Connect with us

ಲೈಫ್ ಸ್ಟೈಲ್

ಸ್ನೇಹದ ನೆನಪಿನಂಗಳದಲ್ಲಿನ ಸವಿನೆನಪುಗಳು..!

Published

on

  • ಹುಸೇನಸಾಬ ವಣಗೇರ,ಉಪನ್ಯಾಸಕರು

ಜೀವನದಲ್ಲಿ ಕಷ್ಟ ಸುಖ, ನೋವುನಲಿವುಗಳ ಮದ್ಯೆ, ಸದಾ ನಮ್ಮ ಏಳಿಗೆಯನ್ನು ಬಯಸುವುದು ಸ್ನೇಹ. ರಕ್ತ ಸಂಬಂದಕ್ಕಿಂತಲೂ ಮಿಗಿಲಾದ ಸಂಬಂದವಿದೆ ಎನ್ನುವುದಾದರೆ ಅದುವೇ ಈ ಸಂಬಂಧ. ಯಾವುದೇ ಜಾತಿ, ಧರ್ಮದ ಭೇದಭಾವವಿರದ ನಿಶ್ವಾರ್ಥ ಪವಿತ್ರವಾದ ಅನುಬಂಧವಿದ್ದಾಗ ಕೈಹಿಡಿದು ಗೆದ್ದಾಗ ಬೆನ್ನುತಟ್ಟಿ ಮುನ್ನಡೆಸುವ ಈ ಸೇಹವೇ ನನ್ನ ಪಾಲಿನ ಆಸ್ತಿ ಸದಾ ಕಾಳಜಿ, ಪ್ರೀತಿ, ವಾತ್ಸಲ್ಯ, ವಿಶ್ವಾಸದ ಈ ಸ್ನೇಹದ ಮುಂದೆಉಪಯೋಗಕ್ಕೆ ಬಾರದ ಆಸ್ತಿ, ಅಂತಸ್ತುಎಲ್ಲವೂ ಶೂನ್ಯ.

ನನಗೂ ಒಬ್ಬಆತ್ಮೀಯ ಸ್ನೇಹಿತನಿದ್ದಾನೆ, ಬಾಲ್ಯದಿಂದಲೂ ನನಗೆ ಜೊತೆಗಾರನಾಗಿ ಶಾಲೆಯಲ್ಲಿಸಹಪಾಠಿಯಾಗಿ ಸೋಲು ಗೆಲುವುಗಳಿಗೆಆಸರೆಯಾಗಿ ಸದಾತನ್ನ ಹಾಸ್ಯ ಮಾತುಗಾರಿಕೆಯಿಂದಜೀವನದಜಂಜಾಟದಲ್ಲಿನ ನೋವುಗಳನ್ನು ದೂರಮಾಡಿ ನೋವಿನಲ್ಲೂ ನಲಿಯುವಂತೆ ಮಾಡುವ ಮನುಜ.ಲೋಕ ಜ್ಞಾನವನ್ನು ಅರಿಯದ ಬಾಲ್ಯದ ಆ ದಿನಗಳಲ್ಲಿ ಪರಿಚಯ ಸ್ನೇಹವಾಗಿ ಬೆಳೆಯಿತು ಅದುವೇ ನಮ್ಮ ಸ್ನೇಹಕ್ಕೆ ಬದ್ರಬುನಾದಿಯನ್ನು ಹಾಕಿ, ಕೇವಲ ಆಟದಲ್ಲಿಜೊತೆಗಾರನಾಗಿರದೇಇಂದು ಸ್ನೇಹದಲ್ಲಿಉತ್ತುಂಗ ಸ್ಥಾನಕ್ಕೇರಿ ಸದಾ ನನ್ನೊಡನೆ ನಡೆಯುತ್ತಿದಾನೆ.

ಬಾಲ್ಯದಿಂದಲೇಜೊತೆಗಾರರಾದ ನಾವು ಪ್ರಾಥಮಿಕ ಶಿಕ್ಷಣ, ಪ್ರೌಡಶಿಕ್ಷಣ,ಪದವಿಪೂರ್ವ, ಪದವಿಶಿಕ್ಷಣವನ್ನು ಜೊತೆಯಲ್ಲೆ ಕಲಿತೆವು ಅಷ್ಟೆ ಅಲ್ಲದೆ ಒಬ್ಬರಿಗೊಬ್ಬರು ಬಿಟ್ಟಿರಲು ಅಸಾದ್ಯವೆಂಬುವುದನ್ನು ಅರಿತು ಸ್ನಾತಕೋತ್ತರ ಪದವಿಯನ್ನು ಇಬ್ಬರೂ ಒಂದೇ ವಿಷಯದಲ್ಲಿ ಒಂದೇಡೆಗೆಕಲಿತಿರುವುದು ಹೆಮ್ಮೆಯ ವಿಷಯ.ಜೀವನದ ಏಳು ಬಿಳುಗಳಲ್ಲಿ ಆಸರೆಯಾಗಿ ಮಾತಿಗೆ ಬಾರದ ಭಾವನೆಗಳನ್ನು ಅರ್ಥೈಸಿಕೊಂಡು ಅಳುವಾಗ ಅತ್ತು ನಗುವಾಗ ನಕ್ಕುನಲಿಯುವ ಈ ಸ್ನೇಹ ನನ್ನಜೀವನದಲ್ಲಿ ಹಾಸು ಹೊಕ್ಕಾಗಿದೆ.ಬಡತನದ ಬವಣಿಯಲಿ ಬೆಂದುಕಲಿಕೆಯ ಈ ಜೀವನದಲ್ಲಿಜೀವನದ ಪರಿಪಾಠವನ್ನು ತಿಳಿಯಲು ಸಾಧ್ಯವಾಗಿದೆ.

ದಿನ ಕಳೆದಂತೆ ಸ್ನೇಹಿತರ ಸಂಖ್ಯೆ ಹೆಚ್ಚಿದಂತೆಲ್ಲಾಆತ್ಮವಿಸ್ವಾದಜೋತೆಗೆ ಸರಿ ತಪ್ಪುಗಳನು ತಿಳಿಸಿ ತಿದ್ದಿಬುದ್ದಿ ಹೇಳಿ ಹಸಿದಾಗ ಊಟ ಕೊಡಿಸಿ ನೊಂದಾಗಕರುಣೆತೋರಿ ಪ್ರೀತಿ ವಾತ್ಸಲ್ಯತೋರಿದ ನನ್ನೆಲ್ಲಾ ಸ್ನೇಹಿತರಿಗೂ ನಾ ಚಿರಋಣಿಯಾಗಿರುವೆ
ನಿತ್ಯಜೀವನದ ನೋವು ನಲಿವುಗಳಲ್ಲಿ ನನ್ನೆಲ್ಲಾ ಸ್ನೇಹಿತರ ನೆನಪುಗಳು ಕಾಡುತ್ತಿವೆ. ನನ್ನ ನೋವುಗಳಿಗೆ ಸ್ನೇಹಿತರ ನೆನಪುಗಳೆ ಮದ್ದು ಹಿಂದಿನ ಆ ದಿನಗಳನ್ನು ನೆನಸಿಕೊಂಡರೆ ನೋವಿನಲ್ಲಿ ನಲಿಯುವಂತೆ ಮಾಡುವ ಆ ನೆನಪಿನಂಗಳದ ಸವಿನೆನಪುಗಳು ಪುನಃ ಬರಬಾರದೇ ಎಂಬ ಹಗಲುಗನಸಿನಲ್ಲೆ ಜೀವನ ಸಾಗುತ್ತಿದೆ.

ಖುಷಿ ಸಂತೋಷದಿಂದ ಕಳೆದ ದಿನಗಳನ್ನು ಮರೆಯಲು ಸಾಧ್ಯವೇಯಿಲ್ಲ ನನ್ನೆಲ್ಲಾ ಗೆಳೆಯರು ವಿದ್ಯಾಭ್ಯಾಸ ಮುಗಿಸಿ ವೃತ್ತಿಜೀವನಕ್ಕೆ‌ ಕಾಲಿಟ್ಟಾಯಿತು. ಇನ್ನು ಕೆಲವರುಉನ್ನತ ಹುದ್ದೆಯ ಕನಸು ಕಟ್ಟಿ ಹಗಲು ರಾತ್ರಿಎನ್ನದೇ ಓದಿನಲ್ಲಿತೊಡಗಿಕೊಂಡು ಶ್ರಮಿಸುತ್ತಿದ್ದಾರೆ. ಸದ್ದಿಲ್ಲದೇ ಸಾಗುವ ಅವರ ಪರಿಶ್ರಮ ಅವರನ್ನು ಉನ್ನತಸ್ಥಾನಕ್ಕೆ‌ ಕೊಂಡೊಯುತ್ತದೆ. ಎನ್ನುವ ಬರವಸೆಯ ಬೆಳಕು ಮೂಡಿರುವುದು ಅವರಲ್ಲಿನ‌ ಆತ್ಮವಿಶ್ವಾಸದಿಂದ ಕಂಡುಕೊಂಡಿದ್ದು. ನನ್ನೆಲ್ಲಾ ಸ್ನೇಹಿತರುಉನ್ನತ ಹುದ್ದೆಪಡೆದು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತನೀಡಿ ಸಮಾಜಸುಧಾರಣೆಯಲಿ ಸಣ್ಣದೊಂದು ಪ್ರಯತ್ನಮಾಡುವ ನಮ್ಮಕನಸೊಂದು ನನಸಾಗುವ ದಿನ ಹತ್ತಿರವಾಗುತ್ತಿದೆ.

ಆತ್ಮೀಯ ಮಿತ್ರರೆಅದೆಕೋ ನಾ ಕಾಣೆ ನಿಮ್ಮೆಲ್ಲರ ನೆನಪುಗಳು ನನ್ನನ್ನುಕಾಡುತ್ತಿದೆಆಟ ಪಾಠಗಳ ಜೋತೆಗೆ ಮಾಡಿದ ಕೀಟಲೆಗಳು ಕಣ್ಣಮುಂದೆ ಸುಳಿದಾಡುತ್ತಿವೆ. ಸದ್ಯದ ಸಮಯದಲ್ಲಿ ನಾವೆಲ್ಲರು ದೂರವಿರಬಹುದು ಆದರೆಅದು ಮನಸ್ಸಿನಿಂದಲ್ಲ ಎಂಬ ನಂಬಿಕೆಯೊಂದರಿಂದ ನಿತ್ಯಜೀವನದ ಬದುಕಿನ ಬಂಡಿ ಸಾಗುತ್ತಿದೆ. ನೆನಪಿನಂಗಳದ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಬರಿದಾದ ಬದುಕಿನಲಿ ಭರವಸೆಯಛಾಯೆ ಮೂಡಿದೆ.ಕರೆಗೂ ನಿಲುಕದನಿಮ್ಮೆಲ್ಲರ ನೆನಪುಗಳು ಬಾಳಬುತ್ತಿಯಲಿ ಸಿಹಿಯಾಗಿರಲಿ ನಿಮ್ಮಜೀವನದಲ್ಲಿಯಶಸ್ಸು ಫಲಿಸಲಿ ಎಂದು ಬಯಸುವ ನಿಮ್ಮ ಪ್ರೀತಿಯ ಸ್ನೇಹಿತ.

(ಹುಸೇನಸಾಬ ವಣಗೇರ
ಉಪನ್ಯಾಸಕರು
ಸಮಾಜ ಕಾರ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರ
ಮಹಿಳಾ ವಿದ್ಯಾಪೀಠ
ಹುಬ್ಬಳ್ಳಿ
ಮೊಬೈಲ್ : 7829606194)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಖುಷಿಯಾಗಿದೆ ಏಕೋ ನಿನ್ನಿಂದಲೇ..!

Published

on

ಸಂತೋಷವಾಗಿರಲು ನಾವು ಬಯಸುವುದು ಸಹಜ, ಆದರೆ ಸಂತೋಷದ ವ್ಯಾಖ್ಯಾನ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವಿಭಿನ್ನವಾಗಿರುತ್ತದೆ.

ಸಂತೋಷವು ಮನಸ್ಸಿನ ಒಂದು ಭಾವನಾತ್ಮಕ ಸ್ಥಿತಿ. ಇದು ತೃಪ್ತಿಯ ಭಾವನೆಗಳಿಂದ ನಿರೂಪಿಸಲ್ಪಟ್ಟಿದೆ. ಸಂತೋಷವು ವಿಭಿನ್ನ ವ್ಯಾಖ್ಯಾನಗಳನ್ನು ಹೊಂದಿದ್ದರೂ, ಅದು ಮುಖ್ಯವಾಗಿ ಸಕಾರಾತ್ಮಕ ಭಾವನೆಗಳು ಮತ್ತು ಜೀವನದಲ್ಲಿ ಆಗುವ ತೃಪ್ತಿಗಳ ಮೇಲೆ ಆಧಾರಿತವಾಗಿದೆ. ನಮ್ಮ ದೈನಂದಿನ ಅಭ್ಯಾಸಗಳು ನಮ್ಮ ಸಂತೋಷವನ್ನು ಉತ್ತೇಜಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ನಿಮ್ಮ ಸಂತೋಷ ಮತ್ತು ಯೋಗಕ್ಷೇಮವನ್ನು ಸುಧಾರಿಸಲು ನಿಮ್ಮ ದಿನಚರಿಯಲ್ಲಿ ಈ ಕೆಳಗೆ ಹೇಳಿರುವ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.

ಕೃತಜ್ಞತೆ ಇರಲಿ: ಕೃತಜ್ಞತೆಯು ಸಂತೋಷದ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಜೀವನದ ಸಕಾರಾತ್ಮಕ ಅಂಶಗಳನ್ನು ಗಮನಿಸಿ, ಮೆಲುಕುಹಾಕಿ ಇದು ನೀವು ಸಂತೋಷವಾಗಿರಲು ಸಹಾಯಮಾಡುತ್ತದೆ.

ಧ್ಯಾನ: ನಿಮ್ಮ ದೈನಂದಿನ ದಿನಚರಿಯಲ್ಲಿ ಧ್ಯಾನವನ್ನು ಸೇರಿಸುವ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು, ಸ್ವಯಂ-ಅರಿವು ಹೆಚ್ಚಿಸಬಹುದು. ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಶಾಂತ ಸ್ಥಳದಲ್ಲಿ ಕುಳಿತುಕೊಳ್ಳಿ, ಉಸಿರಾಟದ ಮೇಲೆ ಕೇಂದ್ರೀಕರಿಸಿ. ಆಲೋಚನೆಗಳನ್ನು ತಡೆಯಬೇಡಿ.

ದೈಹಿಕ ವ್ಯಾಯಾಮ: ನಿಯಮಿತ ದೈಹಿಕ ಚಟುವಟಿಕೆಯು ಮನಸ್ಥಿತಿಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ವ್ಯಾಯಾಮ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನೀವು ಆನಂದಿಸುವ ಜಾಗಿಂಗ್, ಯೋಗ, ಅಥವಾ ನೃತ್ಯದಂತಹ ವ್ಯಾಯಾಮವನ್ನು ದಿನಚರಿಯಲ್ಲಿ ಸೇರಿಸಿ.

ಸಾಮಾಜಿಕ ಸಂಪರ್ಕ ಮತ್ತು ಚಟುವಟಿಕೆಗಳು: ಸಂತೋಷವಾಗಿರಲು ಸಾಮಾಜಿಕ ಸಂಪರ್ಕಗಳು ಬೇಕು. ಕುಟುಂಬ, ಸ್ನೇಹಿತರು ಮತ್ತು ಪ್ರೀತಿಪಾತ್ರರ ಜೊತೆಗೆ ಉತ್ತಮ ಒಡನಾಟ ಮುಖ್ಯ. ನಿಮಗೆ ಸಂತೋಷ ತರುವವರೊಂದಿಗೆ ಸಮಯ ಕಳೆಯಲು ಆದ್ಯತೆ ನೀಡಿ.

ಹವ್ಯಾಸಗಳು: ನಿಮಗೆ ಆಸಕ್ತಿಇರುವ ಹವ್ಯಾಸಗಳಿಗೆ ಸಮಯವನ್ನು ನೀಡಿ. ಅದು ಪೇಂಟಿಂಗ್ ಆಗಿರಲಿ ಅಥವಾ ತೋಟಗಾರಿಕೆಯಾಗಿರಲಿ, ನಿಮ್ಮ ಸಂತೋಷವನ್ನು ಹೆಚ್ಚಿಸಲು ಸೂಕ್ತ ಸಮಯವನ್ನು ಮೀಸಲಿಡಿ.

ನಿದ್ರೆ: ನಮ್ಮ ಮನಸ್ಥಿತಿ ಮತ್ತು ಸಂತೋಷಕ್ಕೆ ನಿದ್ರೆ ಅತ್ಯಗತ್ಯ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿ. ಶಾಂತಿಯುತ ವಾತಾವರಣದಲ್ಲಿ ಮಲಗಿಕೊಳ್ಳಿ.

ಆರೋಗ್ಯಕರ ಆಹಾರ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಪ್ರೋಟೀನ್ಗಳನ್ನು ಒಳಗೊಂಡಿರುವ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಸಂಸ್ಕರಿಸಿದ ಆಹಾರಗಳು ಮತ್ತು ಸಕ್ಕರೆ ಪಾನೀಯಗಳ ಸೇವನೆಯನ್ನು ಮಿತಿಗೊಳಿಸಿ.

ನಿಮ್ಮ ಕಾಳಜಿ ವಹಿಸಿ: ನಿಮ್ಮ ಮನಸ್ಸು, ದೇಹ, ಆತ್ಮವನ್ನು ಪೋಷಿಸುವ ಮತ್ತು ಪುನರ್ ಯೌವನಗೊಳಿಸುವ ಚಟುವಟಿಕೆಗಳಿಗೆ ಸಮಯವನ್ನು ಮೀಸಲಿಡಿ. ಬೆಚ್ಚಗಿನ ನೀರಿನಲ್ಲಿ ಸ್ನಾನವನ್ನು ಮಾಡಿ, ಪುಸ್ತಕವನ್ನು ಓದಿ ಅಥವಾ ನೀವು ಆನಂದಿಸಬಹುದಾದ ಹವ್ಯಾಸದಲ್ಲಿ ತೊಡಗಿಸಿಕೊಳ್ಳಿ.

ತಂತ್ರಜ್ಞಾನದ ಅತಿಯಾದ ಬಳಕೆಯು ನಮ್ಮ ಸಂತೋಷ ಮತ್ತು ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ತಂತ್ರಜ್ಞಾನದ ಬಳಕೆಯನ್ನು ಮಿತಿಗೊಳಿಸಿ, ಪ್ರಕೃತಿಯೊಂದಿಗೆ ಸಮಯ ಕಳೆಯಿರಿ, ಯೋಗಾಭ್ಯಾಸ ಮಾಡಿ, ಸಂತೋಷದಿಂದಿರಿ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶ್ರವಣದೋಷವುಳ್ಳ ವಿಶೇಷಚೇತನರ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲಾ ಪಂಚಾಯತ್ ಅನಿರ್ಬಂಧಿತ ಅನುದಾನದಡಿ ಶ್ರವಣದೋಷವುಳ್ಳ ವ್ಯಕ್ತಿಗಳು ಸ್ವಯಂ ಉದ್ಯೋಗ ನಡೆಸಲು ಹೊಲಿಗೆ ಯಂತ್ರ 80, ಟಾಕಿಂಗ್ ಲ್ಯಾಪ್‍ಟಾಪ್ 1, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ಮಾರ್ಟ್ ಫೆÇೀನ್ 2 ಮತ್ತು ಎಸ್.ಎಸ್.ಎಲ್.ಸಿ ಹಾಗೂ ನಂತರ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ನೀಡಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

ಹೊಲಿಗೆ ಯಂತ್ರ ಬಯಸುವವರು : ಟೈಲರಿಂಗ್ ವರ್ಗ ಪ್ರಮಾಣ ಪತ್ರ ಮತ್ತು ಸಾಕ್ಷರತೆ ಪ್ರಮಾಣ ಪತ್ರ, ವಿಕಲಚೇತನರ ಗುರುತಿನ ಚೀಟಿ (ಯು.ಡಿ.ಐ.ಡಿ) & ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರ ಸ್ವಯಂ ಘೋಷಣೆ ಪತ್ರ, ಉದ್ಯೋಗದಲ್ಲಿಲ್ಲದ ಬಗ್ಗೆ ಪ್ರಮಾಣ ಪತ್ರ, ಇತರೆ ಇಲಾಖೆ, ಸಂಸ್ಥಗಳಿಂದ ಹೊಲಿಗೆ ಯಂತ್ರ ಪಡೆದಿಲ್ಲದಿರುವ ಬಗ್ಗೆ ದೃಢೀಕರಣ ಪತ್ರ, ರೂ.20 ಸ್ಟಾಂಪ್ ಪೇಪರ್ ನಲ್ಲಿ ಹೊಲಿಗೆ ಯಂತ್ರ ಮಾರಾಟ ಮಾಡುವುದಿಲ್ಲ ಎಂದು ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ,

ಲ್ಯಾಪ್‍ಟಾಪ್ : ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದ ಅಂಕಪಟ್ಟಿ (ಪ್ರಸ್ತುತ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 9ನೇ ತರಗತಿ, ಉತ್ತಿರ್ಣರಾದ ಅಂಕ ಪಟ್ಟಿ), ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಟಾಕಿಂಗ್ ಲ್ಯಾಪ್‍ಟಾಪ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಶಾಲೆ, ಕಾಲೇಜಿನಿಂದ ಶಿಫಾರಸ್ಸು ಪತ್ರ, ಲ್ಯಾಪ್‍ಟಾಪ್ ಪರಭಾರೆಯಾಗದಿರುವ ಬಗ್ಗೆ ಸ್ವಯಂ ಘೋಷಣೆ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಸೈಜ್ ಫೋಟೋ.

ಸ್ಮಾರ್ಟ್ ಫೋನ್ ; ವಿಕಲಚೇತನರ ಗುರುತಿನ ಚೀಟಿ ಯು.ಡಿ.ಐ.ಡಿ, ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಿದ ವಾಸಸ್ಥಳ ದೃಢೀಕರಣ ಪತ್ರ, ಇತರೆ ಇಲಾಖೆ, ಸಂಸ್ಥೆ, ವಿಶ್ವವಿದ್ಯಾಲಯಗಳಿಂದ ಸ್ಮಾರ್ಟ್ ಫೋನ್ ಪಡೆದಿಲ್ಲ ಎಂಬ ಬಗ್ಗೆ ಸ್ವಯಂ ಘೋಷಣೆ ಪತ್ರ, ಪಾಸ್‍ಪೋರ್ಟ್ ಸೈಜ್ ಫೋಟೋದೊಂದಿಗೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಂಯೋಜಕರಾದ ನಾಗರಾಜ್ ಡಿಳ್ಳೆಪ್ಪನರ್ 9901738353, ಶೈಲಜಾ ಕೆ.ಎಂ.9482158005 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹೊನ್ನಾಳಿ, ಕೆ ಸುಬ್ರಮಣ್ಯಂ 9945738141ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಚನ್ನಗಿರಿ,ಎಂ.ಕೆ.ಶಿವನಗೌಡ 9902105734 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಜಗಳೂರು, ಶಶಿಕಲಾ ಟಿ. 9945458058, ತಾಲ್ಲೂಕು ಪಂಚಾಯಿತಿ ಕಾರ್ಯಾಲಯ ಹರಿಹರ, ಚನ್ನಪ್ಪ.ಬಿ 9590829024 ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ದಾವಣಗೆರೆ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿ ಕೆ.ಕೆ.ಪ್ರಕಾಶ್ ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮಹಿಳೆಯರಿಗೆ ಉಚಿತ ಫ್ಯಾಶನ್ ಡಿಸೈನಿಂಗ್, ಟೈಲರಿಂಗ್ ತರಬೇತಿ

Published

on

ಸುದ್ದಿದಿನ,ಡೆಸ್ಕ್:ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‍ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‍ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫ್ಯಾಶನ್ ಡಿಸೈನಿಂಗ್ ಹಾಗೂ ಟೈಲರಿಂಗ್ ಕುರಿತ 30 ದಿನಗಳ ಉಚಿತ ತರಬೇತಿ ಆಗಸ್ಟ್ 1 ರಿಂದ ಆರಂಭವಾಗಲಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಮಹಿಳೆಯರು ತರಬೇತಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಆಧಾರ್ ಕಾರ್ಡ್ ಹಾಗೂ ನರೇಗಾ ಯೋಜನೆಯ ಜಾಬ್ ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್‍ನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಅರ್ಜಿ ಸಲ್ಲಿಸಲು ಜುಲೈ 23 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರುಡ್‍ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‍ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ತಿಳಿಸಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending