ದಿನದ ಸುದ್ದಿ
ಹಿಂದುತ್ವವನ್ನೂ ಹಿಂದಿಕ್ಕಿದ ಮೋದಿತ್ವ, ಹದಗೆಡುತ್ತಿರುವ ಮಾನವ ಸಂಬಂಧಗಳು
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ ಎದುರೇ ಮಾತಾಡುವಾಗಲೂ ಅಸಹನೆಯ ಮಾತುಗಳು ವ್ಯಂಗ್ಯ ಕುಹಕ ಎಲ್ಲೆ ಮೀರುತ್ತದೆ. ಮೊನ್ನೆ ಚುನಾವಣೆಯದಿನ ನಮ್ಮ ಗ್ರಾಮದ ಬೂತ್ ಪಕ್ಕದಲ್ಲೇ ಇದ್ದ ಬಿಜೆಪಿಯ ಜಿಲ್ಲಾ ಕಾರ್ಯ ದರ್ಶಿಗಳಿಗೆ (ನಮ್ಮೂರಿನವರೇ) ತಮಾಷೆಯಾಗಿ ನಮಗೂ ಒಂದಷ್ಟು ಓಟು ಬಿಡಿ ಸಾರ್ ಖಾಲಿ ದಬ್ಬ ಮಾಡ್ಬೇಡಿ ಎಂದೆ. ಅದಕ್ಕವರು ನೀವು ಈಗೆ ಹೇಳಿಯೇ ನಮ್ಮಲ್ಲಿ ಖಾಲಿ ಮಾಡ್ತೀರಿ ಮಾರ್ರೆ ಏನೋ ಈಸಾರಿ ಕಷ್ಟಪಟ್ಟು ನಿಮ್ಮನ್ನ ಹಿಂದೆ ಹಾಕ್ತೀವಿ ಎಂದರು. ಇಬ್ಬರೂ ನಗುತ್ತ ಅಲ್ಲಿಂದ ಹೊರಟೆವು. ಅಷ್ಟರಲ್ಲಿ ಅಲ್ಲೇ ಪಕ್ಕದಲ್ಲಿದ್ದ ಯುವಕನೊಬ್ಬ ಬೇರೆ ಕಡೆ ತಿರುಗಿ ನನಗೆ ಕೇಳುವಂತೆ (ಮೋದಿ ಚಿತ್ರದ ಬಟ್ಟೆಯನ್ನೂ ಹಿಡಿದಿದ್ದ) “ಈ ಸಲ ಇವರದ್ದೆಲ್ಲ ಮುಕುಳಿ ಬಾಯಿ ಬಂದ್ ಮಾಡ್ತೀವಿ” ಅಂದ. ಪಾಪ ಬಿಜೆಪಿ ನಾಯಕರೂ ಮುಖ ಸಣ್ಣಗೆ ಮಾಡಿಕೊಂಡರು.
ಇದು ಒಂದು ಉದಾಹರಣೆ ಅಷ್ಟೆ. ಸಾಮಾಜಿಕ ತಾಣಗಳಲ್ಲಿ ಇತ್ತೀಚಗೆ ನಾನೊಂದು ಸ್ಟೇಟಸ್ ಹಾಕಿದ್ದೆ ಅದು ನನ್ನ ಗೆಳಯರೊಬ್ಬರು ಕಳುಹಿಸಿದ್ದು ಅದು ಅವರಿಗೂ ಯಾರೋ ಕಳುಹಿಸಿದ್ದು ಅದರ ಬಗ್ಗೆ ನನಗೂ ಆಗ ಅರ್ಧಂಬರ್ಧ ತಿಳಿದಿತ್ತಷ್ಟೆ ಅದರಲ್ಲಿ ಏನು ಇತ್ತೋ ಅದೇ ಪದಗಳನ್ನು ನಾನು ಕನ್ನಡಕ್ಕೆ ಭಾಷಾಂತರಿಸಿ “ಓದಿದ್ದು” ಎಂದು ಟಿಪ್ಪಣಿ ಹಾಕಿದ್ದೆ. ಇದರ ಬಗ್ಗೆ ಚರ್ಚೆ ಆಗಲಿ ಎನ್ನುವುದು ನನ್ನ ಉದ್ದೇಶವಿತ್ತು. ಆದರೆ ಆದದ್ದೇ ಬೇರೆ ಕೆಲವರು ನಿಜವಾಗಿಯೂ ಆ ಬಗ್ಗೆ ನನಗೆ ವಿವರಿಸಲು ಪ್ರಯತ್ನ ಪಟ್ಟರು. ಆದರೆ ಅದಲ್ಲ ಕೂಡಲೇ ಮೋದಿ ಭಕ್ತರ ಕಾಟ ಶುರುವಾಯಿತು.
ಇದು ಸುಳ್ಳು ಎನ್ನುವವರು. ವ್ಯಂಗ್ಯ ಮಾಡುವವರು ಕುಹಕವಾಡುವವರು ನನ್ನವಾಲ್ ಗೇ ಬಂದು ನೇರವಾಗಿ ಬೈಯುವವರು ಪರೋಕ್ಷವಾಗಿ ಬೇರೆ ಕಡೆಗಳಲ್ಲಿಯೂ ಏನೇನೋ ಹೇಳುವವರು ಹುಟ್ಟಿಕೊಂಡರು. ಆದರೆ ತಮ್ಮ ವಾದವನ್ನು ಮಂಡಿಸಲೇ ಇಲ್ಲ. ಆದರೆ ನಿಧಾನವಾಗಿ ಆ ವಿಷಯದ ಬಗ್ಗೆ ತಿಳಿಯುತ್ತ ಹೋದೆ. ನಾನು ಅನುವಾದ ಮಾಡಿದ ಬರಹದ ಭಾಷೆ ಮತ್ತು ತಾಂತ್ರಿಕವಾಗಿ ಮೂಲದಲ್ಲೇ ತಪ್ಪಿತ್ತೇ ವಿನಃ ವಿಷಯ ನಿಜವಾದದ್ದೇ ಆಗಿತ್ತು.
ಇರಲಿ ಆದರೆ ಅದನ್ನು ವಿಷಯಾಧಾರಿತವಾಗಿ ವಿರೋಧಿಸಿದವರು ಕಡಿಮೆ. ಮೋದಿಯಾಧಾರಿತವಾಗಿ ವಿರೋಧಿಸಿದವರೇ ಹೆಚ್ಚು ಅವರು ಯಾರೂ ಸಾಮಾನ್ಯ ಜನರಲ್ಲ. ಅವರಲ್ಲಿ ಕಲಾವಿದರು, ವಿದ್ಯಾವಂತರು. ಪತ್ರಿಕಾಸಂಪಾದಕರು ಮುಂತಾದವರಿದ್ದರು. ಇದು ನಾನು ಅನುವಾದಿಸಿದ ಬರಹ “ಓದಿದ್ದು” ಮೊದಲೇ ಹಾಕಿದ್ದೇನೆ ಎಂದರೆ ಅದಕ್ಕೂ “ಈಗ ಪಲಾಯನ ವಾದ” ಎಂದು ಜರಿದರು. ಇವರೆಲ್ಲರೂ ಹಲವರು ಅನೇಕ ವರ್ಷಗಳಿಂದ ನನ್ನನ್ನು ಬಲ್ಲವರೂ ಆಗಿದ್ದರು. ಅಂದರೆ ಅವರು ಮೋದಿಯನ್ನು ನಂಬಿದಷ್ಟು ಪರಿಚಿತ ನನ್ನನ್ನು ನಂಬಲು ತಯಾರಿರಲಿಲ್ಲ.
ಮೊನ್ನೆ ಕೆ.ಎಸ್ . ಭಗವಾನ್ ಆಸ್ಪತ್ರೆಯಲ್ಲಿದ್ದಾಗ “ಅವನು ನರಳಿ ನರಳಿ ಸತ್ತು ನರಕಕ್ಕೆ ಹೋಗಲಿ” ಎಂದವರಲ್ಲಿ ಸಾಹಿತ್ಯದಲ್ಲಿ ಎಂ.ಎ ಮಾಡಿದ ಮಹಿಳೆಯೊಬ್ಬರಿದ್ದರು.ಇತ್ತೀಚೆಗೆ ನನ್ನ ಕಣ್ಣಮುಂದೆ ಬೆಳೆದ ನಮ್ಮೂರಿನ ಹುಡುಗನೊಬ್ಬ (ಈತನ ತಂದೆ ನನ್ನ ಸ್ನೇಹಿತರು) ನಿಮ್ಮಲ್ಲಿಗೇ ಬಂದು ಬುದ್ಧಿಕಲಿಸುತ್ತೇನೆ ಎಂದಿದ್ದಾನೆ!. ಪುಣ್ಯಾತ್ಮ ಕೊನೆಗೆ ಓಟು ಹಾಕಲೂ ಬರಲಿಲ್ಲ.
ಅನೇಕರಿಗೆ ತಮ್ಮ ತಂದೆ ತಾಯಿಯರನ್ನು ಬೈದರೂ ಸುಮ್ಮಿದ್ದಾರು ಮೋದಿಯ ಸಣ್ಣ ಟೀಕೆಯನ್ನೂ ಸಹಿಸಲಾರರರು. ಕಳೆದ ಶತಮಾನದ ಜರ್ಮನಿ, ರಷ್ಯಾ, ಚೈನಾ ಗಳಂತಾಗಿದ್ದೇವೆಯೆ?
ನಮ್ಮ ಇಂದಿನ ಮೋದೀಕೃತ ಸಮಾಜದಲ್ಲಿ ಮಾನವ ಸಂಬಂಧಗಳಿಗಿಂತ ಮೋದಿ ಸಂಬಂಧವೇ ಮುಖ್ಯವಾಗುತ್ತದೆ. ಯಾಕೆಂದರೆ ಸಬ್ ಕಾ ಸಾಥ್ ಎಂದಿದ್ದ ಮೋದಿ ಈಗ ಸಬ್ ಕಾ ವಿಶ್ವಾಸ್ ಎಂದಿದ್ದಾರೆ. ಯಾಕೋ ಆ ವಿಶ್ವಾಸವನ್ನು ನೆನೆದು ಭಯವಾಗುತ್ತದೆ.
–ಪ್ರಸಾದ್ ರಾಕ್ಸಿಡಿ
(ಬರಹ ಕೃಪೆ – prasad Raxidi ಅವರ ಪೇಸ್ ಬುಕ್ ಪೇಜ್ ನಿಂದ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’
ಸುದ್ದಿದಿನ,ದಾವಣಗೆರೆ: ನಗರದ ಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಥಮ ವರ್ಷದ ಹಾಗೂ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮವನ್ನು ಪ್ರಾಂಶುಪಾಲರಾದ ರಶ್ಮಿ . ಸಿ. ಹೆಚ್ ಅವರು ಉದ್ಘಾಟಿಸಿದರು.
ಸನಾವುಲ್ಲಾ ನವಿಲೇಹಾಳು ಅವರು ಉಪನ್ಯಾಸ ಮಾಡಿ ಹೊಸ ತಲೆಮಾರಿನವರು ಸಮಾಜಿಕ ಜಾಲತಾಣಗಳಲ್ಲಿ ಗೇಮ್ , ರೀಲ್ಸ್ ಇತರೆ ವಿಷಯಗಳಲ್ಲಿ ಮುಳುಗಿ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಕಟ್ಟಿಕೊಳ್ಳಬೇಕು. ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆಕೊಟ್ಟರು.
ಉಪಸ್ಥಿತರಿದ್ದ ಕಾಲೇಜಿನ ಕುಲಸಚಿವರಾದ ಶ್ರೀ ಜಗದೀಶ್ ಹೆಚ್ ಅವರು ಮಾತನಾಡಿ ವಿದ್ಯಾರ್ಥಿಗಳು ತಮಗೆ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿನಿಂತು ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡಬೇಕು ಎಂದರು. ಸಿಸಿಟೆಕ್ ಮ್ಯಾನೇಜರ್ ಆದ ಶ್ರೀ ಶಿವಕುಮಾರ ಸ್ವಾಮಿ ಎಸ್.ಹೆಚ್. ಸಂಯೋಜಕರಾದ ಶ್ರೀ ಮತಿ ಆಸೀಯಾ ಬಾನು ಬಿ. ಪ್ರಾಸ್ಥಾವಿಕವಾಗಿ ಮಾತನಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬೃಂದ ಕಾರ್ಯಕ್ರಮ ನಿರೂಪಿಸಿದರು,
ವೈಷ್ಣವಿ, ಲಾವಣ್ಯ, ಭಾವನ ಪ್ರಾರ್ಥಿಸಿದರು, ಉಪನ್ಯಾಸಕಿ ಪ್ರಿಯಾಂಕ ಟಿ ಎಸ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
ಸುದ್ದಿದಿನ ಡೆಸ್ಕ್:ಬೆಂಗಳೂರಿನಲ್ಲಿ ಪ್ರೀತಿಯೊಂದು ರಕ್ತಸಿಕ್ತ ಅಂತ್ಯ ಕಂಡಿದೆ. ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಪ್ರಿಯಕರನೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದೆ.
23 ವರ್ಷದ ಅಂಜಲಿ ಕೊಲೆಯಾದ ಯುವತಿಯಾಗಿದ್ದು, ರಾಜೀವ್ ಬಂಧಿತ ಆರೋಪಿ. ಕಳೆದ ಮೂರು-ನಾಲ್ಕು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಪರಿಚಯವಾಗಿ ಸ್ನೇಹ ಬೆಳೆದು, ಬಳಿಕ ಅದು ಪ್ರೀತಿಗೆ ತಿರುಗಿತ್ತು.
ಆದರೆ ರಾಜೀವ್‌ಗೆ ಕ್ರಿಮಿನಲ್ ಹಿನ್ನೆಲೆ ಇದ್ದ ಕಾರಣ ಅಂಜಲಿ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿ ಕುಟುಂಬಸ್ಥರನ್ನು ಒಪ್ಪಿಸಲು ರಾಜೀವ್ ಪ್ರಯತ್ನಿಸಿದ್ದರೂ ಫಲಿಸಿರಲಿಲ್ಲ. ಇತ್ತೀಚೆಗೆ ಪೋಷಕರ ಒತ್ತಾಯಕ್ಕೆ ಮಣಿದ ಅಂಜಲಿ ರಾಜೀವ್‌ನಿಂದ ದೂರವಾಗಲು ಆರಂಭಿಸಿದ್ದಳು. ಇಂದು ಸಂಜೆ ಅಂಜಲಿಯನ್ನು ಊಟದ ನೆಪದಲ್ಲಿ ಕರೆಸಿಕೊಂಡಿದ್ದ ರಾಜೀವ್, ಮತ್ತೊಮ್ಮೆ ಮದುವೆ ವಿಚಾರ ಪ್ರಸ್ತಾಪಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಕೋಪಗೊಂಡ ರಾಜೀವ್ ಚಾಕುವಿನಿಂದ ಅಂಜಲಿಯ ಕುತ್ತಿಗೆಗೆ ಇರಿದಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಂಜಲಿಯನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃ*ತಪಟ್ಟಿದ್ದಾಳೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್‌ನನ್ನು ಬಂಧಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
ಸುದ್ದಿದಿನ ಡೆಸ್ಕ್:ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಸಂಸ್ಥೆಯಡಿ ಪ್ರಿಯಾ ಸುದೀಪ್ ನಿರ್ಮಿಸಿದ ಮೊದಲ ಚಿತ್ರ ‘ಮ್ಯಾಂಗೋ ಪಚ್ಚ’. ಸಂಚಿತ್ ಸಂಜೀವ್ ಅಭಿನಯದ ಈ ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.
ಈ ಸೋಲನ್ನು ಹಿಂದಕ್ಕೆ ಹಾಕಿ, ಪ್ರಿಯಾ ಸುದೀಪ್ ಇನ್ನಷ್ಟು ಹೊಸ ಕಥೆಗಳನ್ನು ತೆರೆಗೆ ತರುವುದಕ್ಕೆ, ಹೊಸ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ಕಥೆಗಾರರಿಗೆ ಆಹ್ವಾನ ನೀಡಿದ್ದಾರೆ. ‘ನಾವು ಹುಡುಕುತ್ತಿರುವುದು ಕೇವಲ ಕಥೆಗಳಲ್ಲ. ಮನಸ್ಸುಗಳನ್ನು ಮುಟ್ಟುವ ಭಾವನೆಗಳು, ಚಿಂತನೆಗೆ ಹಚ್ಚುವ ವಿಚಾರಗಳು ಮತ್ತು ಪರದೆಯ ಮೇಲೆ ಹೊಸ ಇತಿಹಾಸ ಬರೆಯುವ ಕಲ್ಪನೆಗಳು.
ನಿಮ್ಮ ಬಳಿ ಮೌಲಿಕ ಕಥೆ-ಚಿತ್ರಕಥೆ ಇದ್ದರೆ ಅಥವಾ ವಿಶಿಷ್ಟ ಕಥಾ ಪರಿಕಲ್ಪನೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನ ಮತ್ತು ಸೃಜನಾತ್ಮಕತೆಯನ್ನು ಹೊಂದಿರುವ ಲೇಖಕರು, ಕಥೆಗಾರರು ಮತ್ತು ಸೃಜನಶೀಲ ಮನಸ್ಸುಗಳನ್ನು ನಾವು ಸ್ವಾಗತಿಸುತ್ತೇವೆ. ಎಲ್ಲಾ ಪ್ರಕಾರಗಳು ಮತ್ತು ಎಲ್ಲಾ ಮಾದರಿಗಳಲ್ಲಿನ ಕಥಾ ಸಲ್ಲಿಕೆಗಳನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮ ಕಥೆಯೇ ಮುಂದಿನ ದೊಡ್ಡ ಪ್ರಯಾಣದ ಆರಂಭವಾಗಬಹುದು’ ಎಂದು ಪ್ರಿಯಾ ಸುದೀಪ್, ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಜೊತೆಗೆ ಒಂದು ಮೊಬೈಲ್ ಸಂಖ್ಯೆಯನ್ನು ಸಹ ಹಂಚಿಕೊಂಡಿದ್ದಾರೆ. ಆದರೆ, ಕರೆ ಮಾಡುವಂತಿಲ್ಲ. ಚಾಟ್ ಮಾತ್ರ ಮಾಡಬಹುದು. ಕಥೆಗಳಿದ್ದರೆ 6663307434 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days agoನಿಮ್ಮ ಕಥೆಗೆ ಹೊಸ ವೇದಿಕೆ ; ಕಥೆಗಾರರಿಗೆ ಪ್ರಿಯಾ ಸುದೀಪ್ ಆಹ್ವಾನ
-
ದಿನದ ಸುದ್ದಿ1 day agoಭೀಕರ | ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ
-
ದಿನದ ಸುದ್ದಿ2 days agoದುರಂತ | ಮೇಲ್ಛಾವಣಿ ಕುಸಿದು ಮೂವರು ಸಾವು
-
ದಿನದ ಸುದ್ದಿ2 days agoಪಲ್ಸ್ ಪೋಲಿಯೋದಿಂದ ಯಾವುದೇ ಮಗು ವಂಚಿತವಾಗದಂತೆ ಕ್ರಮವಹಿಸಿ: ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್
-
ದಿನದ ಸುದ್ದಿ6 hours agoಡಿ ಆರ್ ಆರ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ‘ಶೈಕ್ಷಣಿಕ ಪೀಠಿಕೆ ಕಾರ್ಯಕ್ರಮ’

