Connect with us

ದಿನದ ಸುದ್ದಿ

ಭಾಗ-2 | ದೆಹಲಿ ಹೋರಾಟದ ಕೆಲವು ಅಸಲೀ ಸಂಗತಿಗಳು; ಕಿಸಾನ್ ಮೋರ್ಚಾ ಏನು ಹೇಳುತ್ತಿದೆ..?

Published

on

ಮುಂದುವರಿದ ಭಾಗ

ಪ್ರಶ್ನೆ: ಜನವರಿ 26ರಂದು ದೆಹಲಿಯೊಳಕ್ಕೆ ನುಗ್ಗಿ ಹೋದವರ ಕುರಿತು ಸಂಯುಕ್ತ್ ಕಿಸಾನ್ ಮೋರ್ಚ ನೆಗೆಟಿವ್ ಆಗಿ ಏಕೆ ಮಾತಾಡಿತು? ಕೆಂಪುಕೋಟೆಯ ಮೇಲೆ ಬಾವುಟ ಹಾರಿಸಿದರೆ ಏನು ತಪ್ಪು? ಇದರಲ್ಲಿ ಹುನ್ನಾರವಿದೆ ಎಂದು ಏಕೆ ಹೇಳಿದರು?

60 ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬೀದಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನಿಭಾಯಿಸುತ್ತಾ ಹೋರಾಟವೊಂದನ್ನು ನಡೆಸುತ್ತಾ ಹೋಗುವುದು ಬಹಳ ಸಂಕೀರ್ಣವಾದ ಜವಾಬ್ದಾರಿ. ಇದರ ಜೊತೆಗೆ ಕನಿಷ್ಠ ಒಂದೂವರೆ ಲಕ್ಷ ಟ್ರ್ಯಾಕ್ಟರ್ಗಳ, ಅಂದರೆ ಸುಮಾರು 5 ಲಕ್ಷ ಜನರು ಬಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ಮಾಡುವುದನ್ನು ಯೋಜಿಸಿದ್ದು ಇದೇ ಸಂಯುಕ್ತ್ ಕಿಸಾನ್ ಮೋಚರ್ಾ. ಸುಪ್ರೀಂಕೋರ್ಟ್ ಸೇರಿದಂತೆ ಯಾರೂ ಅದಕ್ಕೆ ಹಸಿರು ನಿಶಾನೆ ತೋರಿಸಿರಲಿಲ್ಲ.

ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಇದರ ಬಗ್ಗೆ ಉಲ್ಟಾ ಮಾತಾಡಿತ್ತು. ಆದರೆ ಅಂತಿಮವಾಗಿ ದೆಹಲಿ ಪೊಲೀಸರ ಜೊತೆ ನಡೆದ ಮಾತುಕತೆಯಲ್ಲಿ ಕೆಲವು ನಿರ್ದಿಷ್ಟ ಮಾರ್ಗಗಳ ಕುರಿತು ಪರಸ್ಪರ ಒಪ್ಪಿಗೆಗೆ ಬರಲಾಯಿತು. ಒಂದು ವೇಳೆ ಈ ಟ್ರ್ಯಾಕ್ಟರ್ ಮಾಚರ್್ ಸಂಪೂರ್ಣ ಅಂದುಕೊಂಡ ಹಾಗೆ ನಡೆದಿದ್ದರೆ 26ರ ಹಗಲು, ರಾತ್ರಿ ಅಷ್ಟೇ ಅಲ್ಲದೇ 27ರ ಬೆಳಿಗ್ಗೆಯವರೆಗೂ ಟ್ರ್ಯಾಕ್ಟರ್ ಸಾಲು ಮುಗಿಯುತ್ತಿರಲಿಲ್ಲ.

ಇದಲ್ಲದೇ ಫೆಬ್ರವರಿ 1ಕ್ಕೆ ಶಾಂತಿಯುತವಾಗಿ ಪಾಲರ್ಿಮೆಂಟ್ ಚಲೋವನ್ನೂ, ಜನವರಿ 25ರಂದು ಘೋಷಿಸಲಾಗಿತ್ತು. ಬಜೆಟ್ ಅಧಿವೇಶನ ಶುರುವಾಗುವ ದಿನ (26ಕ್ಕೆ ಬಂದವರಲ್ಲೂ ಲಕ್ಷಾಂತರ ಜನರು ಉಳಿದುಕೊಂಡು) ಪಾರ್ಲಿಮೆಂಟ್ ಚಲೋ ನಡೆಸುವುದು ಅವರ ಉದ್ದೇಶವಾಗಿತ್ತು. ಆದರೆ, ಈ ಮಧ್ಯೆ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿಯ ಕಡೆಯಿಂದ ಜನವರಿ 25ರಂದೇ ವಿಡಿಯೋ ಬಿಡುಗಡೆ ಮಾಡಿ ತಾವು ಜನವರಿ 26ರಂದು ಪೂರ್ವನಿಗದಿತ ಮಾರ್ಗದಲ್ಲಿ ಹೋಗುವುದಿಲ್ಲವೆಂದು ಘೋಷಿಸಿಯಾಗಿತ್ತು.

ಜೊತೆಗೆ ತಾವು ರಿಂಗ್ ರಸ್ತೆಯಲ್ಲೇ ಹೋಗುತ್ತೇವೆಂತಲೂ, ಕೆಂಪುಕೋಟೆಯ ಮೇಲೆ ಬಾವುಟ ಹಾರಿಸುತ್ತೇವೆಂತಲೂ ಹೇಳಿದ್ದರು. ಅವರು ಹಿಂದಿನಿಂದಲೂ ಸಂಯುಕ್ತ್ ಕಿಸಾನ್ ಮೋರ್ಚಾದಲ್ಲಿರಲಿಲ್ಲ. ಜೊತೆಗೆ ದೀಪ್ ಸಿಧುವೂ ಸಂಯುಕ್ತ್ ಕಿಸಾನ್ ಮೋರ್ಚಾದ ಭಾಗವಲ್ಲ.

ಆತ ಸದಾಕಾಲ ಇಲ್ಲಿನ ಸುಸಂಘಟಿತ ವಿಧಾನವನ್ನು ಹಾಳುಮಾಡುವ ಕೆಲಸ ಮಾಡುತ್ತಲೇ ಇದ್ದರು. ಒಂದು ಹಂತದಲ್ಲಿ ರೈತ ನಾಯಕರೊಬ್ಬರು ಈತ ಮತ್ತು ಈತನ ಗೆಳೆಯ ಲಖಾ ಸಿಧಾನಾ (ಈತ ಹಿಂದೆ ಗ್ಯಾಂಗ್ಸ್ಟರ್ ಆಗಿದ್ದು, ಈಗ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುತ್ತಾನೆ) ಇಬ್ಬರೂ ಈ ಹೋರಾಟದ ಶತ್ರುಗಳು ಎಂದು ಘೋಷಿಸಿದ್ದರು.

ಇದಕ್ಕೆ ಕಾರಣ, ಬಿಜೆಪಿ ಜೊತೆಗೂ ಇದ್ದ ಈ ಇಬ್ಬರು ಖಲಿಸ್ತಾನದ ಪರವಾಗಿ ಮಾತನಾಡುವುದು, ಭಿಂದ್ರನ್ವಾಲೆಯ ಮಾತುಗಳನ್ನು ಉಲ್ಲೇಖಿಸುವುದನ್ನು ಮಾಡುತ್ತಲಿದ್ದರು. ಪತ್ರಕತರ್ೆ ಬಖರ್ಾದತ್ ನಡೆಸಿದ ಸಂದರ್ಶನವೊಂದರಲ್ಲೂ ಈತ ಆ ಮಾತುಗಳನ್ನಾಡಿರುವುದನ್ನು ಕೇಳಬಹುದು. ಜೊತೆಗೆ ಲಕ್ಷಾಂತರ ಜನರ ಮನಸ್ಥಿತಿ, ತಯಾರಿ ಹಾಗೂ ಗೆದ್ದುಕೊಂಡೇ ವಾಪಸ್ಸು ಹೋಗಬೇಕು ಎಂಬ ಸರ್ವಾನುಮತದ ಅಭಿಪ್ರಾಯಗಳಿಗೆ ವ್ಯತಿರಿಕ್ತವಾಗಿ ನಿರಂತರವಾಗಿ ವ್ಯಕ್ತಿಗತ ಅನಿಸಿಕೆಗಳನ್ನು ಮುಂದಿಡುವುದು ದೀಪ್ ಸಿಧು ಪ್ರವೃತ್ತಿಯಾಗಿತ್ತು. ಸಂಯುಕ್ತ್ ಕಿಸಾನ್ ಮೋಚರ್ಾದ ಸರ್ವಾನುಮತದಿಂದ ಅಭಿಪ್ರಾಯಕ್ಕೆ ವಿರುದ್ಧವಾಗಿ ಈ ವ್ಯಕ್ತಿ ಜನವರಿ 25ರಂದೂ ಜನರನ್ನು ಉದ್ರೇಕಗೊಳಿಸಲು ಪ್ರಯತ್ನಿಸಿದ್ದರು.

ದೀಪ್ ಸಿಧುವಷ್ಟೇ ಅಲ್ಲದೇ, ಮೇಲೆ ಹೇಳಲಾದ ಇನ್ನೊಂದು ಸಂಘಟನೆಯ ಜನರು ಸಿಂಘು ಬಾರ್ಡರ್ನಲ್ಲಿ ಸೇರಿಕೊಂಡಿದ್ದ ನಿದರ್ಿಷ್ಟ ಸ್ಥಳವೂ ಅನುಮಾನಾಸ್ಪದವಾಗಿತ್ತು. ಸಂಯುಕ್ತ್ ಕಿಸಾನ್ ಮೋಚರ್ಾದ ಅಡಿಯಲ್ಲಿ ಸಂಘಟಿತರಾಗಿರುವ ಲಕ್ಷಾಂತರ ರೈತರಿಗೂ ದೆಹಲಿಗೂ ಮಧ್ಯೆ ಬ್ಯಾರಿಕೇಡ್ಗಳಿದ್ದವು. ಆ ಬ್ಯಾರಿಕೇಡ್ಗಳೀಚೆ ದೆಹಲಿ ಪೊಲೀಸರಿದ್ದರು.

ಅವರಿಗೂ ಈಚೆ ಈ ಸಂಘಟನೆಗೆ ಪ್ರತಿಭಟನೆ ಶುರುವಾದ 13 ದಿನಗಳ ನಂತರ ವಿಶೇಷ ಟೆಂಟ್ಗಳ ಸೌಲಭ್ಯದೊಂದಿಗೆ ಇರಲು ಅವಕಾಶ ಕಲ್ಪಿಸಲಾಗಿತ್ತು. ಅವರ ಪಕ್ಕ ಸುಲಭದಲ್ಲಿ ತೆಗೆಯಬಹುದಾದ ಬ್ಯಾರಿಕೇಡ್ಗಳಿದ್ದವು. ಇವರು ಜನವರಿ 26ರಂದು ನಿಗದಿತ ಸಮಯಕ್ಕಿಂತ ಮುಂಚೆಯೇ ದೆಹಲಿಯೊಳಗೆ ಹೋದಂತೆ ಅಲ್ಲಲ್ಲಿ ಪೊಲೀಸರು ತಡೆದರಾದರೂ, ಅತ್ಯಂತ ಬಿಗಿ ಬಂದೋಬಸ್ತಿನ ಬದಲು ನಿಧಾನಕ್ಕೆ ಇವರನ್ನು ಒಳಕ್ಕೆ ಬಿಟ್ಟುಕೊಂಡಂತೆಯೇ ಕಂಡುಬಂದಿತು.

ಎಲ್ಲಕ್ಕಿಂತ ಮುಖ್ಯವಾಗಿ ಜನವರಿ 26ರಂದು ಸಾಮಾನ್ಯವಾಗಿಯೇ ಹೆಚ್ಚಿನ ಭದ್ರತೆ ಇರುವ ಕೆಂಪುಕೋಟೆಯ ಸುತ್ತ ಭದ್ರತೆ ಕಡಿಮೆ ಇತ್ತು. 50 ಜನರ ಗುಂಪು ಒಳಗೆ ಸುಲಭದಲ್ಲಿ ಪ್ರವೇಶಿಸಿ ಬಾವುಟ ಕಟ್ಟಲು ಅವರನ್ನು ಬಿಟ್ಟುಕೊಳ್ಳಲಾಯಿತು ಎಂಬುದು ಮೇಲ್ನೋಟಕ್ಕೇ ಕಂಡುಬರುತ್ತದೆ.

ಬಿಜೆಪಿ ಮತ್ತು ಈ ಜನರು ಮಾತಾಡಿಕೊಂಡು ಇದನ್ನು ಯೋಜಿಸಿದ್ದಾರಾ ಇಲ್ಲವಾ ಈಗಲೇ ಹೇಳಲು ಸಾಂದಭರ್ಿಕ ಸಾಕ್ಷ್ಯಗಳಿವೆಯೇ ಹೊರತು ಪುರಾವೆಗಳಿಲ್ಲ; ಆದರೆ ಅನುಮಾನಗಳಿವೆ. ಒಂದಂತೂ ಸ್ಪಷ್ಟ. ಸಂಯುಕ್ತ್ ಕಿಸಾನ್ ಮೋಚರ್ಾದ ಹೊರತಾದ ಒಂದು ಗುಂಪು ದೆಹಲಿಯೊಳಗೆ ಪೂರ್ವನಿಗದಿತವಲ್ಲದ ಮಾರ್ಗದಲ್ಲಿ ನುಗ್ಗಲಿದೆ ಎಂಬುದು ದೆಹಲಿ ಪೊಲೀಸರಿಗೆ ಗೊತ್ತಿತ್ತು. ಅವರ ಜೊತೆ ಮಾತಾಡುವ ಅಥವಾ ನಿಗ್ರಹಿಸುವ ಪ್ರಯತ್ನವನ್ನು ಅವರು ಮಾಡಲಿಲ್ಲ. ಅದು ಆಗಲಿ ಎಂದು ಬಿಟ್ಟುಕೊಂಡಿದ್ದು ಎದ್ದು ಕಾಣುತ್ತಿದೆ.

ಜನವರಿ 26ರ ಇಡೀ ಹೋರಾಟದ ಲಾಂಛನವಾಗಿ ತ್ರಿವರ್ಣಧ್ವಜ ಇರಲಿದೆ ಎಂದು ಸಂಯುಕ್ತ್ ಕಿಸಾನ್ ಮೋಚರ್ಾ ಮುಂಚೆಯೇ ಘೋಷಿಸಿತ್ತು. ಹಾಗೆಯೇ ಲಕ್ಷಾಂತರ ತ್ರಿವರ್ಣಧ್ವಜಗಳು ಹಾರಾಡಿದವು. ಆದರೆ ನಿದರ್ಿಷ್ಟವಾಗಿ ಬಾವುಟವನ್ನೇ ಬದಲಿಸಿ ಅದನ್ನು ಕೆಂಪುಕೋಟೆಯಲ್ಲೇ ಹೋಗಿ ಕಟ್ಟಿರುವುದರಲ್ಲಿ ಹುನ್ನಾರವಲ್ಲದೇ ಇನ್ನೇನೂ ಅಲ್ಲ ಎಂಬುದು ಸಂಯುಕ್ತ್ ಕಿಸಾನ್ ಮೋರ್ಚಾದ ಅಭಿಪ್ರಾಯ.

ಪ್ರಶ್ನೆ: ಜನವರಿ 26ರಂದು ಪೊಲೀಸರ ಜೊತೆಗೆ ನಿಗದಿಯಾದ ಸಮಯ ಹಾಗೂ ಮಾರ್ಗವನ್ನು ಬಿಟ್ಟು ದೆಹಲಿಯ ಕೇಂದ್ರ ಭಾಗ ಮತ್ತು ಕೆಂಪುಕೋಟೆಗೆ ಹೋದವರಲ್ಲಿ ಸಾಮಾನ್ಯ ರೈತರು ಹಾಗೂ ಸಂಯುಕ್ತ್ ಕಿಸಾನ್ ಮೋರ್ಚಾದವರಿರಲಿಲ್ಲವೇ?

ಉತ್ತರ: ಇದ್ದಿರಲು ಸಾಧ್ಯ. ಏಕೆಂದರೆ ಸದರಿ ಮಜ್ದೂರ್ ಕಿಸಾನ್ ಸಂಘರ್ಷ ಕಮಿಟಿ ಅಥವಾ ದೀಪ್ ಸಿಧುಗೆ ಇಷ್ಟೊಂದು ಬೆಂಬಲಿಗರಿಲ್ಲ. ಹಾಗಾಗಿ ಕೆಲವರು ಸಲೀಸಾಗಿ ರ್ಯಾಲಿ ಶುರು ಮಾಡಿದ್ದು ಮತ್ತು ಪೊಲೀಸರು ತಡೆಯದೇ ಇದ್ದದ್ದು ನೋಡಿ ಇನ್ನೊಂದಿಷ್ಟು ಜನರೂ ಹೊರಟಿರಬಹುದು. ಹಾಗೆ ಹೊರಟವರಿಗೆ ಕಳೆದ 60 ದಿನಗಳಿಂದ ಸರ್ಕಾರ ಪ್ರತಿಕ್ರಿಯಿಸದೇ ಇದ್ದುದನ್ನು ನೋಡಿ ಆಕ್ರೋಶವೂ ಇದ್ದಿರಬಹುದು. ಹಾಗಾಗಿ ಅವರುಗಳೂ ಇವರನ್ನು ಹಿಂಬಾಲಿಸಿ ಮುಂದಕ್ಕೆ ಹೋಗಿದ್ದಾರೆ. ಆದರೆ ಸಂಯುಕ್ತ್ ಕಿಸಾನ್ ಮೋರ್ಚಾ, ಹಿಂದೆ ನಿಗದಿಯಾಗಿದ್ದಂತೆ 12 ಗಂಟೆಗೆ ಪೆರೇಡ್ ಶುರು ಮಾಡಿತು ಮತ್ತು ಅದರಲ್ಲಿ ಲಕ್ಷಾಂತರ ಟ್ರ್ಯಾಕ್ಟರ್ಗಳಿದ್ದವು.

ಕೆಂಪುಕೋಟೆಯ ಬಳಿ ಒಳಗೆ ಹೋಗಿ ಧ್ವಜ ಹಾರಿಸಿದವರು ಮಾತ್ರ ಬಹಳ ಕಡಿಮೆ ಜನ. ಆ ಧ್ವಜ ಹಾರಿಸಿದ ರೀತಿಯು ಅಲ್ಲೇ ಹೊರಗೆ ಕೆಂಪುಕೋಟೆಯ ಆಚೆ ನಿಂತವರಿಗೂ ಇಷ್ಟವಾಗಿರಲಿಲ್ಲ ಎಂಬುದನ್ನೂ ಇಲ್ಲಿ ದಾಖಲಿಸಬೇಕು.

ಆದರೂ ಹುನ್ನಾರದ ಸಾಧ್ಯತೆ ಇದ್ದುದರಿಂದಲೇ ಜನವರಿ 26ರಂದು ಶಾಂತಿಯುತವಾಗಿ ರಾಷ್ಟ್ರಧ್ವಜದೊಂದಿಗೆ ಪೊಲೀಸರೊಂದಿಗೂ ಮಾತುಕತೆ ನಡೆಸಿ ಒಪ್ಪಿದ ಮಾರ್ಗದಲ್ಲಿ ಇತಿಹಾಸದಲ್ಲೇ ಬೃಹತ್ತಾದ ಟ್ರ್ಯಾಕ್ಟರ್ ರ್ಯಾಲಿಗೆ ಸಂಘಟಕರು ಮುಂದಾಗಿದ್ದರು.

ಪ್ರಶ್ನೆ: ಈಗ ಮರ್ಯಾದೆ ಹೋಗಿಬಿಟ್ಟಿತಲ್ಲವೇ? ಜನರು ಈಗ ನಂಬುತ್ತಾರಾ?

ಉತ್ತರ: ಯಾವ ಮರ್ಯಾದೆಯೂ ಹೋಗಿಲ್ಲ. ಸಂಯುಕ್ತ್ ಕಿಸಾನ್ ಮೋಚರ್ಾವು ಈ ವಿಚಾರದಲ್ಲಿ ಯಾವುದೇ ತಪ್ಪುಗಳನ್ನು ಎಸಗಿಲ್ಲ. ಮುಂಚಿನಿಂದಲೂ ಹೋರಾಟದ ಜೊತೆಗಿದ್ದವರು ಈಗಲೂ ಜೊತೆಗಿದ್ದಾರೆ. ಅನುಮಾನಗಳು, ಅರೆಬರೆ ಪಾಲ್ಗೊಳ್ಳುವಿಕೆ ಇದ್ದವರು ಮಾತ್ರ ಹೊರ ಹೋಗಿದ್ದಾರೆ. ಮಯರ್ಾದೆ ಹೋಗಿರುವುದು ಸಕರ್ಾರದ್ದು, ಮೀಡಿಯಾಗಳದ್ದು. ಅವರು ಹೇಳಿದ್ದನ್ನು ನಂಬುವ ಜನ ಹಿಂದೆಯೂ ನಂಬುತ್ತಿದ್ದರು.

ಅಲ್ಲಿರುವ ಜನರು ಈಗಲೂ ದೃಢ ಸಂಕಲ್ಪದಿಂದ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಈ ವಿಚಾರದಲ್ಲಿ ಯಾವುದೇ ಹಿಂಜರಿಕೆಯಿಲ್ಲದೇ, ಈ ಶತಮಾನದ ಮಹಾನ್ ಹೋರಾಟದ ಜೊತೆಗೆ ಮತ್ತು ಅದನ್ನು ಮುನ್ನಡೆಸುತ್ತಿರುವವರ ಜೊತೆಗೆ ಗಟ್ಟಿಯಾಗಿ ನಿಲ್ಲುವ ಕೆಲಸವನ್ನು ಪ್ರಜ್ಞಾವಂತರು ಮಾಡಿದರೆ ಇನ್ನೂ ಬೃಹತ್ತಾಗಿ ಬೆಳೆದು ನಿಲ್ಲುತ್ತದೆ.

ನಾವೇನು ಮಾಡಬಹುದು?

ಈ ಸಂದರ್ಭದಲ್ಲಿ ಇಂತಹ ಐತಿಹಾಸಿಕ ಹೋರಾಟವನ್ನು ದಿಕ್ಕುತಪ್ಪಿಸುವ, ದಮನ ಮಾಡುವ ಒಕ್ಕೂಟ ಸಕರ್ಾರದ ಹುನ್ನಾರಕ್ಕೆ ನಾವು ಬಲಿಬೀಳಬಾರದು. ಮಾಧ್ಯಮಗಳು ಜೋರಾಗಿ ಕೂಗಿಕೊಂಡರೆ ಅದೇ ಸತ್ಯವಲ್ಲ. ಮಾರಿಕೊಂಡ ಮಾಧ್ಯಮಗಳಿಗೆ ಈಗ ಗೋದಿ ಮೀಡಿಯಾ ಎಂಬ ಹೆಸರಿದೆ. ಗೋದಿ ಮೀಡಿಯಾಕ್ಕಿಂತ ಜೋರಾಗಿ ಮಿಕ್ಕವರೂ ಅಬ್ಬರಿಸುವುದು ಮತ್ತು ಸರ್ಕಾರದ ಹುನ್ನಾರವನ್ನು ಬಯಲಿಗೆಳೆಯಲು ಕ್ರಿಯಾಶೀಲರಾಗಿರುವುದು ಬಹಳ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಕನರ್ಾಟಕದಲ್ಲಿ ಹೋರಾಟ ವಿಸ್ತಾರವಾಗುವಂತೆ ಮಾಡಲು ಏನು ಮಾಡಬೇಕೋ ಆ ನಿಟ್ಟಿನತ್ತ ನಾವು ಕೇಂದ್ರೀಕರಿಸಬೇಕು.

ಮುಕ್ತಾಯ

ಕೃಪೆ | ಈ ಸುದ್ದಿ/ವಿಶ್ಲೇಷಣೆ ಮಾಸ್‌ ಮೀಡಿಯಾ ಫೌಂಡೇಷನ್‌ ನೆರವಿನೊಂದಿಗೆ ಪ್ರಕಟಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ವಿದ್ಯಾರ್ಥಿನಿಯ ವರ್ಗಾವಣೆ ಪತ್ರ ಕೊಡುವ ಹಿನ್ನೆಲೆ; ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಿರಂಜನ್‌ಮೂರ್ತಿ ಬೇಜವಾಬ್ದಾರಿ ನಡೆ , ಸೂಕ್ತ ಕ್ರಮಕ್ಕೆ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

Published

on

ಸುದ್ದಿದಿನ,ದಾವಣಗೆರೆ: ವಿದ್ಯಾರ್ಥಿನಿಯ ವರ್ಗಾವಣೆ ಪತ್ರ ಕೊಡುವ ಹಿನ್ನೆಲೆ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಿರಂಜನ್‌ಮೂರ್ತಿ ಅವರ ಬೇಜಾಬ್ದಾರಿ ನಡೆಯ ಕುರಿತುರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎ. ಓಬಳೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ತಾಲ್ಲೂಕು ಗೋಣಿವಾಡ ಕ್ಯಾಂಪ್ ನಿವಾಸಿಗಳಾದ ಪಟ್ಟಾಬಿ ಎನ್. ಇವರು ತಮ್ಮ ಮಗಳಾದ ಕುಶಿ.ಎನ್. ಇವರನ್ನು ದಾವಣಗೆರೆ ನಗರದ ಡಿ.ಸಿ.ಎಂ. ಟೌನ್‌ಶಿಪ್‌ನಲ್ಲಿರುವ ಗೋಲ್ಡನ್ ಪಬ್ಲಿಕ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ೨ನೇ ತರಗತಿಯವರೆಗೆ ವ್ಯಾಸಾಂಗ ಮಾಡಿಸಿರುತ್ತಾರೆ.

ಕರೋನಾ ಬಿಕ್ಕಟ್ಟಿನ ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಸದರಿ ಪೋಷಕರು 202-22ನೇ ಸಾಲಿನ ಶಾಲಾ ಶುಲ್ಕವನ್ನು ತುಂಬಿ, ತಮ್ಮ ಮಗಳನ್ನು ತಮ್ಮ ಸ್ವಗ್ರಾಮವಾದ ಗೋಣಿವಾಡ ಕ್ಯಾಂಪಿನಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿಗೆ ದಾಖಲು ಮಾಡಿರುತ್ತಾರೆ. ಆದರೆ ಹಿಂದಿನ ಶಾಲೆಯ ಆಡಳಿತ ಮಂಡಳಿಯು ಕುಶಿ.ಎನ್ ಎಂಬ ಮಗುವಿನ ವರ್ಗಾವಣೆ ಪ್ರಮಾಣಪತ್ರವನ್ನು ಕೊಡಲು ಪೋಷಕರಿಗೆ ನಿರಾಕರಿಸಿರುತ್ತಾರೆ ಎಂದು ತಿಳಿಸಿದರು.

ಇದಕ್ಕೆ ಕಾರಣ 2021-22ನೇ ಸಾಲಿನಲ್ಲಿ ಈ ಮಗುವಿಗೆ ವರ್ಗಾವಣೆ ಪ್ರಮಾಣಪತ್ರವನ್ನು ಕೊಡಬೇಕಾದರೆ ಸದರಿ ವರ್ಷದ ಶೇ 70ರಷ್ಟು ಶುಲ್ಕವನ್ನು ತುಂಬಿದರೆ ಮಾತ್ರ ವರ್ಗಾವಣೆ ಪ್ರಮಾಣಪತ್ರವನ್ನು ನೀಡುತ್ತೇವೆ ಎಂದು ತಾಕೀತು ಮಾಡಿರುತ್ತಾರೆ. ಹಾಗೆಯೇ ಸದರಿ ವರ್ಷದಲ್ಲಿ ಮಗು ದಾಖಲಾಗಿರುವ ಸರ್ಕಾರಿ ಶಾಲೆಯ ಮುಖ್ಯೋಪಧ್ಯಾಯರು ಕೂಡ ವರ್ಗಾವಣೆ ಪತ್ರವನ್ನು ನೀಡುವಂತೆ ಪತ್ರದ ಮುಖಾಂತರ ಮನವಿ ಮಾಡಿಕೊಂಡಿರುತ್ತಾರೆ.

ಇದಕ್ಕೂ ಖಾಸಗಿ ಶಾಲೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಇದರಿಂದ ಆತಂಕಗೊಂಡ ಪೋಷಕರು ತಮ್ಮ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಾದ ಎನ್.ಎಂ.ಮಂಜುನಾಥ್ ಅವರ ಬಳಿ ತಮ್ಮ ಅಳಲನ್ನು ಹಂಚಿಕೊಂಡಾಗ, ಮತ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಮಂಜುನಾಥ್ ಇವರು ಇದಕ್ಕೆ ಸಂಬಂಧಿಸಿದ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ.ನಿರಂಜನ್‌ಮೂರ್ತಿಯವರಿಗೆ ಕರೆ ಮಾಡಿ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದೂರು ಹೇಳಿದಾಗ, ಹಿಂದಿನ ವರ್ಷದ ಶಾಲಾ ಶುಲ್ಕವನ್ನು ಸಂದಾಯ ಮಾಡಿದರೆ ಮಾತ್ರ ವರ್ಗಾವಣೆ ಪತ್ರವನ್ನು ನೀಡುತ್ತಾರೆ.

ಇಲ್ಲದೆ ಹೋದರೆ ವರ್ಗಾವಣೆ ಪತ್ರ ನೀಡಲು ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಶ್ರೀ ಎನ್.ಎಂ.ಮಂಜುನಾಥ್ ಅವರು ಮಗುವಿನ ಪೋಷಕರು ಹಿಂದಿನ ವರ್ಷದ ಎಲ್ಲ ಶುಲ್ಕವನ್ನು ಪಾವತಿಸಿದರೂ ಶಾಲಾ ಆಡಳಿತ ಮಂಡಳಿಯು ವರ್ಗಾವಣೆ ಪತ್ರ ನೀಡಲು ನಿರಾಕರಿಸಿದೆ. ಅಲ್ಲದೆ ಸದರಿ ವರ್ಷದ ಶೇ 70 ರಷ್ಟು ಶುಲ್ಕ ನೀಡಿದರೆ ಮಾತ್ರ ವರ್ಗಾವಣೆ ಪತ್ರ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ.

ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ‘ಇನ್ನೂ ಮುಂದೆ ಖಾಸಗಿ ಶಾಲೆಗಳು ಮಕ್ಕಳಿಗೆ ವರ್ಗಾವಣೆ ಪತ್ರ ನೀಡಲು ನಿರಾಕರಿಸಿದರೆ ಪೋಷಕರು ಆತಂಕ ಪಡುವ ಅವಶ್ಯಕತೆಯಿಲ್ಲ. ಆಯಾ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ನೇರವಾಗಿ ವರ್ಗಾವಣೆ ಪತ್ರ ಪಡೆಯುವ ಅವಕಾಶ ನೀಡಲಾಗಿದೆ’ ಎಂದು ಪತ್ರಿಕೆ ಹೇಳಿಕೆಯನ್ನು ನೀಡಿದ್ದಾರೆ.

ಅದರಂತೆ ತಾವೇ ಈ ಮಗುವಿಗೆ ವರ್ಗಾವಣೆ ಪತ್ರ ನೀಡಿ ಎಂದು ಕೇಳಿಕೊಂಡಾಗ, ಹೀಗೆ ಕೊಡುವುದಕ್ಕೆ ಸಾಧ್ಯವಿಲ್ಲ. ‘ನಮಗೆ ಇಂತಹ ಯಾವುದೇ ಆದೇಶ ಬಂದಿಲ್ಲ. ಖಾಸಗಿ ಶಾಲೆಗಳನ್ನು ನಾವು ಕಾಪಾಡಬೇಕು. ಆದ್ದರಿಂದ ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ಇದಕ್ಕೆ ಸಂಬAಧಿಸಿದ ಪೋಷಕರಿಗೆ ಕರೆ ಮಾಡಲು ಹೇಳಿ, ನಾನು ಸದರಿ ವಿಷಯದ ಬಗ್ಗೆ ಅವರಿಗೆ ಅರಿವು ಮೂಡಿಸುತ್ತೇನೆ’ ಎಂಬುದಾಗಿ ಹೇಳಿರುತ್ತಾರೆ.

ಮಾನ್ಯರಾದ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುವುದೇನೆಂದರೆ, ಕರೋನಾ ಸಂಕಷ್ಟದಿಂದಾಗಿ ಸಾಮಾನ್ಯ ಜನರ ಬದುಕು ಬೀದಿಗೆ ಬಂದಿರುವ ಸ್ಥಿತಿ ತಮಗೆಲ್ಲ ತಿಳಿದಿದೆ. ಹೀಗಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲಾಗದೆ ಪೋಷಕರು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ.

ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪೋಷಕರಿಗೆ ಆರ್ಥಿಕ ಹೊರೆಯನ್ನು ತಪ್ಪಿಸುವ ನಿಟ್ಟಿನಲ್ಲಿ, ಪ್ರತಿಯೊಂದು ಮಗುವಿಗೂ ಶಿಕ್ಷಣವು ಸುಲಭವಾಗಿ ತಲುಪುವಂತೆ ಮಾಡುವುದಕ್ಕಾಗಿ, ಪೋಷಕರು ಖಾಸಗಿ ಶಾಲೆಗೆ ಅಲೆಯುವುದನ್ನು ತಪ್ಪಿಸಲು ವರ್ಗಾವಣೆ ಪತ್ರ ಕೊಡದ ಶಾಲೆಗಳ ವರ್ಗಾವಣೆ ಪತ್ರವನ್ನು ಆಯಾ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ ಎಂಬ ವಿಷಯ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಉಮಾಶಂಕರ್ ಅವರು ಪತ್ರಿಕಾ ಹೇಳಿಕೆಯನ್ನು ನೀಡಿರುತ್ತಾರೆ. ಇಂತಹ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ನಿರಂಜನ್‌ಮೂರ್ತಿಯವರು ಅನ್ಯಾಯಕ್ಕೆ ಒಳಗಾದ ಪೋಷಕರ ಪರವಾಗಿ ನಿಲ್ಲದೆ, ಖಾಸಗಿ ಶಾಲೆಗಳ ಹಿತಕಾಯುವಂತಹ ಬೇಜವಬ್ದಾರಿ ಮಾತುಗಳನ್ನಾಡಿರುವುದು ನಿಜಕ್ಕೂ ಶೋಚನೀಯವಾದ ಸಂಗತಿಯಾಗಿದೆ.

ಆದ್ದರಿಂದ ಸದರಿ ಅರ್ಜಿಯೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎನ್.ಎಂ.ಮಂಜುನಾಥ್ ಅವರೊಂದಿಗೆ ನಡೆಸಿದ ಸಂಭಾಷಣೆಯ ತುಣುಕನ್ನು ಸಿ.ಡಿಯಲ್ಲಿ ಲಗತ್ತಿಸಿ ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಮಾನ್ಯ ಪ್ರಧಾನ ಕಾರ್ಯದರ್ಶಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ದಾವಣಗೆರೆ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಣಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ದಾವಣಗೆರೆ ಇವರಿಗೆ ಬೇಜವಬ್ದಾರಿ ಹೇಳಿಕೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಾಗೆಯೇ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸಂಕಷ್ಟಕ್ಕೆ ಒಳಗಾಗಿರುವ ಪೋಷಕರ ಆರ್ಥಿಕ ಒತ್ತಡವನ್ನು ತಪ್ಪಿಸಿ, ಸರ್ಕಾರಿ ಶಾಲೆಯತ್ತ ಮುಂದಾಗಿರುವ ಮಕ್ಕಳ ಹಿತಕಾಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ- ಕರ್ನಾಟಕದ ವತಿಯಿಂದ ಲಿಖಿತ ದೂರು ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗೋವರ್ಧನ್, ಗ್ರಾಮ ಪಂಚಾಯತಿ ಸದಸ್ಯ ಎಂ,ಎನ್ ಮಂಜುನಾಥ, ಹೂವಿನ ಮಡು ರವಿ, ನಾಗೇಶ್ವರರಾವ್ ಅವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಸಿಕೆ ಪಡೆಯಲು ಹೈಡ್ರಾಮ, ತಂತ್ರಗಾರಿಕೆ ಅನುಸರಿಸಿ ಲಸಿಕೆ ನೀಡಿಕೆ ; ಶುಕ್ರವಾರದೊಳಗೆ ಶೇ 100 ರಷ್ಟು ಲಸಿಕಾ ಗುರಿ ಸಾಧನೆ : ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಹಳೇ ದಾವಣಗೆರೆ ಭಾಗದಲ್ಲಿ ಕೊರೋನ ಲಸಿಕೆ ಪಡೆಯಲು ವಿವಿಧ ಕಾರಣಗಳನ್ನು ನೀಡಿ ಬಚಾವಾಗಲು ಪ್ರಯತ್ನಿಸುತ್ತಿದ್ದವರಿಗೆ ಅವರದೇ ಧಾಟಿಯಲ್ಲಿ ಉತ್ತರ ನೀಡುವ ಮೂಲಕ ಲಸಿಕೆ ನೀಡಲಾಯಿತು ಹಾಗೂ ಲಸಿಕೆ ಪಡೆಯಲು ಪ್ರತಿರೋಧ ತೋರುತ್ತಿದ್ದವರಿಗೆ ಒತ್ತಡ ತಂತ್ರದ ಮೂಲಕವೂ ಲಸಿಕೆ ನೀಡಲಾಯಿತು.

ಬುಧವಾರ ಹಳೆ ದಾವಣಗೆರೆ ಭಾಗದ ಭಾಷಾನಗರ, ಮುಸ್ತಫಾ ನಗರ, ಶಿವ ನಗರಗಳಲ್ಲಿ ಮನೆ ಮನೆಗಳಿಗೆ ತೆರಳಿ ಲಸಿಕೆ ಹಾಕಲಾಯಿತು. ಶಿವ ನಗರದಲ್ಲಿ ಸಾಕಷ್ಟು ಮನೆಗಳವರು ಲಸಿಕಾ ತಂಡ ನೋಡುತ್ತಿದ್ದಂತೆ ಓಡಿಹೋಗಿ ಬಾಗಿಲುಗಳನ್ನು ಬಂದ್ ಮಾಡಿಕೊಂಡರು, ಹಲವರು ಮೈಗೆ ಹುಷಾರಿಲ್ಲ, ಆಧಾರ್ ಕಾರ್ಡ್ ಇಲ್ಲ, ಎಂಬಿತ್ಯಾದಿ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಲಸಿಕೆ ನೀಡಲಾಯಿತು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಹರ್ ಘರ್ ದಸ್ತಕ್’ ಘೋಷಣೆಯಂತೆ ಮನೆ ಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ, ಪ್ರಮುಖವಾಗಿ ದಾವಣಗೆರೆ ಹಳೇ ಭಾಗದಲ್ಲಿ ಲಸಿಕಾಕರಣ ಕಡಿಮೆಯಿದ್ದು ಕಳೆದ ಮೂರು ದಿನಗಳಿಂದ ವೇಗ ಪಡೆದುಕೊಂಡಿದೆ.

ಜಿಲ್ಲೆಯಲ್ಲಿ ಪ್ರತಿದಿನ 30 ರಿಂದ 35 ಸಾವಿರದಷ್ಟು ಜನರಿಗೆ ಲಸಿಕೆ ಹಾಕಲಾಗುತ್ತಿದೆ. ಶುಕ್ರವಾರ(ಡಿ,3)ದೊಳಗೆ ಶೇಕಡಾ ನೂರರಷ್ಟು ಲಸಿಕೆ ಹಾಕುವ ಗುರಿ ಇದ್ದು ಯಶಸ್ವಿಯಾಗುವ ವಿಶ್ವಾಸವಿದೆ. ಲಸಿಕೆ ಬಗೆಗಿನ ಸುಳ್ಳು ವದಂತಿಗಳಿಗೆ ಕಿವಿಗೊಟ್ಟ ಜನ, ತಪ್ಪು ಕಲ್ಪನೆಯಿಂದ ಲಸಿಕೆ ಹಾಕಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುತ್ತಿರುವುದು ಕಂಡುಬಂದಿದೆ.

ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ವಿವಿಧ ಪ್ರಕಾರದ ಮನವೊಲಿಕೆ ಮೂಲಕ ಮತ್ತು ಒತ್ತಡ ಹಾಕುವ ಮೂಲಕ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ ಎಂದರು.

ಲಸಿಕೆ ಹಾಕಿಸಿಕೊಳ್ಳದವರಿಗೆ ಸರ್ಕಾರಿ ಸೌಲಭ್ಯ ಕಡಿತದ ಬಗೆಗೆ ನಿರ್ದೇಶನವಿಲ್ಲ, ಆದರೂ ಹೊಸದಾಗಿ ಬರುತ್ತಿರುವ ಓಮಿಕ್ರಾನ್‍ನಿಂದ ಬಚಾವಾಗಲು ಲಸಿಕೆ ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಲಸಿಕಾ ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಹೆಚ್‍ಓ ಡಾ.ನಾಗರಾಜು, ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಪೊಲೀಸ್ ಇಲಾಖಾ ಸಿಬ್ಬಂದಿ ಅಂಗನವಾಡಿ ಆಶಾ ಕಾರ್ಯಕರ್ತರು ಇದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹರೀಶ್.ಟಿ ಅವರಿಗೆ ಪಿಎಚ್ ಡಿ ಪದವಿ

Published

on

ಸುದ್ದಿದಿನ,ದಾವಣಗೆರೆ : ನಗರದ ಹರೀಶ್ ಟಿ ಅವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಹರೀಶ್.ಟಿ ರವರು ಸಲ್ಲಿಸಿದ “ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿನ ಭೋವಿ ಜನಾಂಗದವರ ಚಾರಿತ್ರಿಕ ಸ್ಥಿತ್ಯಾಂತರದ ಬಗ್ಗೆ ಒಂದು ಅಧ್ಯಯನ (ಕ್ರಿ.ಶ 1947 ರಿಂದ 2015 ರವರೆಗೆ)” ಎಂಬ ಶೀರ್ಷಿಕೆಯ ಮಹಾಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಹೆಚ್.ಡಿ (ಡಾಕ್ಟರೇಟ್) ಪದವಿ ನೀಡಿದೆ.

ಡಾ.ಸರ್ವೋದಯ.ಎಸ್.ಎಸ್. ರವರ ಮಾರ್ಗದರ್ಶನದಲ್ಲಿ ಈ ಮಹಾಪ್ರಬಂಧ ಸಲ್ಲಿಸಲಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending