Connect with us

ಬಹಿರಂಗ

ಕತ್ತೆಗೆ ಇಲ್ಲದ ಹಿರಿಮೆ ಗೋವಿಗೇಕೆ..!

Published

on

ಅದು ಆಗಸ್ಟ್ 15. ಸ್ವಾತಂತ್ರ್ಯ ದೊರೆತ ದಿನ.ಕೀಲರಾಘವೇಂದ್ರ ಅವರೊಡನೆ 7 ದಶಕಗಳಲ್ಲಿ ನಾವುಗಳುಸಾಗಿಬಂದ ಹಾದಿಯನ್ನು ಮೆಲುಕುಹಾಕುತ್ತಿದ್ದೆ.ನಮ್ಮಮಾತುಕತೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಸುತ್ತಿಬಂತು. ಮಾತಿನ ಮಧ್ಯೆದಲ್ಲಿ ಗೋವಿನ ಹೆಸರಲ್ಲಿ ನರಮೇಧನಡೆಯುತ್ತಿದೆ. ಜನ ಅಭದ್ರತೆ, ಭಯ, ಆತಂಕದಿಂದ ಬದುಕುದೂಡುವ ಸ್ಥಿತಿ ನಿರ್ಮಾಣವಾಯಿತಲ್ಲ ಎಂಬ ವಿಚಾರವೂಬಂದಿತು. ನಾನಾಗ ಗೋವು ಕಾಮಧೇನು.ಅದರ ಹಾಲು,ಗಂಜಲ,ಸೆಗಣಿ ಎಲ್ಲವೂ ಬಳಕೆಗೆ ಯೋಗ್ಯ. ಸಾಲದಕ್ಕೆಹಿಂದುಳಿದ ಗೊಲ್ಲ ಸಮುದಾಯದ ಜೀವನಾಧಾರ ಕೂಡಆಗಿದೆ. ಆದರೆ, ಗೋವಿಗಿಂತ ಕತ್ತೆ ಬಹುಪಯೋಗಿ. ಇದನ್ನೇಕೆಜನ ಪೂಜಿಸುವುದಿಲ್ಲ, ಗೌರವಿಸುವುದಿಲ್ಲ? ಇದರ ರಕ್ಷಣೆಗಾಗಿಬಡಿದಾಡುವುದಿಲ್ಲ. ಸಂರಕ್ಷಣೆಗಾಗಿ ಸಮಿತಿಯನ್ನು ಮಾಡಿಲ್ಲ. ಸರ್ಕಾರ ಕೂಡ ಒಂದು ಬಿಡಿಗಾಸನ್ನೂ ಕತ್ತೆ ಸಂರಕ್ಷಣೆಗೆನೀಡಿಲ್ಲ ಎಂದುಒಂದೇ ಸಮನೆ ಉಸುರಿದೆ.ಎದುರು ಕುಳಿತಿದ್ದವಕೀಲ ರಾಘವೇಂದ್ರ ಹೌದಲ್ವ! ಗೋವಿಗೆ ನೀಡಿದಷ್ಟು ಮಹತ್ವಕತ್ತೆಗೇಕೆ ನೀಡಿಲ್ಲ? ನಾವೇಕೆ ಕತ್ತೆ ಸಂರಕ್ಷಣೆಗಾಗಿ ಹೋರಾಟ ಮಾಡಬಾರದೆಂದು ಪ್ರಶ್ನಿಸಿದರು.

ಇದೇ ಹೊತ್ತಿನಲ್ಲಿ ನಾಲ್ಕು ಘಟನೆಗಳು ನನ್ನನ್ನು ಬಹುವಾಗಿಕಾಡಿದವು. ಒಂದು ಉತ್ತರಖಂಡ್ ವಿಧಾನಸಭೆಯಲ್ಲಿ ಅಲ್ಲಿನಪಶುಸಂಗೋಪನಾ ಇಲಾಖೆ ಸಚಿವೆ ರೇಖಾ ಆರ್ಯ ಗೋವಿಗೆ’ರಾಷ್ಟ್ರಮಾತೆ’ ಸ್ಥಾನಮಾನ ನೀಡಬೇಕೆಂಬ ನಿರ್ಣಯಮಂಡಿಸಿದ್ದರು. ಎರಡು, ದೂರದ ಕೊಲಂಬಿಯಾದಲ್ಲಿಕತ್ತೆಗಳಿಗೆ ಸೌಂದರ್ಯ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕಳೆದ15 ವರ್ಷಗಳಿಂದ ಮೋನಿಕ್ಯುಯಿರಾ ಪಟ್ಟಣದಲ್ಲಿ ಕತ್ತೆಉತ್ಸವ ಆಯೋಜಿಸಲಾಗುತ್ತಿದೆ. ಮೂರು, ಈಜಿಪ್ಟ್‌ನ ಮೃಗಾಲಯದಲ್ಲಿ ಕತ್ತೆಗೆ ಕಪ್ಪು-ಬಿಳಿ ಬಣ್ಣ ಬಳಿದು ’ಜೀಬ್ರಾ’ ಎಂದು ಜನರನ್ನು ನಂಬಿಸುತ್ತಿದ್ದರಂತೆ. ಇದನ್ಹೇಗೋಅರಿತವನೊಬ್ಬ ನಕಲಿ ಜೀಬ್ರಾದ ಫೋಟೋ ಸೆರೆ ಹಿಡಿದುಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾನೆ. ನಾಲ್ಕು, ಗಾಜಾದಲ್ಲಿರುವ ಎರಡು ಕತ್ತೆಗಳಿಗೆ ಬಣ್ಣ ಬಳಿದು ಜೀಬ್ರಾಎಂದು ನಂಬಿಸಲಾಗಿದೆ. ಇದೇ ರೀತಿ ಚೀನಾಮೃಗಾಲಯವೊಂದರಲ್ಲಿ ಟಿಬೇಟಿಯನ್‌ನ ಮುಸ್ಟೀಫ್ಜಾತಿಯ ನಾಯಿಯೊಂದನ್ನು ಸಿಂಹ ಎಂದುನಂಬಿಸಲಾಗಿತ್ತು. ಜನ ಬೋನಿನ ಬಳಿ ಹೋದಾಗ ಸಿಂಹಸ್ವರೂಪದ ನಾಯಿ ಬೊಗಳಿ ತನ್ನ ನಿಜ ಬಣ್ಣ ತಿಳಿಸಿದೆ! ಇದನ್ನೆಲ್ಲಾ ಕೇಳಿದಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವುದನ್ನುಕಾಣಬಹುದು. ಅತ್ಯಂತ ಸಾಧು ಪ್ರಾಣಿ ಎಂದೇಕರೆಸಿಕೊಂಡಿರುವ ಹಸು ಕೂಡ ಕೋಪ ಬಂದಾಗಒದೆಯುವುದು, ಹಾಯುವುದು ಮಾಡುತ್ತದೆ. ಸ್ವಾಮಿನಿಷ್ಟೆಗೆಹೆಸರಾದ ನಾಯಿ ಕೂಡ ತನ್ನ ಯಜಮಾನನನ್ನು ಕಚ್ಚಿರುವಉದಾಹರಣೆಗಳಿವೆ. ಆದರೆ, ಕತ್ತೆಯ ಮೇಲೆ ಎಷ್ಟೇ ಮಣಭಾರಹಾಕಿ, ಮೇವು, ನೀರು ನೀಡದಿದ್ದರೂ ಅದುವ್ಯಗ್ರಗೊಳ್ಳುವುದಿಲ್ಲ. ಹೊಟ್ಟೆ ತುಂಬಾ ಹಾಕಿದರೂ ಅದು ಸಂತಸಗೊಳ್ಳುವುದಿಲ್ಲ. ಸದಾ ಸಮಚಿತ್ತದಿಂದ ಕೂಡಿರುತ್ತದೆ. ಸುಖದುಃಖ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ತಾನು ಜನ್ಮತಳೆದಿರುವುದೇ ಸೇವೆಗಾಗಿ, ಇನ್ನೊಬ್ಬರ ಹಿತಕ್ಕಾಗಿ ಎಂದುಕಿವುಡನಂತೆ, ಮೂಕನಂತೆ ಬದುಕು ಸವೆಸುತ್ತದೆ.ಗಡಿಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಎಂತಹುದ್ದೇಕುರುಕಲು ಸ್ಥಳ ಇದ್ದರೂ, ಸೈನಿಕರಿಗೆಊಟ – ನೀರು, ಮದ್ದುಗುಂಡುಸಾಗಿಸುವ ಏಕೈಕ ಜೀವಿ ಕತ್ತೆ. ಮನುಷ್ಯನಿಂದತಲುಪಲು, ಹೊರಲು ಆಗದ ಭಾರವನ್ನು ಹೊತ್ತು ನಿಸ್ವಾರ್ಥಸೇವೆ ನೀಡುವ ಜೀವಿ ಕತ್ತೆ. ತನ್ನ ಹೆಗಲ ಮೇಲೆ ಮೈಲಿಗೆ ಬಟ್ಟೆ, ಮಡಿಬಟ್ಟೆ; ಸ್ಪೃಷ್ಯರ ಬಟ್ಟೆ, ಅಸ್ಪೃಷ್ಯರ ಬಟ್ಟೆ; ಬಡವನ ಬಟ್ಟೆ – ಶ್ರೀಮಂತನ ಬಟ್ಟೆ ಎಂದೆಲ್ಲಾ ಎಣಿಸದೇ ಹೊತ್ತು ಸಾಗುವ ಕತ್ತೆನಿಜಾರ್ಥದಲ್ಲಿ ’ಜಾತ್ಯಾತೀತ’ವಾದಿ. ಗೋವಿನ ಹಾಲನ್ನುಜೀವನಪೂರ್ತಿಸೇವಿಸಬೇಕು.ಕತ್ತೆ ಹಾಲನ್ನು ಜೀವನದಲ್ಲೊಮ್ಮೆಸೇವಿಸಿದರೆ ಸಾಕು ಅದು One time booster. ಐದು ಹನಿಕತ್ತೆ ಹಾಲು 100 ವರ್ಷ ರೋಗ ನಿರೋಧಕ ಶಕ್ತಿಯಾಗಿಕಾರ್ಯನಿರ್ವಹಿಸುತ್ತೆ. ನನಗೆ ಈಗಲೂ ನೆನಪಿದೆ. ಸಣ್ಣವನಿದ್ದಾಗ ನನಗೂ ಕತ್ತೆ ಹಾಲು ಕುಡಿಸಲಾಗಿತ್ತು. ಮಾತ್ರವಲ್ಲ, ನಾನು ನನ್ನ ಮೂರು ಮಕ್ಕಳಿಗೂ ಕತ್ತೆ ಹಾಲಿನ booster ಹಾಕಿಸಿರುವೆ.

ಕತ್ತೆಗಳನ್ನಿಂದು ಅಭಿವೃದ್ಧಿ ಕಾಣದ ರಾಷ್ಟ್ರಗಳಲ್ಲಿಯೇ ಹೆಚ್ಚಾಗಿಬಳಸಲಾಗುತ್ತಿದೆ. ಇವನ್ನು ಸರಕು ಸಾಗಾಣಿಕೆಗೆ ಮಾತ್ರವಲ್ಲದೇ, ಕೃಷಿ ಬಳಕೆಗೆ, ಬರ ಪರಿಹಾರದಕಾರ್ಯಗಳಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ. ಕೃಷಿಯಲ್ಲಿಅತ್ಯಂತ ಅಗ್ಗದ ಬೆಲೆಗೆ ಬಳಕೆಯಾಗುವ ಶ್ರಮಜೀವಿಗಳಲ್ಲಿಮನುಷ್ಯ ಮೊದಲಿಗನಾದರೆ, ಕತ್ತೆ ಎರಡನೇ ಸ್ಥಾನವನ್ನುಅಲಂಕರಿಸಿದೆ. ಕತ್ತೆಯನ್ನು ಕುರಿ ಕಾಯಲೂ ಬಳಸಲಾಗುತ್ತದೆ. ಕತ್ತೆ ಸವಾರಿ ಮಕ್ಕಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಅಚ್ಚುಮೆಚ್ಚು.ಕತ್ತೆ ಹಾಲು ಮತ್ತು ಮಾಂಸಕ್ಕೆ ಇಟಲಿಯಲ್ಲಿ ಹೆಚ್ಚು ಬೇಡಿಕೆಇದೆ. ಯೂರೋಪ್‌ನ ಹಲವು ಕಡೆ ಮಾಂಸದ ಖಾದ್ಯಗಳುಹೆಚ್ಚು ಜನಪ್ರಿಯಗೊಂಡಿವೆ. ಇದರ ಹಾಲಿನಿಂದ ಸೋಪು, ಕ್ರೀಂಗಳನ್ನು ಉತ್ಪಾದಿಸಲಾಗುತ್ತದೆ. ಕತ್ತೆಯ ಹಾಲು, ಕ್ರೀಂನಿಂದ ಚರ್ಮವ್ಯಾದಿಗಳು ಗುಣವಾಗುತ್ತವೆ. ಅಲ್ಲದೆಕತ್ತೆಯ ಚರ್ಮವನ್ನು ಕಾಗದ ತಯಾರಿಸಲು ಬಳಸಲಾಗುತ್ತದೆ. ಕತ್ತೆಯ ಮಾಂಸದಲ್ಲಿ ರೋಗ ನಿರೋಧಕ ಶಕ್ತಿಹೆಚ್ಚಾಗಿರುವುದರಿಂದ ಚೀನಿಯರಂತು ಮುಗಿಬಿದ್ದುತಿನ್ನುತ್ತಾರೆ.ಇವನ್ನೆಲ್ಲಾ ಕಂಡಾಗ ಅಮಾಯಕ ಪ್ರಾಣಿಗಳನ್ನು ಮನುಷ್ಯತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡಿರುವುದು ಕಂಡುಬರುತ್ತದೆ. ಇಲ್ಲಿ ಕತ್ತೆಯನ್ನು ಬಲಿಪಶು ಮಾಡಲಾಗಿದೆ ಎಂದುಮೇಲ್ನೋಟಕ್ಕೆ ಅನಿಸಬಹುದು. ಆದರೆ, ವಾಸ್ತವದಲ್ಲಿ ಬಲಿಪಶುಕತ್ತೆಯಲ್ಲ, ಬದಲಾಗಿ ಮನುಷ್ಯನೇ ಆಗಿದ್ದಾನೆ.ಕತ್ತೆಯನ್ನು ಜೀಬ್ರಾ ಎಂದು ಬಣ್ಣಿಸಲು, ತೋರಿಸಲು, ವೈಭವೀಕರಿಸಬೇಕಾಗುತ್ತದೆ. ಚತುರತೆ ಮತ್ತು ಬುದ್ಧಿವಂತಿಕೆಎರಡನ್ನೂ ಬೆರಸಿ ಜನರನ್ನು ನಂಬಿಸಬೇಕಾಗುತ್ತದೆ. ಪಾಪದಕತ್ತೆ ಹೊಸವೇಷ ಹೊತ್ತು, ತಾನು ಜೀಬ್ರಾ ಎಂದುತೋರಿಸಿಕೊಳ್ಳುವ ದುಸ್ಥಿತಿಯಲ್ಲಿದೆ. ’ಒಂದು ಭ್ರಷ್ಟ ಕತ್ತೆ ಹೆಚ್ಚಿನಮಟ್ಟದ ಪುರಸ್ಕಾರಕ್ಕೆ ಪಾತ್ರವಾಗುತ್ತದೆ’. ’ಹಗರಣದ ಕತ್ತೆಕಾನೂನಿನ ಅಡಿಯಲ್ಲಿ ಆಶ್ರಯ ಪಡೆಯುತ್ತದೆ’. ’ಎದುರಾಡದಕತ್ತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ’. ’ವಂಚಕ ಕತ್ತೆಹುಲುಸಾಗಿ ಬೆಳೆಯುತ್ತದೆ’. ಕತ್ತೆಯ ಈ ಎಲ್ಲಾ ರೂಪಕಗಳುಜೀವಂತವಾಗಿ ಮನುಜರಲ್ಲಿಯೂ ಇವೆ. ಕೆಲವು ಕಡೆಕತ್ತೆಗಳನ್ನು ಮಳೆ ಬಾರದಿದ್ದಾಗ ಪೂಜೆ ಮಾಡಲು, ಮದುವೆಮಾಡಿಸಲು ಬಳಸಲಾಗುತ್ತದೆ. ವಿಚಿತ್ರವೆಂದರೆ, ಹೊಲಸುತಿನ್ನುವ ಹಂದಿಗಳನ್ನು ಗುಡಿಯಲ್ಲಿಟ್ಟು ಪೂಜಿಸಲಾಗುತ್ತದೆ!’ದಿನ ಬೆಳಗೆದ್ದು ನನ್ನನ್ನು ನೋಡಿ, ನಿಮಗೆ ಶುಭವಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಾರಾಟವಾಗುವ ಕತ್ತೆ, ಅಲೆದಾಡಿ ಹೊಟ್ಟೆ ತುಂಬಿಸಿಕೊಳ್ಳಬೇಕು. ನಿರ್ಲಕ್ಷಕ್ಕೆಈಡಾಗುವ ಕತ್ತೆ ಎರಡನೇ ದರ್ಜೆಯ ಪ್ರಾಣಿ. ಶೋಷಿತ ಪ್ರಾಣಿಆಗಿದೆ. ಮನುಷ್ಯ ತನ್ನ ಅನುಕೂಲಕ್ಕಾಗಿ ಕತ್ತೆಯನ್ನುಜೀಬ್ರಾವನ್ನಾಗಿ, ಸಿಂಹವನ್ನಾಗಿ ಹೇಗೆ ಬೇಕಾದರೂಬದಲಾಯಿಸಿಬಿಡುತ್ತಾನೆ. ಹೀಗೆ ಬಣ್ಣ ಬಳಿಸಿಕೊಂಡ ಕತ್ತೆಗಳುಹಾಗೆಯೇ ಇರುವುದಿಲ್ಲ. ಮಳೆ ಬಿದ್ದರೆ ಅವು ಕತ್ತೆಯಾಗುತ್ತವೆ. ಅದು ಪ್ರಧಾನಿ ಬಟ್ಟೆ ಹೊತ್ತು ನಡೆದರೂ ಸರಿ, ಪರಿಚಾರಕನಬಟ್ಟೆ ಹೊತ್ತು ನಡೆದರೂ ಸರಿ, ಅದರ ಬೆನ್ನು ತೂಕಹೊರಲೇಬೇಕು. ನನಗನಿಸಿದಂತೆ ಇವು ಟನ್‌ಗಟ್ಟಲೆ ತೂಕಮಾತ್ರ ಹೊರುವುದಿಲ್ಲ, ಅವಮಾನವನ್ನು ಹೊರುತ್ತವೆ. ಯಾವುದೇ ಬಣ್ಣ ಬಳಿದುಕೊಂಡರೂ ಕತ್ತೆಯಾಗಿಯೇಉಳಿಯುತ್ತವೆ.

ಯಾರನ್ನಾದರೂ ಕೂಗಿದಾಗ ಸ್ಪಂದಿಸದಿದ್ದರೆ, ಏಯ್ ಕತ್ತೆಎಂದು ಕೂಗಿ ಕರೆಯುವುದು ವಾಡಿಕೆಯಾಗಿಬಿಟ್ಟಿದೆ. ಎಲ್ಲರೂಕತ್ತೆಯನ್ನು ಕಿವುಡ, ಮೂಕ ಪ್ರಾಣಿ ಎಂದುಕೊಂಡುಬಿಟ್ಟಿದ್ದಾರೆ. ಇದು ಮೂಕವೂ ಅಲ್ಲ, ಬದಲಿಗೆ ಅತೀವ ತಾಳ್ಮೆಯನ್ನುಹೊಂದಿದೆ. ಹೀಗಾಗಿಯೆ ಕತ್ತೆಗೆ ಇಂತಹದ್ದೊಂದು ವಿಶೇಷಣಬಂದಿರಬಹುದು.ಕತ್ತೆಯ ಮುಂದೆ ನೀರು ಮತ್ತು ಆಹಾರ ಎರಡನ್ನೂ ಇಟ್ಟರೆ, ಯಾವುದನ್ನೂ ಸೇವಿಸದೆ ಪ್ರಾಣ ಬಿಡುತ್ತದೆ. ಕಾರಣ ಕತ್ತೆಗೆಹಸಿವು ಮತ್ತು ದಾಹ ಎರಡರಲ್ಲಿ ಯಾವುದನ್ನು ಮೊದಲಿಗೆಆಯ್ಕೆ ಮಾಡಿಕೊಳ್ಳಬೇಕೆಂಬ ಜ್ಞಾನ ಹೊಂದಿರುವುದಿಲ್ಲ. ಕತ್ತೆಯ ಮೇಲೆ ಹಣ ಹೂಡಿರಿ. ಅದು ನಿಮಗೆ ಸದಾವಿಧೇಯತೆಯಿಂದ ನಡೆದುಕೊಳ್ಳುತ್ತದೆ. ನಿಮ್ಮನ್ನು ಸ್ವಾಮಿಎಂಬಂತೆ ಭಾವಿಸುತ್ತದೆ. ಅದರಲ್ಲೂ ಕತ್ತೆಗಳು ಹೆಂಗಸರಂತೆಆಡು-ಕುರಿಗಳಂತೆ ತಲೆ ತಗ್ಗಿಸಿಕೊಂಡು ಹೇಳಿದ್ದನ್ನು ಪಾಲಿಸುತ್ತದೆ. ಕೆಲೆವೆಡೆ ಕುದುರೆಗಿಂತ ಕತ್ತೆ ವಾಸಿ ಎಂಬಮಾತಿದೆ. ಕತ್ತೆಯ ಮೇಲೆ ಕೂತರೆ ಹೊರುತ್ತದೆ. ಹೊರಿಸಿದರೆಸಾಗುತ್ತದೆ. ಆದರೆ ಕುದುರೆ ಮೇಲೆ ಕೂತರೆ, ಹೊರಿಸಿದರೆ ಎತ್ತಿಬೀಸಾಡುತ್ತದೆ. ಹೀಗಾಗಿ ಕತ್ತೆ ಪವಿತ್ರ ಸ್ಥಳ ಮೆಕ್ಕಾಗಿ ಹೋಗಿಬಂದರೂ,ಅದು ಕತ್ತೆಯಾಗಿಯೇ ಬದುಕು ದೂಡುತ್ತದೆ.Democratic Party of UnitedStates ನ ಚಿಹ್ನೆ ಕೂಡಕತ್ತೆಯೇ ಆಗಿದೆ.ಕುದುರೆಗಿಂತ ಕತ್ತೆ ಬಲಶಾಲಿ.ಗಾಬರಿಗೆಒಳಗಾಗುವುದಿಲ್ಲ.ನೆನಪಿನ ಶಕ್ತಿಯೂ ಹೆಚ್ಚಾಗಿದೆ. ಒಮ್ಮೆಒಂದು ದಾರಿಯಲ್ಲಿ ಸಾಗಿದರೆ 20 ವರ್ಷವಾದರೂ ಆದಾರಿಯನ್ನು ಗುರುತಿಟ್ಟುಕೊಂಡು ಸಾಗುವ ಪ್ರಾಣಿ. ಜೊತೆಗೆಇದು ಒಂಟಿಯಾಗಿ ಇರಲು ಬಯಸುವುದಿಲ್ಲ. ಜೋಡಿಇರಲೇಬೇಕು. ಇಲ್ಲ ಆಡು,ಕುರಿಯ ಸಂಗಡವಾದರೂಇರಬೇಕು. ಮಾನವನಿಗೆ ಕತ್ತೆಯು ಶತಮಾನಕ್ಕೂ ಹಿಂದಿನಿಂದಸಹಕಾರಿಯಾಗಿದೆ.ಗಂಡುಕತ್ತೆ, ಹೆಣ್ಣು ಕುದುರೆಯೊಂದಿಗೆ ಕೂಡಿದಾಗಜನಿಸುವುದೇ ಹೆಸರಗತ್ತೆ. ಗಂಡು ಕುದುರೆ, ಹೆಣ್ಣುಕತ್ತೆಯೊಂದಿಗೆ ಕೂಡಿದಾಗ ಜನಿಸುವುದು ಹಿನ್ನಿ. ಜೀಬ್ರಾ ಮತ್ತುಕತ್ತೆ ಕೂಡಿದಾಗ ಹುಟ್ಟುವುದು ಜೊಂಕಿ, ಜೀಬ್ರಾಯ್ಡ್ಎನ್ನುತ್ತಾರೆ.
ಹೆಸರಗತ್ತೆಯನ್ನು ಸರಕು ಸಾಗಾಣಿಕೆಗೆ ಬಳಸುವುದರಿಂದ, ಅವುಗಳನ್ನು ನಿರ್ವೀರ್ಯರನ್ನಾಗಿಸಲಾಗಿರುತ್ತದೆ. ಅಸಿನೋಡಿಮಾರ್ಟಿನಾ, ಫ್ರಾಂಕಾ, ಮೊಮತ್ತ್ ಜಾಕ್ ತಳಿಯಕತ್ತೆಗಳನ್ನು ಗೂಳಿಯಂತೆ ಬಳಸಲಾಗುತ್ತದೆ.

ಇಷ್ಟಕ್ಕೂ ಕತ್ತೆಯ ಮೂಲ ಸೊಮಾಲಿಯಾ. ಆಡುಕುರಿ, ಗೋವನ್ನು ಸಾಕುತ್ತಿದ್ದ ಕಾಲದಿಂದಲೂ ಕತ್ತೆ ಇದೆ. ಗಂಡುದನವನ್ನು ಕೃಷಿ ಮತ್ತು ಸಾಗಾಣಿಕೆಗೆ ಬಳಸುತ್ತಿದ್ದರೂ, ದುರ್ಗಮಹಾದಿ ಕ್ರಮಿಸಲು ಕತ್ತೆಯೇ ಬೇಕಿತ್ತು. ಇದಲ್ಲದೇ, ಕತ್ತೆ ತಿಂದಮೇವನ್ನು ಮೆಲುಕು ಹಾಕುತ್ತಾ, ನೀರಿನ ಅವಶ್ಯಕತೆಇಲ್ಲದೆಯೂ ಬದುಕುತ್ತದೆ. ಸಾಲದಕ್ಕೆ ಇದರ ಹಾಲನ್ನುಗೋವಿನ ಹಾಲಿನಂತೆ ಬಳಸಲಾಗಿದೆ. ಮಾಂಸವನ್ನುಸವಿಯಲಾಗಿದೆ.ಸಿರಿಯಾದಲ್ಲಿ ಕತ್ತೆಯನ್ನು ಅಲ್ಲಿನ ಡಿಯೋನಿಸಿಸ್ ದೇವತೆಗೆಹೋಲಿಸಲಾಗಿದೆ. ಈಜಿಪ್ಟ್‌ನಲ್ಲಿ ಮನುಷ್ಯರನ್ನು ಅಂತ್ಯಸಂಸ್ಕಾರ ಮಾಡಿದಂತೆ ಕತ್ತೆಗೂ ಅಂತಿಮ ಗೌರವಕೊಡಲಾಗಿದೆ. ೧೬೭೯ರಲ್ಲೇ ಆರಿಜೋನ ಎಂಬಲ್ಲಿ ಕತ್ತೆಯಬಳಕೆ ಕುರಿತಂತೆ ದಾಖಲೆಗಳಿವೆ. The Domestic Animal Diversity InformationSystem ನ 2006ರ ವರದಿಯಂತೆ ಜಗತ್ತಿನಲ್ಲಿ ೪೧ ಮಿಲಿಯನ್ ಕತ್ತೆಗಳಿವೆ. ಕತ್ತೆಯ ಬಳಕೆಯಲ್ಲಿ ಭಾರತಕ್ಕಿಂತ ಚೀನಾಮುಂದಿದೆ.
ಕತ್ತೆ ಸಂಸ್ಕೃತಿಯ ಒಂದು ಭಾಗ. ಈಜಿಪ್ಟಿನ ಸೂರ್ಯದೇವನಸಂಕೇತ ಕೂಡ ಕತ್ತೆ ಆಗಿದೆ. ಜೀಸಸ್ ಕೂಡ ಕತ್ತೆಯ ಮೇಲೆಸವಾರಿ ಮಾಡುತ್ತಾ ಜೆರುಸಲೇಂ ಪ್ರವೇಶಿಸಿದ್ದಾರೆ. ಬೈಬಲ್‌ನಹಲವು ಕಡೆ ಕತ್ತೆ ಕುರಿತಂತೆ ಉಲ್ಲೇಖಗಳಿವೆ. ಕತ್ತೆಯಹಿಂಭಾಗ ಮತ್ತು ತೋಳಿನ ಭಾಗದಲ್ಲಿ ಜೀಸಸ್ ಗುರುತುಹಾಕಿದ್ದಾರೆಂದು ಇಂದಿಗೂ ನಂಬಲಾಗಿದೆ. ಹಿಂದೂಧರ್ಮದಲ್ಲಿ ಕತ್ತೆ ಲಕ್ಷ್ಮಿಯ ವಾಹನ, ಕರಾಳ ರಾತ್ರಿ ದೇವರವಾಹನ ಎಂದೂ ನಂಬಲಾಗಿದೆ. ಪಂಚತಂತ್ರ ಕಥೆಗಳಲ್ಲಿ ಕೂಡಕತ್ತೆಯ ಉಲ್ಲೇಖ ಇದೆ.ಜೋಹರ್ ಧರ್ಮದಲ್ಲಿ ಮಾತ್ರ ಕತ್ತೆ ಅಶುದ್ಧ ಪ್ರಾಣಿ. ಹೋಮರ್‌ನ ಕಾವ್ಯಗಳಲ್ಲಿ, ಷೇಕ್ಸ್‌ಫಿಯರ್ ಸಾನೆಟ್ಟುಗಳಲ್ಲಿಕೂಡ ಕತ್ತೆಯ ಪಾತ್ರ ಇದೆ. ವಿಲಿಯಂ ವರ್ಡ್ಸ್‌ವರ್ಥ್ ತನ್ನ’ಬೆಲ್‌ಎಬೆಲ್’ನಲ್ಲಿ ಕತ್ತೆ ಕ್ರೈಸ್ತರ ಸಂಕೇತ. ಇದೊಂದು ವಿಧೇಯಮತ್ತು ತಾಳ್ಮೆಯ ಪ್ರಾಣಿ ಎಂದಿರುವನು.’ಕತ್ತೆಯೊಂದಿಗೆಪಯಣ’ ಕೃತಿಯಲ್ಲಿ ಕತ್ತೆ ಹಠಮಾರಿ ಮತ್ತು ಭಾರ ಹೊರುವಪ್ರಾಣಿ ಎಂದು ರಾಬರ್ಟ್ ಲೂಯಿಸ್ ಸ್ಟೀವನ್‌ಸನ್ಬಣ್ಣಿಸಿದ್ದಾನೆ. ೧೯೪೦ರಲ್ಲಿ ಬಂದ ಡಿಸ್ನಿ ಫಿಲಂ ಫಂಟಾಸಿಯಾಮತ್ತು ೧೯೬೭ರ ಬ್ರೈಟಿ ಆಫ್ ದಿ ಗ್ರ್ಯಾಂಡ್ ಕ್ಯಾಂಗನ್ಚಿತ್ರಗಳಲ್ಲಿಯೂ ಕತ್ತೆಯ ಪಾತ್ರವಿದೆ.

ಇತಿಹಾಸದ ಉದ್ದಕ್ಕೂ ಕತ್ತೆ ಎಂದರೆ ಭಾರ ಹೊರುವ ಪ್ರಾಣಿ. ಇದು ಸಾಮಾನ್ಯವಾಗಿ ೫೦೦ ಕೆ.ಜಿ. ವರೆಗೂ ತೂಗಬಲ್ಲವು. ೨೦ರಿಂದ ೩೦ ವರ್ಷಗಳ ಕಾಲ ಜೀವಿಸಬಲ್ಲವು. ಕತ್ತೆಮನುಷ್ಯರಂತೆ ಅವಳಿ ಮರಿಗಳಿಗೆ ಜನ್ಮ ನೀಡುವುದುಅಪರೂಪ. ಮನುಷ್ಯನಿಗಿಂತ ಅತ್ಯಂತ ಜತನವಾಗಿ ತನ್ನಮರಿಯನ್ನು ನೋಡಿಕೊಳ್ಳುತ್ತದೆ.ಇದೆಲ್ಲಕ್ಕಿಂತಲೂ ಮುಖ್ಯವಾಗಿ ರಾಜಕಾರಣಿ ಎಂಬ ಶಬ್ಧಕೂಡ ’ಗದಾ’ ಎಂಬ ಅರ್ಥವನ್ನು ನೀಡುತ್ತದೆ ಎಂಬುದನ್ನುಕೇಳಿ ಅಚ್ಚರಿಗೊಂಡೆ. ಗದಾ ಎಂಬ ಪದ ಸಂಸ್ಕೃತಮೂಲದ್ದಾಗಿದೆ. ಆಗಲೇ ನನಗೆ ಗಾರ್ದಭ ಗಾನ ಗುನುಗಿತು.ಮುತ್ತುಗದ ಹೂವಿಗಿಂತ ಕತ್ತೆಯ ಮರಿ ಚಂದ ಹೌದು ಕತ್ತೆಯಮರಿ ನೋಡಲು ಬಲು ಸುಂದರ. ಅದರ ದಪ್ಪಾದಾದಬಲ್ಬಿನಂತಹ ಕಣ್ಣುಗಳು, ಅಗಲವಾದ ಕಿವಿಗಳನ್ನುಹೊಂದಿರುವ ಪಾಪದ ಪ್ರಾಣಿಯನ್ನು ನೋಡಿದಾಗ ಕತ್ತೆಎನ್ನಲು ಮನಸ್ಸು ಬಾರದು. ಅರ್ಥಶಾಸ್ತ್ರದ ಚಾಣಕ್ಯ ಕೂಡಕತ್ತೆಯ ಗುಣಗಾನ ಮಾಡಿ ಅದರ ವಿಶೇಷತೆಯನ್ನುಉಲ್ಲೇಖಿಸಿದ್ದಾನೆ. ಕತ್ತೆ ಮಳೆ, ಗಾಳಿ, ಚಳಿ ಯಾವುದನ್ನೂಲೆಕ್ಕಿಸದೇ ದುಡಿಯುವ ಪ್ರಾಣಿ. ಇದು ನಾಯಿ, ಬೆಕ್ಕುಗಳಂತೆಸುಲಭವಾಗಿ ಪಳಗುವುದಿಲ್ಲ. ಪಳಗಿಸುವುದು ಕಷ್ಟಕರ. ಪಳಗಿದರೆ, ನಾಯಿಗಿಂತ ನಿಷ್ಠೆಯಿಂದ, ಓರ್ವ ಸ್ನೇಹಿತನಂತೆಜೊತೆಗಿರುತ್ತವೆ.

-ಡಾ.ಎಂ.ಎಸ್.ಮಣಿ
ಹಿರಿಯ ಪತ್ರಕರ್ತರು,ಬೆಂಗಳೂರು

ಅಂತರಂಗ

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

Published

on

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು ಅಮಾನ್ಯ ಮಾಡಲಾಗಿದೆ ಎಂದು ಪತ್ರಿಕೆಯ ಸಂಪಾದಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕತೆ-ಕವಿತೆ ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ‘ “ಸ್ವತಂತ್ರ ರಚನೆಯಾಗಿರ ಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು” ಎನ್ನುವ ನಿಯಮಾವಳಿಗಳನ್ನು ಉಲಂಘಿಸಿರುವುದರಿಂದ ಪ್ರಥಮ ಸ್ಥಾನ ಪಡೆದ ” ಸಂಸ” ಕತೆಯನ್ನು ಅಮಾನ್ಯಗೊಳಿಸಲಾಗಿದೆ.

‘ಸಂಸ’ ಕತೆಯ ಕತೆಗಾರರಾದ ಅನಂತ ಕುಣಿಗಲ್ ಅವರು
ಸ್ವತಃ ತಮ್ಮ ಫೇಸ್ ಬುಕ್ ವಾಲ್ ನಲ್ಲಿ ‘ ಸಂಸ’ ಕತೆಯು ಈ ಹಿಂದೆ ಯಾವುದೋ ಕತಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿತ್ತು. ಮತ್ತೊಂದೆಡೆ ತೃತೀಯ, ಮಗದೊಂದೆಡೆ ದ್ವಿತೀಯ ಬಹುಮಾನ ಲಭಿಸಿತ್ತು, ಅಲ್ಲದೆ ‘ಟೋಟೋ’ ಅವಾರ್ಡ್ ನ ಅಂತಿಮ ಸುತ್ತಿಗೆ ಎರಡು ಬಾರಿ ಶಾರ್ಟ್ ಲಿಸ್ಟ್ ಆಗಿತ್ತು ಎಂದು ಬರೆದು ಕೊಂಡಿರುತ್ತಾರೆ. ಆದಕಾರಣ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಕತಾ ಸ್ಪರ್ಧೆಯ ಪರಿಷ್ಕೃತ ಫಲಿತಾಂಶ

ಕತಾ ಸ್ಪರ್ಧೆಯಲ್ಲಿ ರವಿಮುಡೋಡಿ ಅವರ ʼಅರ್ಧ ರೇಖೆಯ ಚಿತ್ರʼ  ಕತೆಗೆ ಪ್ರಥಮ ಬಹುಮಾನ, ವಿಜಯ ಶ್ರೀ ಹಾಲಾಡಿ ಅವರ ʼಮಳೆಹಾಡುʼ ಕತೆಗೆ ದ್ವಿತೀಯ ಬಹುಮಾನ ಹಾಗೂ ಅಜೇಯ ಸಿಂಹ ಕೆ.ವಿ ಅವರ ‘ ಮಾರ್ಜಕದ ಶ್ರೀಮುಡಿ’ ಕತೆಗೆ  ತೃತೀಯ ಬಹುಮಾನ ದೊರೆತಿದೆ ಎಂದು ಸುದ್ದಿದಿನ ಪತ್ರಿಕೆ ಸಂಪಾದಕ ಮಾಹಿತಿ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading
Advertisement

Title

ಅಂತರಂಗ1 week ago

ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026 : ಕತಾ ಸ್ಪರ್ಧೆ ; ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನ ಅಮಾನ್ಯ ; ಪರಿಷ್ಕೃತ ಫಲಿತಾಂಶ ‌ಪ್ರಕಟ

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ – ದೀಪಾವಳಿ ವಿಶೇಷ ಸಂಚಿಕೆ 2026ರ ಕತಾ ಸ್ಪರ್ಧೆಯ ನಿಯಮಾವಳಿಯನ್ನು ಉಲಂಘಿಸಿರುವ ಕಾರಣ ಅನಂತ ಕುಣಿಗಲ್ ಅವರ ಸಂಸ‌ ಕತೆ ಪಡೆದ ಪ್ರಥಮ ಸ್ಥಾನವನ್ನು...

ದಿನದ ಸುದ್ದಿ1 week ago

ದೇವನಗರಿ ಸುದ್ದಿದಿನ ಪತ್ರಿಕೆಯ ದೀಪಾವಳಿ ವಿಶೇಷಾಂಕ- 2026 ರ ಕತೆ – ಕವಿತೆ ಫಲಿತಾಂಶ ಪ್ರಕಟ

ಸುದ್ದಿದಿನ,ದಾವಣಗೆರೆ:ದೇವನಗರಿ ಸುದ್ದಿದಿನ ಹಾಗೂ ಶ್ಯಾಮ್‌ ಪ್ರಕಾಶನ, ನವಿಲೇಹಾಳು ವತಿಯಿಂದ ದೀಪಾವಳಿ ವಿಶೇಷಾಂಕ-2026 ರ ಕತೆ ಮತ್ತು ಕವಿತೆ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಕತಾ ಸ್ಪರ್ಧೆಯಲ್ಲಿ ಅನಂತ್‌ ಕುಣಿಗಲ್‌...

ದಿನದ ಸುದ್ದಿ3 weeks ago

ನನ್ನ ನೆಚ್ಚಿನ ಪುಸ್ತಕ ವಿಮರ್ಶೆ ಸ್ಪರ್ಧೆ ; ವಿದ್ಯಾರ್ಥಿಗಳಿಗೆ ಬಹುಮಾನ

ಸುದ್ದಿದಿನ,ದಾವಣಗೆರೆ:ಪೂಜ್ಯ ಡಾ|| ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮಿಗಳವರ ಸ್ಮರಣಾರ್ಥ ಹಾಗೂ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ದಾವಣಗೆರೆ ಜಿಲ್ಲಾ ಮಟ್ಟದ “ನನ್ನ ನೆಚ್ಚಿನ ಪುಸ್ತಕ” ವಿಮರ್ಶೆ ಸ್ಪರ್ಧೆಯಲ್ಲಿ ಜಿಲ್ಲೆಯ...

ದಿನದ ಸುದ್ದಿ4 weeks ago

ಚಿತ್ರದುರ್ಗ | ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಡಿ.ಡಿ ಬಿ.ಮಲ್ಲಿಕಾರ್ಜುನ, ಕ್ರೈಸ್ ಇ.ಡಿ ಬಿ.ಶಿವಸ್ವಾಮಿ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ಚಿತ್ರದುರ್ಗ: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಸತಿ ಶಾಲೆಗಳಿಗೆ (ಕ್ರೈಸ್) ನಿಯಮಾನುಸಾರ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡದೆ ವಂಚಿಸುತ್ತಿರುವ ಶ್ರೀ ಶಿರಡಿ ಪ್ರಾವಿಜನ್ ಸ್ಟೋರ್,...

ದಿನದ ಸುದ್ದಿ4 weeks ago

ನಾಳೆ ʼನಿರಾಕಾರ ವಿಶ್ವಕರ್ಮʼ ಕೃತಿ ಬಿಡುಗಡೆ

ಸುದ್ದಿದಿನ,ಬೆಂಗಳೂರು:ಕಾವ್ಯಸ್ಪಂದನ ಪ್ರಕಾಶನವು ಪ್ರಕಟಿಸಿರುವ ಪತ್ರಕರ್ತ, ಲೇಖಕ ಚಂದ್ರಶೇಖರ ಗಂಧನಹಳ್ಳಿ ಅವರ ʼನಿರಾಕಾರ ವಿಶ್ವಕರ್ಮʼ ಕೃತಿಯು ಸೆಪ್ಟೆಂಬರ್‌ 17ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 10.30ಕ್ಕೆ ಮೈಸೂರು ಜಿಲ್ಲೆ, ಕೆ.ಆರ್.ನಗರ...

ದಿನದ ಸುದ್ದಿ1 month ago

ಗೃಹ ಜ್ಯೋತಿ ಯೋಜನೆಗೆ 3 ವರ್ಷಗಳ ಸಂಭ್ರಮ – 1.65 ಕೋಟಿ ಕುಟುಂಬಗಳ ಬದುಕಿಗೆ ಬೆಳಕು!

ಸುದ್ದಿದಿನ, ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆ ತನ್ನ 3 ವರ್ಷಗಳ ಸಾರ್ಥಕ ಪಯಣವನ್ನು ಪೂರ್ಣಗೊಳಿಸಿದೆ. `ಕುಟುಂಬಗಳ ಆರ್ಥಿಕ...

ದಿನದ ಸುದ್ದಿ1 month ago

ರೈಲ್ವೆ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ – 20 ಸಾವಿರ ಕೋಟಿ ರೂ. ವೆಚ್ಚದ 8 ಬಹು ಟ್ರ್ಯಾಕಿಂಗ್ ಯೋಜನೆಗಳಿಗೆ ಕೇಂದ್ರದ ಅಸ್ತು!

ಸುದ್ದಿದಿನ, ಹೊಸದಿಲ್ಲಿ: ದೇಶದ ರೈಲ್ವೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕರ್ನಾಟಕ ಸೇರಿದಂತೆ ಒಂಬತ್ತು ರಾಜ್ಯಗಳ 20ಕ್ಕೂ ಹೆಚ್ಚು...

ದಿನದ ಸುದ್ದಿ1 month ago

ಡಿಕೆಶಿ ಸರ್ಕಾರಕ್ಕೆ 100 ದಿನಗಳ ಸಂಭ್ರಮ – `ದೃಢ ಕರ್ನಾಟಕದ ಸಂಕಲ್ಪ’ ಕಾರ್ಯಕ್ರಮಕ್ಕೆ ವಿಧಾನಸೌಧ ಸಜ್ಜು

ಸುದ್ದಿದಿನ, ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನ್ನ ಆಡಳಿತದ 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ....

ದಿನದ ಸುದ್ದಿ1 month ago

ಇಂದಿನ ರಾಶಿ ಭವಿಷ್ಯ: ಯಾವ ರಾಶಿಗೆ ಶುಭ? ಯಾವ ರಾಶಿಗೆ ಎಚ್ಚರಿಕೆ? ಇಲ್ಲಿದೆ 12 ರಾಶಿಗಳ ಸಂಪೂರ್ಣ ಭವಿಷ್ಯ!

ಸುದ್ದಿದಿನ,ನಿತ್ಯಭವಿಷ್ಯ: ಸೆಪ್ಟೆಂಬರ್ 10, 2026 ರ ನಿಮ್ಮ ಜಾತಕವನ್ನು ಅನ್ವೇಷಿಸಿ. ವೃತ್ತಿ, ಹಣ, ಪ್ರೀತಿ ಮತ್ತು ಆರೋಗ್ಯದ ಸಂಪೂರ್ಣ ಭವಿಷ್ಯವಾಣಿಗಳನ್ನು ಓದಿ. http://Visit : www.suddidina.com ಮೇಷ:...

ದಿನದ ಸುದ್ದಿ1 month ago

ದೇಶದಲ್ಲಿ ಏಕರೂಪ ರಾಷ್ಟ್ರೀಕೃತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು: ಡಾ.ಮೂಡ್ನಾಕೂಡು ಚಿನ್ನಸ್ವಾಮಿ

ಕೆಪಿಸಿಎಲ್ ಹಾಗೂ ಕೆಪಿಸಿಎಲ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂಘದಿಂದ ಅಂಬೇಡ್ಕರ್ ಜಯಂತಿ ಆಚರಣೆ ಎಸ್ಎಸ್ಎಲ್ ಸಿ, ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ...

Trending