Connect with us

ದಿನದ ಸುದ್ದಿ

ಶಿಮ್ಲಾದಿಂದ ಕನ್ನಡತಿ ಕರೆತಂದ ವಿಕ ವರದಿಗಾರ ನಿಮಗೆ ಗೊತ್ತಾ?

Published

on

ಸುದ್ದಿದಿನ ಡೆಸ್ಕ್: ಪತ್ರಕರ್ತರು ಚೌಕಟ್ಟಿನ ಹೊರಗೂ ಕೆಲಸ ಮಾಡಿ ಹೇಗೆ ಸತ್ಕಾರ್ಯ ಮಾಡಬಹುದು ಎನ್ನುವುದಕ್ಕೆ ಶಿಮ್ಲಾದ ಮಾನಸಿಕ ರೋಗಿಗಳ ಆಸ್ಪತ್ರೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರಿನ ಪಿರಿಯಾಪಟ್ಟಣ ಮೂಲದ ಕನ್ನಡತಿ ಪದ್ಮಾರನ್ನು ಕರೆತರಲು ಅವಿರತವಾಗಿ ಶ್ರಮಿಸಿದ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ವಿಭಾಗದ ಹಿರಿಯ ಉಪ ಸಂಪಾದಕ ಚಾಣಕ್ಯ ನೀಲಕಂಠನಹಳ್ಳಿ ಅವರು ಮಾದರಿಯಾಗಿ ನಿಂತಿದ್ದಾರೆ.

ಚಾಣಕ್ಯ ಅವರ ಸೇವೆಯ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಕೂಡ ಪದ್ಮಾ ಅವರನ್ನು ಭೇಟಿಯಾಗಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ವಿಜಯ ಕರ್ನಾಟಕ ಹೆಸರನ್ನು ಪ್ರಸ್ತಾಪಿಸಿ ವರದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸುಳ್ಳೋ ನಿಜವೋ ಎಂದು ಯೋಚಿಸದೆ ಯಥಾವತ್ತಾಗಿ ಭಟ್ಟಿ ಇಳಿಸುವ ಮಾಧ್ಯಮಗಳಿಗೆ ಹೀಗೂ ಕೆಲಸ ಮಾಡಬಹುದು ಎಂಬುದನ್ನು ಒಂದು ನಿದರ್ಶನ ಸಮೇತ ಚಾಣಕ್ಯ ಅವರು ಸಾಬೀತುಮಾಡಿ ತೋರಿಸಿದ್ದಾರೆ.

 

ಚನ್ನಪಟ್ಟಣ ತಾಲೂಕಿನ ನೀಲಕಂಠನಹಳ್ಳಿ ಎಂಬ ಪುಟ್ಟ ಗ್ರಾಮ ಮೂಲದವರಾದ ಅವರು, ಸದ್ಯ ಮೈಸೂರಿನ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಹಿರಿಯ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅಮೋಘ್ ಸ್ಥಳೀಯ ವಾಹಿನಿಯಲ್ಲಿ ವರದಿಗಾರರಾಗಿ, ಪ್ರಜಾವಾಣಿ ಬೆಂಗಳೂರು ವಿಭಾಗದಲ್ಲಿ ಟ್ರೇನಿಯಾಗಿ, ವಿಜಯವಾಣಿ ದಿನಪತ್ರಿಕೆಯ ಚಿತ್ರದುರ್ಗ ಹಾಗೂ ದಾವಣಗೆರೆಯ ವರದಿಗಾರನಾಗಿ ಕೆಲಸ ಮಾಡಿದ್ದ ಅವರು ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕರಣ ಭೇದಿಸಿದ್ದು ಹೀಗೆ…

ಪದ್ಮಾ ಪ್ರಕರಣ ಕುರಿತು ಟ್ವಿಟರ್ ಹಾಗೂ ಫೇಸ್‍ಬುಕ್‍ನಲ್ಲಿ ಕಾಣಿಸಿಕೊಂಡ ಒಂದು ಮಾಹಿತಿಯ ಬೆನ್ನು ಹತ್ತಿದ ಚಾಣಕ್ಯ ಅವರು ಶಿಮ್ಲಾ ಆಸ್ಪತ್ರೆಯ ದೂರವಾಣಿ ಸಂಖ್ಯೆಯನ್ನು ಗೂಗಲ್‍ನಲ್ಲಿ ಪತ್ತೆಮಾಡಿದರು. ತಮಗೆ ಗೊತ್ತಿದ್ದಷ್ಟು ಹಿಂದಿಯಲ್ಲಿ ಅಲ್ಲಿನ ಸ್ವಾಗತಕಾರನ ಹತ್ತಿರ ಮಾತನಾಡಿ ಹೇಗೋ ಅಲ್ಲಿನ ವೈದ್ಯ ಸಂಜಯ್ ಪಾಠಕ್ ಸಂಪರ್ಕ ಸಾಧಿಸಿ ಪದ್ಮಾ ಅವರೊಂದಿಗೆ ಮಾತನಾಡಲು ಯಶಸ್ವಿಯಾದರು. ಶಿಮ್ಲಾದಲ್ಲಿದ್ದ ಪದ್ಮಾರನ್ನು ಮೊದಲು ಗುರುತಿಸಿದ ಹಿಮಾಚಲಪ್ರದೇಶದ ಸಾಮಾಜಿಕ ಕಾರ್ಯಕರ್ತೆ ಸುನೀಲ ಶರ್ಮಾ ಅವರಿಗೆ ಫೇಸ್ ಬುಕ್‍ನಲ್ಲಿ ಸಂದೇಶ ಕಳಿಸಿ ಅವರ ಸಂಪರ್ಕವನ್ನೂ ಗಳಿಸಲು ಯಶಸ್ವಿಯಾದರು.

ವರದಿ ಮಾಡಿ ಸುಮ್ಮನಾಗಲಿಲ್ಲ

ಮೇಲಿನವರ ಗಮನಕ್ಕೆ ತಂದು ವರದಿಮಾಡಿ ತಣ್ಣಗಾಗಿದ್ದರೆ ಅವರು ಹತ್ತರಲ್ಲಿ ಹನ್ನೊಂದನೆಯವರಾಗಿರಬೇಕಾಗಿತ್ತು. ವಿಕ ಮೈಸೂರು ಸ್ಥಾನಿಕ ಸಂಪಾದಕ ಲೋಕೇಶ್ ಕಾಯರ್ಗ ಅವರು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರಿಗೆ ವಿಷಯ ಮುಟ್ಟಿಸಿದರು. ಚಾಣಕ್ಯ ಮೈಸೂರು ಜಿಲ್ಲಾ ಮಾನಸಿಕ ಆರೋಗ್ಯ ಯೋಜನಾಧಿಕಾರಿ ಮಂಜುಪ್ರಸಾದ್ ಅವರಿಗೆ ವಿಷಯ ಮುಟ್ಟಿಸಿದರು. ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗೆ ಸುನೀಲ ಶರ್ಮಾ, ಸಂಜಯ್ ಪಾಠಕ್ ಅವರ ಮೊಬೈಲ್ ನಂಬರ್ ನೀಡಿ. ಈ  ಪ್ರಕರಣದಲ್ಲಿ ವಿಜಯ ಕರ್ನಾಟಕ ಪತ್ರಿಕೆಯು ಮುಖ್ಯ ಸೂತ್ರಧಾರಿಯಾಗಿರುವಂತೆ ನೋಡಿಕೊಂಡರು.

ವರದಿ ಪರಕಟವಾದ ಮರುದಿನವೇ ವಿಜಯ ಕರ್ನಾಟಕದ ಪಿರಿಯಾಪಟ್ಟಣ ವರದಿಗಾರ ನವೀನ್ ಅವರು ಕಂಪಲಾಪುರದ ಮಾಕನಹಳ್ಳಿ ಪಾಳ್ಯದಲ್ಲಿರುವ ಪದ್ಮಾ ಅವರ ಮನೆಯನ್ನು ಪತ್ತೆ ಮಾಡಿದರು. ಮಾನಸಿಕ ಆರೋಗ್ಯಾಧಿಕಾರಿಗೆ ವಿಳಾಸ ತೋರಿಸಿ ಅವರನ್ನು ಕರೆದೊಯ್ದವರು ನವೀನ್.

ಮನೆ ಪರಿಸ್ಥಿತಿ ಸರಿ ಇರಲಿಲ್ಲ

ಪದ್ಮಾ ಅವರ ಕುಟುಂಬ ವರ್ಗವನ್ನು ಮಾನಸಿಕ ಆರೋಗ್ಯ ಇಲಾಖೆ ತಂಡ ಭೇಟಿಯಾದಾಗ ಅವರ ಮನೆ ಪರಿಸ್ಥಿತಿ ಕರಳು ಚುರುಕ್ ಎನ್ನುವಂತಿತ್ತು. ದುಡ್ಡಿಲ್ಲದೆ ಅರ್ಧಕ್ಕೆ ಮನೆ ನಿಂತಿದ್ದರಿಂದ ಪದ್ಮಾರ ತಾಯಿ ಪಾರ್ವತಮ್ಮನವರು ಅವರ ಮಗಳ ಮನೆಯಲ್ಲಿ ವಾಸಿಸುತ್ತಿದ್ದರು. ಕೂಲಿ ಮಾಡಿ ಬದುಕುವ ಕುಟುಂಬಕ್ಕೆ ಪದ್ಮಾ ಇನ್ನಷ್ಟು ಹೊರೆಯಾಗಬಹುದೆಂದು ಮೇಲ್ನೋಟದಲ್ಲೇ ಕಾಣುತ್ತಿತ್ತು. ಕೂಡಲೇ ಪಿರಿಯಾಪಟ್ಟಣ ಶಾಸಕ ಮಹದೇವು ಅವರನ್ನು ಸಂಪರ್ಕಿಸಿದ ಚಾಣಕ್ಯ ಅವರು ಪದ್ಮಾರ ಮನೆ ಪರಿಸ್ಥಿತಿಯನ್ನು ವಿವರಿಸಿ ಹೇಳಿದರು. ಇದರಿಂದ ಕರಗಿದ ಶಾಸಕರು ಪದ್ಮಾ ಕುಟುಂಬಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಅಭಿರಾಂ ಅವರೂ ಕೂಡ ಇದೇ ರೀತಿ ಭರವಸೆ ನೀಡಿದರು.

ಪ್ರೇರಣೆಯಾಗಿದ್ದು ಸಂಸ್ಥೆ ಹಾಗೂ ಗುರುಗಳು

ವರದಿಗಳು ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದುಕೊಟ್ಟಾಗಲೇ ಸಾರ್ಥಕವಾಗುವುದು ಎಂದು ಚಾಣಕ್ಯ ಅವರು ತಮ್ಮ ಫೇಸ್‍ಬುಕ್ ಪೋಸ್ಟ್‍ವೊಂದರಲ್ಲಿ ಹೇಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ನನ್ನ ಸಂಸ್ಥೆ ಹಾಗೂ ಸ್ಥಾನಿಕ ಸಂಪಾದಕರು ನೀಡಿದ ಪ್ರೋತ್ಸಾಹ ಎಂದು ಫೇಸ್ ಬುಕ್ ಮೆಸೆಂಜರ್‍ನಲ್ಲಿ ಸುದ್ದಿದಿನ ಕ್ಕೆ ತಿಳಿಸಿದ್ದಾರೆ.

ನಾನು ವಿಕ ಬಳಗಕ್ಕೆ ಸೇರಿದಾಗ ನನ್ನ ಆದ್ಯಗುರುಗಳು ನೀವು ಏನು ಬರೆಯುತ್ತೀರಾ ಎಂದು ಕೇಳಿದರು. ಕೃಷಿ, ವಿಜ್ಞಾನ, ಭಾಷಾಂತರ, ಲೈಫ್ ಸ್ಟೈಲ್ ವರದಿಗಾರಿಕೆ ಬಗ್ಗೆ ವಿವರಿಸಿದೆ. ಶ್ರೀಸಾಮಾನ್ಯನಿಗೆ ನೆರವಾಗುವಂತಹ ಯಾವುದಾದರೂ ಲೇಖನ ಬರೆದಿದ್ದೀರಾ ಎಂದು ಕೇಳಿದರು. ನನ್ನ ಬಳಿ ಉತ್ತರ ಇರಲಿಲ್ಲ. ಸಮಾಜದ ಮೂರನೇ ವ್ಯಕ್ತಿಗೆ ಲಾಭ ತಂದು ಕೊಟ್ಟಾಗ ಮಾತ್ರ ವರದಿ ಸಾರ್ಥಕವಾಗತ್ತದೆ ಎಂದು ಅವರು ಹೇಳಿದ್ದರು. ಇದು ಅರ್ಥವಾಗಲು ಐದು ವರ್ಷ ಹಿಡಿಯಿತು ಎಂದು ಚಾಣಕ್ಯ ಅವರು ತಮ್ಮ ಫೇಸ್‍ಬುಕ್ ಪೋಸ್ಟ್ ವೊಂದರಲ್ಲಿ ಬರೆದಿದ್ದಾರೆ.

Click to comment

Leave a Reply

Your email address will not be published. Required fields are marked *

ದಿನದ ಸುದ್ದಿ

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

Published

on

bengaluru-strr-ring-road-traffic-relief-40-percent-reduction
ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೈಗೆತ್ತಿಕೊಂಡಿರುವ ಬೆಂಗಳೂರು ಸ್ಯಾಟಲೈಟ್‌ ಟೌನ್‌ ರಿಂಗ್‌ ರೋಡ್‌ (STRR) ಯೋಜನೆ ಇದೀಗ ಅಂತಿಮ ಹಂತ ತಲುಪಿದೆ.

ಹೈಲೈಟ್ಸ್:

  • 288 ಕಿ.ಮೀ. ಉದ್ದದ STRR ಯೋಜನೆ ಅಂತಿಮ ಹಂತದಲ್ಲಿ
  • ಕರ್ನಾಟಕದಲ್ಲಿ 243 ಕಿ.ಮೀ., ತಮಿಳುನಾಡಿನಲ್ಲಿ 45 ಕಿ.ಮೀ. ರಸ್ತೆ
  • ಒಟ್ಟಾರೆ ಸುಮಾರು ಶೇ.95ರಷ್ಟು ಕಾಮಗಾರಿ ಪೂರ್ಣ
  • ಬೆಂಗಳೂರಿನೊಳಗಿನ ಸಂಚಾರ ದಟ್ಟಣೆ ಶೇ.40ರಷ್ಟು ಇಳಿಯುವ ನಿರೀಕ್ಷೆ
  • ಯೋಜನೆಗೆ ಒಟ್ಟು ₹14,655 ಕೋಟಿ ವೆಚ್ಚ

ಒಟ್ಟು 288 ಕಿ.ಮೀ. ಉದ್ದದ STRR ಬೆಂಗಳೂರು ಸುತ್ತಲಿನ ಪ್ರಮುಖ ನಗರ ಹಾಗೂ ಕೈಗಾರಿಕಾ ಪ್ರದೇಶಗಳನ್ನು ಸಂಪರ್ಕಿಸಲಿದೆ. ಇದರಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ 243 ಕಿ.ಮೀ. ಮತ್ತು ತಮಿಳುನಾಡಿನಲ್ಲಿ 45 ಕಿ.ಮೀ. ರಸ್ತೆ ನಿರ್ಮಾಣವಾಗುತ್ತಿದೆ. ಒಟ್ಟು ಆರು ಪ್ಯಾಕೇಜ್‌ಗಳಲ್ಲಿ ಕೈಗೆತ್ತಿಕೊಂಡಿರುವ ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಸುಮಾರು ಶೇ.95ರಷ್ಟು ಕೆಲಸ ಮುಗಿದಿದೆ.

http://Visit : www.suddidina.com

ಪ್ರಮುಖ ವಿಭಾಗಗಳ ಕಾಮಗಾರಿ ಬಹುತೇಕ ಪೂರ್ಣ

ದೊಡ್ಡಬಳ್ಳಾಪುರ-ಹೊಸಕೋಟೆ ನಡುವಿನ 38 ಕಿ.ಮೀ. ವಿಭಾಗದ ಕಾಮಗಾರಿ ಶೇ.99.20ರಷ್ಟು ಪೂರ್ಣಗೊಂಡಿದೆ. ದಾಬಸ್‌ಪೇಟೆ-ದೊಡ್ಡಬಳ್ಳಾಪುರ ಬೈಪಾಸ್‌ ನಡುವಿನ 42 ಕಿ.ಮೀ. NH648 ವಿಭಾಗದ ನಿರ್ಮಾಣವೂ ಪೂರ್ಣಗೊಂಡಿದೆ. ಕರ್ನಾಟಕ-ತಮಿಳುನಾಡು ಗಡಿಯ 21 ಕಿ.ಮೀ. ಉದ್ದದ ಗ್ರೀನ್‌ಫೀಲ್ಡ್‌ ಹೆದ್ದಾರಿ ಕಾಮಗಾರಿ ಶೇ.94.89ರಷ್ಟು ಮುಗಿದಿದ್ದು, ನವೆಂಬರ್‌ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳ್ಳುವ ನಿರೀಕ್ಷೆಯಿದೆ.

ತಮಿಳುನಾಡು ಭಾಗದಲ್ಲೂ ಶೇ.91.32ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕೆಲಸವನ್ನು ಸೆಪ್ಟೆಂಬರ್‌ನಲ್ಲಿ ಮುಗಿಸುವ ಗುರಿ ಹೊಂದಲಾಗಿದೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ಸುಮಾರು 7 ಕಿ.ಮೀ. ಭಾಗದ ಕಾಮಗಾರಿಯೂ ಪೂರ್ಣಗೊಂಡಿದೆ.

₹14,655 ಕೋಟಿ ವೆಚ್ಚದ ಬೃಹತ್‌ ಯೋಜನೆ

STRR ನಿರ್ಮಾಣಕ್ಕಾಗಿ ಒಟ್ಟು ₹14,655 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಕರ್ನಾಟಕ ವ್ಯಾಪ್ತಿಯ ಭೂಸ್ವಾಧೀನಕ್ಕೆ ತಗಲುವ ₹6,117 ಕೋಟಿಯಲ್ಲಿ ಶೇ.30ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಈಗಾಗಲೇ ₹518.32 ಕೋಟಿ ಬಿಡುಗಡೆ ಮಾಡಲಾಗಿದೆ. ತಮಿಳುನಾಡು ಭಾಗದ ಭೂಸ್ವಾಧೀನ ಸೇರಿದಂತೆ ಉಳಿದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತಿದೆ.

ಮುಂದಿನ ಹಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಆರು ಪಥಗಳ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು PPPAC ಮೌಲ್ಯಮಾಪನ ಮಾಡಿದೆ. ಇದರಿಂದ ಮುಂದಿನ ಹಂತದ ಕಾಮಗಾರಿಗಳಿಗೂ ವೇಗ ಸಿಗುವ ನಿರೀಕ್ಷೆಯಿದೆ.

ನಗರದೊಳಗಿನ ವಾಹನ ದಟ್ಟಣೆ ಇಳಿಕೆ

STRR ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ಬಳಿಕ ಹೊರರಾಜ್ಯಗಳಿಂದ ಬರುವ ಭಾರಿ ವಾಹನಗಳು ಬೆಂಗಳೂರು ನಗರ ಪ್ರವೇಶಿಸದೇ ನೇರವಾಗಿ ರಿಂಗ್‌ ರಸ್ತೆಯ ಮೂಲಕ ಸಾಗಬಹುದು. ದೊಡ್ಡಬಳ್ಳಾಪುರ, ಹೊಸಕೋಟೆ, ಆನೇಕಲ್‌, ನೆಲಮಂಗಲ ಸೇರಿದಂತೆ ಪ್ರಮುಖ ಹೊರವಲಯ ಪ್ರದೇಶಗಳನ್ನು ಸಂಪರ್ಕಿಸುವ ಈ ರಸ್ತೆ ನಗರ ಸಂಚಾರದ ಮೇಲಿನ ಒತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ನಗರದೊಳಗಿನ ಸಂಚಾರ ದಟ್ಟಣೆ ಶೇ.40ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ವಾಹನಗಳ ಪ್ರಯಾಣದ ಸಮಯ ಹಾಗೂ ಇಂಧನ ಬಳಕೆ ಇಳಿಯುವುದರ ಜೊತೆಗೆ ವಾಯು ಮತ್ತು ಶಬ್ದ ಮಾಲಿನ್ಯವೂ ಕಡಿಮೆಯಾಗಬಹುದು. ಕೈಗಾರಿಕೆಗಳು, ಲಾಜಿಸ್ಟಿಕ್ಸ್‌ ಮತ್ತು ಪೂರೈಕೆ ಸರಪಳಿಗೂ STRR ಹೊಸ ವೇಗ ನೀಡುವ ಸಾಧ್ಯತೆಯಿದೆ.

Continue Reading

ದಿನದ ಸುದ್ದಿ

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

Published

on

toxic-movie-kichcha-sudeepa-supports-yash-negative-reviews
‘ಟಾಕ್ಸಿಕ್’ಗೆ ನೆಗೆಟಿವ್ ರಿವ್ಯೂಗಳ ಕಾಟ; ಯಶ್ ಬೆನ್ನಿಗೆ ನಿಂತ ಕಿಚ್ಚ ಸುದೀಪ್‌ ಹೇಳಿದ್ದೇನು?

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್‌ ವರ್ಲ್ಡ್ ಸಿನಿಮಾ ಬಿಡುಗಡೆಯಾದ ದಿನದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಅಭಿಪ್ರಾಯಗಳು ಜೋರಾಗಿವೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಬಾಕ್ಸ್ ಆಫೀಸ್‌ಗಿಂತಲೂ ಸದ್ಯ ನೆಗೆಟಿವ್ ರಿವ್ಯೂಗಳು ದೊಡ್ಡ ಚರ್ಚೆಯ ವಿಷಯವಾಗಿವೆ.

ಹೈಲೈಟ್ಸ್

  • ‘ಟಾಕ್ಸಿಕ್’ ಆಗಸ್ಟ್‌ 26ರಂದು ವಿಶ್ವದಾದ್ಯಂತ ತೆರೆಗೆ ಬಂದಿದೆ.
  • ಮೊದಲ ದಿನವೇ ₹101 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂಬ ವರದಿಗಳು.
  • ಯಶ್ ಅವರ ದ್ವಿಪಾತ್ರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
  • ಸಿನಿಮಾ ಪರ-ವಿರೋಧದ ವಿಮರ್ಶೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ.
  • ವಿಭಿನ್ನ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಯಶ್‌ಗೆ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ.

http://Visit : www.suddidina.com

ಮೊದಲ ದಿನವೇ ಭರ್ಜರಿ ಓಪನಿಂಗ್

ಆಗಸ್ಟ್‌ 26ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ತೆರೆಕಂಡ ‘ಟಾಕ್ಸಿಕ್’, ಮೊದಲ ದಿನ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಕಂಡಿದೆ. ಆರಂಭಿಕ ಹಂತದಲ್ಲೇ ₹101 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿವೆ. ಆದರೆ ಎರಡನೇ ಹಾಗೂ ಮೂರನೇ ದಿನಗಳಲ್ಲಿ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಸಿನಿಮಾ ಮಂದಗತಿಯಲ್ಲಿ ಸಾಗುತ್ತಿರುವ ಚರ್ಚೆ ಆರಂಭವಾಗಿದೆ.

ಚಿತ್ರದ ಕಥೆ, ನಿರೂಪಣೆ ಹಾಗೂ ಕೆಲವು ಪ್ರಯೋಗಾತ್ಮಕ ಅಂಶಗಳ ಬಗ್ಗೆ ಪ್ರೇಕ್ಷಕರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಚಿತ್ರವನ್ನು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ರಿವ್ಯೂಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ದ್ವಿಪಾತ್ರದಲ್ಲಿ ಯಶ್‌ ಅಬ್ಬರ

ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ನಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಭಿನ್ನ ಶೈಲಿ, ಪಾತ್ರ ವಿನ್ಯಾಸ ಮತ್ತು ಕಥೆಯನ್ನು ಕಟ್ಟಿಕೊಟ್ಟಿರುವ ರೀತಿಯೂ ಸಿನಿಮಾದ ಪ್ರಮುಖ ಚರ್ಚೆಯ ಅಂಶಗಳಾಗಿವೆ.

ಆದರೆ, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲಿದ್ದ ಕಾರಣ ಸಿನಿಮಾ ಕುರಿತ ಟೀಕೆಗಳೂ ಅಷ್ಟೇ ತೀವ್ರವಾಗಿವೆ. ಇದೇ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಸ್ಟಾರ್ ನಟ ಕಿಚ್ಚ ಸುದೀಪ್, ಯಶ್ ಅವರ ಪ್ರಯತ್ನವನ್ನು ಮುಕ್ತವಾಗಿ ಮೆಚ್ಚಿಕೊಂಡಿದ್ದಾರೆ.

“ಔಟ್ ಆಫ್ ದಿ ಬಾಕ್ಸ್ ಚಿಂತಿಸಿದ್ದೀರಿ”

‘ಟಾಕ್ಸಿಕ್’ ವೀಕ್ಷಿಸಿದ ಬಳಿಕ ಸುದೀಪ್ ತಮ್ಮ ಎಕ್ಸ್ ಖಾತೆಯಲ್ಲಿ ಯಶ್ ಅವರನ್ನು ಉದ್ದೇಶಿಸಿ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಿಂದಿನ ಬ್ಲಾಕ್‌ಬಸ್ಟರ್ ಯಶಸ್ಸಿನ ಸೂತ್ರವನ್ನೇ ಮುಂದುವರಿಸದೆ, ಹೊಸ ಪ್ರಯೋಗಕ್ಕೆ ಮುಂದಾಗಿರುವುದು ಧೈರ್ಯದ ನಿರ್ಧಾರ ಎಂದು ಅವರು ಹೇಳಿದ್ದಾರೆ.

ಹೊಸ ರೀತಿಯಲ್ಲಿ ಯೋಚಿಸಲು ಕೇವಲ ಕಲ್ಪನೆ ಸಾಕಾಗುವುದಿಲ್ಲ. ಅದಕ್ಕೆ ವಿಭಿನ್ನ ಮನಸ್ಥಿತಿ, ದೃಢ ನಂಬಿಕೆ ಮತ್ತು ಮುಖ್ಯವಾಗಿ ಗಟ್ಸ್ ಬೇಕು ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ.

“ವಿಶಿಷ್ಟ ಹಾಗೂ ಶ್ಲಾಘನೀಯ ಪ್ರಯತ್ನ”

‘ಟಾಕ್ಸಿಕ್’ ಒಂದು ವಿಶಿಷ್ಟ ಹಾಗೂ ಶ್ಲಾಘನೀಯ ಪ್ರಯತ್ನ ಎಂದು ಬಣ್ಣಿಸಿರುವ ಸುದೀಪ್, ಚಿತ್ರದ ಹಲವು ಭಾಗಗಳು ಪ್ರೇಕ್ಷಕರಲ್ಲಿ ಕುತೂಹಲ, ಚರ್ಚೆ ಮತ್ತು ಸಂವಾದಕ್ಕೆ ಅವಕಾಶ ಮಾಡಿಕೊಟ್ಟಿವೆ ಎಂದು ಹೇಳಿದ್ದಾರೆ. ಹಳೆಯ ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಹೊಸ ಸಾಹಸಕ್ಕೆ ಕೈಹಾಕಿದ್ದಕ್ಕಾಗಿ ಯಶ್ ಅವರನ್ನು ಅಭಿನಂದಿಸಿ, “ಒಳ್ಳೆಯದಾಗಲಿ ಗೆಳೆಯ” ಎಂದು ಶುಭ ಹಾರೈಸಿದ್ದಾರೆ.

ಸುದೀಪ್ ಅವರ ಈ ಮಾತುಗಳು ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ‘ಟಾಕ್ಸಿಕ್’ ಕುರಿತ ಚರ್ಚೆ ಮತ್ತಷ್ಟು ವೇಗ ಪಡೆದುಕೊಂಡಿದೆ. ನೆಗೆಟಿವ್ ರಿವ್ಯೂಗಳ ನಡುವೆಯೇ ಯಶ್‌ಗೆ ಸುದೀಪ್ ನೀಡಿರುವ ಬೆಂಬಲ ಅಭಿಮಾನಿಗಳ ಗಮನ ಸೆಳೆದಿದೆ.

https://x.com/KicchaSudeep/status/2093329559211106527

Continue Reading

ದಿನದ ಸುದ್ದಿ

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

Published

on

ಕಲಬುರಗಿ ಮೇಯರ್‌ ಚುನಾವಣೆ: ಮೀಸಲಾತಿ ಬಳಿಕ ಗರಿಗೆದರಿದ ರಾಜಕೀಯ ಲೆಕ್ಕಾಚಾರ; ಕಾಂಗ್ರೆಸ್‌ಗೆ ಬಹುಮತದ ಬಲ

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ ಹಾಗೂ ಉಪ ಮೇಯರ್‌ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿವೆ.

http://Visit : www.suddidina.com

ಆಡಳಿತಾರೂಢ ಕಾಂಗ್ರೆಸ್‌ ಪಾಲಿಕೆಯಲ್ಲಿ ಅಗತ್ಯ ಬಹುಮತದ ಸಂಖ್ಯಾಬಲ ಹೊಂದಿರುವುದರಿಂದ ಅಧಿಕಾರ ಉಳಿಸಿಕೊಳ್ಳುವ ವಿಚಾರದಲ್ಲಿ ದೊಡ್ಡ ಆತಂಕವಿಲ್ಲ. ಆದರೆ ಮೇಯರ್‌ ಮತ್ತು ಉಪ ಮೇಯರ್‌ ಸ್ಥಾನ ಯಾರಿಗೆ ನೀಡಬೇಕು ಎಂಬುದೇ ಈಗ ಪಕ್ಷದೊಳಗಿನ ಪ್ರಮುಖ ಚರ್ಚೆಯಾಗಿದೆ. ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖ ಪದಾಧಿಕಾರಿಗಳು ಶುಕ್ರವಾರ ಸಭೆ ನಡೆಸಿದ್ದು, ಶನಿವಾರ ಬೆಳಗ್ಗೆ ಅಭ್ಯರ್ಥಿಗಳ ಕುರಿತು ಅಂತಿಮ ಸ್ಪಷ್ಟತೆ ಮೂಡುವ ಸಾಧ್ಯತೆಯಿದೆ.

ಕಾಂಗ್ರೆಸ್‌ ಸಂಖ್ಯಾಬಲ 35ಕ್ಕೆ

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್‌ ತನ್ನ 28 ಸದಸ್ಯರ ಜತೆಗೆ ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್‌ ಮತ್ತು ಕನೀಜ್‌ ಫಾತಿಮಾ, ವಿಧಾನ ಪರಿಷತ್‌ ಸದಸ್ಯರಾದ ಜಗದೇವ ಗುತ್ತೇದಾರ್‌, ತಿಪ್ಪಣ್ಣಪ್ಪ ಕಮಕನೂರ ಹಾಗೂ ಡಾ. ಚಂದ್ರಶೇಖರ ಪಾಟೀಲ್‌ ಹುಮನಾಬಾದ್‌ ಅವರ ಮತದಾನದ ಹಕ್ಕಿನಿಂದ ಒಟ್ಟು 35 ಮತಗಳ ಬಲ ಹೊಂದಿದೆ.

ಇದರಿಂದ ಮೇಯರ್‌ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಮೇಲುಗೈ ದೊರೆಯುವಂತಾಗಿದೆ. ಆದರೂ ಪಕ್ಷದೊಳಗಿನ ಆಕಾಂಕ್ಷಿಗಳ ಸಂಖ್ಯೆ ಹಾಗೂ ಸ್ಥಳೀಯ ರಾಜಕೀಯ ಸಮೀಕರಣಗಳು ಅಭ್ಯರ್ಥಿ ಆಯ್ಕೆಯನ್ನು ಕುತೂಹಲಕರವಾಗಿಸಿವೆ.

ಬಿಜೆಪಿಗೂ ಗಮನಾರ್ಹ ಸಂಖ್ಯಾಬಲ

ಇನ್ನೊಂದೆಡೆ ಬಿಜೆಪಿ 22 ಸದಸ್ಯರು ಹಾಗೂ ಒಬ್ಬರನ್ನು ಸೇರಿಸಿ 23ರ ಸಂಖ್ಯಾಬಲ ಹೊಂದಿದೆ. ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ್‌, ಶಶೀಲ್‌ ನಮೋಶಿ ಹಾಗೂ ಶಾಸಕ ಬಸವರಾಜ ಮತ್ತಿಮಡು ಅವರ ಮತದಾನದ ಹಕ್ಕು ಸೇರಿ ಬಿಜೆಪಿಯ ಒಟ್ಟು ಬಲ 26ಕ್ಕೆ ತಲುಪುತ್ತದೆ.

ಈ ನಡುವೆ ಜೆಡಿಎಸ್‌ನ ನಾಲ್ವರು ಸದಸ್ಯರ ಮತಗಳು ನಿರ್ಣಾಯಕವಾಗುವ ಸಾಧ್ಯತೆಯೂ ಇದೆ. ಅವರು ಯಾವ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಚುನಾವಣಾ ದಿನದವರೆಗೂ ಕುತೂಹಲ ಮೂಡಿಸಿದೆ.

ಮಧ್ಯಾಹ್ನ 3.30ಕ್ಕೆ ಚುನಾವಣೆ

ಇಂದಿರಾ ಸ್ಮಾರಕ ಭವನದಲ್ಲಿ ಶನಿವಾರ ಮಧ್ಯಾಹ್ನ 3.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಅಪರ ಜಿಲ್ಲಾಧಿಕಾರಿಗಳ ಮುಂದೆ ಬೆಳಗ್ಗೆ 10 ಗಂಟೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಸಂಬಂಧಿಸಿದ ಮತದಾರರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ.

ಎಸ್‌ಐಆರ್‌ ಪ್ರಕ್ರಿಯೆ ಹಾಗೂ ಸಂಸತ್‌ ಅಧಿವೇಶನದ ಹಿನ್ನೆಲೆಯಲ್ಲಿ ಆಗಸ್ಟ್‌ 8ರಂದು ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಇದೀಗ ಹೊಸ ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ರಾಜಕೀಯ ಮತ್ತೆ ರಂಗೇರಿದೆ.

ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್​, ಸಂಸದ ರಾಧಾಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಕಾಂಗ್ರೆಸ್​ ಕಚೇರಿಯಲ್ಲಿ ಆಕಾಂಕ್ಷಿಗಳು, ಪದಾಧಿಕಾರಿಗಳ ಸಭೆ ನಡೆದಿದೆ. ಪಾಲಿಕೆಯಲ್ಲಿ ಪಕ್ಷ ಬಹುಮತ ಹೊಂದಿದೆ. ಆಕಾಂಕ್ಷಿಗಳು ಹೆಚ್ಚಿದ್ದರೂ ಸಮಗ್ರ ಚರ್ಚೆ ಬಳಿಕ ಹಿರಿಯರ ಮಾರ್ಗದರ್ಶನದಂತೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಲಾಗುವುದು.

  • ಜಗದೇವ ಗುತ್ತೇದಾರ್​ ಜಿಲ್ಲಾಧ್ಯಕ್ಷ, ಕಾಂಗ್ರೆಸ್ 
Continue Reading
Advertisement

Title

bengaluru-strr-ring-road-traffic-relief-40-percent-reduction bengaluru-strr-ring-road-traffic-relief-40-percent-reduction
ದಿನದ ಸುದ್ದಿ19 minutes ago

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ...

toxic-movie-kichcha-sudeepa-supports-yash-negative-reviews toxic-movie-kichcha-sudeepa-supports-yash-negative-reviews
ದಿನದ ಸುದ್ದಿ48 minutes ago

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು...

ದಿನದ ಸುದ್ದಿ1 hour ago

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ...

ದಿನದ ಸುದ್ದಿ1 hour ago

ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ

ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು...

ದಿನದ ಸುದ್ದಿ1 hour ago

Trump Oil Deal: ವೆನೆಜುವೆಲಾದ 65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಅಮೆರಿಕದ ಕಣ್ಣು; ಇದು ವಿಶ್ವದ ಅತಿದೊಡ್ಡ ಡೀಲ್‌ನಾ?

ಸುದ್ದಿದಿನ,ಅಮೆರಿಕ: ಅಮೆರಿಕ-ವೆನೆಜುವೆಲಾ ನಡುವಿನ ಹೊಸ ತೈಲ ಒಪ್ಪಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದವನ್ನು ‘ವಿಶ್ವದ ಅತಿದೊಡ್ಡ...

ದಿನದ ಸುದ್ದಿ4 hours ago

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್...

medical-college-hostel-canteen-food-safety-inspection-karnataka medical-college-hostel-canteen-food-safety-inspection-karnataka
ದಿನದ ಸುದ್ದಿ4 hours ago

ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್ ಕ್ಯಾಂಟೀನ್‌ಗಳಿಗೆ ಅಧಿಕಾರಿಗಳ ಶಾಕ್! 34 ಕ್ಯಾಂಟೀನ್ ಪರಿಶೀಲನೆ, 5ಕ್ಕೆ ನೋಟಿಸ್

ಸುದ್ದಿದಿನ,ಬೆಂಗಳೂರು: ವೈದ್ಯಕೀಯ ಕಾಲೇಜುಗಳ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಹಾರ ಸುರಕ್ಷತಾ ಇಲಾಖೆ ವಿಶೇಷ ಪರಿಶೀಲನೆ ನಡೆಸಿದೆ. ಸರ್ಕಾರಿ ಹಾಗೂ ಖಾಸಗಿ...

august-29-2026-daily-horoscope-kannada-rashi-bhavishya august-29-2026-daily-horoscope-kannada-rashi-bhavishya
ನಿತ್ಯ ಭವಿಷ್ಯ4 hours ago

ಇಂದಿನ ರಾಶಿಫಲ: 12 ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು, ಪ್ರೀತಿ–ಆರೋಗ್ಯದ ಸಂಪೂರ್ಣ ಫಲ

ಸುದ್ದಿದಿನ,ರಾಶಿಫಲ: ಶನಿವಾರ, ಆಗಸ್ಟ್ 29, 2026. ಇಂದಿನ ದಿನವು 12 ರಾಶಿಗಳಿಗೂ ವಿಭಿನ್ನ ಅನುಭವಗಳನ್ನು ತರಲಿದೆ. ಕೆಲವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ...

bengaluru-clubs-food-safety-raid-cockroaches-expired-food-found bengaluru-clubs-food-safety-raid-cockroaches-expired-food-found
ದಿನದ ಸುದ್ದಿ2 days ago

ಪ್ರಮುಖ 8 ಕ್ಲಬ್‌ಗಳ ಮೇಲೆ ದಿಢೀರ್ ದಾಳಿ; ನಿಯಮ ಉಲ್ಲಂಘನೆಗೆ ನೋಟಿಸ್

ಸುದ್ದಿದಿನ,ಬೆಂಗಳೂರು: ನಗರದ ಪ್ರತಿಷ್ಠಿತ ಕ್ಲಬ್‌ಗಳಲ್ಲಿಯೂ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯ ನಿಯಮಗಳ ಉಲ್ಲಂಘನೆ ಕಂಡುಬಂದಿರುವುದು ಆತಂಕ ಮೂಡಿಸಿದೆ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು...

ದಿನದ ಸುದ್ದಿ2 days ago

ಸೆ.2ರ ಹುಟ್ಟುಹಬ್ಬ ಆಚರಿಸದಿರಲು ಕಿಚ್ಚನ ನಿರ್ಧಾರ: “ನಿಮ್ಮ ಪ್ರೀತಿಯೇ ನನಗೆ ದೊಡ್ಡ ಮೈಲಿಗಲ್ಲು

ಸುದ್ದಿದಿನ,ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರ ಹುಟ್ಟುಹಬ್ಬ ಎಂದರೆ ಅಭಿಮಾನಿಗಳಿಗೆ ಹಬ್ಬದ ವಾತಾವರಣ. ಆದರೆ ಈ ಬಾರಿ ಸೆಪ್ಟೆಂಬರ್‌ 2ರಂದು ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಅದ್ಧೂರಿಯಾಗಿ...

Trending