ದಿನದ ಸುದ್ದಿ
ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2021/11/lokarudhi_someshwara_suddidina.jpg&description=ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2021/11/lokarudhi_someshwara_suddidina.jpg&description=ಲೋಕರೂಢಿಯ ಮೀರಿ, ನಿರಾಕರಣೆಯೊಳಗಿನ ಸೌಜನ್ಯದ ಧ್ವನಿ ಸೌಂದರ್ಯ', 'pinterestShare', 'width=750,height=350'); return false;" title="Pin This Post">
- ಡಾ.ಎನ್.ಕೆ.ಪದ್ಮನಾಭ
ಲೋಕದ ರೂಢಿಗಳ ಮೀರುವುದನ್ನು ಸಾಂಪ್ರದಾಯಿಕ ದೃಷ್ಟಿಕೋನವು ಅಕ್ಷಮ್ಯ ಎಂದು ಪರಿಗಣಿಸುತ್ತದೆ. ಅಷ್ಟೇ ಅಲ್ಲ, ಮೀರಿದರೆ ಆಗುವ ಅಪಾಯಗಳನ್ನೂ ನೆನಪಿಸುತ್ತಾ ಭಯ ಹುಟ್ಟಿಸುತ್ತಾ ಚೌಕಟ್ಟುಗಳ ವ್ಯಾಪ್ತಿಯನ್ನು ಹಿಗ್ಗಿಸುತ್ತದೆ.
ಸ್ಥಗಿತತೆ ಶಾಶ್ವತವಾಗಿರಬೇಕು ಎಂಬ ಹುಮ್ಮಸ್ಸಿನಲ್ಲಿ ಚಲನೆಯ ನಿಜದಜೀವಂತಿಕೆಯನ್ನುಇಲ್ಲವಾಗಿಸುವುದರಕಡೆಗೇಅತ್ಯುತ್ಸಾಹದಲ್ಲಿ ಮುನ್ನಡೆಯುತ್ತಿರುತ್ತದೆ. ಈಗ ಅದರದ್ದು ಕೇವಲ ಅತ್ಯುತ್ಸಾಹವಾಗಿಯಷ್ಟೇ ಉಳಿದಿಲ್ಲ. ಲೋಕರೂಢಿ ಮೀರುವವರನ್ನು ಬಲಿತೆಗೆದುಕೊಳ್ಳುವ ಮತ್ತು ನಿಶ್ಚಲ ಸ್ಥಿತಿಯನ್ನು ಹಿಂದೆಂದಿಗಿಂತಲೂದಟ್ಟವಾಗಿ ಪ್ರತಿಷ್ಠಾಪಿಸುವ ಕ್ರೌರ್ಯದರೂಪವನ್ನೂ ಪಡೆದುಕೊಂಡುಬಿಟ್ಟಿದೆ.
ಈ ಸಾಂಪ್ರದಾಯಿಕ ಜಾಡ್ಯವನ್ನು ಎದುರುಗೊಳ್ಳುವ, ಚಲನೆಯ ಜೀವಂತಿಕೆಗೆ ಜೀವತುಂಬುವ ದಾರಿಅತ್ಯಂತಕಠಿಣವಾದದ್ದು. ಈ ಹಂತದಲ್ಲಿ ಬಂಡಾಯದ ಆಕ್ರಾಮಕ ಆವೇಶಭರಿತಧ್ವನಿ ಮುಖ್ಯವೋಅಥವಾ ಸೌಜನ್ಯದ ಸಂಯಮಪೂರ್ಣ ಪ್ರಖರ ವೈಚಾರಿಕ ವಿವೇಚನೆಯ ಮಾದರಿ ಮಹತ್ವದ್ದೋಎಂಬುದನ್ನು ಸ್ಪಷ್ಟಪಡಿಸಿಕೊಳ್ಳಲೇಬೇಕಾಗುತ್ತದೆ.
ಇಲ್ಲದಿದ್ದರೆ ಸಾಂಪ್ರದಾಯಿಕತೆಯ ವಿಚಿತ್ರ ಹಠದತಕಧಿಮಿಗುಟ್ಟುವಿಕೆ ಮತ್ತಷ್ಟು ಹೆಚ್ಚಾಗುತ್ತದೆ. ಆಕ್ರಾಮಕ ಪರಿಭಾಷೆ ಮತ್ತುಆಕ್ರೋಶಭರಿತಆವೇಶಕ್ಕಿಂತ ಸೌಜನ್ಯದ ಧ್ವನಿಯೊಂದಿಗಿನ ಮನವರಿಕೆಯ ಮಾತೃತ್ವದ ಶೈಲಿಯು ಸಾಮಾಜಿಕ ಚಲನೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸುತ್ತದೆ.
ಚೇತನ ಸೋಮೇಶ್ವರಅವರ ‘ಲೋಕರೂಢಿಯ ಮೀರಿ’ ಕೃತಿಯೊಳಗೆ ಇಂಥದ್ದೊಂದು ಸದಾಶಯವಿದೆ. ಎ.ಎನ್.ಮೂರ್ತಿರಾವ್ ಎಂಬ ವೈಚಾರಿಕ ವ್ಯಕ್ತಿತ್ವ ಸಾಮಾಜಿಕ ಸಾಂಪ್ರದಾಯಿಕತೆಯನ್ನು ಎದುರುಗೊಂಡ ವಿವೇಚನಾತ್ಮಕ ವೈಚಾರಿಕ ಹೆಜ್ಜೆಗಳ ಕುರಿತಾದಪ್ರಸ್ತಾಪವು ಈ ಕೃತಿಯ ಸದಾಶಯವನ್ನು ಇನ್ನಷ್ಟು ಅಧಿಕೃತಗೊಳಿಸುವಲ್ಲಿ ಯಶಸ್ವಿಯಾಗಿದೆ. ಸದ್ಯದ ಕಾಲವು ಚಲನೆಗೆ ಹೊರಳಿಕೊಳ್ಳುವ ದಾರಿಯಾವುದಾಗಿರಬೇಕುಎಂಬುದನ್ನು ಮನಗಾಣಿಸುವಲ್ಲಿಯೂಗೆದ್ದಿದೆ.
ಈ ಕೃತಿಯೊಳಗೇ ಅಡಕವಾಗಿರುವ ‘ಲೋಕರೂಢಿ ಮೀರುವ’ ಸದಾಶಯಕ್ಕೆ ಸದ್ಯದ ವೈಚಾರಿಕ ಬಿಕ್ಕಟ್ಟುಗಳ ಸ್ವರೂಪವನ್ನು ಬದಲಿಸುವ ಶಕ್ತಿ ಇದೆ. ವಾಚಾಳಿತನದ ಗೀಳಿನ ಪರಿಭಾಷೆಯನ್ನೇ ಬಹುದೊಡ್ಡ ಬಂಡಾಯ ಎಂಬ ತಪ್ಪುಕಲ್ಪನೆಯನ್ನುಇಲ್ಲವಾಗಿಸುವಂಥಮಾರ್ಗದರ್ಶಿಸೂತ್ರ ಹೊಳೆಸುವ ಗುಣಲಕ್ಷಣವಿದೆ. ಬಂಡಾಯ ಕ್ಕಿಂತ ತಿಳಿವ ತಿಳಿಗೊಳಿಸುವ ಕಾಳಜಿಯುತ ತಿಳುವಳಿಕೆಯ ಅಗತ್ಯವನ್ನು ಪ್ರತಿಪಾದಿಸುವ ನೋಟಕ್ರಮವಿದೆ. ‘ದೇವರ’ ಅಸ್ತಿತ್ವ ಅಥವಾಧರ್ಮವಲ್ಲದ ‘ಧರ್ಮ’ – ಇವೆರಡರ ನಿರಾಕರಣೆಯೊಳಗೂ ಅಡಗಿರಬಹುದಾದ ಸೌಜನ್ಯದಧ್ವನಿಸೌಂದರ್ಯವನ್ನುಕಾಣಿಸುವ ನಿಜದ ಬೆಳಕಿದೆ.
ಲೋಕರೂಢಿಯನ್ನು ಮೀರುವುದುಅಗತ್ಯ ಮಾತ್ರವಲ್ಲ, ಅನಿವಾರ್ಯತೆಯೂ ಹೌದು ಎಂಬುದನ್ನುಚೇತನ ಸೋಮೇಶ್ವರ ಅವರು ಆಪ್ತವಾಗಿ ಸ್ಪಷ್ಟಪಡಿಸುತ್ತಾರೆ. ಎ.ಎನ್.ಮೂರ್ತಿರಾವ್‌ಅವರಂಥ ಪ್ರಖರ ವೈಚಾರಿಕ ಶಕ್ತಿಯನ್ನು ಪಿ.ಎಚ್.ಡಿ ಸಂಶೋಧನೆಯ ಕೇಂದ್ರವಾಗಿಸಿಕೊಳ್ಳುವುದೂ ಒಂದು ಬಗೆಯ ಮೀರುವಕ್ರಮವೇಆಗಿದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ಒಳಗೇ ಇರುವಕ್ಲೀಷಾ ಚೌಕಟ್ಟುಗಳನ್ನು ಒಡೆಯುವ ಮತ್ತು ಆ ಮೂಲಕ ವಿಶ್ವವಿದ್ಯಾಲಯಗಳೊಳಗಿನ ಸವಕಲು ರೂಢಿಗಳನ್ನು ಮೀರುವದಾರಿಯನ್ನೂತಮ್ಮ ಸಂಶೋಧನಾ ಪ್ರಬಂಧದ ಮೂಲಕ ಅವರು ಕಾಣಿಸಿದ್ದಾರೆ. ಇದನ್ನುಕೃತಿರೂಪದಲ್ಲಿ ಹೊರತಂದು ಸಾಮಾಜಿಕ ಚಲನೆಯ ಹಾದಿಯನ್ನು ‘ಅವಧಿ’ಯಜಿ.ಎನ್.ಮೋಹನ್‌ಅವರು ಅಧಿಕೃತಗೊಳಿಸಿದ್ದಾರೆ. ಈ ಹೆಜ್ಜೆಯು ಸಾಮಾಜಿಕ ಚಲನೆಯ ‘ಅವಧಿ’ಯನ್ನು ವಿಸ್ತರಿಸಿದ್ದರ ಸಂಕೇತವೂ ಹೌದು.
ಎಲ್ಲಾ ಕಾಲಗಳಲ್ಲೂ ವಿಜೃಂಭಿಸುವ ಲೋಕರೂಢಿಗಳೊಳಗಿನ ಟೊಳ್ಳುತನವನ್ನು ಪ್ರಶ್ನಿಸಿ ಅವುಗಳಿಗೆ ಪರ್ಯಾಯವಾದ ಆಲೋಚನೆಗಳನ್ನು ಹೊಳೆಸುವ ಪ್ರಯತ್ನಗಳು ನಡೆಯುತ್ತಲೇಇರುತ್ತವೆ. ಅವುಗಳಿಗೆ ಸಿಗುವ ಪ್ರತಿಸ್ಪಂದನೆ ಯಾವುದೇ ರೀತಿಯದ್ದೇ ಇರಲಿ, ಅವುಗಳು ತದನಂತರದ ಕಾಲಘಟಕ್ಕೆ ಬೇಕಾಗುವ ಮಾದರಿಗಳನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಾಹಿತ್ಯ ಮತ್ತು ಕಲಾ ಮಾಧ್ಯಮಗಳು ಇಂಥ ಮಾದರಿಗಳನ್ನು ಮುನ್ನೆಲೆಗೆತರುತ್ತವೆ. ಇವುಗಳ ಅಭಿವ್ಯಕ್ತಿಯು ಲೋಕೋದ್ಧಾರದ ನಿಜದದಾರಿಯನ್ನುಕಾಣಿಸುವ ಹೊಣೆಗಾರಿಕೆಯನ್ನುಅತ್ಯಂತ ಶ್ರದ್ಧೆಯಿಂದ ನಿರ್ವಹಿಸಿದೆ.
ಅಧಿಕಾರ ವ್ಯವಸ್ಥೆ, ರಾಜಕೀಯ ವಲಯ ಮತ್ತುರಂಜನೀಯಉದ್ಯಮದೇವರು, ಧರ್ಮ ಮತ್ತು ಮನುಷ್ಯ ಸಂಕುಚಿತತೆಯನ್ನೇತನ್ನ ಲಾಭಕ್ಕೆ ಬಳಸಿಕೊಂಡಾಗಲೆಲ್ಲಾ ಸಾಹಿತ್ಯ ಮತ್ತು ಕಲೆ ವಿವೇಚನೆಯಕಡೆಗೆ ಸಮಾಜವನ್ನು ಮುನ್ನಡೆಸುವಂಥ ಕಾಣ್ಕೆಗಳನ್ನು ನೀಡಿವೆ.
ಎ.ಎನ್.ಮೂರ್ತಿರಾವ್‌ಅವರ ಬರಹಗಳ ಹಿಂದಿನ ಸ್ಫೂರ್ತಿ ಈ ತರಹದ ಕಾಣ್ಕೆಗಳೇ. ಇವುಗಳನ್ನು ಗ್ರಹಿಸಿ ಒಂದು ಸ್ಪಷ್ಟ ವಿವೇಚನಾತ್ಮಕ ನಿಲುವು ತಳೆಯುವುದಕ್ಕೆ ‘ಲೋಕರೂಢಿಯ ಮೀರಿ’ ಕೃತಿ ನೆರವಾಗುತ್ತದೆ. ಈ ಕಾಣ್ಕೆಗಳನ್ನು ಸದ್ಯದ ವೈರುಧ್ಯಗಳ ನಡುವೆ ನೋಡುವ, ಆ ಮೂಲಕ ವ್ಯಕ್ತಿಗತವಾಗಿ ಸ್ಪಷ್ಟಗೊಳ್ಳುವುದಕ್ಕೆ ಚೇತನ ಸೋಮೇಶ್ವರಅವರ ವಿಶ್ಲೇಷಣೆಯಕ್ರಮವುಓದುಗರನ್ನು ಸಿದ್ಧಪಡಿಸುತ್ತದೆ.
ಈಗ ಅಧಿಕಾರ ಕೇಂದ್ರಗಳು ಮತ್ತು ಅವುಗಳನ್ನು ಪ್ರತಿನಿಧಿಸುವವರು ‘ಅಜ್ಜ ನೆಟ್ಟಆಲದ ಮರ’ದಆಶ್ರಯ ಪಡೆದುಅದರ ನೆರಳಿನ ಕೆಳಗೆ ವಿಕೃತಿಯ ಬಿಂಬಗಳನ್ನು ಮೂಡಿಸುತ್ತಲೇಇದ್ದಾರೆ. ಒಂದು ಕಡೆಗೆ ದೇವರು, ಧರ್ಮದಕುರಿತ ನಂಬಿಕೆಯಜಗತ್ತು. ಇನ್ನೊಂದುಕಡೆಗೆ ಇವುಗಳನ್ನು ನಿರಾಕರಿಸುವ ವೈಚಾರಿಕ ಲೋಕ. ಇವೆರಡನ್ನೂ ಪರಸ್ಪರ ವಿರೋಧಾತ್ಮಕವಾಗಿ ನೋಡಬೇಕೇ ಅಥವಾ ಒಂದನ್ನೊಂದು ಅನುಸಂಧಾನಗೊಳಿಸಿಕೊಂಡು ವರ್ತಮಾನವನ್ನು ಸುಂದರವಾಗಿಸಿಕೊಳ್ಳುವುದರ ಕಡೆಗೆಗಮನಹರಿಸಬೇಕೇ ಎಂಬ ದ್ವಂದ್ವಕ್ಕೆ ಈ ಕೃತಿ ಪರಿಹಾರ ಹೇಳುತ್ತದೆ.
ನಂಬಿಕೆ ಮತ್ತು ವೈಚಾರಿಕತೆಇವೆರಡರ ನಡುವಿನ ಅನುಸಂಧಾನಾತ್ಮಕ ನಿಕಷವು ಸಮಾಜಕ್ಕೆ ಬೇಕಾದ ಒಳನೋಟಗಳನ್ನು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ. ವಚನ, ದಾಸ ಮತ್ತುತತ್ವಪದ ಸಾಹಿತ್ಯ ಪ್ರತಿಪಾದಿಸಿದ್ದು ಈ ತರಹದ ಒಳನೋಟಗಳನ್ನೇ. ನಂಬಿಕೆ ಮೌಢ್ಯಕ್ಕೆತಿರಗುದ ಹಾಗೆ ನೋಡಿಕೊಂಡ ಒಳನೋಟಗಳಿವು. ಇವನ್ನು ಸರಿಯಾಗಿ ಅರ್ಥೈಸಿಕೊಂಡ ಕಾರಣಕ್ಕಾಗಿಯೇ ಈ ದೇಶವು ವೈವಿಧ್ಯತೆಯ ನೆಲೆಯಾಗಿದೆ. ಇದನ್ನು ಗೊತ್ತುಮಾಡಿಕೊಳ್ಳುವುದಕ್ಕೆ ಈ ಕೃತಿಒತ್ತಾಸೆ ಮೂಡಿಸುತ್ತದೆ.
ದೇವಾಲಯಗಳು, ಧರ್ಮಗಳನ್ನು ಆಧರಿಸಿಕೊಂಡು ಪ್ರತಿಷ್ಠಾಪಿತವಾಗುವ ಸಾಮಾಜಿಕ-ದೈವಿಕ ಸಂಸ್ಥೆಗಳು ನಿಜವಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಾಗ ಲೋಕರೂಢಿಗಳನ್ನೇ ಆಶ್ರಯಿಸುತ್ತವೆ. ಬಹುಹಿಂದಿನಿಂದಲೂ ನಡೆದುಕೊಂಡು ಬಂದ ಸಾಂಪ್ರದಾಯಿಕ ವಿಧಿವಿಧಾನಗಳನನ್ನು ವೈಭವೀಕರಿಸಿ ದೇವರ ಪರಿಕಲ್ಪನೆಯನ್ನು ಮೌಢ್ಯಕ್ಕೆತಿರುಗಿಸುತ್ತವೆ.
ನಿಷ್ಠುರ ವಿಚಾರವಾದಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತುಧರ್ಮನಿಷ್ಠ ಮಹಾತ್ಮಾಗಾಂಧೀಜಿ ಅವರ ನಡುವಿನ ಸಂವಾದ ನಂಬಿಕೆಯಜಗತ್ತನ್ನುಗ್ರಹಿಸುವ ಮಾದರಿಯನ್ನು ಸೃಷ್ಟಿಸಿದೆ. ನಂಬಿಕೆಯಜಗತ್ತಿನ ಬೆಂಬಲದಲ್ಲಿಜನರಉದ್ಧಾರದ ಆದರ್ಶೀಕೃತ ಆಲೋಚನೆ ಗಾಂಧೀಜಿಅವರದ್ದಾಗಿತ್ತು.
ವಾಸ್ತವವಾದಿ ಅಂಬೇಡ್ಕರ್‌ಅವರ ವೈಚಾರಿಕತೆಯು ನಂಬಿಕೆಯಜಗತ್ತು ಯಥಾಸ್ಥಿತಿವಾದವನ್ನು ಮುಂದುವರೆಸುವಂಥದ್ದು ಎಂಬುದನ್ನು ಪ್ರತಿಪಾದಿಸಿತ್ತು. ಈಗ ಅಂಬೇಡ್ಕರ್ ಅವರ ಗ್ರಹಿಕೆಯಂತೆಯೇ ನಂಬಿಕೆಯ ಜಗತ್ತು ಉಳ್ಳವರ ಸ್ವತ್ತಾಗಿದೆ. ಜಾತಿ ಪ್ರಾಬಲ್ಯದ ಬೇರುಗಳನ್ನು ಗಟ್ಟಿಗೊಳಿಸಿದೆ.
ಅಸಮಾನತೆಯನ್ನುಇನ್ನಷ್ಟು ವಿಸ್ತರಿಸುತ್ತಲೇ ಇದೆ. ಸಾಮಾಜಿಕ ಸ್ಥಗಿತತೆಯನ್ನು ಪೋಷಿಸುತ್ತಲೇಇದೆ. ಇಂಥ ಸಂದರ್ಭದಲ್ಲಿ ‘ಲೋಕರೂಢಿಯ ಮೀರಿ’ ಕನ್ನಡದ ದೃಷ್ಟಿಕೋನವನ್ನು ಎತ್ತರಿಸುವ ಪ್ರಜ್ಞೆಯಾಗುತ್ತದೆ. ಸಾಮಾಜಿಕ ಚಲನೆಗೆ ಬೇಕಾಗುವ ಮುನ್ನುಡಿಯಾಗುತ್ತದೆ.
ಮೂರ್ತಿರಾಯರಚಿಂತನೆಯನ್ನು ವಿಶ್ಲೇಷಿಸುತ್ತಾಚೇತನ ಸೋಮೇಶ್ವರಅವರುಅನನ್ಯ ಹೊಳಹುಗಳನ್ನು ಹೊಳೆಸುವ ಮಾದರಿಕೃತಿಯನ್ನು ರಚಿಸಿದ್ದಾರೆ. ‘ಲೋಕರೂಢಿಯ ಮೀರಿ’ ಶೀರ್ಷಿಕೆಯ ಅನನ್ಯಾರ್ಥಅನ್ವರ್ಥಕತೆಗೆ ಸಾಕ್ಷಿಯಾಗಿಇಲ್ಲಿಯ ವಿವಿಧ ಅಧ್ಯಾಯಗಳಿವೆ. ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿರುವಂತೆ ಇಲ್ಲಿಹಿಂದಿನ ಚಿಂತನೆಗಳ ಕುರಿತಾದ ರೆಫರೆನ್ಸ್ಗಳ ಹೊರೆಗಳಿಲ್ಲ.
ಮೂರ್ತಿರಾಯರು ಮತ್ತು ಹಿಂದಿನ ಚಿಂತನೆಯ ಕ್ರಮಗಳನ್ನು ತಮ್ಮನಿಲುವುಗಳ ಸಮರ್ಥನೆಗೆ ಎಷ್ಟು ಬೇಕೋ ಅಷ್ಟು ಬಳಸಿಕೊಂಡು ಓದುಗರು ಈ ಕ್ಷಣಕ್ಕೆ ಹೇಗೆ ಯೋಚಿಸಬೇಕುಎನ್ನುವುದರಕಡೆಗೇ ಗಮನ ಕೇಂದ್ರೀಕರಿಸುತ್ತಾರೆ. ಅಭಿಮಾನಪೂರ್ವಕಆರಾಧನಾ ಮನೋಭಾವದ ಬದಲು ಮೂರ್ತಿರಾಯರ ಜೀವಧ್ವನಿಯಾಗಿದ್ದ ಚಿಕಿತ್ಸಕ ದೃಷ್ಟಿಕೋನವನ್ನೇ ಆಧರಿಸಿಕೊಂಡು ಚೇತನ ಸೋಮೇಶ್ವರಕೃತಿಯ ಒಳನೋಟಗಳನ್ನು ಕಟ್ಟಿದ್ದಾರೆ.
ಅವರು ಸಂಸ್ಕೃತಿಯನ್ನುಇಲ್ಲಿ ಮೌಲ್ಯನಿಷ್ಠ ಪರಿಕಲ್ಪನೆಯನ್ನಾಗಿಇಲ್ಲಿ ಬಿಂಬಿಸಿದ್ದಾರೆ. ಒಳಿತಿನ ಪರವಾಗಿ ನಿಂತು ಜಾತ್ಯಾತೀತವಾಗುವ ದಾರಿಯಾವುದು ಎಂಬುದನ್ನು ಮನಗಾಣಿಸಿದ್ದಾರೆ. ಮತ-ಧರ್ಮಗಳು ಜೀವಪರ ವೈಶಿಷ್ಟ್ಯವನ್ನು ಹಿಡಿದಿಟ್ಟಿದ್ದಾರೆ. ಸ್ವಾತಂತ್ರ್ಯದ ಒಳಗೇ ಇರುವಜೀವಂತಿಕೆಯನ್ನುಕಾಣಿಸುತ್ತಾರೆ.
ಸಮಾನತೆಯಗಮ್ಯವೇ ನಿರ್ಣಾಯಕಎಂಬುದನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. ಇಡೀ ಶೈಕ್ಷಣಿಕ ವ್ಯವಸ್ಥೆಯುಜ್ಞಾನದ ಮಹಾಮಾರ್ಗವಾಗಿ ಪುನರುತ್ಥಾನಗೊಳ್ಳುವ ಬಗೆಯನ್ನು ಚಿತ್ರಿಸಿದ್ದಾರೆ. ಅಲ್ಲದೇ ಈ ಮಹಾಮಾರ್ಗ ಲೋಕರೂಢಿಯೊಳಗಿನ ಮಿತಿಗಳನ್ನು ಮೀರುವ ವಿವೇಚನಾತ್ಮ ವೈಚಾರಿಕತೆಯನ್ನು ತಂದುಕೊಳ್ಳುವ ಪ್ರೇರಣೆಯೂ ಹೌದುಎಂದುದೃಢೀಕರಿಸುತ್ತಾರೆ. ಇವೆಲ್ಲ ಆಶಯಗಳು ಎ.ಎನ್. ಮೂರ್ತಿರಾಯರಚಿಂತನೆಯನ್ನು ಹೊಸ ಕಾಲದಲ್ಲಿ ಹೇಗೆ ಅನ್ವಯಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತವೆ.
ಈ ಕೃತಿಯನ್ನುಯಾಕೆಓದಬೇಕು? ಓದಲೇಬೇಕು.
ದೇವರು, ಧರ್ಮವನ್ನು ಸ್ವಯಂ ಲಾಭಕ್ಕೆ ಬಳಸಿಕೊಳ್ಳುವ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ, ನಂಬಿಕೆಯಜಗತ್ತನ್ನು ಕೈಗೊಂಬೆಯಾಗಿಸಿಕೊಂಡ ನಾಯಕರೆನ್ನಿಸಿಕೊಂಡ ನಾಯಕರಲ್ಲದವರ ಇಮೇಜಿನೊಳಗಿನ ಬಾಲಿಶತನವನ್ನುಅರಿಯುವುದಕ್ಕೆ. ದೇವರು ಎಂಬ ಅಮೂರ್ತ ಪರಿಕಲ್ಪನೆಯನ್ನು ಮಾನವೀಯಗೊಳಿಸಿಕೊಂಡು ಅದಕ್ಕೆಜೀವಪರತೆಯಜೀವಂತಿಕೆಯನ್ನು ತಂದುಕೊಳ್ಳುವುದಕ್ಕೆ.
ಅಸಮಾನತೆಯ ಅಂಶಗಳನ್ನೇ ಆಧರಿಸಿಕೊಂಡು ಸಂಘರ್ಷವನ್ನುಖಾಯಂ ಆಗಿರಿಸಿದ ವಿಧ್ವಂಸಕ ಶಕ್ತಿಗಳ ಹೆಜ್ಜೆಗಳನ್ನು ಗುರುತಿಸುವುದಕ್ಕೆ. ಎಲ್ಲಕ್ಕಿಂತ ಹೆಚ್ಚಾಗಿ ತರಹೇವಾರಿ ಮಿತಿಗಳೊಂದಿಗಿನ ಹತ್ತುಹಲವು ಲೋಕರೂಢಿಗಳನ್ನು ಮೀರಿ ನಿರ್ದಿಗಂತವಾಗಿಏರುವುದಕ್ಕೆ. ಅನಿಕೇತನದ ಹಾದಿಯಲ್ಲಿ ಸುದೀರ್ಘ ಪ್ರಯಾಣ ಕೈಗೊಳ್ಳುವುದಕ್ಕಾಗಿ.
(ವಿಳಾಸ:
ಡಾ.ಎನ್.ಕೆ.ಪದ್ಮನಾಭ
ಸಹಾಯಕ ಪ್ರಾಧ್ಯಾಪಕರು
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ ಸ್ನಾತಕೋತ್ತರಕೇಂದ್ರ
ಉಜಿರೆ )
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿಜ್ಞಾನ ವಿಭಾಗಕ್ಕೆ ಅಗ್ರಸ್ಥಾನ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲೆಯ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಒಟ್ಟಾರೆ ಶೇಕಡ 81.99 ರಷ್ಟು ಸಾಧನೆ ಮಾಡಿದ್ದು, ರಾಜ್ಯದಲ್ಲಿ 25 ನೇ ಸ್ಥಾನ ಪಡೆದಿದೆ. ಈ ಬಾರಿಯೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಅತಿ ಹೆಚ್ಚು ಶೇಕಡ 90.91 ರಷ್ಟು ಫಲಿತಾಂಶ ಪಡೆದು ಮೇಲುಗೈ ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 20,810 ವಿದ್ಯಾರ್ಥಿಗಳ ಪೈಕಿ 16,046 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇಕಡ 77.11 ರಷ್ಟು ಹಾಗೂ ಹೊಸದಾಗಿ ಪರೀಕ್ಷೆ ಬರೆದ (Freshers) 18,949 ವಿದ್ಯಾರ್ಥಿಗಳಲ್ಲಿ 15,540 ಮಂದಿ ಉತ್ತೀರ್ಣರಾಗಿದ್ದಾರೆ ಶೇಕಡ 82.01 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶದ ವಿಶ್ಲೇಷಣೆ
ವಿಜ್ಞಾನ ವಿಭಾಗ (Science): ಜಿಲ್ಲೆಯಲ್ಲಿ ಅತಿ ಹೆಚ್ಚು ಸಾಧನೆ ಈ ವಿಭಾಗದಲ್ಲಿ ದಾಖಲಾಗಿದೆ. ಒಟ್ಟು 12,536 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,936 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 87.24). ಹೊಸ ವಿದ್ಯಾರ್ಥಿಗಳ ಪೈಕಿ 11,770 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 10,736 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 90.91 ರಷ್ಟು ಅದ್ಭುತ ಫಲಿತಾಂಶ ಬಂದಿದೆ.
ವಾಣಿಜ್ಯ ವಿಭಾಗ (Commerce)
ಈ ವಿಭಾಗದಲ್ಲಿ ಹಾಜರಾದ 4,295 ವಿದ್ಯಾರ್ಥಿಗಳಲ್ಲಿ 3,075 ಮಂದಿ ಉತ್ತೀರ್ಣರಾಗಿದ್ದಾರೆ (ಶೇ. 71.59). ಹೊಸ ವಿದ್ಯಾರ್ಥಿಗಳ ಪೈಕಿ 3858 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2960 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 76.72 ರಷ್ಟು ಫಲಿತಾಂಶ ಬಂದಿದೆ.
ಕಲಾ ವಿಭಾಗ (Arts): ಕಲಾ ವಿಭಾಗದಲ್ಲಿ ಒಟ್ಟು 3,979 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 2,035 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ (ಶೇ. 51.14). ಹೊಸ ವಿದ್ಯಾರ್ಥಿಗಳ ಪೈಕಿ 3321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1880 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಶೇ. 56.61 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ವಿಜ್ಞಾನ ವಿಭಾಗವು ಪ್ರಥಮ ಸ್ಥಾನದಲ್ಲಿದ್ದರೆ, ವಾಣಿಜ್ಯ ಮತ್ತು ಕಲಾ ವಿಭಾಗಗಳು ನಂತರದ ಸ್ಥಾನ ಪಡೆದಿವೆ ಎಂದು ಉಪ ನಿರ್ದೇಶಕ ಪಳಿನಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ
ಸುದ್ದಿದಿನ,ದಾವಣಗೆರೆ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಇಂದು ನಡೆದ ಉಪ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಒಟ್ಟಾರೆ ಶೇ. 68.55ರಷ್ಟು ಮತದಾನ ದಾಖಲಾಗಿದೆ.
ಬೆಳಿಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಮತದಾರರು ಉತ್ಸಾಹದಿಂದ ಸರದಿಯಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಪೊಲೀಸ್ ಬಂದೋಬಸ್ತ್ನಿಂದಾಗಿ ಯಾವುದೇ ಅಹಿತಕರ ಘಟನೆಗಳಿಲ್ಲದೆ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಿತು.
ಯುವಕರು ಹಾಗೂ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಪಡೆಯ ಸಹಕಾರದೊಂದಿಗೆ ಮತದಾನ ಪ್ರಕ್ರಿಯೆಯು ಸುಗಮವಾಗಿ ಜರುಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
ಸುದ್ದಿದಿನಡೆಸ್ಕ್:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹದಡಿ ಗ್ರಾಮದ ಮತಗಟ್ಟೆಯಲ್ಲಿ ತೃತೀಯ ಲಿಂಗತ್ವ ಮತದಾರರು ಮತಗಟ್ಟೆಗೆ ಆಗಮಿಸಿ ಸಂತೋಷದಿಂದ ಮತ ಚಲಾಯಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಎಂಬ ಸಂದೇಶವನ್ನು ಸಾರಿದ ಕ್ಷಣ! ತಮ್ಮ ಅಮೂಲ್ಯ ಮತದಾನದ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಿದ ತೃತೀಯ ಲಿಂಗತ್ವ ಮತದಾರರಿಗೆ ಅಭಿನಂದನೆಗಳು ಎಂದು ಜಿಲ್ಲಾ ಪಂಚಾಯತ್ ಸಿಇಓ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ7 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ಅಂತರಂಗ4 days agoಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
-
ದಿನದ ಸುದ್ದಿ7 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ2 days agoಸಮಾನತೆಯ ಸಂಭ್ರಮ | ಹದಡಿಯಲ್ಲಿ ತೃತೀಯ ಲಿಂಗತ್ವ ಮದಾರರಿಂದ ಮತಚಲಾವಣೆ
-
ದಿನದ ಸುದ್ದಿ3 days agoಸುಸೂತ್ರ ಮತದಾನಕ್ಕೆ ಜಿಲ್ಲಾಡಳಿತದ ಸಕಲ ಸಿದ್ಧತೆ
-
ದಿನದ ಸುದ್ದಿ3 days agoಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಪರಿಶಿಷ್ಟ ಪಂಗಡದ ಮಕ್ಕಳಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ: ಅರ್ಜಿ ಆಹ್ವಾನ
-
ದಿನದ ಸುದ್ದಿ14 hours agoದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ: ಶೇ. 68.55ರಷ್ಟು ಮತದಾನ

