Connect with us

ಬಹಿರಂಗ

ರಮಾಬಾಯಿ ಅಂಬೇಡ್ಕರ್ ಹೇಗಿದ್ದರು..?

Published

on

  • ಡಾ.ಬಾಬು ಅಣದೂರೆ

ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ. ಮಾತೆ “ರಮಾಬಾಯಿ”ಯವರು ಸಂಗಾತಿಯಾಗಿ ಅಂಬೇಡ್ಕರ್ ರವರಿಗೆ ಸಿಕ್ಕಿದ್ದೆ ಒಂದು ರೀತಿಯಲ್ಲಿ ಅಂಬೇಡ್ಕರ್ ಭಾರತದೇಶಕ್ಕೆ ಸಂವಿಧಾನ ರಚಿಸಿ ಆ ಮೂಲಕ ಸಮಸಮಾಜಕ್ಕೆ ಅಡಿಗಲ್ಲು ಹಾಕಲು ಕಾರಣವಾಯಿತು.

ರಮಾಬಾಯಿಯವರು ಮಹಾರಾಷ್ಟ್ರದ ದಾಭೋಳ ನಗರದ ಸಮುದ್ರ ದಂಡೆಯ ಪಕ್ಕದ ವಣಂದಗಾವ ಎಂಬ ಊರಿನ ಭಿಕೊ ವಲಂಗಕರ ಮತ್ತು ರುಕ್ಮಿಣಿ ಎಂಬ ದಂಪತಿಗಳ 2ನೇ ಮಗಳು. ತಂದೆಯದು ಹಡಗಿನಿಂದ ಮೀನಿನ ಬುಟ್ಟಿಯನ್ನು ಹೊರುವ ಕಾಯಕ. ಈ ಕೆಲಸದಿಂದ ಅವರಿಗೆ ಎದೆ ನೋವು ಬಂದು ತೀರಿಕೊಂಡರು.

ತಾಯಿ ರುಕ್ಮಿಣಿಯವರು ಸಹ ಅದೆ ಯೋಚನೆಯಲ್ಲಿಯೆ ತೀರಿಹೋದಾಗ, ಭಿಕೋ ವಲಂಗಕರನ ಅಣ್ಣ ಗೋಪಾಲ ಬಾಬಾ ಈ ರಮಾಬಾಯಿ ಮತ್ತು ಇವರ ತಂಗಿ, ತಮ್ಮನನ್ನು ಮುಂಬೈಗೆ ಕರೆದುಕೊಂಡು ಬಂದರು. ಅಲ್ಲಿ ಗೋಪಾಲ ಬಾಬಾ ಸೌದೆ ಡಿಪೊ ಒಂದರಲ್ಲಿ ಕೆಲಸ ಮಾಡುತ್ತಿದ್ದರು.

ಈ ವೇಳೆಗೆ ಅಂಬೇಡ್ಕರ್ ರವರು ತಂದೆ ರಾಮಜಿ ಸಕ್ಪಾಲರು ಅಂಬೇಡ್ಕರ್ರಿಗೆ 4-5 ಕಡೆ ವಧು ನೋಡಿ ರಮಾನೇ ನಮ್ಮ ಮನೆಗೆ ತಕ್ಕ ಸೊಸೆ, ಚಿಕ್ಕ ವಯಸ್ಸಿನಲ್ಲೆ ತಂದೆ-ತಾಯಿ ಕಳೆದುಕೊಂಡು ತುಂಬ ಕಷ್ಟ ಅನುಭವಿಸಿದ್ದಾಳೆ.

ಇಂಥವಳೆ ನಮಗೆ ಸೊಸೆಯಾಗಲಿ ಎಂದು, 1906 ರಲ್ಲಿ ಆ ಕಾಲಕ್ಕೆ ಅಸ್ಪೃಶ್ಯರಿಗೆ ಮದುವೆ ನಡೆಸಲು ಜಾಗ ಸಿಗದಿಲ್ಲದ್ದರ ಕಾರಣದಿಂದ ಮುಂಬೈ ನಗರದ ಬಾಯಖಳಿ ಮೀನಿನ ಮಾರುಕಟ್ಟೆಯಲ್ಲಿ ಜಾಗದಲ್ಲಿ 9ನೇ ವಯಸ್ಸಿನ ರಮಾಬಾಯಿ ಜೊತೆ ಮಧ್ಯರಾತ್ರಿಯಲ್ಲಿ 10ನೇ ತರಗತಿ ಪಾಸಾದ 17ನೇ ವಯಸ್ಸಿನ ಅಂಬೇಡ್ಕರ್ ಅವರಿಗೆ ವಿವಾಹ ನಡೆಸಿದರು.ಅಲ್ಲಿಂದಲೆ ಬಡತನದ ಕ್ರೂರತೆ ರಮಾಬಾಯಿಯವರಿಗೆ ಹೆಚ್ಚುತ್ತಾ ಹೋಯಿತು.

ಅಂಬೇಡ್ಕರ್ ರವರು ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿದ್ದಾಗ ಅವರ 2ನೇ ಮಗ ರಮೇಶ್, ಲಂಡನ್ನಲ್ಲಿದ್ದಾಗ ಗಂಗಾಧರ್, ಹಾಗೆಯೇ ಅವರ ಒಬ್ಬಳ ಮಗಳು ಇಂದು ಹಾಗೂ ಕೊನೆಯ ಮಗ ರಾಜರತ್ನ ಸಹ ಅಪೌಷ್ಠಿಕತೆ ಮತ್ತು ನಿಮೋನಿಯದಿಂದ ತೀವ್ರತರವಾಗಿ ಬಳಲಿ ತೀರಿಕೊಂಡರು.

ಇಂತಹ ಸನ್ನಿವೇಶದಲ್ಲಿ ಗಟ್ಟಿ ನಿರ್ಧಾರ ಮಾಡಿ,ಎದೆಯೊಡೆದು ಹೋಗುವ ದುಃಖವನ್ನು ತಾವೋಬ್ಬರೆ ಅನುಭವಿಸಿ ಬಾಬಾ ಸಾಹೇಬರಿಗೆ ಅವರ ಶಿಕ್ಷಣಕ್ಕೆ ಮತ್ತು ಹೋರಾಟಕ್ಕೆ ಯಾವುದೇ ಭಂಗ ಬರದಂತೆ ನಿಭಾಯಿಸಿದ ತ್ಯಾಗಮಯಿ ಮಾತ ರಮಾಬಾಯಿ.

ಈ ತಾಯಿ ಇಂತಹ ಸನ್ನಿವೇಶದಲ್ಲೂ ಅಂಬೇಡ್ಕರ್ರಿಗೆ ಕಳೆದು ಹೋದ ಮಕ್ಕಳ ಬಗ್ಗೆ ಚಿಂತಿಸಬೇಡಿ. ಕೋಟ್ಯಾಂತರ ಶೋಷಿತರ ಮಕ್ಕಳು ಕೂಡ ನಮ್ಮ ಮಕ್ಕಳೆ. ನಿಮ್ಮ ಅಭ್ಯಾಸದೊಳಗೆ ನಮ್ಮ ಮತ್ತು ಈ ದೇಶದ ಹಿತವಿದೆ ಎಂದು ಪತ್ರ ಬರೆಯುತ್ತಾರೆ.

ರಮಾಬಾಯಿಯವರು ಎಂತಹ ಸ್ವಾಭಿಮಾನಿ ಎಂದರೆ 1923 ರಲ್ಲಿ ಲಂಡನ್ನಿಂದ ಅಂಬೇಡ್ಕರ್ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಬಂದಾಗ, ಅಂಬೇಡ್ಕರ್ ಈ ದೇಶಕ್ಕೆ ಮೊಟ್ಟ ಮೊದಲ ಬ್ಯಾರಿಸ್ಟರ್. ಅವರನ್ನು ಮುಂಬೈ ಹಡಗು ನಿಲ್ದಾಣದಲ್ಲಿ ಸ್ವಾಗತಿಸಲು ಸಾವಿರಾರು ಜನ ಸೇರಿದ್ದರು.

ಆದರೆ ರಮಾಬಾಯಿಯವರಿಗೆ ಬಹಳ ಕಠಿಣ ಸ್ಥಿತಿ, ಕಾರಣ ಇರುವ ಸೀರೆ ಹರಿದು ಹೋಗಿತ್ತು. ನಾನು ಹೋಗದಿದ್ದರೆ ಹೇಗೆ ಎಂದು ಬೇರೆ ಗತಿಯಿಲ್ಲದೆ ಶಾಹು ಮಹಾರಾಜರು ಅಂಬೇಡ್ಕರ್ ರವರಿಗೆ ಸನ್ಮಾನಿಸಿ ನೀಡಿದ್ದ ಜರಿ ಶಾಲನ್ನು ಸೀರೆಯಾಗಿ ಉಟ್ಟುಕೊಂಡು ಹೋಗಿದ್ದರು. ಇಂತಹ ಸ್ವಾಭಿಮಾನ ಮಾನಸಿಕ ಹಿಂಸೆಯನ್ನು ಆ ತಾಯಿ ಹೇಗೆ ಅನುಭವಿಸಿರಬೇಕು.

ರಮಾಬಾಯಿಯವರು ತನ್ನ ಗಂಡ ಬ್ಯಾರಿಸ್ಟರ್ ಆಗಿದ್ದರು ಎಂತಹ ಸರಳ ಜೀವನ ನಡೆಸುತ್ತಿದ್ದರೆಂದರೆ, ಅದೆಷ್ಟೋ ದಿನಗಳು ಮಿತಿಯಾಗಿರುತ್ತಿದ್ದ ರೊಟ್ಟಿಗಳನ್ನು ಮಕ್ಕಳಿಗೆ ನೀಡಿ ಅರ್ಧರಾತ್ರಿಯವರೆಗೂ ಅಂಬೇಡ್ಕರ್ರನ್ನು ಕಾದು ಅವರು ತಿಂದು ಉಳಿದರೆ ಮಾತ್ರ ತಿನ್ನುತಿದ್ದರು.

ಇಲ್ಲವೆಂದರೆ ತಿಂದಂತೆ ನಟಿಸುತ್ತಿದ್ದರು. ಹಾಗಾಗಿ ಬಡತನ ಅವರ ಅಂಗಾಂಗಗಳನ್ನು ತಿನ್ನುತಿತ್ತು. ಒಂದೆರಡು ಬೆಂಕಿ ಪೊಟ್ಟಣದಲ್ಲೆ ತಿಂಗಳುಗಳನ್ನು ಉರುಳಸುತ್ತಿದ್ದರು. ಹರಿದ ಸೀರೆಯ ಜೊತೆಗೆ ಸಂಸಾರಕ್ಕೆ ತೇಪೆ ಹಾಕುವುದು ಅವರ ಬದುಕಾಗಿತ್ತು. ಉಪ್ಪು, ಖಾರ, ಕಾಳು ಕಡ್ಡಿಗಳ ಮಿತಿಯಲ್ಲಿಯೇ ಬದುಕು ನಡೆಯುತಿತ್ತು.

ಅಂಬೇಡ್ಕರ್ ರವರು ಬ್ಯಾರಿಸ್ಟರ್ ಪಡೆದಿದ್ದು, ಸಂಪ್ರದಾಯವಾದಿ ಸಮಾಜದಲ್ಲಿ ಅಸೂಯೆ ಮೂಡಿಸಿತ್ತು. ಬ್ಯಾರಿಸ್ಟರ್ ಓದಿದವನ ಹೆಂಡತಿ ವಿದೇಶಕ್ಕೆ ಹೋಗದೆ ಇಲ್ಲೇಕೆ ಸೌದೆಗಾಗಿ ಅಲೆಯುತ್ತಿದ್ದಾಳೆ, ಅದು ಬಿಸಿಲಿನಲ್ಲಿ ಬರಿಗಾಲಿನಲ್ಲಿ, ಹರಿದ ಪತ್ತು ಹಾಕಿದ ಸೀರೆಯಲ್ಲಿ, ಮೈ ಮೇಲೆ ಒಂದು ಒಡವೆಯು ಇಲ್ಲ ಎಂದು ಹಂಗಿಸುತ್ತಿದ್ದರು.

ಹಾಗಾಗಿ ರಮಾಬಾಯಿ ಈ ನಿಂದನೆಗಳಿಂದ ತಪ್ಪಿಸಿಕೊಳ್ಳಲು ಬೆಳಗಿನ ಜಾವದಲ್ಲಿ ಅಥವಾ ಮುಸ್ಸಂಜೆ ಮುಸುಕಿನಲ್ಲಿ ಮಾತ್ರ ಉರುವಲಿಗಾಗಿ ಅಲೆಯುತಿದ್ದರು. ಈ ತಾಯಿ ಬಾಬಾ ಸಾಹೇಬರನ್ನ ಹೇಗೆ ಅರ್ಥಮಾಡಿಕೊಂಡಿದ್ದರೆಂದರೆ, ಇವರ ಕೊನೆಯ ಮಗ ರಾಜರತ್ನ 1926 ಎಲ್ಲಿ ತೀರಿಕೊಂಡಾಗ ಮಹಾಡ್ ಸಮ್ಮೇಳನದ ಸಿದ್ಧತೆಯಲ್ಲಿ ಹೊರಗೆ ಹೋಗಿದ್ದ ಬಾಬಾ ಸಾಹೇಬರು ಮನೆಗೆ ಬರುತ್ತಾರೆ. ರಮಾಬಾಯಿಯವರು ಗೋಳಾಡುತ್ತಾ ಒದ್ದಾಡುತ್ತಿರುತ್ತಾರೆ.

ಅಕ್ಕಪಕ್ಕದ ಮನೆಯವರು ಬಂದು ರಮಾಬಾಯಿಯವರಿಗೆ ಸಾಂತ್ವಾನ ಹೇಳಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗ ಅಂಬೇಡ್ಕರ್ ರವರ ಬಳಿ ಬಂದು ಮಗುವಿನ ಪಾಥಿರ್ವ ಶರೀರಕ್ಕೆ ಬಟ್ಟೆ ಹೊದಿಸಲು, ಹೊಸ ಬಟ್ಟೆ ತರಲು ಹಣ ಕೇಳಿದಾಗ ಅಂಬೇಡ್ಕರ್ ತಮ್ಮ ಬಳಿ ಹಣವಿಲ್ಲದೆ ವಿಚಲಿತರಾಗಿ ಒದ್ದಾಡುತ್ತಿರುವಾಗ, ತಮ್ಮನ್ನು ತಾನೆ ಸಮಾಧಾನ ಪಡಿಸಿಕೊಂಡ, ತಾಯಿ ರಮಾಬಾಯಿ ತನ್ನ ಹರಿದ ಸೀರೆಯಲ್ಲಿಯೆ ಸ್ವಲ್ಪ ಹರಿದು ಪಾರ್ಥಿವ ಶರೀರಕ್ಕೆ ಸುತ್ತಿ ಅಂತ್ಯಕ್ರಿಯೆಗೆ ಅಣಿಗೊಳಿಸಿ, ತನ್ನ ಗಂಡನ ಗೌರವಕ್ಕೆ ಚ್ಯುತಿ ಬರದಂತೆ ಕಾಪಾಡಿದ ಮಹಾಸತಿ.

ಈ ಜಗತ್ತಿನ ಯಾವ ನಾಯಕರಿಗೂ ಇಂತಹ ಸ್ಥಿತಿ ಬಂದಿಲ್ಲ. ಹಾಗೂ ಈ ಜಗತ್ತಿನ ಯಾವ ನಾಯಕರಿಗೂ ಇಂತಹ ತ್ಯಾಗಮಯಿ ಬಾಳ ಸಂಗಾತಿಯಾಗಿ ಸಿಕ್ಕಿಲ್ಲ.‌ ಈ ತಾಯಿ ನಮ್ಮ ಕರ್ನಾಟಕಕ್ಕೆ ಬಂದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಲೇಬೇಕು. ಈ ಘಟನೆಯನ್ನು ತಾಯ್ತನದ ಮಮತೆ, ಕರುಣೆಯ ಸೆಲೆ ಗೋಚರಿಸುತ್ತದೆ. ಅಂಬೇಡ್ಕರ್ ದುಂಡು ಮೇಜಿನ ಪರಿಷತ್ನ ಸಲುವಾಗಿ 1930 ರಲ್ಲಿ ಲಂಡನ್ಗೆ ಹೋಗುವಾಗ ರಮಾಬಾಯಿಯವರು ಅನಾರೋಗ್ಯ ಪೀಡಿತರಾಗಿದ್ದರು.

ಆಗ ಅಂಬೇಡ್ಕರ್ ರವರ ಹಿತೈಸಿಗಳಾದ ವರಾಳೆ ದಂಪತಿಗಳೊಂದಿಗೆ ರಮಾಬಾಯಿ ಧಾರವಾಡಕ್ಕೆ ಬರುತ್ತಾರೆ. ಧಾರವಾಡದ ಕೊಪ್ಪದ ಕೇರಿಯಲ್ಲಿ ಡಾ. ಪರಾಂಜಪೆ ಅನ್ನೊ ಆಯುರ್ವೇದ ಪಂಡಿತರು ಚಿಕಿತ್ಸೆ ನೀಡುತ್ತಾರೆ. ಈ ಹಿಂದೆ ಅಂಬೇಡ್ಕರ್ ರವರು ಧಾರವಾಡದಲ್ಲಿ ಬುದ್ಧರಕ್ಕಿತ ವಸತಿ ಶಾಲೆಯನ್ನು ಸ್ಥಾಪಿಸಿದ್ದರು. ಅದಕ್ಕೆ ವರಾಳೆಯವರೆ ವಾರ್ಡನ್ ಆಗಿದ್ದರು. ರಮಾಬಾಯಿಯವರಿಗೆ ಚಿಕಿತ್ಸೆಯಿಂದ ಸ್ವಲ್ಪ ಚೇತರಿಕೆ ಕಂಡಾಗ, ಬುದ್ಧರಕ್ಕಿತ ವಸತಿ ನಿಲಯಕ್ಕೆ ಹೋಗುತ್ತಾರೆ.

ಅಲ್ಲಿ ಮಕ್ಕಳು ತಿಂಡಿ ತಿಂದಿಲ್ಲ ಎಂಬುದನ್ನು ತಿಳಿದು, ವರಾಳೆಯವರನ್ನು ವಿಚಾರಿಸಿದಾಗ ಅವರು ಸರಕಾರದಿಂದ ಅನುಧಾನ ತಡವಾಗಿದೆ ಮತ್ತು ಅಂಗಡಿಯವನು ನಾವು ಬಾಕಿ ನೀಡಿದೆ ದವಸ ಧಾನ್ಯ ನೀಡುತ್ತಿಲ್ಲ ಎನ್ನುತ್ತಾರೆ. ಆಗ ಈ ನಿಲಯ ಬಾಬಾರು ಸ್ಥಾಪಿಸಿದ್ದು, ಇಲ್ಲಿರುವ ಎಲ್ಲಾ ಮಕ್ಕಳು ನಮ್ಮ ಮಕ್ಕಳೆ ಇವರ ತಾಯಿಯಾದ ನಾನು ಹೇಗೆ ಸುಮ್ಮನಿರಲಿ ಎಂದು ಕೈಗಳಲಿದ್ದ 4 ಬಂಗಾರದ ಬಳೆಗಳನ್ನು ವರಾಳೆಯವರಿಗೆ ನೀಡಿ ಇದನ್ನು ಒತ್ತೆಯಿಡಿ ಇಲ್ಲ ಮಾರಿ. ಅದರಲ್ಲಿ ಬಂದ ಹಣದಲ್ಲಿ ಊಟಕ್ಕೆ ವ್ಯವಸ್ಥೆ ಮಾಡಿ ಎಂದು ನುಡಿದ ಆ ತಾಯಿಯ ತಾಯ್ತನದ ಮಮತೆಯನ್ನು ನಾವು ಕಲ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಈ ತಾಯಿಯೆ ಒಮ್ಮೆ ತ್ಯಾಗದ ಕುರಿತು ಅಂಬೇಡ್ಕರ್ ರವರು ಹೇಳಿದ ಕತೆಯನ್ನು ಒಂದು ಸಣ್ಣ ಸಭೆಯಲ್ಲಿ ಹೇಳುತ್ತಾರೆ. ಅದೇನೆಂದರೆ, ಗ್ರೀಕ್ ಪುರಾಣದೊಳಗೆ ಬರುವ ಈ ಕತೆಯಲ್ಲಿ ಡಿಮೇಟರ್ ಅನ್ನೊದೇವತೆ, ಮಾನವ ರೂಪಧರಿಸಿ ಭೂಮಿಗೆ ಬಂದಾಗ ಇಲ್ಲಿರೋ ರಾಣಿ ಆ ಡಿಮೇಟರ್ಳನ್ನು, ತನ್ನ ದಾಸಿಯನ್ನಾಗಿ ನೇಮಿಸಿಕೊಳ್ಳುತ್ತಾಳೆ. ದಾಸಿಯ ಕೆಲಸ ಏನೆಂದರೆ ರಾಣಿಯ ಸಣ್ಣ ಮಗುವನ್ನು ನೋಡಿಕೊಳ್ಳೋದು, ಆದ್ರೆ ಮನುಷ್ಯ ರೂಪದಲ್ಲಿರುವ ಡಿಮೇಟರ್ಗೆ ಆ ಮಗುವನ್ನು ದೇವರು ಮಾಡಬೇಕು ಅನ್ನೋ ಆಸೆ.

ಅದಕ್ಕೆ ರಾತ್ರಿ ಎಲ್ಲಾ ಮಲಗಿದ ಮೇಲೆ ಮಗುವಿನ ಬಟ್ಟೆ ಎಲ್ಲಾ ತೆಗೆದು ಬಿಸಿ ಬೂದಿ ಮೇಲೆ ಮಲಗಿಸಿ ಅಭ್ಯಾಸ ಮಾಡಿಸ್ತಿದ್ಲು. ಅದು ಮಗುಗೆ ಅಭ್ಯಾಸ ಆಗ್ತಿತ್ತು. ತೇಜಸ್ಸು ಕಾಣ್ತಿತ್ತು. ಆದ್ರೆ ಒಂದುದಿನ ಆ ರಾಣಿ ಅಚಾನಕ್ಕಾಗಿ ಈ ಮಗುವಿನ ಕೋಣೆಗೆ ಬಂದು ನೋಡ್ತಾಳೆ. ಇಲ್ಲಿ ನಡೆಯೋದ್ನೆಲ್ಲಾ ನೋಡಿ, ಹೆದರಿ ತನ್ನ ಕೂಸನ್ನ ಎತ್ಕೊಂಡು ಎದೆಗೆ ಅವಚಿಕೊಂಡು, ಆ ದಾಸಿನ ಕೆಲಸದಿಂದ ಓಡಿಸಿದ್ಲು.

ಇಲ್ಲಿ ರಾಣಿಗೆ ತನ್ನ ಮಗುವೇನೂ ಸಿಕ್ತು. ಆದರೆ ಸಾಮಥ್ರ್ಯ ಶಾಲಿ ದೇವರಾಗಬೇಕಿದ್ದ ದೇವರನ್ನು ಕಳೆದುಕೊಂಡಳು. ಅಂದರೆ ಬೆಂಕಿಲಿ ಸುಟ್ಟರೆ ದೈವತ್ವ ಬರಲ್ಲ. ಅಸ್ಪೃಶ್ಯರಾದ ನಾವು ಎಷ್ಟೇ ಕಷ್ಟ ಬಂದ್ರು ಹೋರಾಟದ ಹಾದಿ ಬಿಡಬಾರದು. ತ್ಯಾಗ ಮಾಡದೆ ನಮ್ಮ ಉದ್ಧಾರ ಸಾಧ್ಯವಿಲ್ಲ ಅಂತ ಮಾತು ಮುಗಿಸುತ್ತಾರೆ.

ಈ ತಾಯಿ ನಮಗೆ ಈ ದೇಶಕೋಸ್ಕರ ಮಾಡಿದ ತ್ಯಾಗವನ್ನು ನಾವು ನಮ್ಮ ಅಕ್ಕ ತಂಗಿಯರಿಗೆ, ಮಕ್ಕಳಿಗೆ ಮತ್ತು ಮಡದಿ, ಗೆಳತಿ ಎಲ್ಲರಿಗೂ ತಿಳಿಸಬೇಕಾಗಿದೆ. ನಮ್ಮ ಮಕ್ಕಳಿಗೆ ನೆಗಡಿಯಾದರೂ ರೇಗಾಡುವ, ಸೀರೆ ಕೊಡಿಸಲಿಲ್ಲವೆಂದರೆ ಮುನಿಸಿಕೊಳ್ಳುವ, ಈ ದಿನಕ್ಕೆ ಇಂತದ್ದೆ ಬೇಕೆಂದು ಕೇಳುವ, ಇಂದಿನ ನಮ್ಮವರಿಗೆ ಈ ತಾಯಿ ಕುರಿತು ತಿಳಿಸಬೇಕಾಗಿದೆ. ಹಾಗೆಯೇ ನಮಗೆ ಈ ತಾಯಿಯ ಮಾತೃತ್ವದ ಗುಣ ಬರಬೇಕಾಗಿದೆ.

ಈ ತಾಯಿಯ ತ್ಯಾಗದಿಂದಲೇ ನಮಗೆ ಪ್ರಬುದ್ಧ ಭಾರತ ನಿರ್ಮಾತೃ ಅಂಬೇಡ್ಕರ್ ಸಿಕ್ಕಿದ್ದು. ಹಾಗಾಗಿಯೇ ರಮಾಬಾಯಿಯ ತ್ಯಾಗವೆ ಅಂಬೇಡ್ಕರ್ ರವರ ಶಕ್ತಿ. ದಿನಾಂಕ 7, ಫೆಬ್ರವರಿ ಈ ಮಾತೆಯ ಜನ್ಮದಿನ. ಈ ನೆನಪಿನಲ್ಲಿ ಈ ತಾಯಿಯ ಚೇತನ ನಮ್ಮ ಆವರಿಸಲಿ. ನಮಗೆ ದಾರಿದೀಪವಾಗಲಿ.

(ಡಾ.ಬಾಬು ಅಣದೂರೆ
ಪ್ರಧಾನ ಕಾರ್ಯದರ್ಶಿಗಳು
ಭಾರತೀಯ ಬೌದ್ಧ ಮಹಾ ಸಭೆ
ಬೀದರ ಜಿಲ್ಲಾ ಶಾಖೆ
ಮೊಬೈಲ್:9880802287)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ

Published

on

~ಗೋವರ್ಧನ ನವಿಲೇಹಾಳು

ಏಪ್ರಿಲ್ 3, 2026 ರಿಂದ ಇರಾನ್-ಇಸ್ರೇಲ್-ಅಮೆರಿಕಾ ಸಂಘರ್ಷವು ಐದನೇ ವಾರಕ್ಕೆ ಕಾಲಿಟ್ಟಿದೆ. ತೆಹ್ರಾನ್ ಮತ್ತು ಇಸ್ಫಹಾನ್‌ನಲ್ಲಿ ಧೂಮ್ರಜಾಲದ ಕಪ್ಪು ಮೋಡಗಳು, ಬೆಂಕಿಯ ಉರಿ ಭುಗಿಲೆದ್ದಿದೆ. ಅಮೆರಿಕಾ CENTCOM ವಿಡಿಯೋಗಳಲ್ಲಿ ಡ್ರೋನ್, ಟ್ಯಾಂಕ್ ಮತ್ತು ಮಿಸೈಲ್ ಲಾಂಚರ್‌ಗಳನ್ನು “ಯಶಸ್ವಿಯಾಗಿ” ನಾಶಪಡಿಸುತ್ತಿರುವುದನ್ನು ತೋರಿಸುತ್ತಿದೆ.

ಈ ಯುದ್ಧವು ನಾಗರಿಕರ ಮೇಲಿನ ನೇರ ಹಲ್ಲೆಯಾಗಿ ಮಾರ್ಪಟ್ಟಿದೆ. ಅಂತರಾಷ್ಟ್ರೀಯ ಮಾಧ್ಯಮಗಳು – ಅಲ್ ಜಜೀರಾ, ಯುರೋನ್ಯೂಸ್, ದಿ ಎಕಾನಮಿಸ್ಟ್, ಯುಎನ್ ವರದಿಗಳು – ಇದನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಇದು ಯುದ್ಧವಲ್ಲ; ಇದು ಮಾನವೀಯತೆಯ ವಿರುದ್ಧದ ಅಪರಾಧ.

ಫೆಬ್ರುವರಿ 28ರಂದು ಆರಂಭವಾದ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ 900ಕ್ಕೂ ಹೆಚ್ಚು ದಾಳಿಗಳು ನಡೆದವು. ಇರಾನ್ ನಾಯಕತ್ವ, ನ್ಯೂಕ್ಲಿಯರ್ ಸೌಲಭ್ಯಗಳು, ಮಿಸೈಲ್ ಗಳನ್ನು ಹೊಡೆದು ಹಾಕುವುದು ನಮ್ಮ ಗುರಿ ಎಂದು ಅಮೆರಿಕಾ-ಇಸ್ರೇಲ್ ಹೇಳುತ್ತವೆ. ಆದರೆ ವಾಸ್ತವವು ಭಯಾನಕ. ಇರಾನ್ ಆರೋಗ್ಯ ಸಚಿವಾಲಯದ ಪ್ರಕಾರ 2,076ಕ್ಕೂ ಹೆಚ್ಚು ಜನ ಸತ್ತಿದ್ದಾರೆ, 26,500ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರಲ್ಲಿ ಬಹುಪಾಲು ನಾಗರಿಕರು. ಮಿನಾಬ್‌ನ ಪ್ರಾಥಮಿಕ ಶಾಲೆಯ ಮೇಲಿನ ದಾಳಿಯಲ್ಲಿ 168-175 ಮಕ್ಕಳು (ಹೆಚ್ಚಿನವರು ಹುಡುಗಿಯರು) ಸಾವಿಗೀಡಾದರು – ವಿಯೆಟ್ನಾಮ್‌ನ ಮೈ ಲಾಯ್ ಹತ್ಯಾಕಾಂಡದ ನಂತರ ಅಮೆರಿಕಾ ಸೈನ್ಯದ ಅತಿದೊಡ್ಡ ಮಕ್ಕಳ ಸಾವು ಎಂದು ರಿಫ್ಯೂಜೀಸ್ ಇಂಟರ್ನ್ಯಾಷನಲ್ ಹೇಳಿದೆ. ಇಸ್ಫಹಾನ್‌ನಲ್ಲಿ ಉಕ್ಕು ಘಟಕಗಳು, ಔಷಧಿ ಸಂಶೋಧನಾ ಕೇಂದ್ರಗಳು ನಾಶವಾಗಿವೆ. ಯುಎನ್ ಹ್ಯೂಮನ್ ರೈಟ್ಸ್ ಚೀಫ್ ವೋಲ್ಕರ್ ಟರ್ಕ್ ಅವರು “ನಾಗರಿಕರು ಈ ಯುದ್ಧದ ಬಲಿಪಶುಗಳಾಗಿದ್ದಾರೆ” ಎಂದು ಖಂಡಿಸಿದ್ದಾರೆ. 67,414 ನಾಗರಿಕ ಸೈಟ್‌ಗಳು (498 ಶಾಲೆಗಳು, 236 ಆಸ್ಪತ್ರೆಗಳು) ಹಾನಿಗೊಳಗಾಗಿವೆ.

ಇರಾನ್ ಕೂಡ ಇಸ್ರೇಲ್ ಮೇಲೆ ಮಿಸೈಲ್ ದಾಳಿ ನಡೆಸಿದೆ. ಕೇಂದ್ರ ಇಸ್ರೇಲ್‌ನಲ್ಲಿ ಸ್ಫೋಟಗಳು, 24 ಇಸ್ರೇಲಿ ನಾಗರಿಕರು ಸತ್ತಿದ್ದಾರೆ. ಗಲ್ಫ್ ರಾಷ್ಟ್ರಗಳಲ್ಲಿ ತೈಲ ಘಟಕಗಳು, ವಿಮಾನ ನಿಲ್ದಾಣಗಳ ಮೇಲೆ ದಾಳಿ. ಆದರೆ ಸಾವುಗಳ ಪ್ರಮಾಣದಲ್ಲಿ ಇರಾನ್‌ನ ನಷ್ಟ ಅಪಾರ. ಲೆಬನಾನ್‌ನಲ್ಲಿ ಹೆಜ್ಬೊಲ್ಲಾಹ್ ಸಂಘರ್ಷದಿಂದ 1,318 ಜನ ಸತ್ತಿದ್ದಾರೆ. ಯುಎನ್‌ಎಚ್‌ಸಿಆರ್ ಪ್ರಕಾರ 3.2 ಮಿಲಿಯನ್ ಇರಾನಿಯನ್ನರು ಒಳನಾಡಿನ ನಿರಾಶ್ರಿತರಾಗಿದ್ದಾರೆ. ಇದು ಇರಾನ್‌ನ 3% ಜನಸಂಖ್ಯೆ. ಆಫ್ಘನ್ ನಿರಾಶ್ರಿತರು (1.65 ಮಿಲಿಯನ್) ಇನ್ನಷ್ಟು ಅಪಾಯದಲ್ಲಿದ್ದಾರೆ. ವಿದ್ಯುತ್ ಸರಬರಾಜು, ಔಷಧಿ, ಆಹಾರ, ಇಂಧನದ ಕೊರತೆ ತೀವ್ರವಾಗಿದೆ. ಯುನೆಸ್ಕೋ ವಿಶ್ವ ಪರಂಪರೆ ಸ್ಥಳಗಳು ಹಾನಿಗೊಳಗಾಗಿವೆ.

ಅಮೆರಿಕಾದ ನಡೆಯನ್ನು ತೀಕ್ಷ್ಣವಾಗಿ ವಿಮರ್ಶಿಸಬೇಕು. ಟ್ರಂಪ್ ಸರ್ಕಾರವು “ಸ್ವಯಂರಕ್ಷಣೆ” ಮತ್ತು “ಇರಾನ್ ಅಪಾಯವನ್ನು ತೊಡೆದುಹಾಕುವುದು” ಎಂದು ನ್ಯಾಯೀಕರಿಸುತ್ತಿದೆ. ಆದರೆ ಅವರು ಸೇತುವೆಗಳು, ವಿದ್ಯುತ್ ಘಟಕಗಳನ್ನು ಗುರಿಯಾಗಿಸುತ್ತಿದ್ದಾರೆ – ಇದು ನಾಗರಿಕ ಜೀವನವನ್ನು ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸುತ್ತದೆ. ಯುದ್ಧದ ವೆಚ್ಚ ದಿನಕ್ಕೆ ಶತಕೋಟಿ ಡಾಲರ್‌ಗಳು. ಹಾರ್ಮುಜ್ ಜಲಸಂಧಿ ಪ್ರಾಯಶಃ ಮುಚ್ಚುವಿಕೆಯಿಂದ ಜಗತ್ತಿನ ತೈಲ ಸರಬರಾಜು ಅಸ್ತವ್ಯಸ್ತ. ತೈಲ ಬೆಲೆಗಳು ಏರಿಕೆಯಾಗಿ, ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ 50 ಸೆಂಟ್‌ಗಳಷ್ಟು ಏರಿದೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಆಹಾರ, ಗೊಬ್ಬರ, ಔಷಧಿ ಬೆಲೆಗಳು ಆಕಾಶ ಸ್ಪರ್ಶಿಸುತ್ತಿವೆ. ಇದು ಬಡ ಜನರ ಮೇಲಿನ ಪರೋಕ್ಷ ಹಲ್ಲೆ. ಟ್ರಂಪ್ ಅವರ ಭಾಷಣಗಳಲ್ಲಿ ಸ್ಪಷ್ಟ ಯೋಜನೆ ಇಲ್ಲ – “ನನಗೆ ಅನಿಸಿದಾಗ” ಯುದ್ಧ ಕೊನೆಗೊಳ್ಳುತ್ತದೆ ಎಂದು ಹೇಳುತ್ತಾರೆ. ಇದು ಅನಿಯಂತ್ರಿತ ಆಕ್ರಮಣವಲ್ಲದೆ ಬೇರೇನು?

ಅಂತರಾಷ್ಟ್ರೀಯ ಮಾಧ್ಯಮಗಳು ಎರಡು ಮುಖಗಳನ್ನು ತೋರಿಸುತ್ತವೆ. ಪಶ್ಚಿಮ ಮಾಧ್ಯಮಗಳು ಇರಾನ್‌ನ “ಅಪಾಯ”ವನ್ನು ಒತ್ತಿ ಹೇಳುತ್ತವೆಯಾದರೆ, ಅಲ್ ಜಜೀರಾ ಮತ್ತು ಮಧ್ಯಪ್ರಾಚ್ಯ ಮಾಧ್ಯಮಗಳು ಅಮೆರಿಕಾ-ಇಸ್ರೇಲ್‌ನ “ಆಕ್ರಮಣ”ವನ್ನು ಖಂಡಿಸುತ್ತವೆ. ಆದರೆ ಸತ್ಯ ಒಂದೇ: ನಾಗರಿಕರು ಬಲಿಪಶುಗಳಾಗಿದ್ದಾರೆ. ಜನೆವಾ ಕನ್ವೆನ್ಷನ್‌ಗಳು ನಾಗರಿಕ ಗುರಿಗಳನ್ನು ರಕ್ಷಿಸುತ್ತವೆ, ಆದರೆ ಇಲ್ಲಿ “ಕೊಲಾಟೆರಲ್ ಡ್ಯಾಮೇಜ್” ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಇಸ್ರೇಲ್‌ನ ಸುರಕ್ಷತೆಯ ಅಗತ್ಯವನ್ನು ಒಪ್ಪಿಕೊಂಡರೂ, ಇರಾನ್ ಜನರನ್ನು “ಶಿಲಾ ಯುಗಕ್ಕೆ” ತಳ್ಳುವುದು ನೈತಿಕತೆಯಲ್ಲ. ಇರಾನ್ ರೆಜಿಮ್‌ನ ದಮನಕಾರಿ ನೀತಿಗಳು ಖಂಡನೀಯವೇ, ಆದರೆ ಯುದ್ಧವು ಆ ನಿರಂಕುಶತೆಯನ್ನು ಬಲಪಡಿಸುತ್ತಿದೆ, ಜನರನ್ನು ಒಗ್ಗೂಡಿಸುತ್ತಿದೆ.

ದೀರ್ಘಕಾಲೀನ ಪರಿಣಾಮಗಳು ಭಯಾನಕವಾಗಿವೆ. ಹೇಗೆಂದರೆ 3.2 ಮಿಲಿಯನ್ ನಿರಾಶ್ರಿತರು, ಆರೋಗ್ಯ ಸಂಕಷ್ಟ, ಮಾನಸಿಕ ಆಘಾತ, ಬಡತನದ ಏರಿಕೆ. ಯುದ್ಧವು ಮುಂದುವರಿದರೆ ಹಸಿವು, ರೋಗಗಳು, ಪರಿಸರ ವಿನಾಶ ತೀವ್ರವಾಗುತ್ತವೆ. ಹಾರ್ಮುಜ್ ಮುಚ್ಚುವಿಕೆ ಜಗತ್ತಿನ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳಲಿದೆ. ಅಂತರಾಷ್ಟ್ರೀಯ ಸಮುದಾಯ ಈಗಲೇ ಎಚ್ಚರಗೊಳ್ಳಬೇಕು: ಸೆಸ್‌ಫೈರ್, ಮಾನವೀಯ ಸಹಾಯದ ಮುಕ್ತ ಪ್ರವೇಶ, ಯುಎನ್ ಮಧ್ಯಸ್ಥಿಕೆಯ ಸಂಧಾನ. ಡಿಪ್ಲಾಮಸಿಗೆ ಬದಲಾಗಿ ಬಾಂಬ್‌ಗಳನ್ನು ಆಯ್ಕೆ ಮಾಡುವುದು ಅಮೆರಿಕಾದ ಶಕ್ತಿಯನ್ನು ಅಪಹಾಸ್ಯಗೊಳಿಸುತ್ತಿದೆ.

ಯುದ್ಧವು ಯಾರಿಗೂ ಗೆಲುವು ತರುವುದಿಲ್ಲ. ಇರಾನ್‌ನ ಮಕ್ಕಳ ಸಾವುಗಳು, ಇಸ್ರೇಲ್‌ನ ಗಾಯಗೊಂಡ ಕುಟುಂಬಗಳು, ಗಲ್ಫ್‌ನ ಆರ್ಥಿಕ ಸಂಕಷ್ಟಗಳು ಮನಕಲಕುತ್ತವೆ. ರಾಜಕೀಯ ಲೆಕ್ಕಾಚಾರಗಳು ಮಾನವ ಜೀವಗಳಿಗಿಂತ ದೊಡ್ಡವಲ್ಲ. ಅಮೆರಿಕಾವು ತನ್ನ ಅಪಾರ ಶಕ್ತಿಯನ್ನು ಶಾಂತಿ ಮತ್ತು ಸಂಧಾನಕ್ಕೆ ಬಳಸಬೇಕು. ಇಲ್ಲವಾದರೆ ಈ ಯುದ್ಧವು ಅಮಾಯಕ ಜೀವಗಳ ಭವಿಷ್ಯವನ್ನು ನಾಶಪಡಿಸುತ್ತದೆ. ಮಾನವೀಯತೆಯ ದೃಷ್ಟಿಯಿಂದ, ಈ ಅಮಾನುಷ ಆಕ್ರಮಣವನ್ನು ತಕ್ಷಣ ನಿಲ್ಲಿಸಿ. ಶಾಂತಿಯೇ ಏಕೈಕ ಮಾರ್ಗ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ

Published

on

~ಗೋವರ್ಧನ ನವಿಲೇಹಾಳು

ಭಾರತದ ಪ್ರಜಾಪ್ರಭುತ್ವವು ವಿಶ್ವದ ಅತಿದೊಡ್ಡ ಚುನಾವಣಾ ಪ್ರಯೋಗಶಾಲೆಯಾಗಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಕೋಟಿಗಟ್ಟಲೆ ಮತದಾರರು ತಮಗೆ ಅರ್ಹವೆನಿಸಿದ  ಪ್ರತಿನಿಧಿಯನ್ನು ಆಯ್ಕೆಯನ್ನು ಮಾಡುತ್ತಾರೆ. ಹಾಗೆಯೇ ಪ್ರಜಾ ಪ್ರಭುತ್ವದ ಪ್ರಯೋಗಶಾಲೆಯಾದ ಭಾರತದ ಚುನಾವಣೆಗಳನ್ನು ಹಣ ಮತ್ತು ಜಾತಿಗಳು ನಿಯಂತ್ರಿಸುತ್ತಿವೆ ಎಂಬುದು ಕರಾಳ ಸತ್ಯ.

ಪಕ್ಷಗಳು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ ಮತ್ತು  ಖರೀದಿಸುತ್ತಿವೆ. ಇದು ಕೇವಲ ಒಂದು ತಾತ್ಕಾಲಿಕ ಸಮಸ್ಯೆಯಲ್ಲ; ಇದು ಪ್ರಜಾಪ್ರಭುತ್ವದ ಮೂಲ ತತ್ತ್ವಗಳನ್ನೇ ಕೊಲ್ಲುತ್ತಿರುವ ದೀರ್ಘಕಾಲಿಕ ಕ್ಯಾನ್ಸರ್. ಒಂದು ದಿನಪತ್ರಿಕೆಯ ಸಂಪಾದಕನಾದ ನಾನು ಈ ಸಂಪಾದಕೀಯದ ಮೂಲಕ ಹಣ ಮತ್ತು ಜಾತಿ ಎಂಬ  ಎರಡು ಶಕ್ತಿಗಳು ಹಾಗೂ ದೌರ್ಬಲ್ಯಗಳನ್ನು ವಿಮರ್ಶಾತ್ಮಕವಾಗಿ ಪರೀಕ್ಷಿಸಲು ಬಯಸುತ್ತೇನೆ. ಇದು ಕೇವಲ ಟೀಕೆಯಲ್ಲ;  ಎಚ್ಚರಿಕೆಯೂ ಹೌದು.

ಭಾರತದ ಚುನಾವಣೆಗಳ ವೆಚ್ಚವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. 2019ರ ಲೋಕಸಭಾ ಚುನಾವಣೆಗೆ ಸರ್ಕಾರಿ ಲೆಕ್ಕದ ಪ್ರಕಾರ 60,000 ಕೋಟಿ ರುಪಾಯಿ ವೆಚ್ಚವಾಗಿದ್ದರೆ, 2024ರ ಚುನಾವಣೆಯಲ್ಲಿ ಇದು ಒಂದು ಲಕ್ಷ ಕೋಟಿ ರುಪಾಯಿಗಳನ್ನು ಮೀರಿದೆ ಎಂದು ಅಂಕಿಅಂಶಗಳು ಹೇಳುತ್ತವೆ. ಆದರೆ ನಿಜವಾದ ವೆಚ್ಚ ಇನ್ನೂ ಹೆಚ್ಚು. ಪ್ರತಿ ಅಭ್ಯರ್ಥಿಯು ಒಂದು ಕ್ಷೇತ್ರದಲ್ಲಿ ಕನಿಷ್ಠ 10-20 ಕೋಟಿ ರುಪಾಯಿ ಖರ್ಚು ಮಾಡುತ್ತಾನೆ. ಇದಕ್ಕೆ ಕಾರಣ ಸರಳವಾಗಿದೆ, ಮತದಾರರನ್ನು ‘ಕೊಳ್ಳುವುದು’. ಚುನಾವಣಾ ಆಯೋಗದ ನಿಯಮಗಳು ಎಷ್ಟೇ ಕಟ್ಟುನಿಟ್ಟಾಗಿದ್ದರೂ, ಕಪ್ಪು ಹಣದ ಪ್ರವಾಹವನ್ನು ತಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಎಲೆಕ್ಟ್ರಾಲ್ ಬಾಂಡ್‌ಗಳು ತಾತ್ಕಾಲಿಕವಾಗಿ ಪಾರದರ್ಶಕತೆಯ ಮುಸುಕು ಹಾಕಿದ್ದಾವೆ. ಆದರೆ ಸುಪ್ರೀಂ ಕೋರ್ಟ್ ಅವುಗಳನ್ನು ಅಸಂವಿಧಾನಿಕ ಎಂದು ತೀರ್ಪು ನೀಡಿದ ನಂತರವೂ, ಕಾರ್ಪೊರೇಟ್‌ಗಳು ಮತ್ತು ಉದ್ಯಮಪತಿಗಳು ಬೇರೆ ಬೇರೆ ಮಾರ್ಗಗಳ ಮೂಲಕ ಹಣ ಸುರಿಸುತ್ತಲೇ ಇದ್ದಾರೆ. ಫಲಿತಾಂಶ? ಶ್ರೀಮಂತ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮಾತ್ರ ಸ್ಪರ್ಧಿಸುತ್ತಾರೆ. 2024ರ ಲೋಕಸಭೆಯಲ್ಲಿ ಸರಾಸರಿ ಅಭ್ಯರ್ಥಿಯ ಆಸ್ತಿ 5 ಕೋಟಿ ರುಪಾಯಿಗಳಿಗಿಂತ ಹೆಚ್ಚಿತ್ತು.

ಜನಪ್ರತಿನಿಧಿಯಾಗುವುದು ಇಂದು ಉದ್ಯೋಗವಾಗಿದೆ, ಸೇವೆಯಲ್ಲ. ಹಣವು ಕೇವಲ ವೆಚ್ಚವಲ್ಲ; ಅದು ಅಧಿಕಾರದ ಹಂಚಿಕೆಯನ್ನೂ ನಿರ್ಧರಿಸುತ್ತದೆ. ಪಕ್ಷಗಳು ‘ಕ್ಯಾಷ್ ಫಾರ್ ವೋಟ್’ ಯೋಜನೆಗಳನ್ನು ಅನುಸರಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಒಂದು ಮನೆಗೆ 500 ರಿಂದ 2000 ರುಪಾಯಿ, ನಗರಗಳಲ್ಲಿ ಮೊಬೈಲ್ ರೀಚಾರ್ಜ್, ಸೈಕಲ್, ಟಿವಿ – ಇವೆಲ್ಲವೂ ಹಣದ ರೂಪದಲ್ಲಿ ಹಂಚಿಕೆಯಾಗುತ್ತವೆ. ಚುನಾವಣಾ ಆಯೋಗವು ರೇಡ್ ನಡೆಸುತ್ತದೆ, ಆದರೆ ಹಣದ ಹರಿವು ನಿಲ್ಲುವುದಿಲ್ಲ. ಇದರ ಫಲಿತಾಂಶವಾಗಿ ಜನರ ಸಮಸ್ಯೆಗಳು – ಬಡತನ, ಉದ್ಯೋಗ, ಶಿಕ್ಷಣ – ಮರೆಯುತ್ತವೆ. ಅಭ್ಯರ್ಥಿಯು ‘ನಾನು ಏನು ಮಾಡುತ್ತೇನೆ’ ಎಂದು ಹೇಳುವ ಬದಲು ‘ನಾನು ಎಷ್ಟು ಕೊಡುತ್ತೇನೆ’ ಎಂದು ಪ್ರಚಾರ ಮಾಡುತ್ತಾನೆ. ಇದು ಜನತಂತ್ರವಲ್ಲ; ಇದು ಹಣತಂತ್ರ.

ಇನ್ನು ಜಾತಿಯ ಸುಳಿಯನ್ನು ಚರ್ಚಿಸುವುದಾದರೆ, ಭಾರತದಲ್ಲಿ ಜಾತಿ ಎಂದರೆ ಕೇವಲ ಸಾಮಾಜಿಕ ವ್ಯವಸ್ಥೆಯಲ್ಲ; ಅದು ರಾಜಕೀಯ ಗಣಿತದ ಮೂಲಭೂತ ಸೂತ್ರ. ಕರ್ನಾಟಕದಲ್ಲಿ ಮಾತ್ರವಲ್ಲ, ಉತ್ತರ ಪ್ರದೇಶ, ಬಿಹಾರ, ತಮಿಳುನಾಡು – ಎಲ್ಲೆಡೆ ಜಾತಿ ಸಮೀಕ್ಷೆಗಳು, ಜಾತಿ ಆಧಾರಿತ ಟಿಕೆಟ್ ಹಂಚಿಕೆ ಮತ್ತು ಜಾತಿ ಬ್ಯಾಂಕ್‌ಗಳು ಚುನಾವಣೆಗಳನ್ನು ನಿರ್ಧರಿಸುತ್ತವೆ.

ಕರ್ನಾಟಕದಲ್ಲಿ ಲಿಂಗಾಯತ, ಒಕ್ಕಲಿಗ, ದಲಿತ, ಮುಸ್ಲಿಂ – ಈ ಜಾತಿ ಬ್ಲಾಕ್‌ಗಳನ್ನು ಲೆಕ್ಕ ಹಾಕದೆ ಯಾವುದೇ ಪಕ್ಷ ಗೆಲ್ಲಲಾರದು. ಪಕ್ಷಗಳು ಜಾತಿ ನಾಯಕರನ್ನು ‘ಖರೀದಿಸುತ್ತವೆ’. ಒಂದು ಜಾತಿಯ ನಾಯಕನಿಗೆ ಟಿಕೆಟ್ ಕೊಟ್ಟರೆ ಆ ಜಾತಿಯ 70-80% ಮತಗಳು ಬರುತ್ತವೆ ಎಂಬ ಲೆಕ್ಕ. ಇದು ಜನರನ್ನು ವ್ಯಕ್ತಿಗಳಾಗಿ ನೋಡುವುದಿಲ್ಲ; ಅವರನ್ನು ಜಾತಿ ಬ್ಯಾಂಕ್‌ಗಳಾಗಿ ಪರಿವರ್ತಿಸುತ್ತದೆ.

ಜಾತಿ ರಾಜಕಾರಣವು ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡಿದೆ. ಸಂವಿಧಾನದಲ್ಲಿ ಮೀಸಲಾತಿ ಸಾಮಾಜಿಕ ನ್ಯಾಯಕ್ಕಾಗಿ ಇದೆ. ಆದರೆ ಇಂದು ಅದು ಅಧಿಕಾರದ ಲಾಭಕ್ಕಾಗಿ ಬಳಸಲಾಗುತ್ತಿದೆ. ಜಾತಿ ಸಮೀಕ್ಷೆಯ ಬೇಡಿಕೆಗಳು ಹೆಚ್ಚುತ್ತಿವೆ. ಕರ್ನಾಟಕದಲ್ಲಿ ಕೂಡ ಜಾತಿ ಸಮೀಕ್ಷೆಯ ವಿವಾದ ಎಲ್ಲರಿಗೂ ತಿಳಿದಿದೆ. ಇದು ನಿಜವಾಗಿಯೂ ಸಾಮಾಜಿಕ ನ್ಯಾಯವೇ? ಅಥವಾ ಹೆಚ್ಚು ಮೀಸಲಾತಿ ಬೇಡುವ ಮೂಲಕ ಅಧಿಕಾರ ಹಂಚಿಕೊಳ್ಳುವ ರಾಜಕೀಯ ತಂತ್ರವೇ? ಜಾತಿ ಆಧಾರಿತ ರಾಜಕಾರಣವು ಮೆರಿಟ್ ಅನ್ನು ಕೊಲ್ಲುತ್ತದೆ. ಯೋಗ್ಯರಾದ ಯುವಕರು ಅಥವಾ ಮಹಿಳೆಯರು ಜಾತಿ ಲೆಕ್ಕವಿಲ್ಲದೆ ಅವಕಾಶ ಪಡೆಯುವುದಿಲ್ಲ. ಇದು ದೇಶದ ಅಭಿವೃದ್ಧಿಯನ್ನು ಹಿಂದಕ್ಕೆ ಎಳೆಯುತ್ತದೆ.

ಹಣ ಮತ್ತು ಜಾತಿ ಒಂದರೊಂದು ಪೂರಕವಾಗಿ ಕೆಲಸ ಮಾಡುತ್ತವೆ. ಹಣವು ಜಾತಿ ನಾಯಕರನ್ನು ಖರೀದಿಸುತ್ತದೆ. ಜಾತಿ ನಾಯಕರು ಹಣದಿಂದ ಮತಗಳನ್ನು ಖರೀದಿಸುತ್ತಾರೆ. ಒಂದು ಸಣ್ಣ ಗುಂಪು ಅಧಿಕಾರವನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುತ್ತದೆ. ಸಾಮಾನ್ಯ ಜನರು ಕೇವಲ ಮತದಾರರಾಗಿ ಉಳಿಯುತ್ತಾರೆ, ನಿರ್ಣಾಯಕರಾಗುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಹೆಚ್ಚುತ್ತದೆ. ಅಧಿಕಾರಕ್ಕೆ ಬಂದವರು ತಮ್ಮ ಹೂಡಿಕೆಯನ್ನು ತಿರುಗಿಸಿಕೊಳ್ಳುತ್ತಾರೆ. ರಸ್ತೆಗಳು, ಆಸ್ಪತ್ರೆಗಳು, ಶಾಲೆಗಳು – ಇವುಗಳ ಬದಲು ಅಭಿವೃದ್ಧಿ ಕೇವಲ ಫೋಟೋ ,ವಿಡಿಯೋಗಳಲ್ಲಿ ಉಳಿಯುತ್ತವೆ

ಈ ಸಮಸ್ಯೆಯನ್ನು ತೊಡೆದುಹಾಕಲು ಏನು ಮಾಡಬಹುದು? ಮೊದಲು ಚುನಾವಣಾ ಆಯೋಗವು ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಲ್ಲಾ ಅಭ್ಯರ್ಥಿಗಳ ಆಸ್ತಿ ಮತ್ತು ವೆಚ್ಚದ ಪಾರದರ್ಶಕ ಲೆಕ್ಕಪತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಬೇಕು. ರಾಜ್ಯ ಆರ್ಥಿಕ ನೆರವು (ಸ್ಟೇಟ್ ಫಂಡಿಂಗ್ ಆಫ್ ಎಲೆಕ್ಷನ್ಸ್) ಅನ್ನು ಜಾರಿಗೊಳಿಸಬೇಕು. ಕಾರ್ಪೊರೇಟ್ ದಾನಗಳಿಗೆ ಕಟ್ಟುಪಾಡು ಬೇಕು. ಜಾತಿ ರಾಜಕಾರಣಕ್ಕೆ ಎದುರಾಗಿ ‘ಜಾತಿ-ಮುಕ್ತ’ ಅಭ್ಯರ್ಥಿ ಆಯ್ಕೆಯನ್ನು ಪ್ರೋತ್ಸಾಹಿಸಬೇಕು. ಜಾತಿ ಸಮೀಕ್ಷೆಗಳು ನಡೆಯಬೇಕು, ಆದರೆ ಅದನ್ನು ಅಧಿಕಾರದ ಲಾಭಕ್ಕಾಗಿ ಬಳಸಬಾರದು. ಶಿಕ್ಷಣ ಮತ್ತು ಆರ್ಥಿಕ ಸಬಲೀಕರಣದ ಮೂಲಕ ಜಾತಿ ಆಧಾರಿತ ರಾಜಕಾರಣವನ್ನು ಕ್ರಮೇಣ ಕಡಿಮೆ ಮಾಡಬೇಕು.

ಜನರು ಈಗ ಎಚ್ಚರಗೊಳ್ಳಬೇಕು. ಮತವನ್ನು ಹಣಕ್ಕಾಗಿ ಅಥವಾ ಜಾತಿಗಾಗಿ ಮಾರಾಟ ಮಾಡುವುದು ಸ್ವಯಂ ವಿನಾಶಕ್ಕೆ ದಾರಿ. ಪ್ರಜಾಪ್ರಭುತ್ವವು ಜನರ ಕೈಯಲ್ಲಿದೆ. ಅದನ್ನು ಹಣ ಮತ್ತು ಜಾತಿಯ ಕೈಗೆ ಬಿಟ್ಟರೆ ನಾವು ನಮ್ಮ ಭವಿಷ್ಯವನ್ನೇ ಮಾರಿಕೊಳ್ಳುತ್ತೇವೆ. ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಮತ್ತು ನಾಗರಿಕ ಸಂಘಟನೆಗಳು ಈ ವಿಷಯವನ್ನು ಸತತವಾಗಿ ಚರ್ಚಿಸಬೇಕು. ಚುನಾವಣೆಗಳು ಕೇವಲ ಅಧಿಕಾರದ ಬದಲಾವಣೆಯಲ್ಲ; ಅವು ನಮ್ಮ ಸಮಾಜದ ದರ್ಶನವನ್ನು ನಿರ್ಧರಿಸುತ್ತವೆ.

ಇಂದು ನಾವು ಎದುರಿಸುತ್ತಿರುವುದು ಕೇವಲ ಒಂದು ಚುನಾವಣಾ ಸಮಸ್ಯೆಯಲ್ಲ; ಇದು ಭಾರತದ ಆತ್ಮದ ಸಮಸ್ಯೆ. ಹಣ ಮತ್ತು ಜಾತಿಯನ್ನು ಮೀರಿ ನಿಲ್ಲುವ ನಾಯಕರು ಬರಬೇಕು. ಅವರು ಜನರ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲಿಯವರೆಗೂ ನಮ್ಮ ಪ್ರಜಾಪ್ರಭುತ್ವವು ಕೇವಲ ಹೆಸರಿನಲ್ಲಿ ಮಾತ್ರ ಉಳಿಯುತ್ತದೆ. ಜನತೆ ಎಚ್ಚರದಿಂದಿರಲಿ. ಇದು ನಮ್ಮ ದೇಶ, ನಮ್ಮ ಭವಿಷ್ಯ.

ಸುದ್ದಿದಿನ | ವಾಟ್ಸಾಪ್ | 9980346243

Continue Reading

ದಿನದ ಸುದ್ದಿ

ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್‌ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ

Published

on

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು  ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

Continue Reading

Trending