ಮೌನಿಸು ಧ್ಯಾನಿಸು ಮತ್ತೊಮ್ಮೆ ದಯಮಾಡಿ ಮೌನಿಸು ಹಿಂತಿರುಗಿ ನೋಡಿದಾಗ ನಿನ್ನ ಹೆಜ್ಜೆಯ. ಮತ್ತೆಂದೂ ಹಿಂದಿರುಗಿ ಹೋಗಲಾರದು ನೆನಹುಗಳ ಸರಮಾಲೆಯಲ್ಲಿ ಪೊಡಮೂಡುವ ನೀ ಪಾದಕಮಲಕ್ಕೆ ನುಡಿಮುತ್ತ ನೀಡುವೆ. ಮನದಲ್ಲಿ ಮೂಡುವ ಭಾವದಲೆಗಳನ್ನೇರಿ ಬರಲು ಸನಿಹಕ್ಕೆ ಸೆಳೆದಿದೆ...
ಮಸಣದ ದಾರಿಯಲ್ಲಿನ ಮನೆ ಒಂಟಿ-ಶೂನ್ಯ ಆಕಾರ ನಿರಾಕಾರ ಭವ ಬಂಧನಗಳ ಕಳಚದ ಕೊಂಡಿ,ಬೆಳಕು ಹಾಯದ ಕಿಂಡಿ. ಹಗಲ ಮೆರವಣಿಗೆ ಮಸಣದತ್ತ ಸಾಲು ಸಾಲು ಅಳು ಕಿರಿಚಾಟ; ಉಸಿರಾಟ ಮರೆತ ಗಾಳಿ ಸ್ತಬ್ದ,ನಿಶ್ಶಬ್ದ,ಸಶಬ್ದ! ಇರುಳು ತಮ್ಮ...
ನೀನೊಂದು ಪ್ರೇಮ ಕುಲುಮೆ ನೀ ಕಾಸಿದಷ್ಟು ಕರಗಲಿಲ್ಲ ನಾನು ಯಾರೊ ತಟ್ಟಿದ ಅವರಿಚ್ಚೆಯ ಆಕಾರದ ಅಸ್ತ್ರವಾದೆ. ಮತ್ತೇ ಮತ್ತೇ ಬರುತ್ತಲೆ ಇರುತ್ತೇನೆ ನಿನ್ನ ಪ್ರೇಮ ಕುಲುಮೆಗೆ ಆಗಲೂ ನೀ ಕಾಯಿಸುತ್ತಿಯಾ ನಾ ಕರಗದೆ ಬಾಗುತ್ತೇನೆ...
ಶರಣರು ಶಹೀದರಾದರು ಯಝೀದ ಕುತಂತ್ರಕೆ ಕರ್ಬಲ ಕಂಪಿಸಿತು ಹಜರತ ಹುಸೇನರ ಬಲಿದಾನಕೆ ನೆತ್ತರು ಹರಿಸಿದರು ನೆಲಕೆ ಹಸುಗೂಸು ಅಸ್ಗರ ನೆತ್ತಿಹಾರಿದ್ದಿಲ್ಲ ಮಮ್ಮಲ ಮರುಗಿತು ಭೂಮಿ ರಕ್ತ ಹೀರಲಿಲ್ಲ ಕಿರುಚಿದರೂ ಗಂಟಲಿಗೆ ನೀರು ಸಿಗಲಿಲ್ಲ ತಾಯಿಕರುಳಕಂಡು...
೧೧೪ ನೇ ಕುವೆಂಪು ಜನ್ಮದಿನಾಚರಣೆ ಹಾಗೂ ವಿಶ್ವಮಾನವ ದಿನಾಚರಣೆಯ ಶುಭಾಶಯಗಳು ಹುಟ್ಟುವ ಪ್ರತಿ ಮಗುವು ವಿಶ್ವಮಾನವನೇ! ಆ ನಂತರ ಆ ಮಗುವನ್ನು “ಜಾತಿ,ಮತ”ದ ಕಟ್ಟುಪಾಡುಗಳಿಂದ ಬಂಧಿಸಲಾಗುತ್ತದೆ. ಹಾಗಾಗ ಬಾರದು. ಯಾವುದೇ ವ್ಯಕ್ತಿ ಜಾತಿಯಿಂದ ಮುಖ್ಯನಾಗಬಾರದು, ನೈತಿಕ...
ನಾರಿಯರ ಬಾಳನುದ್ಧರಿಸಲು ಅವತಾರಿಸಿ ಬಂದ ಅಮ್ಮ ನಾಡಿನ ಮೂಲೆ ಮೂಲೆಗಳಲ್ಲಿ ಹೆಸರುವಾಸಿ ನರಸಮ್ಮ. ತುಮಕೂರಿನ ಪಾವಗಡದ ಕೃಷ್ಣಾಪುರದಿ ಹುಟ್ಟಿದೆ ಅಲೆಮಾರಿಯ ಅಂಜಿನಪ್ಪನ ಮನೆಯ ಮೆಟ್ಟಿದೆ. ಜೀವಭಾಷೆ ತೆಲುಗು ಮನೆಯಲ್ಲಿ ಆಡಿ ಬೆಳೆದೆ ಜೀವನದ ಭಾಷೆ...
ಮೂಡುಗಡೆ ರೇವಜ್ಜ ಉರಿಗಣ್ಣ ಬಿಟ್ಟಾಗ ಪುಟ್ಟಿಯೊಳಗಿನ ಕೆಂದುಂಜ ಕೊಕ್ಕೋ…ಕೋ…ಅಂದಾಗ ನಮ್ ಕೇರಿಲಿ ಬೆಳ್ಳನೆ ಮುಂಜಾವು ನಮ್ ಮಾದ್ರಟ್ಟಿನೆ ಹಾಗೆ ಕುರಿ ಕೋಳಿ.ದನಕರ.ಕೋಣ ಎಮ್ಮೆ ಅಯ್ಯೊ…ಇದ್ ಬದ್ ಪ್ರಾಣಿಪಕ್ಷಿಗಳೆ…. ತುಂಬ್ಕೊಂಡಿರುವ “ಮೃಗಾಲಯ.” ಹೊಟ್ಟೆಗೆ ಇಟ್ಟಿಲ್ಲುದ್ರು ಹಟ್ಟಿ...