ರಾಜಕೀಯ
ಆದರೆ ಒಂದಂತೂ ಸತ್ಯ…

ಇಂದು ಬೆಳಿಗ್ಗೆ ಬಿಜೆಪಿ ಬೆಂಬಲಿಗನೊಬ್ಬ ಇನ್ ಬಾಕ್ಸ್ ನಲ್ಲಿ ಬಂದು After long time how is the Josh? ಇಡೀ ದೇಶ ಮೋದಿಜಿ ಗೆಲುವಿಗೆ ಸಂತೋಷ ಪಡ್ತಿದೆ, ನೀವು ಬನ್ನಿ ಎಂದು ಆಹ್ವಾನಿಸಿದ. ಬಹುಶ ಆ ವ್ಯಕ್ತಿ ಹಿಂದೆ ಯಾವಾಗಲೋ ನನ್ನೊಂದಿಗೆ ವಾದ ನಡೆಸಿರಬಹುದು. ನನಗೆ ಸರಿಯಾಗಿ ನೆನಪಿಲ್ಲ…
ಆತ ಈ ಮೆಸೇಜ್ ಹಾಕಿದ ನಂತರ ಸುಮಾರು ಹೊತ್ತು ಚಾಟ್ ನಡೆಯಿತು. ನನ್ನ ಕೆಲವು ಉತ್ತರ ನೋಡ ಅವನು, “ಕೋಪದಲ್ಲಿ ಏನೇನೋ ಮಾತಾಡ್ತೀರಾ, ಸ್ವಲ್ಪ ದಿನ ಹೋಗಲಿ, ಯೋಚನೆ ಮಾಡಿ… ಬಿಜೆಪಿಗೆ ಬನ್ನಿ ನಿಮಗೂ ಒಳ್ಳೆಯದಾಗಲಿ” ಅಂತ ಕೇಳಿಕೊಂಡ.
ಕೊನೆಯಲ್ಲಿ ನಾನು ಒಂದು ಮಾತು ಹೇಳಿದೆ.
“ಬ್ರದರ್, ನಿಮ್ಮಲ್ಲಿ ಮನುಷ್ಯತ್ವ, ಪ್ರಾಮಾಣಿಕತೆ, ಒಳ್ಳೆಯತನ, ಪ್ರಜಾಪ್ರಭುತ್ವ ಚಿಂತನೆ, ದೇಶದ ಆರ್ಥಿಕ ಸಾಮಾಜಿಕ ಪ್ರಗತಿ ಬಗ್ಗೆ ಕಾಳಜಿ, ಇಷ್ಟೂ ಇರುವುದು ನಿಜವಾಗಿದ್ದರೆ ಇನ್ನೂ ಮೂರೇ ವರ್ಷದಲ್ಲಿ ಬಿಜೆಪಿ ಬಿಟ್ಟು ಬರುತ್ತೀರಿ. ಆದರೆ ನಿಮ್ಮೊಳಗೆ ಅಪ್ರಾಮಾಣಿಕತೆ, ಭ್ರಷ್ಟತೆ, ಕೋಮು ದ್ವೇಷ ಇತ್ಯಾದಿ ಇದ್ದರೆ ಏನೂ ಮಾಡಕಾಗಲ್ಲ, ಆಲ್ ದ ಬೆಸ್ಟ್, ಒಳ್ಳೆಯದಾಗಲಿ” ಎಂದೆ.
2002ರಲ್ಲಿ ಮೋದಿಯ ಕ್ರಿಮಿನಲ್ ಕೆಲಸಗಳನ್ನು ಓದಿ, ಕೇಳಿದಾಗಿನಿಂದಲೂ ನಿರ್ದಿಷ್ಟವಾಗಿ ನರೇಂದ್ರ ಮೋದಿಯನ್ನಿ ವಿರೋಧಿಸುತ್ತಾ ಬಂದಿರುವ ಹಾಗೂ ಅದಕ್ಕಿಂತ ಮೊದಲೇ ಬಿಜೆಪಿ ಮತ್ತು ಸಂಘಪರಿವಾರವನ್ನು ಸೈದ್ಧಾಂತಿಕ ಕಾರಣಕ್ಕಾಗಿ ವಿರೋಧಿಸುವ ನನ್ನನ್ನು ಅಥವಾ ನನ್ನಂತಹ ಹಲವರನ್ನು ಈ ಗೆಳೆಯನಂತವರು ತಪ್ಪಾಗಿ “ಮಹಾಘಟಬಂಧನ್” ನಾಯಕರ ಫಾಲೋವರ್ ಎಂದುಕೊಂಡುಬಿಟ್ಟಿರುತ್ತಾರೆ. ಹಾಗಾಗಿಯೇ ನಾವು ಅವರಿಗೆ ಭ್ರಷ್ಟರ ಪರ ಬ್ಯಾಟಿಂಗ್ ಮಾಡುವವರಾಗಿ ಕಾಣುತ್ತೇವೆ. ಪಾಪ ಅದು ಅವರ ತಿಳುವಳಿಕೆಯ ಮಿತಿ.
“ಮಹಾಘಟಬಂಧನ್ ನಾಯಕರೆಲ್ಲಾ ಭ್ರಷ್ಟರು ಮತ್ತು ಸ್ವಾರ್ಥಿಗಳು ಮೋದಿ ಮಾತ್ರ ಒಳ್ಳೆಯ ವ್ಯಕ್ತಿ” ಎಂಬ ಕಟ್ಟುಕತೆಯನ್ನು ಮುಗ್ಧವಾಗಿ ನಂಬಿಕೊಂಡಿರುವ ಇಂತಹ ಯುವಕರು ಈಗ ಅಡಿಗಡಿಗೂ ಸಿಗುತ್ತಾರೆ. ಇವರಲ್ಲಿ ಅನೇಕರು ನಿಜಕ್ಕೂ ತಮ್ಮನ್ನು ತಾವು ಒಳ್ಳೆಯದರ ಪರವಾಗಿ ನಿಂತವರು ಎಂದು ನಂಬಿಕೊಂಡವರೂ ಹೌದು.
ನಾವು ಈಗ ಕೇಳಿಕೊಳ್ಳಬೇಕಾದ ನಿಜವಾದ ಪ್ರಶ್ನೆ ಇದು. ದೇಶದಾದ್ಯಂತ ಬಿಜೆಪಿ ಇಂತಹುದೇ ಮನಸ್ಥಿತಿಯನ್ನು ಹೊಸ ತಲೆಮಾರಿನ ಯುವಕರಲ್ಲಿ ಬಿತ್ತಿದ್ದು ಹೇಗೆ? ಕಳೆದ ಐದು ವರ್ಷಗಳಲ್ಲಿ ಅಗಾಧ ಮಟ್ಟದಲ್ಲಿ ಜನರಿಗೆ ತೊಂದರೆ ಆಗುವ ನೀತಿಗಳನ್ನೇ ಜಾರಿಗೊಳಿಸಿದರೂ, ದೇಶದ ಆರ್ಥಿಕತೆಯನ್ನೇ ಬಿಕ್ಕಟ್ಟಿನ ಸ್ಥಿತಿಗೆ ತಂದಿಟ್ಟಿದ್ದರೂ ಸಹ ಇದಾವುದರ ನೋವು ಸಂಕಟಗಳೂ ಅರಿವಾಗದಂತೆ 16-25 ವರ್ಷದೊಳಗಿನ ಯುವ ಸಮೂಹವನ್ನು ಇವರು ಪ್ರಭಾವಿಸಿದ್ದು ಹೇಗೆ? ಇದಕ್ಕಾಗಿ ಅವರು ನಡೆಸಿದ್ದ ತಂತ್ರಗಳೇನು? ಕೃತಿಯೇ ಇಲ್ಲದೇ ಮಾತಿನಿಂದಲೇ ಮೋದಿ ದೇಶವನ್ನು ವಂಚಿಸಲು ಸಾಧ್ಯವಾದದ್ದು ಹೇಗೆ?
ಬಹಳ ಮುಖ್ಯವಾಗಿ ಮೋದಿ ಪಡೆ ಇಷ್ಟೆಲ್ಲಾ ಮಾಡುತ್ತಿದ್ದಾಗ ಅದಕ್ಕೆ ಪ್ರತಿಯಾಗಿ ನಾವೆಲ್ಲಾ ಸೇರಿ ಯಾವ ಬಗೆಯ ನರೆಟಿವ್ ಕಟ್ಟಬೇಕಿತ್ತು…? ಕೇವಲ ಪ್ರತಿಕ್ರಿಯಾತ್ಮಕ ಕೆಲಸ, ಮಾತುಗಳಿಗೇ ನಮ್ಮನ್ನು ನಾವು ಸೀಮಿತಗೊಳಿಸಿಕೊಂಡದ್ದು ಇಂದಿನ ಸ್ಥಿತಿಗೆ ಕಾರಣವಲ್ಲವೇ? ಯುವಜನರು ಆತುಕೊಂಡಿರುವ ಹುಸಿ “ದೇಶಭಕ್ತಿ” ಯನ್ನು ಮೀರಿ ದೇಶದ ಒಳಿತಿಗಾಗಿ ಆಲೋಚಿಸುವ ಯಾವ ಕಾರ್ಯಕ್ರಮಗಳ ನಮ್ಮ ಬಳಿ ಇದ್ದವು?/ಇವೆ? ಅಥವಾ ದೇಶದ ಜನರ ಒಳಿತಿಗೂ ದೇಶಭಕ್ತಿಗೂ ಇರುವ ಸಂಬಂಧವನ್ನು ಸರಿಯಾಗಿ ಎತ್ತಿ ಹೇಳಲಾಗದ ಮಿತಿ ಯಾವದು? ಇವೆಲ್ಲಾ ಉತ್ತರ ಕಂಡುಕೊಳ್ಳಬೇಕಾದ ಪ್ರಶ್ನೆಗಳು.
ಮುಂದಿನ ದಿನಗಳು ಈ ದೇಶದ ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿ ಯುವಜನರಿಗೆ, ದಲಿತ, ಮುಸ್ಲಿಮರಿಗೆ, ಕ್ರೈಸ್ತರಿಗೆ, ಮಹಿಳೆಯರಿಗೆ, ಜನರ ಪರವಾಗಿ ದನಿ ಎತ್ತುವವರಿಗೆ ಎಂತಹ ಸನ್ನಿವೇಶ ತರಲಿವೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಆದರೆ ಒಂದಂತೂ ಸತ್ಯ….ಮೋದಿ ಸರ್ಕಾರ ಅತಿ ಬೇಗನೇ ದೇಶದ ಆರ್ಥಿಕತೆಯನ್ನು ತೀವ್ರ ಬಿಕ್ಕಟ್ಟಿಗೆ ತಳ್ಳಲಿದೆ. ಇದರ ಕಾರ್ಪೊರೇಟ್ ತುಷ್ಟೀಕರಣ ರಭಸವಾಗಿ ನಡೆದಷ್ಟೂ ಸಂಕಷ್ಟಗಳ ಸರಮಾಲೆ ದೇಶದ ರೈತ ಕಾರ್ಮಿಕರಿಗೆ ಸುತ್ತಿಕೊಳ್ಳಲಿದೆ… ಸಂಸತ್ ಸದಸ್ಯರೆಲ್ಲಾ ಮೋದಿ ಮತ್ತು ಅಮಿತ್ ಷಾ ಗಳ ಹಾಗೂ ಅಂಬಾನಿ ಆದಾನಿಗಳ ಗುಲಾಮರಾಗಿರುವಾಗ ಸಂಸತ್ತು ಎಂದು ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ ಮತ್ತು ಗುಲಾಮಗಿರಿಯ ರಕ್ಷಕನಾಗಿ ಬದಲಾಗಲಿದೆ.
ಅಂತಹ ಪರಿಸ್ಥಿತಿಯಲ್ಲಿ ಜನರನ್ನು ನಿಜ ಸಮಸ್ಯೆಗಳಿಂದ ದಿಕ್ಕಿತಪ್ಪಿಸುವ ನಾನಾ ಬಗೆಯ ದ್ವೇಷಕಾರಿ, ದಮನಕಾರಿ, ಉನ್ಮಾದಕಾರಿ ನೀತಿಗಳು ಈಗಾಗಲೇ ಬಿಜೆಪಿ ಜೋಳಿಗೆಯಲ್ಲಿ ಇವೆ. ಅಯೋಧ್ಯೆ ವಿವಾದದಿಂದ ಹಿಡಿದು, ಕಾಶ್ಮೀರ, ಆರ್ಟಿಕಲ್ 370, ಆರ್ಟಿಕಲ್ 42, ಸಮಾನ ನಾಗರಿಕ ಸಂಹಿತೆ, ಇತ್ಯಾದಿ ಯಾವುದೇ ವಿಷಯವಾದರೂ ಸಾಕು.ಬೆಂಕಿ ಹಚ್ಚಲು.
ದೇಶದ ನಿಜ ಸಮಸ್ಯೆಗಳನ್ನು ಯಾರೂ ಪ್ರಶ್ನಿಸದಂತೆ ಮಾಡಲು, ಜನರ ಸಂಕಷ್ಟಗಳೇ ಮರೆಮಾಚುವಂತೆ ಮಾಡಲು ಹಿಂದೂ-ಮುಸ್ಲಿಂ ದ್ವೇಷವನ್ನು ಯಾವ ರೀತಿ ಬೇಕಾದರೂ, ಯಾವ ಕ್ಷಣ ಬೇಕಾದರೂ ಉತ್ತೇಜಿಸಬಲ್ಲ ಮಶಿನರಿ ಇವರ ಬಳಿ ಸನ್ನದ್ಧವಾಗಿದೆ.
ಖಂಡಿತವಾಗಿ ಬಂದೊದಗಲಿರುವ ಅಂತಹ ಸನ್ನಿವೇಶಗಳನ್ನು ಎದುರಿಸಲು ದೇಶದ ಬಗೆಗೆ ಕಾಳಜಿ ಇರುವ ಜನರ ಬಳಿ ಇರುವ ಜನಹಿತದ ತಂತ್ರಗಳೇನು? ಅವರ ಕ್ರಿಯೆಗೆ ನಮ್ಮ ಪ್ರತಿಕ್ರಿಯೆ ಮಾದರಿಯಿಂದ ಬಹಳ ಸಮಯ ಲಾಭ ಪಡೆಯುವುದು ಅವರೇ ಹೊರತು ನಾವಲ್ಲ.
ಭಾರತದ ಅನನ್ಯ ಕೂಡುಸಂಸ್ಕೃತಿಯ ರಕ್ಷಣೆಗೆ, ಈ ದೇಶದ ರೈತ, ಕಾರ್ಮಿಕರ, ದಲಿತ, ಅಲ್ಪಸಂಖ್ಯಾತ, ಮಹಿಳೆಯರೆಲ್ಲರ ರಕ್ಷಣೆಗೆ, ನಾಡಿನ ವೈವಿಧ್ಯಮಯ ಜನ ಸಂಸ್ಕೃತಿಯ ಉಳಿವಿಗೆ pro active, ಕೆಲಸಗಳಿಗೆ ನಾವು ಮುಂದಾಗದಿದ್ದರೆ ಮುಂದಿನ ಪೀಳಿಗೆಗಳು ನಮ್ಮನ್ನು ಕ್ಷಮಿಸುವುದಿಲ್ಲ.
ಅವನು ಕಾಂಗ್ರೆಸ್, ಇವನು ಕಮ್ಯುನಿಸ್ಟ್, ಅವನು ಬಿಎಸ್ಪಿ ಇತ್ಯಾದಿ ಸಂಕುಚಿತ ಗೂಡುಗಳಿಂದ ಹೊರಬಂದು ಈ ಭಾರತವನ್ನು ರಕ್ಷಿಸಬೇಕಾದ ದೊಡ್ಡ ಕೈಂಕರ್ಯದಲ್ಲಿ ಒಬ್ಬೊಬ್ಬರೂ ದಂಡನಾಯಕರಾಗಬೇಕಾದ ಹೊತ್ತು ಇದು. ನಿಜದೇಶಪ್ರೇಮಿಗಳಾಗಿ ಮೈಮರೆಯದೇ ತೊಡಗಿಸಿಕೊಳ್ಳುವ ಸಮಯ ಇದು.
ರಾಹುಲ್ ಗಾಂಧಿಗೋ, ದೇವೇ ಗೌಡ್ರಿಗೋ, ಮಮತಾ, ಮಾಯಾವತಿ, ಕೇಜ್ರಿವಾಲ್ ಅಥವಾ ಮತ್ಯಾರಿಗೋ ಮಾಡಬೇಕಾದ ಕೆಲಸವಲ್ಲ. ಇಡೀ ಜಗತ್ತಿನಲ್ಲಿ ಅತ್ಯದ್ಭುತ ಜನಸಂಸ್ಕೃತಿಯನ್ನು, ಬುದ್ಧನ ಕಾಲದಿಂದಲೂ ಸಮತೆ, ಪ್ರಜಾಪ್ರಭುತ್ವಗಳ ಉದಾತ್ತ ಮೌಲ್ಯಗಳನ್ನು ರೂಪಿಸಿದ ಈ ಮಹಾನ್ ದೇಶವನ್ನು ಆ ಮೌಲ್ಯಗಳೊಂದಿಗೆ ಉಳಿಸಿಕೊಳ್ಳಬೇಕಾದ ಹೊಣೆ ಇದು.
– ಹರ್ಷಕುಮಾರ್ ಕುಗ್ವೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿದ ಶಾಸಕ ಕೆ.ಎಸ್.ಬಸವಂತಪ್ಪ

ಸುದ್ದಿದಿನ,ದಾವಣಗೆರೆ:2024ರ ಮಾರ್ಚ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಉಚಿತ ಲ್ಯಾಪ್‌ಟಾಪ್ ವಿತರಿಸಿದರು.
ಶಾಸಕ ನಿವಾಸದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದ ಶಾಸಕರು, ಇದೇ ಮಾ.21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಮಕ್ಕಳು ಯಾವುದೇ ಆತಂಕ ಇಲ್ಲದೆ ಪರೀಕ್ಷೆ ಎದುರಿಸುವ ಮೂಲಕ ಉತ್ತಮ ಅಂಕಗಳನ್ನು ಪಡೆಯುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ, ಇಸಿಒ ಗೋವಿಂದರಾಜ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ : ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ಸುದ್ದಿದಿನಡೆಸ್ಕ್:ದೇಶಾದ್ಯಂತ 2 ಕೋಟಿ 20 ಲಕ್ಷ ಜನ, ಪಡಿತರ ಚೀಟಿಯ ಪ್ರಯೋಜನ ಪಡೆಯುತ್ತಿಲ್ಲ; ಅಂದಾಜು 34 ಲಕ್ಷ 60 ಸಾವಿರ ಚೀಟಿಗಳು ನಕಲಿ ಎಂಬ ಆರೋಪವಿದೆ.
ಅರ್ಹರನ್ನು ಪಡಿತರ ಚೀಟಿಗೆ ಸೇರಿಸಿ, ಅನರ್ಹರನ್ನು ಕೈಬಿಡುವಂತೆ, ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಲಾಗಿದೆ ಎಂದು, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಪ್ರಲ್ಹಾದ ಜೋಶಿ, ಸ್ಪಷ್ಟಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ‘ಅಂತ್ಯೋದಯ ಅನ್ನ ಯೋಜನೆ’ ಅಡಿ, ಕಳೆದ 2000ದಿಂದ ಆರ್ಥಿಕವಾಗಿ ದುರ್ಬಲರು ಹಾಗೂ ವಿಶೇಷ ಚೇತನರಿಗೆ, ಅತಿ ಕಡಿಮೆ ಬೆಲೆಯಲ್ಲಿ, ತಿಂಗಳಿಗೆ 35 ಕಿಲೋ ಆಹಾರ ಧಾನ್ಯ ನೀಡಲಾಗುತ್ತಿದೆ. ಪ್ರತಿ ಕುಟುಂಬಗಳಿಗೆ 35 ಕಿಲೋ ಪಡಿತರ ವಿತರಿಸಲಾಗುತ್ತಿದೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಅನ್ನಭಾಗ್ಯ ಯೋಜನೆ | ನೇರ ನಗದು ವರ್ಗಾವಣೆ ಬದಲು ಅಕ್ಕಿ ವಿತರಣೆ

ಸುದ್ದಿದಿನಡೆಸ್ಕ್:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದಲ್ಲಿರುವ ಅಂತ್ಯೋದಯ ಅನ್ನಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮುಖಾಂತರ ಹಣವನ್ನು ವರ್ಗಾಯಿಸುವ ಪ್ರಕ್ರಿಯೆಯ ಬದಲಾಗಿ ಫೆಬ್ರವರಿ-2025 ರ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ 05 ಕೆ.ಜಿ ಅಕ್ಕಿಯನ್ನು ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಿಸಲು ಸರ್ಕಾರ ಆದೇಶಿಸಿದೆ.
ಅದರಂತೆ ಫೆಬ್ರವರಿ-2025 ಮಾಹೆಯಲ್ಲಿ ವಿತರಿಸಬೇಕಾದ ಅಕ್ಕಿ ಪ್ರಮಾಣವನ್ನು ಸೇರಿ ಮಾರ್ಚ್-2025 ಮಾಹೆಯಲ್ಲಿ ವಿತರಿಸಲಾಗುವುದು. ಮಾರ್ಚ್ 1 ರಿಂದ ಮಾರ್ಚ್ 31 ರ ವರಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಬೇಕು.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಿ ಕ್ರಮಕೈಗೊಳ್ಳಲಾಗುವುದು. ಅನಧಿಕೃತವಾಗಿ ಕಾಳಸಂತೆಯಲ್ಲಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಕೈಗೊಳ್ಳಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ ಸಹಾಯವಾಣಿ ಸಂಖ್ಯೆ 1967 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸರ್ಕಾರಿ ವೈದ್ಯರು ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು ಕಡ್ಡಾಯ:ಸಚಿವ ಶರಣಪ್ರಕಾಶ್ ಪಾಟೀಲ್
-
ದಿನದ ಸುದ್ದಿ4 days ago
ಮಾರ್ಚ್ 15 ರಂದು ಬೃಹತ್ ಉದ್ಯೋಗ ಮೇಳ ; ಸಂಜೆ ಬಿಐಇಟಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಗೀತ ಪ್ರಭ
-
ದಿನದ ಸುದ್ದಿ6 days ago
ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಪೂರಕ : ಡಾ.ಬಾಬು
-
ದಿನದ ಸುದ್ದಿ5 days ago
ಸೌಜನ್ಯ ಸಾವು ; ನಾಡಿನಾದ್ಯಂತ ಜನಾಂದೋಲನ : ಹಿರಿಯ ಪತ್ರಕರ್ತ ಪುರಂದರ್ ಲೋಕಿಕೆರೆ
-
ದಿನದ ಸುದ್ದಿ4 days ago
ದಾವಣಗೆರೆಯಲ್ಲಿ ಉದ್ಯೋಗ ಮೇಳ | ಬನ್ನಿ ಭಾಗವಹಿಸಿ, ಉದ್ಯೋಗ ಪಡೆಯಿರಿ
-
ದಿನದ ಸುದ್ದಿ4 days ago
ಚನ್ನಗಿರಿ | ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ’
-
ದಿನದ ಸುದ್ದಿ4 days ago
ವಾಣಿಜ್ಯ ಮಳಿಗೆಗಳ ಹರಾಜು ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ4 days ago
ದಾವಣಗೆರೆ | ಪೊಲೀಸ್ ಪಬ್ಲಿಕ್ ಶಾಲೆಗೆ ನುರಿತ ಶಿಕ್ಷಕರಿಂದ ಅರ್ಜಿ ಆಹ್ವಾನ