Connect with us

ರಾಜಕೀಯ

ಮಂಡ್ಯ ಲೋಕಸಭಾ ಉಪ ಚುನಾವಣೆ: ಕಡೆ ದಿನ 7 ನಾಮಪತ್ರ ಸಲ್ಲಿಕೆ

Published

on

ಸುದ್ದಿದಿನ ಡೆಸ್ಕ್ : ಮಂಡ್ಯ ಲೋಕಸಭಾ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಇಂದು 7 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಭಾರತೀಯ ಜನತಾ ಪಕ್ಷದ ಡಾ. ಸಿದ್ದರಾಮಯ್ಯ ಅವರು 1 ನಾಮಪತ್ರ, ಪಕ್ಷೇತರ ಅಭ್ಯರ್ಥಿಗಳಾಗಿ ನಂದೀಶ್ ಕುಮಾರ್ ಅವರು 1 ನಾಮಪತ್ರ, ಎಂ.ಹೊಣ್ಣೇಗೌಡ ಅವರು 1 ನಾಮಪತ್ರ, ಕೌಡ್ಲೆ ಚನ್ನಪ್ಪ ಅವರು 1 ನಾಮಪತ್ರ, ಬಿ.ಎಸ್.ಗೌಡ ಅವರು 1 ನಾಮಪತ್ರ, ಶಂಭುಲಿಂಗೇಗೌಡ (ಗಾಂಧೀವಾದಿ) ಅವರು 1 ನಾಮಪತ್ರ ಹಾಗೂ ಕೆ.ಎಸ್.ರಾಜಣ್ಣ ಅವರು 1 ನಾಮಪತ್ರವನ್ನು ಸಲ್ಲಿಸಿದ್ದಾರೆ.

ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಒಟ್ಟಾರೆ 9 ಅಭ್ಯರ್ಥಿಗಳಿಂದ 14 ನಾಮಪತ್ರಗಳು ಸಲ್ಲಿಕೆಯಾಗಿದೆ ಎಂದು ಜಿಲ್ಲಾ ಚುನಾಣಾಧಿಕಾರಿ ಹಾಗೂ ಜಿಲ್ಲಾಧಿಕರಿ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಪ್ರಮುಖ ಸುದ್ದಿಗಳು

  1. ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
  2. ಹರಿಯಾಣದಲ್ಲಿಂದು ವಿವಿಧ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ, ಮಹೇಂದ್ರಗರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಹರಿಯಾಣದ ಸಿರ್‍ಸಾದಲ್ಲಿ ರೋಡ್ ಶೋ ನಡೆಸಿದರು.
  3. ಸಂತಾಲಿ ಲೇಖಕ ಪಂಡಿತ್ ರಘುನಾಥ್ ಮುರ್ಮು ಅವರ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ ಅವರು, ಓಲ್ ಚಿಕಿ ಲಿಪಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸಂತಾಲಿ ಭಾಷೆಗೆ ಪಂಡಿತ್ ರಘುನಾಥ್ ಮುರ್ಮು ಹೊಸ ಗುರುತು ನೀಡಿದ್ದಾರೆ ಎಂದು ಹೇಳಿದರು.
  4. ಭಗವಾನ್ ಬುದ್ಧನ ಜನ್ಮದಿನದ ಅಂಗವಾಗಿ ಬುದ್ಧ ಪೂರ್ಣಿಮೆಯನ್ನು ಪ್ರಪಂಚದಾದ್ಯಂತ ವಿವಿಧ ಭಾಗಗಳಲ್ಲಿ ಇಂದು ಆಚರಿಸಲಾಗುತ್ತಿದೆ. ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಇದು ಪ್ರಮುಖ ಹಬ್ಬವಾಗಿದೆ.
  5. ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. ಚುನಾವಣೆ ಘೋಷಣೆಯಾಗುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ನಿರೀಕ್ಷೆಗಿಂತ ಹಲವಾರು ತಿಂಗಳುಗಳ ಮುಂಚಿತವಾಗಿಯೇ ರಾಷ್ಟ್ರೀಯ ಚುನಾವಣೆಯನ್ನು ಕರೆದಿದ್ದಾರೆ.
  6. ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.
  7. ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ 2ನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲನೇ ಕ್ವಾಲಿಫೈಯರ್ ಪಂದ್ಯ ಸೋತ ಹೈದರಾಬಾದ್ ತಂಡದೊಂದಿಗೆ ಫೈನಲ್ ಪ್ರವೇಶಿಸಲು ಸೆಣಸಾಟ ನಡೆಸಲಿದೆ.
  8. ಇಂದು ಬುದ್ಧ ಪೌರ್ಣಿಮೆಯನ್ನು, ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಕರುಣೆ ಮತ್ತು ಶಾಂತಿಯ ಮಂತ್ರವನ್ನು ಸಾರಿದ ಮಹಾಪುರುಷ ಗೌತಮ ಬುದ್ಧನನ್ನು ನೆನೆಯುತ್ತಾ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
  9. ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಒಟ್ಟು 8 ಲಕ್ಷದ 98 ಸಾವಿರ ಕ್ವಿಂಟಾಲ್ ಬೀಜಗಳ ಪೂರೈಕೆಗೆ, ವ್ಯವಸ್ಥೆ ಮಾಡಲಾಗಿದೆ ಎಂದು, ಸಾಮಾಜಿಕ ಜಾಲತಾಣದಲ್ಲಿ, ಕೃಷಿ ಖಾತೆ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
  10. ಗದಗ ಹಾಗೂ ಹಾವೇರಿ ಜಿಲ್ಲೆಗಳ ವ್ಯಾಪ್ತಿಯ, ವಿವಿಧ ಗ್ರಾಮಗಳಿಗೆ, ಕುಡಿಯುವ ನೀರು ಪೂರೈಸಲು, ಭದ್ರಾ ಜಲಾಶಯದಿಂದ, ತುಂಗಭದ್ರಾ ನದಿಗೆ, ಇದೇ 28ರ ವರೆಗೆ ಪ್ರತಿ ದಿನ, 2 ಸಾವಿರ ಕ್ಯುಸೆಕ್‌ಗಳಂತೆ ಒಟ್ಟು, 11 ಸಾವಿರದ 574 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು, ಭದ್ರಾ ಯೋಜನಾ ವೃತ್ತದ, ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
  11. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡ ಬಳ್ಳಾಪುರದ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ, ದ್ರೌಪದಿದೇವಿ ಕರಗ ಮಹೋತ್ಸವ, ಇಂದು ರಾತ್ರಿ ಜರುಗಲಿದೆ.
  12. ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 42 ಅಂಕ ಏರಿಕೆಯೊಂದಿಗೆ 74 ಸಾವಿರದ 263 ರಲ್ಲಿ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ 20 ಅಂಕ ಏರಿಕೆಯ ನಂತರ 22 ಸಾವಿರದ 618 ರಲ್ಲಿ ವಹಿವಾಟು ನಡೆಸಿದೆ.
  13. ಬೆಲ್ಜಿಯಂನ ಆಂಟ್‌ವರ್ಪ್ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಆರು ಮತ್ತು ಏಳನೇ ಹಂತದ ಲೋಕಸಭಾ ಚುನಾವಣೆಗೆ ರಾಜಕೀಯ ನಾಯಕರಿಂದ ಬಿರುಸಿನ ಪ್ರಚಾರ

Published

on

ಸುದ್ದಿದಿನ ಡೆಸ್ಕ್ : ಚುನಾವಣೆಯ ಉಳಿದ ಹಂತಗಳಿಗೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಆರನೇ ಹಂತದ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನಗಳು ಬಾಕಿ ಉಳಿದಿದ್ದು, ಎಲ್ಲ ರಾಜಕೀಯ ಪಕ್ಷಗಳು ಮತದಾರರ ಬೆಂಬಲ ಗಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ.

ಪ್ರಧಾನಿ ಮತ್ತು ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಇಂದು ೨೫ ಸಾವಿರಕ್ಕೂ ಹೆಚ್ಚು ಮಹಿಳೆಯರೊಂದಿಗೆ ಸಂವಾದ ನಡೆಸಲಿದ್ದಾರೆ. ವಾರಾಣಸಿಯಲ್ಲಿ ಜೂನ್ 1 ರಂದು ಚುನಾವಣೆ ನಡೆಯಲಿದೆ.

ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿನ್ನೆ ಪಟ್ಪರ್ಗಂಜ್, ಶಹದಾರ ಮತ್ತು ಗಾಂಧಿ ನಗರ ಪ್ರದೇಶಗಳಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ನಿನ್ನೆ ಸಂಜೆ ಬವಾನಾ ಗ್ರಾಮದಲ್ಲಿ ಗ್ರಾಮೀಣ ಜನರನ್ನು ಉದ್ದೇಶಿಸಿ ಮಾತನಾಡಿದರು. ಆರನೇ ಹಂತಕ್ಕೆ ಸೇರಿರುವ ಈ ಕ್ಷೇತ್ರಗಳ ಚುನಾವಣಾ ಪ್ರಚಾರ ಗುರುವಾರ ಮುಕ್ತಾಯವಾಗಲಿದೆ. ಇದೇ 25ರ ಶನಿವಾರ ಮತದಾನ ನಡೆಯಲಿದೆ.

ರಾಜಧಾನಿಯಲ್ಲಿ ಚುನಾವಣಾ ಪ್ರಚಾರ ಇದೇ 23 ರ ಸಂಜೆ ಮುಕ್ತಾಯಗೊಳ್ಳಲಿದೆ. ದೆಹಲಿಯ ಎಲ್ಲಾ ಏಳು ಲೋಕಸಭಾ ಕ್ಷೇತ್ರಗಳಿಗೆ ಇದೇ 25ರ ಶನಿವಾರದಂದು ಮತದಾನ ನಡೆಯಲಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿವೆ.
ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರು ನಿನ್ನೆ ಸಂಜೆ ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದ ಸಂಗಮ್ ವಿಹಾರ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನವದೆಹಲಿ ಲೋಕಸಭಾ ಕ್ಷೇತ್ರದ ಮಾಳವೀಯ ನಗರದಲ್ಲಿ ರೋಡ್ ಶೋ ನಡೆಸಿದರು. ಬಿಜೆಪಿಯ ಹಿರಿಯ ನಾಯಕ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಮಯೂರ್ ವಿಹಾರ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರ ಯಾದವ್ ನಿನ್ನೆ ಸಂಜೆ ಬವಾನಾ ಗ್ರಾಮದಲ್ಲಿ ಗ್ರಾಮೀಣ ಜನರನ್ನು ಉದ್ದೇಶಿಸಿ ಮಾತನಾಡಿದರು. ವಾಯವ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಉದಿತ್ ರಾಜ್ ನಂಗ್ಲೋಯ್ ಮತ್ತು ಟಿಕ್ರಿ ಕಲಾನ್ ನಲ್ಲಿ ರೋಡ್ ಶೋ ನಡೆಸಿದರು.

ಎರಡು ದಿನಗಳ ಬಿಹಾರ ಪ್ರವಾಸಕ್ಕಾಗಿ ಪ್ರಧಾನಿ ಮತ್ತು ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ನಿನ್ನೆ ಸಂಜೆ ಪಾಟ್ನಾ ತಲುಪಿದ್ದಾರೆ.

ಪಾಟ್ನಾದಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೆ ಪ್ರಧಾನಿ ಭೇಟಿ ನೀಡಿ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

ಇಂದು ಅವರು ಪೂರ್ವಿ ಚಂಪಾರಣ್‌ನ ಮೋತಿಹಾರಿ ಮತ್ತು ಸಿವಾನ್ ಸಂಸದೀಯ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಬೆಂಬಲಿಸಿ ಗೋರಿಯಾಕೋಠಿನಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

5ನೇ ಹಂತದ ಲೋಕಸಭೆ ಚುನಾವಣೆ; ಶೇಕಡ 60.09ರಷ್ಟು ಮತದಾನ

Published

on

ಸುದ್ದಿದಿನ ಡೆಸ್ಕ್ : ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನ ನಿನ್ನೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಶೇಕಡ 60.09 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಈ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ ಹರಡಿರುವ 49 ಸಂಸದೀಯ ಕ್ಷೇತ್ರಗಳಿಗೆ ಮತದಾನ ನಡೆದಿದೆ. ಇದರಲ್ಲಿ ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ ಏಳು, ಒಡಿಶಾ ಮತ್ತು ಬಿಹಾರದ ತಲಾ ಐದು, ಜಾರ್ಖಂಡ್‌ನ ಮೂರು, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ತಲಾ ಒಂದು ಸ್ಥಾನಗಳು ಸೇರಿವೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ರಾತ್ರಿ 11.30ರ ವೇಳೆಗೆ ಶೇಕಡ 57 ರಷ್ಟು ಮತದಾನವಾಗಿದೆ. ಇದು ಕಳೆದ 35 ವರ್ಷಗಳಲ್ಲೇ ಅತಿ ಹೆಚ್ಚು ಮತದಾನವಾಗಿದ್ದು, ಸಂಪೂರ್ಣ ಶಾಂತಿಯುತವಾಗಿದೆ.

ಬಿಹಾರದಲ್ಲಿ ಶೇಕಡ 55 ರಷ್ಟು ಮತದಾನವಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇಕಡಾ 63 ರಷ್ಟು, ಲಡಾಖ್‌ನಲ್ಲಿ ಶೇಕಡ 70 ರಷ್ಟು ಮತದಾನವಾಗಿದೆ, ಮಹಾರಾಷ್ಟ್ರದಲ್ಲಿ 54 ಕ್ಕಿಂತ ಹೆಚ್ಚು, ಒಡಿಶಾದಲ್ಲಿ ಶೇಕಡ 69 ರಷ್ಟು, ಉತ್ತರ ಪ್ರದೇಶದಲ್ಲಿ ಸುಮಾರು ಶೇಕಡ 58 ರಷ್ಟು ಮತದಾನವಾಗಿದೆ. ಮತ್ತು ಪಶ್ಚಿಮ ಬಂಗಾಳದಲ್ಲಿ ಸುಮಾರು ಶೇಕಡ 76 ರಷ್ಟು ಮತದಾನವಾಗಿರುವ ಕುರಿತು ವರದಿಯಾಗಿದೆ.

ಈ ಹಂತದ ಮುಕ್ತಾಯದೊಂದಿಗೆ, 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 428 ಸಂಸದೀಯ ಕ್ಷೇತ್ರಗಳ ಮತದಾನ ಪೂರ್ಣಗೊಂಡಿದೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರಪ್ರದೇಶದ ರಾಜ್ಯ ವಿಧಾನಸಭೆಗಳು ಮತ್ತು ಒಡಿಶಾ ರಾಜ್ಯ ವಿಧಾನಸಭೆಯ 63 ಕ್ಷೇತ್ರಗಳಿಗೂ ಮತದಾನ ಪೂರ್ಣಗೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ45 mins ago

ಬಿತ್ತನೆ ಬೀಜ – ರಸಗೊಬ್ಬರಕ್ಕೆ ಕೊರತೆ ಇಲ್ಲ : ಸಚಿವ ಎನ್.ಚಲುವರಾಯ ಸ್ವಾಮಿ

ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ...

ಕ್ರೀಡೆ1 hour ago

ಮಧ್ಯಾಹ್ನದ ಪ್ರಮುಖ ಸುದ್ದಿಗಳು

ಮದ್ಯಾಹ್ನದ ಪ್ರಮುಖ ಸುದ್ದಿಗಳು ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58...

ದಿನದ ಸುದ್ದಿ1 hour ago

ಕೌಶಲ್ಯಭಿವೃದ್ದಿ ತರಬೇತಿಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಪ್ರಾದೇಶಿಕ ತರಬೇತಿ ಕೇಂದ್ರಗಳ ಸಹಯೋಗದಿಂದ 60 ದಿನಗಳ ಕಾಲ ಪರಿಶಿಷ್ಟ...

ದಿನದ ಸುದ್ದಿ1 hour ago

ಅನಧಿಕೃ ಬಿತ್ತನೆ ಬೀಜಗಳ ಖರೀದಿ ; ಎಚ್ಚರಿಕೆ

ಸುದ್ದಿದಿನ,ದಾವಣಗೆರೆ : ಪ್ರಸಕ್ತ ಮುಂಗಾರು ಹಂಗಾಮು ಚುರುಕಾಗಿದ್ದು, ಭೂಮಿ ಸಿದ್ದತೆ, ಸಮಗ್ರ ಬೆಳೆ ನಿರ್ವಹಣೆ ಜೊತೆಗೆ ಉತ್ತಮ ಇಳುವರಿ ಪಡೆಯುವಲ್ಲಿ ಗುಣಮಟ್ಟದ ಬಿತ್ತನೆ ಬೀಜಗಳು ಬಹು ಮುಖ್ಯ....

ದಿನದ ಸುದ್ದಿ16 hours ago

ಉಚಿತ | ಮೇವಿನ ಬೀಜದ ಕಿಟ್ ವಿತರಣೆ

ಸುದ್ದಿದಿನ,ದಾವಣಗೆರೆ : ಹೈನು ಉತ್ಪಾದಕರನ್ನು ಪ್ರೊತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎನ್.ಎಲ್.ಎಂ ಯೋಜನೆಯ ಅನುದಾನದಡಿ ಕರ್ನಾಟಕ ಸಹಕಾರ ಹಾಲು ಮಹಾಮಂಡಳ ವತಿಯಿಂದ ಶಿಮುಲ್‍ಗೆ ರೂ. 1.20 ಕೋಟಿ...

ದಿನದ ಸುದ್ದಿ17 hours ago

ಅಡುಗೆ ಅನಿಲ ಸೋರಿ ಒಂದೇ ಕುಟುಂಬದ ನಾಲ್ವರು ಸಾವು

ಸುದ್ದಿದಿನ ಡೆಸ್ಕ್ : ಅಡುಗೆ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಗರದ ಆಲನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಾ ರಾಜ್...

ದಿನದ ಸುದ್ದಿ2 days ago

ವಸತಿ ಶಿಕ್ಷಣ ಶಾಲೆ – ಕಾಲೇಜುಗಳಲ್ಲಿ ವಿಶೇಷ ಮೀಸಲಾತಿ

ಸುದ್ದಿದಿನ,ಶಿವಮೊಗ್ಗ : ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ 826 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ ಡಾ|| ಬಿ.ಆರ್. ಅಂಬೇಡ್ಕರ್/ ಅಟಲ್ ಬಿಹಾರಿ...

ದಿನದ ಸುದ್ದಿ2 days ago

ಭಯೋತ್ಪಾದಕ ವಿರೋಧಿ ದಿನಾಚರಣೆ | ಅಧಿಕಾರಿ, ಸಿಬ್ಬಂದಿಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ

ಸುದ್ದಿದಿನ,ದಾವಣಗೆರೆ : ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇ 21 ರಂದು ಭಯೋತ್ಪಾದಕ ವಿರೋಧಿ ದಿನದ ಪ್ರಯುಕ್ತ ಅಧಿಕಾರಿಗಳು ಹಾಗೂ ಸಿಬ್ಬಂದಿಯವರಿಂದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ವೇಳೆ ಜಿಲ್ಲಾಧಿಕಾರಿ ಡಾ;...

ದಿನದ ಸುದ್ದಿ2 days ago

ಪಂಚಾಯಿತಿ ಗ್ರಂಥಾಲಯಗಳಲ್ಲಿ ಡಿಜಿಟಲೀಕರಣ

ಸುದ್ದಿದಿನ,ದಾವಣಗೆರೆ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ಈ ವರ್ಷ ಜಿಲ್ಲೆಯಲ್ಲಿನ 20 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು...

ದಿನದ ಸುದ್ದಿ2 days ago

ತೋಟಗಾರಿಕೆ ಇಲಾಖೆ ; ರೈತರ ಮಕ್ಕಳಿಗೆ ತರಬೇತಿಗಾಗಿ ಅರ್ಜಿ ಆಹ್ವಾನ

ಸುದ್ದಿದಿನ,ಶಿವಮೊಗ್ಗ: ತೋಟಗಾರಿಕೆ ಇಲಾಖೆಯ ಅಧೀನ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ ದಿ:01/07/2024 ರಿಂದ ದಿ: 31/03/2025 ರವರೆಗೆ 10 ದಿನಗಳ ತರಬೇತಿ ಕಾರ್ಯಕ್ರಮವನ್ನು ಉತ್ತರ ಕನ್ನಡ...

Trending