Connect with us

ಭಾವ ಭೈರಾಗಿ

ಸಂಜೆ ಐದರ ಮಳೆ : ಕವಿಯ ಕಿರು ಪರಿಚಯ

Published

on

  • ಸಂಗಮೇಶ ಎನ್ ಜವಾದಿ, ಕೊಡಂಬಲ, ಬೀದರ ಜಿಲ್ಲೆ

ನ್ನಡಾಂಬೆಯ ಸಂಪ್ರೀತಿಯ ಮೇರು ವ್ಯಕ್ತಿತ್ವದ ಕವಿ,ತಾಯ ನಿತ್ಯೋತ್ಸವ ಕಟ್ಟಿದ ಸಾಹಿತಿ,ನವ್ಯಕಾವ್ಯ ಚಳುವಳಿಯ ಹರಿಕಾರ,73ನೇ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷ,ಹಲವು ಬಹು ಪ್ರಶಸ್ತಿಗಳ ಮುಡಿಗೇರಿಸಿಕೊಂಡ ಧೀಮಂತ,ಸಾರೆ ಜಹಾಸೇ ಕನ್ನಡಕ್ಕೆ ಭಾಷಾಂತರಿಸಿದ ಭಾಷಾಭಿಮಾನಿ,ಶಿಶು ಸಾಹಿತ್ಯದಲ್ಲು ಚಾಪು ಮೂಡಿಸಿದ ಚಾಣಕ್ಷ, ಕನ್ನಡ ತನವನ್ನು ಎತ್ತಿ ಹಿಡಿದ ಪ್ರಗತಿಪರ ಚಿಂತನೆಯ ಸರದಾರ, ನಮ್ಮ ಹೆಮ್ಮೆಯ ನಿತ್ಯೋತ್ಸವ‌ಕವಿ ಕೆ.ಎಸ್.ನಿಸಾರ್ ಅಹ್ಮದ್.

ಮನೆಯ ಮಾತೃಭಾಷೆ ಉರ್ದು ಆದರೂ ಅವರೊಬ್ಬ ಅಪ್ಪಟ ಕನ್ನಡಿಗ. ನಾವಿಂದು ನಮ್ಮ ಹೆಮ್ಮೆಯ ಸಭ್ಯ , ಭಾವೈಕ್ಯ, ಕನ್ನಡದ ನಿತ್ಯೋತ್ಸವದ ನಮ್ಮೆಲ್ಲರ ಪ್ರೀತಿ – ಸ್ನೇಹದ ಕವಿ ಕೊಕ್ಕರೆಹೊಸಳ್ಳಿ ಶೇಖ್ ಹೈದರ್ ನಿಸಾರ್ ಅಹಮದ್ ಅವರು, ಅವರ ಕುರಿತು ಬರೆಯುವ ಸಣ್ಣ ಪ್ರಯತ್ನ ಮಾಡಲಾಗಿದೆ.

ಪ್ರೊ. ಕೆ.ಎಸ್.ನಿಸಾರ್ ಅಹಮದ್ ರವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯ ಷೇಕ್ ಹೈದರ್ ಮತ್ತು ಹಮೀದಾ ಬೇಗಂ ದಂಪತಿಗಳ ಮಗನಾಗಿ ಫೆಬ್ರುವರಿ 5 ,1936ರಲ್ಲಿ ಜನಿಸಿದರು. ಇವರ ತಂದೆ ಸರಕಾರಿ ನೌಕರಿಯಲ್ಲಿದ್ದ ಕಾರಣದಿಂದ ಕನ್ನಡ, ಇಂಗ್ಲಿಷ್, ಸಂಸ್ಕೃತ ಬಲ್ಲ ಸುಸಂಸ್ಕೃತರಾಗಿದ್ದರು ಹಾಗಾಗಿ ನಿಸಾರರಿಗೂ ಅದೇ ವ್ಯಕ್ತಿತ್ವ ರಕ್ತಗತವಾಗಿತ್ತು. ಅವರ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ದೇವನಹಳ್ಳಿಯಲ್ಲಿ ಮುಗಿಸಿ ಪ್ರೌಢಶಾಲೆಯನ್ನು ಹೊಸಕೋಟೆಯಲ್ಲಿ ಮುಗಿಸಿದ ನಂತರ ಕಾಲೇಜಿಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೇರಿ 1959ರಷ್ಟರಲ್ಲಿ ಭೂಗರ್ಭ (ಭೊವಿಜ್ಞಾನ) ಶಾಸ್ತ್ರದಲ್ಲಿ ಆನರ್ಸ್‌ ಪದವಿ ಪಡೆದಿರುತ್ತಾರೆ ಮತ್ತು ಅದೇ ವಿಷಯದಲ್ಲಿ ಅಂದರೆ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಹ ಪಡೆಯುತ್ತಾರೆ.

ತದನಂತರ ಕಾಯಕ ವೃತ್ತಿಯನ್ನು ಭೂವಿಜ್ಞಾನಿಯಾಗಿ ಕಲಬುರ್ಗಿಯಲ್ಲಿ ಕೆಲಸ ಮಾಡಲು ಆರಂಭಿಸಿದರಾದರೂ, ಆ ಕೆಲಸದಲ್ಲಿ ಹೆಚ್ಚು‌ ಆತ್ಮತೃಪ್ತಿ ದೊರೆಯದ ಕಾರಣ ಮತ್ತೆ ಹೆಚ್ಚಿನ ಅಭ್ಯಾಸ ಮಾಡಬೇಕೆಂದು ನಿಶ್ಚಯಿಸಿ ಎಂ.ಎಸ್‌. ಸಿ. ಸೇರಿ ಎಂ.ಎಸ್ಸಿ ಪಡೆಯುತ್ತಾರೆ,ಪಡೆದ ನಂತರ ಅವರು ಓದಿದ ಕಾಲೇಜು ಒಳಗೊಂಡಂತೆ, ಬೆಂಗಳೂರು ಚಿತ್ರದುರ್ಗ, ಶಿವಮೊಗ್ಗ, ಹಲವಾರು ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗುವ ಮೂಲಕ ಯಶಸ್ವಿಯಾಗಿ ಸೇವೆ ಸಲ್ಲಿಸಿ 1994ರಲ್ಲಿ ನಿವೃತ್ತರಾಗುತ್ತಾರೆ.

ಸಾಹಿತ್ಯದ ಗೀಳು

ನಿಸಾರ್ ಅಹಮದ್ ರವರ ಸುದೈವವೂ
ಎನೋ, ಅವರು ಓದಿರುವ ಕಾಲೇಜಿನಲ್ಲಿ ಎಲ್. ಗುಂಡಪ್ಪ, ಎಂ.ವಿ. ಸೀತಾರಾಮಯ್ಯ, ಜಿ.ಪಿ. ರಾಜರತ್ನಂ, ವಿ.ಸೀತಾರಾಮಯ್ಯ ಅವರಂತಹ ಮಹಾನ್ ಕನ್ನಡ ಸಾಹಿತ ಅಮರ ಪ್ರೇಮದ ಗುರುಗಳಾಗಿದ್ದರು(ಗುರುಗಳು ಪಡೆದಿದ್ದರು) ಈ ಕಾರಣಗಳಿಂದ‌ ನಿಸಾರರಲ್ಲಿ ಕನ್ನಡ ಸಾಹಿತ್ಯಾಸಕ್ತಿ (ಸಾಹಿತ್ಯಾಬಿರುಚಿ) ಬೆಳೆಯಲು ಕಾರಣಿಭೊತರಾಗುವ ಮೂಲಕ ಪ್ರೋತ್ಸಾಹಕರಾಗುತ್ತಾರೆ. ನಿಸಾರ್ ಅಹಮದ್ ಅವರ ಸಾಹಿತ್ಯಾಸಕ್ತಿ 10ನೇ ವಯಸ್ಸಿನಲ್ಲೇ
ಪ್ರಕಟವಾಗಿ, ಜಲಪಾತ’ದ ಬಗ್ಗೆ ಅವರು ಬರೆದ ಕವನ ಕೈಬರಹದ ಪತ್ರಿಕೆಯಲ್ಲಿ ಪ್ರಕಟಣೆ ಯಾಗುವ ಮೂಲಕ ಇಡೀ ಕರ್ನಾಟಕದಲ್ಲಿ ಇವರ ಹೆಸರು ಮನೆ ಮಾತಾಗಿತ್ತು ಎನ್ನುವುದು ನಾವ್ಯಾರು ಮರೆಯಬಾರದು. ಅಂದಿನಿಂದಲೇ ಅವರು ಕನ್ನಡ ಭಾಷಾ ಪ್ರೇಮದ ಬಗೆ ಅಪಾರವಾದ ಪ್ರೀತಿಯನ್ನು ಹೊಂದಿದರು.

ಹೀಗಾಗಿ‌ ಸಾಹಿತ್ಯದ ಗೀಳನ್ನು ಅವರ ಹೃನ್ಮನದ ಅಂತರಂಗದಲ್ಲಿ ಹಚ್ಚಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಇತಿಹಾಸದ ಪುಟಗಳಲ್ಲಿ ನಾವೆಲ್ಲರೂ ಕಾಣಬಹುದಾಗಿದೆ ಬಂಧುಗಳೆ. ಹಾಗಾಗಿ ಧಾರ್ಮಿಕ ಆಚರಣೆಯಲ್ಲಿ ಅವರು ಇಸ್ಲಾಂ ಆನುಯಾಯಿಯಾದರೂ ಅವರು ಬರೆದ ಅನೇಕ ಕವನಗಳು ಎಲ್ಲಾ ಧಾರ್ಮಿಕಾಭಿಮಾನಿಗಳು ಖುಷಿಯಿಂದ ಸ್ವೀಕರಿಸುವ ಮೂಲಕ ಹಾಡುತ್ತಿದ್ದರು.

ಇಂತಹ ಹಾಡನ್ನು ಒಬ್ಬ ಮುಸ್ಲಿಂ ಕವಿ ಬರೆದಿದ್ದಾರೆ ಎಂದು ಊಹಿಸಲೂ ಅಸಾಧ್ಯವಾಗುವಷ್ಟರ ಮಟ್ಟಿಗಿನ ಭಾವೈಕ್ಯ ಕವಿ ಇವರಾಗಿದರು ಎಂಬುವುದೇ ಹೆಮ್ಮೆ. ಇದೇ ನಿಸಾರರು ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸೇರಿ ಇನ್ನಿತರ ಧರ್ಮಗಳ
ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಉಪನ್ಯಾಸ ನೀಡುವ ಮೂಲಕ ಅವರೊಬ್ಬ ಪ್ರಗತಿಪರ ಚಿಂತಕರಾಗಿ,ಸರ್ವ ಧರ್ಮಗಳ ಪ್ರೀತಿಯ
ಸಮಾತವಾದಿಯಾಗಿ ನಮ್ಮೆಗೆಲ್ಲರಿಗೂ ಎದ್ದು ಕಾಣುತ್ತಿದ್ದರು. ಕಳೆದ ಐದು ದಶಕಗಳಲ್ಲಿ ಸುಮಾರು 25 ಅಧಿಕ ಕೃತಿಗಳನ್ನು ರಚಿಸಿದ್ದಾರೆ.

ಅವುಗಳಲ್ಲಿ ಮನಸು ಗಾಂಧಿಬಜಾರು ಹಾಗು ನಿತ್ಯೋತ್ಸವ ಅತ್ಯಂತ ಜನಪ್ರಿಯ ಕವನ ಸಂಕಲನಗಳಾಗಿವೆ.ನೆನದವರ ಮನದಲ್ಲಿ, ನಾನೆಂಬ ಪರಕೀಯ, ಅನಾಮಿಕ ಆಂಗ್ಲರು, ಸುಮಹೂರ್ತ, ಸಂಜೆ ಐದರ ಮಳೆ, ಸ್ವಯಂ ಸೇವೆಯ ಗಿಳಿಗಳು ಮುಂತಾದ ಕವನ ಸಂಕಲನಗಳೆಂದರೇ, ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ, ಷೇಕ್ಸ್ ಪಿಯರ್ ಮುಂತಾದ ಗದ್ಯವನ್ನೂ ರಚಿಸುವ ಜೊತೆಯಲ್ಲಿ ಒಥೆಲ್ಲೊ ಮತ್ತು ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಇನ್ನು ಕನ್ನಡದ ಪ್ರಪ್ರಥಮ ಧ್ವನಿಸುರಳಿಯಾದ ನಿತ್ಯೋತ್ಸವ ಕವಿತೆಗಳ ಬಗ್ಗೆ ಹೇಳುತ್ತಾ ಹೋದರೆ ಇಡೀ ದಿನವೇ ಬೇಕಾಗಬಹುದೇನೋ? ಹಾಗಾಗಿ ಅದರಲ್ಲೂ ಜೋಗದ ಸಿರಿಬೆಳಕಿನಲ್ಲಿ ಹಾಡನ್ನು ಹಾಡಿಕೊಂಡಾಗಲೆಲ್ಲಾ ಮೈ ರೋಮಾಂಚನಗೊಳ್ಳುತ್ತದೆ ಎನ್ನುವುದಂತು ಸತ್ಯ. ಮಲೆನಾಡಿನ, ಸಹ್ಯಾದ್ರಿಯ ತಪ್ಪಲಲ್ಲಿರುವ ಜೋಗದ ಜಲಪಾತ ಮತ್ತು ಅವರ ಸುತ್ತಮುತ್ತಲಿನ ಪರಿಸರವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವಾಗ, ಅವರೊಳಗಿರುವ ಪರಿಸರ ಪ್ರೇಮಿಯ ಅನಾವರಣವಾಗಿತ್ತದೆ ಎಂದರೆ ತಪ್ಪಾಗಲಾರದು.ಹೀಗೆ ಹತ್ತು ಹಲವಾರು ರೀತಿಯಲ್ಲಿ ಕನ್ನಡ ಸಾರಸ್ವತಃ ಲೋಕಕ್ಕೆ ಅಮೂಲ್ಯ ಕೊಡುಗೆಗೆಳು ನೀಡಿದ್ದಾರೆ.

ಅವರ ಗೌರವ ಕವನ ಸಂಕಲನಗಳು

  • ಮನಸು ಗಾಂಧಿ ಬಜಾರು (1960), ನೆನೆದವರ ಮನದಲ್ಲಿ (1964), ಸುಮಹೂರ್ತ (1967), ಸಂಜೆ ಐದರ ಮಳೆ (1970), ನಾನೆಂಬ ಪರಕೀಯ (1974), ಆಯ್ದ ಕವಿತೆಗಳು (1974), ನಿತ್ಯೋತ್ಸವ (1976), ಸ್ವಯಂ ಸೇವೆಯ ಗಿಳಿಗಳು (1977), ಅನಾಮಿಕ ಆಂಗ್ಲರು (1982), ಬಹಿರಂತರ (1990), ಸಮಗ್ರ ಕವಿತೆಗಳು (1991), ನವೋಲ್ಲಾಸ (1994), ಆಕಾಶಕ್ಕೆ ಸರಹದ್ದುಗಳಿಲ್ಲ (1998), ಅರವತ್ತೈದರ ಐಸಿರಿ (2001), ಸಮಗ್ರ ಭಾವಗೀತೆಗಳು (2001, ಪ್ರಾತಿನಿಧಿಕ ಕವನಗಳು (2002) ಇವರ ಕವನ ಸಂಕಲನಗಳಾಗಿವೆ.

ಅವರ ಗೌರವ ಗದ್ಯ ಸಾಹಿತ್ಯ ಕೃತಿಗಳು

ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೊ ಅಣ್ಣ ಷೇಕ್ಸ್ ಪಿಯರ್ನ‌ನ ಒಥೆಲ್ಲೊದ ಕನ್ನಡಾನುವಾದ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ಕೃತಿಯ ಕನ್ನಡಾನುವಾದ. ಅಮ್ಮ ಆಚಾರ ಮತ್ತು ನಾನು – ಇವುಗಳು ನಿಸಾರ್ ಅಹಮದ್ ರವರ ಗದ್ಯ ಕೃತಿಗಳಾಗಿವೆ.

ಸರಳ ಶಿಸ್ತಿನ ಕವಿ

ಕೆ.ಎಸ್. ನಿಸಾರ್ ಅಹಮದ್
ಅವರು ಸೇವೆಯಿಂದ ನಿವೃತ್ತರಾಗಿದ್ದರೂ ಶಿಸ್ತಿನ ಸಿಪಾಯಿಯಂತೆ ಸದಾ ಕಾಲವೂ ಸೂಟೂಬೂಟುಧಾರಿಯಾಗಿಯೇ ನಮಗೆ ಕಾಣುತ್ತಿದ್ದರು. ಅವರ ಅಚ್ಚು ಮೆಚ್ಚಿನ ಗಾಂಧೀಬಜಾರಿನ, ವಿಧ್ಯಾರ್ಥಿ ಭವನ ಅಥವಾ ಡಿವಿಜಿ ರಸ್ತೆಯಲ್ಲಿ ಯಾವುದೇ ಹಮ್ಮು ಬಿಮ್ಮಿಲ್ಲದೆ ನಿಗರ್ವಿಯಾಗಿ ಸಾಧಾರಣ ನಾಗರೀಕರ ಹಾಗೆಯೇ ಅವರನ್ನು ನೋಡಬಹುದಾಗಿತ್ತು ಸ್ನೇಹಿತರೆ.

ಯಾವುದೇ ಸಭೆ ಸಮಾರಂಭಗಳಿಗೆ, ಪುಸ್ತಕ ಬಿಡುಗಡೆಯ ಸಮಾರಂಭಗಳಿಗೆ ಅವರನ್ನು ಆಹ್ವಾನಿಸಿದರೆ, ಅವರು ಬಿಡುವಾಗಿದ್ದಲ್ಲಿ ಖಂಡಿತವಾಗಿಯೂ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಕ್ಕೆ ಬಂದು ಸಭಿಕರೊಂದಿಗೆ ಅವರ ಅನುಭವಗಳನ್ನು ಹಂಚಿಕೊಳ್ಳುವ ಒಬ್ಬ ಸರಳ ಸಜ್ಜನಿಕೆಯ ಕವಿಯಾಗಿ ನಮ್ಮೆಗೆಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು.ಕನ್ನಡದ ನೆಲ, ಜಲವನ್ನು ಕಣ್ಣಿಗೆ ಕಟ್ಟುವಂತೆ ಕವನಗಳ ಮೂಲಕ ಮೂಡಿಸಿ, ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸಿದ ಕನ್ನಡಿಗರ ಪ್ರೀತಿಯ ಕವಿ ನಿಸಾರ್ ಅಹಮ್ಮದ್. ಜೋಗದ ಸಿರಿ ಬೆಳಕಿನಲ್ಲಿ ಹಾಡಿನ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು. ಆವರೊಬ್ಬ ನಮ್ಮ ಹೆಮ್ಮೆಯ ಕನ್ನಡದ ಮೇಧಾವಿ ಅಪ್ರತಿಮ ಸಾಹಿತಿ .

ಇವರ ಬಹುಮುಖ ಪ್ರತಿಭೆಯ ವ್ಯಕ್ತಿತ್ವಕ್ಕೆ ಸಂದ ಗೌರವ ಪ್ರಶಸ್ತಿ ಪುರಸ್ಕಾರಗಳು

  • 1981 ರ ರಾಜ್ಯೋತ್ಸವ ಪ್ರಶಸ್ತಿ, 2003 ರ ನಾಡೋಜ ಪ್ರಶಸ್ತಿ,2006 ರ ಮಾಸ್ತಿ ಪ್ರಶಸ್ತಿ,2006 ರ ಅರಸು ಪ್ರಶಸ್ತಿ, 2006 ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ನಡೆದ, 73ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2008 ಪದ್ಮಶ್ರೀ ಪ್ರಶಸ್ತಿಯ ಹೊರತಾಗಿಯೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಪಂಪ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಭಕ್ತಿಯ ನಮನಗಳು

ಕನ್ನಡ ಸಾರಸ್ವತ ಲೋಕದ ಕೊಂಡಿಯಾಗಿದ್ದ ಹಿರಿಯ ಸಾಹಿತಿ ಕೆ.ಎಸ್.ಕೆ.ಎಸ್.ನಿಸಾರ್ ಅಹ್ಮದ ತಮ್ಮ ಬದುಕಿನ ಪಯಣ ಮುಗಿಸಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.ಈ ಸಾವು ಕನ್ನಡಿಗರ,ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.ನಿತ್ಯೋತ್ಸವ ಕವಿಗೆ ನಮ್ಮ ಭಕ್ತಿಯ ಭಾವಪೂರ್ಣ ಶೃದ್ಧಾಂಜಲಿಯ ನಮನಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಕವಿತೆ | ಅವಳೀಗ ಕಾಯುವುದಿಲ್ಲ

Published

on

  • ಶಮೀಮ ಕುತ್ತಾರ್, ಮಂಗಳೂರು

ಬೆಳಕು ಬರಲೆಂದು
ಕಿಟಕಿಯನ್ನೊಂಚೂರು
ಸರಿಸಹೊರಟಿದ್ದಳು…
ಒಳಗಿನಿಂದಲೇ ಸರಪಳಿಗಳು
ಕೈಗಳ ಬಿಗಿದಾಗ
ಬೆಳಕಿಗಿಂತ ಬಿಡುಗಡೆಯೇ
ಸಾಕೆನಿಸಿತ್ತು.

ಬಯಕೆಗಳು ಶಾಪವಾದಾಗ
ಇರವನ್ನೂ ಮರೆಯಬೇಕವಳು
ಓದಿ ಮುಗಿಸಲಾಗದ
ಇತಿಹಾಸದ ಮೌನಗಳಲ್ಲಿ
ಅಹಲ್ಯೆ ಕಲ್ಲಾದಂತೆ.

ಬಲದ ಬಲೆಯಾಗಿ
ಬಗಲಲ್ಲಿ‌ ಬೀಳುವಾಗ
ಮೋಹ ಮರೆತ ದ್ರೌಪದಿ
ಐವರ ಮಡದಿಯಾದಂತೆ.

ನೆನಪುಗಳ ವಿಲೇವಾರಿಯಲ್ಲಿ
ನೋವಿನ ಲೆಕ್ಕ ಕೇಳುವ
ಬದುಕ ವಹಿವಾಟುಗಳಲ್ಲಿ
ಅವಳಿಗಷ್ಟೇ ದಕ್ಕುವ ಉತ್ತರಗಳು.

ಹೆಣ್ಣು ಕ್ರಾಂತಿಯಾಗಲು
ಕಾರಣಗಳನ್ನು ಕಾಲವೇ ಸೃಷ್ಟಿಸಿತು..
ಯಾವ ದಿಕ್ಕಿನಿಂದ ಬೀಸಿದರೂ
ವಿಳಾಸದ ಹಂಗಿಲ್ಲದ ಗಾಳಿಯಂತೆ.

ಮುಹಬ್ಬತಿನಲ್ಲಿ ಮುಳುಗಿಸುವ
ಅವಳೊಲುಮೆಯ ಟಪಾಲನ್ನು‌
ಜತನದಿಂದ ಕಾಯಬೇಕಿತ್ತು
ಲೋಕ,
ಅರುಂಧತಿ ನಕ್ಷತ್ರದಂತೆ..
ಆದರೆ ಲೋಕದ ಕಣ್ಣಿಗೆ
ಅವಳು ಹೆಣ್ಣು…

ಹಾಗಾಗಿ ಈಗೀಗ ಅವಳು
ಇದ್ಯಾವುದನ್ನೂ ಕಾಯುವುದಿಲ್ಲ..

ಎದೆಗೆ ಬಿದ್ದ ಸಾವಿತ್ರಿಯ ಅಕ್ಷರಗಳು
ಕಾಲಾಂತದಲ್ಲಿ‌ ಅವಳ
ಯೋಚನೆಗೆ ಉಸಿರಾದರೆ,
ಕಾಲ ಕಳೆದು ಕೂಡಿಸಿದ
ಅವಳ ಮಾತು-ಮೌನಗಳು‌
ಕಾಲಾತೀತವಾಗಿ ಬೆಳೆದು
ಕಿಟಕಿಯಲ್ಲಿ ಹುಡುಕಿದ ಬೆಳಕಿಗೆ
ಹೆಬ್ಬಾಗಿಲು ತೆರೆದುಕೊಂಡಿತು…(ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು)

ಕವಯಿತ್ರಿ- ಶಮೀಮ ಕುತ್ತಾರ್
ಮಂಗಳೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಇಷ್ಟಂತೂ ಹೇಳಬಲ್ಲೆ..!

Published

on

  • ರಂಗಮ್ಮ ಹೊದೇಕಲ್, ತುಮಕೂರು

ನಾವು
ಗುಡಿಸಲಿನಲ್ಲಿ ಹುಟ್ಟಿ
ಅವ್ವನೆದೆಯ ಹಾಲು ಕುಡಿದು
ಗೋಣಿತಾಟಿನ ಮೇಲೆ ಮಲಗಿ
ನಕ್ಷತ್ರ ಎಣಿಸಿದವರು!

ಚೀಕಲು ರಾಗಿಯ ಅಂಬಲಿ ಕುಡಿದು
ತಂಗಳು ಹಿಟ್ಟಿಗೆ ಉಪ್ಪು ಸವರಿ
ಹಸಿವ ನೀಗಿಸಿಕೊಂಡವರು
ದಾಹಕ್ಕೆ ಕಣ್ಣೀರನ್ನೇ ಕುಡಿದವರು!

ದಾಸಯ್ಯನಂತಹ ಅಪ್ಪ
ಭೂಮ್ತಾಯಿಯಂತಹ ಅವ್ವ
ಎದೆಗಿಳಿಸಿದ್ದು
ಅಕ್ಷರ ಮತ್ತು ಅಂತಃಕರಣ!

ಯಾರು ಯಾರೋ ಕೊಟ್ಟ
ಹರಿದ ಚೀಲ,ಮುರುಕು ಸ್ಲೇಟು
ತುಂಡು ಬಳಪ,ಬಳಸಿ ಎಸೆದ ಬಟ್ಟೆ
ನಮ್ಮ ಪ್ರಿಯವಾದ ಆಸ್ತಿಗಳು!

ಬುಡ್ಡಿದೀಪದ ಬೆಳಕಿನಲ್ಲಿ
ಅಕ್ಷರಗಳ ಜೊತೆ ಆಡಿದ ನಾವು
ಯಾರದೋ ಸಂಭ್ರಮದಲ್ಲಿ
ಉಳಿದ ಅನ್ನಕ್ಕೆ ಕಾದಿದ್ದು
ಇನ್ನೂ ಹಸಿಯಾಗಿದೆ!

ಯಾರದೋ ಜಮೀನಿಗೆ
ಬೆವರು ಬಸಿದ
ಅಪ್ಪ ಅವ್ವ
ಅರ್ಧ ಉಂಡು ಕಣ್ಣೀರಾದದ್ದೂ
ನೆನಪಿದೆ!

ಅಂದೂ ನಾವು
ಶಾಪವಾಗಲಿಲ್ಲ
ಕೇಡನ್ನೂ ಹಾಡಲಿಲ್ಲ!

ಉಪ್ಪಿಟ್ಟಿನಿಂದ ಅನ್ನಕ್ಕೆ ಬದಲಾದ
ಈ ಯುಗದಲ್ಲಿಯೂ
ನೀವು ನಿಮಗೆ ಪರಂಪರೆಯಿಂದ ಬಂದಿರುವ ಆಸ್ತಿ,ಅಂತಸ್ತು
ಸೇವಕರು…ಇತ್ಯಾದಿತ್ಯಾದಿಗಳನ್ನು
ಪ್ರದರ್ಶಿಸುತ್ತಲೇ ಇದ್ದೀರಿ!

ಸಹ್ಯವಾಗದ ಅಸ್ತ್ರಗಳನ್ನೇ
ನೀವು ಮಸೆಯುವಾಗ
ನಿಮ್ಮ ಅಜ್ಞಾನಕ್ಕೂ ನಮ್ಮ ಅನುಕಂಪವಿದೆ!

ನಾವು ಈ ನೆಲದ ಮಕ್ಕಳು
ಬೆಂಕಿಯೂ‌.ಬೆಳಕೂ ಆಗಬಲ್ಲ ಕಿಡಿಗಳು
ಭದ್ರ ಬೇರೂರಿ ಆಕಾಶಕ್ಕೆ ಚಿಮ್ಮಿ
ನಿಮ್ಮ ಕಣ್ಣಲ್ಲೂ ಮತಾಪು ಹೊತ್ತಿಸಬಲ್ಲವರು!! (ರಂಗಮ್ಮ ಹೊದೇಕಲ್, ತುಮಕೂರು)

ಕವಯಿತ್ರಿ : ರಂಗಮ್ಮ ಹೊದೇಕಲ್, ತುಮಕೂರು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ಚಳಿಗಾಲದ ಎರಡು ಜೀವರಸಗಳು

Published

on

  • ಜಿ. ದೇವೂ ಮಾಕೊಂಡ

ಮ್ಮಿಬ್ಬರ ಸಂಗಮಕ್ಕೆ ಈ ಚಳಿಗಾಲ
ಎಷ್ಟೊಂದು ನಿಶಬ್ದವಾಗಿ ಕರೆಯುತ್ತಿದೆ
ಒಂದು ಕಡೆ ಕಾಫಿಯ ಸ್ವಾಗತ
ಮತ್ತೊಂದು ಕಡೆ ಮುತ್ತಿನ ಸೆಳೆತ.

ಯಾವುದು ಆರಿಸಿಕೊಳ್ಳಲಿ
ಈ ನಿಶಬ್ಧ ಚಳಿಯಲಿ?
ಕಾಫಿಯ ಇಚ್ಚೆಯನ್ನೊ?
ಮುತ್ತಿನ ಬಿಸಿಯನ್ನೊ?
ಇಷ್ಟೊಂದು ಚಡಪಡಿಕೆಯಿರಬಾರದು
ಇಚ್ಚೆಯ ಸಂಚಯನಗಳಲ್ಲಿ!

ನಮ್ಮ ಆರಂಭದ ಭೇಟಿಗೆ,
ಒಂದರ ನೆನಪಿಗೆ ಇನ್ನೊಂದು
ಸುಂಕವಾಗಲಿ
‘ಬೈ ವನ್ ಗೆಟ್ ವನ್ ಫ್ರಿ’
ಚಳಿಗಾಲದ ಜಾಹಿರಾತು ಆಫರ್.

ಕೊನೆಗೊಂದು ದಿನ ಕುರುಹುಗಳಂತೆ ನೆನಪಿಸಿಕೊಳ್ಳೊಣ
ಇದು ಆರಂಭವೊ ಅಥವ
ಅಂತ್ಯವಾಗುವುದೊ?
ಯಾರಿಗ್ಗೊತ್ತು?

ಈ ಕಾಫಿ
ಈ ಮುತ್ತು
ಯುದ್ದೋನ್ಮಾದದ ಸಂಕೇತಗಳಾ?
ಅಥವ
ಕೊನೆಯ ಯುದ್ದದ
ಕರಾರುಗಳಾ?

ನೆನಪಿಗೆ ಒಂದೊಂದು ಸೆಲ್ಫಿ ಇರಲಿ
ಜೊತೆಗೊಂದಿಷ್ಟು ಭಿನ್ನ ನಗುವಿರಲಿ.. (ಕವಿ: ಜಿ.ದೇವೂ ಮಾಕೊಂಡ)

ಕವಿ: ಜಿ.ದೇವೂ ಮಾಕೊಂಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending