದಲು ಪರೀಕ್ಷೆ ಬರೆದು ಪಾಸ್ ಆಗಲಿಕ್ಕೆ ಹೇಳು ಎಂದು ಬೈದು ಕಳಿಸಿದ ಕ್ಷಣ ನೆನಪಾಗಿ ನಕ್ಕಿದೆ.
ಈ ಕಾದಂಬರಿಯನ್ನು ಓದಿದ ಕ್ಷಣಗಳು ನನ್ನನ್ನು ತುಂಬಾ ಯೋಚನೆ, ತುಂಬಾ ಭ್ರಮೆಗಳಿಗೆ, ತುಂಬಾ ಪ್ರಶ್ನೆಗಳಿಗೆ ಅನುವು ಮಾಡಿ ಎಲ್ಲದಕ್ಕೂ ಕೊನೆಯಲ್ಲಿ ಉತ್ತರ ಹುಡುಕುವಲ್ಲಿ ವಿಶಾಲವಾದ ಮನಸ್ಥಿತಿಯನ್ನು ತಂದುಕೊಟ್ಟಂತಹ “ಕೆ. ಸಿರಿಯವರ ಸ್ವಪ್ನದಲ್ಲಿ ಸೊರಗಿದ ಪ್ರೀತಿಗೆ ಸದಾಕಾಲ ಚಿರಋಣಿ”. ಶುಭವಾಗಲಿ ಶ್ರೀಧರ್ ಸರ್. ಇನ್ನು ಹಲವಾರು ವಿಶೇಷ ವಿಭಿನ್ನ ಕಾದಂಬರಿಗಾಳಿಗಾಗಿ ಕಾಯುತ್ತಿರುವ ಆಶಾ ಜೀವಿ ನಿಮ್ಮ ಅನುಯಾಯಿ. ಸಿಂಪಲ್ ಸಿಂಚು. ಧನ್ಯವಾದಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಬಹಿರಂಗ6 days ago
ಸಂವಿಧಾನ ನಿತ್ಯದ ಪಾಠವಾಗಲಿ..!
-
ಅಂತರಂಗ6 days ago
ಮಹಾ ಮಾನವತಾವಾದಿ ಅಂಬೇಡ್ಕರ್ ನೆನಪಿನಲ್ಲಿ..!
-
ನಿತ್ಯ ಭವಿಷ್ಯ6 days ago
ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು ; ಧನ ಯೋಗ ಪ್ರಾಪ್ತಿ
-
ಭಾವ ಭೈರಾಗಿ6 days ago
ಕವಿತೆ | ಯುಗಾದಿ ಪುರುಷ
-
ಲೈಫ್ ಸ್ಟೈಲ್4 days ago
ತರಕಾರಿ ಸಿಪ್ಪೆಯಿಂದ ಪೇಪರ್ ತಯಾರಿಸಿದ ಹತ್ತರ ಬಾಲೆ ಮಾನ್ಯ ಹರ್ಷ..!
-
ನಿತ್ಯ ಭವಿಷ್ಯ6 days ago
ಈ ರಾಶಿಯವರಿಗೆ ಶುಭಕಾರ್ಯ ನೆರವೇರಲಿದೆ..! ಬುಧವಾರ- ರಾಶಿ ಭವಿಷ್ಯ ಏಪ್ರಿಲ್-14,2021
-
ನಿತ್ಯ ಭವಿಷ್ಯ5 days ago
ಈ ರಾಶಿಯವರು ಹೊಸ ಮನೆ ನಿರ್ಮಾಣ ಮಾಡಿ,ಮದುವೆ ಕಾರ್ಯ ಮಾಡುವಿರಿ..! ಗುರುವಾರ- ರಾಶಿ ಭವಿಷ್ಯ ಏಪ್ರಿಲ್-15,2021
-
ನಿತ್ಯ ಭವಿಷ್ಯ4 days ago
ಈ ರಾಶಿಯವರು ಕುಟುಂಬ ಸದಸ್ಯರೊಂದಿಗೆ “ಸಂತಾನದ” ಸಿಹಿಸುದ್ದಿ ಕೇಳಿ ಸಂತಸ ಹಂಚಿಕೊಳ್ಳುವಿರಿ! ಶುಕ್ರವಾರ-ಏಪ್ರಿಲ್-16,2021