ಲೈಫ್ ಸ್ಟೈಲ್
ಕನ್ನಡಕದೊಳ್ಗಿಂದ ಕಾಣ್ತಿದೆ ಈ ಅಂದ..!
ಸೀಸನ್ ಯಾವುದೇ ಇರಲಿ, ಸನ್ ಗ್ಲಾಸ್ ಟ್ರಂಕ್ ಮಾತ್ರ ಎವರ್ಗ್ರೀನ್
ಬಿಸಿಲು, ಮಳೆ; ಚಳಿ ಖತುಮಾನ ಏನೇ ಇರಲಿ, ಸನ್ಗ್ಲಾಸ್ ಒಂದು ಸ್ಟೈಲ್ ಸ್ಟೇಟ್ ಮೆಂಟ್ ಆಗಿ ಹೋಗಿದೆ. ಸೆಲಿಬ್ರಿಟಿಗಳಂತೂ ಮೇಕಪ್ ಇಲ್ಲದೆ ಇರಬಹುದು, ಸನ್ ಗ್ಲಾಸ್ ಇಲ್ಲದೆ ಇರುವುದಿಲ್ಲ ನೋಡಿ. ಹಾಗಾದರೆ ಸೆಲಿಬ್ರಿಟಿ ಗಳ 2018ರ ಹಿಟ್ ಲಿಸ್ಟ್ ನ ಅಲಂಕರಿಸಿರುವ ಮೋಸ್ಟ್ ವಾಂಟೆಡ್ ಸನ್ಗ್ಲಾಸ್ ಗಳ ಪಟ್ಟಿ ನಿಮಗಾಗಿ ಇಲ್ಲಿದೆ..
• ಕಣ್ಣು ಕೋರೈಸುವ ಕ್ಯಾಟ್ ಐ ಕಮಾಲ್..!
2017ರ ಫ್ಯಾಷನಬಲ್ ಟ್ರೆಂಡ್ 2018 ಕ್ಕೂ ಮುಂದುವರಿದಿದೆ ಕ್ಯಾಟ್ ಐ ಕ್ರೇಜ್! ಒಮ್ಮೆ ಯಾದರೂ ಟ್ರೈ ಮಾಡಲೇಬೇಕು ಬೇಕು ಎನಿಸುವ ಈ ಕ್ಯಾಟ್ ಐ ಸನ್ಗ್ಲಾಸ್ ಗಳು ನೋಡಲು ವಿಭಿನ್ನ ,ಅತ್ಯಾಕರ್ಷಕ. ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಈ ಕಲರ್ಫುಲ್ ಕ್ಯಾಟ್ ಐ ಚಷ್ಮಾ ಹೆಂಗುಳೆಯರ ಹಾಟ್ ಫೇವರಿಟ್ ಟ್ರೆಂಡ್ ಆಗಿದೆ. ಹಿಂದಿನ ವರ್ಷಕ್ಕೆ ಸ್ವಲ್ಪ ಭಿನ್ನ ವಾಗಿ ಈ ಬಾರಿಯ ಕ್ಯಾಟ್ ಐ ಚಷ್ಮಾ ತೀವ್ರ ಚೀನಾದ ಎಲೆ ಆಕಾರದಲ್ಲಿ..ವಿಶಿಷ್ಟ ವಿನ್ಯಾಸಗಳಲ್ಲಿ ಲಲಿತಾಮಣಿಯರ ಹೃದಯ ಕದ್ದಿದೆ.
• ಮುತ್ತು, ವಜ್ರ ಗಳ ಹರಳಿನ ಸ್ಟೋನ್ ಸ್ಟಡಡ್ ಸನ್ ಗ್ಲಾಸ್ ಗಳು
ಈಗ ವಿಶ್ವ ದೆಲ್ಲೆಡೆ ಎಂಬಲಿಷ್ಡ್ ಸನ್ಗ್ಲಾಸ್ ಗಳದ್ದೇ ಹವಾ. ಕಲರ್ ಕಲರ್ ಕನ್ನಡಕದ ಸುತ್ತಲ ಮುತ್ತು, ಹರಳು, ಮೆಟಾಲಿಕ್ ಡಿಸೈನರ್ ಪೀಸ್ ಗಳಿರುವ ಫಂಕೀ ಕನ್ನಡಕಗಳ ಪ್ರಾಭಲ್ಯತೆ ಫ್ಯಾಷನ್ ಲೋಕದಲ್ಲಿ ಹೆಚ್ಚಾಗಿದೆ. ಪಾಶ್ಚಾತ್ಯ ದೇಶಗಳಲ್ಲಂತೂ ಈ ರೀತಿಯ ಎಂಬಲಿಷ್ಡ್ ಸನ್ಗ್ಲಾಸ್ ಗಳ ಕ್ರೇಜ್ ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ. ಈ ಬಾರಿಯ 2018 ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಗೆ ಇದು ಯುವ ಪೀಳಿಗೆಯ ಫ್ಯಾಷನ್ ಸ್ಟೇಟ್ ಮೆಂಟ್ ಆಗಿಹೋಗಿದೆ.
• ಮತ್ತೆ ಬಂದಿದೆ ದೊಡ್ಡ ಗಾತ್ರದ ಕಾಲಾ ಚಷ್ಮಾ
80 ರ ದಶಕದ ಸಿನಿಮೀಯಾ ಶೈಲಿಯ ದೊಡ್ಡ ದೊಡ್ಡ ಬಳೆ ಗಾತ್ರದ ಓವರ್ ಸೈಜ್ ಸನ್ಗ್ಲಾಸ್ ಗಳು ಫ್ಯಾಷನ್ ಲೋಕದಲ್ಲಿ ಭಾರೀ ಬೇಡಿಕೆ ಯಲ್ಲಿದೆ. ಪುಟ್ಟ ಪುಟ್ಟ ಸುಂದರ ಸುಕೋಮಲ ಕಣ್ಣುಗಳ ರಕ್ಷಣೆ ಗೆ ಹೇಳಿಮಾಡಿಸಿದಂತಿದೆ ಈ ದೊಡ್ಡ ಗಾತ್ರದ ಕಾಲಾ ಚಷ್ಮಾ. ಹಾಲಿವುಡ್, ಬಾಲಿವುಡ್, ಸ್ಯಾಂಡಲ್ ವುಡ್ ನ ತಾರಾಮಣಿಯ ಹಾಟ್ ಫೇವರಿಟ್ ಇದಾಗಿದೆ.
• ವೈರಲ್ ಆಯ್ತು ಕಲರ್ಫುಲ್ ಸನ್ ಗ್ಲಾಸ್ ನ ಜಾದೂ
ಕಲರ್ ಕಲರ್ ಸನ್ ಗ್ಲಾಸ್ ಈಗಿನ ಹೊಸ ಟ್ರೆಂಡ್ ಆಗಿದೆ. ಕೆಂಪು, ಹಳದಿ, ನೇರಳೇ..ನೀಲಿ ಬಣ್ಣದ ಸನ್ಗ್ಲಾಸ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹಳೆಯ ಕಪ್ಪು ಬಣ್ಣದ ಟ್ರೆಂಡ್ ಅನ್ನು ಈ ರಂಗಬಿರಂಗೀ ಕಲರ್ಫುಲ್ ಸನ್ ಗ್ಲಾಸ್ ಗಳು ನುಂಗಿಹಾಕಿವೆ. ಕಾಲೇಜು ವಿದ್ಯಾರ್ಥಿಗಳು, ಫ್ಯಾಷನ್ ಪ್ರಿಯರು ಈ ರೀತಿಯ ಬಣ್ಣ ಬಣ್ಣದ ಕನ್ನಡಕಗಳಿಗೆ ಮಾರುಹೋಗಿದ್ದಾರೆ.
• 2018 ರ ರಾಂಪ್ ನಲ್ಲಿ ಸೈ-ಫೈ ಸನ್ಗ್ಲಾಸ್ ಗಳ ದರ್ಬಾರು
2018ರ ಸ್ಪ್ರಿಂಗ್ ಸಮ್ಮರ್ ಫ್ಯಾಷನ್ ಫೆಸ್ಟಿವಲ್ ನಲ್ಲಿ ಗಮನ ಸೆಳೆಯುತ್ತಿಯುವ ಮತ್ತೊಂದು ವಿಶಿಷ್ಟ ವಿನ್ಯಾಸಗಳಲ್ಲಿ ” ಸೈ-ಫೈ” ಕನ್ನಡ ವೂ
ಒಂದು. ಸೈಂಟಿಫಿಕ್ ಲುಕ್ ನೀಡುವ ಈ ಕಟ್ಟಡಗಳು, ಬಾಹ್ಯಕಾಶದಲ್ಲಿ ಧರಿಸುವ ಕನ್ನಡ
ಗಳ ಮಾದರಿಯಲ್ಲಿ ವಿನ್ಯಾಸ ಗೊಳಿಸಲಾಗಿದೆ. ಈ ರೀತಿಯ ವಿಚಿತ್ರ ವಿನ್ಯಾಸಗಳು ಯುವ ಪೀಳಿಗೆಗೆ ಬಹಳ ಟ್ರೆಂಡೀ ಎನಿಸುತ್ತದೆ. ಬಹಳ ದುಬಾರಿ ಆದರೂ ಸೋಷಿಯಲ್ ಮೀಡಿಯಾ ದಲ್ಲಿ ಈ ಸೈ-ಫೈ ಸನ್ಗ್ಲಾಸ್ ಗಳು ಭಾರೀ ಸದ್ದು ಮಾಡುತ್ತಿವೆ.
• ಸದ್ದು ಮಾಡುತ್ತಿವೆ ಚೌಕಾಕಾರದ ಸ್ಕ್ವೇರ್ ಸನ್ಗ್ಲಾಸ್ ಗಳು
ಹಿಂದಿನ ವರ್ಷದ ಟಾಪ್ ಟ್ರೆಂಡ್ ಎನ್ನಿಸಿಕೊಂಡ ಚೌಕಾಕಾರದ ಸನ್ಗ್ಲಾಸ್ ಗಳು ಈ ವರ್ಷ ವುಡ್ ತಮ್ಮ ಬೇಡಿಕೆ ಉಳಿಸಿಕೊಂಡಿದೆ. ಸ್ಕ್ವೇರ್ ಶೇಡ್ಸ್
ಮೋಹ ಮಾಸಿಲ್ಲ, ಈಗಲೂ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ನ ಚೌಕಾಕಾರದ ಸನ್ಗ್ಲಾಸ್ ಮಾನಿನಿಯಯ ಮುಖಾರವಿಂದವನ್ನು ಅಲಂಕರಿಸಿದೆ.
• ಜಿಯೋಮೆಟ್ರಿಕ್ ವಿನ್ಯಾಸದ ರಂಗಬಿರಂಗೀ ಕನ್ನಡಕ
ಕೇವಲ, ಗೋಲಾಕಾರ ಮತ್ತು ಚೌಕಾಕಾರದ ಸನ್ಗ್ಲಾಸ್ ಗಳು ಮಾತ್ರ ವಲ್ಲದೇ, ವಿವಿಧ ಆಕಾರದ ಫಂಕೀ ಸನ್ಗ್ಲಾಸ್ ಗಳು ಯುವ ಪೀಳಿಗೆಯ ಮನಸ್ಸು ಗೆದ್ದಿದೆ. ಹಾರ್ಟ್, ಪೆಂಟಗನ್, ರೆಕ್ಕೆ, ಹೂ, ಹೀಗೆ ಹಲವಾರು ವಿಚಿತ್ರ ವಿನ್ಯಾಸಗಳು ಸನ್ಗ್ಲಾಸ್ ರೂಪದರ್ಶಿ ತಾಳಿವೆ. ಸದಾ ಹೊಸ ಫ್ಯಾಷನ್ನ ಅನ್ವೇಷಣೆಯಲ್ಲಿ ಇರುವ ಸ್ಟೈಲ್ ಪ್ರಿಯರು ಈ ಸನ್ಗ್ಲಾಸ್ ಗಳಿಗೆ ಮಾರುಹೋಗಿದ್ದಾರೆ.
• ಮಲ್ಟಿಕಲರ್ ಪ್ರೇಮ್ ಸನ್ಗ್ಲಾಸ್ ಗಳ ಮಜಾ ನೇ ಬೇರೆ
ಬ್ಲೂ ಫ್ರೇಮ್, ವೈಟ್ ಫ್ರೇಮ್ , ಮೆಟಾಲಿಕ್, ಹೀಗೇ ಹಲವಾರು ರೀತಿಯ ಫ್ರೇಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಒಂದು ವಿಶಿಷ್ಟ ವಿನ್ಯಾಸದಲ್ಲಿ ಮಲ್ಟಿಕಲರ್ ಫ್ರೇಮ್ ಸನ್ಗ್ಲಾಸ್ ಗಳು ತುಂಬಾ ನೇ ಟ್ರೆಂಡೀ ಹಾಗೂ ಕಲರ್ಫುಲ್ ಆಗಿದ್ದು ಸೆಲಿಬ್ರಿಟಿಗಳ ಹಿಟ್ ಲಿಸ್ಟ್ ನ ಅಲಂಕರಿಸಿವೆ.
ಲಾಸ್ಟ್ ಟಿಪ್
• ನಿಮ್ಮ ಮುಖದ ಆಕಾರಕ್ಕೆ ಹೊಂದುವಂತಹ ಸನ್ಗ್ಲಾಸ್ ನನ್ನ ಆಯ್ಕೆ ಮಾಡಿಕೊಳ್ಳಿ.
• ನೆನಪಿರಲಿ, ನೀವು ಧರಿಸುವ ಸನ್ಗ್ಲಾಸ್ ನಿಮ್ಮ ಸ್ಟೈಲ್ ಸ್ಟೇಟ್ ಮೆಂಟ್ ಆಗಿರುತ್ತದೆ.
• ನಿಮ್ಮ ಆಯ್ಕೆ ಯಾವುದೇ ಬಣ್ಣದ, ಆಕಾರದ ಸನ್ಗ್ಲಾಸ್ ಆಗಿದ್ದರೂ ಅದು ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಅನ್ನು ಎತ್ತಿ ಹಿಡಿಯುವಂತಿರಲಿ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days ago
ಕವಿತೆ | ಇಷ್ಟಂತೂ ಹೇಳಬಲ್ಲೆ..!
-
ದಿನದ ಸುದ್ದಿ7 days ago
ಮುಂದಿನ 5 ದಿನ ಗುಡುಗು ಸಹಿತ ಮಳೆ ; ಹವಾಮಾನ ಇಲಾಖೆ ಮುನ್ಸೂಚನೆ
-
ದಿನದ ಸುದ್ದಿ5 days ago
ತುಂಗಭದ್ರಾ ಬೋರ್ಡ್ ಅಧಿಕಾರಿಗಳ ಕಳ್ಳಾಟ : ಕಬ್ಬಿಣ ಕಳ್ಳತನ ಆರೋಪದಲ್ಲಿ ಕಣ್ಣಮುಚ್ಚಾಲೆ ಆಟ ; ಶಾಸಕರ ಹೆಸರು ಪ್ರಸ್ತಾಪ
-
ದಿನದ ಸುದ್ದಿ7 days ago
ಬಿಜೆಪಿ ನಾಯಕರಿಗೆ ಜನಾಕ್ರೋಶ ಯಾತ್ರೆ ಮಾಡುವ ನೈತಿಕತೆ ಇಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ5 days ago
25 ವರ್ಷಗಳ ನಂತರ ಸಾಕಾರಗೊಂಡ ಡಾ. ಬಿ.ಆರ್.ಅಂಬೇಡ್ಕರ್ ಭವನ ; ಅನುದಾನದ ಕೊರತೆ ಇಲ್ಲ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
-
ದಿನದ ಸುದ್ದಿ3 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ3 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ3 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ