ಲೈಫ್ ಸ್ಟೈಲ್
‘ಸಂಕ್ರಾಂತಿ’ ಗೆ ನಡೆದಿದೆ ಫ್ಯಾಷನ್ ಕ್ರಾಂತಿ..!

- ಚಿತ್ರಶ್ರೀ ಹರ್ಷ
ಫ್ಯಾಷನ್ ಅಂಗಳದಲ್ಲೂ ಸಂಕ್ರಾಂತಿ ಕಂಪು ಸೂಸುತ್ತಿದೆ. ಬಣ್ಣ ಬಣ್ಣದ ದೊಡ್ಡ ಜರತಾರಿ ಅಂಚಿನ ಲಂಗ ಲಾವಣಿ, ಜರತಾರಿ ಸೀರೆ, ಕಾಟನ್ ಚೆಕ್ಸ್ ಸೀರೆ, ಹೀಗೆ ಹಲವಾರು ವೆರೈಟಿಗಳಲ್ಲಿ ಹಳ್ಳಿಯ ಸರಳತೆ ಬಿಂಬಿಸುವ ಸಂಕ್ರಾಂತಿ ಫ್ಯಾಷನ್ ಮಾರುಕಟ್ಟೆ ಪ್ರವೇಶಿಸಿದ್ದು, ಬಣ್ಣದ ಲೋಕದಲ್ಲಿ ಸಾಂಪ್ರದಾಯಿಕ ಉಡುಪುಗಳ ಟ್ರೆಂಡ್ ಚಾಲ್ತಿಯಲ್ಲಿದೆ.
ಸಂಕ್ರಾಂತಿ ಎಂದರೆ ಎಲ್ಲೆಲ್ಲೂ ಸಂಭ್ರಮ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಖುಷಿಯಿಂದ ಆಚರಿಸುತ್ತಾರೆ. ಮನೆಮನೆಗೆ ತೆರಳಿ ಎಳ್ಳು ಬೆಲ್ಲವನ್ನು ಹಂಚಿ ಸಂಭ್ರಮಿಸುವುದರ ಜೊತೆಗೆ ಇಂದಿನ ದಿನಮಾನಕ್ಕೆ ಹೊಂದಿಕೊಳ್ಳುವಂತೆ ಫ್ಯಾಷನ್ ದೃಷ್ಟಿಯಿಂದಲೂ ಎಲ್ಲರೂ ಅಪ್ಡೇಟ್ ಆಗುವ ಕಾಲವಿದು. ಕುಟುಂಬದವರೆಲ್ಲಾ ಸೇರಿ ಸಂಭ್ರಮಿಸುವ ಸಂದರ್ಭ ಇದಾಗಿರುವುದರಿಂದ ಆದಷ್ಟು ಸಾಂಪ್ರದಾಯಿಕ ದಿರಿಸುಗಳನ್ನೇ ಧರಿಸಿ.
ಇಂದಿನ ಆಧುನಿಕ ಫ್ಯಾಷನ್ ಜಗತ್ತಿನಲ್ಲಿ ಸಾಂಪ್ರದಾಯಿಕ ಲಂಗ-ಸೀರೆ ಹೂಸ ಅವತಾರ ಎತ್ತಿದ್ದು, ಕಾಂಟೆಂಪರರೀ ಸೀರೆ , ಲೆಹೆಂಗಾ ಗಳು ಸಾಂಪ್ರದಾಯಿಕ ಉಡುಪುಗಳನ್ನು ರೀಪ್ಲೇಸ್ ಮಾಡಿದ್ದವು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಫ್ಯಾಷನ್ ಲೋಕದಲ್ಲೂ ಸಮ್( some) -ಕ್ರಾಂತಿ ಆಗಿದ್ದು ಸುಗ್ಗಿ ಸಾಡಗರಕ್ಕೆ ಜರತಾರಿ ಲಂಗ ದಾವಣಿ ತೊಟ್ಟ ನಾಗವೇಣಿ ಯರ ಕಾಲ್ಗೆಜ್ಜೆ ಧನಿ ಪ್ರತಿಧ್ವನಿಸುತ್ತಿದೆ.
ಭಾರತೀಯ ಹಳ್ಳಿ ಲೈಫ್ ಸ್ಟೈಲ್ ನೆನಪಿಸುವ ಸುಗ್ಗಿ ಹಬ್ಬಕ್ಕ ಸಾಂಪ್ರದಾಯಿಕ ದಿರಿಸುಗಳಿಗೆ ಆಧುನಿಕ ಸ್ಪರ್ಶ ನೀಡಿರುವ ಬಗೆಬಗೆಯ ವಿನ್ಯಾಸಗಳು ಬಂದಿರುವುದರಿಂದ ಚೆಲುವಾಗಲು ಸಾಕಷ್ಟು ಆಯ್ಕೆಗಳಿವೆ. ವಿನ್ಯಾಸಕಾರರೂ ಎಲ್ಲ ಬಗೆಯ ಫ್ಯಾಷನ್ ಪ್ರಿಯರಿಗೆ ಸರಿಹೊಂದುವಂಥ ವಿವಿಧ ವಿನ್ಯಾಸದ ದಿರಿಸುಗಳನ್ನು ಪರಿಚಯಿಸಿದ್ದಾರೆ.
ಈ ಬಾರಿಯ ಸಂಕ್ರಾಂತಿಗೆ ಗಾಢ ಹಳದಿ, ಕೆಂಪು, ಗುಲಾಬಿ, ನೀಲಿ ಬಣ್ಣಗಳಿಗೆ ಆದ್ಯತೆ ಇರಲಿ. ಸೀರೆ ಮತ್ತು ಲೆಹೆಂಗಾಗಳು ಹಬ್ಬಕ್ಕೆ ಹೇಳಿ ಮಾಡಿಸಿದ ಉಡುಗೆಗಳು. ಇತ್ತೀಚೆಗೆ ಎಲ್ಲೆಲ್ಲೂ ಮೆರೆಯುವುದು ಚೂಡಿದಾರವೇ. ಅದರಲ್ಲಿರುವ ನೂರಾರು ವಿನ್ಯಾಸಗಳು ಹೊಸತನಕ್ಕೆ ಸ್ಪಷ್ಟ ರೂಪ ನೀಡುತ್ತವೆ.
ಅನಾರ್ಕಲಿಗೆ ಈಗ ಎಲ್ಲಿಲ್ಲದ ಬೇಡಿಕೆ. ಕೈಮಗ್ಗದಿಂದ ಮಾಡಿದ ಸಲ್ವಾರ್ ಕಮೀಜ್ಗಳು ಜನಪ್ರಿಯಗೊಳ್ಳುತ್ತಿದ್ದು ಹಬ್ಬಕ್ಕೆ ವಿಶೇಷ ಮೆರುಗು ತಂದುಕೊಡಬಲ್ಲವು. ಚೂಡಿದಾರಕ್ಕೆ ಒಪ್ಪುವಂಥ ವಿವಿಧ ಗಾತ್ರದ ಜಾಕೆಟ್ಗಳನ್ನು ಧರಿಸುವುದೂ ಬಹುಜನಪ್ರಿಯ ಟ್ರೆಂಡ್. ಅದನ್ನೊಮ್ಮೆ ಪ್ರಯತ್ನಿಸಿ ನೋಡಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಪಿ ಯು ಫಲಿತಾಂಶ | ವಿದ್ಯಾರ್ಥಿಗಳಿಗೆ ಹಾರೈಸಿದ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ
-
ದಿನದ ಸುದ್ದಿ5 days ago
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ
-
ದಿನದ ಸುದ್ದಿ5 days ago
ದೇಶಾದ್ಯಂತ ಇಂದು ಮಹಾವೀರ ಜಯಂತಿ ಆಚರಣೆ ; ಗಣ್ಯರ ಶುಭಾಶಯ
-
ದಿನದ ಸುದ್ದಿ5 days ago
ಚನ್ನಗಿರಿ | ‘ಕುವೆಂಪು ಓದು : ಕಮ್ಮಟ’ ; ಚರ್ಚೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಮಕ್ಕಳ ಬೇಸಿಗೆ ರಜೆಗೆ ಶುಭ ಕೋರಿದ ತಿಂಗಳ ಅಂಗಳ
-
ದಿನದ ಸುದ್ದಿ5 days ago
ರುದ್ರಪ್ಪ ಹನಗವಾಡಿ ಅವರಿಗೆ ಡಾ.ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ
-
ದಿನದ ಸುದ್ದಿ4 days ago
ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ | ಕೇಂದ್ರ ಕೊಡದಿದ್ದರೂ ರಾಜ್ಯ ಸರ್ಕಾರ ನೀಡಲಿದೆ : ಗೃಹ ಸಚಿವ ಡಾ.ಜಿ.ಪರಮೇಶ್ವರ್
-
ದಿನದ ಸುದ್ದಿ7 days ago
19 ವರ್ಷಗಳ ನಂತರ ಹಳೇ ಕುಂದುವಾಡದಲ್ಲಿ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ : ಜಗಮಗಿಸುತ್ತಿದೆ ಗ್ರಾಮ