ದಿನದ ಸುದ್ದಿ
ಸಾಹುಕಾರಿಕೆ ಎಂದರೆ..!
- ಸುರೇಶ ಎನ್ ಶಿಕಾರಿಪುರ ಶಿಕಾರಿಪುರ
ಸಾಹುಕಾರಿಕೆ ಎಂದರೆ ಸರಳತೆ ಸೌಜನ್ಯ ಕಾರುಣ್ಯ ಪೂರ್ಣದೃಷ್ಠಿ ಮನುಷ್ಯಪ್ರೇಮ ಎಂಬುದನ್ನು ಸತೀಶ್ ಜಾರಕಿಹೊಳಿ ಅವರನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅನ್ನಿಸದೇ ಇರದು. ಆ ಕಾರಣಕ್ಕಾಗಿಯೇ ಬೆಳಗಾವಿಯ ಜನತೆ ಜಾತಿ ಭೇದ ಬದಿಗಿಟ್ಟು ಮತಹಾಕಿದ್ದಾರೆ.
ಚುನಾವಣೆ ಇರಲಿ ಇಲ್ಲದಿರಲಿ ತನನ್ನು ಯಾರೆಷ್ಟೇ ಕಟುವಾಗಿ ಟೀಕಿಸಲಿ ಅವಮಾನಕರವಾಗಿ ಮಾತನಾಡಲಿ ಎಲ್ಲರಿಗೂ ಶಾಂತಿಯಿಂದಲೇ ವಿವೇಕಯುತವಾದ ಪ್ರತಿಕ್ರಿಯೆಯನ್ನು ಸಭ್ಯತೆಯ ಎಲ್ಲೆ ಮೀರದೆ ಕೊಡುತ್ತಾರೆ. ಮೌಢ್ಯದ ವಿರುದ್ಧದ ಹೋರಾಟ ಸಮಾನತೆಗಾಗಿ ಹೋರಾಟ ಯಾವುದೇ ಬಗೆಯ ದೌರ್ಜನ್ಯಗಳ ವಿರುದ್ಧ “ಮಾನವಬಂಧುತ್ವ ವೇದಿಕೆ” ಕಟ್ಟಿ ಅದನ್ನು ನಿರಂತರವಾಗಿ ಬೆಳೆಯಿಸಿ ಇವನಾರವ ಇವನಾರವ ಎಂದೆಣಿಸದೆ ಎಲ್ಲರನ್ನೂ ನಮ್ಮವರೆಂದು ಬಂಧುತ್ವವನ್ನು ಬೆಸೆಯುತ್ತಿರುವ ಈ ಕಾಲದ ವಿಶೇಷ ನಾಯಕ.
ರಾಜಕಾರಣ ಲಾಭದ ಸರಕಾಗಿರುವ ಈ ಕಾಲಘಟ್ಟದಲ್ಲಿ, ಪುರೋಹಿತಶಾಹಿ ಬಲಪಂಥೀಯ ಕೋಮುವಾದೀ ಜಾತಿವಾದಿ ಕ್ರಿಮಿಗಳು ಎಲ್ಲೆಡೆ ತುಂಬಿಕೊಂಡು ರಾಜಕೀಯ ಮೌಲ್ಯಗಳೇ ಕುಸಿದುಬಿದ್ದರುವ ಈ ಕಾಲಘಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಇಙತವರದ್ದೆಲ್ಲಾ ಏಕಾಂಗಿಹೋರಾಟ. ಮತ್ತೂ ಪ್ರವಾಹದ ವಿರುದ್ಧವೇ ಸೆಣೆಸುವ ಪ್ರವಾಹದಲ್ಲಿ ತನ್ನವರು ತೇಲಿ ಹೋಗಬಾರದು ಕೊಚ್ಚಿಹೋಗಬಾರದು ಎಂದು ರಕ್ಷಣೆಗೆ ನಿಲ್ಲುವ ಅಸಾಧಾರಣ ಸಾಹಸೀ ಹೋರಾಟ.
ಸತೀಶ್ ಜಾರಕಿಹೊಳಿಯವರು ಎಲ್ಲ ವೈಟ್ ಸ್ಕಾಲರ್ ರಾಜಕಾರಣಿಗಳಂತೆ ತಾವೂ ಒಂದು ಸ್ಟಾಂಡರ್ಡ್ ಮೇಂಟೇನ್ ಮಾಡಬಹುದಿತ್ತು ಆ ಎಲ್ಲಾ ಅವಕಾಶಗಳೂ ಅವರಿಗಿವೆ ಆದರೆ ತನ್ನ ಕಣ್ಣಮುಂದೆ ಏನೂ ಇಲ್ಲದ ಜನರಿದ್ದಾರಲ್ಲ ತಾನೂ ಅವರಂತೆಯೇ ಅವರೊಟ್ಟಿಗೇ ಅವರಿಗೆ ಅಣಕಿಸದ ಹಾಗೆ ಅವರ ಬಡತನ ದಾರಿದ್ರ್ಯ ಸ್ಥಿತಿಗಳನ್ನು ಅಣಕಿಸದ ಹಾಗಿರಬೇಕು ಅಂತಿಮವಾಗಿ ಮನುಷ್ಯ ಸರಳವಾಗಿ ಎಲ್ಲರವನಾಗಿ ಬದುಕಿ ಹೋಗಬೇಕೆಂಬ ಸಿದ್ಧಾಂತಕ್ಕೆ ಅದೂ ಹುಟ್ಟುಸಹಜವಾಗಿ ಬಂದ ಗುಣಕ್ಕೆ ಎರವಾಗದೆ ಸಾಗುತ್ತಿದ್ದಾರೆ.
ಚುನಾವಣೆ ಎಂದರೆ ಅವರಿಗೆ ಅದೊಂದು ಮಹಾತಂತ್ರ ಕುತಂತ್ರಗಳ ಆರೋಪ ಪ್ರತ್ಯಾರೋಪಗಳ ಜಿದ್ದಾಜಿದ್ದಿನ ಹಗೆತನ ಸಾಧಿಸುವ ಸಾಧನವಲ್ಲ ಅದೊಂದು ಜನಸೇವೆ ಮಾಡಲು ಸಂವಿಧಾನಬದ್ಧವಾಗಿ ಅವರ ಕೆಲಸ ಮಾಡಲು ಬೇಕಾಗಿರುವ ಒಂದು ಅವಷ್ಯಕತೆ. ಚುನಾವಣೆ ಗೆದ್ದವರಿಗೆ ಸಿಗುವುದು ‘ಅಧಿಕಾರ’ವಲ್ಲ ಅವಕಾಶ. ಆ ಅವಕಾಶ ವಯಕ್ತಿಕಕ್ಕಲ್ಲ ಜನತೆಗೆ ಸಮಾಜಕ್ಕೆ ದೇಶಕ್ಕೆ ವಿನಿಯೋಗಿಸಲು ಈ ವಿಚಾರದಲ್ಲಿ ನಂಬಿ ಇಟ್ಟುಕೊಂಡ ನಾಯಕ ಸಧ್ಯಕ್ಕೆ ಸಿಗುವುದು ಸತೀಶ್ ಜಾರಕಿಹೊಳಿ.
ಇದನ್ನೂ ಓದಿ |ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ, ಮಹಿಳೆಯರು ಹೆಚ್ಚು ಕಾಲ ಫಿಟ್ ಅಂಡ್ ಹೆಲ್ತಿಯಾಗಿರಲು ನಿಮ್ಮಆಯ್ಕೆ ಹೀಗಿರಲಿ..!
ಒಂದೆಡೆ ನಮ್ಮ ಕ್ಷೇತ್ರವನ್ನು ಬಿಟ್ಟುಹೋಗಬೇಡಿ ಎಂದು ಒತ್ತಾಯಿಸುತ್ತಿದ್ದ ಯಮಕನಮರಡಿಯ ಜನತೆ ಮತ್ತೊಂದೆಡೆ “ಸತ್ಯಪ್ಪ ಸೌಕಾರ್ರಿಗೆ ಓಟ್ ಹಾಕೋಕೆ ನಮಗೊಂದು ಅವ್ಕಾಶ ಸಿಕ್ಕೆದ” ಎಂದು ಅಭಿಮಾನದಿಂದ ಸ್ವಾಗತಿಸುತ್ತಿದ್ದ ಜನ ಇವರಿಬ್ಬರ ಪ್ರೀತಿ ಅಭಿಮಾನದಲ್ಲಿ ನಾಯಕ ಯಾರೆಡೆಗೆ ಬಾಗಬೇಕು ಎಂದು ಯೋಚಿಸುವುದು ಕಷ್ಟವಾಗಿಬಿಡುತ್ತದೆ.
ಆದರೂ ಒಂದು ಪಕ್ಷ ಅದಕ್ಕೊಂದು ವ್ಯವಸ್ಥೆ ಇರುತ್ತದೆ. ಪಕ್ಷದ ಸದಸ್ಯರು ಅದರ ಮಾತು ಕೇಳಬೇಕಾಗುತ್ತದೆ. ಪಕ್ಷದ ಹೈಕಮಾಂಡ್ ಮತ್ತು ನಾಯಕರ ಒತ್ತಡಕ್ಕೆ ಮಣಿದು ಬೆಳಗಾವಿ ಲೋಕಸಭಾ ಚುನಾವಣೆಗೆ ಸ್ಫರ್ಧಿಸಿ ನಿರೀಕ್ಷಿಸಿದಂತೆ ಬಲವಾದ ಪೈಪೋಟಿ ನೀಡಿ ಅಲ್ಪದರಲ್ಲಿ ಪರಾಜಿತರಾಗಿದ್ದಾರೆ. ಅಸಲಿಗೆ ಇದು ಪರಾಜಯವೇ ಅಲ್ಲ.
ಸತೀಶ್ ಜಾರಕೀಹೊಳಿ ಅವರನ್ನು ರಾಜಕೀಯವಾಗಿ ತುಳಿಯಲು ಹೂಡಿರುವ ಷಡ್ಯಂತ್ರ ಎನ್ನುವ ಮಾತು ಹರಿದಾಡುತ್ತಿತ್ತು ಅದು ಸತ್ಯವೇ ಆಗಿದ್ದರೆ ಷಡ್ಯಂತ್ರ ಹೂಡಿದ್ದವರಿಗೆ ಸೋಲಾಗಿದೆ. ಹಾಗೂ ಪಕ್ಷದಲ್ಲಿ ಸತೀಶ್ ಜಾರಕಿಹೊಳಿಯವರ ಶಕ್ತಿ ಏನೆಂಬುದು ಸಾಬೀತಾಗಿದೆ. ಎದುರು ಪಕ್ಷದವರ ಅಪಪ್ರಚಾರ ಸೋತಿದೆ. ಜನ ದಶಕಗಳ ಕಾಲ ಕಂಡ ಮನುಷ್ಯನ ಅಂತರಂಗಕ್ಕೆ ಸೋತು ಮತಹಾಕಿದ್ದಾರೆ. ಬಿಜೆಪಿ ಗೆದ್ದರೂ ಬೆದರುವಂತಾಗಿದೆ. ಅವರಿಗೆ ಗೆದ್ದರೂ ಇದು ಸೋಲೇ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದೇವದಾಸಿ ಪುನರ್ವಸತಿ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ದೇವದಾಸಿ ಪುನರ್ವಸತಿ ಯೋಜನೆಯಡಿ ತಾತ್ಕಾಲಿಕವಾಗಿ ಖಾಲಿ ಇರುವ ಹುದ್ದೆಗೆ ನೇರ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಇಲಾಖೆ, 14ನೇ ಮುಖ್ಯ ರಸ್ತೆ, ಕುವೆಂಪು ನಗರ, ಎಮ್.ಸಿ.ಸಿ ‘ಬಿ’ ಬ್ಲಾಕ್, ದಾವಣಗೆರೆ ಇಲ್ಲಿ ಅರ್ಜಿಗಳನ್ನು ಪಡೆದು ಫೆಬ್ರವರಿ 12 ರೊಳಗಾಗಿ ಕಚೇರಿ ಸಲ್ಲಿಸಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ಯೋಜನಾಧಿಕಾರಿಗಳ ಹುದ್ದೆ ಸಂಖ್ಯೆ-1, ನಿವೃತ್ತ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಎಂಎಸ್ಡಬ್ಲ್ಯೂ, ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮನಃಶಾಸ್ತ್ರದಲ್ಲಿ ಎಂ.ಎಸ್ಸಿ, ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ಚನ್ನಗಿರಿ ತಾಲ್ಲೂಕು ಯೋಜನಾ ಅನುಷ್ಟಾನಾಧಿಕಾರಿಗಳು ಹುದ್ದೆ ಸಂಖ್ಯೆ-1, ಬಿಎಸ್ಡಬ್ಲ್ಯೂ, ಬಿಎ ಇನ್ ಸೋಶಿಯಲಾಜಿ, ಎಂಎಸ್ಸಿ ಇನ್ ಸೈಕೋಲಾಜಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.
ದೇವದಾಸಿ ಪುನರ್ ವಸತಿ ಯೋಜನೆ, ಜಿಲ್ಲಾ ಕಚೇರಿ, ದಾವಣಗೆರೆ ಸ್ಥಳಕ್ಕೆ ದಾಖಲಾಧಿಕಾರಿಗಳ ಹುದ್ದೆ ಸಂಖ್ಯೆ-1, ಬಿಕಾಂ ಪದವಿ ಅಥವಾ ತತ್ಸಮಾನ ಪದವಿ ಹಾಗೂ ಕಡ್ಡಾಯವಾಗಿ ಕಂಪ್ಯೂಟರ್ ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ಜ್ಞಾನವನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-222117 ಸಂಪರ್ಕಿಸಬಹುದೆಂದು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಭರತ ಹುಣ್ಣಿಮೆ ಪ್ರಯುಕ್ತ 25 ಹೆಚ್ಚುವರಿ ವಿಶೇಷ ವಾಹನ
ಸುದ್ದಿದಿನ,ದಾವಣಗೆರೆ : ಜನವರಿ 31 ರಿಂದ ಫೆಬ್ರವರಿ 2 ರವರೆಗೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿ ಜರುಗಲಿರುವ ಭಾರತ ಹುಣ್ಣಿಮೆಗಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ, ದಾವಣಗೆರೆ ವಿಭಾಗದ ಘಟಕಗಳಿಂದ ರಾಜ್ಯದಾದ್ಯಂತ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ 25 ಹೆಚ್ಚುವರಿ ವಿಶೇಷ ವಾಹನ ಕಾರ್ಯಾಚರಣೆ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ದಿನದ ಸುದ್ದಿ
ಕಾಗದ ರಹಿತ ನೋಂದಣಿ ವ್ಯವಸ್ಥೆಯ ತರಬೇತಿ
ಸುದ್ದಿದಿನ,ದಾವಣಗೆರೆ:ಕಾಗದ ರಹಿತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಜಿಲ್ಲಾ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ದಸ್ತಾವೇಜು ಬರಹಗಾರರು, ವಕೀಲರು, ಕರ್ನಾಟಕ ಒನ್, ದಾವಣಗೆರೆ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರ ಸಿಬ್ಬಂದಿ ವರ್ಗದವರಿಗೆ ತರಬೇತಿ ಆಯೋಜಿಸಲಾಗಿದೆ.
ತರಬೇತಿಯು ಜ.30 ರಂದು ಹೊನ್ನಾಳಿ ಉಪ ನೋಂದಣಿ ಕಚೇರಿ ಆವರಣ, ಜ.31 ರಂದು ಚನ್ನಗಿರಿ ಉಪ ನೋಂದಣಿ ಕಚೇರಿ ಆವರಣ, ಫೆ.2 ರಂದು ಹರಿಹರ ಉಪ ನೋದಣಿ ಕಚೇರಿ ಆವರಣ, ಫೆ.3 ರಂದು ದಾವಣಗೆರೆ ಉಪ ನೋಂದಣಿ ಕಚೇರಿ, ಫೆ.4 ರಂದು ಜಗಳೂರು ಉಪ ನೋಂದಣಿ ಕಚೇರಿ ಆವರಣಗಳಲ್ಲಿ ಮಧ್ಯಾಹ್ನ 1 ರಿಂದ 2 ಗಂಟೆಯವರೆಗೆ ನಡೆಯಲಿದೆ ಎಂದು ಜಿಲ್ಲಾ ನೋಂದಣಾಧಿಕಾರಿ ತಿಳಿಸಿದ್ದಾರೆ.


