ಸಿ.ಕೃಷ್ಣನಾಯಕ್, ಆಡಳಿತಾಧಿಕಾರಿ, ಐಟಿಐ ಕಾಲೇಜು ದಾವಣಗೆರೆ ಮಣ್ಣ ಮಕ್ಕಳು ನಾವು ಹಗಳಿರುಳೆನ್ನದೆ ಬೆವರು ಬಸಿದು ಹಸಿದ ಹೊಟ್ಟೆಯಲಿ ಉಸಿರು ಹಿಡಿದವರು ಕಸದಲಿ ರಸ ತೆಗದು ಬದುಕಿನುದ್ದಕ್ಕೂ ಉಳ್ಳವರ ಕಸುಬಿಗೆ ಆಳಾದವರು ಸವಳು ನೀರಲಿ ಮೈತೊಳೆದು ಚಿಂದಿ...
ಪಲ್ಲವಿ ಶೆಟ್ಟಿ ಚಂದಾಗಿ ಮೊಳೆತು ನವಿರಾದ ಚಿಗುರಾಗಿದ್ದೆ ಪಲ್ಲವಿಸಿ ಅರಳಿ ಘಮ ಚೆಲ್ಲುವ ಹೂವೂ ಆದೆ ಒಲವಿನ ಹೆಚ್ಚಾಸೆಯಿಂದ ಬಾಗಿದೆ ನೀನೂ ನನ್ನಂತೆ ಕೋಮಲವೆಂದನಿಸಿ…! ನೀನೇಕೋ ನನ್ನ ಬಂಧನವನು ಜರೂರು ಮಾಡಿಬಿಟ್ಟೆ ಬಂಧಿಯಾದರೂ ಸುಖಿಸುತ್ತಿರುವ ಭಾಸದಿಂದ...
ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ವೆಂಕಟೇಶ್ ಪಿ ಮರಕಮದ್ದಿನಿ ಜಾತ್ರೆಯಲಿ ಕಿವಿ ಚಾಟಿಗೆಂದು ಕೊಂಡ ಸ್ಕಾರ್ಫಿನಲಿ ಚಿತ್ರವಾಗಿದ್ದೀಯ ಭಗತ್ ನಿನ್ನ ಮಾತುಗಳು ಆ ಕಿವಿಯಲ್ಲಿ ಸದಾ ಅನುರಣಿಸಲೆಂದು ನಿನ್ನನೇ ಬೇಡಿಕೊಳ್ಳುವೆ ನಾನು ನೀನಂದು ಬಾಟಲಿಯಲ್ಲಿ ಸಂಗ್ರಹಿಸಿದ್ದ ಉಸುಕುಮಿಶ್ರಿತ ರಕ್ತ ಥೇಟ್ ಅದೇ...
ಎನ್ಕೆ ಹನುಮಂತಯ್ಯ ಯಜಮಾನರ ಗದ್ದೆಯೊಳಗೆ ಗೊಬ್ಬರವಾದವನು. ನಾವು ಹಸಿದು ಹಲ್ಲು ಕಿಸಿದರೂ ಹೆಂಡವ ಹೀರಿ ಹಣೆಬರಹ ಜರಿದವನು. ಪ್ರತಿದಿನ ಊರೊಳ್ಳ ಕಸ ಗುಡಿಸಿ ಬೀಳುಗಳ ಹೊತ್ತು ಮಡಕೆಗಟ್ಟಲೆ ಬಾಡ ಕೂಡಿಟ್ಟವನು ಎಕ್ಕಡದೊಳಗೇ ಬುದ್ಧನ ಹಾಗೆ ಕೂತು...
ಎ.ಕೆ. ರಾಮಾನುಜನ್ ಮೊಹಲ್ಲದಿಂದ ಬೀದಿಗೆ ಬೀದಿಯಿಂದ ಮನೆಗೆ ಮನೆಯಲ್ಲಿ ನನ್ನ ವರೆಗೆ ಪೋಲೀಸು ನಾಯಿ ಕೈತಪ್ಪಿದ ಖೈದಿಯ ಹಳೆಯ ಜೈಲು ವಾಸನೆ ಹಿಡಿದು ಮೂಸಿ ಅರಸಿದ ಹಾಗೆ ಪರವೂರಿನ ಹಳೆಯ ಸ್ನೇಹಿತ ಅಪರಿಚಿತರನ್ನು ಕೇಳಿ ಕೇಳಿ...
ಷಕೀಬ್ ಎಸ್ ಕಣದ್ಮನೆ ನವಿಲೇಹಾಳ್ ನೀತಿ ಕೆಟ್ಟು ಮಾನ ಬಿಟ್ಟು ನೋಟ ನೋಡಿ ವೋಟ ಕೊಟ್ಟು ಹೋರಾಟ ಮಾಡೋ ದೇಶ ನಮ್ದು ಜನಾವ ಸೇರ್ಸಿ ಸುಳ್ಳಾ ಹೇಳಿ ಬೊಬ್ಬೆ ಹೊಡ್ದು ಜಾತಿ ಬೀತಿ ತಂದು ತಮಾಷೆ...
ಧರಣೀಪ್ರಿಯೆ, ದಾವಣಗೆರೆ (ಭಾಮಿನಿ ಷಟ್ಪದಿಯಲ್ಲಿ) ವಾಸಿಯಾಗದ ರೋಗ ಬಂದಿತು ಘಾಸಿಗೊಳಿಸಿತು ವಿಶ್ವದೆಲ್ಲೆಡೆ ಸೋಸಿಗಾಳಿಯಸೇವಿಸಿರೆನುತ ಬಟ್ಟೆ ಕಟ್ಟುತಲಿ| ರೋಸಿಹೋಗುತ ಜನರ ಜೀವನ ಮಾಸಿಹೋದವು ಕನಸು ಬದುಕಲಿ ಹಾಸಿಹೊದ್ದವು ಕೊರಗಿ ಮನದಲಿ ಹೊರಗೆ ಬರದಂತೆ|| ಮಾತೆ ಮುನಿದಳು ಧರಣಿ...
ಸಿದ್ಧಲಿಂಗಪಟ್ಟಣಶೆಟ್ಟಿ ಮಲಗಿತ್ತು ನೋವಿನ ಕೂಸು ಹೂವ ಹಾಸಿಗೆಯಲ್ಲಿ ರಮ್ಯ ಕಾವ್ಯದ ಎಲ್ಲ ಲಕ್ಷಣಗಳುಳ್ಳ ಮುಖ ನವ್ಯತೆಯ ರೋಮಾಂಚ ಅಧರಪುಟ. ನಗೆಯಲ್ಲಿ ಬಂಡಾಯ ಚಂಡಿಕೆ ಬಿಟ್ಟು ಮಂತ್ರ ಸೂಸುವ ಸುಖ. ಯಾರದೋ ಕೂಸು. ಆದರೂ ಕೂಸು, ಮಾತನಾಡಿಸಬೇಕು....
ಮನಸ್ವಿ ಎಂ ಸ್ವಾಮಿ, ದಾವಣಗೆರೆ ಸಾಗುತಿದೆ ಹಿಂಡು ಅನವರತ ಒಂದಲ್ಲ ಎರಡಲ್ಲ ಅಗಣಿತ ಗಣ; ಜಿಂಕೆಗಳೆಷ್ಟೊ ಕೋಣಗಳೆಷ್ಟೋ ಹಸಿದ ಸಿಂಹ – ಹುಲಿಗಳೆಷ್ಟೊ ಎಲ್ಲ ಸಹಿಸುವ ಆನೆಗಳೆಷ್ಟೊ ದಾಟಲಾಗದ ನದಿಯ ದಾಟುವ ಛಲವ ಕದಡುವ ಮೊಸಳೆಗಳೆಷ್ಟೊ...