ದಿನದ ಸುದ್ದಿ
ದಲಿತರ ಮೇಲೆ ಸವರ್ಣೀಯರಿಂದ ದೌರ್ಜನ್ಯ : ಈ ಊರಲ್ಲಿ ದಲಿತರಿಗೆ ಪ್ರವೇಶವಿಲ್ಲ
ಸುದ್ದಿದಿನ ವಿಶೇಷ : ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆ ಎನ್ನಾದರು ಬಲೀರಾ ಅಂತ ದಾಸರೇ ಹೇಳಿದ್ದಾರೆ.ಆದ್ದರೆ ಅಂತಹ ಕುಲದ ಹೊಡೆದಾಟ ಇನ್ನು ಸಹಿತ ನಡೀತಿದೆ .ಇವನ್ನು ಮೇಲು ಕೀಳು ಎಂಬ ಭಾವನೆ ಇಂದಿಗು ಸಹ ಜೀವಂತವಾಗಿ ಕಣ್ಣಮುಂದೆ ಕಾಣ್ತಿದೆ.ಮೇಲ್ಜಾತಿಯವರು ಕೇಳ್ಜಾತಿವರ ಮೇಲೆ ನಿರಂತರವಾಗಿ ಶೋಷಣೆ ಮಾಡ್ತಿದ್ದಾರೆ .ಅಂತಹ ಅಸ್ಪೃಶ್ಯತೆಯ ಜನಾಂಗ ದೌರ್ಜನಕ್ಕೆ ಒಳಗಾಗಿ ಕೇಸರಿನ ಹುಳುಗಳ ರೀತಿಯಲ್ಲಿ ಬದುಕುತ್ತಿದ್ದಾರೆ .ಅಂತಹ ಹೃದಯ ವಿದ್ರಾವಕ ಘಟನೆ ಇಲ್ಲಿನ ಜನರದ್ದಾಗಿ ಇವರ ಪರಿಸ್ಥಿತಿ.
ಇದು ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಯರಜಂತಿ ಗ್ರಾಮ ಈ ಗ್ರಾಮದಲ್ಲಿ ದಲಿತರಿಗೆ ಅಸ್ಪೃಶ್ಯರಿಗೆ ಗ್ರಾಮದಲ್ಲಿ ಅವಕಾಶ ಇಲ್ಲ ಯಾವುದೇ ಗುಡಿ ಗುಂಡಾರಗಳಲ್ಲಿ ,ಊರು ಕೇರಿಗಳಲ್ಲಿ ಹೊಗುವಂತಿಲ್ಲ .ಯಾರು ಮುಟ್ಟಬಾರದು ಯಾರು ಇವರನ್ನು ಮಾತನಾಡಿಸಬಾರದು .ಯಾವುದೇ ಅಂಗಡಿಗಳಿಗು ಸಹ ಹೋಗುವಹಾಗಿಲ್ಲ ಅಷ್ಟೇ ಯಾಕ್ಕೆ ಇವರು ಮಕ್ಕಳಿಗು ಸಹ ಶಾಲೆಯಲ್ಲಿ ಅವಕಾಶ ಇಲ್ವಂತೆ ಅವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಒಂದು ತುತ್ತು ಊಟವನ್ನು ಹಾಕ್ತಿಲ.ಇಲ್ಲಿರುವ ಕೇಳವರ್ಗದವರು ಜನರು ಒಡಾಡುವ ರಸ್ತೆ ನೋಡಿದ್ರೆ ಭಯಬೀತರಾಗಿ ಬಿಡ್ತಿರಾ ಯಾಕಂದ್ರೆ ಇವರು ಒಡಾಡುವ ರಸ್ತೆ ಕಲ್ಲು ಮುಳಿನ ಗುಡ್ಡಗಳಿಂದ ಕೂಡಿದ ಸಾವಿನ ದಿಬ್ಬವಾಗಿ ಪರಿಣಮಿಸಿದೆ. ಅದೇ ರೀತಿ ಮೇಲ್ಜಾತಿಯವರ ರಸ್ತೆಗಳು ಆರ್ ಸಿ ಸಿ ರಸ್ತೆಯಾಗಿದೆ.ಒಂದು ವೇಳೆ ಅವರ ನಿಯಮವನ್ನು ತಪ್ಪಿದ್ದರೆ ಇವರ ಮೇಲೆ ಮಚ್ಚಿನಿಂದ ಕೊಚ್ಚಿ ಹಾಕುತ್ತೆನೆ . ಅಂತ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗುತ್ತಾರೆ.ಬಾಯಿಗೆ ಬಂದಂತೆ ಸ್ತ್ರೀ ಯರ ಮೇಲೆ ನಿಂದನೆ ಮಾಡೋದು ತೊಡೆ ತಟ್ಟಿ ಕರೆಯೊದು ಇಂತಹ ಅವಮಾನವೀಯ ನಡವಳಿಕೆ ಇಲ್ಲಿನ ಗ್ರಾಮಸ್ಥರು ಮತ್ತು ಇಲ್ಲಿನ ಪಂಚಾಯಿತಿಯ ಸದ್ಯಸರು ದೌರ್ಜನ್ಯವೆಸಗುತ್ತಿದ್ದಾರೆ.
ಈ ಊರಿನಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಆಟೋಗಳ ಮುಖಾಂತರವಾಗಿ ಬರಬೇಕು ಅಂತಹ ಪರಿಣಾಮವಾಗಿದೆ .ಹೀಗಿರುವಾಗ ದಲಿತರು ಬಂದರೆ ಅವರಿಗೆ ಆಟೋಗಳಲ್ಲಿಯು ಅವಕಾಶ ಇಲ್ಲ ಸಾವು ಬದುಕುನ ನಡುವೆ ಹೋರಾಡುತ್ತಿದ್ದಾರೆ ಚಿಕಿತ್ಸೆ ಪಡೆಯಲು ಅವರು ಪರದಾಟ ಪಟ್ಟ ಸ್ಥಿತಿ ಅಷ್ಟ ಇಷ್ಟಲ. ಕುಡಿಯಲು ನೀರಿಗೆ ಸುಮಾರು ದೂರಹೋಗಿ ತರಬೇಕು ಅದು ಜಾನುವಾರಗಳು ಕುಡಿಯುವ ನೀರಿನ ಹೊಂಡದಲ್ಲಿ. ಇನ್ನು ಇಲ್ಲಿನ ಜನರಿಗೆ ಯಾವುದೇ ಸರಕಾರಿ ಮನೆಗಳು ಶೌಚಾಲಯಗಳಿಲ ಸರಕಾರದ ಬೋಮಿಯನ್ನು ಸಹ ಲಪಟಾಯಿಸ್ಸಿದ್ದಾರೆ. ವಾಸಿಸಲು ಮನೆ ಇಲ್ಲದೆ ಊರಿನ ಹೊರ ಭಾಗದ ದಿಬ್ಬದಲ್ಲಿ ವಾಸ ಮಾಡ್ತಿದ್ದಾರೆ.ಇಂತಹ ಚಿತ್ರಣವನ್ನು ನೊಡುತ್ತಿದ್ದರೆ ಇದು ರಾಮರಾಜ್ಯದ ಕನಸ್ಸಿನ ಕರ್ನಾಟಕ ನಾ ಇಲ್ಲ ರಾವಣ ದೌರ್ಜನ್ಯ ಪ್ರದೇಶ ನಾ ಅಂತ ಗೋಚ್ಚರಿಸುತ್ತಿದೆ.ಇಂತಹ ಇಷ್ಟ ಕಷ್ಟಗಳ ಸಂಕೊಲೆಗಳಲಿ ಜನ ಜೀವಂತ ಶವವಾಗಿ ಬದುಕುತ್ತಿದ್ದಾರೆ.ಎಲ್ಲಿದೆ ಮಾನವನ ಮೂಲಭೂತ ಹಕ್ಕು ಎಂಬ ಪ್ರಶ್ನೆ ಕಾಡುತ್ತಿದೆ.ಈ ಜನರ ಕಣ್ಣಿರಿನ ಆಕ್ರೋಶದ ಕಥೆಯನ್ನು ಕೇಳಿದ್ರೆ ಎಂತಹ ಹಿಟ್ಲರನ ಹೃದಯದವನಿದ್ದರು ಕರಗುತ್ತಾನೆ.
ಇನ್ನೂ ರಾಜಕೀಯ ನಾಯಕರು ತಮ್ಮ ಬೇಳೆಯನ್ನು ಬೆಯಿಸಿಕೊಳಲು ಚುನಾವಣೆ ಬಂದಾಗ ಅವರ ಮನೆಯಲ್ಲಿ ಊಟ ಮಾಡೊದು ನೀರು ಕುಡಿಯೊದು ಮಲಗೊದು ಇಂತಹ ನಾಟಕವನ್ನು ಬಿಟ್ಟು ಇವರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕೈ ಜೋಡಿಸಿ ಅಂಬೇಡ್ಕರ್ ಹೊತ್ತ ಕನಸಿನ ಆದರ್ಶ ಪ್ರರೂಪಗಳು ಪಾಲಿಸಿ .ಕಾಲ್ತುಳಿತಕ್ಕೆ ಒಳಗಾಗಿರುವ ಇಂತಹ ಕಾಯಕ ಸಮಾಜದವನ್ನು ಉನ್ಬತಿ ಕರಿಸಿ ಅಸ್ಪೃಶ್ಯತೆಯ ವಿರುದ್ದ ದಬ್ಬಾಳಿಕೆ ಮಾಡುವವರನ್ನು ಶಿಕ್ಷಿಸಿ. ಕಾಯಕ ಸಮಾಜಕ್ಕೆ ಸಿಗಲಿ ಸ್ಥಾನ ಮಾನ.
ನೀರಿಗ ಯಾವ ಕುಲ
ಅಗ್ನಿಗೆ ಯಾವ ಕುಲ,
ವಾಯುಗೆ ಯಾವ ಕುಲ,
ರಕ್ತಕ್ಕೆ ಯಾವ ಕುಲ .
ಇರುವುದು ಒಂದೆ ಕುಲ ಅದು ಮನುಷ್ಯ ಕುಲ…ಮನುಷ್ಯ ಕುಲ

ದಿನದ ಸುದ್ದಿ
ದಾವಣಗೆರೆ | 18 ನೇ ವಾರ್ಡ್ ನಲ್ಲಿ ಕೈ ಅಭ್ಯರ್ಥಿ ಸಮರ್ಥ ಶಾಮನೂರು ಪ್ರಚಾರ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಅವರು ಮಂಗಳವಾರ 18 ನೇ ವಾರ್ಡ್ ವ್ಯಾಪ್ತಿಯಲ್ಲಿ ಅಬ್ಬರ ಪ್ರಚಾರ ನಡೆಸಿದರು.
ನಗರದ ಬಾರ್ ಲೈನ್ ದರ್ಗಕ್ಕೆ ತೆರಳಿ ಚಾದರ ಅರ್ಪಿಸಿದ ಸಮರ್ಥ ಶಾಮನೂರು ಅವರಿಗೆ ಮುಸ್ಲಿಂ ಸಮಾಜದ ಬಾಂಧವರು ಆತ್ಮೀಯವಾಗಿ ಸನ್ಮಾನಿಸಿದರು. ಬಳಿಕ ಅಲ್ಲಿಂದ ಪ್ರಚಾರವನ್ನು ಆರಂಭಿಸಿದ ಅವರು ಎಂ.ಬಿ ಕೇರಿ, ಮಟನ್ ಮಾರ್ಕೇಟ್, ಗಡಿಯಾರ ಕಂಬ, ಸ್ವಾಗೇರ್ ಪೇಟೆ, ಹೊಂಡದ ರಸ್ತೆ, ಕಾಯಿಪೇಟೆಯ ಮನೆ ಮನೆಗೆ ತೆರಳಿ ಮತಯಾಚಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ನರಸಿಂಹಪ್ಪ, ರವಿಕುಮಾರ್, ಕಾಶಿನಾಥ್ ಅವರ ಮನೆಗೆ ಅಭ್ಯರ್ಥಿ ಸಮರ್ಥ ಶಾಮನುರು ಅವರು ಭೇಟಿ ನೀಡಿದಾಕ್ಷಣ ಕುಟುಂಬಸ್ಥರು ದಿವಂಗತರಾದ ಡಾ.ಶಾಮನೂರು ಶಿವಶಂಕರಪ್ಪ ಅವರನ್ನು ನೆನೆದು ಭಾವುಕರಾದರು. ಶಾಮನೂರು ಸಮರ್ಥ ಅವರಿಗೆ ದಕ್ಷಿಣ ಕ್ಷೇತ್ರದಲ್ಲಿ ಪ್ರಚಂಡ ಬಹುಮತವನ್ನು ನೀಡಿ ಗೆಲ್ಲಿಸುತ್ತೇವೆ ಎಂದು ಮತದಾರರು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಮುಖಂಡರಾದ ಚಂದ್ರ ಶೇಖರ್, ಸೋಗಿ ಶಾಂತಕುಮಾರ್, ಪ್ರವೀಣ್ ರಾವ್, ಬಕ್ಕೇಶ್, ಪರಮೇಶ್, ಜಯರಾಜ್, ಹನುಮಂತ್, ರಾಘವೇಂದ್ರ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕರ್ನಾಟಕ ಜಾಹೀರಾತು ನೀತಿಗೆ ಸಂಪಾದಕರ ವಿರೋಧ ; ಸಿಎಂಗೆ ಮನವಿ
ನೀತಿಯನ್ನು ಪರಿಶೀಲಿಸುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸುದ್ದಿದಿನ,ದಾವಣಗೆರೆ: ಕರ್ನಾಟಕ ಜಾಹೀರಾತು ನೀತಿ-2026 ರಲ್ಲಿ ಪತ್ರಿಕೆಗಳಿಗೆ ಮಾರಕವಾದ ನಿಯಮಗಳನ್ನು ಕೈಬಿಡುವಂತೆ ಕೋರಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೋಮವಾರ ಮಧ್ಯಾಹ್ನ ನಗರದ ಎಂ.ಬಿ.ಎ ಗ್ರೌಂಡ್ ಹೆಲಿಪ್ಯಾಡ್ ನಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕರ್ನಾಟಕ ಜಾಹೀರಾತು ನೀತಿ-2026 ಜಿಲ್ಲಾ ಮಟ್ಟದ ಮತ್ತು ಪ್ರಾದೇಶಿಕ ಮಟ್ಟದ ಪತ್ರಿಕೆಗಳಿಗೆ ಮಾರಕವಾಗಿದ್ದು,ಇದರಿಂದ ಶತಶತಮಾನಗಳಿಂದ ಸಮಾಜದ ಮತ್ತು ಸರ್ಕಾರದ ಕೊಂಡಿಯಾಗಿ ಸೇವೆ ಮಾಡುತ್ತಿರುವ ಪತ್ರಿಕೆಗಳು ಮುಚ್ಚುತ್ತವೆ. ಯಾವುದೇ ಕಾರಣಕ್ಕೂ ಪತ್ರಿಕೆಗಳಿಗೆ ಮಾರಕವಾಗುವ ನಿಯಮಗಳನ್ನು ಅಳವಡಿಸದೇ ಪತ್ರಿಕೆಗಳ ಏಳಿಗೆಗೆ ಪೂರಕವಾದ ಅಂಶಗಳನ್ನು ಸೇರಿಸಿ ಕರ್ನಾಟಕ ಜಾಹೀರಾತು ನೀತಿಯನ್ನು ಜಾರಿಗೆ ತರಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಮನವರಿಕೆ ಮಾಡಿಕೊಡಲಾಯಿತು.
ಸಂಘಗಳ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಜಾಹೀರಾತು ನೀತಿ ಪರಿಶೀಲಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷರಾದ ಎ.ಸಿ.ತಿಪ್ಪೇಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷರಾದ ಸುರೇಶ್ ಆರ್ ಕುಣೆಬೆಳಕೆರೆ, ಖಜಾಂಜಿ ಶಿವಮೂರ್ತಿ ಟಿ.ಜಿ , ರಾಜ್ಯ ಸಂಘದ ನಾಮನಿರ್ದೇಶನ ಸದಸ್ಯ ಕೆ.ಜೈಮುನಿ ಮತ್ತು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕರಾದ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ಖಜಾಂಚಿ ಜೆ.ಎಸ್.ವೀರೇಶ್ ಹಾಗೂ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷರಾದ ನಾಗರಾಜ ಬಡದಾಳ್ , ಹಿರಿಯ ಪತ್ರಕರ್ತರಾದ ಕೆ.ಏಕಾಂತಮ್ಮ, ಬಿ.ಎನ್.ಮಲ್ಲೇಶ್, ಮಲ್ಲಿಕಾರ್ಜುನ ಕಬ್ಬೂರು, ಆರ್.ಎಸ್.ತಿಪ್ಪೇಸ್ವಾಮಿ, ಕೊಟ್ರೇಶ್ ಅಣಬೂರುಮಠ, ನಿಂಗಪ್ಪ, ಗೋವಿಂದ ರಾಜು, ಫಕೃದ್ದೀನ್, ಆರ್.ರವಿ,ಬಿ.ವಾಸುದೇವ, ರಾಘವೇಂದ್ರ ರಾವ್, ವೇದಮೂರ್ತಿ,ನಿಂಗಪ್ಪ, ಪರಶುರಾಮ, ನಂದಕುಮಾರ್ ಮುಂತಾದವರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಹರಿಹರ ನಗರಸಭೆಯು 04 ಸಂಖ್ಯಾತಿರಿಕ್ತ ಪೌರಕಾರ್ಮಿಕರ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಪ್ರಸ್ತುತ ಹರಿಹರ ನಗರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹಾಗೂ ಈ ನಿಯಮ ಜಾರಿಗೆ ಬಂದ ದಿನಾಂಕದಲ್ಲಿಯೂ ಸದರಿ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 11 ರಿಂದ ಅರ್ಜಿಗಳನ್ನು ಪಡೆದುಕೊಳ್ಳಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 10 ಕಡೆಯ ದಿನಾಂಕವಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಹರಿಹರ ನಗರಸಭೆ ಕಚೇರಿಯಿಂದ ಮಾತ್ರ ಪಡೆದುಕೊಳ್ಳಬೇಕು. ಹುದ್ದೆಗಳ ವರ್ಗೀಕರಣ, ಷರತ್ತುಗಳು, ವಯೋಮಿತಿ ಮತ್ತು ಅಗತ್ಯ ಅರ್ಹತೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ಸಮಯದಲ್ಲಿ ಹರಿಹರ ನಗರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ದಾವಣಗೆರೆಯ ಜಿಲ್ಲಾಧಿಕಾರಿಗಳು ಹಾಗೂ ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243



