Connect with us

ದಿನದ ಸುದ್ದಿ

ಡ್ರಗ್ಸ್ ಪ್ರಕರಣ | ಸಿಸಿಬಿಯಿಂದ ಕಾಂಗ್ರೆಸ್ ಮುಖಂಡನ ವಿಚಾರಣೆ

Published

on

ಸುದ್ದಿದಿನ,ಧಾರವಾಡ: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಸಿಸಿಬಿಯಿಂದ ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

ನಟಿ ರಾಗಿಣಿ ದ್ವಿವೇದಿ ಜೊತೆ ಸಂಪರ್ಕ ಹೊಂದಿದ್ದ ಗಿರೀಶ್ ಗದಿಗೆಪ್ಪಗೌಡರ ನಟಿಯ ಜೊತೆ ಗೋವಾಕ್ಕೆ ತೆರಳಿದ್ದ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಾಕಿಕೊಂಡಿದ್ದರು. ಈ ಸಂಬಂಧ ಗಿರೀಶ್​ರನ್ನು ಸಿಸಿಬಿಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ಮಾ.10ರಂದು ಅಂಗವಿಕಲರಿಗೆ ಕಿಟ್ ವಿತರಣೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಮಾ.10 ರಂದು ಬೆಳಿಗ್ಗೆ 10.30 ಕ್ಕೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಿಬಲಿಟಿ, ಜಿಲ್ಲಾ ಅಂಗವಿಕಲರ ಅಭಿವೃದ್ದಿ ಕಾರ್ಯಕ್ರಮ #1027, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಎಸ್.ಬಿ.ಎಂ ಬ್ಯಾಂಕ್ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ ಇಲ್ಲಿ ಅಂಗವಿಕಲರಿಗೆ ವೈದ್ಯಕೀಯ ಉಪಕರಣಗಳು ಹಾಗೂ ಸಲಕರಣೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ತಾಲ್ಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಎಸ್ ಎಸ್ ಸಿ ವತಿಯಿಂದ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಸಿಬ್ಬಂದಿ ನೇಮಕಾತಿ ಆಯೋಗದ (ssc) ವತಿಯಿಂದ ನಾನ್-ಟೆಕ್ನಿಕಲ್(ತಾಂತ್ರಿಕೇತರ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿರುತ್ತದೆ. ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳ ವಯೋಮಿತಿ 27 ವರ್ಷ. ಪ.ಜಾತಿ/ಪ.ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಸಲು ಮಾ.21 ಕೊನೆಯ ದಿನಾಂಕವಾಗಿದ್ದು, ಈ ವೆಬ್‍ಸೈಟ್
https://ssc.nic.in or www.ssckkr.kar.nic.in
ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ | ದಾವಣಗೆರೆ | ಮಹಿಳೆಯರು ಸಂಕೋಲೆಗಳನ್ನು ಬದಿಗೊತ್ತಿ ಸಾಧನೆ ಕಡೆ ಗಮನ ಕೊಡಬೇಕು : ನ್ಯಾ.ಗೀತಾ.ಕೆ.ಬಿ

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ನಂ: 08025502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂರವಾಣಿ ಸಂಖ್ಯೆ: 08192-259446 ಇಲ್ಲಿಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್.ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ನಗರದಲ್ಲಿಂದು ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 220/66 ಕೆ.ವಿ. ಕೇಂದ್ರದಿಂದ ಎಸ್.ಆರ್.ಎಸ್.ನಿಂದ ಸರಬರಾಜಾಗುವ 66 ಕೆ.ವಿ. ದಾವಣಗೆರೆ ಹಾಗೂ ಯರಗುಂಟ ವಿತರಣಾ ಮಾರ್ಗದಲ್ಲಿ ತುರ್ತಾಗಿ ನಿರ್ವಾಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.09 ರಂದು ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 4 ಗಂಟೆಯವರೆಗೆ 66/11 ಕೆ.ವಿ. ದಾವಣಗೆರೆ, 220/66 ಕೆ.ವಿ. ದಾವಣಗೆರೆ ಎಸ್.ಆರ್.ಎಸ್. ಮತ್ತು 66/11ಕೆ.ವಿ. ಯರಗುಂಟ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಲ್ಲಾ 11ಕೆ.ವಿ. ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇದನ್ನೂ ಓದಿ | ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣ : ಯುವತಿ ಪತ್ತೆ..!?

ದಾವಣಗೆರೆ ತಾಲೂಕಿನ ದಾವಣಗೆರೆ ನಗರದ ಎಲ್ಲಾ ಪ್ರದೇಶಗಳಲ್ಲಿ ಹಾಗೂ ಬೆಳವನೂರು, ಶಿರಮಗೊಂಡನಹಳ್ಳಿ, ಶಾಮನೂರು, ಕುಂದವಾಡ, ಬಾತಿ ಅಮೃತನಗರ, ನೀಲನಹಳ್ಳಿ, ಬೂದಿಹಾಳ್, ಕಕ್ಕರಗೊಳ್ಳ ಹಾಗೂ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending