ರಾಜಕೀಯ
‘ಗುಂಡಿಕ್ಕಿ ಕೊಲ್ಲಿ’ ಎನ್ನುವವರ ಮಧ್ಯೆ ಮಾನವೀಯತೆ..!

ಕೋವಿಡ್-19 ವೈರಸ್ ಇಡೀ ವಿಶ್ವವನ್ನೇ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಏಪ್ರಿಲ್ 7 ರಂದು ದಾವಣಗೆರೆಯಲ್ಲಿ ಕೊರೊನಾ ‘ಚಿಕಿತ್ಸೆಗೆ ಸಹಕರಿಸದ ತಬ್ಲೀಗಿಗಳಿಗೆ ಗುಂಡಿಕ್ಕಿದರೂ ತಪ್ಪಲ್ಲ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಹೇಳಿಕೆ ಇಡೀ ಮನುಕುಲವೆಂಬ ಹಾಲಿನ ಪಾತ್ರೆಗೆ ಹುಳಿ ಹಿಂಡುವ ಕಾರ್ಯವೇ ಸರಿ.
ಅವರ ಹೇಳಿಕೆ ನಂತರ ದೇಶದಲ್ಲಿ ಎರಡು ಘಟನೆಗಳು ನಡೆದವು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲೋಯೈತೊಲದಲ್ಲಿ 100ಕ್ಕೂ ಹೆಚ್ಚು ಕುಟುಂಬಗಳ ನಡುವೆ ವಾಸಿಸುತ್ತಿರುವ ಏಕೈಕ ಹಿಂದೂ ಕುಟುಂಬದ ಹಿರಿಯ ಜೀವ ವಿನಯ್ ಸಾಹಾ (90) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟರು. ಲಾಕ್‍ಡೌನ್ ಇರುವ ಸಂದರ್ಭದಲ್ಲಿ ಅಂತ್ಯ ಸಂಸ್ಕಾರ ಮಾಡುವುದು ಹೇಗೆಂದು ಮಕ್ಕಳು ಚಿಂತಿಸುತ್ತಿರುವ ಸಂದರ್ಭದಲ್ಲಿ ನೆರೆಮನೆಯ ಸದ್ದಾಂ ಶೇಖ್ ಸೇರಿದಂತೆ ಅನೇಕ ಮುಸ್ಲಂ ಸಹೋದರರು ನೆರವಾಗಿ ಹೆಗಲುಕೊಟ್ಟು ‘ರಾಮ್ ನಾಮ್ ಸತ್ಯ ಹೇ’ ಎಂದು ಜಪಿಸಿ ಸೌಹಾರ್ದ ಮೆರೆದರು.
ಇದೇ ರೀತಿ ಮುಂಬೈನಲಿ ಜೈನ ಸಮುದಾಯಕ್ಕೆ ಸೇರಿದ ಪ್ರೇಮಚಂದ್ ಬುದ್ಧಲಾಲ್ ಮಹಾವೀರ್ (68) ಮೃತಪಟ್ಟಾಗ ಲಾಕ್‍ಡೌನ್‍ನಿಂದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಅಕ್ಕಪಕ್ಕದ ಮನೆಯ ಮುಸ್ಲಿಂ ಜನಾಂಗದ ವ್ಯಕ್ತಿಗಳೇ ಅಂತ್ಯಕ್ರ್ರಿಯೆಯಲ್ಲಿ ಭಾಗವಹಿಸಿ ಸಹಾಯ ಮಾಡಿದ್ದರು. ಈ ಎರಡೂ ಘಟನೆಗಳು ‘ಮನುಷ್ಯ ಜಾತಿ ತಾನೊಂದೆ ಒಲಂ’ ಎಂದು ಪಂಪ ಹೇಳಿದ ಮಾತಿಗೆ ಸಾಕ್ಷಿಯಾಯಿತು.
ಈ ಸುದ್ದಿಯನ್ನು ಓದಿದಾಗ ಸುಮಾರು 17 ವರ್ಷಗಳ ಹಿಂದೆ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಮ್ಮ ಸ್ನೇಹಿತರೇ ಬಣ್ಣ ಹಚ್ಚಿದ ನಾಟಕ ‘ರಾವಿನದಿಯ ದಂಡೆಯಲ್ಲಿ’ ನೋಡಿದ ಪ್ರಸಂಗಗಳು ನೆನಪಾದವು. ಭಾರತ-ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲಿ ಭಾರತದ ಗಡಿಭಾಗದ ಮುಸ್ಲಿಂ ಸಹೋದರರು ಪಾಕಿಸ್ತಾನಕ್ಕೆ, ಪಾಕಿಸ್ತಾನದಲ್ಲಿದಲ್ಲಿನ ಹಿಂದೂಗಳು ಭಾರತಕ್ಕೆ ವಲಸೆಹೋಗುತ್ತಾರೆ. ಪಾಕಿಸ್ತಾನದಲ್ಲಿದ್ದ ಹಿಂದೂ ವೃದ್ಧೆ ರತನ್ ತಾಯಿ ಅಲ್ಲಿಯೇ ಉಳಿದುಕೊಂಡು ತನ್ನ ಮಾನವೀಯ ಸ್ಪರ್ಶದಿಂದ ಅಲ್ಲಿನ ಇಸ್ಲಾಂ ಜನರ ಹೃದಯವನ್ನು ಗೆಲ್ಲುತ್ತಾಳೆ.
ಆ ವೃದ್ಧೆಗೆ ವಯೋಸಹಜ ಕಾರಣಗಳಿಂದ ಮೃತಪಟ್ಟಾಗ ಮಕ್ಕಳು, ಸಂಬಂಧಿಕರು ಇಲ್ಲದ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಸಿಖಂದರ್ ಮಿರ್ಜಾ ಸೇರಿದಂತೆ ಅನೇಕ ಇಸ್ಲಾಂ ಧರ್ಮದ ಜನರು ಹಿಂದೂ ವಿಧಿ ವಿಧಾನದಂತೆ ‘ರಾಮ್ ನಾಮ್ ಸತ್ಯ ಹೇ’ ಎಂದು ಪಠಿಸಿ ಅಂತ್ಯಕ್ರಿಯೆ ಮಾಡುವ ಪಾತ್ರವು ಪ್ರೀತಿ ಅನುಕಂಪವನ್ನು ತುಂಬಿಕೊಂಡು ಬರುತ್ತದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಈ ನಾಟಕ ಬಿಂಬಿಸುತ್ತದೆ. ಶಾಂತವಾಗಿ ನಮ್ಮೊಳಗೊಂದು ಚಿಂತನೆಯನ್ನು ಬಿತ್ತುವ ಕೆಲಸವನ್ನು ಹಿಂದಿ ಲೇಖಕ ಅಸಗರ್ ವಹಾಜೀತ್ ಅವರು ರಚಿಸಿದ್ದಾರೆ.ಕನ್ನಡದಲ್ಲಿ ಡಾ. ತಿಪ್ಪೇಸ್ವಾಮಿ ತರ್ಜುಮೆ ಮಾಡಿದ್ದಾರೆ. ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ನಾಟಕ ರಾವಿನದಿಯ ದಂಡೆಯಲ್ಲಿ… ಧರ್ಮ, ಸೀಮೆಗಳನ್ನು ಮೀರಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ.
‘ಇವನಾರವ, ಇವನಾರ, ಇವನಾರವನೆಂದೆನಿಸದಿರಯ್ಯ,. ಇವ ನಮ್ಮವ, ಇವ ನಮ್ಮವ ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ. ನಿಮ್ಮ ಮನೆಯ ಮಗನೆಂದೆನಿಸಯ್ಯ.’ ಎಂದು 12ನೇ ಶತಮಾನದಲ್ಲೇ ಬಸವಣ್ಣವರು ವಚನದ ಮೂಲಕ ಸಮಾಜದ ಜನರಿಗೆ ಒಳಿತನ್ನು ಹೇಳಿದ್ದರು. ‘ಇಲ್ಲಿ ಯಾರು ಮುಖ್ಯರಲ್ಲ. ಯಾರೂ ಅಮುಖ್ಯರಲ್ಲ. ಎಲ್ಲರೂ ವಿಶ್ವಮಾನವರಾಗಿ ಬಾಳಿ’ ಎಂದು ಕುವೆಂಪು ಕರೆಕೊಟ್ಟರು. ಮಹಾತ್ಮ ಗಾಂಧಿಯವರು, ಮನುಷ್ಯ ಮತ್ತು ಪ್ರಾಣಿಗಳಿಗೆ ಇರುವ ಅಂತರವೆಂದರೆ ವಿಚಾರಶೀಲತೆ. ಆದರೆ ವಿಚಾರ ಶುದ್ಧಿಯನ್ನು ಕಾಪಾಡಿಕೊಳ್ಳಿ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟರು.
ಪ್ರವಾದಿ ಮುಹಮ್ಮದ್‍ರು ಹೇಳಿದಂತೆ ‘ಓ ಮಾನವರೇ, ಅರಬರು ಅರಬರೇತರಿಗಿಂತ, ಬಿಳಿಯರು, ಕರಿಯರಿಗಿಂತ ಅಥವಾ ಕರಿಯರು ಬಿಳಿಯರಿಗಿಂತ ಶ್ರೇಷ್ಠರಲ್ಲ. ದೈವ ನಿಷ್ಠೆಯೊಂದೇ ಶ್ರೇಷ್ಠತೆಗೆ ಮಾನದಂಡ’ ಮಾನವೀಯತೆ ಒಂದೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.
ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ, ಜೈನ, ಪಾರ್ಸಿ ಧರ್ಮಗಳೆಲ್ಲವೂ ಬೋಧಿಸುವುದೊಂದೇ ಅದೇ ಮಾನವ ಧರ್ಮ. ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಾಣುವಿನ ಉಪಟಳದಿಂದ ದಿನದಿಂದ ದಿನಕ್ಕೆ ವಿಶ್ವವನ್ನೇ ಸ್ತಬ್ಧಗೊಳಿಸುತ್ತಿರುವಾಗ ಇಂತಹ ಸಂದಿಗ್ದ ಸಮಯದಲ್ಲಿ ರಾಜಕಾರಣಿಗಳು ನಿಷ್ಕಾಮ ಕರ್ಮಗಳನ್ನು ಮಾಡುತ್ತಾ ಹೋದಹಾಗೆಲ್ಲ ಮನುಷ್ಯನ ಸಂಕಲ್ಪ ಶಕ್ತಿಯು ಉತ್ತರೋತ್ತರವಾಗಿ ಬೆಳೆಯುತ್ತಾ ಹೋಗಿ ಬಾಹ್ಯ ಕರ್ಮಗಳೆಲ್ಲವೂ ಕಡಿಮೆಯಾಗತೊಡಗುತ್ತವೆ.
ಪ್ರಚಾರ ಗಿಟ್ಟಿಸಿಕೊಳ್ಳಲು ನಾಲಿಗೆ ಹರಿಬಿಟ್ಟು ಕೀಳುಮಟ್ಟದ ಮಾತುಗಳನ್ನಾಡಿ ರಾಜಕೀಯ ಮಾಡುವ ಬದಲು ಕಣ್ಣಿಗೆ ಕಾಣದ ಕೋವಿಡ್-2 ಅನ್ನು ದೂರಮಾಡಲು ಯೋಜನೆಗಳನ್ನು ರೂಪಿಸಿ. ಸಾಮಾಜಿಕವಾಗಿ, ಮಾನಸೀಕವಾಗಿ, ಆರ್ಥಿಕವಾಗಿ ಅಧೀರಾಗಿರುವ ನಿಮ್ಮ ಜನರಿಗೆ ಮನೋಸ್ಥೈರ್ಯ ತುಂಬು ಕಾರ್ಯಮಾಡಿದರೆ ಮನುಕುಲಕ್ಕೆ ಅರ್ಥ ಬಂದೀತು.
ನಿಮಗೆ ವೋಟ್ ಹಾಕಿರುವ ಜನರಿಗೆ ನ್ಯಾಯ ಒದಗಿಸುವ ಕಾರ್ಯ ನಿಮ್ಮಿಂದಾಗಬೇಕು. ಅದು ಬಿಟ್ಟು ಬೇಕಾಬಿಟ್ಟು ಮಾತುಗಳನ್ನು ಹರಿಬಿಟ್ಟು ಮನುಷ್ಯತ್ವದ ವಿರುದ್ಧವಾಗಿ ನಡೆದುಕೊಂಡರೆ ಅದು ಶೋಭೆತರುವಂತದ್ದಲ್ಲ. ಇಂತಹ ಸಂದರ್ಭದಲ್ಲಿ ಜನಾಭಿಪ್ರಾಯವನ್ನು ಧಿಕ್ಕರಿಸುವ ಸರ್ಕಾರವನ್ನು ಮುಂದೊಂದು ದಿನ ಜನರೂ ಧಿಕ್ಕರಿಸುತ್ತಾರೆ ಎನ್ನುವ ಅರಿವು ನಿಮ್ಮಲ್ಲಿದ್ದರೆ ಒಳ್ಳೆಯದು.
ಅನೇಕ ರಾಜಕಾರಣಿಗಳು ಕೋವಿಡ್-19 ಸಂಕಷ್ಟದಲ್ಲಿ ಸಿಲುಕಿರುವ ಜನರಿಗೆ ನೆರವಾಗಲು ಅಕ್ಕಿ, ಬೇಳೆ ಇತರೆ ಅಗತ್ಯ ವಸ್ತುಗಳನ್ನು ಕೊಡವುದು ಸರಿ. ಆದರೆ ಆ ಪ್ಯಾಕೇಟ್‍ಗಳ ಮೇಲೆ ತಮ್ಮ ಫೋಟೋವನ್ನು ಹಾಕಿ ಪ್ರಚಾರಕ್ಕೋಸ್ಕರ ಜನರಿಗೆ ಸಹಾಯ ಮಾಡುವುದು ಜನನಾಯಕನ ಲಕ್ಷಣವೇ? ಕೊರೋನಾ ವೈರಸ್ ಜಗತ್ತನ್ನೇ ಬಾಧಿಸುತ್ತಿರುವ ಹೊತ್ತಿನಲ್ಲಿ ಮನುಷ್ಯ ಕೆಲ ಘಟನೆಗಳು ಮನುಷ್ಯನ ಮಧ್ಯೆ ಮಾನವೀಯ ಸಂಬಂಧಗಳನ್ನು ವೃದ್ಧಿಸುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿರಿಸಿ ಸುಳ್ಳು ಸುದ್ದಿ ಹಬ್ಬಿಸುವುದು, ಪ್ರಚೋದನಾಕಾರಿ ಮಾತನಾಡುವುದು ಶೋಭೆತರುವಂತದ್ದಲ್ಲ. ಮನುಷ್ಯ ಎಷ್ಟರಮಟ್ಟಿಗೆ ಇತರರ ಒಳ್ಳೆಯದಕ್ಕೆ ದುಡಿಯುತ್ತಾನೋ ಅಷ್ಟರ ಮಟ್ಟಿಗೆ ಅವನು ದೊಡ್ಡವನಾಗುತ್ತಾನೆ. ನಮ್ಮನ್ನು ಪ್ರೀತಿಸುವವರನ್ನು ನಾವು ಪ್ರೀತಿಸುವುದು ದೊಡ್ಡದಲ್ಲ. ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸುವುದು ದೊಡ್ಡತನ. ಪ್ರೇಮದ ಚೂರಿಯಿಂದ ಶಾಂತಿ ಸ್ಥಾಪನೆಯಾಗಬೇಕೇ ವಿನಃ ಗುಂಡಿನ ಬಲದಿಂದಲ್ಲ.

ದಿನದ ಸುದ್ದಿ
ಚೀಟಿ ವ್ಯವಹಾರದಲ್ಲಿ ಮೋಸ ; ಅತಿಆಸೆಗೆ ಬಲಿಯಾದ ಗಣಿನಾಡಿನ ಜನ

- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ನಗರದ ಗೋಲ್ಡ್ ಸ್ಮಿತ್ ರಸ್ತೆಯ ಕುಂಬಾರ ಓಣಿ ಬಳಿಯ ವಾಸವಿ ಸ್ವಗೃಹ ಹೋಮ್ ನೀಡ್ ಎಂಬ ಅಂಗಡಿ ತೆರೆದು ಅಲ್ಲಿಗೆ ಬಂದ ಗ್ರಾಹಕರಿಂದ ಚೀಟಿ ರೂಪದಲ್ಲಿ ಹಣ ಪಡೆದು ತಿಂಗಳಿಗೆ ಶೇ.25 ರಷ್ಟು ಲಾಭ ನೀಡುವುದಾಗಿ ವಂಚಿಸುತ್ತಿದ್ದ ವಿಶ್ವನಾಥ ಎಂಬ ವ್ಯಕ್ತಿಯನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿದ್ದರು.
ಚೀಟಿ ವ್ಯವಹಾರ ಮಾಡಿ ಮೋಸ
ಗ್ರಾಹಕರಿಗೆ ತಾವು ಕೊಡುವ ಹಣಕ್ಕೆ ಲಾಭಾಂಶವನ್ನು ಕೊಡುವುದಾಗಿ ನಂಬಿಸಿ ಗ್ರಾಹಕರಿಂದ ಹಣವನ್ನು ಪಡೆದು ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿದ್ದರು ಎಂದು ವಾಸವಿ ಸ್ವಗೃಹ ಹೋಮ್ ನೀಡ್ ಅಂಗಡಿಯ ಮಾಲಿಕ ಟಿ.ವಿಶ್ವನಾಥ(58)ರ ಮೇಲೆ ದೂರು ಬಂದ ಹಿನ್ನೆಲೆಯಲ್ಲಿ ಈತನನ್ನು ಪೊಲೀಸರು ಬಂಧಿಸಿ 19,38,500 ರೂ. ಮತ್ತು ಗ್ರಾಹಕರು ಆಪಾದಿತನಿಗೆ ಹಣ ಕಟ್ಟುತ್ತಿದ್ದ ಬಗ್ಗೆ ಇದ್ದ ಚೀಟಿಗಳು ಹಾಗು ವ್ಯವಹಾರಕ್ಕೆ ಬಳಸುತ್ತಿದ್ದ ಸಲಕರಣೆ ವಶಪಡಿಸಿಕೊಂಡಿದ್ದರು.
ಗ್ಯಾನಪ್ಪ ನೀಟಿದ ದೂರಿನಿಂದ ಪೊಲೀಸರು ಎಂಟ್ರಿ
ಸಹಕಾರ ಸಂಘಗಳ ಸಹಾಯಕ ನಿಬಂಧಕ ಗ್ಯಾನಪ್ಪ ನೀಡಿದ ದೂರಿನನ್ವಯ ಕಳೆದ ಆರು ತಿಂಗಳಿಂದಲೂ ಸರ್ಕಾರದಿಂದ ಅಥವಾ ಮಂಜೂರು ಮಾಡುವ ಯಾವುದೇ ಪ್ರಾಧಿಕಾರದಿಂದ ಪೂರ್ವ ಮಂಜುರಾತಿ ಪಡೆಯದೇ ಗ್ರಾಹಕರಿಗೆ ಮೋಸ ಮಾಡುವ ದುರುದ್ದೇಶದಿಂದ, ಗ್ರಾಹಕರಿಂದ ಅನಧಿಕೃತವಾಗಿ ಚೀಟಿಯ ರೂಪದಲ್ಲಿ ನಗದು ಹಣವನ್ನು ಕಟ್ಟಿಸಿಕೊಂಡು ಹಣಕ್ಕೆ 25% ಹಣವನ್ನು ಬೋನಸ್ ರೂಪದಲ್ಲಿ ಕೊಡುವುದಾಗಿ ನಂಬಿಸಿ ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡುತ್ತಿದ್ದ ವಿಶ್ವನಾಥ ವಿರುದ್ಧ ಆರೋಪ ಕೇಳಿಬಂತು.ಆಗ ಪೊಲೀಸರು ಎಂಟ್ರಿ ಆಗಿದ್ದಾರೆ.ಗಣಿನಾಡು ಬಳ್ಖಾರಿ ನಗರದಲ ಇಂತ ವ್ಯವಹಾರಗಳು ಬಹಳ ನಡೆಯುತ್ತೇವೆ ನಿಧಾನಗತಿಯಲ್ಲಿ ಮೋಸ ಹೋದ ಮೇಲೆ ಬೆಳಕಿಗೆ ಬರುತ್ತವೆ.
ಮೋಸಕ್ಕೆ ಬಲಿಯಾಗುವ ಜನರು
ಗಣಿನಾಡು ಬಳ್ಳಾರಿ ನಗರದಲ್ಲಿ ಜನರು ಆಸೆ,ಅತಿಆಸೆಯಿಂದ ಬೇಗ ಹಣವನ್ನು ಸಂಪಾದನೆ ಮಾಡಬಹುದು ಎಂದು ಈ ಮಾರ್ಗಗಳನ್ನು ಅನುಸರಿಸ ಮೋಸ ಹೋಗುತ್ತಾರೆ. ಟಿ.ವಿಶ್ವನಾಥ ಗ್ರಾಹಕರೊಂದಿಗೆ ನಿಶ್ಚಿತ ಅವದಿಗೆ ನಿಯತಕಾಲಿಕ ಕಂತುಗಳ ರೂಪದಲ್ಲಿ ಹಣದ ನಿಶ್ಚಿತ ಹಣವನ್ನು ಕೊಡಲು ಒಪ್ಪಿ ಚೀಟಿ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಯಾವುದೇ ಲಾಭಾಂಶವನ್ನು ಕೊಡದೇ ಚೀಟಿ ವ್ಯವಹಾರ ಮಾಡಿ ಮೋಸ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿತ್ತು.ಆದರೆ ಸಾರ್ವಜನಿಕರಿಂದ ನೊಂದವರಿಂದ ದೂರ ಬಾರದ ಹಿನ್ನೆಲೆಯಲ್ಲಿ ಆತನಿಗೆ ವಿಚಾರಣೆ ಮಾಡಿ ಠಾಣಾ ಬೇಲ್ ನೀಡಿ ನೋಟಿಸ್ ಕೊಟ್ಟು ಕಳುಹಿಸಲಾಗಿತ್ತು.
ಪೊಲೀಸರ ಪಾತ್ರ ಏನು ?
ಈ ಹಿಂದೆ ಗಣಿನಾಡು ಬಳ್ಳಾರ ನಗರದ ವಿವಿಧ ಠಾಣೆಗೆ ಸಂಬಂಧಿಸಿದಂತೆ ಹಣಕಾಸಿನ ವಿಚಾರವಾಗಿ ಮೋಸ ಮಾಡಿದ ಘಟನೆಗಳು ನಡೆದಿದೆ. ಆದರೆ ಮೋಸ ಮಾಡಿದ ವ್ಯಕ್ತಿಗಳಿಂದ ಮೋಸಕ್ಕೆ ಒಳಗಾದ ಜನರಿಗೆ ಹಣವನ್ನು ಕೊಡಿಸಿಲ್ಲ ಎನ್ನುವ ಆರೋಪ ಸಹ ಇದೆ. ಇಲ್ಲಿ ಪೊಲೀಸ್ ಇಲಾಖೆಯ ಪಾತ್ರ ಏನು ? ಎನ್ನುವ ಅಂಶ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಬಳಿಕ ವಿಶ್ವನಾಥ ಗ್ರಾಹಕರಿಗೆ ಮೊನ್ನೆ ನಿಮ್ಮ ಹಣ ವಾಪಾಸ್ ಕೊಡುವೆ ಅಂಗಡಿ ಬಳಿ ಬನ್ನಿ ಎಂದಿದ್ದರು. ಆದರೆ ನಿನ್ನೆ ವಿಶ್ವನಾಥ ಅಂಗಡಿ ಬಳಿ ತೆರಳಿದ ನೂರಾರು ಗ್ರಾಹಕರಿಗೆ ಬಿಗ್ ಶಾಕ್ ಕಾದಿತ್ತು. ವಿಶ್ವನಾಥ ಎಸ್ಕೇಪ್ ಆಗಿದ್ದ ಇದನ್ನ ಕಂಡ ಗ್ರಾಹಕರು ಕಣ್ಣೀರಾಕಿ ಬ್ರೂಸ್ ಪೇಟೆ ಪೋಲಿಸ್ ಠಾಣೆ ಬಳಿ ಜಮಾಯಿಸಿದ್ದಾರೆ. ಪೋಲಿಸ ಮುಂದೆ ತಾವು ಕಟ್ಟಿದ ಹಣದ ಬಗ್ಗೆ ವಿವರಿಸಿ ಠಾಣೆಯಲ್ಲಿ ಒಬ್ಬರಾಗಿ ಬರೆಸುತ್ತ ನಿಂತಿದ್ದಾರೆ.
ಶಾಸಕ ಭರತ್ ರೆಡ್ಡಿ ಭರವಸೆ
ಎಲ್ಲರೂ ಕಟ್ಟಿದ ಹಣ ಎರಡು ಕೋಟಿ ದಾಟುವ ಸಂಭವವಿದೆ ಎನ್ನಲಾಗುತ್ತಿದೆ. ನೊಂದ ಜನ ಠಾಣೆಯಿಂದ ನಿನ್ನೆ ಮದ್ಯಾಹ್ನ ಶಾಸಕ ನಾರಾ ಭರತ್ ರೆಡ್ಡಿ ಕಛೇರಿಗೆ ತೆರಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನರು ಕಣ್ಣೀರು ನೋಡದ ಶಾಸಕರು ನಾನೇ ಠಾಣೆಗೆ ಬರುವೆ ಎಂದು ಹೇಳಿ ಮಂಗಳವಾರ ಸಂಜೆ ಶಾಸಕ ನಾರಾ ಭರತ್ ರೆಡ್ಡಿ ಬ್ರೂಸ್ ಪೇಟೆ ಠಾಣೆಗೆ ಭೇಟಿ ನೀಡಿ ನ್ಯಾಯ ಕೊಡಿಸಿ ಆರೋಪಿಯನ್ನು ಕೊಡಲೇ ಬಂಧಿಸಿ ಎಂದು ಇನ್ಸ್ ಪೆಕ್ಟರ್ ಮಹಾಂತೇಶ್ ಗೆ ಸೂಚಿಸಿ ಜನರಿಗೆ ಸಾಂತ್ವನ ಹೇಳಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಜನರು ಬುದ್ಧಿವಂತರಾಗಿ
ಮನೆಯಲ್ಲಿ ಹಣ ಇದೆ ಎಂದು ಆಸೆ,ಅತಿಆಸೆಗೆ ಒಳಗಾಗದೇ ಗೊತ್ತಿಲ್ಲದ ಇರುವ ವ್ಯಕ್ತಿಗಳಿಗೆ ಕೊಟ್ಟಿ ಮೋಸ ಹೋಗಬಾರದು ಎನ್ನುವುದು ನಮ್ಮ ಆಸೆಯವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪಿ ಯು ಫಲಿತಾಂಶ | ವಿದ್ಯಾರ್ಥಿಗಳಿಗೆ ಹಾರೈಸಿದ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ

ಸುದ್ದಿದಿನ,ದಾವಣಗೆರೆ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಾಕರಾದ ಎಲ್ಲಾ ವಿದ್ಯಾರ್ಥಿಗಳಿಗೆ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸವಿತಾ ಗಣೇಶ್ ಹುಲ್ಲುಮನೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾವಣಗೆರೆ ಶೈಕ್ಷಣಿಕ ಜಿಲ್ಲೆ ಶೇ (73%) ರಾಜ್ಯಕ್ಕೆ 22ನೇ ಸ್ಥಾನ ಪಡೆದುಕೊಂಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣಕಾರದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ಸುದ್ದಿದಿನ,ದಾವಣಗೆರೆ:ಶುದ್ದ ಕುಡಿಯುವ ನೀರು ಪೂರೈಕೆಯಿಂದ ನೀರಿನಿಂದ ಬರುವ ಅನೇಕ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಬಹುದಾಗಿದೆ. ಈ ನಿಟ್ಟಿನಲ್ಲಿ 24*7 ಕುಡಿಯುವ ನೀರು ಪೂರೈಕೆಯ ಗ್ರಾಮವನ್ನಾಗಿ ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಅವರು ಸೋಮವಾರ ದಾವಣಗೆರೆ ತಾಲ್ಲೂಕಿನ ಕನಗೊಂಡನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮೀಣ ನೀರು, ನೈರ್ಮಲ್ಯ ವಿಭಾಗ, ಜಲಜೀವನ್ ಮಿಷನ್, ಕರ್ನಾಟಕ ಸುಸ್ಥಿರ ಕುಡಿಯುವ ನೀರು ಸರಬರಾಜು ಯೋಜನೆ ಹಾಗೂ ಕಾರ್ಯಾಚರಣೆ ನಿರ್ವಹಣೆ ಸಾಂಸ್ಥೀಕರಣದ ಬಲವರ್ಧನೆ ಅಂಗವಾಗಿ 24*7 ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ನೀಡಿ ಸಮಾರಂಭದಲ್ಲಿ ಮಾತನಾಡಿದರು.
ನಿರಂತರ ಕುಡಿಯುವ ನೀರಿನ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುವ ಜೊತೆಗೆ ಶುದ್ದತೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದಾಗಿದೆ. ದಿನದ 24 ಗಂಟೆಗಳ ಕಾಲವೂ ನೀರು ಲಭ್ಯವಾಗುವುದರಿಂದ ಇದನ್ನು ಮಿತಬಳಕೆ ಮಾಡಿ ವ್ಯರ್ಥವಾಗಿ ಹೋಗುವ ನೀರನ್ನು ತಡೆಗಟ್ಟಬೇಕು. ಪಂಚಾಯಿತಿ ಹಾಗೂ ಗ್ರಾಮ ನೀರು, ನೈರ್ಮಲ್ಯ ಸಮಿತಿಯಿಂದ ಕಾಲಕಾಲಕ್ಕೆ ನೀರಿನ ಪರೀಕ್ಷೆ ನಡೆಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದ್ದರಿಂದ ಯಾರು ಸಹ ಮನೆಯಲ್ಲಿ ಹೆಚ್ಚಿನ ನೀರು ಸಂಗ್ರಹಣೆ ಮಾಡಿಕೊಂಡು ವ್ಯರ್ಥ ಮಾಡಬಾರದು. ನೀರು ಸಂಗ್ರಹ ಮಾಡಿಕೊಳ್ಳುವುದರಿಂದ ಡೆಂಗ್ಯೂ ಸೇರಿದಂತೆ ಇತರೆ ಕಾಯಿಲೆಗಳಿಗೂ ಕಾರಣವಾಗಬಹುದೆಂದು ಗ್ರಾಮಸ್ಥರಿಗೆ ತಿಳಿಸಿದರು.
ಜಿಲ್ಲೆಯಲ್ಲಿನ 100 ಗ್ರಾಮಗಳಲ್ಲಿ 24*7 ನಿರಂತರ ಕುಡಿಯುವ ನೀರು ಪೂರೈಕೆ ಮಾಡಲು ಗುರಿ ಹೊಂದಲಾಗಿದ್ದು ಬರುವ ಆಗಸ್ಟ್ ಒಳಗಾಗಿ ಈ ಎಲ್ಲಾ ಗ್ರಾಮಗಳಿಗೂ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ. ಈಗಾಗಲೇ ನ್ಯಾಮತಿ ತಾಲ್ಲೂಕಿನ ದಾನಿಹಳ್ಳಿ ಗ್ರಾಮ ಮೊದಲಾಗಿದ್ದು ಕನಗೊಂಡನಹಳ್ಳಿ ಜಿಲ್ಲೆಯ ಎರಡನೇ ಗ್ರಾಮವಾಗಿದ್ದು ಇದು ರಾಜ್ಯದಲ್ಲಿ 15 ನೇ ಗ್ರಾಮವಾಗಿದೆ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಇವರು ಮಾತನಾಡಿ ನೀರು ಮಿತವಾದ ಸಂಪತ್ತು, ನಮ್ಮ ಸ್ವಂತ ವಾಹನವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವ ನೀತಿಯಲ್ಲಿ ಮನೆಯ ಮುಂದಿನ ಜಾಗವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಲ್ಲಿ ಮುರಿದುಹೋದಲ್ಲಿ ಆಯಾ ಮನೆಯವರೇ ಖರೀದಿಸಿ ಅಳವಡಿಸಿಕೊಂಡು ನೀರು ವ್ಯರ್ಥವಾಗಿ ಹರಿಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ. ಬಾಟಲಿ ನೀರನ್ನು ಹೆಚ್ಚು ಉಪಯೋಗಿಸದೇ ನಿಮ್ಮ ಮನೆಗೆ ಪೂರೈಕೆ ಮಾಡುವ ಶುದ್ದ ಕುಡಿಯುವ ನೀರನ್ನೇ ಬಳಕೆ ಮಾಡಿರಿ, ಇದರಲ್ಲಿ ಹೆಚ್ಚು ಮಿನರಲ್ಸ್‍ಗಳಿರುತ್ತವೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕನಗೊಂಡನಹಳ್ಳಿ ಗ್ರಾಮದಲ್ಲಿ 340 ನಲ್ಲಿಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ರೂ.97 ಲಕ್ಷ ವೆಚ್ಚ ಮಾಡಲಾಗಿದೆ. ಇಲ್ಲಿನ ನೀರನ್ನು 13 ವಿವಿಧ ಮಾದರಿಯಲ್ಲಿ ಆಗಿಂದಾಗ್ಗೆ ನೀರಿನ ಪರೀಕ್ಷೆ ಮಾಡಿ ಸರಬರಾಜು ಮಾಡಲಾಗುತ್ತದೆ. ಆದ್ದರಿಂದ ನೀರಿನ ಶುದ್ದತೆಯ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದ ಅವರು ನೀರು ನಿರ್ವಹಣೆಯನ್ನು ಸ್ವಸಹಾಯ ಗುಂಪುಗಳೇ ನಿರ್ವಹಣೆ ಮಾಡಲಿವೆ ಎಂದರು.
ವಿಶ್ವಬ್ಯಾಂಕ್ ಟಾಸ್ಕ್ ಪೋರ್ಸ್ ನ ಮರಿಯಪ್ಪ ಕುಳ್ಳಪ್ಪ, ಪೀಡ್ ಬ್ಯಾಕ್ ಸಂಸ್ಥೆ ಸಿಇಓ ಅಜಯ್ ಸಿಂಹ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾಕ್ಷಿ ಹಾಗೂ ವಿವಿಧ ಅಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ದಾವಣಗೆರೆ | ನಾಳೆ ಡಾ.ಬಾಬು ಜಗಜೀವನ ರಾಂ 118ನೇ ಜನ್ಮ ದಿನಾಚರಣೆ
-
ದಿನದ ಸುದ್ದಿ6 days ago
ಹಂಪಿ ವಿಶ್ವವಿದ್ಯಾಲಯದ 33 ನೇ ನುಡಿಹಬ್ಬ ; ನಾಡೋಜ ಗೌರವ ಪದವಿ ಪ್ರದಾನ
-
ದಿನದ ಸುದ್ದಿ5 days ago
ಮೇ11 ರಂದು ಗ್ರಾಮ ಪಂಚಾಯತಿ ಚುನಾವಣೆ
-
ದಿನದ ಸುದ್ದಿ6 days ago
ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಜಿ ಆಹ್ವಾನ
-
ಅಂಕಣ3 days ago
ಕವಿತೆ | ಚಳಿಗಾಲದ ಎರಡು ಜೀವರಸಗಳು
-
ದಿನದ ಸುದ್ದಿ3 days ago
ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತದೊಂದಿಗೆ ‘ಉಮ್ಮೀದ್ -2024’ ಕಾಯ್ದೆಯಾಗಿ ಜಾರಿ
-
ದಿನದ ಸುದ್ದಿ3 days ago
ಕನಗೊಂಡನಹಳ್ಳಿಗೆ 24/7 ನೀರು ಪೂರೈಕೆ | ಮಿತವಾಗಿ ಬಳಸಿ, ಭವಿಷ್ಯಕ್ಕೆ ಉಳಿಸಿ : ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್
-
ದಿನದ ಸುದ್ದಿ3 days ago
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ : ಅನುದಾನ ಬಿಡುಗಡೆಗೆ ಆರ್. ಅಶೋಕ್ ಒತ್ತಾಯ